ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಎರಡನೇ ಪುತ್ರಿ ಸದ್ದಿಲ್ಲದೇ ಎಂಗೇಜ್ ಆಗಿದ್ದಾರೆ. ಫಾರಿನ್ ಹುಡ್ಗನ ಪ್ರೀತಿಗೆ ಅಂಜನ್ ಸರ್ಜಾ ಒಪ್ಪಿಗೆ ಸೂಚಿಸಿದ್ದಾರೆ. ಇವರದ್ದು 13 ವರ್ಷದ ಪ್ರೀತಿ. ಆದರೆ ಆ ಹುಡುಗ ಯಾರು ಏನೋ ಅನ್ನೋದನ್ನು ಅಂಜನ್ ಸರ್ಜಾ ಹೇಳಿಕೊಂಡಿಲ್ಲ. ಇಟಲಿಯಲ್ಲಿ ಊಂಗುರ ಬದಲಿಸಿಕೊಂಡ ಫೋಟೋಗಳನ್ನು ಅರ್ಜುನ್ ಸರ್ಜಾ ಪುತ್ರಿ ಹಂಚಿಕೊಂಡಿದ್ದಾಳೆ.
ಅಪ್ಪ ಅಮ್ಮನನ್ನು ಒಪ್ಪಿಸಿ ಅಂಜನ್ ಎಂಗೇಜ್ ಆಗಿದ್ದಾರೆ. ಸ್ಟೈಲೀಶ್ ಕಾಸ್ಟ್ಯೂಮ್ ತೊಟ್ಟು ಇಡೀ ಕುಟುಂಬ ಫೋಟೋಗೆ ಪೋಸ್ ಕೊಟ್ಟಿದೆ.
ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಮೂಲತಃ ಕನ್ನಡದವರು. ಅವರು ಹೆಚ್ಚಾಗಿ ಮಿಂಚಿದ್ದು ಮಾತ್ರ ಕಾಲಿವುಡ್‌ನಲ್ಲಿ. ಸದ್ಯ ಅರ್ಜುನ್ ಕುಟುಂಬ ಚೆನ್ನೈನಲ್ಲೇ ನೆಲೆಸಿದೆ. ಹೀಗಿದ್ದರೂ ಅರ್ಜುನ್ ಅವರಿಗೆ ಕನ್ನಡದ ಮೇಲಿನ ಪ್ರೀತಿ ಮಾತ್ರ ಕಡಿಮೆಯಾಗಿಲ್ಲ. ಆಗಾಗ ಕನ್ನಡ ಸಿನಿಮಾಗಳನ್ನು ಸಹ ಮಾಡುತ್ತಿರುತ್ತಾರೆ.
ಅರ್ಜುನ್ ಸರ್ಜಾಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಒಬ್ಬರು ಐಶ್ವರ್ಯಾ, ಇನ್ನೊಬ್ಬರು ಅಂಜನ್. ಈಗಾಗಲೇ ಐಶ್ವರ್ಯ ಕೂಡ ಹೊಸ ಬಾಳಿಗೆ ಹೆಜ್ಜೆ ಇಟ್ಟಿದ್ದು ಅದರ ಬೆನ್ನಲ್ಲೆ ಎರಡನೇ ಮಗಳು ಕೂಡ ವಿವಾಹಕ್ಕೆ ಸಜ್ಜಾಗಿದ್ದಾರೆ. ಅದಕ್ಕೂ ಮುನ್ನ ತನ್ನ ಹುಡುಗನ್ನು ಪ್ರಪಂಚಕ್ಕೆ ಪರಿಚಯಿಸಿದ್ದಾರೆ.
ಅರ್ಜುನ್ ಸರ್ಜಾಗೆ ಮತ್ತೊಬ್ಬ ಮಗಳಿರುವುದು ಬಹುತೇಕರಿಗೆ ಗೊತ್ತಿಲ್ಲ. ಅಂಜನಾ ಯಾವುದೇ ಸಿನಿಮಾಗಳಲ್ಲಿ ನಟಿಸಿಲ್ಲ. ಹೀಗಿದ್ದರೂ ತಮ್ಮ ಬೋಲ್ಡ್ ಲುಕ್‌ನಿಂದಲೇ ಅನೇಕರ ಗಮನ ಸೆಳೆದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿರುವ ಅಂಜನಾ ಆಗಾಗ ಹಾಟ್ ಫೋಟೋಗಳನ್ನು ಹರಿಬಿಡುತ್ತಾರೆ. ಈ ಮೂಲಕ ನೆಟ್ಟಿಗರ ಗಮನವನ್ನು ಸೆಳೆಯುತ್ತಿರುತ್ತಾರೆ. ಸದ್ಯ ಅಂಜನಾ ಹೊಸ ಬಾಳಿಗೆ ಹೆಜ್ಜೆ ಇಡಲು ಸಜ್ಜಾಗಿದ್ದು, ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ.