Close Menu
Ain Live News
    Facebook X (Twitter) Instagram YouTube
    Wednesday, June 18
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಬೆಂಗಳೂರಿಗರೇ ಗಮನಿಸಿ: ಈ ಆಸ್ತಿದಾರರಿಗೆ ಆಸ್ತಿ ಉಳಿಸಿಕೊಳ್ಳಲು ಕೊನೆ ಅವಕಾಶ!

    By AIN AuthorFebruary 12, 2025
    Share
    Facebook Twitter LinkedIn Pinterest Email
    Demo

    ಬೆಂಗಳೂರು:- ಬೆಂಗಳೂರಿನಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವವರಿಗ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು ಬಿಗ್‌ ಶಾಕ್‌ ಕೊಟ್ಟಿದೆ. ಬಿಬಿಎಂಪಿಯ ಎಲ್ಲಾ 8 ವಲಯಗಳಲ್ಲಿ 608 ಆಸ್ತಿಗಳಿಂದ ಹಲವು ವರ್ಷಗಳಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದವರ ಆಸ್ತಿಗಳ ಮಾರಾಟಕ್ಕೆ ಪಾಲಿಕೆ ಮುಂದಾಗಿದೆ. ಆಸ್ತಿ ತೆರಿಗೆ ವಸೂಲಿಗಾಗಿ ಸ್ಥಿರ ಆಸ್ತಿಗಳ ಹರಾಜು ಮಾರಾಟ ಮಾಡಲಾಗುತ್ತಿದೆ.

    ಆನಂದ್ ಮಹೀಂದ್ರಗೆ ಕೊಡಗಿನ ಸವಿನೆನಪು, ಹೂಡಿಕೆಯ ಹುರುಪು!

    ಬೆಂಗಳೂರಿನಲ್ಲಿ ಕೆಲವು ಆಸ್ತಿದಾರರು ಸಾವಿರಾರು ಕೋಟಿ ರೂಪಾಯಿ ಆಸ್ತಿ ತೆರಿಗೆಯನ್ನು ಬಾಕಿ ಉಳಿಸಿಕೊಂಡಿದ್ದಾರೆ. ಈ ರೀತಿ ಆಸ್ತಿ ಬಾಕಿ ಉಳಿಸಿಕೊಂಡಿರುವವರು ಇನ್ನು ಎರಡು ದಿನದ ಒಳಗಾಗಿ ಆಸ್ತಿ ತೆರಿಗೆಯನ್ನು ಪಾವತಿ ಮಾಡದೆ ಇದ್ದರೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳಲಿದ್ದಾರೆ ಎಂದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಎಚ್ಚರಿಕೆ ನೀಡಿದೆ.

    ಬಿಬಿಎಂಪಿಗೆ ಕೋಟ್ಯಾಂತರ ರೂಪಾಯಿ ಆಸ್ತಿ ತೆರಿಗೆ ಬಾಕಿ ಉಳಿದಿದೆ. ಆದರೆ ಹಲವು ಆಸ್ತಿದಾರರು ಆಸ್ತಿ ತೆರಿಗೆ ಬಾಕಿಯನ್ನು ಪಾವತಿ ಮಾಡದೆ ಇರುವುದರಿಂದ ಬಿಬಿಎಂಪಿಗೆ ಆದಾಯ ಕೊರತೆ ಹಾಗೂ ಆದಾಯ ಬರುವುದು ಕಡಿಮೆಯಾಗುತ್ತಿದೆ. ಇದೀಗ ಇದನ್ನು ತಪ್ಪಿಸುವ ಉದ್ದೇಶದಿಂದ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು ಕೆಲವೊಂದು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಈಚೆಗೆ ಬೆಂಗಳೂರಿನ 600ಕ್ಕೂ ಹೆಚ್ಚು ಆಸ್ತಿಗಳನ್ನು ಹರಾಜು ಹಾಕುವುದಾಗಿ ಬಿಬಿಎಂಪಿ ಹೇಳಿತ್ತು. ಇದೀಗ ಈ ಆಸ್ತಿದಾರರಿಗೆ ನೀಡಿದ್ದ ಗಡುವು ಮುಕ್ತಾಯವಾಗುವುದಕ್ಕೆ ಬಂದಿದ್ದು. ಆಸ್ತಿ ಪಾವತಿ ಮಾಡದೆ ಇರುವವರು ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕದಲ್ಲಿ ಇದ್ದಾರೆ. ಬೆಂಗಳೂರಿನ ಈ ಭಾಗದ ಆಸ್ತಿಗಳ ಹರಾಜಿಗೆ ಇನ್ನು ಕೇವಲ 2 ದಿನಗಳು ಮಾತ್ರ ಬಾಕಿ ಉಳಿದಿವೆ

    ಬಿಬಿಎಂಪಿಗೆ ಹೆಚ್ಚು ಆದಾಯ ಹರಿದು ಬರುವುದೇ ಕೆಲವು ನಿರ್ದಿಷ್ಟ ವಲಯಗಳಿಂದ ಅದರಲ್ಲೂ ಆಸ್ತಿ ತೆರಿಗೆಯಿಂದ ಕೋಟ್ಯಾಂತರ ರೂಪಾಯಿ ಹರಿದು ಬರುತ್ತದೆ. ಆದರೆ ಕಳೆದ ಹಲವು ವರ್ಷಗಳಿಂದ ಕೆಲವರು ಆಸ್ತಿ ತೆರಿಗೆಯನ್ನೇ ಪಾವತಿ ಮಾಡಿಲ್ಲ. ಈ ರೀತಿ ದೀರ್ಘಕಾಲದ ಆಸ್ತಿ ಬಾಕಿ ಉಳಿಸಿಕೊಂಡವರಿಗೆ ನೋಟಿಸ್ ಕೊಡಲಾಗಿತ್ತು. ಇದೀಗ ಈ ಆಸ್ತಿಗಳ ಹರಾಜು ಪ್ರಕ್ರಿಯೆಯನ್ನು ಫೆಬ್ರವರಿ 13ರಿಂದ ಶುರು ಮಾಡುವುದಾಗಿ ಬಿಬಿಎಂಪಿ ಹೇಳಿತ್ತು. ಇದಕ್ಕೆ ಕೇವಲ ಎರಡು ದಿನಗಳು ಮಾತ್ರ ಬಾಕಿ ಉಳಿದಿವೆ.

    ಬೆಂಗಳೂರಿನಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 608 ಆಸ್ತಿಗಳಿಂದ ದೀರ್ಘಕಾಲದ ಆಸ್ತಿ ತೆರಿಗೆ ಬಾಕಿ ವಸೂಲಿಗಾಗಿ ಸ್ಥಿರ ಆಸ್ತಿಗಳ ಹರಾಜು ಮಾರಾಟ ಮಾಡುವುದಕ್ಕೆ ನಿರ್ಧರಿಸಿದೆ. ಇದರ ಪ್ರಕ್ರಿಯೆಗೆ ಕೊನೆಯ ಎಚ್ಚರಿಕೆಯನ್ನು ನೀಡಲಾಗಿದೆ. ಇನ್ನು ಎರಡು ದಿನಗಳ ಒಳಗಾಗಿ ಆಸ್ತಿ ತೆರಿಗೆ ಬಾಕಿಯನ್ನು ಪಾವತಿ ಮಾಡದೆ ಇದ್ದರೆ ಆಸ್ತಿಯನ್ನು ಹರಾಜು ಹಾಕುವುದಾಗಿ ಬಿಬಿಎಂಪಿಯು ಕೊನೆಯ ಎಚ್ಚರಿಕೆಯನ್ನು ಕೊಟ್ಟಿದೆ.

    ವಲಯ – ಹರಾಜು ಆಸ್ತಿಗಳ ಸಂಖ್ಯೆ
    1. ಪೂರ್ವ ವಲಯ – 118

    2. ಪಶ್ಚಿಮ ವಲಯ – 120
    3. 3. ದಕ್ಷಿಣ ವಲಯ – 109

    4. ಮಹದೇವಪುರ ವಲಯ – 60

    5. ಬೊಮ್ಮನಹಳ್ಳಿ ವಲಯ – 70

    6. ಯಲಹಂಕ ವಲಯ – 40

    7. ಆರ್.ಆರ್ ನಗರ ವಲಯ – 50

    8. ದಾಸರಹಳ್ಳಿ ವಲಯ – 41

    ಒಟ್ಟು: 608
    ಯಾವ ವಲಯದಲ್ಲಿ ಯಾವಾಗ ಹರಾಜು ಪ್ರಕ್ರಿಯೆ ಶುರು
    * ಪೂರ್ವ ವಲಯ 13ನೇ ಫೆಬ್ರವರಿ
    * ಪಶ್ಚಿಮ ವಲಯ 13ನೇ ಫೆಬ್ರವರಿ
    * ದಕ್ಷಿಣ ವಲಯ 14ನೇ ಫೆಬ್ರವರಿ
    * ಮಹದೇವಪುರ ವಲಯ 13ನೇ ಫೆಬ್ರವರಿ
    * ಬೊಮ್ಮನಹಳ್ಳಿ ವಲಯ 14ನೇ ಫೆಬ್ರವರಿ
    * ಯಲಹಂಕ ವಲಯ 13ನೇ ಫೆಬ್ರವರಿ
    ಹಾಗೂ ದಾಸರಹಳ್ಳಿ ವಲಯದಲ್ಲಿ 13ನೇ ಫೆಬ್ರವರಿ 2025 ರಂದು ಹರಾಜು ಮಾಡಲಾಗುತ್ತದೆ ಎಂದು ಬಿಬಿಎಂಪಿ ಹೇಳಿದೆ.

    Demo
    Share. Facebook Twitter LinkedIn Email WhatsApp

    Related Posts

    ಕೆಆರ್ ಪುರದಲ್ಲಿ ರಕ್ತದಾನ ಹಾಗೂ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜನೆ!

    June 18, 2025

    ಇನ್ನು ಮುಂದೆ ಸಾರಿಗೆ ಇಲಾಖೆ ಮಾದರಿಯಲ್ಲಿ ಕುಡಿಯುವ ನೀರಿನ ದರ ಪರಿಷ್ಕರಣೆ; ಡಿ.ಕೆ. ಶಿವಕುಮಾರ್!

    June 18, 2025

    Mobile Charging: ನಿಮ್ಮ ಫೋನ್​ ಚಾರ್ಜ್​ ಬೇಗ ಖಾಲಿಯಾಗುತ್ತಾ? ಈ ಟಿಪ್ಸ್​ ಫಾಲೋ ಮಾಡಿ!

    June 18, 2025

    IPS ಅಧಿಕಾರಿ ವಿರುದ್ದ ಭ್ರಷ್ಟಾಚಾರ ಆರೋಪ ಕೇಸ್: ಬಂಧನ ಭೀತಿಯಿಂದ ಕೋರ್ಟ್’ಗೆ ಅರ್ಜಿ ಮೇಲೆ ಅರ್ಜಿ

    June 18, 2025

    ನೀವು ಮನಸ್ಸು ಮಾಡಿದರೆ ಮೇಲಕ್ಕೂ ಏರಿಸಬಹುದು, ಕೆಳಕ್ಕೂ ಬೀಳಿಸಬಹುದು: ಡಿ.ಕೆ. ಶಿವಕುಮಾರ್

    June 18, 2025

    ಕೆಂಪೇಗೌಡ ಏರ್ಪೋಟ್’ನಿಂದ ಪ್ರಯಾಣಿಕರಿಗಾಗಿ ಮತ್ತೊಂದು ಸೇವೆ..! ಮಕ್ಕಳಿಗಾಗಿ ಹೊಸ ಟ್ರಾಲಿ ವ್ಯವಸ್ಥೆ

    June 18, 2025

    ಬಹುಕೋಟಿ ವಂಚನೆ ಕೇಸ್: ಐಶ್ವರ್ಯಾ ಗೌಡ ಕೇಸ್ ಸಿಐಡಿಗೆ ಶಿಫ್ಟ್..!

    June 18, 2025

    ಟೀನೇಜ್ ಲವ್.. ಮಕ್ಕಳು ದಾರಿ ತಪ್ಪದಂತೆ ಮಾರ್ಗದರ್ಶನ ಮಾಡುವುದು ಹೇಗೆ? ಇಲ್ಲಿದೆ ನೋಡಿ ಟಿಪ್ಸ್

    June 18, 2025

    ಖಾಲಿ ಇರುವ 35000 ಸಾವಿರ ನಿಮ್ಮ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲಾಗುವುದು: ಸಿಎಂ ಸಿದ್ದರಾಮಯ್ಯ ಘೋಷಣೆ

    June 18, 2025

    ತಲೆ ತಿರುಗಿ 2ನೇ ಮಹಡಿಯಿಂದ ಬಿದ್ದ ವಿದ್ಯಾರ್ಥಿನಿ..! ಜಸ್ಟ್ ಮಿಸ್.. ಪ್ರಾಣಾಪಾಯದಿಂದ ಪಾರು

    June 18, 2025

    ರಚಿತಾ ರಾಮ್‌ ವಿರುದ್ಧ ಮತ್ತೊಂದು ಕಂಪ್ಲೇಂಟ್‌..ಏನ್‌ ಮಾಡಿದ್ರು ಡಿಂಪಲ್‌ ಕ್ವೀನ್!?

    June 18, 2025

    ವಾಹನ ಸವಾರರಿಗೆ ಗುಡ್ ನ್ಯೂಸ್: ಫಾಸ್ಟ್ ಟ್ಯಾಗ್ ಆಧಾರಿತ ವಾರ್ಷಿಕ ಪಾಸ್ ಜಾರಿ!

    June 18, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.