Close Menu
Ain Live News
    Facebook X (Twitter) Instagram YouTube
    Sunday, June 15
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಎಚ್ಚರ ಜನರೇ: ಜ್ವರ, ತಲೆನೋವು ಅಂತ DOLO 650 ಮಾತ್ರೆ ನುಂಗುತ್ತಾ ಇದ್ದೀರಾ!? ಇದು ಎಷ್ಟು ಡೇಂಜರ್ ಗೊತ್ತಾ?

    By AIN AuthorApril 20, 2025
    Share
    Facebook Twitter LinkedIn Pinterest Email
    Demo

    ಅತಿಯಾದರೆ ಅಮೃತವೂ ವಿಷ ಎನ್ನುವಂತೆ ಕೊರೊನಾ ಡೋಲೋ 650 ಮಾತ್ರೆ ಸೇವನೆ ಮಾಡುವುದು ಕೂಡ ಆರೋಗ್ಯಕ್ಕೆ ಬಹಳ ಅಪಾಯಕಾರಿಯಾಗಿದೆ.. ಕೊರೊನಾ ರೋಗ ಕಾಣಿಸಿಕೊಂಡವರಿಗೂ ವೈದ್ಯರು ಕೂಡ ಪ್ಯಾರಾಸಿಟಮಾಲ್ ಔಷಧಿಯಾದ ಡೋಲೋ 650 ಮಾತ್ರೆಯನ್ನು ಸೇವಿಸಲು ಸೂಚಿಸಿದರು.. ಹೀಗಾಗಿಯೇ ಜನರು ಸಾಂಕ್ರಮಿಕ ರೋಗದ ಸಂದರ್ಭದಲ್ಲಿ ತಮ್ಮ ಮನೆಯಲ್ಲಿ ಮುಂಜಾಗೃತಾ ಕ್ರಮವಾಗಿ ಪ್ರಾಥಮಿಕ ಚಿಕಿತ್ಸೆ ಎನ್ನುವಂತೆ ಡೋಲೋ 650 ಮಾತ್ರೆಯನ್ನು ತಂದು ಇಟ್ಟು ಕೊಂಡಿದ್ದಾರೆ.. ಕೊಂಚ ಶೀತ ನೆಗಡಿ ತಲೆನೋವು ಜ್ವರ ಕಾಣಿಸಿಕೊಂಡರು ಸಹ ಡೋಲೋ 650 ಮಾತ್ರೆ ತೆಗೆದುಕೊಳ್ಳುವ ಮೂಲಕ ರೋಗ ಗುಣಪಡಿಸಿಕೊಳ್ಳಲು ಪ್ರಯತ್ನ ಪಡುತ್ತಿದ್ದಾರೆ..

    ಜನಿವಾರ ವಿವಾದ: ಇಂತಹ ಪ್ರಕರಣ ನಾನು ಖಂಡಿಸುತ್ತೇನೆ- ಜಿ ಪರಮೇಶ್ವರ್!

    ಆದರೆ ಹೀಗೆ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಡೋಲೋ ಮಾತ್ರೆ ಸೇವನೆ ಮಾಡುವುದು ಬಹಳ ಅಪಾಯಕಾರಿಯಾಗಿ ಪರಿಣಮಿಸಿದೆ. ಭಾರತೀಯರು ಸ್ವಲ್ಪ ತಲೆನೋವಾಗಲಿ, ಜ್ವರವಾಗಲಿ ಬಂದರೆ ಕ್ಯಾಲ್ಪೋಲ್, ಕ್ರೋಸಿನ್, ಡೋಲೋ ಮುಂತಾದ ಪ್ಯಾರಾಸಿಟಮಾಲ್ ಔಷಧಿಯನ್ನು ಸೇವಿಸುತ್ತಾರೆ. ಆದರೆ ಹೆಚ್ಚಿನ ಜನರಿಗೆ ಅದರ ನಿಖರವಾದ ಪ್ರಮಾಣದ ಬಗ್ಗೆ ತಿಳಿದಿಲ್ಲ. ಪ್ಯಾರಾಸಿಟಮಾಲ್ ಸ್ಟೀರಾಯ್ಡ್ ಗಳನ್ನು ಹೊಂದಿದ್ದು, ಅದರ ಅನುಚಿತ ಡೋಸೇಜ್ ನಿಂದ ಆರೋಗ್ಯಕ್ಕೆ ಹಾನಿಯಾಗುವ ಸಾಧ್ಯತೆಯಿದೆ.

    ಕೊರೊನಾ ಕಾಲದಲ್ಲಿ ಡೋಲೊ-650 ಎಂಬ ಮಾತ್ರೆಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇತ್ತು! ಯಾಕೆಂದ್ರೆ ಅಂದು ಕೊರೊನಾ ಸೋಂಕು ಕಾಣಿಸಿಕೊಂಡ ವರಿಗೆ ವೈದ್ಯರು ಪ್ಯಾರಾಸಿಟಮಾಲ್ ಮಾತ್ರೆಯಾದ ಇದೇ ಡೋಲೋ 650 ಮಾತ್ರೆ ಸೇವಿಸಲು ಸೂಚಿಸುತ್ತಿದ್ದರು. ಯಾಕೆಂದ್ರೆ ಕೊರೊನಾ ಸೊಂಕಿನ ಲಕ್ಷಣ ಗಳಾದ ಜ್ವರ, ಶೀತ ಮೈಕೈ ನೋವು, ತಲೆನೋವಿಗೆಲ್ಲಾ ಈ ಮಾತ್ರೆ ರಾಮಬಾಣವಾಗಿ ಕಾರ್ಯನಿರ್ವಹಿಸುತ್ತಿತ್ತು.

    ಇನ್ನೂ ಪ್ರಮುಖವಾಗಿ ಜ್ವರ, ಮೈಕೈ ನೋವು, ತಲೆನೋವು, ಸ್ನಾಯು ನೋವು ಹೀಗೆ ಹಲವಾರು ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೆ ತ್ವರಿತ ಪರಿಹಾರ ನೀಡುತ್ತಿದ್ದ ಈ ಮಾತ್ರೆಗಳು, ಮೆಡಿಕಲ್ ಅಂಗಡಿಗಳಲ್ಲಿ ಎಲ್ಲರ ಕೈಗೂ ಕೂಡ ಸುಲಭ ದರದಲ್ಲಿ ಸಿಗುತ್ತಿದೆ.
    ಜ್ವರ, ಮೈಕೈ ನೋವು ಕಾಣಿಸಿಕೊಂಡರೆ, ಈ ಒಂದು ಮಾತ್ರೆ ನುಂಗಿದರೆ ಸಾಕು, ಬಹಳ ಬೇಗನೆ ಪರಿಹಾರ ಕಂಡುಕೊಳ್ಳ ಬಹುದಾಗಿದೆ. ಆದರೆ ಜನರು ಇದರ ಅಡ್ಡಪರಿಣಾಮಗಳ ಬಗ್ಗೆ ಯಾವತ್ತಿಗೂ ಕೂಡ ಆಲೋಚನೆ ಮಾಡಿಯೇ ಇಲ್ಲ! ಈ ಮಾತ್ರೆಯ ಬಗ್ಗೆ ತಜ್ಞರು ಹೇಳುವ ಪ್ರಕಾರ, ಈ ಔಷಧಿಗಳ ಮಿತಿ ಮೀರಿದ ಬಳಕೆಯು ದೇಹದ ಪ್ರಮುಖ ಅಂಗಗಳ ಮೇಲೆ ಗಂಭೀರ ಅಡ್ಡ ಪರಿಣಾಮಗಳು ಕಾಣಿಸಿಕೊಳ್ಳುತ್ತದೆಯಂತೆ!

    ಜ್ವರ, ಶೀತ ಮೈಕೈ ನೋವು ಹೀಗೆ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಾಗ, ವೈದ್ಯರ ಸಲಹೆ ಪಡೆದುಕೊಳ್ಳದೆ, ನೇರವಾಗಿ ಡೋಲೊ-650 ಮಾತ್ರೆಯನ್ನು ನುಂಗಿದರೆ, ಆರೋಗ್ಯದಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಅಮೆರಿಕದ ವೈದ್ಯರು ಟ್ವೀಟ್ ಮಾಡಿದ್ದಾರೆ

    ಅತಿಯಾದರೆ ಅಮೃತವೂ ವಿಷ ಎನ್ನುವಂತೆ, ಜ್ವರ-ಶೀತಕ್ಕೆ ಡೋಲೋ 650 ಮಾತ್ರೆ ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಬಹಳ ಅಪಾಯಕಾರಿ ಎಂದು ಅಮೆರಿಕದ ವೈದ್ಯರು ಟ್ವೀಟ್ ಮಾಡಿದ್ದಾರೆ ಅಲ್ಲದೆ ಭಾರತೀಯರು ಡೋಲೋ 650 ಅನ್ನು ಚಾಕೊಲೇಟ್‌ನಂತೆ ತಿನ್ನುತ್ತಿದ್ದಾರೆ ಎಂದು ಕೂಡ ಅವರು ಹೇಳಿದ್ದಾರೆ

    ನಿಮಗೆ ಗೊತ್ತಿರಲಿ,ಡೋಲೋ 650 ಕೊರೊನಾ ಅವಧಿಯಲ್ಲಿ ಹೊರ ಬಂದಿತು. ಆ ಸಮಯದಲ್ಲಿ, ಜ್ವರದಿಂದ ಬಳಲುತ್ತಿರುವ ರೋಗಿಗಳಿಗೆ ಈ ಔಷಧಿಯನ್ನು ನೀಡಲಾಗುತ್ತಿತ್ತು. ಆದರೆ ಈ ಕೊರೊನಾ ಸೊಂಕಿನ ಅವಧಿ ಕಳೆದಿದೆ, ಆದರೆ ದೇಶದಲ್ಲಿ ಇದರ ಬಳಕೆ ಮಾತ್ರ ನಿಂತಿಲ್ಲ. ಡೋಲೋ 650 ಗೆ ಸಂಬಂಧಿಸಿದಂತೆ ವೈದ್ಯರಿಗೆ ಆರ್ಥಿಕ ಪ್ರಯೋಜನಗಳನ್ನು ಒದಗಿಸುವ ಪ್ರಕರಣವೂ ಬೆಳಕಿಗೆ ಬಂದಿತು.

    ಪ್ರಸ್ತುತ, ಈ ಔಷಧಿ ದೇಶಾದ್ಯಂತ ಚಲಾವಣೆಯಲ್ಲಿದೆ. ಇನ್ನು ಮೊದಲೇ ಹೇಳಿದ ಹಾಗೆ ಈ ಮಾತ್ರೆಯನ್ನು ಹೆಚ್ಚಿನವರು ವೈದ್ಯರ ಸಲಹೆಯಿಲ್ಲ ದೆಯೂ ತೆಗೆದುಕೊಳ್ಳುತ್ತಿದ್ದಾರೆ, ಇನ್ನೂ ಕೆಲವರು ವೈದ್ಯರ ಸಲಹೆ ಪಡೆಯದೆ ಹಾಗೂ ಈ ಮಾತ್ರೆ ಸೇವನೆಯಿಂದಾಗುವ ಅಡ್ಡಪರಿಣಾಮಗಳ ಬಗ್ಗೆಯೂ ಕೂಡ ಆಲೋಚನೆ ಮಾಡದೆ ಈ ಔಷಧಿಯನ್ನು ಹಲವಾರು ದಿನಗಳವರೆಗೆ ತೆಗೆದುಕೊಳ್ಳುತ್ತಲೇ ಇರುತ್ತಾರೆ.​

    ಮೆಡಿಕಲ್ ಅಂಗಡಿಗಳಲ್ಲಿ ಡೋಲೋ 650 ಪಡೆಯಲು ಯಾವುದೇ ರೀತಿಯ ಪ್ರಿಸ್ಕ್ರಿಪ್ಷನ್ ಅಗತ್ಯವಿಲ್ಲ.ಯಾರೂ ಕೂಡ ಮೆಡಿಕಲ್ ಅಂಗಡಿಗೆ ಹೋಗಿ ಈ ಮಾತ್ರೆಗಳನ್ನು ಕೇಳಿದರೆ ಹಿಂದೆ ಮುಂದೆ ನೋಡದೆ ಮೆಡಿಕಲ್ ಅಂಗಡಿ ಯವರು ಕೊಟ್ಟು ಬಿಡುತ್ತಾರೆ! ಅಂದು ಕೊರೊನಾ ಸಮಯದಲ್ಲಿ ಸಾಮಾನ್ಯ ಜ್ವರಕ್ಕೆ ಈ ಔಷಧಿಯನ್ನು ಸೇವಿಸಲು ವೈದ್ಯರು ಸಲಹೆ ನೀಡುತ್ತಿದ್ದರು.
    ಆದರೆ ಈ ಮಾತ್ರೆ ಎಲ್ಲರ ಕೈಗೂ ಸಹ ಸುಲಭ ದರದಲ್ಲಿ ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಸಿಗುವುದರಿಂದ, ಜನರು ಇತರ ಹಲವು ಕಾಯಿಲೆಗಳಿಗೂ ಈ ಮಾತ್ರೆಯನ್ನೇ ತೆಗೆದುಕೊಳ್ಳುತ್ತಿದ್ದಾರೆ!

    ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಾಗ ಈ ಮಾತ್ರೆಯನ್ನು ಪದೇ ಪದೇ ಸೇವಿಸುವುದರಿಂದ ಅಥವಾ ಅತಿಯಾಗಿ ಸೇವನೆ ಮಾಡುವು ದರಿಂದ ದೇಹದಲ್ಲಿ ಅಲರ್ಜಿ ಉಂಟಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ. ಇಷ್ಟೇ ಅಲ್ಲ, ಈ ಔಷಧಿಯನ್ನು ನಿರಂತರವಾಗಿ ಸೇವಿಸುವುದರಿಂದ ಲಿವರ್ ಮತ್ತು ಕಿಡ್ನಿಗಳಲ್ಲಿ ಕೂಡ ಗಂಭೀರ ಸಮಸ್ಯೆಗಳು ಉಂಟಾಗಬಹುದಂತೆ.

    ಇನ್ನೂ ಆತಂಕದ ವಿಚಾರ ಏನೆಂದ್ರೆಈ ಔಷಧಿಯ ಮಿತಿಮೀರಿದ ಸೇವನೆಯು ತೀವ್ರವಾದ ಯಕೃತ್ತಿನ ವೈಫಲ್ಯಕ್ಕೆ ಕಾರಣವಾಗ ಬಹುದು ಎಂದು ಅನೇಕ ತನಿಖೆಗಳ ಮೂಲಕ ಸಾಬೀತಾಗಿದೆ. ಹೀಗಾಗಿ ಮಾತ್ರೆಗಳಿಂದ ಆರೋಗ್ಯದ ಮೇಲೆ ಗಂಭೀರವಾದ ಅಡ್ಡಪರಿಣಾಮಗಳು ಕಂಡುಬರುವ ಸಾಧ್ಯತೆ ಇದೆ ಎಂದು ವೈದ್ಯರು ಕೂಡ ಎಚ್ಚರಿಕೆಯನ್ನು ನೀಡಿದ್ದಾರೆ.

    ವೈದ್ಯರು ಸಲಹೆ ನೀಡಿದರೆ ಮಾತ್ರೆ ಈ ಮಾತ್ರೆಯನ್ನು ತೆಗೆದುಕೊಳ್ಳಬೇಕು. ಒಂದು ವೇಳೆ ಸಣ್ಣಗೆ ಜ್ವರ ಇದ್ದರೆ ಮಾತ್ರೆಯ ಬದಲು ಮನೆಮದ್ದುಗಳ ಮೂಲಕ ಗುಣಪಡಿಸಬೇಕು. ತಲೆನೋವು ಶೀತ ಮೈಕ ನೋವಿಗೆ ಮಾತ್ರೆಯ ಬದಲು ಮನೆಮದ್ದುಗಳು ಇಲ್ಲಾಂದ್ರೆ ಆಯುರ್ವೇದ ಪರಿಹಾರಗಳನ್ನು ಅನುಸರಿಸಬೇಕು. ನಿಮಗೆ ಗೊತ್ತಿರಲಿ ನಿರಂತರವಾಗಿ ಸೇವಿಸಿದರೆ ಸ್ವಲ್ಪ ಸಮಯದ ನಂತರ ಈ ಔಷಧಿ ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ. ಅದರ ನಂತರ ಈ ಔಷಧಿಯನ್ನು ತೆಗೆದುಕೊಳ್ಳಬಾರದು.ಅದು ಕೆಲಸ ಮಾಡದಿದ್ದರೂ ಸಹ ಔಷಧಿಯನ್ನು ತೆಗೆದುಕೊಳ್ಳುವುದರಿಂದ ಗಂಭೀರ ಸಮಸ್ಯೆಗಳು ಉಂಟಾಗಬಹುದು

    Demo
    Share. Facebook Twitter LinkedIn Email WhatsApp

    Related Posts

    ದೇಶದ ಪ್ರಧಾನಿ ಆಗಿದ್ದ ದೇವೇಗೌಡರು ಈಶ್ವರನ ಪುತ್ರ: ನಿಖಿಲ್ ಕುಮಾರಸ್ವಾಮಿ!

    June 15, 2025

    ನೀವು ಕೂಡ ಜಾಸ್ತಿ ಉಪ್ಪಿನಕಾಯಿ ತಿಂತೀರಾ!? ಹಾಗಿದ್ರೆ ಈ ಸಮಸ್ಯೆಗಳು ಗ್ಯಾರಂಟಿ!

    June 15, 2025

    ಏರ್ ಇಂಡಿಯಾ ವಿಮಾನ ದುರಂತದ ವಿಡಿಯೋ ಮಾಡಿದ ಯುವಕ ಈತನೇ ನೋಡಿ!

    June 15, 2025

    ಏರ್ ಇಂಡಿಯಾ ವಿಮಾನ ದುರಂತ: ಡಿಎನ್‌ಎ ಮ್ಯಾಚ್, ವಿಜಯ್ ರೂಪಾನಿ ಮೃತದೇಹದ ಗುರುತು ಪತ್ತೆ!

    June 15, 2025

    ಬೆಂಗಳೂರು| ಕೊಲೆ ಆರೋಪಿಗಳ ಕಾಲಿಗೆ ಪೊಲೀಸ್​ ಗುಂಡೇಟು: ಇಬ್ಬರು ಅರೆಸ್ಟ್!

    June 15, 2025

    ಮನೆಬಿಟ್ಟು ಹೋದ ಮಗನ ಬರುವಿಕೆಗೆ ಪೋಷಕರ ಕಣ್ಣೀರು: ಯುವಕ ಸಿಕ್ಕಲ್ಲಿ ಈ ನಂಬರ್ ಗೆ ಕರೆಮಾಡಿ!

    June 15, 2025

    ಜೈಲಿನಿಂದ ಬಿಡುಗಡೆಯಾದ ದಿನವೇ ಯುವಕನ ಕೊಲೆ: ಹಳೇ ದ್ವೇಷಕ್ಕೆ ಹರಿದ ನೆತ್ತರು!

    June 15, 2025

    ಮತ್ತೊಂದು ವಿಮಾನ ಅಪಘಾತ: ಕೇದಾರನಾಥಕ್ಕೆ ಹೋಗುತ್ತಿದ್ದ ಹೆಲಿಕಾಪ್ಟರ್​ ಪತನ – 6 ಮಂದಿ ಸಾವು!

    June 15, 2025

    ಗೋಲ್ಡ್ ಪ್ರಿಯರಿಗೆ ಶಾಕ್: ನಿಲ್ಲದ ಚಿನ್ನದ ಬೆಲೆ ಏರಿಕೆ; ಇಲ್ಲಿದೆ ಇಂದಿನ ದರಪಟ್ಟಿ!

    June 15, 2025

    ನಿತ್ಯ ಒಂದು ಸೇಬು ತಿಂದ್ರೆ ಹಾರ್ಟ್‌ಗೆ ಒಳ್ಳೆಯದಂತೆ: ಇದು ಸುಳ್ಳಲ್ಲ ಮರ್ರೆ!

    June 15, 2025

    ನೀವು ಊಟ ಮಾಡ್ಬೇಕಾದ್ರೆ ಸೀನು ಬರುತ್ತಾ!? ಹಾಗಿದ್ರೆ ಈ ರೀತಿ ಮಾಡಿ ಎನ್ನುತ್ತೆ ಶಕುನ ಶಾಸ್ತ್ರ..!

    June 14, 2025

    ವಿಮಾನ ದುರಂತ: ಅಹಮದಾಬಾದ್ ಜನರಲ್ ಆಸ್ಪತ್ರೆಯಲ್ಲಿ ಗಾಯಾಳುಗಳ ಆರೋಗ್ಯ ವಿಚಾರಿಸಿದ ಕಾಂಗ್ರೆಸ್ ನಾಯಕರು!

    June 14, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.