ನವದಹೆಲಿ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಉಗ್ರರ ದಾಳಿ ದೇಶವನ್ನೇ ಬೆಚ್ಚಿ ಬೀಳಿಸಿದೆ. ಅಮಾಯಕ ಪ್ರವಾಸಿಗರ ಮೇಲೆ ನಡೆದ ಈ ನೀಚ ಕೃತ್ಯ ದೇಶವಾಸಿಗಳ ರಕ್ತ ಕುದಿಯುವಂತೆ ಮಾಡಿದೆ. ಇದೀಗ ಎನ್ಐಎ ಮತ್ತು ವಿಧಿವಿಜ್ಞಾನ ತಂತ್ರಜ್ಞರಿಂದ ಶಂಕಿತ ಮೂವರು ಉಗ್ರರ ರೇಖಾಚಿತ್ರ ಬಿಡುಗಡೆ ಮಾಡಲಾಗಿದೆ. ಒಟ್ಟು ಐವರು ಉಗ್ರರು ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿದ್ದರು. https://ainkannada.com/fine-for-not-wearing-a-helmet-these-tips-are-mandatory-when-buying/ ಪ್ರವಾಸಿಗರು ಮತ್ತು ಪ್ರತ್ಯಕ್ಷದರ್ಶಿಗಳು ನೀಡಿದ ಮಾಹಿತಿ ಆಧಾರದ ಮೇಲೆ ರೇಖಾಚಿತ್ರ ಸಿದ್ಧಪಡಿಸಲಾಗಿದೆ. ಈ ದಾಳಿಯಲ್ಲಿ ಒಟ್ಟು 26 ಪುರುಷ ಪ್ರವಾಸಿಗರು ಮೃತರಾಗಿದ್ದಾರೆ. ಉಗ್ರರ ದಾಳಿಯ ವಿಷಯ ತಿಳಿಯುತ್ತಿದ್ದಂತೆ ಸೌದಿ ಅರೇಬಿಯಾ ಪ್ರವಾಸ ಮೊಟಕುಗೊಳಿಸಿ ಭಾರತಕ್ಕೆ ಹಿಂದಿರುಗಿದ್ದಾರೆ. ಭಾರತಕ್ಕೆ ಬರುತ್ತಿದ್ದಂತೆ ನವದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೇ ಪ್ರಧಾನಿ ಮೋದಿಯವರು ಸಚಿವರು ಮತ್ತು ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ ಘಟನೆಯ ಕುರಿತ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದಾರೆ. ಇಂದು ಸಂಜೆ ಪ್ರಧಾನಿಗಳ ನಿವಾಸದಲ್ಲಿ ಸಂಪುಟ ಸಚಿವರೊಂದಿಗೆ ಸಭೆ ನಡೆಸಲಿದ್ದಾರೆ.
Author: Author AIN
ಭಾರತದಲ್ಲಿ ಚಿನ್ನದ ಬೆಲೆ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪುತ್ತಿದೆ. ವಿಶ್ವದ ಅತಿದೊಡ್ಡ ಆರ್ಥಿಕತೆಯಾಗಿರುವ ಚೀನಾ, ನಾವೀನ್ಯತೆಯ ವಿಷಯದಲ್ಲಿಯೂ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಆಭರಣ ಅಂಗಡಿಗಳು ಮತ್ತು ಇತರ ಸಾಲ ನೀಡುವ ಸಂಸ್ಥೆಗಳಲ್ಲಿ ಜನರು ಚಿನ್ನಕ್ಕೆ ಬದಲಾಗಿ ಹಣವನ್ನು ತೆಗೆದುಕೊಳ್ಳುವುದನ್ನು ನೀವು ಸಾಮಾನ್ಯವಾಗಿ ನೋಡುತ್ತೀರಿ. ಆದರೆ ನೀವು ಎಂದಾದರೂ ಚಿನ್ನದ ಎಟಿಎಂ ಬಗ್ಗೆ ಕೇಳಿದ್ದೀರಾ ಅಥವಾ ನೋಡಿದ್ದೀರಾ? ಚೀನಾದ ಅತಿದೊಡ್ಡ ನಗರವಾದ ಶಾಂಘೈನಲ್ಲಿರುವ ದೊಡ್ಡ ಶಾಪಿಂಗ್ ಮಾಲ್‌ನಲ್ಲಿ ಇದೇ ರೀತಿಯದ್ದು ಕಂಡುಬಂದಿದೆ. ಇದು ಶಾಂಘೈನಲ್ಲಿ ಮೊದಲ ಚಿನ್ನದ ಎಟಿಎಂ ಆಗಿದೆ. ಈ ಎಟಿಎಂ ಜನರ ಆಕರ್ಷಣೆಯ ಕೇಂದ್ರವಾಗಿದೆ. https://ainkannada.com/fine-for-not-wearing-a-helmet-these-tips-are-mandatory-when-buying/ 1,200°C ನಲ್ಲಿ ಚಿನ್ನ ಕರಗುವಿಕೆ: ಈ ಎಟಿಎಂ 1,200 ಡಿಗ್ರಿ ಸೆಲ್ಸಿಯಸ್‌ನಲ್ಲಿ ಚಿನ್ನವನ್ನು ಕರಗಿಸುತ್ತದೆ ಮತ್ತು ಚಿನ್ನದ ಶುದ್ಧತೆಯನ್ನು ಅದರ ನೇರ ಬೆಲೆಯೊಂದಿಗೆ ಪ್ರದರ್ಶಿಸುತ್ತದೆ. ಇದಾದ ನಂತರ, ದರಕ್ಕೆ ಅನುಗುಣವಾಗಿ ಎಟಿಎಂನಿಂದ ನಗದು ಹೊರಬರುತ್ತದೆ. ಇದರ ಮೂಲಕವೂ ನೀವು ಬ್ಯಾಂಕಿನಿಂದ ಹಣವನ್ನು ವರ್ಗಾಯಿಸಬಹುದು. ಈ ಎಟಿಎಂ ಗ್ರಾಹಕರಲ್ಲಿ ಬಹಳ ಜನಪ್ರಿಯವಾಗಿದೆ. ಈ ಎಟಿಎಂನಿಂದ…
ಸ್ಯಾಂಡಲ್‌ವುಡ್ ನಟಿ ಅರ್ಚನಾ ಕೊಟ್ಟಿಗೆ ಸ್ಟಾರ್ ಕ್ರಿಕೆಟರ್ ಶರತ್ ಬಿಆರ್ ಹೊಸ ಬಾಳಿಗೆ ಹೆಜ್ಜೆ ಇಟ್ಟಿದ್ದಾರೆ. ಎಂಟು ವರ್ಷದ ಪ್ರೀತಿಗೆ ಈ ಜೋಡಿ ಇಂದು ಮದುವೆ ಮುದ್ರೆ ಒತ್ತಿದೆ. ಕನಕಪುರ ರೋಡ್ ಖಾಸಗಿ ರೆಸಾರ್ಟ್ ವೊಂದರಲ್ಲಿ ಅರ್ಚನಾ-ಶರತ್ ಕಲ್ಯಾಣೋತ್ಸವ ನಡೆದಿದೆ. ನಿನ್ನೆ ರಾತ್ರಿ ನಡೆದ ಅದ್ಧೂರಿ ಆರತಕ್ಷತೆಯಲ್ಲಿ ಕನ್ನಡ ಚಿತ್ರರಂಗದ ತಾರೆಯರು ಹಾಗೂ ಕ್ರಿಕೆಟರ್ ಗಳು ಈ ನವ ಜೋಡಿಗೆ ಶುಭ ಹಾರೈಸಿದ್ದಾರೆ. ರಿಸೆಪ್ಷನ್‌ಗೆ ಸುದೀಪ್ ಪುತ್ರಿ ಸಾನ್ವಿ ಸುದೀಪ್, ನಟಿ ಹಿತಾ ದಂಪತಿ , ಸಾನ್ಯಾ ಅಯ್ಯರ್, ಸಪ್ತಮಿ ಗೌಡ, ಆಶಿಕಾ ರಂಗನಾಥ್, ಅಮೃತಾ ಅಯ್ಯಂಗರ್, ಯುವರಾಜ್ ಕುಮಾರ್ ಸೇರಿದಂತೆ ಅನೇಕ ನಟ, ನಟಿಯರು, ಭಾಗಿಯಾಗಿದ್ದಾರೆ. ಕ್ರಿಕೆಟರ್ ಗಳಾದ ದೇದವತ್ ಪಡಿಕಲ್, ಪ್ರಸಿದ್ಧ್ ಕೃಷ್ಣ ಸೇರಿದಂತೆ ಹಲವರು ಅರ್ಚನಾ ಶರತ್ ಆರತಕ್ಷತೆಯಲ್ಲಿ ಭಾಗಿಯಾಗಿ ನಟ ಜೋಡಿಗೆ ಶುಭ ಹಾರೈಸಿದ್ದಾರೆ. ಶರತ್ ಹಿನ್ನೆಲೆ! ಶರತ್ ಅವರು 2018ರಲ್ಲಿ ಕೋಲ್ಕತ್ತಾದಲ್ಲಿ ಜಾರ್ಖಂಡ್ ವಿರುದ್ಧ ಕರ್ನಾಟಕ ಪರ ಟ್ವೆಂಟಿ20 ಪಂದ್ಯಕ್ಕೆ ಶರತ್ ಪಾದಾರ್ಪಣೆ ಮಾಡಿದರು.…
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯು ಭಾರತವನ್ನು ಮಾತ್ರವಲ್ಲದೆ ಇಡೀ ಜಗತ್ತನ್ನು ಬೆಚ್ಚಿಬೀಳಿಸಿದೆ. ಈ ದಾಳಿಯಲ್ಲಿ ಅನೇಕ ಪ್ರವಾಸಿಗರು ಸಾವನ್ನಪ್ಪಿದರು. ಅನೇಕ ಜನರು ಗಂಭೀರವಾಗಿ ಗಾಯಗೊಂಡರು. ಈ ಹಿನ್ನೆಲೆಯಲ್ಲಿ ಸಚಿವ ಅಮಿತ್ ಶಾ ಕಾಶ್ಮೀರ ತಲುಪಿದ್ದಾರೆ. ಅಲ್ಲದೆ, ಅಮೆರಿಕ ಅಧ್ಯಕ್ಷ ಟ್ರಂಪ್ ಮತ್ತು ಪ್ರಧಾನಿ ಮೋದಿ ನಡುವೆ ದೂರವಾಣಿ ಸಂಭಾಷಣೆ ನಡೆಯಿತು. ಟ್ರಂಪ್ ಈ ದಾಳಿಯನ್ನು ಖಂಡಿಸಿದರು. ಮೃತರ ಕುಟುಂಬಗಳಿಗೆ ತೀವ್ರ ಸಂತಾಪ ಸೂಚಿಸಲಾಗಿದೆ. ಈ ಸಮಯದಲ್ಲಿ ಪ್ರಧಾನಿ ಮೋದಿ ಮತ್ತು ಭಾರತದ ಜನರೊಂದಿಗೆ ನಿಲ್ಲುವುದಾಗಿ ಅಮೆರಿಕ ಅಧ್ಯಕ್ಷರು ಹೇಳಿದರು. ರಷ್ಯಾ ಅಧ್ಯಕ್ಷ ಪುಟಿನ್ ಕೂಡ ಭಾರತದ ಬೆಂಬಲಕ್ಕೆ ನಿಂತರು. https://ainkannada.com/fine-for-not-wearing-a-helmet-these-tips-are-mandatory-when-buying/ ಈ ಘಟನೆಗೆ ಕಾರಣರಾದವರನ್ನು ಶಿಕ್ಷಿಸಬೇಕು ಎಂದು ಪುಟಿನ್ ಹೇಳಿದರು. ಭಾರತ ಭೇಟಿಯಲ್ಲಿರುವ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಕೂಡ ಈ ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ. ರಾಹುಲ್ ಗಾಂಧಿ ಭಯೋತ್ಪಾದಕ ದಾಳಿಯನ್ನು ಹೇಡಿತನದ ಕೃತ್ಯ ಎಂದು ಕರೆದರು. ಮೃತರ ಕುಟುಂಬಗಳಿಗೆ ಸೋನಿಯಾ ಗಾಂಧಿ ಸಂತಾಪ ಸೂಚಿಸಿದ್ದಾರೆ.…
ಕಲಘಟಗಿ: ತಾಲೂಕಿನ ದುಮ್ಮವಾಡ ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಸಾರಾಯಿ ಮಾರಾಟ ತಡೆಗಟ್ಟಲು ಆಗ್ರಹಿಸಿ ಗ್ರಾಮ ಪಂಚಾಯತ್ ಮತ್ತು ತಾಲೂಕು ಅಬಕಾರಿ ಇಲಾಖೆಗೆ ಜನಹೋರಾಟ ಸಮಿತಿಯಿಂದ ಮನವಿ ಸಲ್ಲಿಸಲಾಯಿತು. https://ainkannada.com/fine-for-not-wearing-a-helmet-these-tips-are-mandatory-when-buying/ ಈ ವೇಳೆ ಮಾತನಾಡಿದ ಸಮಿತಿ ಸದಸ್ಯರು, ಗ್ರಾಮದಲ್ಲಿ ಬೀದಿಗೊಂದು ಅಕ್ರಮ ಸಾರಾಯಿ ಅಂಗಡಿಗಳು ತೆರೆದುಕೊಂಡಿವೆ. ಮನೆಗಳಲ್ಲಿ, ಪೆಟ್ಟಿಗೆ ಅಂಗಡಿಗಳಲ್ಲಿ ಮತ್ತು ಕಿರಾಣಿ ಅಂಗಡಿ ಗಳಲ್ಲಿ ಸಾರಾಯಿ ಇಟ್ಟು ಮಾರುತ್ತಿರುವುದು ಕಂಡುಬಂದಿದೆ. ಅಬಕಾರಿ ಇಲಾಖೆ ಅದನ್ನು ತಡೆಗಟ್ಟದೇ ಇರುವುದು ಗ್ರಾಮಸ್ಥರಿಗೆ ಬೇಸರವುಂಟುಮಾಡಿದೆ ಎಂದರು. ತಾಲೂಕಿನದುಮ್ಮವಾಡಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಎಷ್ಟೋ ಕುಟುಂಬಗಳನ್ನು ಸಾರಾಯಿ ಬೀದಿಗೆ ತಳ್ಳಿದೆ. ಆಘಾತದ ಅಂಶವೆಂದರೆ ಊರಿನಲ್ಲೇ ಸುಲಭವಾಗಿ ಸಾರಾಯಿ ಸಿಗುತ್ತಿರುವುದರಿಂದ ಅಪ್ರಾಪ್ತ ಬಾಲಕರು ಕುಡಿತದ ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆ. ಕುಡಿತ ಮತ್ತಿನಲ್ಲಿ ಮನೆಯಲ್ಲಿನ ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ಇದರಿಂದ ಸಂಸಾರಗಳಲ್ಲಿ ಬಿರುಕುಂಟಾಗಿ ಕುಟುಂಬಗಳು ನಾಶವಾಗಿವೆ. ಈ ಕೂಡಲೇ ಗ್ರಾಮದಲ್ಲಿನ ಅಕ್ರಮ ಸಾರಾಯಿ ಮಾರಾಟ ತಡೆಗಟ್ಟಬೇಕೆಂದು ಎಂದರು. ಈ ಸಂದರ್ಭದಲ್ಲಿ ಜನ ಹೋರಾಟ ಸಮಿತಿಯ ಸದಸ್ಯರಾದ ಮಧುಲತಾ ಗೌಡರ್, ದೇವಮ್ಮ ದೇವತ್ಕಲ್,…
ನವದೆಹಲಿ: ದಕ್ಷಿಣ ಕಾಶ್ಮೀರದ ಪಹಲ್ಗಾಮ್ ಜಿಲ್ಲೆಯ ಬೈಸರನ್ ಹಲ್ಲುಗಾವಲು ಪ್ರದೇಶದಲ್ಲಿ ಕುಟುಂಬ ಸದಸ್ಯರೊಂದಿಗೆ ಕಾಲ ಕಳೆಯುತ್ತಿದ್ದ ಪ್ರವಾಸಿಗರನ್ನು ಗುರಿಯಾಗಿಸಿ ನಡೆಸಿದ ದಾಳಿಯಲ್ಲಿ ಇಬ್ಬರು ಕನ್ನಡಿಗರು ಸೇರಿದಂತೆ 28 ಜನರು ಸಾವನ್ನಪ್ಪಿದ್ದಾರೆ. ಇನ್ನೂ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ದಾಳಿಯ ಬಗ್ಗೆ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. https://ainkannada.com/fine-for-not-wearing-a-helmet-these-tips-are-mandatory-when-buying/ “ಘಟನೆ ಬಗ್ಗೆ ಗೃಹ ಮಂತ್ರಿ ಅಮಿತ್ ಶಾ ಅವರೊಂದಿಗೆ ಮಾತನಾಡಿದೆ. ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹಾಗೂ ಜಮ್ಮು ಮತ್ತು ಕಾಶ್ಮೀರ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ತಾರಿಕ್ ಕರ್ರಾ ಅವರಿಂದ ಮಾಹಿತಿ ಪಡೆದಿದ್ದೇನೆ. ಭಯಾನಕ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಸದ್ಯದ ಪರಿಸ್ಥಿತಿ ಬಗ್ಗೆ ವಿಷಯ ತಿಳಿದಿದ್ದೇನೆ. ” ಘಟನೆಯಲ್ಲಿ ಪ್ರಾಣ ಕಳೆದುಕೊಂಡ ಕುಟುಂಬಗಳಿಗೆ ನ್ಯಾಯ ಸಿಗಬೇಕು. ನಮ್ಮ ಸಂಪೂರ್ಣ ಬೆಂಬಲ ಅವರಿಗಿರಬೇಕು” ಎಂದು ಘಟನೆ ಕುರಿತಂತೆ ಇಂದು ಬೆಳಗ್ಗೆ 6:30 ರ ಸುಮಾರಿಗೆ ಸಾಮಾಜಿಕ ಜಾಲತಾಣದಲ್ಲಿ ಎಕ್ಸ್‌ನಲ್ಲಿ ಅವರು ಪೋಸ್ಟ್ ಮಾಡಿದ್ದಾರೆ.
ಯುವ ಉದ್ಯಮಿ ಎಸ್.ಭರತ್ ಕುಮಾರ್ ಒಡೆತನದ ಬೆನಕ ಗೋಲ್ಡ್ ಪ್ರೈ.ಲಿಗೆ ಚಂದನವನದ ಮುದ್ದಿನ ರಾಕ್ಷಸಿ, ಕೆಡಿ ಲೇಡಿ ನಟಿ ರೀಷ್ಮಾ ನಾಣಯ್ಯ ನೂತನ ಬ್ಯ್ರಾಂಡ್ ಅಂಬಾಸಿಡರ್ ಆಗಿ ನೇಮಕಗೊಂಡಿದ್ದಾರೆ. ಇತ್ತೀಚೆಗೆ ಬೆಂಗಳೂರು ಪ್ರೆಸ್ ಕ್ಲಬ್‌ದಲ್ಲಿ ನಡೆದ ಸಮಾರಂಭದಲ್ಲಿ ರೀಷ್ಮಾನಾಣಯ್ಯ ಅವರನ್ನು ಅಧಿಕೃತವಾಗಿ ಸಂಸ್ಥೆಗೆ ಬರಮಾಡಿಕೊಳ್ಳಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಎಸ್.ಭರತ್‌ಕುಮಾರ್ ಸಂಸ್ಥೆಯು ಐದು ವರ್ಷಗಳ ಹಿಂದೆ ಪ್ರಾರಂಭಗೊಂಡು, ಪ್ರಸ್ತುತ 35 ಶಾಖೆಗಳನ್ನು ಹೊಂದಿದ್ದು 300ಕ್ಕೂ ಹೆಚ್ಚು ಜನರಿಗೆ ಉದ್ಯೋವಕಾಶ ಕಲ್ಪಸಿದೆ. ಬೇಡಿಕೆಯ ಕಲಾವಿದೆ ರೀಷ್ಮಾನಾಣಯ್ಯ ನಮ್ಮ ಸಂಸ್ಥೆಗೆ ಬ್ರ್ಯಾಂಡ್ ಅಂಬಾಸಿಡರ್ ಆಗಿರುವುದು ಕಳಸ ಇಟ್ಟಂತೆ ಆಗಿದೆ. ಚಿನ್ನದ ಜೊತೆ ಅದರ ಸ್ಟೋನ್‌ಗಳಿಗೂ ಕೂಡ ಬೆಲೆಯನ್ನು ಕೊಡುವ ಯೋಜನೆ, ಮೊಟ್ಟ ಮೊದಲ ಬಾರಿಗೆ ಪರಿಚಯಿಸಿದ್ದು ಏಕೈಕ ಸಂಸ್ಥೆ ಅದು ಬೆನಕ ಗೋಲ್ಡ್ ಎಂದು ಹೇಳಲು ಸಂತಸವಾಗುತ್ತದೆ. ಬೇರೆ ಕಡೆ ಚಿನ್ನ ಮಾರಾಟ ಮಾಡಿರೆಂದು ಹೇಳುತ್ತಾರೆ. ನಾವು ಆ ರೀತಿ ಹೇಳದೆ, ಮಾರಾಟ ಮಾಡಿದ ನಂತರವೂ ಅದನ್ನು ಕಂತುಗಳ ಮೂಲಕ ಹಣ ಪಾವತಿಸಿ ಹಿಂಪಡೆಯುವ ವಿನೂತನ…
ಬೀದರ್: ಜನಿವಾರ ವಿವಾದದಿಂದ ಸಿಇಟಿ ಪರೀಕ್ಷೆಯಿಂದ ವಚಿಂತನಾಗಿದ್ದ ವಿದ್ಯಾರ್ಥಿ ಸುಚಿವ್ರತ್ ಕುಲಕರ್ಣಿರವರ ಕುಟುಂಬಕ್ಕೆ ಮುಖ್ಯಮಂತ್ರಿಗಳು ಕನಿಷ್ಠ ಹತ್ತು ಲಕ್ಷ ರೂ.ಗಳ ಆರ್ಥಿಕ ನೆರವು ನೀಡಬೇಕು ಎಂದು ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಆಗ್ರಹಿಸಿದ್ದಾರೆ. ಇತ್ತೀಚೆಗೆ ಜನಿವಾರ ವಿವಾದದಿಂದ ಸಿಇಟಿ ಪರೀಕ್ಷೆಯಿಂದ ವಚಿಂತನಾಗಿದ್ದ ಬೀದರ್ ನಗರದ ವಿದ್ಯಾರ್ಥಿ ಸುಚಿವ್ರತ್ ಕುಲಕರ್ಣಿರವರ ಮನೆಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ನಾನು ಸುಚಿವ್ರತ್ ಕುಲಕರ್ಣಿರವರ ಮನೆಗೆ ಭೇಟಿ ನೀಡಿ, ವಿದ್ಯಾರ್ಥಿ ಹಾಗೂ ಆತನ ಪೋಷಕರನ್ನು ಮಾತನಾಡಿಸಿ, ಆತ್ಮಸ್ಥೈರ್ಯ ತುಂಬಿ, ನಿಮ್ಮೊಂದಿಗೆ ನಾವು ಇದ್ದೇವೆ, ನಿಮಗೆ ನ್ಯಾಯ ಕೊಡಿಸಲು ನಾವು ಪ್ರಯತ್ನಿಸುತ್ತೇವೆಂದು ಧೈರ್ಯ ನೀಡಿದ್ದೇನೆ ಎಂದರು. https://ainkannada.com/fine-for-not-wearing-a-helmet-these-tips-are-mandatory-when-buying/ ಸುಚಿವ್ರತ್ ಕುಟುಂಬ ಕಡುಬಡ ಕುಟುಂಬವಾಗಿದ್ದು, ಅವರು ಬಿಪಿಎಲ್ ಕಾರ್ಡುದಾರರಾಗಿದ್ದಾರೆ. ಆತನ ತಾಯಿ ಮಕ್ಕಳಿಗೆ ಪಾರ್ಟ್ ಟೈಮ್ ಟ್ಯೂಷನ್ ಹೇಳಿಕೊಟ್ಟು ಸಂಸಾರ ಸಾಗಿಸುತ್ತಿದ್ದಾರೆ. ಅದೇ ವೃತ್ತಿ ಬದುಕಿನಿಂದಲೇ ಮಗನನ್ನು ಓದಿಸುತ್ತಿದ್ದಾರೆ. ಈಗ ಮಗ ಸಿಇಟಿಯಿಂದ ವಂಚಿತನಾಗಿರುವುದು ಆ ಕುಟುಂಬಕ್ಕೆ ದೊಡ್ಡಮಟ್ಟದ ನಷ್ಟವಾಗಿದೆ.…
ಹಿರಿಯೂರು: ಕಾಶ್ಮೀರದಲ್ಲಿ ಪ್ರವಾಸಿಗರ ಉಗ್ರರ ದಾಳಿ ನಡೆದಿದ್ದು,20 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.ಇದನ್ನೆ ಬಂಡವಾಳ ಮಾಡಿಕೊಂಡ ಕೆಲ ಏರ್ ಲೈನ್ಸ್ ಗಳು ಫ್ಲೈಟ್ ಟಿಕೆಟ್ ಗಳ ಶುಲ್ಕ ದುಪ್ಪಟ್ಟು ಮಾಡಿವೆ. https://ainkannada.com/fine-for-not-wearing-a-helmet-these-tips-are-mandatory-when-buying/ ಕಾಶ್ಮೀರಕ್ಕೆ ಪ್ರವಾಸಕ್ಕೆಂದು ತೆರಳಿದ್ದ ಹಿರಿಯೂರಿನ ನಂದೀಶ್ ಮತ್ತು ವಾಸವಿ ಜೋಡಿ ಉಗ್ರರ ದಾಳಿ ಹಿನ್ನೆಲೆ ಭಯ ಭೀತರಾಗಿದ್ದು, ಪ್ರವಾಸ ರದ್ದು ಮಾಡಿಕೊಂಡು ಬರಬೇಕೆಂದು ಫ್ಲೈಟ್ ಟಿಕೆಟ್ ಶುಲ್ಕ ನೋಡಿದೆ.ಅದು ದುಪ್ಪಟ್ಟಾಗಿದೆ. ಇದರಿಂದ ಇದಕ್ಕೆ ಕಡಿವಾಣ ಹಾಕುವಂತೆ ಮನವಿ ಮಾಡಿದ್ದಾರೆ.
ಪುಸ್ತಕಗಳು ನಮ್ಮ ಬೆಸ್ಟ್ ಫ್ರೆಂಡ್ಸ್. ಅಷ್ಟೇ ಅಲ್ಲ ಒಳ್ಳೆಯ ಫಿಲಾಸಫರ್, ಮಾರ್ಗದರ್ಶಕ, ಒಳ್ಳೆಯ ಉದ್ದೇಶಗಳಿಗೆ ಗೈಡ್, ಉತ್ತಮ ಒಡನಾಡಿ ಸಹ. ಅದೆಷ್ಟೋ ಜನರಿಗೆ ಅವರ ಏಕಾಂಗಿತನ ಕಾಡದಂತೆ ಕಾಪಾಡುತ್ತಿರುವ ಒಡನಾಡಿ ಪುಸ್ತಕ. ಪುಸ್ತಕಗಳು ಪ್ರಮುಖ ಮಾಹಿತಿ ಮೂಲಗಳಾಗಿದ್ದು, ಜೊತೆಗೆ ಮನರಂಜನೆ ನೀಡುವ, ಮನಸ್ಸಿಗೆ ಶಾಂತಿ ನೀಡುವ ಸೋರ್ಸ್ ಸಹ. https://ainkannada.com/fine-for-not-wearing-a-helmet-these-tips-are-mandatory-when-buying/ ಓದುವ ತುಡಿತಯಿರುವ ಅದೆಷ್ಟೋ ವ್ಯಕ್ತಿಗಳು ಇಂದಿಗೂ ನಮ್ಮ ಸುತ್ತಮುತ್ತಲಿನಲ್ಲಿ ಇದ್ದಾರೆ. ಆದರೆ ಓದುಗ ವರ್ಗವನ್ನು ಮತ್ತಷ್ಟು ಹೆಚ್ಚಿಸಲು ವಿಶ್ವ ಪುಸ್ತಕ ಹಾಗೂ ಹಕ್ಕುಸ್ವಾಮ್ಯ ದಿನವನ್ನು ಆಚರಿಸಲಾಗುತ್ತಿದೆ. ವಿಶ್ವ ಪುಸ್ತಕ ಹಾಗೂ ಹಕ್ಕುಸ್ವಾಮ್ಯ ದಿನದ ಇತಿಹಾಸ: ವೆಲೆನ್ಸಿಯನ್ ಬರಹಗಾರ ವಿಸೆಂಟೆ ಕ್ಲಾವೆಲ್ ಆ್ಯಂಡ್ರೆಸ್ ಎನ್ನುವವರು ಈ ಪುಸ್ತಕ ದಿನವನ್ನು ಆಚರಿಸುವ ಪರಿಕಲ್ಪನೆಯನ್ನು ತಂದರು. ವೆಲೆನ್ಸಿಯನ್ ಬರಹಗಾರ ವಿಸೆಂಟೆ ಕ್ಲಾವೆಲ್ ಆ್ಯಂಡ್ರೆಸ್ ಅವರ ಜನ್ಮದಿನವಾದ ಅಕ್ಟೋಬರ್ 7 ರಂದು ಪುಸ್ತಕ ದಿನವನ್ನಾಗಿ ಆಚರಿಸಲಾಯಿತು. ನಂತರದಲ್ಲಿ ಅವರು ಮರಣ ಹೊಂದಿದ ದಿನವಾದ ಏಪ್ರಿಲ್ 23 ರಂದು ವಿಶ್ವ ಪುಸ್ತಕ ದಿನವನ್ನು ಆಚರಿಸಲಾಯಿತು. ಆದರೆ ಯುನೆಸ್ಕೊ…