ಬೆಂಗಳೂರು: ಅಪರಿಚಿತ ವ್ಯಕ್ತಿಯೊಬ್ಬ ನಾಗಾ ಸಾಧು ಸೋಗಿನಲ್ಲಿ ಕಾರು ಚಾಲಕನೊಬ್ಬನಿಗೆ ವಂಚನೆ ಮಾಡಿರುವ ಘಟನೆ ಬೆಂಗಳೂರು ಹೈಗ್ರೌಂಡ್ ಪೊಲೀಸ್ ಠಾಣಾ ವ್ಯಾಪ್ತಿಯ ಶಾಂಗ್ರಿಲಾ ಹೋಟೆಲ್ ಬಳಿ ನಡೆದಿದೆ. ವೈಯಾಲಿಕಾವಲ್ ನಿವಾಸಿ ವೆಂಕಟಕೃಷ್ಣಯ್ಯ ಎಂಬುವವರಿಗೆ ವಂಚನೆ ಮಾಡಲಾಗಿದ್ದು, ಕೈಯಲ್ಲಿದ್ದ 10 ಗ್ರಾಂ ಚಿನ್ನದ ಉಂಗುರ ತೆಗೆದುಕೊಂಡು ಪರಾರಿಯಾಗಿದ್ದಾನೆ. ಏ.19ರಂದು ಖಾಸಗಿ ಹೋಟೆಲ್ ಬಳಿ ಮಾಲೀಕರನ್ನ ಡ್ರಾಪ್ ಮಾಡಿ ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿಕೊಂಡು ನಿಂತಿದ್ದರು. https://ainkannada.com/this-hair-pack-turns-white-hair-black-from-the-roots-knee-length-hair-guaranteed/ ಈ ವೇಳೆ ಅಲ್ಲಿಗೆ ಬಂದ ನಕಲಿ ನಾಗಸಾಧು ಚಾಲಕನನ್ನು ಕಂಡು 5 ನಿಮಿಷ ವಿಶ್ರಾಂತಿ ಪಡೆದುಕೊಳ್ಳಬೇಕು ಅಂತ ಹೇಳಿದ್ದಾನೆ. ನಂತ್ರ ತನ್ನ ಅಸಲಿ ವರಸೆ ತೆಗೆದಿದ್ದಾನೆ. ಚಾಲಕನಿಗೆ 5 ರುದ್ರಾಕ್ಷಿ ಕೊಟ್ಟು ಒಂದು ವಾಪಸ್ಸು ಕೂಡುವಂತೆ ಹೇಳಿದ್ದ. ವಾಪಸ್ ಕೊಟ್ಟ ರುದ್ರಾಕ್ಷಿಯನ್ನು ಪೇಪರ್‌ನಲ್ಲಿ ಮಡಚಿ ಓಪನ್ ಮಾಡಿದ್ದ. ಈ ವೇಳೆ ರುದ್ರಾಕ್ಷಿ ಹೂ ಆಗಿ ಬದಲಾಗಿತ್ತು. ನೋಡು ಇದು ಶುಭ ಸೂಚಕ ನಿನಗೆ ಒಳ್ಳೆಯದಾಗುತ್ತೆ ಲಕ್ಷ್ಮಿ ಕೃಪಾಕಟಾಕ್ಷವಾಗುತ್ತೆ ಅಂತ ರೈಲುಬಿಟ್ಟಿದ್ದಾನೆ. ನಂತ್ರ ನಿನ್ನ ಕೈಯಲ್ಲಿರುವ ಚಿನ್ನದ ಉಂಗುರ ಕೊಡು…
Author: Author AIN
ಬೆಂಗಳೂರು: ಗ್ರಾಮ ಆಡಳಿತಾಧಿಕಾರಿಗಳ ನೇಮಕಾತಿಯನ್ನು ಒಂದು ರೂಪಾಯಿ ಲಂಚವಿಲ್ಲದೇ, ಮಧ್ಯವರ್ತಿಗಳ ಹಾವಳಿಯಿಲ್ಲದೇ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಕಂದಾಯ ಇಲಾಖೆಯಲ್ಲಿ ನೂತನವಾಗಿ ಆಯ್ಕೆಯಾಗಿರುವ 1000 ಗ್ರಾಮ ಆಡಳಿತಾಧಿಕಾರಿಗಳಿಗೆ ನೇಮಕಾತಿ ಆದೇಶ ವಿತರಣೆ, ಅಭಿಶಿಕ್ಷಣ ತರಬೇತಿ ಮತ್ತು 4000 ಕ್ರೋಮ್ ಬುಕ್ ವಿತರಣೆ ಹಾಗೂ ಸಾಧನೆಯ ಹಾದಿಯಲ್ಲಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು. https://ainkannada.com/this-hair-pack-turns-white-hair-black-from-the-roots-knee-length-hair-guaranteed/ ಹಿಂದೆ 94-95 ರಲ್ಲಿ ಗೋವಿಂದೇಗೌಡರು ಇದ್ದ ಸಂದರ್ಭದಲ್ಲಿ ಒಂದು ಲಕ್ಷ ಉಪಾಧ್ಯಾಯರನ್ನು ಲಂಚವಿಲ್ಲದೇ, ಮಧ್ಯವರ್ತಿಗಳಿಲ್ಲದೇ ನೇಮಕಾತಿ ಮಾಡಲಾಗಿತ್ತು. ಪ್ರಸ್ತುತ ಆರು ಲಕ್ಷ ಅರ್ಜಿಗಳಲ್ಲಿ ಒಂದು ಸಾವಿರ ಗ್ರಾಮ ಆಡಳಿತಾಧಿಕಾರಿಗಳು ಆಯ್ಕೆಯಾಗಿದ್ದು, ಆಯ್ಕೆಯಾಗಿರುವವರು ಪುಣ್ಯವಂತರು. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಪರೀಕ್ಷೆಯಲ್ಲಿ ಮೆರಿಟ್ ಆಧಾರದ ಮೇಲೆ ಆಯ್ಕೆಯಾಗಿದ್ದೀರಿ. 9834 ಒಟ್ಟು ಗ್ರಾಮ ಆಡಳಿತಾಧಿಕಾಗಳಿದ್ದು, ಅದರಲ್ಲಿ 8003 ಜನ ಕಾರ್ಯನಿರ್ವಹಿಸುತ್ತಿದ್ದಾರೆ.ಈಗ 1000 ಜನ ಸೇರ್ಪಡೆಯಾಗುತ್ತಿದ್ದಾರೆ. ಯಾವುದೇ ಗ್ರಾಮ ಆಡಳಿತಾಧಿಕಾರಿಯ ಹುದ್ದೆ ಖಾಲಿ ಇಲ್ಲದಂತೆ ಭರ್ತಿ ಮಾಡುವ ಕೆಲಸವನ್ನು ಸರ್ಕಾರ ಮಾಡಲಿದೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.…
ಅಕ್ಷಯ ತೃತೀಯಕ್ಕೆ ವಿಶೇಷವಾದ ಮಹತ್ವವನ್ನು ನೀಡಲಾಗಿದೆ. ಈ ದಿನ ದಾನ ಧರ್ಮವನ್ನು ಮಾಡುವುದರೊಂದಿಗೆ ಕೆಲವು ವಸ್ತುಗಳನ್ನು ಖರೀದಿಸುವುದು ಬಹಳ ಶುಭ ಎಂದು ಹೇಳಲಾಗುತ್ತದೆ. ಪ್ರತಿ ವರ್ಷ ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯ ತಿಥಿದಂದು ಅಕ್ಷಯ ತೃತೀಯವನ್ನು ಆಚರಿಸಲಾಗುವುದು. ಈ ವರ್ಷ ಏಪ್ರಿಲ್ 30ರ ಬುಧವಾರ, ಅಕ್ಷಯ ತೃತೀಯ ಹಬ್ಬವನ್ನು ಆಚರಿಸಲಾಗುವುದು. ಈ ತಿಥಿಯ ಆರಂಭವು ಏಪ್ರಿಲ್ 29ರ ಸಂಜೆ 5.29 ಕ್ಕೆ ಆಗುವುದು. ಆದರೆ ಉದಯ ತಿಥಿಯ ಅನುಸಾರ ಅಕ್ಷಯ ತೃತೀಯವನ್ನು ಏಪ್ರಿಲ್ 30 ರಂದು ಆಚರಿಸಲಾಗುವುದು. ಅಕ್ಷಯ ತೃತೀಯದಂದು ಚಿನ್ನ ಖರೀದಿಸುವುದೇಕೆ? ಹಿಂದೂ ಧರ್ಮದಲ್ಲಿ ಚಿನ್ನವನ್ನು ಲಕ್ಷ್ಮಿ ದೇವಿಯ ರೂಪವೆಂದು ಪರಿಗಣಿಸಲಾಗುತ್ತದೆ. ಈ ನಂಬಿಕೆಯ ಹಿಂದೆ ಒಂದು ಪೌರಾಣಿಕ ಕಥೆಯಿದೆ, ಅದರ ಪ್ರಕಾರ, ದೇವತೆಗಳು ಮತ್ತು ರಾಕ್ಷಸರು ಒಟ್ಟಾಗಿ ಸಮುದ್ರ ಮಂಥನ ಮಾಡಿದಾಗ, ಲಕ್ಷ್ಮಿ ದೇವಿಯೊಂದಿಗೆ ಅನೇಕ ಬೆಲೆಬಾಳುವ ವಸ್ತುಗಳು ಹೊರಹೊಮ್ಮಿದವು. ಅವುಗಳಲ್ಲಿ ಚಿನ್ನವೂ ಒಂದು. ವಿಷ್ಣು ಈ ಚಿನ್ನವನ್ನು ಧರಿಸಿದ್ದನು. ಈ ಕಾರಣಕ್ಕಾಗಿ, ಇದನ್ನು ಲಕ್ಷ್ಮಿ ದೇವಿಯ…
ಬೆಂಗಳೂರು: ಭಾರತೀಯ ಯೋಧರಲ್ಲಿ ಸ್ಥೈರ್ಯ ತುಂಬಲು ಶ್ರೀರಾಮಸೇನೆಯಿಂದ ಪರಶುರಾಮ ಜಯಂತಿ ಮಾಡಲಾಗುವುದು ಎಂದು ಶ್ರೀರಾಮಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ಪಹಲ್ಗಾಮ್ ಉಗ್ರರ ದಾಳಿಯಲ್ಲಿ ಮಡಿದರಿಗೆ ಸಂತಾಪ ಸೂಚಿಸಲು ಮತ್ತು ಈ ಘಟನೆಗೆ ಸಂಬಂಧಿಸಿದಂತೆ ಉಗ್ರರಿಗೆ, ಅವರ ಪೋಷಕರಿಗೆ ತಕ್ಕ ಉತ್ತರ ನೀಡಲು ಹಾಗೂ ನಮ್ಮ ದೇಶದ ಯೋಧರಲ್ಲಿ ಧೈರ್ಯ ಮತ್ತು ಸ್ಥೈರ್ಯ ತುಂಬಲು ಪರಶುರಾಮ್ ಜಯಂತಿ ಆಚರಿಸಲಾಗುತ್ತಿದೆ, ಸಮಾಜಕ್ಕೂ ಧೈರ್ಯ ತುಂಬಲು ಹೋಮ ಯಜ್ಞಗಳನ್ನು ನೆರವೇರಿಸಲಾಗುತ್ತಿದೆ ಎಂದರು. https://ainkannada.com/this-hair-pack-turns-white-hair-black-from-the-roots-knee-length-hair-guaranteed/ ಇನ್ನೂ ಹಿಂದೂ ಧರ್ಮದ ಬಲವರ್ಧನೆ ಮತ್ತು ಭಾರತದಲ್ಲಿದ್ದುಕೊಂಡು ಪಾಕಿಸ್ತಾನದ ಪರ ಘೋಷಣೆ ಕೂಗುವವರು ನಿರ್ನಾಮವಾಗಬೇಕು ಎಂಬ ಉದ್ದೇಶವೂ ಪರಶುರಾಮ್ ಜಯಂತಿ ಆಚರಣೆಯ ಭಾಗವಾಗಿದೆ ಎಂದು ಮುತಾಲಿಕ್ ಹೇಳಿದರು.
ಹೇಳಿಕೇಳಿ ಇದು ಡಿಜಿಟಲ್ ಜಮಾನ. ಸ್ವಲ್ಪ ಯಾಮಾರಿದ್ರೂ ಉಂಡೇ ನಾಮ ತಿಕ್ಕೋರು ಜಾಸ್ತಿನೇ. ಇನ್ನು, ಆನ್ ಲೈನ್‌ನಲ್ಲಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗುತ್ತೇ ಅಂತಾ ನೀವು ಆ ಕುಣಿಗೆ ಸಿಕ್ಕಿದ್ರೆ ಮುಗಿತು ಕಥೆ. ಆ ಕುಣಿಕೆಯಿಂದ ಹೊರಬರೋದಿಕ್ಕೆ ಸರ್ಕಸ್ ಮಾಡಬೇಕು. ಈ ಜಾಲದಲ್ಲಿ ಕನ್ನಡದ ಕಿರುತೆರೆ ನಟಿ ಸಿಲುಕಿದ್ದಾರೆ ಅನ್ನೋದೇ ವಿಪರ್ಯಾಸ. ‘ಸೀತೆ’, ‘ಪತ್ತೇದಾರಿ’, ʼಪಲ್ಲವಿ ಅನುಪಲ್ಲವಿʼ, ‘ಅಂತರಪಟ’ ಸೇರಿದಂತೆ ಧಾರಾವಾಹಿಗಳ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಪರಿಚಯರಾಗಿರುವ ಶರ್ಮಿಳಾ ಚಂದ್ರಶೇಖರ್ ಆನ್‌ಲೈನ್ ಬಡ್ಡಿಕೋರರು ಬೀಸಿದ ಬಲೆಯಲ್ಲಿ ಸಿಲುಕಿದ್ದಾರೆ. ಈ ಸಂಬಂಧ ಅವರು ವಿಡಿಯೋವೊಂದನ್ನು ಮಾಡಿ ನೀವು ಮೋಸ ಹೋಗಬೇಡಿ ಎಂದು ಸಂದೇಶ ಕೊಟ್ಟಿದ್ದಾರೆ. ಶರ್ಮಿಳಾ ಮಾತು! ಇತ್ತೀಚೆಗೆ ಆನ್‌ಲೈನ್ ಮೋಸ ಜಾಸ್ತಿ ಆಗಿದೆ, ವೇವ್ ಕ್ಯಾಶ್ ಲೋನ್ ಆಪ್‌ನಿಂದ ನಿಮಗೆ ಸಾಲ ಮಂಜೂರು ಆಗಿದೆ, ನೀವು ಸಾಲ ತೀರಿಸಿಲ್ಲ ಅಂದರೆ ನಿಮ್ಮ ಫೋಟೊಗಳನ್ನು ಬಳಸಿಕೊಂಡು, ಅಶ್ಲೀಲವಾಗಿ ಎಡಿಟ್ ಮಾಡುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ಹೇಳಿದ್ದಾರೆ. ನನ್ನೆಲ್ಲ ವಾಟ್ಸಾಫ್ ಬಳಕೆದಾರರಿಗೆ…
ಜಿಯೋ ದೇಶದ ನಂಬರ್ ಒನ್ ಟೆಲಿಕಾಂ ಕಂಪನಿಯಾಗಿದೆ. ದೇಶದಲ್ಲಿ ಸುಮಾರು 460 ಮಿಲಿಯನ್ ಗ್ರಾಹಕರನ್ನು ಹೊಂದಿರುವ ಲಕ್ಷಾಂತರ ಮೊಬೈಲ್ ಬಳಕೆದಾರರ ಅಗತ್ಯಗಳನ್ನು ರಿಲಯನ್ಸ್ ಜಿಯೋ ಪೂರೈಸುತ್ತಿರುವ ರೀತಿಯನ್ನು ಗಮನಿಸಿದರೆ, ಈ ಸಂಖ್ಯೆ ಶೀಘ್ರದಲ್ಲೇ 500 ಮಿಲಿಯನ್ ದಾಟಬಹುದು. ಜಿಯೋ ತನ್ನ ಗ್ರಾಹಕರಿಗೆ ಹಲವಾರು ರೀಚಾರ್ಜ್ ಯೋಜನೆಗಳ ಪಟ್ಟಿಯನ್ನು ನೀಡುತ್ತಿದೆ. ಕಂಪನಿಯು ಅಗ್ಗದ ಮತ್ತು ದುಬಾರಿ ಯೋಜನೆಗಳನ್ನು ಹೊಂದಿದೆ. ಜಿಯೋದ ದೀರ್ಘಾವಧಿಯ ಮಾನ್ಯತೆಯೊಂದಿಗೆ ಅಗ್ಗದ ಯೋಜನೆಯ ಬಗ್ಗೆ ತಿಳಿದುಕೊಳ್ಳೋಣ. ರಿಲಯನ್ಸ್ ಜಿಯೋ ತನ್ನ ಲಕ್ಷಾಂತರ ಗ್ರಾಹಕರಿಗಾಗಿ ಹಲವು ಉತ್ತಮ ಯೋಜನೆಗಳನ್ನು ಹೊಂದಿದೆ. ಗ್ರಾಹಕರು ತಮ್ಮ ಅನುಕೂಲಕ್ಕಾಗಿ ರೀಚಾರ್ಜ್ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಜಿಯೋ ತನ್ನ ಪೋರ್ಟ್‌ಫೋಲಿಯೊವನ್ನು ಹಲವಾರು ವರ್ಗಗಳಾಗಿ ವಿಂಗಡಿಸಿದೆ. ನೀವು ಅಗ್ಗದ, ದೀರ್ಘಾವಧಿಯ ಮಾನ್ಯತೆಯ ಯೋಜನೆಯನ್ನು ಹುಡುಕುತ್ತಿದ್ದರೆ, ದುಬಾರಿ ರೀಚಾರ್ಜ್ ಯೋಜನೆಗಳನ್ನು ತಪ್ಪಿಸಲು ಇದು ತುಂಬಾ ಉಪಯುಕ್ತವಾಗಿದೆ. ಜಿಯೋ ತನ್ನ ಪಟ್ಟಿಯಲ್ಲಿ ದೀರ್ಘಾವಧಿಯ ಮಾನ್ಯತೆಯೊಂದಿಗೆ ಹಲವು ರೀಚಾರ್ಜ್ ಯೋಜನೆಗಳನ್ನು ಹೊಂದಿದೆ. ನಿಮ್ಮ ಬಜೆಟ್‌ಗೆ ಅನುಗುಣವಾಗಿ ನೀವು ಯಾರನ್ನಾದರೂ…
ಇಡೀ ಕ್ರಿಕೆಟ್ ಜಗತ್ತು ಇವತ್ತು ಹದಿನಾಲ್ಕು ವರ್ಷದ ಪೋರ ವೈಭವ್ ಸೂರ್ಯವಂಶಿ ಬಗ್ಗೆ ಕೊಂಡಾಡುತ್ತಿದೆ. ಗುಣಗಾನ ಮಾಡುತ್ತಿದೆ. 14 ವರ್ಷದ ಪೋರನ ತಾಕತ್ತು, ಗತ್ತು, ಗೈರತ್ತಿನ ಬಗ್ಗೆ ಕ್ರಿಕೆಟ್ ದಿಗ್ಗಜರೇ ಸಲಾಂ ಎನ್ನುತ್ತಿದ್ದಾರೆ. ನಿನ್ನೆ ನಡೆದ ಆರ್ ಆರ್ ವರ್ಸಸ್ ಜಿಟಿ ಐಪಿಎಲ್ ಕಾಳಗದಲ್ಲಿ ಎಲ್ಲರ ಕಣ್ಣು ಕುಕ್ಕಿದ್ದು, ಜಸ್ಟ್ ವಾವ್ ಎನ್ನುವ ಫರ್ಪಾಮೆನ್ಸ್ ಕೊಟ್ಟಿದ್ದು ಆರ್ ಆರ್ ಯಂಗೆಸ್ಟ್ ಫ್ಲೇಯರ್ ವೈಭವ್ ಸೂರ್ಯವಂಶಿ. ಭಾರತದ ಫ್ಯೂಚರ್ ಕ್ರಿಕೆಟ್ ತಾರೆ, ಆರ್ ಆರ್‌ನ ಗತವೈಭವ ಅಂತಾ ಕ್ರಿಕೆಟ್ ಪ್ರೇಮಿಗಳು ಸೂರ್ಯವಂಶಿಯನ್ನು ವರ್ಣನೆ ಮಾಡುತ್ತಿದ್ದಾರೆ. ಸಿಡಿಲಬ್ಬರದ ಆಟ ಆಡಿ ಆರ್ ಆರ್ ಗೆಲುವಿಗೆ ಕಾರಣರಾದ ವೈಭವ್ ಸೂರ್ಯವಂಶಿಗೆ ಮಹಾನ್ ಗುರುವಾಗಿ ಹಿಂದೆ ನಿಂತಿರುವವರು ನಮ್ಮ ಕನ್ನಡದ ಹೆಮ್ಮೆ ರಾಹುಲ್ ದ್ರಾವಿಡ್. ಐಪಿಎಲ್ ಬಿಡ್ಡಿಂಗ್‌ನಲ್ಲಿ ಈ 14ರ ಪೋರನ್ನು ಒಂದೂವರೆ ಕೋಟಿ ಕೊಟ್ಟು ಖರೀಸುವಂತೆ ಹಠ ಹಿಡಿದ್ದು ರಾಹುಲ್ ಡ್ರಾವಿಡ್. ದೆಹಲಿ ಕ್ಯಾಪಿಟಲ್ ಪಾಲಾಗದಂತೆ ವೈಭವ್ ನ್ನು ತಮ್ಮ ತಂಡಕ್ಕೆ ಬರ ಮಾಡಿಕೊಂಡಿದ್ದು ರಾಹುಲ್…
ಬೆಂಗಳೂರು: ಇತ್ತೀಚೆಗೆ ಶಾಲಾ-ಕಾಲೇಜು, ಹೋಟೆಲ್, ಏರ್ಪೋರ್ಟ್ಗಳಿಗೆ ಬಾಂಬ್ ಬೆದರಿಕೆ ಕರೆಗಳು ಹೆಚ್ಚಾಗುತ್ತಿದೆ. ಇನ್ನು ಇತ್ತೀಚೆಗಷ್ಟೇ ಬೆಂಗಳೂರಿನ ಜನಪ್ರಿಯ ಹೋಟೆಲ್‌ಗಳಿಗೆ ಬಾಂಬ್ ಬೆದರಿಕೆ ಇಮೇಲ್‌ಗಳು ಬಂದಿತ್ತು. ಇದೀಗ ಮತ್ತೊಮ್ಮೆ ಬೆಂಗಳೂರಿನಲ್ಲಿ ಬಾಂಬ್ ಬೆದರಿಕೆಯ ನಡುಕ ಉಂಟಾಗಿದೆ. ಬೆಂಗಳೂರಿನ ಪ್ರತಿಷ್ಠಿತ ಆಚಾರ್ಯ ಕಾಲೇಜಿನಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಸಂದೇಶ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ. https://ainkannada.com/this-hair-pack-turns-white-hair-black-from-the-roots-knee-length-hair-guaranteed/ ಅಪರಿಚಿತ ವ್ಯಕ್ತಿ ಇ-ಮೇಲ್ ಮೂಲಕ ಬೆದರಿಕೆ ಸಂದೇಶ ಕಳುಹಿಸಿದ್ದಾನೆ. ಜತೆಗೆ, ಕಾಲೇಜು ಪ್ರಾಂಶುಪಾಲರನ್ನು ಕತ್ತರಿಸಿ ಫ್ರಿಡ್ಜ್ನಲ್ಲಿಡುವುದಾಗಿ ಬೆದರಿಕೆ ಹಾಕಿದ್ದಾನೆ. ಆಚಾರ್ಯ ಕಾಲೇಜಿನ ಅಧಿಕೃತ ಇ-ಮೇಲ್ ಪರಿಶೀಲನೆ ವೇಳೆ ಬೆರಿಕೆ ಸಂದೇಶ ಗಮನಕ್ಕೆ ಬಂದಿದೆ. ಸದ್ಯ ಕಾಲೇಜಿನ ಆಡಳಿತ ಮಂಡಳಿ ಸೋಲದೇವನಹಳ್ಳಿ ಠಾಣೆಗೆ ದೂರು ನೀಡಿದೆ. ಘಟನೆ ಸಂಬಂಧ ಎನ್ಸಿಆರ್ ದಾಖಲಿಸಿಕೊಂಡಿರುವ ಸೋಲದೇವನಹಳ್ಳಿ ಪೊಲೀಸರು ನಂತರ ನ್ಯಾಯಾಲಯದ ಅನುಮತಿ ಪಡೆದು ಎಫ್ಐಆರ್ ದಾಖಲಿಸಿದ್ದಾರೆ. ಸದ್ಯ ತನಿಖೆ ಮುಂದುವರಿಸಿದ್ದಾರೆ.
ನಿಮ್ಮ ಆದಾಯದ ಒಂದು ಭಾಗವನ್ನು ಉಳಿಸುವ ಮೂಲಕ ಸುರಕ್ಷಿತ, ವಿಶ್ವಾಸಾರ್ಹ ಹೂಡಿಕೆಯನ್ನು ನೀವು ಹುಡುಕುತ್ತಿದ್ದರೆ, ಸಾರ್ವಜನಿಕ ಭವಿಷ್ಯ ನಿಧಿ (PPF) ನಿಮಗೆ ಉತ್ತಮ ಆಯ್ಕೆಯಾಗಿರಬಹುದು. ಇದು ಸರ್ಕಾರಿ ಖಾತರಿಯೊಂದಿಗೆ ಬರುವುದಲ್ಲದೆ, ಅದರ ಮೇಲಿನ ಬಡ್ಡಿಯೂ ಮಾರುಕಟ್ಟೆಯ ಏರಿಳಿತಗಳಿಂದ ಪ್ರಭಾವಿತವಾಗುವುದಿಲ್ಲ. ಇದರರ್ಥ ಷೇರು ಮಾರುಕಟ್ಟೆ ಕುಸಿತ ಅಥವಾ ಆರ್ಥಿಕ ಅನಿಶ್ಚಿತತೆ ಇದ್ದರೂ ಸಹ, ನಿಮ್ಮ ಹೂಡಿಕೆಯು ಅಪಾಯದಲ್ಲಿರುವುದಿಲ್ಲ. https://ainkannada.com/this-hair-pack-turns-white-hair-black-from-the-roots-knee-length-hair-guaranteed/ ಪಿಪಿಎಫ್ ಅನ್ನು ಸುರಕ್ಷಿತ ಉಳಿತಾಯ ಸಾಧನವೆಂದು ಪರಿಗಣಿಸಲಾಗುತ್ತದೆ, ವಿಶೇಷವಾಗಿ ದೀರ್ಘಾವಧಿಯಲ್ಲಿ. ನೀವು ಇದರಲ್ಲಿ ನಿಯಮಿತವಾಗಿ ಹೂಡಿಕೆ ಮಾಡಿದರೆ, ಮುಂಬರುವ ವರ್ಷಗಳಲ್ಲಿ ನೀವು ದೊಡ್ಡ ನಿಧಿಯನ್ನು ರಚಿಸಬಹುದು. ನೀವು ರೂ.ಗಿಂತ ಹೆಚ್ಚಿನ ನಿಧಿಯನ್ನು ಹೇಗೆ ರಚಿಸಬಹುದು? 1 ಕೋಟಿ ರೂ. ಪ್ರತಿ ತಿಂಗಳು 12,500 ರೂ. ನೀವು ರೂ. ಹೂಡಿಕೆ ಮಾಡಿದರೆ. ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ (PPF) ಪ್ರತಿ ತಿಂಗಳು 12,500 ರೂಪಾಯಿಗಳನ್ನು ಠೇವಣಿ ಇಡುವುದರಿಂದ, ನೀವು 25 ವರ್ಷಗಳ ಅವಧಿಯಲ್ಲಿ ದೊಡ್ಡ ನಿಧಿಯನ್ನು ರಚಿಸಬಹುದು. ಹೂಡಿಕೆ ಮೊತ್ತ: ರೂ. ತಿಂಗಳಿಗೆ 12,500 ರೂ.…
ಜೂನಿಯರ್ ಎನ್‌ಟಿಆರ್ ಹಾಗೂ ಪ್ರಶಾಂತ್ ನೀಲಾ ಕಾಂಬಿನೇಷನ್ ಸಿನಿಮಾದ ಬಿಡುಗಡಗೆ ಮುಹೂರ್ತ ಫಿಕ್ಸ್ ಆಗಿದೆ. ಸ್ಪೆಷಲ್ ಪೋಸ್ಟರ್ ಮೂಲಕ ಚಿತ್ರತಂಡ ರಿಲೀಸ್ ಡೇಟ್ ಘೋಷಿಸಿದೆ. ಮುಂದಿನ ವರ್ಷದ ಜೂನ್ 25ಕ್ಕೆ ನೀಲ್-ಎನ್‌ಟಿಆರ್ ಸಿನಿಮಾ ತೆರೆಗೆ ಬರಲಿದೆ. ತಾರಕ್ ಬರ್ತಡೇಗೆ ಫಸ್ಟ್ ಗ್ಲಿಂಪ್ಸ್! ಜೂನಿಯರ್ ಎನ್‌ಟಿಆರ್ ಬರ್ತಡೇಗೆ ಚಿತ್ರತಂಡ ಫಸ್ಟ್ ಗ್ಲಿಂಪ್ಸ್ ರಿಲೀಸ್ ಮಾಡೋದಾಗಿ ಘೋಷಿಸಿದೆ. ಮುಂದಿನ ತಿಂಗಳ 20ರಂದು ಈ ಚಿತ್ರದ ಮೊದಲ ಝಲಕ್ ರಿಲೀಸ್ ಆಗಿದೆ. ಸದ್ಯ ಚಿತ್ರತಂಡ ಟೈಟಲ್ ರಿವೀಲ್ ಮಾಡಿಲ್ಲ. ಆದ್ರೆ ಡ್ರ್ಯಾಗನ್ ಎಂಬ ಶೀರ್ಷಿಕೆಯನ್ನು ಫಿಕ್ಸ್ ಮಾಡಿದೆ ಎಂಬ ಸುದ್ದಿ ಇದೆ. ಜ್ಯೂ.ಎನ್‌ಟಿಆರ್ ಹೊಸ ಚಿತ್ರದ ಚಿತ್ರೀಕರಣ ಉತ್ತರ ಕನ್ನಡದ ಕಡಲ ಕಿನಾರೆಯಲ್ಲಿ ನಡೆಯುತ್ತಿದೆ. ಕುಮುಟಾದ ರಾಮನಗಿಂಡಿ ಬೀಚ್‌ನಲ್ಲಿ ಶೂಟಿಂಗ್ ಭರದಿಂದ ಸಾಗುತ್ತಿದೆ. ಈ ಚಿತ್ರಕ್ಕಾಗಿ ಯಂಗ್ ಟೈಗರ್ ಭರ್ಜರಿಯಾಗಿ ದೇಹ ದಂಡಿಸಿದ್ದಾರೆ. ಪಾತ್ರಕ್ಕಾಗಿ 5 ತಿಂಗಳಲ್ಲಿ ಬರೋಬ್ಬರಿ 18 ಕೆಜಿ ತೂಕ ಇಳಿಸಿಕೊಂಡಿದ್ದಾರಂತೆ. ಈಗಾಗಲೇ ವಿಶಾಖಪಟ್ಟಣಂ ಹಾಗೂ ಹೈದರಾಬಾದ್‌ನಲ್ಲಿ ಒಂದೊಂದು ಹಂತದ ಚಿತ್ರೀಕರಣವನ್ನು ತಂಡ…