ಯುಪಿಐ ಸೇವೆಗಳು 2016ರ ಏಪ್ರಿಲ್ನಲ್ಲಿ ಪ್ರಾರಂಭಿಸಲಾಯಿತು. ಈ ಸೇವೆಗಳ ಪರಿಚಯದೊಂದಿಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗಳಾಗಿವೆ ಎಂದು ಹೇಳಬಹುದು. ಈ ಹಿಂದೆ ಯಾರೊಬ್ಬರ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಬೇಕೆಂದರೆ ಬ್ಯಾಂಕ್ಗಳಿಗೆ ಹೋಗಿ ಸರತಿ ಸಾಲಿನಲ್ಲಿ ನಿಲ್ಲಬೇಕಾಗುತ್ತಿತ್ತು. ಆದರೆ ಈಗ ಹಾಗಿಲ್ಲ.
ಯಾರದ್ದಾದರೂ ಬ್ಯಾಂಕ್ ಖಾತೆಗೆ ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡಿದರೆ ಕೆಲವೇ ಸೆಕೆಂಡುಗಳಲ್ಲಿ ಯುಪಿಐ ವ್ಯವಸ್ಥೆಯ ಮೂಲಕ ಹಣವನ್ನು ವರ್ಗಾಯಿಸಬಹುದು. ನಾವು ತಪ್ಪಾದ ಮೊಬೈಲ್ ಸಂಖ್ಯೆಯನ್ನು ನಮೂದಿಸದ ಹೊರತು ಯಾವುದೇ ತಪ್ಪು ಮಾಡುವ ಅವಕಾಶವಿಲ್ಲ. ಈ ಯುಪಿಐ ವ್ಯವಸ್ಥೆಯು ದೇಶದಲ್ಲಿ ಅತ್ಯಂತ ಯಶಸ್ವಿಯಾಗಿ ಚಾಲನೆಯಲ್ಲಿದೆ.
ಆದ್ರೆ ಇದೀಗ ಏ.1ರಿಂದ ಕೆಲವು ಮೊಬೈಲ್ ಸಂಖ್ಯೆಗಳಲ್ಲಿ ಯುಪಿಐ (UPI) ಪಾವತಿ ಮಾಡುವಾಗ ಸಮಸ್ಯೆ ಎದುರಾಗಬಹುದು ಎಂದು ತಿಳಿದು ಬಂದಿದೆ. ಈ ಬಗ್ಗೆ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಬ್ಯಾಂಕ್‌ಗಳು ಮತ್ತು ಯುಪಿಐ ಅಪ್ಲಿಕೇಶನ್‌ಗಳಿಗೆ “ನಿಷ್ಕ್ರಿಯ ಮೊಬೈಲ್ ಸಂಖ್ಯೆ”ಗಳನ್ನು ತಮ್ಮ ವ್ಯವಸ್ಥೆಯಿಂದ ತೆಗೆದುಹಾಕಲು ಸೂಚನೆ ನೀಡಿದೆ. ದೀರ್ಘಕಾಲದಿಂದ ಸಕ್ರಿಯವಾಗಿಲ್ಲದ ಮೊಬೈಲ್ ಸಂಖ್ಯೆಗಳನ್ನು ಯುಪಿಐಗೆ ಲಿಂಕ್ ಮಾಡಿದ ಬ್ಯಾಂಕ್ ಖಾತೆಗಳಿಂದ ತೆಗೆದುಹಾಕಬೇಕು ಎಂದು ಹೇಳಿದೆ.
Chanakya Niti: ಚಾಣಕ್ಯರ ಪ್ರಕಾರ ಇಂತಹ ಜನರಿಂದ ದೂರವಿರುವುದು ಸೇಫ್..! ಅವರು ನಮ್ಮ ನೆಮ್ಮದಿ ಕಸಿಯುತ್ತಾರೆ
ಈ ನಿರ್ಧಾರದಿಂದಾಗಿ ಏ.1 ರಿಂದ ಅಂತಹ ಮೊಬೈಲ್ ಸಂಖ್ಯೆಗಳ ಮೂಲಕ ಯುಪಿಐ ಪಾವತಿಗಳು ಸ್ಥಗಿತಗೊಳ್ಳಲಿವೆ. ಸೈಬರ್ ಕ್ರೈಂಗಳ ಹೆಚ್ಚಳ ಮತ್ತು ತಾಂತ್ರಿಕ ದೋಷಗಳನ್ನು ತಡೆಗಟ್ಟುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಎನ್‌ಪಿಸಿಐ ತಿಳಿಸಿದೆ. ಒಂದು ವೇಳೆ ಟೆಲಿಕಾಂ ಸೇವಾ ಒದಗಿಸುವವರು ಈ ನಿಷ್ಕ್ರಿಯ ಸಂಖ್ಯೆಗಳನ್ನು ಬೇರೆಯವರಿಗೆ ಮರು ಹಂಚಿಕೆ ಮಾಡಿದರೆ, ಅದು ವಂಚನೆಗೆ ಕಾರಣವಾಗಬಹುದು ಎಂದು ಎನ್‌ಪಿಸಿಐ ಎಚ್ಚರಿಸಿದೆ.
ಹೀಗಾಗಿ ಬಳಕೆದಾರರು ತಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಸಕ್ರಿಯವಾಗಿದೆಯೇ ಎಂದು ಖಚಿತಪಡಿಸಿಕೊಳ್ಳುವುದು ಮುಖ್ಯ. ಯುಪಿಐ ವಹಿವಾಟುಗಳಲ್ಲಿ ಮೊಬೈಲ್ ಸಂಖ್ಯೆಯು ಪ್ರಮುಖ ಗುರುತಿನ ಚಿಹ್ನೆಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಹಣವು ಸರಿಯಾದ ಫಲಾನುಭವಿಗೆ ತಲುಪುವುದನ್ನು ಖಾತ್ರಿಪಡಿಸುತ್ತದೆ ಹೀಗಾಗಿ ಈ ನಿರ್ಧಾರ ತೆಗೆದುಕೊಂಡಿದೆ.
ಈ ಹೊಸ ನಿಯಮದ ಪ್ರಕಾರ, ಬ್ಯಾಂಕ್‌ಗಳು ಮತ್ತು ಯುಪಿಐ ಅಪ್ಲಿಕೇಶನ್‌ಗಳು ಪ್ರತಿ ವಾರ ನಿಷ್ಕ್ರಿಯ ಸಂಖ್ಯೆಗಳ ಪಟ್ಟಿಯನ್ನು ನವೀಕರಿಸಬೇಕು ಎಂದು ಎನ್‌ಪಿಸಿಐ ಸೂಚಿಸಿದೆ. ಬಳಕೆದಾರರು ತಮ್ಮ ಯುಪಿಐ ಸೇವೆಗಳಲ್ಲಿ ಯಾವುದೇ ಅಡಚಣೆ ಎದುರಾಗದಂತೆ ತಮ್ಮ ಸಕ್ರಿಯ ಮೊಬೈಲ್ ಸಂಖ್ಯೆಯನ್ನು ಖಾತೆಗೆ ಲಿಂಕ್ ಮಾಡಿರುವುದನ್ನು ಖಚಿತಪಡಿಸಿಕೊಳ್ಳಲು ಕೋರಲಾಗಿದೆ.