Close Menu
Ain Live News
    Facebook X (Twitter) Instagram YouTube
    Tuesday, July 1
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಪಕ್ಷದ ಕಾರ್ಯಕರ್ತನಾಗಿ ಪಕ್ಷದ ನಿರ್ಧಾರಕ್ಕೆ ಬದ್ಧ ; ಅಣ್ಣಾಮಲೈ

    By AIN AuthorApril 9, 2025
    Share
    Facebook Twitter LinkedIn Pinterest Email
    Demo

    ಉಡುಪಿ : ನಾನೊಬ್ಬ ಕಾರ್ಯಕರ್ತ, ಪಕ್ಷ ನನಗೆ ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸುವೆ ಎಂದು ಅಣ್ಣಾಮಲೈ ಹೇಳಿದ್ದಾರೆ. ಇಂದು ಉಡುಪಿಯಲ್ಲಿ ಮಾತನಾಡಿದ ಅವರು, ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು.

     

    ಈ ವೇಳೆ ನಾವೆಲ್ಲ ರಾಷ್ಟ್ರೀಯ ಪಕ್ಷದ ಸದಸ್ಯರು. ನಾನೊಬ್ಬ ಕಾರ್ಯಕರ್ತ ಪಕ್ಷ ನನಗೆ ಒಂದು ಜವಾಬ್ದಾರಿ ಕೊಟ್ಟಿತ್ತು. ಇನ್ನೊಂದು ಜವಾಬ್ದಾರಿ ಕೊಟ್ಟರು, ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ.  ಕೆಲಸ ಮಾಡುವುದು ಮಾತ್ರ ನನ್ನ ಕರ್ಮ, ಏನೇ ಅವಕಾಶಕೊಟ್ಟರು ಕೆಲಸ ಮಾಡುತ್ತೇನೆ. ಚುನಾವಣೆ ಬರುತ್ತಿದೆ. ಹೀಗಾಗಿ, ಗೃಹ ಮಂತ್ರಿಯವರನ್ನು ತಮಿಳುನಾಡು ವಿಪಕ್ಷ ನಾಯಕ ಪಳನಿ ಸ್ವಾಮಿ ಭೇಟಿಯಾಗಿದ್ದಾರೆ. ಗೃಹ ಸಚಿವರು ಮೈತ್ರಿಯ ಬಗ್ಗೆ ಮಾತನಾಡಿದ್ದಾರೆ. ಎಐಡಿಎಂ ಕೆ ಕುರಿತ ನನ್ನ ನಿಲುವು ಎಲ್ಲರಿಗೂ ಗೊತ್ತು ಎಂದರು. ನಾನು ಎಲ್ಲಿ ಇರಬೇಕು ಯಾವ ಪೊಸಿಷನ್ನಲ್ಲಿ ಇರಬೇಕು ಎಂದು ಪಕ್ಷಕ್ಕೆ ಗೊತ್ತಿದೆ. ಮೈತ್ರಿಗೆ ಯಾವುದು ಸರಿಯಾದ ನಿಲುವು ಎಂದು ಪಕ್ಷಕ್ಕೆ ಗೊತ್ತಿದೆ ಎಂದರು.

    ಎಐಸಿಸಿ ಅಧಿವೇಶನದ ವೇಳೆಯೇ ಕುಸಿದುಬಿದ್ದ ಕಾಂಗ್ರೆಸ್ ನಾಯಕ ಪಿ.ಚಿದಂಬರಂ

    ತಮಿಳುನಾಡು ಒಂದು ಸುದೀರ್ಘ ಕಾಲದ ಆಟ, ಬಹಳ ವರ್ಷದಿಂದ ನಾವು ತಾಳ್ಮೆಯಿಂದ ಕಾದಿದ್ದೇವೆ ಕಾಯುತ್ತೇವೆ. ಇನ್ನು 20 ವರ್ಷ 30 ವರ್ಷ ಬೇಕಾದರೂ ಆಗಲಿ ಅಧಿಕಾರಕ್ಕೆ ಬರುತ್ತೇವೆ. ಪಕ್ಷದ ನಿರ್ಧಾರಕ್ಕೆ ಕಾರ್ಯಕರ್ತರಾಗಿ ಒಪ್ಪಿಗೆ ಕೊಡಬೇಕು. ಪಕ್ಷ ರಾಷ್ಟ್ರೀಯ ಮಟ್ಟದಿಂದ ಆಲೋಚನೆ ಮಾಡುತ್ತದೆ. ಡಿಎಂಕೆ ಎಷ್ಟು ಗಲೀಜು ಸರಕಾರ ಮಾಡುತ್ತಿದೆ ನೋಡಿದ್ದೀರಿ. 13 ಸಚಿವರ ಮೇಲೆ ಭ್ರಷ್ಟಾಚಾರ ಪ್ರಕರಣ ನ್ಯಾಯಾಲಯದಲ್ಲಿದೆ. ಒಬ್ಬ ಮಂತ್ರಿ ಒಂದುವರೆ ವರ್ಷ ಜೈಲಿನಲ್ಲಿದ್ದು ಮತ್ತೆ ಮಂತ್ರಿಯಾಗಿದ್ದಾರೆ. ದೀರ್ಘಕಾಲಿನ ದೃಷ್ಟಿಕೋನದಿಂದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ರಾಜಕೀಯದಲ್ಲಿ ಅಧಿಕಾರಕ್ಕಿಂತ ತಾಳ್ಮೆ ಮುಖ್ಯ. ಒಂದಲ್ಲ ಒಂದು ದಿನ ಬಿಜೆಪಿ ತಮಿಳುನಾಡಿನಲ್ಲಿ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದರು.

     

    ಇನ್ನೂ ನಾನು ಕರ್ನಾಟಕ ಸರ್ಕಾರವನ್ನು ಹೊರಗಿನಿಂದ ಇದ್ದು ನೋಡುತ್ತಿದ್ದೇನೆ. ಸರ್ಕಾರದಲ್ಲಿರುವ ಒಬ್ಬ ದೊಡ್ಡ ಮನುಷ್ಯ, ಒಬ್ಬ ಪವರ್ ಫುಲ್ ವ್ಯಕ್ತಿ ಸಿಡಿ ಹನಿಟ್ರ್ಯಾಪ್ ವಿಚಾರದಲ್ಲಿ ಸುದ್ದಿಯಾಗಿದ್ದಾರೆ. ಕರ್ನಾಟಕದ ಜನರ ಸಂಸ್ಕೃತಿ, ಶ್ರೀಮಂತವಾಗಿದೆ. ಸರ್ಕಾರ ಜನ ವಿರೋಧಿಯಾಗಿದೆ. ಅಧಿಕಾರ ಉಳಿಸಿಕೊಳ್ಳಲು ಏನೆಲ್ಲ ಮಾಡುತ್ತಿದ್ದಾರೆ, ಇಡೀ ದೇಶ ನೋಡ್ತಾ ಇದೆ. ಜನಾಕ್ರೋಶ ಯಾತ್ರೆ, ಎಲ್ಲರೂ ಜನರ ಜೊತೆಯಾಗಬೇಕು ಎಂದರು.

    ಇನ್ನೂ ವಕ್ಫ್‌ ಆಕ್ಟ್ ಗೆ ಅನೇಕ ತಿದ್ದುಪಡಿಗಳು ಆಗುತ್ತಲೇ ಬಂದಿದೆ. 1995ರಲ್ಲಿ ಅತಿ ದೊಡ್ಡ ತಿದ್ದುಪಡಿ ಆಗಿದೆ. 2013 ಕಾಂಗ್ರೆಸ್ ಸರಕಾರದಲ್ಲಿ ತಿದ್ದುಪಡಿ ದೊಡ್ಡ ಮಟ್ಟದಲ್ಲಿ ಆಗಿತ್ತು. 2025 ಅತಿ ದೊಡ್ಡ ಬದಲಾವಣೆ ತರಲಾಗಿದೆ. ಪ್ರಜಾಪ್ರಭುತ್ವದಲ್ಲಿ ತಿದ್ದುಪಡಿ ಆಗುತ್ತದೆ, ಜನರು ಅರ್ಥ ಮಾಡಿಕೊಳ್ಳಬೇಕು ಎಂದರು.

     

    ಗ್ಯಾಸ್ ದರ ಏರಿಕೆ ವಿಚಾರವಾಗಿ ಮಾತನಾಡಿ ಕಾಂಗ್ರೆಸ್ ನಲ್ಲಿ ಆರ್ಥಿಕ ತಜ್ಞರು ಇದ್ದಾರೆ ಅವರು ಹೇಳಬೇಕು. ಕಾಂಗ್ರೆಸ್‌ನ ಆರ್ಥಿಕ ತಜ್ಞರು ಸತ್ಯ ಮಾತನಾಡುವುದಿಲ್ಲ. ಅಂತರಾಷ್ಟ್ರೀಯ ಗ್ಯಾಸ್ ದರ ಏರಿಕೆಯಾಗಿದೆ. ಒಂದು ಹಂತದ ಮೇಲೆ ಆಯಿಲ್ ಮಾರ್ಕೆಟಿಂಗ್ ಕಂಪನಿಗೂ ಕಷ್ಟವಾಗುತ್ತದೆ.  ಅವಾಗ ದರ ಏರಿಕೆ ಅನಿವಾರ್ಯ ಎಂದರು.

    Demo
    Share. Facebook Twitter LinkedIn Email WhatsApp

    Related Posts

    ಪತ್ರಕರ್ತರಿಗೆ ಗುಡ್ ನ್ಯೂಸ್: ಉಚಿತ ಬಸ್ ಪಾಸ್, ಮಾಧ್ಯಮ ಸಂಜೀವಿನಿ ಯೋಜನೆಗೆ ನಾಳೆ ಸಿದ್ದರಾಮಯ್ಯ ಚಾಲನೆ!

    June 30, 2025

    ಹಾಸನದಲ್ಲಿ ಮುಂದುವರಿದ ಸರಣಿ ಹೃದಯಾಘಾತ: ಆಟೋ ಓಡಿಸುತ್ತಲೇ ಪ್ರಾಣ ಬಿಟ್ಟ ಡ್ರೈವರ್!

    June 30, 2025

    ಹಾಸನದಲ್ಲಿ ಹೃದಯಾಘಾತ ಪ್ರಕರಣ ಹೆಚ್ಚಳ: ರಾಜ್ಯ ಸರ್ಕಾರದಿಂದ ವಿಶೇಷ ಸಮಿತಿ ರಚನೆ!

    June 30, 2025

    ಲಂಚ ಸ್ವೀಕರಿಸುವಾಗ ‘ಲೋಕಾ’ ಬಲೆಗೆ ಬಿದ್ದ ಕಂದಾಯ ಅಧಿಕಾರಿ!

    June 30, 2025

    ಮಹಿಳೆ ಹತ್ಯೆ: ಗಂಡ, ಅತ್ತೆ ವಿರುದ್ಧ ದಾಖಲಾಯ್ತು ದೂರು.. ತನಿಖೆ ಚುರುಕು!

    June 30, 2025

    5 ಹುಲಿಗಳ ಸರಣಿ ಸಾವಿಗೆ ಅರಣ್ಯ ಇಲಾಖೆಯ ಬೇಜವಾಬ್ದಾರಿ ಕಾರಣ: ಸಂಸದ ಸುನೀಲ್ ಬೋಸ್

    June 30, 2025

    ಸುಳ್ಳು ಕೊಲೆ ಕೇಸ್​ ಹಾಕಿ ಅಮಾಯಕನನ್ನು ಜೈಲಿಗೆ ಕಳುಹಿಸಿದ್ದ ಪೊಲೀಸರು ಸಸ್ಪೆಂಡ್!

    June 30, 2025

    ಆರ್ಎಲ್ ಜಾಲಪ್ಪ ಲಯನ್ಸ್ ಸಂಸ್ಥೆಗೆ ಅತ್ಯುತ್ತಮ ಕ್ಲಬ್ ಪುರಸ್ಕಾರ : ಸತತ 4ನೇ ವರ್ಷವೂ ಅಗ್ರಸ್ಥಾನ ಪಡೆದ ವಿದ್ಯಾಸಂಸ್ಥೆ..!

    June 30, 2025

    ಆತನಿಗೆ ಹಲವರೊಂದಿಗೆ ಅಫೇರ್ ಇತ್ತು; ಯಶ್‌ ದಯಾಳ್‌ ವಿರುದ್ಧ ಮಹಿಳೆಯಿಂದ ಮತ್ತೊಂದು ಆರೋಪ!

    June 30, 2025

    ಭಾರತೀಯ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಹಡಗಿನಲ್ಲಿ ಬೆಂಕಿ: ನೌಕಾಪಡೆಯಿಂದ ರಕ್ಷಣೆ

    June 30, 2025

    ಸಿನಿಮಾ ಶೈಲಿ ಅಪಹರಣ: ಆರು ಜನರ ಬಂಧನ – ಎನ್ ಶಶಿಕುಮಾರ್

    June 30, 2025

    ಜು.03ರಂದು ಬೀದರ್ ಜಿಲ್ಲೆಗೆ ನಿಖಿಲ್ ಕುಮಾರಸ್ವಾಮಿ ಆಗಮನ: ರಮೇಶ್ ಪಾಟೀಲ್ ಸೋಲ್ಪೂರ್

    June 30, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.