ಗದಗ: ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆಯು ‘ಆಪರೇಷನ್ ಸಿಂಧೂರ್’ ಆರಂಭಿಸಿದೆ. ಪಾಕಿಸ್ತಾನದಲ್ಲಿರುವ ಒಟ್ಟು 9 ಭಯೋತ್ಪಾದಕ ಅಡಗುತಾಣಗಳ ಮೇಲೆ ಅಟ್ಯಾಕ್ ಮಾಡಲಾಗಿದೆ. ಇನ್ನೂ ಈ ವಿಚಾರವಾಗಿ ಸಚಿವ ಎಚ್ ಕೆ ಪಾಟೀಲ್ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ್ದಾರೆ.ಪಹಲ್ಗಾಮನಲ್ಲಿ ಉಗ್ರಗಾಮಿಗಳು ಪಾಕಿಸ್ತಾನ ಕುತಂತ್ರದಿಂದ ಭಾರತೀಯರ ಮೇಲೆ ನಡೆದ ದಾಳಿ ಮಾಡಿದ್ರು.
ನಿಮಗೆ ರಾತ್ರಿ ಮಲಗುವಾಗ ನರ ನೋವು ಬಂದರೆ ನಿರ್ಲಕ್ಷ್ಯ ಬೇಡ, ತಪ್ಪದೇ ಈ 3 ಪರೀಕ್ಷೆಗಳನ್ನು ಮಾಡಿಸಿ!
ಅದಕ್ಕೆ ತಕ್ಕ ಶಾಸ್ತಿಯಾಗಿ ಉಗ್ರಗಾಮಿಗಳ ತಾಣಗಳನ್ನು ಭಾರತ ಸೈನ್ಯ ಧ್ವಂಸ ಮಾಡಿದೆ. ಭಾರತವನ್ನ ಕೆಣಕಿದ್ರೆ ತಕ್ಕ ಶಾಸ್ತಿ ಆಗುತ್ತೆ ಅನ್ನೊದು ಅವರಿಗೆ ತಿಳಿದಿರುತ್ತೆ. ಆದ್ದರಿಂದ ಭಾರತೀಯ ಸೈನ್ಯದ ದಾಳಿ ಸಮಾಧಾನ ತಂದಿದೆ ಎಂದು ಹೇಳಿದರು.
ಸುಮಾರು ಒಂಬತ್ತು ಕಡೆಗಳಲ್ಲಿ ಕಾರ್ಯಾಚರಣೆ ನಡೆದಿತ್ತು. ಸೂಕ್ತವಾದ ಪ್ರತಿಫಲ ಸಿಕ್ಕಿದೆ. ದೇಶದ ಜನ ಏನು ನಿರ್ಣಯ ಮಾಡಿ, ಒಕ್ಕಟ್ಟಿನ ಬಲವನ್ನು ಸೈನ್ಯಕ್ಕೆ ನೀಡಿದ್ದೇವೆ. ಸಮರ್ಥ ಬಲ ಮೂಡುವ ಹಾಗೆ ಸೂಕ್ತ ಕಾರ್ಯಾಚರಣೆ ಆಗಿದ್ದು, ಇದು ಯುದ್ಧ ಕಾಲ ಎಲ್ಲರೂ ಸನ್ನದ್ಧರಾಗಿ ಇರಬೇಕು ಎಂದರು.