ಹುಬ್ಬಳ್ಳಿ: ಇಂದಿನ ಕ್ರಿಯಾತ್ಮಕ ಉದ್ಯೋಗ ಮಾರುಕಟ್ಟೆಯಲ್ಲಿ ಯಶಸ್ಸಿಗೆ ಅಗತ್ಯವಾದ ಪ್ರಾಯೋಗಿಕ ಕೌಶಲ್ಯಗಳು ಮತ್ತು ಸುಧಾರಿತ ತಂತ್ರಜ್ಞಾನಗಳಿಗೆ ಒಡ್ಡಿಕೊಳ್ಳುವ ಮೂಲಕ ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಸಬಲೀಕರಣಗೊಳಿಸಲು ನಾವು ಬದ್ಧರಾಗಿದ್ದೇವೆ ಎಂದು ಕಾಮೆಡ್ಕೆ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಎಸ್ ಕುಮಾರ್ ಹೇಳಿದ್ದಾರೆ. ಕಾಮೆಡ್ಕೆ (ಕನ್ಸೋರ್ಟಿಯಂ ಆಫ್ ಮೆಡಿಕಲ್, ಎಂಜಿನಿಯರಿಂಗ್ ಮತ್ತು ಡೆಂಟಲ್ ಕಾಲೇಜ್ಸ್ ಆಫ್ ಕರ್ನಾಟಕ) ತನ್ನ ಒಂಬತ್ತನೇ ನಾವೀನ್ಯತೆ ಕೇಂದ್ರವಾದ ಕಾಮೆಡ್ಕೇರ್ಸ್ ನ್ನು ಹುಬ್ಬಳ್ಳಿಯ ಸ್ಟೆಲ್ಲಾರ್ ಮಾಲ್ನಲ್ಲಿ ಉದ್ಘಾಟಿಸಿತು. ಕಾಮೆಡ್ಕೆ ಅಧ್ಯಕ್ಷ ಡಾ.ಎಂ.ಆರ್.ಜಯರಾಮ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದಾರೆ. ಕರ್ನಾಟಕ ಸರ್ಕಾರದ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ್ ರುದ್ರಪ್ಪ ಪಾಟೀಲ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಶಾಸಕ ಮಹೇಶ್ ಟೆಂಗಿನಕಾಯಿ, ಮತ್ತು ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಪ್ರೊ ಚಾನ್ಸಲರ್, ಡಾ.ಅಶೋಕ್ ಶೆಟ್ಟರ್ ಉಪಸ್ಥಿತರಿದ್ದರು. ಕರ್ನಾಟಕದಾದ್ಯಂತ ಅಸ್ತಿತ್ವದಲ್ಲಿರುವ ಎಂಟು ಹಬ್ಗಳ ಯಶಸ್ಸಿನ ಆಧಾರದ ಮೇಲೆ, ಕಾಮೆಡ್ ಕ್ಯಾರೆಸ್ ಹುಬ್ಬಳ್ಳಿ ಈ ಪ್ರದೇಶದ ಒಂಬತ್ತು ಎಂಜಿನಿಯರಿಂಗ್ ಕಾಲೇಜುಗಳಿಗೆ ಸೇವೆ ಸಲ್ಲಿಸಲಿದ್ದು, ವಿದ್ಯಾರ್ಥಿಗಳಿಗೆ ಅತ್ಯಾಧುನಿಕ ಸಂಪನ್ಮೂಲಗಳು ಮತ್ತು ಉದ್ಯಮ ಸಂಬಂಧಿತ…
Author: Author AIN
ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾಕ ದಾಳಿಯನ್ನು ಕ್ರಿಕೆಟಿಗರು ತೀವ್ರವಾಗಿ ಖಂಡಿಸಿದ್ದಾರೆ. ಈ ದಾಳಿಯನ್ನು ಖಂಡಿಸಿ ಟೀಮ್ ಇಂಡಿಯಾ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಪಹಲ್ಗಾಮ್‌ನಲ್ಲಿ ಅಮಾಯಕರ ಮೇಲೆ ನಡೆದ ಘೋರ ದಾಳಿಯಿಂದ ತೀವ್ರ ದುಃಖವಾಗಿದೆ. ಮೃತರ ಕುಟುಂಬಗಳಿಗೆ ಹೃತ್ಪೂರ್ವಕ ಸಂತಾಪಗಳು. ಪ್ರಾಣ ಕಳೆದುಕೊಂಡ ಎಲ್ಲರ ಕುಟುಂಬಗಳಿಗೆ ಶಾಂತಿ ಮತ್ತು ಶಕ್ತಿ ನೀಡಲಿ ಮತ್ತು ಈ ಕ್ರೂರ ಕೃತ್ಯಕ್ಕೆ ನ್ಯಾಯ ದೊರಕಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ವಿರಾಟ್ ಕೊಹ್ಲಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ. https://ainkannada.com/fine-for-not-wearing-a-helmet-these-tips-are-mandatory-when-buying/ ಜಮ್ಮು ಕಾಶ್ಮೀರದ ಪಹಲ್ಗಾಮ್ ಪಟ್ಟಣದ ಬಳಿಯ ‘ಮಿನಿ ಸ್ವಿಟ್ಜರ್ಲೆಂಡ್’ ಎಂದು ಕರೆಯಲ್ಪಡುವ ಪ್ರವಾಸಿ ತಾಣ ಬೈಸರನ್‌ನಲ್ಲಿ ಉಗ್ರರು ದಾಳಿ ಮಾಡಿದ್ದಾರೆ. ಈ ದಾಳಿಯಲ್ಲಿ ಸುಮಾರು 27 ಮಂದಿ ಸಾವನ್ನಪ್ಪಿದ್ದಾರೆ. ಕರ್ನಾಟಕದ ಒಬ್ಬರು ಸಹ ನಿನ್ನೆಯ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಇಡೀ ದೇಶವೇ ಈ ಕೃತ್ಯವನ್ನು ತೀವ್ರವಾಗಿ ಖಂಡಿಸಿದೆ. ಪಾಕ್ ಕೃಪಾಪೋಷಿತ ಉಗ್ರರ ದಾಳಿ ಇದೆಂದು ಆರಂಭಿಕ ತನಿಖೆಯ ವರದಿಗಳು ಹೇಳುತ್ತಿವೆ. ದಾಳಿಯ ಜವಾಬ್ದಾರಿಯನ್ನು ಟಿಆರ್ಎಫ್ (ದಿ ರೆಸಿಟೆಂಟ್ ಫ್ರಂಟ್)…
ಬೆಂಗಳೂರು: ಜಮ್ಮು-ಕಾಶ್ಮೀರದ ಅನಂತಪುರ ಜಿಲ್ಲೆಯ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ 26 ಪ್ರವಾಸಿಗರು ಜೀವ ಕಳೆದುಕೊಂಡಿದ್ದಾರೆ. ಇದರಲ್ಲಿ ಮೂವರು ಕರ್ನಾಟಕದವರು. ಅದರಲ್ಲಿ ಮೂಲತಃ ಆಂಧ್ರದವರಾಗಿದ್ದ ಮಧುಸೂದನ್ ರಾವ್ ಅವರು, ಬೆಂಗಳೂರಿನಲ್ಲಿ ರಿಚಸ್ ಗಾರ್ಡನ್ನಲ್ಲಿ ವಾಸಿಸುತ್ತಿದ್ದರು. ಭಾನುವಾರವಷ್ಟೇ ಅವರು ತಮ್ಮ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಕಾಶ್ಮೀರ ಪ್ರವಾಸ ತೆರಳಿದ್ದರಂತೆ. ಬೆಂಗಳೂರಿನ ರಾಮಮೂರ್ತಿನಗರ ನಿವಾಸಿಯಾಗಿದ್ದ ಮಧುಸೂದನ್ ಕೇವಲ 2-3 ವರ್ಷಗಳ ಹಿಂದಷ್ಟೇ ಇಲ್ಲೊಂದು ಡೂಪ್ಲೆಕ್ಸ್ ಮನೆ ಕಟ್ಟಿಕೊಂಡು ವಾಸವಾಗಿದ್ದರು, https://ainkannada.com/fine-for-not-wearing-a-helmet-these-tips-are-mandatory-when-buying/ ಹೆಂಡತಿಯೊಂದಿಗೆ ಏರಿಯಾದಲ್ಲಿ ವಾಕ್ ಮಾಡುತ್ತಿದ್ದ ಮಧುಸೂದನ್ ಸ್ನೇಹಜೀವಿಯಾಗಿದ್ದರು ಎಂದು ಅವರ ನೆರೆಹೊರೆಯವರಾದ ಹಿರಿಯ ನಾಗರಿಕರೊಬ್ಬರು ಹೇಳಿದ್ದಾರೆ.
ಜಮ್ಮುಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಪೈಶಾಚಿಕ ಕೃತ್ಯಕ್ಕೆ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ. ಪ್ರವಾಸಕ್ಕೆಂದು ತೆರಳಿದ್ದ ಜೀವಗಳನ್ನು ಉಗ್ರರು ಹೀನಾಯವಾಗಿ ಕೊಂದು ಹಾಕಿದ್ದಾರೆ. ಈ ಕೃತ್ಯ ನಡೆಸಿದ ಪಾಪಿಗಳಿಗೆ ಶೀಘ್ರದಲ್ಲೇ ಶಿಕ್ಷೆಯಾಗಬೇಕೆಂಬ ಒತ್ತಾಯ ಎಲ್ಲಾ ಕಡೆಯಿಂದಲೂ ಕೇಳಿ ಬರ್ತಿದೆ. ಸಾಮಾನ್ಯರಿಂದ ಹಿಡಿದು ರಾಜಕಾರಣಿಗಳು, ಸಿನಿಮಾತಾರೆಯರು ಪಹಲ್ಗಾಮ್ ಪೈಶಾಚಿಕ ಕೃತ್ಯವನ್ನು ಖಂಡಿಸುತ್ತಿದ್ದಾರೆ. ಸ್ಯಾಂಡಲ್‌ವುಡ್, ಟಾಲಿವುಡ್, ಕಾಲಿವುಡ್ ಹೀಗೆ ಎಲ್ಲಾ ಚಿತ್ರರಂಗದ ತಾರೆಯರು ಈ ಬಗ್ಗೆ ಧ್ವನಿ ಕೂಡಿಸಿದ್ದಾರೆ. ಈಗ ಬಾಲಿವುಡ್ ಖಾನ್ ಗಳಾದ ಸಲ್ಮಾನ್ ಹಾಗೂ ಶಾರುಖ್ ಖಾನ್ ಕೂಡ ಕಾಶ್ಮೀರದ ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಲ್ಮಾನ್ ಖಾನ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ, ಕಾಶ್ಮೀರ, ಭೂಮಿಯ ಮೇಲಿನ ಸ್ವರ್ಗ. ಆದರೆ ಈಗ ನರಕವಾಗಿ ಬದಲಾಗುತ್ತಿದೆ. ಅಮಾಯಕರನ್ನು ಗುರಿಯಾಗಿಸಲಾಗುತ್ತಿದೆ, ನನ್ನ ಹೃದಯವು ಅವರ ಕುಟುಂಬಗಳಿಗೆ ಮಿಡಿಯುತ್ತಿದೆ ಎಂದು ನೋವನ್ನು ಹೊರಹಾಕಿದ್ದಾರೆ. ಶಾರುಖ್ ಖಾನ್., ಪಹಲ್ಗಾಮ್‌ನಲ್ಲಿ ನಡೆದಿರುವ ವಿಶ್ವಾಸಘಾತುಕ ಕೃತ್ಯ ಮತ್ತು ಅಮಾನವೀಯ ಹಿಂಸಾಚಾರದ ಬಗ್ಗೆ ದುಃಖ ಮತ್ತು ಕೋಪವನ್ನು ವ್ಯಕ್ತಪಡಿಸಲು ಪದಗಳು ಸಾಲದು. ಇಂತಹ…
ದೊಡ್ಡಬಳ್ಳಾಪುರ: ಮಹಿಳೆಯೊರ್ವಳು ಬಾಡಿಗೆ ಕೊಟ್ಟ ಮನೆ ಮಾಲೀಕನ ಮನೆಗೇ ಹಾಕಿದ ಘಟನೆ ದೊಡ್ಡಬಳ್ಳಾಪುರದ ಪಾಲನಜೋಗನಹಳ್ಳಿಯಲ್ಲಿ ನಡೆದಿದೆ. ಮುನಿಸ್ವಾಮಿ (75) ಮನೆ ಮಾಲೀಕನಾಗಿದ್ದು, ಮಮತಾ(25) ಕಳ್ಳತನ ಮಾಡಿರುವ ಆರೋಪಿಯಾಗಿದ್ದಾಳೆ. https://ainkannada.com/fine-for-not-wearing-a-helmet-these-tips-are-mandatory-when-buying/ ಮನೆಯ ಕೀ ಯನ್ನು ಕಿಟಕಿಯಲ್ಲಿ ಇಟ್ಟು ಹೋಗಿದ್ದನ್ನು ಕಳ್ಳಿ ಗಮನಿಸಿದ್ದಾಳೆ. ವೃದ್ಧ ಮನೆಯಲ್ಲಿ ಇಲ್ಲದೇ ಇರುವುದನ್ನು ಗಮನಿಸಿ ಮನೆ ಒಳಗೆ ಹೋದ ಮಮತಾ, ಬೀರುವಿನಲ್ಲಿದ್ದ 92 ಗ್ರಾಂ ನ ಚಿನ್ನದ ಚೈನ್, ಬ್ರಸ್ ಲೈಟ್, ಓಲೆ, ಬಳೆ ಉಂಗುರ ಕಳ್ಳತನ ಮಾಡಿದ್ದಾಳೆ. ಅದಲ್ಲದೆ ಕಳ್ಳತನ ಮಾಡಿದ ಒಡವೆಗಳನ್ನು ಖಾಸಗಿ ಬ್ಯಾಂಕ್ ನಲ್ಲಿಟ್ಟಿದ್ದಳು. ಆರೋಪಿಯಿಂದ ದೊಡ್ಡಬಳ್ಳಾಪುರ ಗ್ರಾಮಾಂತರ ಪೋಲೀಸರು, ಚಿನ್ನವನ್ನ ವಶಕ್ಕೆ ಪಡೆದಿದ್ದಾರೆ. ಚಿನ್ನವನ್ನು ಮತ್ತೆ ವಾಪಸ್ ಮಾಲೀಕರಿಗೆ ಇನ್ಸ್ಪೆಕ್ಟರ್ ಸಾಧಿಕಗ ಪಾಷಾ ಅವರು ಕೊಟ್ಟಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಸಪ್ತ ಸಾಗರದಾಚೆ ಎಲ್ಲೋ ಸರಣಿ ಸಿನಿಮಾಗಳ ನಿರ್ದೇಶಕ ಹೇಮಂತ್ ಎಂ ರಾವ್ ನಿರ್ಮಾಣದ ಚೊಚ್ಚಲ ಸಿನಿಮಾ ಅಜ್ಞಾತವಾಸಿ ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಂಡಿದೆ. ಈ ಚಿತ್ರದ ಯಶಸ್ಸಿನ ಖುಷಿಯಲ್ಲಿರುವ ಅವರು ಇದೀಗ ಸುರುಳಿ ಎಂಬ ಕಿರುಚಿತ್ರವನ್ನು ನಿರ್ಮಿಸಿದ್ದಾರೆ. ತಮ್ಮದೇ ದಾಕ್ಷಾಯಿಣಿ ಟಾಕೀಸ್ ನಡಿ ನಿರ್ಮಾಣಗೊಂಡಿರುವ ಈ ಕಿರುಚಿತ್ರ ಮನಮುಟ್ಟುವ ಕಥೆಯನ್ನೊಳಗೊಂಡಿದೆ. ದಾಕ್ಷಾಯಿಣಿ ಟಾಕೀಸ್ ಯೂಟ್ಯೂಬ್ ನಲ್ಲಿ ರಿಲೀಸ್ ಆಗಿರುವ 33 ನಿಮಿಷದ ಕಿರುಚಿತ್ರ ಮಾನವೀಯತೆಯನ್ನು ತೆರೆದಿಟ್ಟಿದೆ. ಯುವ ಸಿನಿಮೋತ್ಸಾಹಿಗಳ ಕನಸಿಗೆ ಹೇಮಂತ್ ರಾವ್ ಬೆಂಬಲವಾಗಿ ನಿಲ್ಲುವ ಕೆಲಸ ಮಾಡುತ್ತಿದ್ದಾರೆ. ತಮ್ಮ ತಾಯಿ ಹೆಸರಿನಡಿ ನಿರ್ಮಿಸಿರುವ ದಾಕ್ಷಾಯಿಣಿ ಟಾಕೀಸ್ ಪ್ರೊಡಕ್ಷನ್ ನಡಿ ವಿಭಿನ್ನ ಬಗೆಯ ಸಿನಿಮಾ ಹಾಗೂ ಕಿರುಚಿತ್ರಗಳನ್ನು ನಿರ್ಮಿಸುವ ಹಾದಿಯಲ್ಲಿದ್ದು, ಅದರ ಭಾಗವಾಗಿ ರೂಪಗೊಂಡಿರುವ ಪ್ರಯತ್ನವೇ ಸುರುಳಿ ಕಿರುಚಿತ್ರ. ಇತ್ತೀಚೆಗೆ ಈ ಪ್ರೊಡಕ್ಷನ್ ನಡಿ ನಿರ್ಮಾಣಗೊಂಡ ಮೊದಲ ಚಿತ್ರ ಅಜ್ಞಾತವಾಸಿ ಪ್ರೇಕ್ಷಕರು ಹಾಗೂ ವಿಮರ್ಶಕರ ವಲಯದಿಂದ ಒಂದೊಳ್ಳೆ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುತ್ತಿದೆ. ಅದರ ಬೆನ್ನಲ್ಲೀಗ ಸುರುಳಿ ಕಿರುಚಿತ್ರವನ್ನು ನಿರ್ಮಿಸಿ,…
ನವದೆಹಲಿ: ಜಮ್ಮು-ಕಾಶ್ಮೀರದ ಅನಂತಪುರ ಜಿಲ್ಲೆಯ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ನಡೆಸಿದ ದಾಳಿ 26 ಪ್ರವಾಸಿಗರು ಜೀವ ಕಳೆದುಕೊಂಡಿದ್ದಾರೆ. 2019ರ ಪುಲ್ವಾಮಾ ದಾಳಿ ಬಳಿಕ ಅತ್ಯಂತ ರಣ ಭಯಂಕರ ಉಗ್ರರ ದಾಳಿ ಇದಾಗಿದೆ. ಿದೀಗ ಪಹಲ್ಗಾಮ್ ದಾಳಿ ನಂತರ ಸಾವಿರಾರು ಸಂಖ್ಯೆಯ ಪ್ರವಾಸಿಗರು ಜಮ್ಮು ಕಾಶ್ಮೀರದಲ್ಲಿ ಸಿಲುಕಿದ್ದಾರೆ. ಇವರನ್ನು ಸುರಕ್ಷಿತವಾಗಿ ಕರೆ ತರಲು ಹೆಚ್ಚಿನ ಸಂಖ್ಯೆಯಲ್ಲಿ ವಿಮಾನಗಳನ್ನು ನಿಯೋಜಿಸಬೇಕು ಮತ್ತು ಪ್ರಯಾಣ ರದ್ದುಗೊಳಿಸಿದರೆ ಟಿಕೆಟ್ ಶುಲ್ಕವನ್ನು ಮರುಪಾವತಿಸುವಂತೆ ಸೂಚಿಸಿದೆ. https://ainkannada.com/fine-for-not-wearing-a-helmet-these-tips-are-mandatory-when-buying/ ಹೆಚ್ಚಿದ ಬೇಡಿಕೆಗೆ ಪ್ರತಿಕ್ರಿಯೆಯಾಗಿ ವಿಮಾನಗಳ ಸಂಖ್ಯೆಯನ್ನು ಹೆಚ್ಚಿಸಲು ಮತ್ತು ಶ್ರೀನಗರದಿಂದ ಭಾರತದಾದ್ಯಂತ ವಿವಿಧ ಸ್ಥಳಗಳಿಗೆ ಪ್ರವಾಸಿಗರನ್ನು ಸ್ಥಳಾಂತರಿಸಲು ಅನುಕೂಲವಾಗುವಂತೆ ವಿಮಾನಯಾನ ಸಂಸ್ಥೆಗಳು ತ್ವರಿತ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಡಿಜಿಸಿಎ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಡಿಜಿಸಿಎ ಸೂಚನೆ ಬೆನ್ನಲ್ಲೇ ಏರ್ ಇಂಡಿಯಾ ಮತ್ತು ಇಂಡಿಗೋ ಬುಧವಾರ ಶ್ರೀನಗರದಿಂದ ಹೆಚ್ಚುವರಿ ವಿಮಾನ ಸೇವೆ ಆರಂಭಿಸಿದೆ. ಈ ಸಂದರ್ಭದಲ್ಲಿ ಲಾಭ ಪಡೆಯಲು ವಿಮಾನಯಾನ ಕಂಪನಿಗಳು ಟಿಕೆಟ್ ದರವನ್ನು ಏರಿಕೆ ಮಾಡಿದರೆ ಆನ್‌ಲೈನ್‌ನಲ್ಲಿ ದೂರು ನೀಡುವಂತೆ DGCA…
ಬೆಂಗಳೂರು: ಕಾಶ್ಮೀರದ ಪಹಲ್ಗಾಮ್ ನ ಉಗ್ರರ ದಾಳಿಯ ಸಂದರ್ಭದಲ್ಲಿ ಕಾಶ್ಮೀರದಿಂದ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲು ಸರ್ಕಾರ ಸಕಲ ವ್ಯವಸ್ಥೆ ಮಾಡಲಾಗಿದೆ ಹಾಗೂ ಉಗ್ರರ ದಾಳಿಯ ಮಾಹಿತಿ ಕೊರತೆ ಕೇಂದ್ರದ ಗುಪ್ತಚರ ಇಲಾಖೆಯ ವೈಫಲ್ಯವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.ಅವರು ಇಂದು ಮಾಧ್ಯಮದವರೊಂದಿಗೆ ಮಾತನಾಡಿದರು. ಕನ್ನಡಿಗರನ್ನು ಕರೆತರಲು ಕಾರ್ಮಿಕ ಸಚಿವರಿಗೆ ಸೂಚನೆ ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ನಡೆದಿರುವ ಉಗ್ರರ ದಾಳಿಯನ್ನು ತೀವ್ರವಾಗಿ ಖಂಡಿಸಿದ ಮುಖ್ಯಮಂತ್ರಿಗಳು, ಕರ್ನಾಟಕದ ಪ್ರವಾಸಿಗರಲ್ಲಿ ಮಂಜುನಾಥ್ ಹಾಗೂ ಭರತ್ ಭೂಷಣ್ ಎಂಬುವರು ಮೃತರಾಗಿರುವ ಬಗ್ಗೆ ಮಾಹಿತಿ ನೀಡಿದರು.. ಕನ್ನಡಿಗರ ರಕ್ಷಣೆ ಹಾಗೂ ಇನ್ನಿತರ ವ್ಯವಸ್ಥೆಗಳಿಗಾಗಿ ಅಧಿಕಾರಿಗಳ ತಂಡವನ್ನು ಕಾಶ್ಮೀರಕ್ಕೆ ರವಾನಿಸಲಾಗಿದೆ. ಅಲ್ಲದೇ, ಕಾಶ್ಮೀರಕ್ಕೆ ತೆರಳಿರುವ 40 ಕ್ಕೂ ಅಧಿಕ ಕನ್ನಡಿಗರನ್ನು ವಿಶೇಷ ವಿಮಾನ ವ್ಯವಸ್ಥೆ ಮಾಡಿ ಸುರಕ್ಷಿತವಾಗಿ ಕರೆತರಲು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರನ್ನೂ ಕಾಶ್ಮೀರಕ್ಕೆ ಕಳಿಸಲಾಗಿದೆ ಎಂದರು. https://ainkannada.com/fine-for-not-wearing-a-helmet-these-tips-are-mandatory-when-buying/ ಕಾಶ್ಮೀರದ ಪಹಲ್ಗಾಮ್ ನಡೆದಿರುವ ಉಗ್ರರ ದಾಳಿ ಪೂರ್ವಯೋಜಿತ ಸಂಚು. ಪ್ರಾಣಹತ್ಯೆ ಮಾಡಿರುವ ಈ ಘಟನೆ ಅತ್ಯಂತ ಖಂಡನೀಯ.…
ಮೈಸೂರು: ಜಮ್ಮು-ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯ ಪಹಲ್ಗಾಮ್ನ ಬೈಸರನ್ ಕಣಿವೆಯಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಭಯೋತ್ಪಾದಕರು ಭಾರತಕ್ಕೆ ದೊಡ್ಡ ಆಘಾತ ನೀಡಿದ್ದಾರೆ. ಇನ್ನೂ ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಪ್ರತಾಪ್ ಸಿಂಹ ಮೈಸೂರಿನಲ್ಲಿ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ಧರ್ಮವನ್ನ ಕೇಳಿ ಹತ್ಯೆ ಮಾಡಿರುವುದು ಬಹಳ ದುಃಖವಾಗಿದೆ. ಮುಸಲ್ಮಾನರು ಧರ್ಮಾಂಧರು ಅಂತ ಹೇಳಲ್ಲ. ಹಿಂದುಗಳಲ್ಲಿ ಒಗ್ಗಟ್ಟಿಲ್ಲ ಎಂದು ಹೇಳಲು ಬಯಸುತ್ತೇನೆ. ಈ ನಿರಭಿಮಾನಿ ಹಿಂದುಗಳು ಇದನ್ನ ಅರ್ಥ ಮಾಡಿಕೊಳ್ಳಬೇಕು. ಹೆಸರನ್ನ ಕೇಳಿ ಹತ್ಯೆ ಮಾಡಿದ್ದಾರೆ ಎಂದರೆ ಅಲ್ಲಿ ಮೊಹಮದ್ ಅಂತ ಹೆಸರೇಳಿದ್ರೆ ಕೊಲ್ಲುತ್ತಿರಲಿಲ್ಲ. ಈಗಲಾದರೂ ಹಿಂದುಗಳು ಅರ್ಥ ಮಾಡಿಕೊಳ್ಳಿ. ಜಾತಿ ಜಾತಿ ಎಂದು ಕಿತ್ತಾಡಬೇಡಿ ಎಂದರು. https://ainkannada.com/fine-for-not-wearing-a-helmet-these-tips-are-mandatory-when-buying/ ಯಾರ ಸಹಕಾರ ಇಲ್ಲದೆ ಇಂತಹ ಘಟನೆ ನಡೆಯಲ್ಲ. ಇದರಲ್ಲಿ ಸ್ಥಳೀಯ ಮುಸ್ಲಿಮರ ಸಹಕಾರ ಇದೆ. ಇವತ್ತು ಜಗತ್ತಿನಲ್ಲಿ ನಡೆಯುವ ಅವಘಡಗಳನ್ನ ನೋಡಿದ್ರೆ ಗೊತ್ತಾಗುತ್ತದೆ. ಮುಸ್ಲಿಮರ ಮನಸ್ಥಿತಿ ಏನು ಅಂತ. ಅದಕ್ಕೆ ಅಂಬೇಡ್ಕರ್ ಅವರು ಪರಿ ಪರಿಯಾಗಿ ಹೇಳಿದ್ರು. ನಮ್ಮ ದೇಶದಲ್ಲಿ ಮುಸ್ಲಿಮರು ಇರೋದು ಬೇಡ…
ಭಾರತೀಯ ಜೀವ ವಿಮಾ ನಿಗಮ (LIC) ಕಾಲಕಾಲಕ್ಕೆ ತನ್ನ ಗ್ರಾಹಕರಿಗೆ ಅತ್ಯುತ್ತಮ ಯೋಜನೆಗಳನ್ನು ನೀಡುತ್ತಿದೆ. ಈ LIC ಯೋಜನೆಯಲ್ಲಿ, ನೀವು ದೈನಂದಿನ, ಮಾಸಿಕ ಅಥವಾ ತ್ರೈಮಾಸಿಕ ಆಧಾರದ ಮೇಲೆ ಪ್ರೀಮಿಯಂ ಅನ್ನು ಠೇವಣಿ ಮಾಡಬಹುದು. ಅದಾದ ನಂತರ, ಸ್ವಲ್ಪ ಸಮಯದ ನಂತರ, ನಿಮಗೆ LIC ಯಿಂದ ಉತ್ತಮ ಮೊತ್ತ ಸಿಗುತ್ತದೆ. ಈಗ ಎಲ್ಐಸಿ ಜೀವನ್ ಆಧಾರ್ ಶಿಲಾ ಯೋಜನೆಯ ಬಗ್ಗೆ ತಿಳಿದುಕೊಳ್ಳೋಣ. ಇದರಲ್ಲಿ ನಿಮಗೆ ರೂ. ದಿನಕ್ಕೆ. ರೂ. ಠೇವಣಿ ಇಡುವ ಮೂಲಕ. 50 ರಿಂದ ನೀವು 6 ಲಕ್ಷದವರೆಗೆ ಪಡೆಯಬಹುದು. https://ainkannada.com/fine-for-not-wearing-a-helmet-these-tips-are-mandatory-when-buying/ LIP ಆಧಾರ್ ಶಿಲಾ ಪಾಲಿಸಿಯು ಮಹಿಳೆಯರಿಗೆ ಮಾತ್ರ ಲಭ್ಯವಿದೆ. ಈ ಯೋಜನೆಯಲ್ಲಿ, ಮಹಿಳೆಯರು ಸಣ್ಣ ಉಳಿತಾಯ ಮಾಡುವ ಮೂಲಕ ಮುಕ್ತಾಯದ ಸಮಯದಲ್ಲಿ ಉತ್ತಮ ಮೊತ್ತವನ್ನು ಪಡೆಯಬಹುದು. ಪಾಲಿಸಿದಾರ ಯಾವುದೇ ಕಾರಣಕ್ಕಾಗಿ ಮರಣ ಹೊಂದಿದಲ್ಲಿ, ಅವರ ಕುಟುಂಬಕ್ಕೂ ಆರ್ಥಿಕ ನೆರವು ದೊರೆಯುತ್ತದೆ. ಈ LIC ಯೋಜನೆ ಏಕೆ ವಿಶೇಷವಾಗಿದೆ? ಈ ಎಲ್‌ಐಸಿ ಯೋಜನೆಯಲ್ಲಿ ಕನಿಷ್ಠ 8 ವರ್ಷ ವಯಸ್ಸಿನವರಿಂದ…