‘ಬಿಗ್ ಬಾಸ್ ಕನ್ನಡ ಸೀಸನ್ 10’ ರ ವಿನ್ನರ್ ಕಾರ್ತಿಕ್ ಮಹೇಶ್ ಸಖತ್ ಬ್ಯುಸಿಯಾಗಿದ್ದಾರೆ. ಸಾಕಷ್ಟು ಸ್ಥಳಗಳಿಗೆ ತೆರಳಿ ಅಭಿಮಾನಿಗಳನ್ನು ಭೇಟಿ ಮಾಡುತ್ತಿದ್ದಾರೆ. ಈ ಮಧ್ಯೆ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ಸಿಎಂ ನಿವಾಸದಲ್ಲಿ ಕಾರ್ತಿಕ್ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ. ಸಿದ್ದರಾಮಯ್ಯ ಅವರು ಕಾರ್ತಿಕ್ ಅವರಿಗೆ ಶುಭ ಹಾರೈಸಿದ್ದಾರೆ. ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಕಾರ್ತಿಕ್ ಆಶೀರ್ವಾದ ಪಡೆದಿದ್ದಾರೆ. ‘ಒಳ್ಳೆದಾಗಲಿ ಕಣಯ್ಯ. ಸಿನಿಮಾ ರಂಗದಲ್ಲಿ ಒಳ್ಳೆಯ ಹೆಸರು ಮಾಡು’ ಎಂದು ಹಾರೈಸಿದ್ದಾರೆ. ಈ ವೇಳೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಭಾ.ಮ ಹರೀಶ್. ಮತ್ತು ಉಲ್ಲಾಸ್ ಗೌಡ ಹಾಜರಿದ್ದರು.
Author: Author AIN
ಒಂದು ಕಾಲದಲ್ಲಿ ಬಾಲಿವುಡ್ ಚಿತ್ರರಂಗವನ್ನು ಆಳಿದ ಖಾನ್ ತ್ರಯರು ಇದೀಗ ಕೊಂಚ ಸೈಲೆಂಟ್ ಆಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸೋಲಿನ ಸಿನಿಮಾಗಳನ್ನು ಮಾಡಿದ್ದ ಶಾರುಖ್ ಖಾನ್ ಇದೀಗ ಮತ್ತೆ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡಿದ್ದಾರೆ. ಅತ್ತ ಆಮಿರ್ ಖಾನ್ ಸದ್ದಿಲ್ಲದೆ ಸೈಲೆಂಟ್ ಆಗಿದ್ದಾರೆ. ಈ ಮಧ್ಯೆ ನಟ ಸಲ್ಮಾನ್ ಖಾನ್ ಹೇಗಾದ್ರು ಮಾಡಿ ಸ್ಟಾರ್ ಪಟ್ಟಕ್ಕೆ ಏರಬೇಕು ಎಂದು ದಕ್ಷಿಣ ಭಾರತದ ನಿರ್ದೇಶಕರ ಮೊರೆ ಹೋಗಿದ್ದಾರೆ. ಜವಾನ್ ಸಿನಿಮಾದ ಬಳಿಕ ಶಾರುಖ್ ಖಾನ್ ಮತ್ತೆ ಸ್ಟಾರ್ ಪಟ್ಟಕ್ಕೇರಿದ್ದಾರೆ. ಇನ್ನೂ ನಟ ರಣಬೀರ್ ಕಪೂರ್ ಕೂಡ ತಮ್ಮ ವೃತ್ತಿ ಜೀವನದಲ್ಲಿಯೇ ಅತಿ ದೊಡ್ಡ ಹಿಟ್ ಸಿನಿಮಾ ನೀಡಿದ್ದಾರೆ. ಇದೇ ಕಾರಣಕ್ಕೆ ಬಾಲಿವುಡ್ನ ಸ್ಟಾರ್ ನಟರ ಕಣ್ಣು ದಕ್ಷಿಣ ಭಾರತದತ್ತ ನೆಟ್ಟಿದ್ದೆ. ಇದೀಗ ನಟ ಸಲ್ಮಾನ್ ಖಾನ್ ಕೂಡ ದಕ್ಷಿಣ ಭಾರತದ ಸಿನಿಮಾ ನಿರ್ದೇಶಕರ ಮೊರೆ ಹೋಗಿದ್ದಾರೆ. ತಮಿಳಿನಲ್ಲಿ ‘ಗಜಿನಿ’, ‘ತುಪ್ಪಾಕಿ’, ‘7ತ್ ಸೆನ್ಸ್’, ‘ಕತ್ತಿ’, ತೆಲುಗಿನಲ್ಲಿ ಚಿರಂಜೀವಿ ನಟನೆಯ ‘ಸ್ಟಾಲಿನ್’, ಮಹೇಶ್ ಬಾಬು ನಟನೆಯ…
ಖ್ಯಾತ ಗಾಯಕಿ ಹಾಗೂ ನಟಿ ವಿಜಯ ಲಕ್ಷ್ಮಿ ಅಲಿಯಾಸ್ ಮಲ್ಲಿಕಾ ರಜಪೂತ್ ಅವರ ಶವ ಫೆ.13ರಂದು ತಮ್ಮ ಸ್ವಗೃಹದಲ್ಲಿ ನೇಣುಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಗಾಯಕಿ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯಿದ್ದು, ಅವರ ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವಷ್ಟೇ ಸ್ಪಷ್ಟನೆ ಸಿಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. 35 ವರ್ಷದ ಗಾಯಕಿ ಕಮ್ ನಟಿ ಮಲ್ಲಿಕಾ ರಜಪೂರ್ ಸಾಕಷ್ಟು ಸಿನಿಮಾಗಳಿಗೆ ಹಾಡಿ ಖ್ಯಾತಿ ಘಳಿಸಿದ್ದರು. ಅವರ ಮೃತದೇಹ ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಸೀತಾಕುಂಡ್ ಪ್ರದೇಶದ ತನ್ನ ಮನೆಯ ಕೋಣೆಯಲ್ಲಿ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅವರ ಸಾವು ಅನುಮಾನಾಸ್ಪದವಾಗಿದ್ದು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮನೆಯ ಸದಸ್ಯರು ಮಲಗಿದ್ದ ಕಾರಣ ಯಾವಾಗ ಈ ಘಟನೆ ನಡೆದಿದೆ ಎಂಬುದು ಗೊತ್ತಾಗಲಿಲ್ಲ ಎಂದು ಮಲ್ಲಿಕಾ ಅವರ ತಾಯಿ ತಿಳಿಸಿದ್ದಾರೆ. ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಎಂದು ತೋರುತ್ತಿದ್ದು ತನಿಖೆ ನಡೆಸಲಾಗುತ್ತಿದೆ ಎಂದು ಕೊತ್ವಾಲಿ ಪೊಲೀಸ್ ಠಾಣೆಯ ಉಸ್ತುವಾರಿ ಶ್ರೀರಾಮ್ ಪಾಂಡೆ ಹೇಳಿದ್ದಾರೆ.
ರಾಜಸ್ಥಾನದ ಗುಲಾಬಿ ಮರಳುಗಲ್ಲಿನಿಂದ ನಿರ್ಮಿಸಲಾದ ಅಬುಧಾಬಿಯ ಮೊದಲ ಹಿಂದೂ ದೇವಾಲಯವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಬುಧವಾರ ಉದ್ಘಾಟಿಸಲಿದ್ದು, ಈ ದೇವಸ್ಥಾನವನ್ನು ಬೋಚಸನ್ವಾಸಿ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥೆ ಸ್ವಾಮಿನಾರಾಯಣ ದೇವಾಲಯವನ್ನು ನಿರ್ಮಿಸಿದೆ. ಈ ದೇವಸ್ಥಾನವನ್ನು ಅಬುಧಾಬಿಯ ಮುರೇಖಾ ಜಿಲ್ಲೆಯಲ್ಲಿ 27 ಎಕರೆ ಜಾಗದಲ್ಲಿ ನಿರ್ಮಿಸಲಾಗಿದೆ. ಉದ್ಘಾಟನೆ ಹಿನ್ನೆಲೆ ಬಿಎಪಿಎಸ್‌ನ ಆಧ್ಯಾತ್ಮಿಕ ಗುರು ಸ್ವಾಮಿ ಮಹಂತ್ ಸ್ವಾಮಿ ಮಹಾರಾಜ್ ಅವರು ಯುಎಇಗೆ ಆಗಮಿಸಿದ್ದಾರೆ. ಮಂದಿರದ ಉದ್ಘಾಟನೆಯನ್ನು ‘ಸೌಹಾರ್ದತೆಯ ಹಬ್ಬ’ದಂತೆ ಆಚರಿಸಲಾಗುತ್ತದೆ. ನಂಬಿಕೆಯನ್ನು ಬಲಪಡಿಸುವುದು, ಎಲ್ಲಾ ತಲೆಮಾರುಗಳು ಮತ್ತು ಹಿನ್ನೆಲೆಗಳುಳ್ಳ ಜನರ ನಡುವೆ ಸಾಮರಸ್ಯವನ್ನು ಬೆಳೆಸುವುದು ಈ ಉದ್ಘಾಟನಾ ಕಾರ್ಯಕ್ರಮದ ಧ್ಯೇಯವಾಗಿದೆ ಎಂದು ಸ್ವಾಮಿನಾರಾಯಣ ಸಂಸ್ಥೆ (ಬಿಎಪಿಎಸ್) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಪ್ರಧಾನಿ ನರೇಂದ್ರ ಮೋದಿಯವರ ಈ ಭೇಟಿ ಭಾರತ ಮತ್ತು ಯುಎಇ ನಡುವಿನ ನಿಕಟ ಸಂಬಂಧವನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದು ವಿಶ್ಲೇಷಿಸಲಾಗಿದೆ. ಈ ದೇವಾಲಯದ ಮೂಲೆ ಮೂಲೆಯಲ್ಲಿ ಭಾರತದ ವೈಭವವಿದೆ. ಇಲ್ಲಿ ವಾರಾಣಸಿಯನ್ನು ಕೂಡ ನೋಡಬಹುದು. ಅಬುಧಾಬಿಯಲ್ಲಿ ನಿರ್ಮಿಸಲಾದ ಹಿಂದೂ ದೇವಾಲಯವು…
ಬಿಗ್ ಬಾಸ್ ಸೀಸನ್ 10ರಲ್ಲಿ ಉತ್ತಮ ಸ್ನೇಹಿತರಾಗಿ ಸಂತು, ಪಂತು ಎಂದೇ ಖ್ಯಾತಿ ಘಳಿಸಿರುವ ಹಾಸ್ಯ ಕಲಾವಿನ ತುಕಾಲಿ ಸಂತೋಷ್ ಹಾಗೂ ಹಳ್ಳಿಕಾರ್ ಖ್ಯಾತಿಯ ವರ್ತೂರು ಸಂತೋಷ್ ಇದೀಗ ಸಿನಿಮಾದಲ್ಲಿ ಒಂದಾಗುತ್ತಿದ್ದಾರೆ. ಈ ಇಬ್ಬರ ಕುರಿತಂತೆ ಸಿನಿಮಾವೊಂದು ಮೂಡಿ ಬರಲಿದೆ ಎಂದು ಹೇಳಲಾಗುತ್ತಿದ್ದು ಚಿತ್ರಕ್ಕೆ ಸಂತು ಪಂತು ಎಂದು ಹೆಸರಿಡಲಾಗಿದೆ. ಈ ಬಗ್ಗೆ ತುಕಾಲಿ ಸಂತೋಷ್ ಪ್ರತಿಕ್ರಿಯಿಸಿದ್ದು, ಸಿನಿಮಾದ ಸ್ಕ್ರಿಪ್ಟ್ ರೆಡಿಯಿದೆ. ನಿರ್ಮಾಪಕರೂ ಕೂಡ ಇದ್ದಾರೆ. ಆದರೆ ಈ ಸಿನಿಮಾ ಯಾವಾಗ ಆಗುತ್ತದೆಯೋ ಗೊತ್ತಿಲ್ಲ ಎಂದಿದ್ದಾರೆ. ಸದ್ಯ ತುಕಾಲಿ ಸಂತೋಷ್ ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ರೆ, ವರ್ತೂರು ಸಂತೋಷ್, ಹಳ್ಳಿಕಾರ್ ಪಂದ್ಯವನ್ನು ಆಯೋಜಿಸಲು ತಯಾರಿ ನಡೆಸುತ್ತಿದ್ದಾರೆ. ಈ ಇಬ್ಬರೂ ಒಟ್ಟಾಗಿ ಸಿನಿಮಾ ಮಾಡ್ತಾರಾ ಅಥವಾ ಇದೆಲ್ಲಾ ಬರೀ ಗಾಳಿ ಸುದ್ದಿಯಷ್ಟೇಯ ಎಂಬುದನ್ನು ಕಾದು ನೋಡಬೇಕಿದೆ.
ಬಾಲಿವುಡ್ ನ ತನು ಮತ್ತು ಮನು ಜೋಡಿ ಎಂದೇ ಖ್ಯಾತಿ ಘಳಿಸಿದ್ದ ನಟಿ ಕಂಗನಾ ರಣಾವತ್ ಮತ್ತು ನಟ ಮಾಧವನ್ ಮತ್ತೆ ಒಂದಾಗ್ತಿದ್ದಾರೆ. ತನು ವೆಡ್ಸ್ ಮನು ಸಿನಿಮಾದಲ್ಲಿ ಬಾಲಿವುಡ್ ಚಿತ್ರರಂಗದಲ್ಲಿ ಮೋಡಿ ಮಾಡಿದ್ದ ಜೋಡಿ ಇದೀಗ ಮತ್ತೆ ಸ್ಕ್ರೀನ್ ಮೇಲೆ ಒಂದಾಗ್ತಿದ್ದಾರೆ. ತನು ವೆಡ್ಸ್ ಮನು ರಿಟರ್ನ್ಸ್ ಅನ್ನೋ ಸಿನಿಮಾದ ಬಳಿಕ ಕಂಗನಾ ಹಾಗೂ ಮಾಧವನ್ ಮತ್ತೆ ಒಂದಾಗಿರಲಿಲ್ಲ. ತನು ವೆಡ್ಸ್ ಮನು ಹಾಗೂ ತನು ವೆಡ್ಸ್ ಮನು ರಿಟರ್ನ್ಸ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಘಳಿಸಿತ್ತು. ಈ ಜೋಡಿಯನ್ನು ಮತ್ತೆ ಒಂದಾಗಿ ನೋಡ್ಬೇಕು ಅಂದುಕೊಮಡರು ಅದು ಸಾಧ್ಯವಾಗಿರಲಿಲ್ಲ. ಇದೀಗ ಮತ್ತೆ ಈ ಜೋಡಿಯ ಕಾಂಬಿನೇಷನ್ ನಲ್ಲಿ ಚಿತ್ರವೊಂದು ಮೂಡಿ ಬರಲಿದೆ. ತನು ವೆಡ್ಸ್ ಮನು ಸಿನಿಮಾ ರಿಲೀಸ್ ಆಗಿ ಒಂಬತ್ತು ವರ್ಷಗಳೇ ಕಳೆದಿವೆ. ಒಂಬತ್ತು ವರ್ಷಗಳ ನಂತರ ಮತ್ತೆ ಈ ಜೋಡಿ ತೆರೆಯ ಮೇಲೆ ಬರೋಕೆ ರೆಡಿ ಆಗುತ್ತಿದೆ. ಈ ಮಾಹಿತಿಯನ್ನು ಸ್ವತಃ ಕಂಗನಾ ಬಹಿರಂಗ…
ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿ ಐಶ್ವರ್ಯ ರಜನಿಕಾಂತ್ ನಿರ್ದೇಶಕಿಯಾಗಿ ಕಾಲಿವುಡ್ ಚಿತ್ರರಂಗದಲ್ಲಿ ಗಮನ ಸೆಳೆಯುತ್ತಿದ್ದಾರೆ. ಇತ್ತೀಚೆಗೆ ಐಶ್ವರ್ಯ ರಜನಿಕಾಂತ್ ನಿರ್ದೇಶನದ, ರಜನಿಕಾಂತ್ ನಟನೆಯ ಲಾಲ್ ಸಲಾಂ ಸಿನಿಮಾ ರಿಲೀಸ್ ಆಗಿದ್ದು ಹೇಳಿಕೊಳ್ಳುವ ಮಟ್ಟಿಗೆ ಸದ್ದು ಮಾಡಿಲ್ಲ. ಇದೀಗ ಸಂದರ್ಶನವೊಂದರಲ್ಲಿ ಮಾತನಾಡಿರುವ ಐಶ್ವರ್ಯ ಮಾಜಿ ಪತಿ ಹಾಡಿದ್ದ ಸೂಪರ್ ಹಿಟ್ ಹಾಡಿನ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಐಶ್ವರ್ಯ ರಜನಿಕಾಂತ್ ನಿರ್ದೇಶನದಲ್ಲಿ ‘ತ್ರಿ’ ಸಿನಿಮಾ ಮೂಡಿ ಬಂದಿತ್ತು. ಧನುಷ್ ಮತ್ತು ಶ್ರುತಿ ಹಾಸನ್ ಜೋಡಿಯಾಗಿ ನಟಿಸಿದ್ದರು. ಈ ಚಿತ್ರದ ಬಗ್ಗೆ ಐಶ್ವರ್ಯ ಪ್ರತಿಕ್ರಿಯಿಸಿ, ‘ತ್ರಿ’ ಚಿತ್ರ ಪ್ರಯೋಗಾತ್ಮಕ ಸಿನಿಮಾವಾಗಿತ್ತು. ‘ಕೊಲವೆರಿ ಡಿ’ ಹಾಡು ಸೂಪರ್ ಹಿಟ್ ಆಗಿತ್ತು. ಆದರೆ ಅದರಿಂದ ಸಿನಿಮಾಗೆ ತೊಂದರೆಯಾಯ್ತು ಎಂದಿದ್ದಾರೆ. ಧನುಷ್ ಹಾಡಿದ ಹಾಡಿನಿಂದ ಸಿನಿಮಾಗೆ ಯಾವುದೇ ಪ್ರಯೋಜನ ಆಗಲಿಲ್ಲ. ಈ ಹಾಡು ನನ್ನ ಸಿನಿಮಾವನ್ನೇ ನುಂಗಿ ಹಾಕಿತ್ತು. ಹಾಗಾಗಿ ನನಗೆ ನಷ್ಟವಾಯ್ತು ಎಂದಿದ್ದಾರೆ. ‘ಕೊಲವೆರಿ ಡಿ’ ಹಾಡು ಹಿಟ್ ಆದ್ಮೇಲೆ ಜನರ ನಿರೀಕ್ಷೆ ಹೆಚ್ಚಾಯ್ತು. ನನ್ನ ಕಥೆಗೆ ಪ್ರಾಮುಖ್ಯತೆ ಇರುವ…
ಅಬುಧಾಬಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಫೆ.13ರಂದು ಅಬುಧಾಬಿಯಲ್ಲಿ ನಡೆದ ‘ಆಹ್ಲಾನ್ ಮೋದಿ’ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ಮಾತನಾಡಿ ಗಮನ ಸೆಳೆದಿದ್ದಾರೆ. ಕನ್ನಡ, ತಮಿಳು, ತೆಲುಗು, ಮತ್ತು ಮಲಯಾಳಂನಲ್ಲಿ ಮಾತನಾಡುವ ಮೂಲಕ ಮೋದಿ ಜನರ ಹೃದಯ ಗೆದ್ದಿದ್ದಾರೆ. ಈ ನಾಲ್ಕು ಭಾಷೆಯ ಜನರು ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಯುಎಇಯ ವಿವಿಧ ಪ್ರದೇಶಗಳು ಮತ್ತು ಭಾರತದ ವಿವಿಧ ರಾಜ್ಯಗಳ ಜನರು ಸ್ಥಳದಲ್ಲಿ ಜಮಾಯಿಸಿದ್ದು,”ಎಲ್ಲರ ಹೃದಯಗಳು ಸಂಪರ್ಕ ಹೊಂದಿವೆ” ಎಂದು ಪ್ರಧಾನಿ ಮೋದಿ ಹೇಳಿದರು. ಜಾಯೆದ್ ಸ್ಪೋರ್ಟ್ಸ್ ಸ್ಟೇಡಿಯಂನಲ್ಲಿ ಅನಿವಾಸಿ ಭಾರತೀಯರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ಇಂದು ಅಬುಧಾಬಿಯಲ್ಲಿ, ನೀವು ಹೊಸ ಇತಿಹಾಸವನ್ನು ಸೃಷ್ಟಿಸಿದ್ದೀರಿ. ಯುಎಇಯ ಎಲ್ಲಾ ಮೂಲೆಗಳಿಂದ ಮತ್ತು ಭಾರತದ ವಿವಿಧ ರಾಜ್ಯಗಳಿಂದ ಇಲ್ಲಿಗೆ ಬಂದಿದ್ದೀರಿ. ಆದರೆ ಪ್ರತಿಯೊಬ್ಬರ ಹೃದಯವು ಸಂಪರ್ಕ ಹೊಂದಿದೆ. ಈ ಐತಿಹಾಸಿಕ ಕ್ರೀಡಾಂಗಣದಲ್ಲಿ ಪ್ರತಿ ಹೃದಯ ಬಡಿತ, ಪ್ರತಿ ಉಸಿರು, ಪ್ರತಿ ಧ್ವನಿ ಹೇಳುತ್ತದೆ – ಭಾರತ-ಯುಎಇ ಸ್ನೇಹ ಚಿರಾಯುವಾಗಲಿ ಎಂದು ಆಶಿಸಿದರು.
ಇತ್ತೀಚೆಗೆ ಕತಾರ್ ನಿಂದ ಎಂಟು ಭಾರತೀಯ ನೌಕಾಪಡೆಯ ಸಿಂಬ್ಬಂದಿಗಳು ಬಿಡುಗಡೆಯಾಗಿದ್ದರು. ಇದರಲ್ಲಿ ಶಾರುಖ್ ಖಾನ್ ಪಾತ್ರವಿದೆ ಎಂದು ಸುದ್ದಿ ಹರಿದಾಡಿತ್ತು. ಆದರೆ ಈ ಬಗ್ಗೆ ಸ್ಪಷ್ಟಪಡಿಸಿರುವ ಶಾರುಖ್ ಖಾನ್ ಕಚೇರಿ ಸಿಬ್ಬಂದಿ, ಇದರಲ್ಲಿ ಕಿಂಗ್ ಖಾನ್ದ್ದು ಯಾವುದೇ ರೀತಿಯ ಪಾತ್ರವಿಲ್ಲ ಎಂದಿದ್ದಾರೆ. ಭಾರತದ ಎಂಟು ಮಂದಿ ಮಾಜಿ ನಾವಿಕರನ್ನು ಬೇಹುಗಾರಿಕೆ ಆರೋಪದ ಮೇಲೆ ಕತಾರ್ ಬಂಧಿಸಿತ್ತು. ಬಳಿಕ ಭಾರತ ಸರ್ಕಾರದ ಮಧ್ಯಸ್ಥಿಕೆಯ ನಂತರ ಬಿಡುಗಡೆಯಾಯಿತು. ಆದರೆ ಶಾರುಖ್ ಖಾನ್ ಇತ್ತೀಚೆಗೆ ಮಧ್ಯಪ್ರಾಚ್ಯ ದೇಶಕ್ಕೆ ಭೇಟಿ ನೀಡಿದ್ದರಿಂದ ಈ ವಿಷಯದಲ್ಲಿ ಅವರ ಪಾತ್ರವಿದೆ ಎಂದು ಸುದ್ದಿ ಕೇಳಿ ಬಂದಿತ್ತು. ವರದಿಗಳನ್ನು ನಿರಾಕರಿಸಿದ ಶಾರುಖ್ ಮ್ಯಾನೇಜರ್ ಪೂಜಾ ದದ್ಲಾನಿ, ಶಾರುಖ್ ಹೇಳಿಕೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. “ಕತಾರ್‌ನಿಂದ ಭಾರತದ ನೌಕಾ ಅಧಿಕಾರಿಗಳನ್ನು ಬಿಡುಗಡೆ ಮಾಡುವಲ್ಲಿ ಶಾರುಖ್ ಖಾನ್ ಅವರ ಯಾವುದೇ ರೀತಿಯ ಪಾತ್ರವಿಲ್ಲ. ಘಟನೆಯಲ್ಲಿ ಶಾರುಖ್ ಖಾನ್ ಪಾಲ್ಗೊಳ್ಳುವಿಕೆಯ ಅಂತಹ ಯಾವುದೇ ಸಮರ್ಥನೆಗಳು ಆಧಾರರಹಿತವಾಗಿವೆ . ಈ ಯಶಸ್ವಿ ನಿರ್ಣಯದ ಕಾರ್ಯಗತಗೊಳಿಸುವಿಕೆಗೆ ಕಾರಣರಾದವರು ಭಾರತದ…
ಟೆಲಿವಿಷನ್ ಕಲ್ಚರಲ್ ಆಂಡ್ ಸ್ಪೋರ್ಟ್ಸ್ ಕ್ಲಬ್ನ ಕಾರ್ಯದರ್ಶಿ ಆಗಿದ್ದ ನಟ ರವಿಕಿರಣ್ ಕ್ಲಬ್ಗೆ ಸೇರಿದ ಹಣವನ್ನು ದುರುಪಯೋಗ ಮಾಡಿಕೊಂಡು ಅವ್ಯವಹಾರ ಎಸಗಿದ್ದಾರೆ ಎಂದು ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಕ್ಲಬ್ನ ಸದಸ್ಯರು ಸುಬ್ರಹ್ಮಣ್ಮಪುರ ಪೊಲೀಸರಿಗೆ ದೂರು ಸಲ್ಲಿಸಿದ್ದು, ತಮ್ಮ ವಿರುದ್ಧ ಕೇಳಿ ಬಂದಿರುವ ಆರೋಪಗಳಿಗೆ ನಟ ರವಿಕಿರಣ್ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟ ರವಿಕಿರಣ್, ‘ಕಳೆದ ಡಿಸೆಂಬರ್ ಗೆ ನನ್ನ ಅವಧಿ ಮುಕ್ತಾಯವಾಗಿದೆ. ಮತ್ತೆ ಎಲೆಕ್ಷನ್ ನಡೆದಿಲ್ಲ, ಹೊಸ ಸದಸ್ಯರು ಸೇರಿಕೊಂಡು ಹೊಸ ಕಮಿಟಿ ಮಾಡಿಕೊಂಡಿದ್ದಾರೆ. ಕಾನೂನು ಬಾಹಿರವಾಗಿ ನನ್ನನ್ನು ಕ್ಲಬ್ನಿಂದ ವಜಾ ಮಾಡಿದ್ದಾರೆ, ಆ ನಂತರ ಅವರೇ ಕ್ಲಬ್ನ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ’ ಎಂದು ಆರೋಪಿಸಿದ್ದಾರೆ. ‘2003 ರಲ್ಲಿ ಕ್ಲಬ್ ಶುರುಮಾಡಿದ್ದು ನಾನು. ಕ್ಲಬ್ನ ಸಿಬ್ಬಂದಿ ವೇತನ, ಇತರೆ ಖರ್ಚು ಸೇರಿ 60 ಲಕ್ಷ ಸಾಲ ಮಾಡಿದ್ದೀನಿ. ಆ ಹಣ ವಾಪಸ್ ಕೊಡಲಿ, ಈ ಕ್ಷಣ ಕ್ಲಬ್ಗೆ ರಾಜಿನಾಮೆ ನೀಡಿ ಹೊರ ಹೋಗುತ್ತೀನಿ. ಕರೋನ ಇದ್ದ…