Author: Author AIN

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಗಾಜಾ ಮೇಲೆ ತಮ್ಮ ದೇಶ ಸಂಪೂರ್ಣ ನಿಯಂತ್ರಣ ಹೊಂದಲಿದೆ ಎಂದು ಘೋಷಿಸಿದ ನಂತರ ಮೂರು ದೇಶಗಳು ಇಸ್ರೇಲ್‌ಗೆ ಎಚ್ಚರಿಕೆಗಳನ್ನು ನೀಡಿವೆ. ಇದಲ್ಲದೆ, ಈ ಎಚ್ಚರಿಕೆಯನ್ನು ಬೇರೆ ಯಾರೂ ಅಲ್ಲ, ಇಸ್ರೇಲ್‌ನ ಮಿತ್ರರಾಷ್ಟ್ರಗಳೇ ನೀಡಿದ್ದವು. ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಮಾನವೀಯ ನೆರವಿನ ಮೇಲೆ ಹೇರಲಾದ ದಿಗ್ಬಂಧನದ ಬಗ್ಗೆ ಕೆನಡಾ, ಫ್ರಾನ್ಸ್ ಮತ್ತು ಯುನೈಟೆಡ್ ಕಿಂಗ್‌ಡಮ್ ಆಕ್ರೋಶ ವ್ಯಕ್ತಪಡಿಸಿವೆ. ಬ್ರಿಟಿಷ್ ಪ್ರಧಾನಿ ಕೀರ್ ಸ್ಟಾರ್ಮರ್, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮತ್ತು ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ ಜಂಟಿ ಹೇಳಿಕೆಯಲ್ಲಿ ಇಸ್ರೇಲ್ ತನ್ನ ದಾಳಿಯನ್ನು ಹೆಚ್ಚಿಸುವುದನ್ನು ಟೀಕಿಸಿದರು. ಗಾಜಾದಲ್ಲಿನ ಪರಿಸ್ಥಿತಿಗಳು ಅಸಹನೀಯವಾಗಿವೆ ಎಂದು ಅವರು ಹೇಳಿದರು. ಇಸ್ರೇಲ್ ತನ್ನ ದಾಳಿಯನ್ನು ಮುಂದುವರಿಸಿದರೆ, ಖಂಡಿತವಾಗಿಯೂ ಕಠಿಣ ಪ್ರತಿಕ್ರಿಯೆ ನೀಡಲಾಗುವುದು ಎಂದು ಅವರು ಎಚ್ಚರಿಸಿದರು. https://ainkannada.com/does-drinking-beer-cause-kidney-stones-a-must-see-story-for-oil-lovers/ “ನೆತನ್ಯಾಹು ಸರ್ಕಾರ ಈ ಅತಿರೇಕದ ಕ್ರಮಗಳನ್ನು ಮುಂದುವರಿಸುತ್ತಿರುವಾಗ ನಾವು ಸುಮ್ಮನೆ ನಿಂತು ನೋಡುವುದಿಲ್ಲ. ಇಸ್ರೇಲ್ ತನ್ನ ಮಿಲಿಟರಿ ದಾಳಿಯನ್ನು ನಿಲ್ಲಿಸದಿದ್ದರೆ ಮತ್ತು ಮಾನವೀಯ ನೆರವಿನ ಮೇಲಿನ…

Read More

ಇಂಡಿಯನ್ ಪ್ರೀಮಿಯರ್ ಲೀಗ್ ನ 62ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್(RR) ಚೆನ್ನೈ ಸೂಪರ್ ಕಿಂಗ್ಸ್ವಿರುದ್ಧ ರೋಚಕ ಗೆಲುವು ಸಾಧಿಸಿದೆ. ರಾಜಸ್ಥಾನ್ ರಾಯಲ್ಸ್‌ನ ಯುವ ಆಟಗಾರ, 14 ವರ್ಷದ ವೈಭವ್ ಸೂರ್ಯವಂಶಿ, ಧೋನಿ ಅವರ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. https://twitter.com/AapkaAkash05/status/1924887290125681052 ಹೌದು ಪಂದ್ಯದ ನಂತರ ಎರಡೂ ತಂಡಗಳ ಆಟಗಾರರು ಕೈಕುಲುಕುತ್ತಿದ್ದಾಗ ಧೋನಿ ಬಳಿಗೆ ಬಂದ ವೈಭವ್ ಸೂರ್ಯವಂಶಿ, ಇದ್ದಕ್ಕಿದ್ದಂತೆ ಮಾಜಿ ಭಾರತೀಯ ನಾಯಕನ ಪಾದಗಳಿಗೆ ನಮಸ್ಕರಿಸಿದ್ದಾರೆ. ಈ ಅನಿರೀಕ್ಷಿತ ಬೆಳವಣಿಗೆಗೆ ಧೋನಿ ಕೂಡ ನಗುತ್ತಾ, ವೈಭವ್ ಅವರನ್ನು ಹಿಡಿದು ಮೇಲಕ್ಕೆತ್ತಿ, ಸ್ವಲ್ಪ ಹೊತ್ತು ಅವರೊಂದಿಗೆ ಮಾತುಕಥೆ ನಡೆಸುವುದು ಕಂಡುಬಂದಿತು. ಈ ಅದ್ಭುತ ದೃಶ್ಯವು ಭಾರತೀಯ ಸಂಸ್ಕೃತಿಯಲ್ಲಿ ಹಿರಿಯರಿಗೆ ತೋರಿಸಲಾಗುವ ಗೌರವವನ್ನು ಸಂಕೇತಿಸುತ್ತದೆ ಎಂದು ನೆಟಿಜನ್‌ಗಳು ಕಾಮೆಂಟ್ ಮಾಡುತ್ತಿದ್ದಾರೆ.

Read More

ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಕೆಟ್ಟ ಸುದ್ದಿ ಬಂದಿದೆ. ಏಕೆಂದರೆ ಅದರ ಪ್ರಮುಖ ಆಟಗಾರರಲ್ಲಿ ಒಬ್ಬರಾದ ದಿಗ್ವೇಶ್ ರಥಿ ಅವರನ್ನು ಅಮಾನತುಗೊಳಿಸಲಾಯಿತು. ಅಭಿಷೇಕ್ ಶರ್ಮಾ ಜೊತೆಗಿನ ವಾಗ್ವಾದಕ್ಕಾಗಿ ಸ್ಪಿನ್ನರ್ ರಥಿ ಅಮಾನತು ಎದುರಿಸಿದರು. ಮೇ 19 ರಂದು ಲಕ್ನೋದಲ್ಲಿ ನಡೆದ LSG vs SRH ನಡುವಿನ ಪಂದ್ಯದ ಸಮಯದಲ್ಲಿ ಇಬ್ಬರ ನಡುವಿನ ಜಗಳ ನಡೆಯಿತು. https://ainkannada.com/want-to-dissolve-kidney-stones-painlessly-if-so-drink-this-juice-on-an-empty-stomach-results-guaranteed/ ಆದಾಗ್ಯೂ, ಅಭಿಷೇಕ್ ಶರ್ಮಾ ನಂತರ ಪಂದ್ಯದ ನಂತರ ದಿಗ್ವೇಶ್ ರಥಿ ಜೊತೆಗಿನ ತಮ್ಮ ಜಗಳದ ಬಗ್ಗೆ ಹೇಳಿದರು. ಆದರೆ, ಮೈದಾನದಲ್ಲಿ ಏನೇ ನಡೆದರೂ ಅದು ಪಂದ್ಯದ ರೆಫರಿಯ ದೃಷ್ಟಿಯಲ್ಲಿ ಸರಿಯಾಗಿರುವುದಿಲ್ಲ ಎಂಬುದು ತಿಳಿದಿದೆ. ಐಪಿಎಲ್ ನಿಯಮಗಳ ಪ್ರಕಾರ, ದಿಗ್ವೇಶ್ ರಥಿಯ ಕ್ರಮವನ್ನು ಎದುರಿಸಬೇಕಾಯಿತು. ದಿಗ್ವೇಶ್ ರತಿ ನಿಷೇಧ.. ಈ ಋತುವಿನಲ್ಲಿ ದಿಗ್ವೇಶ್ ರಥಿ ಲೆವೆಲ್ 1 ದುರ್ವರ್ತನೆಯಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿರುವುದು ಇದು ಮೂರನೇ ಬಾರಿ ಎಂದು ಐಪಿಎಲ್ ಹೇಳಿಕೆಯಲ್ಲಿ ತಿಳಿಸಿದೆ. ಮೂರನೇ ಬಾರಿಗೆ ತಪ್ಪಿತಸ್ಥನೆಂದು ಸಾಬೀತಾದ ನಂತರ, ಅವರು ಈಗ 5 ಡಿಮೆರಿಟ್ ಅಂಕಗಳನ್ನು…

Read More

ಬೆಂಗಳೂರು: ಕಾಂಗ್ರೆಸ್ ಸಾಧನೆ ಬೆಂಗ್ಳೂರಿನ ರಸ್ತೆ, ಚರಂಡಿಗಳಲ್ಲಿ ಕೊಚ್ಚೆಯಾಗಿ ಕೊಚ್ಚಿ ಹೋಗುತ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಮಳೆ ಅವಾಂತರದಿಂದಾಗಿ ಬೆಂಗಳೂರು ಜನ ಸತ್ತು ಬದುಕುತ್ತಿದ್ದರೆ ರಾಜ್ಯ ಕಾಂಗ್ರೆಸ್ ನಾಯಕರಿಗೆ ಸಾಧನಾ ಸಮಾವೇಶದ ಚಿಂತೆಯಾಗಿದೆ. ಒಂದು ವಾರದಿಂದ ಬಣ್ಣಬಣ್ಣದ ಸರಣಿ ಗ್ಯಾರಂಟಿ ಜಾಹೀರಾತುಗಳನ್ನು ಹಾಕುತ್ತಿದ್ದಾರೆ. ಬೆಂಗಳೂರು ಜನ ಬ್ರ‍್ಯಾಂಡೆಡ್ ನರಕದಲ್ಲಿದ್ದಾರೆ. ನಗರದ ಜನ ನರಳುತ್ತಿದ್ದರೆ ಇವರಿಗೆ ಪ್ರಚಾರದ ಗೀಳು ಎಂದು ಕಿಡಿಕಾರಿದ್ದಾರೆ. ಜನ ಸತ್ತು ಬದುಕುತ್ತಿದ್ದರೆ ಕಾಂಗ್ರೆಸ್ ನಾಯಕರಿಗೆ ಸಾಧನಾ ಸಮಾವೇಶದ ಚಿಂತೆ. ವಾರದಿಂದ ಬಣ್ಣಬಣ್ಣದ ಸರಣಿ ಗ್ಯಾರಂಟಿ ಜಾಹೀರಾತು ಬೇರೆ. ಬೆಂಗಳೂರು ಜನ ಬ್ರ‍್ಯಾಂಡೆಡ್ ನರಕದಲ್ಲಿದ್ದಾರೆ. ನಗರ ನರಳುತ್ತಿದ್ದರೆ ಇವರಿಗೆ ಪ್ರಚಾರದ ಗೀಳು. ಕಾಂಗ್ರೆಸ್ ಸರ್ಕಾರದ ಸಾಧನೆ ಬೆಂಗಳೂರು ರಸ್ತೆಗಳಲ್ಲಿ, ಚರಂಡಿಗಳಲ್ಲಿ ಕೊಚ್ಚೆಯಾಗಿ ಕೊಚ್ಚಿ ಹೋಗುತ್ತಿದೆ. ಇವರಿಗೆ ಆತ್ಮಸಾಕ್ಷಿ ಎನ್ನುವುದು ಇದೆಯಾ? ಸತ್ತ ಸರ್ಕಾರಕ್ಕೆ ಸಾಧನೆ ಸಮಾವೇಶ ಬೇರೆ. ಡಿಸಿಎಂ ಡಿ.ಕೆ.ಶಿವಕುಮಾರ್ ಮಾತಿನ ಡಬ್ಬಾ ಹೊಡೆಯುವುದು…

Read More

ಇಂದು ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ತಾಯಿ ಮೀನು ತೂಗುದೀಪ ಅವರ ಹುಟ್ಟುಹಬ್ಬ. ದಚ್ಚು ಪ್ರೀತಿಯ ತಾಯಿ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಈ ಖುಷಿ ಕ್ಷಣದಲ್ಲಿ ಮೀನಾ ಇಬ್ಬರು ಸೊಸೆಯೊಂದಿರೊಟ್ಟಿಗೆ ಕಾಣಿಸಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಮೀನಾ ತೂಗುದೀಪ್‌ ಅವರೊಟ್ಟಿಗೆ ದರ್ಶನ್‌ ಪತ್ನಿ ವಿಜಯಲಕ್ಷ್ಮಿ ದರ್ಶನ್‌ ಹಾಗೂ ದಿನಕರ್‌ ತೂಗುದೀಪ ಪತ್ನಿ ಮಾನಸ ಕಾಣಿಸಿಕೊಂಡಿದ್ದಾರೆ. ಈ ಫೋಟೋ ನೋಡಿ ಡಿ ಫ್ಯಾನ್ಸ್‌ ಫುಲ್‌ ಖುಷಿಯಾಗಿದ್ದಾರೆ. https://twitter.com/AKDSS_Rajajingr/status/1924724549754749438

Read More

ಹುಬ್ಬಳ್ಳಿ: ರಾಜ್ಯ ಕಾಂಗ್ರೆಸ್ ಸರ್ಕಾರ 2 ವರ್ಷ ಪೂರೈಸಿದ ಹಿನ್ನಲೆಯಲ್ಲಿ ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿ ನಡೆದ “ಸಮರ್ಪಣೆ ಸಂಕಲ್ಪ”ಕ್ಕೆ ಬಿಜೆಪಿ ಕಟು ಟೀಕೆ ಮಾಡಿದೆ. ಸರ್ಕಾರದ ಸಾಧನೆ ಸಮಾವೇಶ ಬಗ್ಗೆ ಬಿಜೆಪಿ ಎಮ್.ಎಲ್.ಸಿ ಎಸ್ ವಿ ಸಂಕನೂರ ಹರಿಹಾಯ್ದಿದ್ದಾರೆ. ಗದಗನಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎಸ್.ವಿ ಸಂಕನೂರ, ಏನು ಸಾಧನೆ ಮಾಡಿದ್ದಿರೆಂದು ಸಾಧನೆ ಸಮಾವೇಶ ಮಾಡ್ತಿದ್ದಿರಿ? ಯಾವ ಸಿಎಂ ಮಾಡದ 2.40 ಲಕ್ಷ ಕೋಟಿ ಸಾಲ ಮಾಡಿದ್ದಿರಲ್ಲಾ. ಇದೇನಾ ನಿಮ್ಮ ಸಾಧನೆ ಎಂದು ಪ್ರಶ್ನಿಸಿದ್ದಾರೆ. ಭ್ರಷ್ಟಾಚಾರ ಕುರಿತು ದೇಶದಲ್ಲಿ ಕರ್ನಾಟಕ ರಾಜ್ಯ ನಂಬರ್ 1 ಎಂಬುದು ನಿಮ್ಮ ಸಾಧನೆನಾ? ಹೀಗಂತ ನಿಮ್ಮದೆ ಪಕ್ಷದ ಶಾಸಕರು ಹೇಳ್ತಿದ್ದಾರೆ. ನಮ್ಮ ಮೇಲೆ ಆರೋಪ ಮಾಡಿದ್ರಿ 40% ಭ್ರಷ್ಟಾಚಾರ ಸರಕಾರ ಅಂತ. ನೀವೇನು ಮಾಡಿದ್ದೀರಿ ಈಗ. 60% ಕಮಿಷನ್ ಹೆಚ್ಚಳ ಮಾಡಿದ್ದೆವೆಂಬ ಕಾರಣಕ್ಕೆ ಸಾಧನಾ ಸಮಾವೇಶ ಮಾಡ್ತಿರಾ? ಹಿಂದಿನ ಮುಖ್ಯಮಂತ್ರಿಗಳು ವಿಶೇಷ ಬಜೆಟ್ ಮಂಡಿಸಿದ್ದಾರೆ. ಸಿದ್ದರಾಮಯ್ಯ ಅವರು ರಾಜ್ಯಕ್ಕೆ ಕೊರತೆ ಬಜೆಟ್ ಮಂಡಿಸಿದ್ದಾರೆ. ಇದಕ್ಕಾಗಿ…

Read More

ಬೆಂಗಳೂರು: ಆಪರೇಷನ್ ಸಿಂಧೂರ್ ಬಗ್ಗೆ ಕೋಲಾರದ ಶಾಸಕ ಕೊತ್ತೂರು ಮಂಜುನಾಥ್ ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಂಗಳೂರು ನಾಗರಿಕ ಹೋರಾಟ ಸಮಿತಿಯ ಉಪಾಧ್ಯಕ್ಷ ಗಣೇಶ್ ರಾವ್ ಅವರು ಕೊತ್ತೂರು ಮಂಜುನಾಥ್ ವಿರುದ್ಧ ದೂರು ದಾಖಲಿಸಿದ್ದು, ಕ್ರಮಕ್ಕಾಗಿ ಆಗ್ರಹಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್​ನಲ್ಲಿ ನಡೆದ ಉಗ್ರರ​ ದಾಳಿಯ ಪ್ರತೀಕಾರವಾಗಿ ಭಾರತೀಯ ಸೇನೆ ಆಪರೇಷನ್​ ಸಿಂದೂರ್ ಕಾರ್ಯಾಚರಣೆ ನಡೆಸಿದೆ. ಈ ಆಪರೇಷನ್​ ಸಿಂದೂರ್ ಕಾರ್ಯಾಚರಣೆ ಮೂಲಕ ಭಾರತೀಯ ಸೇನೆ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದೆ. https://ainkannada.com/want-to-dissolve-kidney-stones-painlessly-if-so-drink-this-juice-on-an-empty-stomach-results-guaranteed/ ಭಾರತೀಯ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ 100 ಮಂದಿ ಉಗ್ರರು ಹತರಾಗಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ತಿಳಿಸಿದ್ದಾರೆ. ಆದರೆ, ಈ ಆಪರೇಷನ್ ಸಿಂದೂರ್​​ ಕಾರ್ಯಾಚರಣೆ ಕುರಿತು ಕಾಂಗ್ರೆಸ್​ ಶಾಸಕ ಕೊತ್ತೂರು ಮಂಜುನಾಥ್​ ವಿವಾದಾತ್ಮಕವಾಗಿ ಹೇಳಿಕೆ ನೀಡಿದ್ದರು. ತಮ್ಮ ಮಾತುಗಳ ಮೂಲಕ 140 ಕೋಟಿ ಭಾರತೀಯರ ಭಾವನೆಗಳಿಗೆ ದಕ್ಕೆ ತಂದಿರುವ ಹಾಗೂ ಬಹಿರಂಗವಾಗಿ ಭಾರತ ದೇಶ ಮತ್ತು ಭಾರತೀಯ ಸೇನೆಗೆ ಅವಮಾನಕರ…

Read More

ಹುಬ್ಬಳ್ಳಿ: ಏಕಾಏಕಿಯಾಗಿ ಕಾರೊಂದು ಬೆಂಕಿಯಿಂದ ಧಗಧಗ ಹೊತ್ತಿ ಉರಿದ ಘಟನೆ ಹುಬ್ಬಳ್ಳಿಯ ತಾರಿಹಾಳ ಟೋಲ್ ಬಳಿ ಈಗಷ್ಟೇ ನಡೆದಿದೆ. ಹೌದು,,, ಧಾರವಾಡತ್ತ ಹೊರಟಿದ್ದ ಕಾರಿನಲ್ಲಿ ಏಕಾಏಕಿಯಾಗಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೆ ಅದರಲ್ಲಿದ್ದ ಕುಟುಂಬ ಕೆಳಗೆ ಇಳದಿದೆ. ಆಗ ಕಾರು ಬೆಂಕಿಯಿಂದ ಹೊತ್ತಿ ಉರಿದಿದೆ. ಸಧ್ಯ ಆ ಕಾರು ಯಾರದು ಎಲ್ಲಿಗೆ ಹೊರಟಿತ್ತು ಎಂಬದು ಪೊಲೀಸರಿಂದ ತಿಳಿಯಬೇಕಿದೆ.

Read More

ಬೆಂಗಳೂರು: ಈ ರಾಜ್ಯ ಸರ್ಕಾರಕ್ಕೆ ಮಾನ ಮರ್ಯಾದೆ ಯಾವುದೂ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕಿಡಿಕಾರಿದ್ದಾರೆ. ಸಿಲ್ಕ್ ಬೋರ್ಡ್‌ನ ಮಳೆ ಹಾನಿ ಪ್ರದೇಶಗಳಿಗೆ ಬಿಜೆಪಿ ನಿಯೋಗ ಮಂಗಳವಾರ ಭೇಟಿ ನೀಡಿ, ಮಳೆ ಹಾನಿಗೆ ಕಾರಣ, ಆಗಿರುವ ಹಾನಿ ಕುರಿತು ಪರಿಶೀಲನೆ ನಡೆಸಿ ಮಾತನಾಡಿದ ಅವರು, ಬೆಂಗಳೂರಿನ ಅಭಿವೃದ್ಧಿ ಕಾಮಗಾರಿಗಳ ಕಡೆ ಮುಖ್ಯಮಂತ್ರಿಗಳು ಗಮನ ಕೊಡಬೇಕು. ಕೆಲಸಗಳನ್ನು ತ್ವರಿತ ಗತಿಯಲ್ಲಿ ಮುಗಿಸಬೇಕು. ರಾಜ್ಯ ಸರ್ಕಾರ ಒಂದು ಅಯೋಗ್ಯ ಸರ್ಕಾರವಾಗಿದೆ. ಈ ಸರ್ಕಾರಕ್ಕೆ ಮಾನ ಮರ್ಯಾದೆ ಯಾವುದೂ ಇಲ್ಲ ಎಂದರು. https://ainkannada.com/want-to-dissolve-kidney-stones-painlessly-if-so-drink-this-juice-on-an-empty-stomach-results-guaranteed/ ಕೆಲವೇ ಕೆಲವು ಗಂಟೆ ಮಳೆ ಬಂದ ಸಂದರ್ಭದಲ್ಲಿ ಇಡೀ ಬೆಂಗಳೂರು ಮಹಾನಗರವು ಜಲಾವೃತವಾಗಿದೆ. ನಾಲ್ಕು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯನವರು ಗ್ರೇಟರ್ ಬೆಂಗಳೂರು ಬಗ್ಗೆ ಮಾತನಾಡುತ್ತಾರೆ. ಬೆಂಗಳೂರಿಗೆ ಕೇವಲ ಗ್ರೇಟರ್ ಹೆಸರು ಸೇರಿಸಿದರೆ ಸಾಕಾಗುವುದಿಲ್ಲ ಸ್ವಾಮೀ, ಬೆಂಗಳೂರಿನ ಅಭಿವೃದ್ಧಿಗೆ ಎಷ್ಟು ಸಾವಿರ ಕೋಟಿ ಅನುದಾನ ಕೊಡಲಾಗಿದೆ ಎಂದು ಪ್ರಶ್ನಿಸಿದ್ದಾರೆ.

Read More

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇದೇ 23ರಂದು ನಡೆಯಬೇಕಿದ್ದ ರಾಯಲ್‌ ಚಾಲೆಂಜೆರ್ಸ್‌ ಹಾಗೂ ಸನ್‌ ರೈಸರ್ಸ್‌ ಹೈದ್ರಾಬಾದ್‌ ನಡುವಿನ ಹೈವೋಲ್ಟೇಜ್‌ ಪಂದ್ಯ ರದ್ದಾಗಿದೆ. ಅಂದ್ರೆ ಬೆಂಗಳೂರಿನ ಬದಲು ಪಂದ್ಯ ಲಕ್ನೋಗೆ ಸ್ಥಳಾಂತರ ಮಾಡಲಾಗಿದೆ. ಬೆಂಗಳೂರಿನಲ್ಲಿ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದಾಗಿ ಲಕ್ನೋದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರಿಕೆಟ್ ಕ್ರೀಡಾಂಗಣಕ್ಕೆ ಸ್ಥಳಾಂತರಿಸಲಾಗಿದೆ. https://twitter.com/ESPNcricinfo/status/1924789020048900369 ರಾಜ್ಯಾದ್ಯಂತ ಮಳೆ ಅಬ್ಬರ ಜೋರಾಗಿದ್ದು, ಅದರಲ್ಲಿಯೂ ರಾಜಧಾನಿಯಲ್ಲಿ ವರುಣದೇವ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಇನ್ನೂ ಎರಡು ಮೂರು ದಿನ ಮಳೆ ಮುಂದುವರೆಯುವ ಸಾಧ್ಯತೆ ಇದೆ. ಹೀಗಾಗಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ಪಂದ್ಯವನ್ನು ಲಕ್ನೋಗೆ ಸ್ಥಳಾಂತರ ಮಾಡಲಾಗಿದೆ.  ಮೊನ್ನೆ ಕೋಲ್ಕತ್ತಾ ವರ್ಸಸ್‌ ಆರ್‌ ಸಿಬಿ ಪಂದ್ಯ ಮಳೆಯಿಂದ ನಿಂತಿತ್ತು. ಹೀಗಾಗಿ ಈ ರೀತಿ ಆಗದಂತೆ ಪಂದ್ಯವನ್ನು ಏಕಾನಾ ಕ್ರೀಡಾಂಣಕ್ಕೆ ಶಿಫ್ಟ್‌ ಮಾಡಲಾಗಿದೆ. https://twitter.com/IPL/status/1924800972599021999

Read More