ಯುವ ಉದ್ಯಮಿ ಎಸ್.ಭರತ್ ಕುಮಾರ್ ಒಡೆತನದ ಬೆನಕ ಗೋಲ್ಡ್ ಪ್ರೈ.ಲಿಗೆ ಚಂದನವನದ ಮುದ್ದಿನ ರಾಕ್ಷಸಿ, ಕೆಡಿ ಲೇಡಿ ನಟಿ ರೀಷ್ಮಾ ನಾಣಯ್ಯ ನೂತನ ಬ್ಯ್ರಾಂಡ್ ಅಂಬಾಸಿಡರ್ ಆಗಿ ನೇಮಕಗೊಂಡಿದ್ದಾರೆ. ಇತ್ತೀಚೆಗೆ ಬೆಂಗಳೂರು ಪ್ರೆಸ್ ಕ್ಲಬ್‌ದಲ್ಲಿ ನಡೆದ ಸಮಾರಂಭದಲ್ಲಿ ರೀಷ್ಮಾನಾಣಯ್ಯ ಅವರನ್ನು ಅಧಿಕೃತವಾಗಿ ಸಂಸ್ಥೆಗೆ ಬರಮಾಡಿಕೊಳ್ಳಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಎಸ್.ಭರತ್‌ಕುಮಾರ್ ಸಂಸ್ಥೆಯು ಐದು ವರ್ಷಗಳ ಹಿಂದೆ ಪ್ರಾರಂಭಗೊಂಡು, ಪ್ರಸ್ತುತ 35 ಶಾಖೆಗಳನ್ನು ಹೊಂದಿದ್ದು 300ಕ್ಕೂ ಹೆಚ್ಚು ಜನರಿಗೆ ಉದ್ಯೋವಕಾಶ ಕಲ್ಪಸಿದೆ. ಬೇಡಿಕೆಯ ಕಲಾವಿದೆ ರೀಷ್ಮಾನಾಣಯ್ಯ ನಮ್ಮ ಸಂಸ್ಥೆಗೆ ಬ್ರ್ಯಾಂಡ್ ಅಂಬಾಸಿಡರ್ ಆಗಿರುವುದು ಕಳಸ ಇಟ್ಟಂತೆ ಆಗಿದೆ. ಚಿನ್ನದ ಜೊತೆ ಅದರ ಸ್ಟೋನ್‌ಗಳಿಗೂ ಕೂಡ ಬೆಲೆಯನ್ನು ಕೊಡುವ ಯೋಜನೆ, ಮೊಟ್ಟ ಮೊದಲ ಬಾರಿಗೆ ಪರಿಚಯಿಸಿದ್ದು ಏಕೈಕ ಸಂಸ್ಥೆ ಅದು ಬೆನಕ ಗೋಲ್ಡ್ ಎಂದು ಹೇಳಲು ಸಂತಸವಾಗುತ್ತದೆ. ಬೇರೆ ಕಡೆ ಚಿನ್ನ ಮಾರಾಟ ಮಾಡಿರೆಂದು ಹೇಳುತ್ತಾರೆ. ನಾವು ಆ ರೀತಿ ಹೇಳದೆ, ಮಾರಾಟ ಮಾಡಿದ ನಂತರವೂ ಅದನ್ನು ಕಂತುಗಳ ಮೂಲಕ ಹಣ ಪಾವತಿಸಿ ಹಿಂಪಡೆಯುವ ವಿನೂತನ…
Author: Author AIN
ಬೀದರ್: ಜನಿವಾರ ವಿವಾದದಿಂದ ಸಿಇಟಿ ಪರೀಕ್ಷೆಯಿಂದ ವಚಿಂತನಾಗಿದ್ದ ವಿದ್ಯಾರ್ಥಿ ಸುಚಿವ್ರತ್ ಕುಲಕರ್ಣಿರವರ ಕುಟುಂಬಕ್ಕೆ ಮುಖ್ಯಮಂತ್ರಿಗಳು ಕನಿಷ್ಠ ಹತ್ತು ಲಕ್ಷ ರೂ.ಗಳ ಆರ್ಥಿಕ ನೆರವು ನೀಡಬೇಕು ಎಂದು ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಆಗ್ರಹಿಸಿದ್ದಾರೆ. ಇತ್ತೀಚೆಗೆ ಜನಿವಾರ ವಿವಾದದಿಂದ ಸಿಇಟಿ ಪರೀಕ್ಷೆಯಿಂದ ವಚಿಂತನಾಗಿದ್ದ ಬೀದರ್ ನಗರದ ವಿದ್ಯಾರ್ಥಿ ಸುಚಿವ್ರತ್ ಕುಲಕರ್ಣಿರವರ ಮನೆಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ನಾನು ಸುಚಿವ್ರತ್ ಕುಲಕರ್ಣಿರವರ ಮನೆಗೆ ಭೇಟಿ ನೀಡಿ, ವಿದ್ಯಾರ್ಥಿ ಹಾಗೂ ಆತನ ಪೋಷಕರನ್ನು ಮಾತನಾಡಿಸಿ, ಆತ್ಮಸ್ಥೈರ್ಯ ತುಂಬಿ, ನಿಮ್ಮೊಂದಿಗೆ ನಾವು ಇದ್ದೇವೆ, ನಿಮಗೆ ನ್ಯಾಯ ಕೊಡಿಸಲು ನಾವು ಪ್ರಯತ್ನಿಸುತ್ತೇವೆಂದು ಧೈರ್ಯ ನೀಡಿದ್ದೇನೆ ಎಂದರು. https://ainkannada.com/fine-for-not-wearing-a-helmet-these-tips-are-mandatory-when-buying/ ಸುಚಿವ್ರತ್ ಕುಟುಂಬ ಕಡುಬಡ ಕುಟುಂಬವಾಗಿದ್ದು, ಅವರು ಬಿಪಿಎಲ್ ಕಾರ್ಡುದಾರರಾಗಿದ್ದಾರೆ. ಆತನ ತಾಯಿ ಮಕ್ಕಳಿಗೆ ಪಾರ್ಟ್ ಟೈಮ್ ಟ್ಯೂಷನ್ ಹೇಳಿಕೊಟ್ಟು ಸಂಸಾರ ಸಾಗಿಸುತ್ತಿದ್ದಾರೆ. ಅದೇ ವೃತ್ತಿ ಬದುಕಿನಿಂದಲೇ ಮಗನನ್ನು ಓದಿಸುತ್ತಿದ್ದಾರೆ. ಈಗ ಮಗ ಸಿಇಟಿಯಿಂದ ವಂಚಿತನಾಗಿರುವುದು ಆ ಕುಟುಂಬಕ್ಕೆ ದೊಡ್ಡಮಟ್ಟದ ನಷ್ಟವಾಗಿದೆ.…
ಹಿರಿಯೂರು: ಕಾಶ್ಮೀರದಲ್ಲಿ ಪ್ರವಾಸಿಗರ ಉಗ್ರರ ದಾಳಿ ನಡೆದಿದ್ದು,20 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.ಇದನ್ನೆ ಬಂಡವಾಳ ಮಾಡಿಕೊಂಡ ಕೆಲ ಏರ್ ಲೈನ್ಸ್ ಗಳು ಫ್ಲೈಟ್ ಟಿಕೆಟ್ ಗಳ ಶುಲ್ಕ ದುಪ್ಪಟ್ಟು ಮಾಡಿವೆ. https://ainkannada.com/fine-for-not-wearing-a-helmet-these-tips-are-mandatory-when-buying/ ಕಾಶ್ಮೀರಕ್ಕೆ ಪ್ರವಾಸಕ್ಕೆಂದು ತೆರಳಿದ್ದ ಹಿರಿಯೂರಿನ ನಂದೀಶ್ ಮತ್ತು ವಾಸವಿ ಜೋಡಿ ಉಗ್ರರ ದಾಳಿ ಹಿನ್ನೆಲೆ ಭಯ ಭೀತರಾಗಿದ್ದು, ಪ್ರವಾಸ ರದ್ದು ಮಾಡಿಕೊಂಡು ಬರಬೇಕೆಂದು ಫ್ಲೈಟ್ ಟಿಕೆಟ್ ಶುಲ್ಕ ನೋಡಿದೆ.ಅದು ದುಪ್ಪಟ್ಟಾಗಿದೆ. ಇದರಿಂದ ಇದಕ್ಕೆ ಕಡಿವಾಣ ಹಾಕುವಂತೆ ಮನವಿ ಮಾಡಿದ್ದಾರೆ.
ಪುಸ್ತಕಗಳು ನಮ್ಮ ಬೆಸ್ಟ್ ಫ್ರೆಂಡ್ಸ್. ಅಷ್ಟೇ ಅಲ್ಲ ಒಳ್ಳೆಯ ಫಿಲಾಸಫರ್, ಮಾರ್ಗದರ್ಶಕ, ಒಳ್ಳೆಯ ಉದ್ದೇಶಗಳಿಗೆ ಗೈಡ್, ಉತ್ತಮ ಒಡನಾಡಿ ಸಹ. ಅದೆಷ್ಟೋ ಜನರಿಗೆ ಅವರ ಏಕಾಂಗಿತನ ಕಾಡದಂತೆ ಕಾಪಾಡುತ್ತಿರುವ ಒಡನಾಡಿ ಪುಸ್ತಕ. ಪುಸ್ತಕಗಳು ಪ್ರಮುಖ ಮಾಹಿತಿ ಮೂಲಗಳಾಗಿದ್ದು, ಜೊತೆಗೆ ಮನರಂಜನೆ ನೀಡುವ, ಮನಸ್ಸಿಗೆ ಶಾಂತಿ ನೀಡುವ ಸೋರ್ಸ್ ಸಹ. https://ainkannada.com/fine-for-not-wearing-a-helmet-these-tips-are-mandatory-when-buying/ ಓದುವ ತುಡಿತಯಿರುವ ಅದೆಷ್ಟೋ ವ್ಯಕ್ತಿಗಳು ಇಂದಿಗೂ ನಮ್ಮ ಸುತ್ತಮುತ್ತಲಿನಲ್ಲಿ ಇದ್ದಾರೆ. ಆದರೆ ಓದುಗ ವರ್ಗವನ್ನು ಮತ್ತಷ್ಟು ಹೆಚ್ಚಿಸಲು ವಿಶ್ವ ಪುಸ್ತಕ ಹಾಗೂ ಹಕ್ಕುಸ್ವಾಮ್ಯ ದಿನವನ್ನು ಆಚರಿಸಲಾಗುತ್ತಿದೆ. ವಿಶ್ವ ಪುಸ್ತಕ ಹಾಗೂ ಹಕ್ಕುಸ್ವಾಮ್ಯ ದಿನದ ಇತಿಹಾಸ: ವೆಲೆನ್ಸಿಯನ್ ಬರಹಗಾರ ವಿಸೆಂಟೆ ಕ್ಲಾವೆಲ್ ಆ್ಯಂಡ್ರೆಸ್ ಎನ್ನುವವರು ಈ ಪುಸ್ತಕ ದಿನವನ್ನು ಆಚರಿಸುವ ಪರಿಕಲ್ಪನೆಯನ್ನು ತಂದರು. ವೆಲೆನ್ಸಿಯನ್ ಬರಹಗಾರ ವಿಸೆಂಟೆ ಕ್ಲಾವೆಲ್ ಆ್ಯಂಡ್ರೆಸ್ ಅವರ ಜನ್ಮದಿನವಾದ ಅಕ್ಟೋಬರ್ 7 ರಂದು ಪುಸ್ತಕ ದಿನವನ್ನಾಗಿ ಆಚರಿಸಲಾಯಿತು. ನಂತರದಲ್ಲಿ ಅವರು ಮರಣ ಹೊಂದಿದ ದಿನವಾದ ಏಪ್ರಿಲ್ 23 ರಂದು ವಿಶ್ವ ಪುಸ್ತಕ ದಿನವನ್ನು ಆಚರಿಸಲಾಯಿತು. ಆದರೆ ಯುನೆಸ್ಕೊ…
ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಳಿಯಲ್ಲಿ 27 ಮಂದಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಅಲ್ಲದೇ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಇನ್ನೂ ದಾಳಿ ನಡೆಸಿದ ಐವರ ಪೈಕಿ ಓರ್ವ ಉಗ್ರನ ಫೋಟೋ ಹೊರಬಂದಿದೆ. ಪ್ರವಾಸಿಗರೊಬ್ಬರು AK 47 ಗನ್ ಹಿಡಿದ ಉಗ್ರನ ಫೋಟೋವನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದುಕೊಂಡಿದ್ದು, ಸದ್ಯ ಬೆಳಕಿಗೆ ಬಂದಿದೆ. ಮಂಗಳವಾರ ಮಧ್ಯಾಹ್ನ ಸುಮಾರು 3 ಗಂಟೆಗೆ ನಡೆದ ದಾಳಿಯಲ್ಲಿ 26 ಪ್ರವಾಸಿಗರು ಮೃತರಾಗಿದ್ದಾರೆ. https://ainkannada.com/fine-for-not-wearing-a-helmet-these-tips-are-mandatory-when-buying/ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾದ ಸ್ಥಳೀಯ ಶಾಖೆಯಾದ ರೆಸಿಸ್ಟೆನ್ಸ್ ಫ್ರಂಟ್ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ದಾಳಿಕೋರರನ್ನು ಪತ್ತೆ ಹಚ್ಚಲು ಭದ್ರತಾ ಪಡೆಗಳು ಮುಂದಾಗಿದ್ದು, ಜಮ್ಮು ಕಾಶ್ಮೀರದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಜಮ್ಮು ಕಾಶ್ಮೀರದಲ್ಲಿರುವ ಪ್ರವಾಸಿಗರ ಸ್ಥಳಾಂತರಕ್ಕೆ ಹೆಚ್ಚುವರಿ ವಿಮಾನಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಹುಬ್ಬಳ್ಳಿ; ಕಾಶ್ಮೀರದ ಪಹಲ್ಗಾಮ್ ನಿಂದ ಪ್ರವಾಸಿಗರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲು ವೈಮಾನಿಕ ಕಂಪನಿಗಳು ಏರ್ ಲೈನ್ ಟಿಕೆಟ್ ದರ ಹೆಚ್ಚಳ ಮಾಡದಂತೆ ಸೂಚನೆ ನೀಡಲಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾಹಿತಿ ನೀಡಿದ್ದಾರೆ. https://ainkannada.com/fine-for-not-wearing-a-helmet-these-tips-are-mandatory-when-buying/ ಈ ಬಗ್ಗೆ ಮಾಹಿತಿ ನೀಡಿದ ಸಚಿವರು, ಈಗಾಗಲೇ ಕಾಶ್ಮೀರದ ಪ್ರವಾಸಿ ತಾಣಗಳಿಂದ ಪ್ರವಾಸಿಗರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗುತ್ತಿದೆ. ಮೃತರ ಶವಗಳನ್ನು ತರಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು. ಟಿಕೆಟ್ ದರ ಹೆಚ್ಚಿಸದಿರಲು ಸೂಚನೆ: ಭಯೋತ್ಪಾದನಾ ಕೃತ್ಯ ನಡೆದ ಸ್ಥಳದಿಂದ ಹಾಗೂ ಕಾಶ್ಮೀರದ ಇತರೆ ಪ್ರವಾಸಿ ತಾಣಗಳಿಂದ ಪ್ರವಾಸಿಗರ ರಕ್ಷಣಾ ಕಾರ್ಯ ನಡೆದಿದೆ. ಪ್ರವಾಸಿಗರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲು ಹೆಚ್ಚಿನ ಟಿಕೆಟ್ ದರ ವಿಧಿಸದಿರುವಂತೆ ವೈಮಾನಿಕ ಕಂಪನಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು. ವಿಮಾನಯಾನ ಸಚಿವರೊಂದಿಗೆ ಚರ್ಚೆ: ಏರ್ ಲೈನ್ ಟಿಕೆಟ್ ದರ ಹೆಚ್ಚಳ ಮಾಡದಂತೆ ನಾಗರೀಕ ವಿಮಾನಯಾನ ಸಚಿವರೊಂದಿಗೂ ಮಾತನಾಡಿದ್ದೇನೆ. ಏರ್ ಲೈನ್ ಟಿಕೆಟ್ ದರದ ಕುರಿತು ಗಮನಹರಿಸಲು ಡಿಜಿಸಿಎಗೂ ಸೂಚನೆ ನೀಡಿದ್ದೇನೆ ಎಂದು…
ಪಹಲ್ಗಾಂಮ್ ಉಗ್ರರ ದಾಳಿಯಲ್ಲಿ ಮೃತಪಟ್ಟಿರುವವರ ಗುರುತು ಪತ್ತೆಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಮೃತರ ಸಂಬಂಧಿಕರಿಗೆ ನೆರವು ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಸಚಿವ ಲಾಡ್ ಅವರು ಕಾಶ್ಮೀರದಲ್ಲಿ ತೊಂದರೆಗೊಳಗಾದ ಕನ್ನಡಿಗರ ರಕ್ಷಣೆಗೆ ಕಾಶ್ಮೀರಕ್ಕೆ ತೆರಳಿದ್ದಾರೆ. ಪಹಲ್ಗಾಮ್‌ನಲ್ಲಿ ಮೃತದೇಹಗಳನ್ನು ಇರಿಸಲಾಗಿದ್ದು, ಮೃತರ ಸಂಬಂಧಿಕರೊಂದಿಗೆ ಪಾರ್ಥಿವ ಶರೀರಗಳನ್ನು ಗುರುತಿಸಲು ನೆರವಾಗಿದ್ದಾರೆ. https://ainkannada.com/fine-for-not-wearing-a-helmet-these-tips-are-mandatory-when-buying/ ಮೃತದೇಹಗಳು ನಿಮ್ಮ ಸಂಬಂಧಿಕರೇ ಎಂಬುದನ್ನು ಖಚಿತಪಡಿಸಿಕೊಳ್ಳಿ, ನೀವು ಎಷ್ಟು ಜನ ಬಂದಿದ್ದೀರಿ ಎಂಬ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಯಾವ ಮೃತದೇಹಗಳನ್ನು ಈಗಾಗಲೇ ನೋಡಲಾಗಿದೆ ಎಂಬುದನ್ನೂ ಸಹ ಅವರು ತಪಾಸಣೆ ಮಾಡುತ್ತಿದ್ದಾರೆ. ಮೃತದೇಹಗಳನ್ನು ಇರಿಸಲಾಗಿರುವ ಪೆಟ್ಟಿಗೆಗಳ ಮೇಲೆ ದೂರವಾಣಿ ಕರೆಗಳನ್ನು ನಮೂದಿಸಲಾಗಿದ್ದು, ಸಂಬಂಧಿಕರಿಗೆ ಕರೆ ಮಾಡಿ ಸ್ವತಃ ಸಂತೋಷ್ ಲಾಡ್ ಅವರೇ ತಿಳಿಸುತ್ತಿದ್ದಾರೆ. “ಮೃತದೇಹಗಳನ್ನು ಕರ್ನಾಟಕಕ್ಕೆ ತರಲು ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗುವುದು. ತೊಂದರೆಗೊಳಗಾದವರಿಗೆ ಅಗತ್ಯ ನೆರವನ್ನು ಮಾಡಲಾಗುವುದು. ನಮ್ಮ ಸರ್ಕಾರ ಏಲ್ಲಾ ರೀತಿಯಲ್ಲಿ ಸಹಾಯ ಮಾಡಲಿದೆ” ಎಂದು ಲಾಡ್ ಅವರು ತಿಳಿಸಿದ್ದಾರೆ. ಇಬ್ಬರ ಗುರುತು ಪತ್ತೆ ಉಗ್ರರ…
ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಮಾತಿಗೆ ಮಾತು ಬೆಳದು ಕೋಪ ಅತಿರೇಕಕ್ಕೆ ಹೋಗಿ ಯುವಕನೊಬ್ಬನಿಗೆ ಚಾಕು ಇರಿದಿರುವ ಘಟನೆ ಹುಬ್ಬಳ್ಳಿಯ ಹೊಸೂರಲ್ಲಿ ನಡೆದಿದೆ. https://ainkannada.com/fine-for-not-wearing-a-helmet-these-tips-are-mandatory-when-buying/ ಹೊಸೂರ ನಿವಾಸಿ ವಿಜಯ ಎಂಬಾತನೃ ಚಾಕು ಇರಿತಕ್ಕೆ ಒಳಗಾದ ಯುವಕ, ಸಂದೀಪ ಎಂಬಾತ ಕುತ್ತಿಗೆಗೆ ಚಾಕು ಇರಿದು ಪರಾರಿಯಾಗಿದ್ದಾನೆ. ಈ ಘಟನೆ ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಗಾಯಗೊಂಡ ವಿಜಯ ಎಂಬ ಯುವಕನನ್ನು ಕಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ.
ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಳಿಯಲ್ಲಿ 27 ಮಂದಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಅಲ್ಲದೇ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಇನ್ನೂ ಈ ವಿಚಾರವಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರತಿಕ್ರಿಯೇ ನೀಡಿದ್ದಾರೆ. ಟ್ವೀಟ್ ಮಾಡಿದ ಅವರು, ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ ಶಿವಮೊಗ್ಗದ ಮಂಜುನಾಥ ಶರ್ಮ ಅವರ ಕುಟುಂಬಸ್ಥರ ಬಳಿ ಮಾತನಾಡಿದ್ದು, ಪಾರ್ಥಿವ ಶರೀರವನ್ನು ಕರೆತರಲು ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದರು. https://ainkannada.com/fine-for-not-wearing-a-helmet-these-tips-are-mandatory-when-buying/ ಮಂಜುನಾಥ ಶರ್ಮರ ಪತ್ನಿ ಪಲ್ಲವಿ ಹಾಗೂ ಅವರ ಪುತ್ರನನ್ನು ತವರಿಗೆ ಕರೆತರಲು ವ್ಯವಸ್ಥೆ ಮಾಡಿರುವುದಾಗಿ ಅವರು ತಿಳಿಸಿದ್ದಾರೆ. ‘‘ಈ ಸಮಯದಲ್ಲಿ ಶ್ರೀಮತಿ ಪಲ್ಲವಿ ಅವರೊಂದಿಗೆ ಹಾಗೂ ಶಿವಮೊಗ್ಗದಲ್ಲಿರುವ ಅವರ ತಾಯಿಯವರ ಜೊತೆ ಮಾತನಾಡಿದ್ದೇನೆ. ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರದಾಳಿಯಲ್ಲಿ ಅಸುನೀಗಿರುವ ಪಲ್ಲವಿ ಅವರ ಪತಿ ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಮಂಜುನಾಥ ಶರ್ಮರವರ ಆತ್ಮಕ್ಕೆ ಶಾಂತಿ ಕೋರಿ, ಸಾಂತ್ವನ ಹೇಳಿದ್ದೇನೆ.…
ಏಪ್ರಿಲ್ 24 ವರನಟ ಡಾ.ರಾಜಕುಮಾರ್ ಅವರ ಹುಟ್ಟುಹಬ್ಬ. ಈ ಸುಸಂದರ್ಭದಲ್ಲಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅವರು ನಾಯಕರಾಗಿ ನಟಿಸಲಿರುವ ನೂತನ ಚಿತ್ರದ ಘೋಷಣೆಯಾಗಿದೆ. ಶ್ರಿತಿಕ್ ಮೋಷನ್ ಪಿಕ್ಚರ್ಸ್ ಸಂಸ್ಥೆ ಲಾಂಛನದಲ್ಲಿ ಸಾಗರ್, ಕೃಷ್ಣಕುಮಾರ್ ಹಾಗೂ ಸೂರಜ್ ಶರ್ಮ ಈ ನೂತನ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಬಾಲಾಜಿ ಮಾಧವನ್ ನಿರ್ದೇಶನ ಮಾಡಲಿದ್ದಾರೆ. ಕನ್ನಡದಲ್ಲಿ ಮೊದಲ ಚಿತ್ರವನ್ನು ನಿರ್ದೇಶಿಸುತ್ತಿರುವ ಬಾಲಾಜಿ ಮಾಧವನ್, ಖ್ಯಾತ ನಿರ್ದೇಶಕ ಪಿ.ವಾಸು ಅವರ ಸಹೋದರಿಯ ಪುತ್ರ. ಇತ್ತೀಚೆಗೆ ಶಿವರಾಜಕುಮಾರ್ ಅವರನ್ನು ಭೇಟಿ ಮಾಡಿದ ನಿರ್ದೇಶಕ ಬಾಲಾಜಿ ಮಾಧವನ್ ಹಾಗೂ ನಿರ್ಮಾಪಕರಾದ ಸಾಗರ್ , ಕೃಷ್ಣಕುಮಾರ್ ಮತ್ತು ಸೂರಜ್ ಶರ್ಮ ನೂತನ ಚಿತ್ರದ ಕುರಿತು ಮಾತನಾಡಿದ್ದಾರೆ. ಚಿತ್ರದ ಕಥೆ ಕೇಳಿ ಶಿವಣ್ಣ ಸಂತಸಗೊಂಡಿದ್ದಾರೆ. ಸದ್ಯದಲ್ಲೇ ಶೀರ್ಷಿಕೆಯನ್ನು ಅದ್ದೂರಿಯಾಗಿ ಅನಾವರಣಗೊಳಿಸುವ ಸಿದ್ದತೆ ನಡೆಸಿರುವ ನಿರ್ಮಾಪಕರು ಆ ಸಮಯದಲ್ಲೇ ಚಿತ್ರದ ಕುರಿತು ಹೆಚ್ಚಿನ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರದ ಶೀರ್ಷಿಕೆ ಏನೆಂದು ಜನರೆ ಊಹಿಸಲಿ ಎಂದು ಶಿವರಾಜಕುಮಾರ್ ಚಿತ್ರತಂಡಕ್ಕೆ…