ಬೆಂಗಳೂರು: ಅನಧಿಕೃತ ಬಡಾವಣೆಗಳು ನಿರ್ಮಾಣ ಮಾಡಿದ್ರೆ ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳುತ್ತದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಎಚ್ಚರಿಕೆ ನೀಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಕೂಡ ಅನಧಿಕೃತ ಬಡಾವಣೆ ವಿರುದ್ಧ ಕ್ರಮ ಆಗಬೇಕು ಎಂದು ಹೇಳಿದೆ. ಸಿಎಂ ಕೂಡ ಅನಧಿಕೃತ ಬಡಾವಣೆ ವಿರುದ್ಧ ಕ್ರಮ ಆಗಬೇಕು ಎಂದು ಹೇಳಿದ್ದಾರೆ. ಕೃಷಿ ಜಮೀನಿನಲ್ಲಿ ಅನಧಿಕೃತ ಬಡಾವಣೆ ನಿರ್ಮಾಣ ಮಾಡುತ್ತಿದ್ದಾರೆ. https://ainkannada.com/did-you-know-mango-prevents-weight-gain/ ಇದನ್ನ ಸಹಿಸೋಕೆ ಸಾಧ್ಯವಿಲ್ಲ. ಹೀಗಾಗಿ ಸರ್ಕಾರ ದಿಟ್ಟ ಕ್ರಮ ತೆಗೆದುಕೊಳ್ಳುತ್ತದೆ. ಇನ್ನು ಮುಂದೆ ಅನಧಿಕೃತ, ಅಕ್ರಮ ಬಡಾವಣೆಗಳು ನಿರ್ಮಾಣ ಮಾಡಿದರೆ ಅದನ್ನ ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳುತ್ತದೆ. ಈ ಸಂಬಂಧ ಡಿಸಿಗಳಗೆ ಸೂಚನೆ ನೀಡಿದ್ದೇನೆ. ಯಾರು ಅಕ್ರಮ ಬಡಾವಣೆ ನಿರ್ಮಾಣ ಮಾಡಬಾರದು ಎಂದು ವಾರ್ನಿಂಗ್ ಕೊಟ್ಟಿದ್ದಾರೆ.
Author: Author AIN
ಮಂಡ್ಯ: ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ತೆಗೆದಿದ್ದೇ ಪಹಲ್ಗಾಮ್ ನರಮೇಧಕ್ಕೆ ಕಾರಣ ಎಂದು ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕ ರಮೇಶ್ ಬಂಡಿಸಿದ್ದೇಗೌಡ ವಿವದಾತ್ಮಕ ಹೇಳಿಕೆ ನೀಡಿದ್ದರು. ಈ ಹೇಳಿಕೆ ಭಾರೀ ವಿವಾದ ಆಗುತ್ತಿದ್ದಂತೆಯೇ ಶ್ರೀರಂಗಪಟ್ಟಣ ಶಾಸಕ ರಮೇಶ್ ಬಂಡಿಸಿದ್ದೇಗೌಡ ಇದೀಗ ಕ್ಷಮೆಯಾಚಿಸಿದ್ದಾರೆ. https://ainkannada.com/did-you-know-mango-prevents-weight-gain/ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್‌ನಲ್ಲಿ (KRS) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಹಾಗೆ ಮಾತನಾಡಬಾರದಿತ್ತು, ನನ್ನ ಮಾತಿನಿಂದ ಎಲ್ಲರಿಗೂ ನೋವಾಗಿದೆ. ಹೀಗಾಗಿ ನನ್ನ ಹೇಳಿಕೆಯನ್ನು ವಾಪಸ್ ಪಡೆದು ಕ್ಷಮೆಯಾಚಿಸುತ್ತೇನೆ ಎಂದು ಹೇಳಿದರು. ದೇಶದಲ್ಲಿ ಆಯಾ ಸರ್ಕಾರಗಳು ಭದ್ರತೆಯನ್ನು ಹೆಚ್ಚಿಸಬೇಕು. ಸದ್ಯ ಕಾಶ್ಮೀರದಲ್ಲಿ ನರಮೇಧ ಮಾಡಿರುವವರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಬೇಕು. ಈ ಘಟನೆಯಲ್ಲಿ ಸಾವನ್ನಪ್ಪಿರುವವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬಸ್ಥರಿಗೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದರು.
ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಹಿರಿಯ ನಿರ್ದೇಶಕ ನಾಗಣ್ಣ ಒನ್ಸ್ ಅಗೇನ್ ಒಂದಾಗಿದ್ದಾರೆ. ನಾಲ್ಕನೇ ಬಾರಿ ಈ ಜೋಡಿ ಮೋಡಿ ಮಾಡೋದಿಕ್ಕೆ ಸಜ್ಜಾಗಿದೆ. ಇದೇ ಅಕ್ಷಯ ತೃತೀಯಗೆ ನಾಗಣ್ಣ ಉಪ್ಪಿಯ ಹೊಸ ಸಿನಿಮಾದ ಶೀರ್ಷಿಕೆ ಘೋಷಣೆಯಾಗಲಿದೆ. 2023ರಲ್ಲಿ ಬಿಡುಗಡೆಯಾಗಿದ್ದ ಕುಟುಂಬ ಚಿತ್ರದ ಮೂಲಕ ನಾಗಣ್ಣ ಉಪೇಂದ್ರ ಕೈ ಜೋಡಿಸಿದ್ದರು. ಈ ಚಿತ್ರ ಹಿಟ್ ಬಳಿಕ ಗೋಕರ್ಣ, ಗೌರಮ್ಮ, ದುಬೈ ಸೀನು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಆದಾದ ಬಳಿಕ ಇವರಿಬ್ಬರು ಮತ್ತೆ ಒಂದಾಗಲಿದ್ದಾರೆ ಅನ್ನೋ ಸುದ್ದಿ ಸುದ್ದಿಯಾಗಿಯೇ ಉಳಿದಿತ್ತು. ಅದಕ್ಕೀಗ ಕಾಲ ಕೂಡಿಬಂದಿದ್ದು, ಈ ಕ್ರೇಜಿ ಕಾಂಬಿನೇಷನ್ ನ್ನು ಸೂರಪ್ಪ ಬಾಬು ಒಟ್ಟಿಗೆ ತೆರೆಗೆ ತರುತ್ತಿದ್ದಾರೆ. ನಾಗಣ್ಣ ನಿರ್ದೇಶನದ ಕೋಟಿಗೊಬ್ಬ, ಬಂಧು ಬಳಗ ಚಿತ್ರಗಳಿಗೆ ಇದೇ ಸೂರಪ್ಪ ಬಾಬು ಹಣ ಹಾಕಿದ್ದರು.ಈಗ ಈ ಮೂವರು ಜುಗಲ್ಬಂಧಿಯಲ್ಲೊಂದು ಬೊಂಬಾಟ್ ಸಿನಿಮಾ ರೂಪಗೊಳಿಸ್ತಿದೆ. ಅಕ್ಷಯ ತೃತೀಯ ದಿವ್ಯದಂದೇ ಶೀರ್ಷಿಕೆಯನ್ನು ಪ್ರೇಕ್ಷಕರ ಮುಂದೆ ತರಲಿದೆ. ಐತಿಹಾಸಿಕ ಅಥವಾ ಭಕ್ತಿ ಪ್ರಧಾನ ಚಿತ್ರ? ಉಪೇಂದ್ರ ಅವರಿಗೆ ನಾಗಣ್ಣ…
ಬೆಂಗಳೂರು: ಭಾರತ ಕಂಡ ಹಿರಿಯ ವಿಜ್ಞಾನಿ, ಇಸ್ರೋದ ಮಾಜಿ ಅಧ್ಯಕ್ಷ ಡಾ.ಕೃಷ್ಣಸ್ವಾಮಿ ಕಸ್ತೂರಿರಂಗನ್ ನಿಧನರಾಗಿದ್ದಾರೆ. ವಯೋ ಸಹಜ ಅನಾರೋಗ್ಯದಿಂದ ಬೆಂಗಳೂರಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಇನ್ನೂ ಎಕ್ಸ್ನಲ್ಲಿ ಕಸ್ತೂರಿರಂಗನ್ ಅವರೊಂದಿಗಿರುವ ಫೋಟೋ ಹಂಚಿಕೊಂಡಿರುವ ಪ್ರಧಾನಿ ಮೋದಿ ಅವರು, “ಭಾರತದ ವೈಜ್ಞಾನಿಕ ಮತ್ತು ಶೈಕ್ಷಣಿಕ ಪ್ರಯಾಣದಲ್ಲಿ ಅತ್ಯುನ್ನತ ವ್ಯಕ್ತಿಯಾಗಿದ್ದ ಡಾ.ಕೆ.ಕಸ್ತೂರಿರಂಗನ್ ಅವರ ನಿಧನದಿಂದ ನನಗೆ ತೀವ್ರ ದುಃಖವಾಗಿದೆ. ಅವರ ದೂರದೃಷ್ಟಿಯ ನಾಯಕತ್ವ ಮತ್ತು ರಾಷ್ಟ್ರಕ್ಕೆ ನಿಸ್ವಾರ್ಥ ಕೊಡುಗೆ ಸದಾ ಸ್ಮರಣೀಯ” ಎಂದು ನೆನಪಿಸಿಕೊಂಡಿದ್ದಾರೆ. https://ainkannada.com/did-you-know-mango-prevents-weight-gain/ ಇಸ್ರೋದಲ್ಲಿ ತಮ್ಮ ಶ್ರದ್ಧೆಯ ಸೇವೆಯಿಂದ ಭಾರತದ ಬಾಹ್ಯಾಕಾಶ ಕಾರ್ಯಕ್ರಮಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ದವರು ಕಸ್ತೂರಿರಂಗನ್. ಇದು ನಮ್ಮ ದೇಶಕ್ಕೆ ಜಾಗತಿಕ ಮನ್ನಣೆ ತಂದುಕೊಟ್ಟಿದೆ. ಮಹತ್ವಾಕಾಂಕ್ಷೆಯ ಉಪಗ್ರಹ ಉಡಾವಣೆಗಳು ಹಾಗೂ ನಾವೀನ್ಯತೆಗೆ ಅವರ ನಾಯಕತ್ವ ಸಾಕ್ಷಿಯಾಗಿದೆ” ಎಂದು ಅವರು ಬರೆದುಕೊಂಡಿದ್ದಾರೆ.
ಕಿಚ್ಚ ಸುದೀಪ್ ನಟನೆಯ ಬಿಲ್ಲಾ ರಂಗ ಬಾಷಾ ಸಿನಿಮಾದ ಶೂಟಿಂಗ್, ನಗರದ ಕಂಠೀರವ ಸ್ಟುಡಿಯೋದಲ್ಲಿ ನಡೀತಿದ್ದು, ಪ್ರೀತಿಯ ಕಿಚ್ಚನನ್ನು ನೋಡೋಕೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಸ್ಟುಡಿಯೋ ಕಡೆ ಆಗಮಿಸ್ತಿದ್ದಾರೆ. ಆದ್ರೆ ಚಿತ್ರತಂಡ ಬಿಗಿ ಬಂದೋಬಸ್ತ್ ಹಾಕಿದ್ದು, ಸಿನಿಮಾದ ಶೂಟಿಂಗ್ ಸಂಬಂಧಿಸಿದಂತೆ ಯಾವುದೇ ದೃಶ್ಯಗಳು ಲೀಕ್ ಆಗದಂತೆ ಎಚ್ಚರಿಕೆ ವಹಿಸಿದೆ.. ಕಳೆದ ನಾಲ್ಕೈದು ದಿನಗಳಿಂದ ನಾನ್ ಸ್ಟಾಪ್ ಶೂಟಿಂಗ್ ನಡೀತಿದೆ. ‘ಬಿಲ್ಲ ರಂಗ ಬಾಷಾ’ ಚಿತ್ರದ ಶೇ. 70ರಷ್ಟು ಶೂಟ್ ಸೆಟ್ನಲ್ಲೇ ಸಾಗಲಿದೆ. ಈ ಹಿಂದೆ ಕಿಚ್ಚನ ಜೊತೆ ವಿಕ್ರಾಂತ್ ರೋಣ ಸಿನಿಮಾ ಮಾಡಿದ್ದ ಅನೂಪ್ ಭಂಡಾರಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾವನ್ನು ಚೈತನ್ಯ ರೆಡ್ಡಿ ಹಾಗೂ ನಿರಂಜನ ರೆಡ್ಡಿ ನಿರ್ಮಿಸುತ್ತಿದ್ದಾರೆ. ಇದು ಕ್ರಿ.ಶ 2209ರ ಕಾಲಘಟ್ಟದಲ್ಲಿ ನಡೆಯುವ ಕಥೆ. ವೈಜ್ಞಾನಿಕತೆ ಬೆರೆಸಿದ ಫ್ಯಾಂಟಸಿ ಕಥೆಯನ್ನು ಅನೂಪ್ ಭಂಡಾರಿ ಈ ಸಿನಿಮಾದಲ್ಲಿ ನಿರೂಪಿಸಲಿದ್ದಾರೆ. ಬಿಲ್ಲ ರಂಗ ಬಾಷಾ ಎರಡು ಚಾಪ್ಟರ್‌ಗಳಲ್ಲಿ ಸಿನಿಮಾ ತೆರೆಗೆ ಬರಲಿದೆ ಎಂಬ ಗುಲ್ಲಿದೆ. ಮೊದಲ…
ಬ್ಯಾಂಕುಗಳಿಂದ ಸಾಲ ಪಡೆಯುವ ಮೊದಲು ನಿಮ್ಮ CIBIL ಸ್ಕೋರ್ ಅನ್ನು ತಿಳಿದುಕೊಳ್ಳುವುದು ಮುಖ್ಯ. CIBIL ಸ್ಕೋರ್ 300 ರಿಂದ 900 ಅಂಕಗಳವರೆಗೆ ಇರುತ್ತದೆ. ಮಧ್ಯದಲ್ಲಿರುವ ಸಂಖ್ಯೆಯು ನೀವು ಹಣವನ್ನು ಎರವಲು ಪಡೆಯಲು ಸೂಕ್ತ ವ್ಯಕ್ತಿಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುತ್ತದೆ. ನಿಮ್ಮ ಹಳೆಯ ಸಾಲಗಳು ಮತ್ತು ಕ್ರೆಡಿಟ್ ಕಾರ್ಡ್ ಬಿಲ್‌ಗಳನ್ನು ಆಧರಿಸಿ ಈ ಸಂಖ್ಯೆಯನ್ನು ನಿರ್ಧರಿಸಲಾಗುತ್ತದೆ. https://ainkannada.com/did-you-know-mango-prevents-weight-gain/ ನೀವು ನಿಮ್ಮ ಕಾರ್ಡ್ ಮತ್ತು ಸಾಲದ ಮೊತ್ತವನ್ನು ಸಮಯಕ್ಕೆ ಸರಿಯಾಗಿ ಪಾವತಿಸಿದರೆ, ನಿಮ್ಮ CIBIL ಸ್ಕೋರ್ ಉತ್ತಮವಾಗಿರುತ್ತದೆ. ಇದರಲ್ಲಿ ಯಾವುದೇ ತಪ್ಪು ಸಂಭವಿಸಿದರೆ ಅದು CIBIL ಸ್ಕೋರ್ ಮೇಲೆ ನೇರ ಪರಿಣಾಮ ಬೀರುತ್ತದೆ. ಅದಕ್ಕಾಗಿಯೇ ನಿಮ್ಮ CIBIL ಸ್ಕೋರ್‌ಗೆ ಹಾನಿಯಾಗದಂತೆ 7 ವಿಷಯಗಳನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ. ಇಲ್ಲದಿದ್ದರೆ, ನೀವು ತೊಂದರೆಗಳನ್ನು ಎದುರಿಸಬಹುದು. ನೀವು ಸಾಲ ಪಡೆದು ಆ ಸಾಲದ ಕಂತು (ಇಎಂಐ) ಪಾವತಿಸದಿದ್ದರೆ, ಅದು ಸಿಐಬಿಐಎಲ್ ಮೇಲೆ ನೇರ ಪರಿಣಾಮ ಬೀರುತ್ತದೆ. ಇದು CIBIL ಸ್ಕೋರ್ ಅನ್ನು ಕಡಿಮೆ ಮಾಡುತ್ತದೆ. ಆದಾಗ್ಯೂ,…
ಪರಭಾಷೆಗಳಲ್ಲಿ ಹೋಲಿಸಿಕೊಂಡರೆ ಕನ್ನಡದಲ್ಲಿ ವೆಬ್ ಸೀರಿಸ್ ಗಳು ಕಡಿಮೆ ಎಂಬ ಮಾತಿದೆ. . ಹೀಗಾಗಿ ಜನರು ಹಿಂದಿ, ತಮಿಳು ಹಾಗೂ ತೆಲುಗಿನಲ್ಲಿ ವೆಬ್ ಸಿರೀಸ್‌ಗಳತ್ತ ಮುಖ ಮಾಡಿದ್ದಾರೆ. ಇದೀಗ ಕನ್ನಡದಲ್ಲಿಯೂ ಮಿನಿ ವೆಬ್ ಸರಣಿ ಬಿಡುಗಡೆಯಾಗಿದ್ದು, ನೋಡಿದವರಿಂದ ಭಾರೀ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ರೋಚಕತೆ ಜೊತೆಗೆ ಭಯ, ನಂಬಿಕೆ ಹಾಗೂ ಫ್ಯಾಮಿಲಿಯ ಕಥೆಯನ್ನು ಒಳಗೊಂಡಿರುವ ‘ಅಯ್ಯನ ಮನೆ’ ವೆಬ್ ಸೀರಿಸ್ ಜೀ5ನಲ್ಲಿ ಬಿಡುಗಡೆಯಾಗಿದೆ. ಈ ವೆಬ್ ಸರಣಿಗೆ ರಮೇಶ್ ಇಂದಿರಾ ನಿರ್ದೇಶನ ಮಾಡಿದ್ದಾರೆ. ಈ ಸೀರಿಸ್‌ನಲ್ಲಿ ಖುಷಿ ರವಿ, ಮಾನಸಿ ಸುಧೀರ್, ಅಕ್ಷಯ್ ನಾಯಕ್, ಹಿತಾ ಚಂದ್ರಶೇಖರ್, ಅನಿರುದ್ಧ್ ಆಚಾರ್ಯ, ಅರ್ಚನಾ ಕೊಟ್ಟಿಗೆ, ಶೋಭರಾಜ್ ಪಾವೂರ್ ಮುಂತಾದವರು ನಟಿಸಿದ್ದಾರೆ. ಎಲ್.ವಿ ಮುತ್ತು ಗಣೇಶ್ ಸಂಗೀತ, ರಾಹುಲ್ ರಾಯ್ ಛಾಯಾಗ್ರಹಣ ಹಾಗೂ ರಾಜೇಂದ್ರ ಅರಸ್ ಸಂಕಲನ ಈ ವೆಬ್ ಸೀರಿಸ್‌ಗೆ ಇದೆ. ಅಯ್ಯನ ಮನೆಯನ್ನು ಶ್ರುತಿ ನಾಯ್ಡು ನಿರ್ಮಾಣ ಮಾಡಿದ್ದಾರೆ. ಅಯ್ಯನ ಮನೆ ವೆಬ್ ಸೀರಿಸ್‌ನಲ್ಲಿ ಏಳು ಎಪಿಸೋಡ್‌ಗಳು ಇವೆ. ವೆಬ್‌ಸಿರೀಸ್ ಪ್ರೇಮಿಗಳಿಗೆ ಈ…
ಮೈಸೂರು: ರಾಮನಗರ ಹೆಸರು ಬದಲಾವಣೆಯನ್ನು ಮಾಡೇ ಮಾಡುತ್ತೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ನನಗೆ ರಾಮನಗರದ ಹೆಸರನ್ನು ಹೇಗೆ ಬದಲಾವಣೆ ಮಾಡಬೇಕು ಎಂಬುದು ನನಗೆ ಗೊತ್ತಿದೆ. ನಾನು ಮಾಡಿಯೇ ಸಿದ್ದ. ಇದು ಬೆಂಗಳೂರು ದಕ್ಷಿಣವೇ. ನಾವು ಯಾರೂ ಸಹ ಹೊರಗಡೆಯಿಂದ ಬಂದು ಹೆಸರು ಕೊಡಿ ಎಂದು ಕೇಳುತ್ತಿಲ್ಲ. ಇದು ನಮ್ಮ ಹಕ್ಕು. ನಮ್ಮ ತಂದೆ ತಾಯಿ, ಹುಟ್ಟು ಹೆಸರನ್ನು ಬದಲಾವಣೆ ಮಾಡಿಕೊಳ್ಳಲು ಆಗುತ್ತದೆಯೇ? ಎಂದು ಹೇಳಿದರು. https://ainkannada.com/did-you-know-mango-prevents-weight-gain/ ಇನ್ನೂ ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸಕ್ಕೆ ಭದ್ರತಾ ವೈಫಲ್ಯ ಕಾರಣನಾ ಎನ್ನುವ ವಿಚಾರಕ್ಕೆ ಕೇಂದ್ರ ಸರ್ಕಾರದ ಪರ ಡಿಸಿಎಂ ಡಿಕೆ ಶಿವಕುಮಾರ್ ಸಾಫ್ಟ್ ಕಾರ್ನರ್ ತೋರಿದ್ದಾರೆ. ನಾನು ಇಲ್ಲಿ ಬ್ಲೇಮ್ ಗೇಮ್ ಮಾಡುವುದಿಲ್ಲ, ಯಾರ ವಿರುದ್ದವೂ ಮಾತನಾಡುವುದಿಲ್ಲ. ಪಕ್ಷದ ಅಧ್ಯಕ್ಷ ಹಾಗೂ ಡಿಸಿಎಂ ಆಗಿ ಹೇಳುತ್ತಿದ್ದೇನೆ, ಈ ವಿಚಾರದಲ್ಲಿ ರಾಜಕೀಯ ಯಾವುದೇ ಕಾರಣಕ್ಕೂ ಮಾಡಬಾರದು. ಹೊರದೇಶದಿಂದ ಬಂದು ಶಾಂತಿ ಕದಡುವ ಕೆಲಸ ಮಾಡಿದ್ದಾರೆ, ಅವರನ್ನು ಮುಗಿಸುವ ಕೆಲಸ ಆಗಬೇಕು.…
ಇಸ್ಲಾಮಾಬಾದ್: ಸೇನಾ ಸಮವಸ್ತ್ರದಲ್ಲಿ ಭಾರತದೊಳಗೆ ನುಗ್ಗಿದ್ದ ಉಗ್ರರು ಪಹಲ್ಗಾಮ್‌ನಲ್ಲಿ ಕಂಡು ಕೇಳದ ನರಮೇಧ ನಡೆಸಿದ್ದಾರೆ. ಪ್ರೇಮ ಕಾಶ್ಮೀರದಲ್ಲಿ ಹನಿಮೂನ್‌ಗೆ ಹೋದವರ ಮಾರಣಹೋಮವೇ ನಡೆದು ಹೋಗಿದೆ. ಪ್ರವಾಸಿಗರು ಕೈ ಮುಗಿದು ಬೇಡಿಕೊಂಡರು ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ.. ಇದರ ಬೆನ್ನಲ್ಲೇ ನಾವು ಭಯೋತ್ಪಾದನಾ ಸಂಘಟನೆಯನ್ನು ಬೆಂಬಲಿಸಿದ್ದೇವೆ ಎಂದು ಪಾಕಿಸ್ತಾನ ಅಧಿಕೃತವಾಗಿ ಹೇಳಿದೆ. https://ainkannada.com/did-you-know-mango-prevents-weight-gain/ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಅವರು ಭಯೋತ್ಪಾದಕ ಗುಂಪುಗಳಿಗೆ ಹಣಕಾಸು ಒದಗಿಸುವುದು ಮತ್ತು ಬೆಂಬಲಿಸುವುದು ಸೇರಿದಂತೆ ಭಯೋತ್ಪಾದನೆಯನ್ನು ಉತ್ತೇಜಿಸುವಲ್ಲಿ ಪಾಕಿಸ್ತಾನದ ಭಾಗಿಯಾಗಿರುವುದನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ನಾವು ಸುಮಾರು 3 ದಶಕಗಳಿಂದ ಅಮೆರಿಕ ಮತ್ತು ಬ್ರಿಟನ್ ಸೇರಿದಂತೆ ಪಶ್ಚಿಮ ದೇಶಗಳಿಗಾಗಿ ಈ ಕೊಳಕು ಕೆಲಸವನ್ನು ಮಾಡುತ್ತಿದ್ದೇವೆ ಎಂದು ಹೇಳಿದರು. ನಾವು ತಪ್ಪು ಮಾಡಿದ್ದೇವೆ. ಈ ಕೆಲಸದಿಂದ ನಾವು ಸಂಕಷ್ಟ ಅನುಭವಿಸಿದ್ದೇವೆ. ನಾವು ಸೋವಿಯತ್ ಒಕ್ಕೂಟದ ವಿರುದ್ಧದ ಯುದ್ಧದಲ್ಲಿ ಮತ್ತು ನಂತರ 9/11 ರ ನಂತರದ ಯುದ್ಧದಲ್ಲಿ ಸೇರದಿದ್ದರೆ ಪಾಕಿಸ್ತಾನದ ಮೇಲೆ ಈ ಆರೋಪ ಬರುತ್ತಿರಲಿಲ್ಲ ಎಂದು ತಿಳಿಸಿದರು. ಅಷ್ಟೇ ಅಲ್ಲದೇ ಪಹಲ್ಗಾಮ್…
ಭಾರತೀಯ ಚಿತ್ರರಂಗದಲ್ಲಿ ಈ ವರ್ಷದ ಬಹುನಿರೀಕ್ಷಿತ ಸಿನಿಮಾ ಪಟ್ಟಿಗಳಲ್ಲಿ ಕನ್ನಡದ ಕಾಂತಾರ ಪ್ರೀಕ್ವೆಲ್ ಕೂಡ ಒಂದಾಗಿದೆ. ಕಾಂತಾರ ಸೀಕ್ವೆಲ್ ಕಮಲ್ ಮಾಡಿದ್ಮೇಲೆಂತೂ ಅಖಂಡ ಸಿನಿಮಾಪ್ರೇಮಿಗಳು ಕಾಂತಾರ 1 ಕಣ್ತುಂಬಿಕೊಳ್ಳೊದಿಕ್ಕೆ ಕಾತರರಾಗಿದ್ದಾರೆ. ಕಾಂತಾರ ಪ್ರೀಕ್ವೆಲ್ ಮೂಲಕ ರಿಷಬ್ ಶೆಟ್ಟಿ ಅದ್ಯಾವ ಕಥೆಯನ್ನು ಹರವಿಡಲಿದ್ದಾರೆ ಅನ್ನೋದನ್ನು ಕ್ಯೂರಿಯಾಸಿಟಿ ದುಪ್ಪಟ್ಟಿದೆ. ವಿಶೇಷ ಎನ್ನುವಂತೆ ಡಿವೈನ್ ಸ್ಟಾರ್ ಸೂಪರ್ ಸ್ಟಾರ್ ರಜನಿಕಾಂತ್, ಕಮಲ್ ಹಾಸನ್, ಪ್ರಭಾಸ್, ಹೃತಿಕ್ ರೋಷನ್ ಸಿನಿಮಾಗಳಿಗೆ ಟಕ್ಕರ್ ಕೊಟ್ಟು ನಂಬರ್ 1 ಸ್ಥಾನ ಪಡೆದಿದ್ದಾರೆ. 2025ರ ಅತಿ ನಿರೀಕ್ಷಿತ ಭಾರತೀಯ ಸಿನಿಮಾಗಳ ಪಟ್ಟಿಯನ್ನು ಐಎಂಡಿಬಿ ಪ್ರಕಟಿಸಿದೆ. ಈ ಪಟ್ಟಿಯಲ್ಲಿ ನಂಬರ್ 1 ಸ್ಥಾನ ಕಾಂತಾರ ಪ್ರೀಕ್ವೆಲ್ ಪಾಲಾಗಿದೆ. ಕಾಂತಾರ 1 ಸಿನಿಮಾವನ್ನು ಸಿನಿಮಾಪ್ರೇಮಿಗಳು ಅದೆಷ್ಟು ನಿರೀಕ್ಷೆಯಿಂದ ಕಾಯುತ್ತಿದ್ದಾರೆ ಅನ್ನೋದಕ್ಕೆ ಐಎಂಡಿಬಿ ಪಟ್ಟಿಯೇ ಉದಾಹರಣೆಯಾಗಿದೆ. ಐಎಂಡಿಬಿ ಪಟ್ಟಿಯಲ್ಲಿ ಕಾಂತಾರ ಪ್ರೀಕ್ವೆಲ್ 1 ಸ್ಥಾನದಲ್ಲಿದ್ದರೆ, ಸೂರ್ಯ ‘ರೆಟ್ರೋ’ ಸಿನಿಮಾ ಮೂರನೇ ಸ್ಥಾನ ಪಡೆದುಕೊಂಡಿದೆ. ಅಜಯ್ ದೇವಗನ್ ಅಭಿನಯದ ‘ರೇಡ್ 2’ ಚಿತ್ರ ನಾಲ್ಕು, ರಜನಿಯ ‘ಕೂಲಿ’…