ಬೆಂಗಳೂರು:- ಗನ್ ಹಿಡಿದು ಪಬ್ ಗೆ ನುಗ್ಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಆರೋಪಿಯನ್ನು ಬಂಧಿಸುವಲ್ಲಿ ಸುಬ್ರಹ್ಮಣ್ಯನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಡಾ. ಜಿ ಪರಮೇಶ್ವರ್ ಒಡೆತನದ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯಲ್ಲಿ ಮುಂದುವರಿದ ಇಡಿ ಶೋಧ!
ಒಡಿಶಾ ಮೂಲದ ದಿಲೀಪ್ ಕುಮಾರ್ ಬಂಧಿತ ಆರೋಪಿ. ಜೆಪಿ ನಗರದ ಹೊಟೇಲ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ ಆರೋಪಿಯು, ತನ್ನ ತಂಗಿ ಮದುವೆಗೆ ಹಣ ಹೊಂದಿಸಲು ಆರೋಪಿ ಕಳ್ಳತನಕ್ಕೆ ಯತ್ನಿಸಿದ್ದ. ಜೆಪಿ ನಗರದ ಹೊಟೇಲ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ. ಹಣ ಹೊಂದಿಸುವ ಸಲುವಾಗಿ ಜಾಮಿಟ್ರಿ ಪಬ್ ಗೆ ಆರೋಪಿ ನುಗ್ಗಿದ. ಪಬ್ ಗೆ ನುಗ್ಗಿ ಕಳ್ಳತನ ಮಾಡಲು ಯತ್ನಿಸಿದ್ದಾರೆ. ಮೇ 12 ರಂದು ಬೆಳಗಿನ ಜಾವ ಈ ಘಟನೆ ನಡೆದಿತ್ತು.
ಆರೋಪಿ ದಿಲೀಪ್ ಕುಮಾರ್ ಕಂಡು ಸೆಕ್ಯುರಿಟಿ ಗಾರ್ಡ್ ಭಯಭೀತರಾಗಿದ್ದರು. ಗನ್ ಹಿಡಿದು ಒಳ ನುಗ್ಗಿದ್ದಾನೆ ಅಂತಾ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ದೌಡಾಯಿಸಿ ಸುಬ್ರಮಣ್ಯ ನಗರ ಪೊಲೀಸರು ದೌಡಾಯಿಸಿದರು. ಅಷ್ಟರಲ್ಲಿ ಕಾಲ್ಕಿತ್ತು ಆರೋಪಿ ದಿಲೀಪ್ ಎಸ್ಕೇಪ್ ಆಗಿದ್ದ. ಒಂದು ವಾರಗಳ ನಿರಂತರ ಶೋಧದಿಂದ ಆರೋಪಿ ಸೆರೆಹಿಡಿಯಲಾಗಿದೆ.
ಆರೋಪಿಯನ್ನ ಬಂಧಿಸಿ ಪೊಲೀಸರು ಜೈಲಿಗಟ್ಟಿದ್ದಾರೆ. ಆರೋಪಿ ವಿಚಾರಣೆ ವೇಳೆ ಗನ್ ಪತ್ತೆಯಾಗಿಲ್ಲ. ಆರೋಪಿ ಬಳಿ ಯಾವುದೇ ಗನ್ ಪೊಲೀಸರಿಗೆ ಪತ್ತೆಯಾಗಿಲ್ಲ. ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ಪೊಲೀಸರು, ಇದೀಗ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ.
ಸುಬ್ರಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ಹಿನ್ನೆಲೆ:-
ಮೇ. 12 ರಂದು ಬೆಂಗಳೂರಿಗರು ಬೆಚ್ಚಿಬೀಳಿಸುವ ಘಟನೆ ನಡೆದಿದೆ ಜಿಯೋ ಮೆಟ್ರಿ ಪಬ್ಗೆ ಕೈಯಲ್ಲಿ ಗನ್ ಹಿಡಿದುಕೊಂಡ ಅನುಮಾಸ್ಪದ ವ್ಯಕ್ತಿ ನುಗ್ಗಿದ್ದ. ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳದಲ್ಲೇ ಮೊಕ್ಕಂ ಹೂಡಿದ್ದು, ಪರಿಶೀಲನೆ ನಡೆಸಿದ್ದರು.
ಕೈಯಲ್ಲಿ ಗನ್ ಹಿಡಿದುಕೊಂಡು ಜಿಯೋ ಮೆಟ್ರಿ ಪಬ್ಗೆ ವ್ಯಕ್ತಿಯೊರ್ವ ನುಗ್ಗಿದ್ದ. ಇದರ ಸಂಬಂಧ ತನಿಖೆ ಕೈಗೊಂಡ ಪೊಲೀಸರು ಇದೀಗ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.