ಕೆಲವರಿಗೆ ಕೆಲವು ವಿಷಯಗಳನ್ನು ಮರೆತುಬಿಡುವ ಅಭ್ಯಾಸವಿರುತ್ತದೆ, ಮತ್ತೊಂದೆಡೆ, ಕೆಲವರು ಆತುರದಲ್ಲಿದ್ದು ಮನೆಯಲ್ಲಿನ ಪ್ರಮುಖ ದಾಖಲೆಗಳನ್ನು ಮರೆತುಬಿಡುತ್ತಾರೆ. ಚಾಲನಾ ಪರವಾನಗಿ ಮತ್ತು ಆರ್‌ಸಿಯಂತಹ ಅಗತ್ಯ ದಾಖಲೆಗಳಿಲ್ಲದೆ ವಾಹನ ಚಲಾಯಿಸುವುದರಿಂದ ನಿಮಗೆ ತೊಂದರೆಯಾಗಬಹುದು ಎಂಬುದು ನಿಮಗೆ ಚೆನ್ನಾಗಿ ತಿಳಿದಿರಬೇಕು. ನೀವು ನಿಮ್ಮ ದಾಖಲೆಗಳನ್ನು ಮನೆಯಲ್ಲಿ ಮರೆತರೆ ಮತ್ತು ಪೊಲೀಸ್ ತಪಾಸಣೆಯ ಸಮಯದಲ್ಲಿ ನಿಲ್ಲಿಸಿದರೆ ನಿಮಗೆ ಸಂಚಾರ ಚಲನ್ ನೀಡಬಹುದು. ಆದರೆ ಚಲನ್ ತಪ್ಪಿಸಲು, ನೀವು ತಡಮಾಡದೆ ನಿಮ್ಮ ಫೋನ್‌ನಲ್ಲಿ ಎರಡು ಪ್ರಮುಖ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಮೊದಲ ಅಪ್ಲಿಕೇಶನ್‌ನ ಹೆಸರು ಡಿಜಿಲಾಕರ್. ಎರಡನೇ ಅಪ್ಲಿಕೇಶನ್ ಅನ್ನು mParivahan ಎಂದು ಕರೆಯಲಾಗುತ್ತದೆ. ಈ ಎರಡು ಅಪ್ಲಿಕೇಶನ್‌ಗಳು ಕಷ್ಟದ ಸಮಯದಲ್ಲಿ ನಿಮಗೆ ಸಹಾಯ ಮಾಡುತ್ತವೆ. ಈ ಅಪ್ಲಿಕೇಶನ್‌ಗಳು ನಿಮ್ಮನ್ನು ಚಲನ್ ಪಡೆಯುವುದರಿಂದ ಹೇಗೆ ರಕ್ಷಿಸುತ್ತವೆ ಎಂಬುದನ್ನು ಕಂಡುಹಿಡಿಯೋಣ. ಡಿಜಿಲಾಕರ್ ಆಪ್ ಹೇಗೆ ಸಹಾಯ ಮಾಡುತ್ತದೆ? ಈ ಸರ್ಕಾರಿ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿದ ನಂತರ, ನೀವು ಈ ಅಪ್ಲಿಕೇಶನ್‌ನಲ್ಲಿ ಚಾಲನಾ ಪರವಾನಗಿ, ವಾಹನ ಆರ್‌ಸಿ ಮತ್ತು ವಿಮೆಯಂತಹ ನಿಮ್ಮ…
Author: Author AIN
ಉದಯ ವಾಹಿನಿಯಲ್ಲಿ ಎರಡು ದಶಕಕ್ಕೂ ಹೆಚ್ಚು ಕಾಲ ’ಹಾಸ್ಯ ಲಾಸ್ಯ’ ಕಾಮಿಡಿ ಧಾರವಾಹಿಗಳನ್ನು ನೀಡಿ ವೀಕ್ಷಕರನ್ನು ರಂಜಿಸಿದ್ದ ಹೆಸರಾಂತ ಜೋಡಿಗಳಾದ ಡಾ.ಮುತ್ತುರಾಜ್.ಎಂ.ಎಸ್ ಮತ್ತು ಶ್ರೀಕಂಠ.ಬಿ.ಎ ಪ್ರೀತಿ ಪ್ರೇಮ ಪಂಗನಾಮ ಚಿತ್ರ ಮಾಡುವುದರೊಂದಿಗೆ ಬಹುಕಾಲದ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಸಿನಿಮಾವು ತೆರೆಗೆ ಬರಲು ಸನ್ನಿಹಿತವಾಗಿರುವುದರಿಂದ ಪ್ರಚಾರದ ಮೊದಲ ಹಂತವಾಗಿ ಟೀಸರ್ ಹಾಗೂ ಹಾಡುಗಳ ಬಿಡುಗಡೆ ಕಾರ್ಯಕ್ರಮ ಎಸ್‌ಆರ್‌ವಿ ಚಿತ್ರಮಂದಿರದಲ್ಲಿ ಅದ್ದೂರಿಯಾಗಿ ನಡೆಯಿತು. ರಿಯಲ್‌ದಲ್ಲಿ ಕ್ವೌರಿಕ. ರೀಲ್‌ದಲ್ಲಿ ಅದೇ ಪಾತ್ರ ನಿರ್ವಹಿಸಿರುವ ಡಾ.ಮುತ್ತುರಾಜ್.ಎಂ.ಎಸ್ ಮಾತನಾಡಿ ಮೂರು ದಶಕದ ಗೆಳೆಯ ಶ್ರೀಕಂಠ ಡೈರಕ್ಷನ್ ಮಾಡಲು ಆಸೆ ಪಟ್ಟದ್ದರು. ಅದರಂತೆ ನಾನು ಬಂಡವಾಳ ಹೂಡಿದ್ದೇನೆ ಎಂದರು. ಕಥೆ,ಚಿತ್ರಕತೆ ಬರೆದು ನಿರ್ದೇಶನ ಮಾಡಿರುವ ಶ್ರೀಕಂಠ.ಬಿ.ಎ ಹೇಳುವಂತೆ ಇಂದು ಆರು,ಮೂರು, ಎರಡು, ಒಂದು ತಿಂಗಳು. ಕೊನೆಗೆ ಮೂರೇ ದಿವಸಕ್ಕೆ ದುಡ್ಡು ಇಲ್ಲವೆ ಕೊಲೆಯಲ್ಲಿ ಅಂತ್ಯ ಕಾಣುತ್ತದೆ. ಬಟ್ಟೆ ಇಸ್ತ್ರೀ ಮಾಡುವ ರೋಲ್‌ಗೆ ಬಣ್ಣ ಹಚ್ಚಿದ್ದೇನೆ. ನಾವುಗಳು ಬಡತನದಿಂದ ಬಂದಿದ್ದರೂ, ನಮ್ಮ ಮಕ್ಕಳು ಹಾಗಾಗಬಾರದು. ಅವರನ್ನು ಶ್ರೀಮಂತರನ್ನಾಗಿ ಮಾಡಲು ಹೋದಾಗ ಹೇಗೆ…
ನಟ ದರ್ಶನ್ ಗೆ ಪ್ರಾಣಿ ಪಕ್ಷಿಗಳು ಅಂದ್ರೆ ಬಲು ಇಷ್ಟ. ಹೀಗಾಗಿ ಅವರ ಮೈಸೂರಿನ ವಿನೀಶ್ ಫಾರ್ಮ್ ಹೌಸ್ ನಲ್ಲಿ ಪ್ರಾಣಿಗಳು ಹಾಗೂ ಪಕ್ಷಿಗಳನ್ನು ಸಾಕಿದ್ದಾರೆ. ಅವುಗಳ ಲಾಲನೆ ಪಾಲನೆಯನ್ನೂ ಮಾಡುತ್ತಾ ಬಂದಿದ್ದಾರೆ. ಅಲ್ಲದೇ ದಾಸನ ಬಳಿ ಐಶಾರಾಮಿ ಕಾರುಗಳ ಸಂಗ್ರಹವೇ ಇದೆ. ಆದರೆ ಅವರು ಆಗಾಗ್ಗೆ ಟ್ರಾಕ್ಟರ್ , ಎತ್ತಿನ ಬಂಡಿ ಏರುವುದುಂಟು. ಈಗ ತಮ್ಮ ಫಾರ್ಮ್ ಹೌಸ್ ನಲ್ಲಿ ಬಂಡಿ ಏರಿ ಸವಾರಿ ಮಾಡಿದ್ದಾರೆ. ದರ್ಶನ್ ಮೈಸೂರಿನ ಫಾರ್ಮ್ ಹೌಸ್ ನಲ್ಲಿ ಬಂಡಿ ಏರಿರುವ ವಿಡಿಯೋ ವೈರಲ್ ಆಗುತ್ತಿದೆ. ಬಿಸಿಲಿ ತಾಪ ತಪ್ಪಿಸಿಕೊಳ್ಳಲು ಕ್ಯಾಪ್ ತೊಟ್ಟು ಸ್ವತಃ ತಾವೇ ಬಂಡಿ ಓಡಿಸಿ ದಾಸ ಖುಷಿ ಪಟ್ಟಿದ್ದಾರೆ. ಡೆವಿಲ್ ಶೂಟಿಂಗ್ ಬ್ಯುಸಿ ನಡುವೆ ದರ್ಶನ್ ತಮ್ಮ ಫಾರ್ಮ್ ಹೌಸ್ ನಲ್ಲಿ ಕಾಲ ಕಳೆಯುತ್ತಿದ್ದಾರೆ. ದರ್ಶನ್ ಸದ್ಯ ಡೆವಿಲ್ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಬೆಂಗಳೂರಿನಲ್ಲಿ ನಾಲ್ಕನೇ ಹಂತದ ಶೂಟಿಂಗ್ ನಡೆಯುತ್ತಿದೆ. ಮಿಲನಾ ಪ್ರಕಾಶ್ ನಿರ್ದೇಶನದಲ್ಲಿ ಚಿತ್ರ ಮೂಡಿ ಬರುತ್ತಿದ್ದು, ಈ ವರ್ಷವೇ ಡೆವಿಲ್…
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ಅಟ್ಟಹಾಸ ಅಟ್ಟಹಾಸಕ್ಕೆ ನೂರಾರು ಜೀವಗಳ ಉಸಿರು ಚೆಲ್ಲಿವೆ. ಈವರೆಗೆ 28 ಜನರು ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಕರ್ನಾಟಕದ ಬೆಂಗಳೂರು ಮೂಲದ ಭರತ್ ಭೂಷಣ್ ಹಾಗೂ ಶಿವಮೊಗ್ಗದ ಉದ್ಯಮಿ ಮಂಜುನಾಥ್ ಮೃತಪಟ್ಟಿದ್ದಾರೆ. ಉಗ್ರರು ನಡೆಸಿರುವ ಈ ಕೃತ್ಯವನ್ನು ಎಲ್ಲರೂ ತೀವ್ರವಾಗಿ ಖಂಡಿಸುತ್ತಿದ್ದಾರೆ. ರಾಜಕಾರಣಿಗಳಿಂದ ಹಿಡಿದು ಸಿನಿಮಾತಾರೆಯರು ಆಕ್ರೋಶ ಹೊರಹಾಕುತ್ತಿದ್ದಾರೆ. ನಟ ಶಿವರಾಜ್ ಕುಮಾರ್ ಉಗ್ರರ ದಾಳಿಯನ್ನು ಕಠುವಾಗಿ ಖಂಡಿಸಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಶಿವಣ್ಣ, “ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ನಡೆದಿರುವ ಉಗ್ರರ ದಾಳಿಯನ್ನ ತೀವ್ರವಾಗಿ ಖಂಡಿಸುತ್ತೇನೆ. ಶಾಂತಿ ಸೌಹಾರ್ದದ ಭಾರತದಲ್ಲಿ ಇಂತಹ ಕೃತ್ಯಗಳು ಮರುಕಳಿಸದಿರಲಿ. ಹಾಗೆಯೇ ಈ ಕೃತ್ಯ ಎಸಗಿದವರಿಗೆ ಕಠಿಣ ಶಿಕ್ಷೆ ಆಗಲಿ ಮತ್ತು ನಮ್ಮನ್ನು ಅಗಲಿದ ಎಲ್ಲಾ ಭಾರತೀಯರಿಗೆ ಭಾವಪೂರ್ಣ ಶ್ರದ್ಧಾಂಜಲಿ ಕೋರುತ್ತಾ ಎಲ್ಲಾ ಕುಟುಂಬಸ್ಥರಿಗೆ ಈ ದುಃಖವನ್ನು ಭರಿಸುವ ಶಕ್ತಿ ಹಾಗೂ ಧೈರ್ಯವನ್ನು ದೇವರು ನೀಡಲಿ. ಈ ಪೈಶಾಚಿಕ ಕೃತ್ಯ ಎಸಗುವವರ ವಿರುದ್ಧದ ಸರ್ಕಾರದ ಹೋರಾಟಕ್ಕೆ…
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದು ಕೊಲೆ ಆರೋಪಿ ದರ್ಶನಗ ಸದ್ಯ ಹೊರಗಡೆ ಇದ್ದಾರೆ. ಆದರೂ ದಾಸನಿಗೆ ಇನ್ನೂ ಟೆನ್ಷನ್ ತಪ್ಪಿಲ್ಲ. ಯಾಕೆಂದರೆ ದರ್ಶನ್ ಜಾಮೀನು ಪ್ರಶ್ನಿಸಿ ರಾಜ್ಯ ಪೊಲೀಸರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಆ ವಿಚಾರಣೆ ನಿನ್ನೆ (ಏ. 22ರಂದು) ನಡೆದಿದೆ. ರಾಜ್ಯ ಪೊಲೀಸ್ ಪರ ದರ್ಶನ್ ಅವರ ಜಾಮೀನು ರದ್ದುಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ನಲ್ಲಿ ವಕೀಲ ಸಿದ್ದಾರ್ಥ್ ಲೂಥ್ರಾ ವಾದ ಮಾಡಿದ್ದಾರೆ. ದರ್ಶನ್ ಪರ ವಕೀಲ ಮನು ಸಿಂಘ್ವಿ ವಾದ ಮಾಡಿದ್ದಾರೆ. ನಿನ್ನೆ ನಡೆದ ವಿಚಾರಣೆ ವೇಳೆ ದರ್ಶನ್ ಮತ್ತು ಪವಿತ್ರಾ ಗೌಡ ಸಂಬಂಧದ ಕುರಿತು ಚರ್ಚೆಯಾಗಿದೆ. ದರ್ಶನ್‌ಗೆ ಮದುವೆ ಆಗಿದೆಯೇ ? ಪವಿತ್ರಾ ಗೌಡ ದರ್ಶನ್ ಪತ್ನಿಯೇ ಎಂಬ ಪ್ರಶ್ನೆಯನ್ನು ನ್ಯಾಯಾಧೀಶರು ಕೇಳಿದ್ದಾರೆ. ಇದಕ್ಕೆ ಸರ್ಕಾರದ ಪರ ವಕೀಲರಾದ ಸಿದ್ಧಾರ್ಥ್ ಲೂಥ್ರಾ ಅಚ್ಚರಿಯ ಉತ್ತರ ಕೊಟ್ಟಿದ್ದಾರೆ. ಸಿದ್ದಾರ್ಥ್ ಲೂಥ್ರಾ ಸುಪ್ರೀಂ ಕೋರ್ಟ್ನಲ್ಲಿ ದರ್ಶನ್-ಪವಿತ್ರಾ ಗೌಡ ಸಂಬಂಧ ವಿವರಿಸುವಾಗ ಮಿಸ್ಟ್ರೆಸ್ಟ್ ಎಂಬ ಪದವನ್ನು ಬಳಸಿದ್ದಾರೆ. ಮಿಸ್ಟ್ರೆಸ್ ಎಂದರೆ…
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಶಿವಮೊಗ್ಗದ ಪ್ರವಾಸಿಯೊಬ್ಬರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪ್ರವಾಸಕ್ಕೆ ತೆರಳಿದ್ದ ಶಿವಮೊಗ್ಗದ ಮೂಲದ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ರಾವ್ (47) ಮೃತ ಪಟ್ಟಿದ್ದಾರೆ. https://ainkannada.com/do-you-want-to-always-look-young-then-follow-these-tips/ ಶಿವಮೊಗ್ಗದ ವಿಜಯನಗರ ನಿವಾಸಿಯಾಗಿರುವ ಮಂಜುನಾಥ್ ಅವರು ಪತ್ನಿ ಪಲ್ಲವಿ ಹಾಗೂ ಪುತ್ರ ಅಭಿಜೇಯ ಜೊತೆ ಪ್ರವಾಸಕ್ಕೆ ಹೋಗಿದ್ದರು. ಏ.19 ರಂದು ಶಿವಮೊಗ್ಗದಿಂದ ಕಾಶ್ಮೀರ ಪ್ರವಾಸಕ್ಕೆ ಮಂಜುನಾಥ್ ಕುಟುಂಬಸ್ಥರು ತೆರಳಿದ್ದರು. ದಾಳಿಯಲ್ಲಿ ಸ್ಥಳದಲ್ಲೇ ಮಂಜುನಾಥ್ ರಾವ್ ಸಾವನ್ನಪ್ಪಿದ್ದಾರೆ. ಮಂಜುನಾಥ್ ಪತ್ನಿ ಹಾಗೂ ಪುತ್ರರನ್ನ ರಕ್ಷಿಸಿ ಸ್ಥಳೀಯರು ಬೇರೆಡೆ ಕರೆದುಕೊಂಡು ಬಂದಿದ್ದಾರೆ.
ಐಪಿಎಲ್ 2025 ಸೀಸನ್ ಪ್ರೇಕ್ಷಕರಿಗೆ ರೋಮಾಂಚಕ ಪಂದ್ಯಗಳನ್ನು ಮಾತ್ರವಲ್ಲದೆ, ಮೈದಾನದ ಹೊರಗೆ ಕೆಲವು ಹಾಸ್ಯಮಯ ಕ್ಷಣಗಳನ್ನು ಸಹ ನೀಡುತ್ತಿದೆ. ಭಾರತದ ಮಾಜಿ ಕ್ರಿಕೆಟಿಗರಾದ ಶಿಖರ್ ಧವನ್ ಮತ್ತು ಅಂಬಟಿ ರಾಯುಡು ನೇರ ವ್ಯಾಖ್ಯಾನಕಾರರ ಸಮಯದಲ್ಲಿ ಪರದೆಯನ್ನು ಹಂಚಿಕೊಂಡಾಗ ಅಂತಹ ಒಂದು ತಮಾಷೆಯ ಘಟನೆ ಸಂಭವಿಸಿತು. ಅವರಿಬ್ಬರೂ ಪರದೆಯ ಮೇಲೆ ಒಟ್ಟಿಗೆ ವ್ಯಾಖ್ಯಾನಕಾರರಾಗಿ ಕಾಣಿಸಿಕೊಂಡರು ಮತ್ತು ಅವರ ನಡುವಿನ ಮೋಜಿನ ಸಂಭಾಷಣೆ ಅಭಿಮಾನಿಗಳನ್ನು ಮೆಚ್ಚಿಸಿತು. ನಿರ್ದಿಷ್ಟವಾಗಿ ಹೇಳುವುದಾದರೆ, ಧವನ್ ತಮಾಷೆಯ ಹಾಸ್ಯವನ್ನು ಹೇಳಿದಾಗ “ರಾಯುಡು ನಮಗೆ ವಿಶ್ವಕಪ್ ಅನ್ನು ಕಳೆದುಕೊಂಡರು” ಎಂದು ಹೇಳಿದ ತಮಾಷೆಯ ಕಾಮೆಂಟ್ ಆ ಕ್ಷಣವನ್ನು ಇನ್ನಷ್ಟು ತಮಾಷೆಯನ್ನಾಗಿ ಮಾಡಿತು. https://ainkannada.com/do-you-want-to-always-look-young-then-follow-these-tips/ ಇದು 2004 ರ U19 ವಿಶ್ವಕಪ್‌ನ ಸಿಹಿ ನೆನಪನ್ನು ಮರಳಿ ತಂದಿತು. ಆ ಪಂದ್ಯಾವಳಿಯಲ್ಲಿ ರಾಯುಡು ನಾಯಕರಾಗಿದ್ದರೆ, ಧವನ್ ತಂಡದ ಸದಸ್ಯರಾಗಿದ್ದರು. ಸೆಮಿಫೈನಲ್ ಪಂದ್ಯಕ್ಕೂ ಮುನ್ನ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ರಾಯುಡು ಅವರನ್ನು ನಿಷೇಧಿಸಲಾಗಿತ್ತು, ಇದು ಭಾರತ ತಂಡದ ಸೋಲಿಗೆ ಕಾರಣವಾಯಿತು ಎಂದು ಧವನ್ ತಮಾಷೆಯಾಗಿ ನೆನಪಿಸಿಕೊಂಡರು.…
ಬೆಂಗಳೂರು: ರಸ್ತೆಯಲ್ಲಿ ವಾಹನ ಹಿಂದಿಕ್ಕುವ ವಿಚಾರವಾಗಿ ಸಿಟ್ಟಿಗೆದ್ದು ಭಾರತೀಯ ವಾಯು ದಳದ ವಿಂಗ್ ಕುಮಾಂಡರ್ ಹಾಗೂ ಬೈಕ್ ಸವಾರ ಪರಸ್ಪರ ಬಡಿದಾಡಿಕೊಂಡಿರುವ ಘಟನೆ ಬೈಯಪ್ಪನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇನ್ನೂ ಈ ವಿಚಾರವಾಗಿ ಗೃಹ ಸಚಿವ ಡಾ. ಜಿ ಪರಮೇಶ್ವರ್ ಪ್ರತಿಕ್ರಿಯೇ ನೀಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಬೈಕ್ ಸವಾರನ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ ಐ ಆರ್ ದಾಖಲಾಗಿದೆ. ಹಲ್ಲೆಗೆ ಒಳಗಾದ ಯುವಕ ಕೂಡ ದೂರು ನೀಡಿದ್ದಾನೆ. ಹಲ್ಲೆ ಮಾಡಿದ ವಿಂಗ್‌ಕಮಾಂಡರ್ ವೆಸ್ಟ್ ಬೆಂಗಾಲ್ ಮೂಲದವನು. ಸದ್ಯ ಆತ ನಾಪತ್ತೆ ಆಗಿದ್ದಾನೆ’ ಎಂದರು. https://ainkannada.com/do-you-want-to-always-look-young-then-follow-these-tips/ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಎಂಬಾತ ಕಾರಿಗೆ ಬೈಕ್ ಡಿಕ್ಕಿ ಹೊಡೆದ ಕಾರಣಕ್ಕಾಗಿ ತಗಾದೆ ತೆಗೆದು ಬೈಕ್ ಸವಾರನ ಮೇಲೆ ಹಲ್ಲೆ ಮಾಡಿದ್ದ. ಬಳಿಕ ವಿಡಿಯೋ ಮಾಡಿ ಬೈಕ್ ಸವಾರನ ವಿರುದ್ಧ ಆರೋಪ ಮಾಡಿದ್ದ. ಅಲ್ಲದೆ ಕನ್ನಡ ಮಾತನಾಡಲಿಲ್ಲ ಎಂಬ ಕಾರಣಕ್ಕಾಗಿ ಹಲ್ಲೆ ಮಾಡಲಾಗಿದೆ ಎಂದೂ ಆರೋಪಿಸಿದ್ದನು. ಆದರೆ ಈ ಘಟನೆ…
ಐಪಿಎಲ್ 2025 ರ 40 ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಲಕ್ನೋ ಸೂಪರ್‌ಜೈಂಟ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯ ಲಕ್ನೋದ ಏಕಾನಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಅಭಿಮಾನಿಗಳು ವಿಶಿಷ್ಟ ಹೋರಾಟವನ್ನು ನೋಡಲಿದ್ದಾರೆ. ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ನ ಸ್ಟಾರ್ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ತಮ್ಮ ಹಳೆಯ ತಂಡ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸೆಣಸಲಿದ್ದಾರೆ. https://ainkannada.com/do-you-want-to-always-look-young-then-follow-these-tips/ ಕಳೆದ ಋತುವಿನಲ್ಲಿ ಕೆಎಲ್ ರಾಹುಲ್ ಲಕ್ನೋ ಸೂಪರ್‌ಜೈಂಟ್ಸ್ ತಂಡದ ನಾಯಕರಾಗಿದ್ದರು. ಆದರೆ, ಮುಂಬರುವ ಋತುವಿಗೆ ಫ್ರಾಂಚೈಸಿ ಅವರನ್ನು ಉಳಿಸಿಕೊಳ್ಳಲಿಲ್ಲ. ಕಳೆದ ಋತುವಿನಲ್ಲಿ ಕೆಎಲ್ ರಾಹುಲ್ ಮತ್ತು ಎಲ್‌ಎಸ್‌ಜಿ ತಂಡದ ಮಾಲೀಕ ಸಂಜೀವ್ ಗೋಯೆಂಕಾ ನಡುವಿನ ವಿವಾದ ಉಂಟಾಗಿತ್ತು ಎಂದು ತಿಳಿದಿದೆ. ಕೆ.ಎಲ್. ರಾಹುಲ್ ಮತ್ತು ಸಂಜೀವ್ ಗೋಯೆಂಕಾ ಅವರ ವಾದ.. ಕಳೆದ ಋತುವಿನಲ್ಲಿ ಲಕ್ನೋ ತಂಡದ ಸೋಲಿನ ನಂತರ ಕೆಎಲ್ ರಾಹುಲ್ ಜೊತೆ ತೀವ್ರ ವಾಗ್ವಾದಕ್ಕಿಳಿದು ಲಕ್ನೋ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಸುದ್ದಿಯಲ್ಲಿದ್ದರು. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಹೀನಾಯ ಸೋಲಿನ ನಂತರ…
ಬೆಂಗಳೂರು: ಶಾಸಕರ ಕೈಗೆ ಜಾತಿಗಣತಿ ವರದಿ ಪ್ರತಿ ಸಿಕ್ಕಿದ ಮೇಲೆ ಸರಿ, ತಪ್ಪು ಪರಾಮರ್ಶೆ ಮಾಡುತ್ತೇವೆ ಎಂದು ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಲಿಂಗಾಯತರು, ವೀರಶೈವ ಲಿಂಗಾಯತರು ಅಂತಿದೆ. ಈ ವೀರಶೈವ ಲಿಂಗಾಯತರಲ್ಲಿ ಬಹಳ ಉಪಜಾತಿಗಳಿವೆ ಅಂದಿದ್ದರು. ಜಾತಿ ಜನಗಣತಿ ವರದಿ ಶಾಸಕರ ಕೈ ಸೇರಿಲ್ಲ. ಸಚಿವರಿಗೆ ಒಂದೊಂದು ಕಾಪಿ ಸಿಕ್ಕಿದೆ, ಅವರ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಶಾಸಕರ ಕೈಗೆ ಪ್ರತಿ ಸಿಕ್ಕಿದ ಮೇಲೆ ಸರಿ, ತಪ್ಪು ಪರಾಮರ್ಶೆ ಮಾಡುತ್ತೇವೆ. ನಮ್ಮ ಕ್ಷೇತ್ರದಲ್ಲಿ ಯಾವ ಜನಸಂಖ್ಯೆ ಎಷ್ಟಿದೆ? ಎಂದು ನಮಗೆ ಗೊತ್ತಿರುತ್ತದೆ. https://ainkannada.com/do-you-want-to-always-look-young-then-follow-these-tips/ ಚುನಾವಣೆಗಳನ್ನು ಮಾಡಿರುತ್ತೇವೆ, ಮನೆ ಮನೆಗೆ ಹೋಗಿರುತ್ತೇವೆ. ಯಾರು ಯಾವ ಜಾತಿ ಎನ್ನುವ ಸಂಪೂರ್ಣ ಮಾಹಿತಿ ಶಾಸಕರಿಗೆ ಇರುತ್ತದೆ. ಜಾತಿ ಜನಗಣತಿ ವರದಿ ಕೈಗೆ ಬಂದರೆ, ಹೋಲಿಕೆ ಮಾಡಿ ನೋಡುತ್ತೇವೆ. ಪ್ರತಿಯೊಬ್ಬ ಶಾಸಕರಿಗೂ ಒಂದೊಂದು ಜಾತಿಗಣತಿ ವರದಿ ಪ್ರತಿ ಕೊಡಬೇಕೆಂದು ಒತ್ತಾಯಿಸಿದರು.