ಹುಬ್ಬಳ್ಳಿ:- ಬಾಲಕಿ ಅತ್ಯಾಚಾರಕ್ಕೆ ಯತ್ನಿಸಿ ಕೊಲೆ ಹಿನ್ನಲೆ ಸಾರ್ವಜನಿಕರು ಹಾಗೂ ಪಾಲಕರ ಆಕ್ರೋಶ ಭುಗಿಲೆದ್ದಿರುವ ಘಟನೆ ಹುಬ್ಬಳ್ಳಿಯಲ್ಲಿ ಜರುಗಿದೆ.
ಗುತ್ತಿಗೆದಾರರ ಸಂಘದ ಅಧ್ಯಕ್ಷರು ಮಾಡಿರುವ ಆರೋಪಗಳೆಲ್ಲಾ ಸುಳ್ಳು: ರವಿ ಬೋಸರಾಜು!
ಹುಬ್ಬಳ್ಳಿನಗರದ ಮೂರು ಕಡೆಗಳಲ್ಲಿ ಪ್ರತಿಭಟನೆ ನಡೆದಿದ್ದು, ಆರೋಪಿಗೆ ತಕ್ಕ ಶಿಕ್ಷೆ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡಲಾಗಿದೆ. ಹುಬ್ಬಳ್ಳಿ ಕೆಎಂಸಿಆರ್ ಐ ಆಸ್ಪತ್ರೆಯ ಶವಾಗಾರ ಮುಂದೆ ದಲಿತ ಸಂಘಟನೆಗಳಿಂದ ಆಕ್ರೋಶ ಹೊರ ಹಾಕಿದ್ದಾರೆ. ವಿದ್ಯಾನಗರದ ಕಿಮ್ಸ್ ಆಸ್ಪತ್ರೆ ಮುಂದೆ ವಿವಿಧ ಕನ್ನಡ ಪರ ಸಂಘಟನೆಗಳಿಂದ ಆಕ್ರೋಶ ಭುಗಿಲೆದ್ದಿದೆ.
ವಿವಿಧ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಚೆನ್ನಮ್ಮ ಸರ್ಕಲ್ ಬಳಿ ಆಕ್ರೋಶ ಹೊರ ಹಾಕಿದ್ದಾರೆ. ಹುಬ್ಬಳ್ಳಿ ಧಾರವಾಡ ರಾಜ್ಯ ಹೆದ್ದಾರಿ ತಡೆದು ಕಿಡಿಕಾರಿದ್ದಾರೆ. ಬೆಳಿಗ್ಗೆಯೇ ಬಾಲಕಿ ಕೊಲೆ ಆಗಿದೆ. ಸಂಜೆ ಆದರೂ ಶವ ಹಸ್ತಾಂತರ ಮಾಡಿಲ್ಲ. ಪ್ರಕರಣ ಕುರಿತು ಏನು ಆಯಿತು ಅಂತಾ ಮಾಹಿತಿ ಕೊಟ್ಟಿಲ್ಲ ಎಂದು ಪಾಲಕರು ಆಕ್ರೋಶ ಹೊರಹಾಕಿದ್ದಾರೆ.