ಕ್ಯಾನ್ಬೆರಾ: “ಆಸ್ಟ್ರೇಲಿಯಾದ ನೆಕ್ಸ್ಟ್ ಟಾಪ್ ಮಾಡೆಲ್” ನಲ್ಲಿ ಸ್ಪರ್ಧಿಸಿದ್ದ ಉದಯೋನ್ಮುಖ ಫ್ಯಾಷನ್ ವ್ಯಕ್ತಿ ಲೂಸಿ ಮರಕೋವಿಕ್ ಅವರು 27 ನೇ ವಯಸ್ಸಿನಲ್ಲಿ ಅಪರೂಪದ ಮೆದುಳಿನ ಕಾಯಿಲೆಯಿಂದ ನಿಧನರಾಗಿದ್ದಾರೆ. ಲೂಸಿ ಯಶಸ್ವಿ ಮಾಡೆಲಿಂಗ್ ವೃತ್ತಿಜೀವನದಲ್ಲಿ ಹೆಸರಾಗಿದ್ದರು. ವರ್ಸೇಸ್ ಮತ್ತು ವಿಕ್ಟೋರಿಯಾ ಬೆಕ್ಹ್ಯಾಮ್ನಂತಹ ಬ್ರಾಂಡ್ಗಳ ಅಭಿಯಾನಗಳಲ್ಲಿ ಕಾಣಿಸಿಕೊಂಡಿದ್ದರು.
ಮೇರಿ ಕ್ಲೇರ್ ಮತ್ತು ವಿವಿಧ ಅಂತರರಾಷ್ಟ್ರೀಯ ಆವೃತ್ತಿಗಳ ವೋಗ್ ಸೇರಿದಂತೆ ಉನ್ನತ ಮಟ್ಟದ ನಿಯತಕಾಲಿಕೆಗಳಲ್ಲಿ ಇವರ ಸಾಧನೆ ಬಗ್ಗೆ ವರದಿಗಳು ಪ್ರಕಟವಾಗಿದ್ದವು.
ನೀವು ಸ್ವಿಮಿಂಗ್ ಮಾಡುತ್ತೀರಾ..? ಹಾಗಾದ್ರೆ ಮೊದಲು ಈ ವಿಷಯಗಳನ್ನು ತಿಳಿದುಕೊಳ್ಳಿ..!
ಮೂರು ವಾರಗಳ ಹಿಂದೆ ಮಾರ್ಕೊವಿಕ್ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ವೊಂದನ್ನು ಹಾಕಿದ್ದರು. ತಾನು ಮೆದುಳಿನ ಅಪಧಮನಿಯ ವಿರೂಪಕ್ಕೆ (ಎವಿಎಂ) ಶಸ್ತ್ರಚಿಕಿತ್ಸೆಗೆ ಒಳಗಾಗುವುದಾಗಿ ತಿಳಿಸಿದ್ದರು. ಕಾಯಿಲೆಯು ರಕ್ತನಾಳಗಳಲ್ಲಿ ಸಮಸ್ಯೆ, ಮೆದುಳಿನ ಹಾನಿ ಮತ್ತು ಪಾರ್ಶ್ವವಾಯುವಿಗೆ ಕಾರಣವಾಗಬಹುದು ಎನ್ನಲಾಗಿತ್ತು.
ಲೂಸಿ ಸತತ 4 ವರ್ಷಗಳ ಕಾಲ ಈ ಕಾಯಿಲೆ ವಿರುದ್ಧ ಹೋರಾಡಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಫೋಟೊ ಕೂಡ ಹಂಚಿಕೊಂಡಿದ್ದರು. ಜೊತೆಗೆ ಮೆದುಳಿನ ಸ್ಕ್ಯಾನ್ನ ಚಿತ್ರವನ್ನು ಪೋಸ್ಟ್ ಮಾಡಿದ್ದರು. ಜೀವನವು ಒಂದು ಪ್ರಯಾಣ. ನಾನು ಮುಂದಿನ ಅಧ್ಯಾಯಕ್ಕೆ ಸಿದ್ಧಳಿದ್ದೇನೆಂದು ಬರೆದುಕೊಂಡಿದ್ದರು.