ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಹೋಗುತ್ತಿದೆ. ಇದೀಗ ಬೆಂಗಳೂರಿನ ಕಬ್ಬನ್ ಪಾರ್ಕ್ ಬಳಿಯ ಪಬ್ ಒಂದರಲ್ಲಿ ಕುಡಿದ ಮತ್ತಿನಲ್ಲಿ ಯುವತಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಸಂಬಂಧ ಆರೋಪಿಯನ್ನು ಬಂಧಿಸಿರುವ ಘಟನೆ ನಡೆದಿದೆ.
ಬೆಳಗ್ಗೆ ಎದ್ದ ಕೂಡಲೇ ತಲೆನೋವು ಬರುತ್ತಾ!? ಹಾಗಿದ್ರೆ ರಾತ್ರಿ ಮಾಡುವ ಈ ತಪ್ಪು ಕಾರಣ!
ಅನುರಾಗ್ ಬಂಧಿತ ಆರೋಪಿಯಾಗಿದ್ದು, ಖಾಸಗಿ ಕಂಪನಿಯಲ್ಲಿ ಯುವತಿ ಮತ್ತು ಬಂಧಿತ ಅನುರಾಗ್ ಇಬ್ಬರು ಟೆಕ್ಕಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಇದೇ ಪರಿಚಯದ ಮೇಲೆ ಕಬ್ಬನ್ ಪಾರ್ಕ್ ಬಳಿಯ ಪಬ್ವೊಂದಕ್ಕೆ ಪಾರ್ಟಿಗೆ ಹೋಗಿದ್ದರು. ಪಾರ್ಟಿ ವೇಳೆ ಕುಡಿತದ ಮತ್ತಿನಲ್ಲಿ, ಯುವತಿ ಮೇಲೆ ದೌರ್ಜನ್ಯವೆಸಗಲು ಯತ್ನಿಸಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.
ಈ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಯುವತಿ ದೂರು ನೀಡಿದ್ದಳು. ಇಬ್ಬರು ಪರಿಚಿತರಾಗಿದ್ದು, ಕುಡಿತದ ನಶೆಯಲ್ಲಿ ಈ ಕೃತ್ಯಕ್ಕೆ ಯತ್ನ ನಡೆಸಲಾಗಿದೆ ಎಂಬುದು ಪೊಲೀಸರ ತನಿಖೆ ವೇಳೆ ಗೊತ್ತಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ.