ಬೆಂಗಳೂರು:- ಇಂದು ಬೆಂಗಳೂರು ನಗರದಲ್ಲಿ ಮೂರು ರಸ್ತೆಗಳಲ್ಲಿ ಸಂಚಾರ ಬದಲಾವಣೆ ಮಾಡಲಾಗಿದೆ. ಇಂದು ಮುಸ್ಲಿಂ ಭಾಂದವರ ಮೊಹರಂ ಹಬ್ಬದ ಆಚರಣೆಯ ಹಿನ್ನಲೆ ಮಧ್ಯಾಹ್ನ 11 ಗಂಟೆಯಿಂದ ಸಂಜೆ 05-30 ಗಂಟೆಯವರೆಗೆ ಸಂಚಾರ ಬದಲಾವಣೆ ಮಾಡಲಾಗಿದೆ ಎಂದು ಬೆಂಗಳೂರು ನಗರ ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ.
Brown Bread: ನಿತ್ಯ ಬ್ರೌನ್ ಬ್ರೆಡ್ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಾ? ಕೆಟ್ಟದ್ದಾ? – ಇಲ್ಲಿ ತಿಳಿಯಿರಿ!
ಸಂಚಾರ ಮಾರ್ಗ ಬದಲಾವಣೆ
ಬ್ರಿಗೇಡ್ ರಸ್ತೆ ಮತ್ತು ರಿಚ್ಮಂಡ್ ರಸ್ತೆಯ ಮೂಲಕ ಹೊಸೂರು ರಸ್ತೆ ಕಡೆಗೆ ವೆಲ್ಲಾರಾ ಜಂಕ್ಷನ್ (ಶೂಲೆ ವೃತ್ತ) ಮುಖಾಂತರ ಸವಾರರು ತೆರಳಬಹುದಾಗಿದೆ
ಓಲ್ಡ್ ಪಿ.ಎಸ್ ಜಂಕ್ಷನ್ ಎಡ ತಿರುವು ಪಡೆದು ವುಡ್ ಸ್ಟ್ರೀಟ್, ಟೇಟ್ ಲೇನ್, ರಿಚ್ಮಂಡ್ ರಸ್ತೆಯ ಮೂಲಕ ರಿಚ್ಮಂಡ್ ಜಂಕ್ಷನ್, ಶಾಂತಿನಗರ ಜಂಕ್ಷನ್, ಲಾಂಗ್ ಪೋರ್ಡ್ ರಸ್ತೆ, ನಂಜಪ್ಪ ಜಂಕ್ಷನ್, ಸಿಎಂಪಿ ಜಂಕ್ಷನ್ ಮೂಲಕ ಹೊಸೂರು ರಸ್ತೆ ಕಡೆಗೆ ಸಂಚರಿಸುವುದು
ಹೊಸೂರು ರಸ್ತೆಯ ಆಡುಗೋಡಿ ಕಡೆಯಿಂದ ಬರುವ ಸವಾರರು ಆನೇಪಾಳ್ಯ ಜಂಕ್ಷನ್ ಬಳಿ ಸಿಮೆಂಟ್ರಿ ಕ್ರಾಸ್ನಲ್ಲಿ ಎಡ ತಿರುವು ಪಡೆದು ಬರ್ಲಿ ಸ್ಟ್ರೀಟ್, ಲಾಂಗ್ ಪೋರ್ಡ್ ರಸ್ತೆ, ನಂಜಪ್ಪ ವೃತ್ತ, ಶಾಂತಿನಗರ ಕಡೆಗೆ ಹಾಗೂ ರೀನಿಯಸ್ ಸ್ಟ್ರೀಟ್ ಮೂಲಕ ರಿಚ್ಮಂಡ್ ರಸ್ತೆಗೆ ಬಂದು ಮುಂದಕ್ಕೆ ಸಂಚರಿಸುವುದು.
ಹೊಸೂರು ರಸ್ತೆ ಕಡೆಯಿಂದ ಬರುವ ಭಾರಿ ವಾಹನ ಸವಾರರು ಆಡುಗೋಡಿ ಜಂಕ್ಷನ್, ಮೈಕೋ ಜಂಕ್ಷನ್, 8ನೇ ಮೈನ್, ವಿಲ್ಸನ್ ಗಾರ್ಡನ್ ಮುಖ್ಯ ರಸ್ತೆ, ಸಿದ್ದಯ್ಯ ರಸ್ತೆಗೆ ಬಂದು ಮುಂದಕ್ಕೆ ಸಂಚರಿಸುವುದು