Author: Author AIN

ಚಿತ್ರದುರ್ಗದ ರೇಣುಕಾಸ್ವಾಮಿ‌ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದು ಕೊಲೆ ಆರೋಪಿ ದರ್ಶನಗ ಸದ್ಯ ಹೊರಗಡೆ ಇದ್ದಾರೆ. ಆದರೂ ದಾಸನಿಗೆ ಇನ್ನೂ ಟೆನ್ಷನ್ ತಪ್ಪಿಲ್ಲ. ಯಾಕೆಂದರೆ ದರ್ಶನ್ ಜಾಮೀನು ಪ್ರಶ್ನಿಸಿ ರಾಜ್ಯ ಪೊಲೀಸರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಆ ವಿಚಾರಣೆ ನಿನ್ನೆ (ಏ. 22ರಂದು) ನಡೆದಿದೆ. ರಾಜ್ಯ ಪೊಲೀಸ್ ಪರ ದರ್ಶನ್ ಅವರ ಜಾಮೀನು ರದ್ದುಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್​ನಲ್ಲಿ ವಕೀಲ ಸಿದ್ದಾರ್ಥ್ ಲೂಥ್ರಾ ವಾದ ಮಾಡಿದ್ದಾರೆ. ದರ್ಶನ್ ಪರ ವಕೀಲ ಮನು ಸಿಂಘ್ವಿ ವಾದ ಮಾಡಿದ್ದಾರೆ. ನಿನ್ನೆ ನಡೆದ ವಿಚಾರಣೆ ವೇಳೆ ದರ್ಶನ್ ಮತ್ತು ಪವಿತ್ರಾ ಗೌಡ ಸಂಬಂಧದ ಕುರಿತು ಚರ್ಚೆಯಾಗಿದೆ. ದರ್ಶನ್‌ಗೆ ಮದುವೆ ಆಗಿದೆಯೇ ? ಪವಿತ್ರಾ ಗೌಡ ದರ್ಶನ್ ಪತ್ನಿಯೇ ಎಂಬ ಪ್ರಶ್ನೆಯನ್ನು ನ್ಯಾಯಾಧೀಶರು ಕೇಳಿದ್ದಾರೆ. ಇದಕ್ಕೆ ಸರ್ಕಾರದ ಪರ ವಕೀಲರಾದ ಸಿದ್ಧಾರ್ಥ್ ಲೂಥ್ರಾ ಅಚ್ಚರಿಯ ಉತ್ತರ ಕೊಟ್ಟಿದ್ದಾರೆ. ಸಿದ್ದಾರ್ಥ್ ಲೂಥ್ರಾ ಸುಪ್ರೀಂ ಕೋರ್ಟ್​ನಲ್ಲಿ ದರ್ಶನ್-ಪವಿತ್ರಾ ಗೌಡ ಸಂಬಂಧ ವಿವರಿಸುವಾಗ ಮಿಸ್ಟ್ರೆಸ್ಟ್ ಎಂಬ ಪದವನ್ನು ಬಳಸಿದ್ದಾರೆ. ಮಿಸ್ಟ್ರೆಸ್ ಎಂದರೆ…

Read More

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಶಿವಮೊಗ್ಗದ ಪ್ರವಾಸಿಯೊಬ್ಬರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪ್ರವಾಸಕ್ಕೆ ತೆರಳಿದ್ದ ಶಿವಮೊಗ್ಗದ ಮೂಲದ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ರಾವ್ (47) ಮೃತ ಪಟ್ಟಿದ್ದಾರೆ. https://ainkannada.com/do-you-want-to-always-look-young-then-follow-these-tips/ ಶಿವಮೊಗ್ಗದ ವಿಜಯನಗರ ನಿವಾಸಿಯಾಗಿರುವ ಮಂಜುನಾಥ್ ಅವರು ಪತ್ನಿ ಪಲ್ಲವಿ ಹಾಗೂ ಪುತ್ರ ಅಭಿಜೇಯ ಜೊತೆ ಪ್ರವಾಸಕ್ಕೆ ಹೋಗಿದ್ದರು. ಏ.19 ರಂದು ಶಿವಮೊಗ್ಗದಿಂದ ಕಾಶ್ಮೀರ ಪ್ರವಾಸಕ್ಕೆ ಮಂಜುನಾಥ್ ಕುಟುಂಬಸ್ಥರು ತೆರಳಿದ್ದರು. ದಾಳಿಯಲ್ಲಿ ಸ್ಥಳದಲ್ಲೇ ಮಂಜುನಾಥ್ ರಾವ್ ಸಾವನ್ನಪ್ಪಿದ್ದಾರೆ. ಮಂಜುನಾಥ್ ಪತ್ನಿ ಹಾಗೂ ಪುತ್ರರನ್ನ ರಕ್ಷಿಸಿ ಸ್ಥಳೀಯರು ಬೇರೆಡೆ ಕರೆದುಕೊಂಡು ಬಂದಿದ್ದಾರೆ.

Read More

ಐಪಿಎಲ್ 2025 ಸೀಸನ್ ಪ್ರೇಕ್ಷಕರಿಗೆ ರೋಮಾಂಚಕ ಪಂದ್ಯಗಳನ್ನು ಮಾತ್ರವಲ್ಲದೆ, ಮೈದಾನದ ಹೊರಗೆ ಕೆಲವು ಹಾಸ್ಯಮಯ ಕ್ಷಣಗಳನ್ನು ಸಹ ನೀಡುತ್ತಿದೆ. ಭಾರತದ ಮಾಜಿ ಕ್ರಿಕೆಟಿಗರಾದ ಶಿಖರ್ ಧವನ್ ಮತ್ತು ಅಂಬಟಿ ರಾಯುಡು ನೇರ ವ್ಯಾಖ್ಯಾನಕಾರರ ಸಮಯದಲ್ಲಿ ಪರದೆಯನ್ನು ಹಂಚಿಕೊಂಡಾಗ ಅಂತಹ ಒಂದು ತಮಾಷೆಯ ಘಟನೆ ಸಂಭವಿಸಿತು. ಅವರಿಬ್ಬರೂ ಪರದೆಯ ಮೇಲೆ ಒಟ್ಟಿಗೆ ವ್ಯಾಖ್ಯಾನಕಾರರಾಗಿ ಕಾಣಿಸಿಕೊಂಡರು ಮತ್ತು ಅವರ ನಡುವಿನ ಮೋಜಿನ ಸಂಭಾಷಣೆ ಅಭಿಮಾನಿಗಳನ್ನು ಮೆಚ್ಚಿಸಿತು. ನಿರ್ದಿಷ್ಟವಾಗಿ ಹೇಳುವುದಾದರೆ, ಧವನ್ ತಮಾಷೆಯ ಹಾಸ್ಯವನ್ನು ಹೇಳಿದಾಗ “ರಾಯುಡು ನಮಗೆ ವಿಶ್ವಕಪ್ ಅನ್ನು ಕಳೆದುಕೊಂಡರು” ಎಂದು ಹೇಳಿದ ತಮಾಷೆಯ ಕಾಮೆಂಟ್ ಆ ಕ್ಷಣವನ್ನು ಇನ್ನಷ್ಟು ತಮಾಷೆಯನ್ನಾಗಿ ಮಾಡಿತು. https://ainkannada.com/do-you-want-to-always-look-young-then-follow-these-tips/ ಇದು 2004 ರ U19 ವಿಶ್ವಕಪ್‌ನ ಸಿಹಿ ನೆನಪನ್ನು ಮರಳಿ ತಂದಿತು. ಆ ಪಂದ್ಯಾವಳಿಯಲ್ಲಿ ರಾಯುಡು ನಾಯಕರಾಗಿದ್ದರೆ, ಧವನ್ ತಂಡದ ಸದಸ್ಯರಾಗಿದ್ದರು. ಸೆಮಿಫೈನಲ್ ಪಂದ್ಯಕ್ಕೂ ಮುನ್ನ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ರಾಯುಡು ಅವರನ್ನು ನಿಷೇಧಿಸಲಾಗಿತ್ತು, ಇದು ಭಾರತ ತಂಡದ ಸೋಲಿಗೆ ಕಾರಣವಾಯಿತು ಎಂದು ಧವನ್ ತಮಾಷೆಯಾಗಿ ನೆನಪಿಸಿಕೊಂಡರು.…

Read More

ಬೆಂಗಳೂರು: ರಸ್ತೆಯಲ್ಲಿ ವಾಹನ ಹಿಂದಿಕ್ಕುವ ವಿಚಾರವಾಗಿ ಸಿಟ್ಟಿಗೆದ್ದು ಭಾರತೀಯ ವಾಯು ದಳದ ವಿಂಗ್ ಕುಮಾಂಡರ್ ಹಾಗೂ ಬೈಕ್ ಸವಾರ ಪರಸ್ಪರ ಬಡಿದಾಡಿಕೊಂಡಿರುವ ಘಟನೆ ಬೈಯಪ್ಪನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇನ್ನೂ ಈ ವಿಚಾರವಾಗಿ ಗೃಹ ಸಚಿವ ಡಾ. ಜಿ ಪರಮೇಶ್ವರ್ ಪ್ರತಿಕ್ರಿಯೇ ನೀಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಬೈಕ್ ಸವಾರನ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ ಐ ಆರ್ ದಾಖಲಾಗಿದೆ. ಹಲ್ಲೆಗೆ ಒಳಗಾದ ಯುವಕ ಕೂಡ ದೂರು ನೀಡಿದ್ದಾನೆ. ಹಲ್ಲೆ ಮಾಡಿದ ವಿಂಗ್‌ಕಮಾಂಡರ್ ವೆಸ್ಟ್ ಬೆಂಗಾಲ್ ಮೂಲದವನು. ಸದ್ಯ ಆತ ನಾಪತ್ತೆ ಆಗಿದ್ದಾನೆ’ ಎಂದರು. https://ainkannada.com/do-you-want-to-always-look-young-then-follow-these-tips/ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಎಂಬಾತ ಕಾರಿಗೆ ಬೈಕ್ ಡಿಕ್ಕಿ ಹೊಡೆದ ಕಾರಣಕ್ಕಾಗಿ ತಗಾದೆ ತೆಗೆದು ಬೈಕ್ ಸವಾರನ ಮೇಲೆ ಹಲ್ಲೆ ಮಾಡಿದ್ದ. ಬಳಿಕ ವಿಡಿಯೋ ಮಾಡಿ ಬೈಕ್ ಸವಾರನ ವಿರುದ್ಧ ಆರೋಪ ಮಾಡಿದ್ದ. ಅಲ್ಲದೆ ಕನ್ನಡ ಮಾತನಾಡಲಿಲ್ಲ ಎಂಬ ಕಾರಣಕ್ಕಾಗಿ ಹಲ್ಲೆ ಮಾಡಲಾಗಿದೆ ಎಂದೂ ಆರೋಪಿಸಿದ್ದನು. ಆದರೆ ಈ ಘಟನೆ…

Read More

ಐಪಿಎಲ್ 2025 ರ 40 ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಲಕ್ನೋ ಸೂಪರ್‌ಜೈಂಟ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯ ಲಕ್ನೋದ ಏಕಾನಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಅಭಿಮಾನಿಗಳು ವಿಶಿಷ್ಟ ಹೋರಾಟವನ್ನು ನೋಡಲಿದ್ದಾರೆ. ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ನ ಸ್ಟಾರ್ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ತಮ್ಮ ಹಳೆಯ ತಂಡ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸೆಣಸಲಿದ್ದಾರೆ. https://ainkannada.com/do-you-want-to-always-look-young-then-follow-these-tips/ ಕಳೆದ ಋತುವಿನಲ್ಲಿ ಕೆಎಲ್ ರಾಹುಲ್ ಲಕ್ನೋ ಸೂಪರ್‌ಜೈಂಟ್ಸ್ ತಂಡದ ನಾಯಕರಾಗಿದ್ದರು. ಆದರೆ, ಮುಂಬರುವ ಋತುವಿಗೆ ಫ್ರಾಂಚೈಸಿ ಅವರನ್ನು ಉಳಿಸಿಕೊಳ್ಳಲಿಲ್ಲ. ಕಳೆದ ಋತುವಿನಲ್ಲಿ ಕೆಎಲ್ ರಾಹುಲ್ ಮತ್ತು ಎಲ್‌ಎಸ್‌ಜಿ ತಂಡದ ಮಾಲೀಕ ಸಂಜೀವ್ ಗೋಯೆಂಕಾ ನಡುವಿನ ವಿವಾದ ಉಂಟಾಗಿತ್ತು ಎಂದು ತಿಳಿದಿದೆ. ಕೆ.ಎಲ್. ರಾಹುಲ್ ಮತ್ತು ಸಂಜೀವ್ ಗೋಯೆಂಕಾ ಅವರ ವಾದ.. ಕಳೆದ ಋತುವಿನಲ್ಲಿ ಲಕ್ನೋ ತಂಡದ ಸೋಲಿನ ನಂತರ ಕೆಎಲ್ ರಾಹುಲ್ ಜೊತೆ ತೀವ್ರ ವಾಗ್ವಾದಕ್ಕಿಳಿದು ಲಕ್ನೋ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಸುದ್ದಿಯಲ್ಲಿದ್ದರು. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಹೀನಾಯ ಸೋಲಿನ ನಂತರ…

Read More

ಬೆಂಗಳೂರು: ಶಾಸಕರ ಕೈಗೆ ಜಾತಿಗಣತಿ ವರದಿ ಪ್ರತಿ ಸಿಕ್ಕಿದ ಮೇಲೆ ಸರಿ, ತಪ್ಪು ಪರಾಮರ್ಶೆ ಮಾಡುತ್ತೇವೆ ಎಂದು ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಲಿಂಗಾಯತರು, ವೀರಶೈವ ಲಿಂಗಾಯತರು ಅಂತಿದೆ. ಈ ವೀರಶೈವ ಲಿಂಗಾಯತರಲ್ಲಿ ಬಹಳ ಉಪಜಾತಿಗಳಿವೆ ಅಂದಿದ್ದರು. ಜಾತಿ ಜನಗಣತಿ ವರದಿ ಶಾಸಕರ ಕೈ ಸೇರಿಲ್ಲ. ಸಚಿವರಿಗೆ ಒಂದೊಂದು ಕಾಪಿ ಸಿಕ್ಕಿದೆ, ಅವರ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಶಾಸಕರ ಕೈಗೆ ಪ್ರತಿ ಸಿಕ್ಕಿದ ಮೇಲೆ ಸರಿ, ತಪ್ಪು ಪರಾಮರ್ಶೆ ಮಾಡುತ್ತೇವೆ. ನಮ್ಮ ಕ್ಷೇತ್ರದಲ್ಲಿ ಯಾವ ಜನಸಂಖ್ಯೆ ಎಷ್ಟಿದೆ? ಎಂದು ನಮಗೆ ಗೊತ್ತಿರುತ್ತದೆ. https://ainkannada.com/do-you-want-to-always-look-young-then-follow-these-tips/ ಚುನಾವಣೆಗಳನ್ನು ಮಾಡಿರುತ್ತೇವೆ, ಮನೆ ಮನೆಗೆ ಹೋಗಿರುತ್ತೇವೆ. ಯಾರು ಯಾವ ಜಾತಿ ಎನ್ನುವ ಸಂಪೂರ್ಣ ಮಾಹಿತಿ ಶಾಸಕರಿಗೆ ಇರುತ್ತದೆ. ಜಾತಿ ಜನಗಣತಿ ವರದಿ ಕೈಗೆ ಬಂದರೆ, ಹೋಲಿಕೆ ಮಾಡಿ ನೋಡುತ್ತೇವೆ. ಪ್ರತಿಯೊಬ್ಬ ಶಾಸಕರಿಗೂ ಒಂದೊಂದು ಜಾತಿಗಣತಿ ವರದಿ ಪ್ರತಿ ಕೊಡಬೇಕೆಂದು ಒತ್ತಾಯಿಸಿದರು.

Read More

ಬೆಂಗಳೂರು: ಜಾತಿ ಜನಗಣತಿ ಸರ್ವೇ ಸರಿಯಾಗಿ ಆಗಿಲ್ಲ ಎಂದು ನಾನು ಹೇಳಿಲ್ಲ ಎಂದು ಕಾಂಗ್ರೆಸ್ ಮಾಗಡಿ ಶಾಸಕ ಬಾಲಕೃಷ್ಣ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಜಾತಿ ಜನಗಣತಿ ಸರ್ವೇ ಸರಿಯಾಗಿ ಆಗಿಲ್ಲ ಎಂದು ನಾನು ಹೇಳಿಲ್ಲ, ಆದರೆ ಜನರಿಗೆ ಜಾಗೃತಿ ಇರಲಿಲ್ಲ. ಹಾಗಾಗಿ ಜನರು ಸ್ವಇಚ್ಛೆಯಿಂದ ನೋಂದಣಿ ಮಾಡಿಲ್ಲ. ಈಗ ಜಾಗೃತಿ ಉಂಟಾಗಿದೆ, ಇದರ ಬಗ್ಗೆ ಸಂಪೂರ್ಣ ಅರಿವು ಇರುವುದರಿಂದ ಎಲ್ಲರೂ ಈಗ ನೋಂದಣಿ ಮಾಡಿಸಿಕೊಳ್ಳುತ್ತಾರೆ. ಜನಸಂಖ್ಯೆ ಎಷ್ಟಿದೆ ಎನ್ನುವ ಸತ್ಯಾಂಶ ಈಗ ಹೊರಗಡೆ ಬರುತ್ತದೆ. ಹೀಗಾಗಿ ಮರು ಸಮೀಕ್ಷೆ ಮಾಡಬೇಕು ಎಂದು ತಿಳಿಸಿದರು. https://ainkannada.com/do-you-want-to-always-look-young-then-follow-these-tips/ ನಮ್ಮ ಹೈಕಮಾಂಡ್, ನಮ್ಮ ನಾಯಕರು, ಜನಾಂಗದ ನಾಯಕರು ಇದ್ದಾರೆ, ಅವರು ತೀರ್ಮಾನ ಮಾಡುತ್ತಾರೆ. ನಾವು ಈಗಾಗಲೇ ನಮ್ಮ ಅಭಿಪ್ರಾಯವನ್ನು ನಾವು ಹೇಳಿದ್ದೀವಿ. ಸರ್ವೇ ಬಗ್ಗೆ ಕ್ಷೇತ್ರಗಳಲ್ಲಿ ನಮ್ಮ ವಿರೋಧಿಗಳು ಅಪಪ್ರಚಾರ ಮಾಡುತ್ತಿದ್ದಾರೆ. ಆ ವಿರೋಧಿಗಳನ್ನು ಬಾಯಿ ಮುಚ್ಚಿಸಬೇಕಾದರೆ ಮರು ಸರ್ವೆ ಆಗಬೇಕು ಎಂದರು. ಇದೇ ವೇಳೆ ಅಶೋಕ್‌ಗೆ ತಿರುಗೇಟು ನೀಡಿದ ಅವರು, ಸಿದ್ದರಾಮಯ್ಯ ಮನೆಯಲ್ಲಿ…

Read More

ಯುವ ರಾಜ್‍ಕುಮಾರ್ ನಟನೆಯ ಎರಡನೇ ಸಿನಿಮಾ ಎಕ್ಕ ಶೂಟಿಂಗ್ ಭರದಿಂದ ಸಾಗುತ್ತಿದ್ದು, ನಾಳೆ ಯುವ ಹುಟ್ಟುಹಬ್ಬ ಇರೋ ಕಾರಣದಿಂದ ಎಕ್ಕ ಸಿನಿಮಾದ ಟೀಸರ್ ಬಿಡುಗಡೆಗೆ ಚಿತ್ರತಂಡ ಸಿದ್ಧತೆ ನಡೆಸಿದೆ. ನಾಳೆ ಯುವ ಬರ್ತ್ ಡೇ, ನಾಳಿದ್ದು ಅಣ್ಣಾವ್ರ ಬರ್ತ್ ಡೇ ಇರೋದ್ರಿಂದ ದೊಡ್ಮನೆ ಅಭಿಮಾನಿಗಳಿಗೆ ಡಬಲ್ ಧಮಾಕ ಸಿಕ್ಕಂತಾಗಿದೆ.. ಯುವ ತುಂಬಾ ಮಾಸ್ ಅವತಾರದಲ್ಲಿ ಕಾಣಿಸಿಕೊಳ್ತಿದ್ದು, ಈಗಾಗಲೇ ಎಕ್ಕ ಟ್ರೆಂಡ್ ಸೆಟ್ಟರ್ ಆಗಿ ಜನರ ಕುತೂಹಲ ಕೆರಳಿಸುತ್ತಿದೆ. ಎಕ್ಕ ಸಿನಿಮಾ ಜೂನ್ 6ಕ್ಕೆ ಬಿಡುಗಡೆ ಆಗಲಿದೆ. ಹೀಗಾಗಿ ಅದಕ್ಕೆ ತಕ್ಕಂತೆ ಶೂಟಿಂಗ್, ಪೋಸ್ಟ್ ಪ್ರೊಡಕ್ಷನ್ಸ್, ಪ್ರಮೋಷನ್ ಹಾಗೂ ರಿಲೀಸ್ ಪ್ಲ್ಯಾನ್ ನಡೀತಿದೆ. ಪಿಆರ್‌ಕೆ ಪ್ರೊಡಕ್ಷನ್ಸ್, ಕೆಆರ್‌ಜಿ ಸ್ಟುಡಿಯೋಸ್ ಹಾಗೂ ಜಯಣ್ಣ ಫಿಲ್ಮ್ಸ್ ಒಟ್ಟಾಗಿ ‘ಎಕ್ಕ’ ಚಿತ್ರ ನಿರ್ಮಾಣ ಮಾಡುತ್ತಿವೆ. ಬಹಳ ಅದ್ಧೂರಿಯಾಗಿಯೇ ಈ ಆಕ್ಷನ್ ಥ್ರಿಲ್ಲರ್ ಪ್ರೇಕ್ಷಕರ ಮುಂದೆ ಬರಲಿದೆ. ರೋಹಿತ್ ಪದಕಿ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ‘ಎಕ್ಕ’ ಸಿನಿಮಾದಲ್ಲಿ ಅತುಲ್ ಕುಲಕರ್ಣಿ, ಡೆಡ್ಲಿ ಆದಿತ್ಯಾ ಸೇರಿದಂತೆ ದೊಡ್ಡ ತಾರಗಣ ಚಿತ್ರದಲ್ಲಿ.…

Read More

ಬೆಂಗಳೂರು: “ಜಾತಿ ಗಣತಿ ವಿಚಾರವಾಗಿ ಎದ್ದಿರುವ ಅನುಮಾನಗಳನ್ನು ಬಗೆಹರಿಸುವ ದೊಡ್ಡ ಜವಾಬ್ದಾರಿ ಸರ್ಕಾರದ ಮುಂದಿದೆ. ಈ ಅನುಮಾನಗಳಿಗೆ ತೆರೆ ಎಳೆಯುವ ಶಕ್ತಿ ಸರ್ಕಾರಕ್ಕಿದೆ. ಮಾನ್ಯ ಮುಖ್ಯಮಂತ್ರಿಗಳು ಹಾಗೂ ಅವರ ಸಚಿವ ಸಂಪುಟ ಸುದೀರ್ಘವಾಗಿ ಚರ್ಚಿಸಿ ಈ ಕೆಲಸ ಮಾಡಲಿದ್ದಾರೆ” ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ವಿಶ್ವಾಸ ವ್ಯಕ್ತಪಡಿಸಿದರು.ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಸುರೇಶ್ ಅವರು ಮಂಗಳವಾರ ಮಾತನಾಡಿದರು. “ನಗರ ಪ್ರದೇಶದಲ್ಲಿ ಸರಿಯಾದ ಮಾಹಿತಿ ಸಿಕ್ಕಿಲ್ಲ ಎಂದು ಆಯೋಗ ಹೇಳಿದ್ದು, ಕಳೆದ 15 ವರ್ಷಗಳಲ್ಲಿ ಸಾಕಷ್ಟು ಜನ ನಗರ ಪ್ರದೇಶಗಳಿಗೆ ವಲಸೆ ಬಂದಿದ್ದಾರೆ. ಇವರನ್ನು ವರದಿಯಲ್ಲಿ ಸೇರಿಸಲಾಗಿದೆಯೇ ಇಲ್ಲವೇ ಎಂಬ ಗೊಂದಲವಿದೆ. ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಸಿಎಂ ಆಗಿದ್ದು, ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡಿದ್ದು, ಎಲ್ಲಾ ಸಮುದಾಯಗಳನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ನಂಬಿಕೆ ಇದೆ. ಎಲ್ಲರಿಗೂ ಸರಿಯಾದ ರೀತಿ ನ್ಯಾಯ ಒದಗಿಸುವುದು ಅವರ ಜವಾಬ್ದಾರಿಯೂ ಆಗಿದೆ. ಈ ಪ್ರಕ್ರಿಯೆಯಲ್ಲಿ ಅನುಮಾನಗಳನ್ನು ನಿವಾರಿಸುವುದು ಮೊದಲ ಕೆಲಸವಾಗಬೇಕು” ಎಂದು ಅಭಿಪ್ರಾಯಪಟ್ಟರು. ಕಾಂತರಾಜು ಆಯೋಗ…

Read More

ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ (UPSC 2024) ಅಖಿಲ ಭಾರತ ಸೇವೆಗಳ ನೇಮಕಾತಿಗಾಗಿ ನಡೆಸಿದ ನಾಗರಿಕ ಸೇವೆಗಳ 2024 ಪರೀಕ್ಷೆಯ ಅಂತಿಮ ಫಲಿತಾಂಶಗಳನ್ನು ಪ್ರಕಟಿಸಿದೆ. ಇಂದು ಮಧ್ಯಾಹ್ನ ಯುಪಿಎಸ್‌ಸಿ ಫಲಿತಾಂಶಗಳನ್ನು ಬಿಡುಗಡೆ ಮಾಡಿದೆ. ಈ ಫಲಿತಾಂಶಗಳಲ್ಲಿ, ಇತರ ಹಲವು ರಾಜ್ಯಗಳ ವಿದ್ಯಾರ್ಥಿಗಳು ಸೇರಿದಂತೆ ರಾಜ್ಯಗಳ ಅನೇಕ ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ. ಒಟ್ಟು 1,009 ಅಭ್ಯರ್ಥಿಗಳು ತೇರ್ಗಡೆ ಹೊಂದಿದ್ದು, 20178ರಿಂದ ಯುಪಿಎಸ್‌ಸಿ ತಯಾರಿ ನಡೆಸುತ್ತಿದ್ದ ಪ್ರಯಾಗ್‌ರಾಜ್‌ನ ಶಕ್ತಿ ದುಬೆ ಪ್ರಥಮ ರ‍್ಯಾಂಕ್‌ನೊಂದಿಗೆ ಅಗ್ರಸ್ಥಾನ ಪಡೆದುಕೊಂಡಿದ್ದಾರೆ. ಹರ್ಷಿತಾ ಗೋಯಲ್ 2ನೇ ರ‍್ಯಾಂಕ್‌ ಪಡೆದುಕೊಂಡಿದ್ದಾರೆ. https://ainkannada.com/do-you-want-to-always-look-young-then-follow-these-tips/ ಈ ನೇಮಕಾತಿ ಪ್ರಕ್ರಿಯೆಯಲ್ಲಿ ಒಟ್ಟು 1,129 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಈ ಪೈಕಿ ಭಾರತೀಯ ಆಡಳಿತ ಸೇವೆ (IAS) ನ 180 ಹುದ್ದೆಗಳು, ಭಾರತೀಯ ವಿದೇಶಾಂಗ ಸೇವೆ (IFS) ನ 55 ಹುದ್ದೆಗಳು ಮತ್ತು ಭಾರತೀಯ ಪೊಲೀಸ್ ಸೇವೆ (IPS) ನ 147 ಹುದ್ದೆಗಳು ಸೇರಿವೆ. ಫಲಿತಾಂಶದಲ್ಲಿ ಉತ್ತರ ಪ್ರದೇಶ (Uttar Pradesh) ಪ್ರಯಾಗ್‌ರಾಜ್‌ ಮೂಲದ ಶಕ್ತಿ…

Read More