Author: Author AIN

ಸೂರ್ಯೋದಯ – 6:12 ಬೆ ಸೂರ್ಯಾಸ್ತ – 6:26 ಸಂಜೆ ಶಾಲಿವಾಹನ ಶಕೆ -1947 ಸಂವತ್-2081 ವಿಶ್ವಾವಸು ನಾಮ ಸಂವತ್ಸರ, ಉತ್ತರ ಅಯಣ, ಶುಕ್ಲ ಪಕ್ಷ, ವಸಂತ ಋತು, ಚೈತ್ರ ಮಾಸ, ತಿಥಿ – ಷಷ್ಠಿ ನಕ್ಷತ್ರ – ರೋಹಿಣಿ ಯೋಗ – ಸೌಭಾಗ್ಯ ಕರಣ – ಕೌಲವ ರಾಹು ಕಾಲ – 01:30 ದಿಂದ 03:00bವರೆಗೆ ಯಮಗಂಡ – 06:00 ದಿಂದ 07:30 ವರೆಗೆ ಗುಳಿಕ ಕಾಲ – 09:00 ದಿಂದ 10:30 ವರೆಗೆ ಬ್ರಹ್ಮ ಮುಹೂರ್ತ – 4:36 ಬೆ. ದಿಂದ 5:24 ಬೆ. ವರೆಗೆ ಅಮೃತ ಕಾಲ – 9:28 ರಾ.ದಿಂದ 10:59 ರಾ. ವರೆಗೆ ಅಭಿಜಿತ್ ಮುಹುರ್ತ – 11:55 ಬೆ. ದಿಂದ 12:43 ಮ. ವರೆಗೆ ಮೇಷ ರಾಶಿ: ಗುರುಸ್ವಾಮಿ ಅನುಗ್ರಹದಿಂದ ಆದಾಯ ವೃದ್ಧಿ, ಸ್ಥಿರಾಸ್ತಿಯನ್ನು ಖರೀದಿಸುವ ಯೋಗವಿದೆ, ಸರ್ಕಾರಿ ಕೆಲಸ ಕಾರ್ಯಗಳು ನಿಧಾನವಾಗಿ ಯಶಸ್ಸು ಕಾಣುವುದು, ಉದ್ಯೋಗ ಪ್ರಯತ್ನಿಸಿದವರಿಗೆ ಉದ್ಯೋಗ ಭಾಗ್ಯ, ಶತ್ರುಗಳು…

Read More

ಬೆಂಗಳೂರು: ನಾವು ಒಟ್ಟಾಗಿ ಹೋರಾಟ ಮಾಡಿದರೆ ಸರ್ಕಾರಕ್ಕೆ ಭಯ ಇರುತ್ತದೆ ಎಂದು ಜೆಡಿಎಸ್ ಶಾಸಕಾಂಗ ನಾಯಕ ಸುರೇಶ್ ಬಾಬು ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಮೊದಲಿಂದಲೂ ನಾವು ಸಮನ್ವಯ ಸಮಿತಿ ಮಾಡಿ ಎಂದು ಹೇಳ್ತಿದ್ದೇವೆ. ಒಟ್ಟಾಗಿ ಹೋರಾಟ ಮಾಡಿದರೆ ಪ್ರಬಲವಾಗಿ ಇರುತ್ತದೆ. ನಾವು ಒಟ್ಟಾಗಿ ಹೋರಾಟ ಮಾಡಿದರೆ ಸರ್ಕಾರಕ್ಕೆ ಭಯ ಇರುತ್ತದೆ. ನಮ್ಮ ಪಕ್ಷಕ್ಕೆ ಬಿಜೆಪಿ ಹೋರಾಟ ಬಗ್ಗೆ ನಮಗೆ ಯಾವುದೇ ಮಾಹಿತಿ ಕೊಟ್ಟಿಲ್ಲ. ದೇವೇಗೌಡ, ಕುಮಾರಸ್ವಾಮಿ ಅವರಿಗೂ ಕೇಳಿದೆ ಯಾರಿಗೂ ಹೇಳಿಲ್ಲ. ಇದು ಸರಿಯಾದ ಬೆಳವಣಿಗೆ ಅಲ್ಲ. ಇಬ್ಬರು ಒಟ್ಟಾಗಿ ಹೋಗಬೇಕು. ಈ ನಿಟ್ಟಿನಲ್ಲಿ ಎರಡು ಪಕ್ಷಗಳು ಕೂತು ಮಾಡಬೇಕು ಎಂದರು. https://ainkannada.com/one-cup-of-french-fries-is-equivalent-to-smoking-25-cigarettes-do-you-know-how-dangerous-it-is-for-you/ ಸಮನ್ವಯದ ಕೊರತೆ ಬಗ್ಗೆ ಕೇಂದ್ರದ ನಾಯಕರಿಗೆ ಗೊತ್ತಿಲ್ಲ ಅನ್ನಿಸುತ್ತದೆ. ರಾಜ್ಯ ನಾಯಕರು ಇದನ್ನ ಮಾಡುತ್ತಿದ್ದಾರೆ. ನಿಖಿಲ್, ಬಿಜೆಪಿ ಅವರು ಘೋಷಣೆ ಮಾಡಿದರು ಎಂದು ನಾವು ಹೋರಾಟ ಮಾಡುತ್ತೇವೆ ಅಂತ ಹೇಳಿದ್ದಾರೆ. ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರು ನಾವು ಪ್ರತ್ಯೇಕ ಹೋರಾಟ ಅಂತ ಹೇಳಿದ್ದಾರೆ. ಇದು ಅವರ…

Read More

ಚಳ್ಳಕೆರೆ: ಜಮೀನ ಬೇಲಿಗೆ ಬೆಂಕಿ ಇಟ್ಟ ವಿಚಾರಕ್ಕೆ ದೊಣ್ಣೆಯಿಂದ ಹಲ್ಲೆ ಮಾಡಿದ ಕಾರಣ ಒರ್ವನಿಗೆ ಕೈಯಿ ಮುರಿದು ಮತ್ತೊರ್ವ ಮಹಿಳೆಗೆ ಗಾಯಗಳಾದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಳ್ಳಕೆರೆ ತಾಲ್ಲೂಕಿನ ಯಲಗಟ್ಟೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ವಿರುಪಾಕ್ಷ ಎನ್ನುವ ವ್ಯಕ್ತಿ ಬೇಲಿಗೆ ಬೆಂಕಿ ಇಟ್ಟಿದ್ದು ಈ ಹಿನ್ನೆಲೆಯಲ್ಲಿ ಸ್ವಲ್ಪ ಮೇಕ್ಕೆ ಜೋಳ ಬೆಳೆ ಸುಟ್ಟಿದೆ ಬೇಲಿಗೆ ಬೆಂಕಿ ಇಟ್ಟಿದ್ದ ಪ್ರಶ್ವೆ ಮಾಡಿದಕ್ಕೆ ವಿರುಪಾಕ್ಷ , https://ainkannada.com/one-cup-of-french-fries-is-equivalent-to-smoking-25-cigarettes-do-you-know-how-dangerous-it-is-for-you/ ಲಕ್ಷ್ಮೀದೇವಿ ಚಂದ್ರಣ್ಣ ಸುದೀಪ್ ಉಮೇಶ ಇವರು ಗುಂಪು ಕಟ್ಟಿಕೊಂಡು ಬಂದು ಕೈಯಲ್ಲಿದ್ದ ದೊಣ್ಣೆ ಹಾಗೂ ಕಲ್ಲುಗಳಿಂದ ಚನ್ನವೀರ ಹಾಗೂ ನೇತ್ರಾವತಿ ಚೆಲಿಮಕ್ಕೆ ಇವರ ಮೇಲೆ ಹಲ್ಲೆ ಮಾಡಿದ್ದಾರೆ.ಚನ್ನವೀರ ಇವರಗೆ ಕೈ ಮುರಿದ್ದು ಚಲಿಮಕ್ಕ ಎನ್ನುವ ಮಹಿಳೆಗೆ ತಲೆ ಹಾಗೂ ಇತರೆ ಭಾಗಗಳಿಗೆ ಗಾಯಗಳಾಗಿದ್ದು ಚಳ್ಳಕೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಆಸ್ಪತ್ರೆ ಗೆ ದಾಖಲಿಸಿದ್ದಾರೆ. ಈ ಗಲಾಟೆ ವಿಚಾರ ಕುರಿತಂತೆ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕಣ ದಾಖಲಾಗಿದ್ದು. ಹಲ್ಲೆ ಮಾಡಿಸಿದ…

Read More

ನವದೆಹಲಿ, ಏಪ್ರಿಲ್ 02: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ಶ್ರೀ ನಿತಿನ್ ಗಡ್ಕರಿಯವರನ್ನು ಭೇಟಿಯಾಗಿ ಮನವಿ ಪತ್ರವನ್ನು ಸಲ್ಲಿಸಿದರು. ಪತ್ರದ ವಿವರ: ಕರ್ನಾಟಕದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಸಂರ್ಪಕ ಜಾಲವನ್ನು ವೃದ್ಧಿಸಲು ಸಹಕಾರ ನೀಡುತ್ತಿರುವ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ಶ್ರೀ ನಿತಿನ್ ಗಡ್ಕರಿಯವರನ್ನು ಕರ್ನಾಟಕ ರಾಜ್ಯದ ಪರವಾಗಿ ಅಭಿನಂದಿಸುತ್ತೇನೆ. ಕೇಂದ್ರದಿಂದ ರಾಜ್ಯಕ್ಕೆ ಮಂಜೂರಾಗಿರುವ ಕೆಳಕಂಡ ಪ್ರಮುಖ ಯೋಜನೆಗಳ ವಿವರ ಇಂತಿದೆ. 1. ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಮಣಿಪಾಲ್ ಆಸ್ಪತ್ರೆ ಜಂಕ್ಷನ್ (ಮೈಸೂರು ನಗರ)ದಲ್ಲಿ ಫ್ಲೈಓವರ್ ನಿರ್ಮಾಣ. 2. 30.35 ಕಿ.ಮೀ. ಉದ್ದದ ಹುಬ್ಬಳ್ಳಿ ಧಾರವಾಡ ಷ್ಟಪಥ ಬೈಪಾಸ್ ನಿರ್ಮಾಣ 3. ರಾ.ಹೆ 369 ಇ( ಸಿಗಂದೂರು ಸೇತುವೆ) ರಲ್ಲಿ ಶರಾವತಿ ಹಿನ್ನೀರಿನ ಮೇಲೆ ಪ್ರಮುಖ ಸೇತುವೆ ನಿರ್ಮಾಣ. 4. ರಾ.ಹೆ.167 ಹಗರಿ-ಜೆಡ್ಚೆರ್ಲಾ ಸೆಕ್ಷನ್ ನಲ್ಲಿ ಕೃಷ್ಣಾ ನದಿ ಮೇಲೆ 180.865 ಕಿ.ಮೀ.ನಲ್ಲಿ ಪ್ರಮುಖ ಸೇತುವೆ ನಿರ್ಮಾಣ. 5. ಹೊಸಪೇಟೆ…

Read More

ಬೆಂಗಳೂರು: ಈ ಭಾರಿ ಕರ್ನಾಟಕದಲ್ಲಿ ವಿಪರೀತ ಬಿಸಿಲು ಆರಂಭವಾಗಿದೆ. ಬಿಸಿಲಿನ ಪ್ರಭಾವ ಕಂಡು ಜನರು ಹೈರಾಣಾಗಿದ್ದಾರೆ. ಇದೀಗ ಬಿಸಿಲಿನ ತಾಪಮಾನದ ಕಾರಣಕ್ಕಾಗಿ ಕಿತ್ತೂರು ಕರ್ನಾಟಕದ ಎರಡು ಜಿಲ್ಲೆಗಳು, ಕಲ್ಯಾಣ ಕರ್ನಾಟಕದ 9 ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿ ಕೆಲಸದ ಸಮಯ ಬದಲಾವಣೆ ಮಾಡಲಾಗಿದೆ. ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳು ಹಾಗೂ ಕಿತ್ತೂರು ಕರ್ನಾಟಕದ 2 ಜಿಲ್ಲೆಗಳು ಸೇರಿದಂತೆ ಒಟ್ಟು 9 ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿಗಳ ಕೆಲಸದ ಅವಧಿಯನ್ನು ಬದಲಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಬೆಳಗ್ಗೆ 8ರಿಂದ ಮಧ್ಯಾಹ್ನ 1:30ರ ತನಕ ಸರ್ಕಾರಿ ಕಚೇರಿಗಳ ಕೆಲಸದ ಸಮಯ ನಿಗದಿ ಮಾಡಿದ್ದು, ಏಪ್ರಿಲ್, ಮೇ ತಿಂಗಳ ಅಂತ್ಯದ ತನಕವೂ ಸರ್ಕಾರಿ ಕಚೇರಿ ಸಮಯ ಬದಲಾವಣೆ ಜಾರಿಯಲ್ಲಿ ಇರಲಿದೆ. https://ainkannada.com/one-cup-of-french-fries-is-equivalent-to-smoking-25-cigarettes-do-you-know-how-dangerous-it-is-for-you/ ಕಲಬುರಗಿ, ಬೀದರ್, ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು, ವಿಜಯಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿ ಸಮಯ ಬದಲಾವಣೆ ಆಗಲಿದೆ. ರಾಜ್ಯ ಸರ್ಕಾರಿ ನೌಕರರ ಸಂಘದ ಮನವಿ ಮೇರೆಗೆ ಸರ್ಕಾರದ ಆದೇಶ ಹೊರಬಿದ್ದಿದೆ. 8…

Read More

ನೇಹಾ ಹಿರೇಮಠ ಪ್ರಕರಣಕ್ಕೆ ಒಂದು ವರ್ಷ ತುಂಬುತ್ತಲೇ ಧಾರವಾಡ ಜಿಲ್ಲೆಯಲ್ಲಿ ಮತ್ತೊಂದು ಲವ್ ಜಿಹಾದ್ ಘಟನೆ ನಡೆದಿದೆ. ಮುಸ್ಲಿಂ ಯುವಕನ ಲವ್ ರಿಜೆಕ್ಟ್ ಮಾಡಿದ್ದಕ್ಕೆ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ಮನನೊಂದ ಯುವತಿ ಹಾಸ್ಟಲ್‌ನಲ್ಲಿ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಈಗ ಆ ಯುವತಿ ಸಾವು ಬದುಕಿನ ಮಧ್ಯ ಹೋರಾಡುತ್ತಿದ್ದಾಳೆ. ಈ ಘಟನೆಯನ್ನು ಹಿಂದೂಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವತಿಯನ್ನು ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೌದು,,,,, ಇತ್ತಿಚ್ಚಿನ ದಿನಗಳಲ್ಲಿ ಲವ್ ಜಿಹಾದ್ ಕೇಸ್‌ಗಳು ಹೆಚ್ಚಾಗುತ್ತಿದೆ. ಇಂದು ಇದೇ ಲವ್ ಜಿಹಾದ್‌ ಆರೋಪದಲ್ಲಿ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಹುಬ್ಬಳ್ಳಿಯ ಶುಶ್ರುತ್ ಕಾಲೇಜಿನಲ್ಲಿ ಪ್ಯಾರಾಮೆಡಿಕಲ್ ಓದುತ್ತಿದ್ದ ಯುವತಿಯೇ ಲವ್ ಜಿಹಾದ್‌ಗೆ ಆತ್ಮಹತ್ಯೆಗೆ ಯತ್ನಿಸಿದ ಯುವತಿ. ಇವಳು MVP ಹಾಸ್ಟಲ್‌ನಲ್ಲಿ ಇರುತ್ತಾಳೆ. ಆಕೆ ಹಿಂದೆ ಬಿದ್ದ ಮುಸ್ಲಿಂ ಯುವಕ ಲವ್ ನಿರಾಕರಿಸಿದ್ದಕ್ಕೆ ಅವಳೆ ಮೇಲೆ ಹಲ್ಲೆ ಮಾಡಿದ್ದಾನೆ. ಇದಕ್ಕೆ ಮನನೊಂದ ಯುವತಿ ಹಾಸ್ಟಲ್‌ಗೆ…

Read More

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ತಾಯಿ ಇಂದು ನಂಜನಗೂಡಿನ ನಂಜುಡೇಶ್ವರ ಸ್ವಾಮಿ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇಂದು ಸುಪ್ರೀಂಕೋರ್ಟ್‌ ನಲ್ಲಿ ನಟ ದರ್ಶನ್‌ ಸೇರಿದಂತೆ ಇತರ ಆರೋಪಿಗಳ ಬೇಲ್‌ ಅರ್ಜಿ ವಿಚಾರಣೆ ಇತ್ತು. ಹೀಗಾಗಿ ದರ್ಶನ್‌ ಗಾಗಿ ತಾಯಿ ವಿಶೇಷ ಪೂಜೆ ಸಲ್ಲಿಸಿದ್ದಾರೆ ಎನ್ನಲಾಗುತ್ತಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ದರ್ಶನ್​ಗೆ ರಾಜ್ಯ ಹೈಕೋರ್ಟ್​ ಕೆಲ ತಿಂಗಳ ಹಿಂದೆ ಜಾಮೀನು ಮಂಜೂರು ಮಾಡಿತ್ತು. ಇದನ್ನು ಪ್ರಶ್ನಿಸಿಕೊಂಡು ರಾಜ್ಯ ಸರ್ಕಾರ ಸುಪ್ರಿಂ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿತ್ತು. ಕಳೆದ ಎರಡು ಬಾರಿಯಿಂದ ವಿಚಾರಣೆಯನ್ನು ಮುಂದೂಡಿದ್ದ ನ್ಯಾಯಾಲಯ ಇಂದು ಮತ್ತೆ ವಿಚಾರಣೆಯನ್ನು ಏಪ್ರೀಲ್​ 22ಕ್ಕೆ ಮುಂದೂಡಿದೆ. ಇದರ ಬೆನ್ನಲ್ಲೆ ನಟ ದರ್ಶನ್​ ತಾಯಿ ನಂಜುಂಡೇಶ್ವರ ದರ್ಶನ ಪಡೆದಿದ್ದಾರೆ.

Read More

ಬೆಂಗಳೂರು: ಐದು ಗ್ಯಾರಂಟಿಗಾಗಿ ಕರ್ನಾಟಕದ ಮನೆ ಮನೆ ಲೂಟಿ ಆಗ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್  ಆರೋಪಿಸಿದ್ದಾರೆ. ನಗರದ ಫ್ರೀಡಂ ಪಾರ್ಕ್ ನಲ್ಲಿ ನಡೆದ ಆಹೋರಾತ್ರಿ ಧರಣಿಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಬಜೆಟ್ ನಲ್ಲಿ ಯಾವುದೇ ತೆರಿಗೆ ತೋರಿಸದೆ ಇದೀಗ ಬೆಲೆ ಏರಿಕೆ ಮಾಡಲಾಗ್ತಿದೆ. ಐದು ಗ್ಯಾರಂಟಿಗಾಗಿ ಕರ್ನಾಟಕದ ಮನೆ ಮನೆ ಲೂಟಿ ಆಗ್ತಿದೆ ಎಂದು ಆರೋಪಿಸಿದರು. https://ainkannada.com/one-cup-of-french-fries-is-equivalent-to-smoking-25-cigarettes-do-you-know-how-dangerous-it-is-for-you/ ಸಚಿವರು ಅಂಗಡಿ ತೆರೆದಿದ್ದಾರೆ. 40% ಆರೋಪಕ್ಕೆ ಸಾಕ್ಷಿ ಇಲ್ಲ. ಆದರೆ ಕಾಂಗ್ರೆಸ್ ಸರ್ಕಾರ 60% ಕಮಿಷನ್ ಪಡೆದುಕೊಳ್ಳುತ್ತಿದೆ. ಸ್ಮಾರ್ಟ್ ಮೀಟರ್ ನಲ್ಲಿ 15,000 ಹಗರಣ ನಡೆದಿದೆ. ಸಿದ್ದರಾಮಯ್ಯ ಹೆಸರಿಗಷ್ಟೇ ಸಿಎಂ. ಸರ್ಕಾರದ ಗಾಲಿ ಕುರ್ಚಿಯಲ್ಲಿದೆ ಎಂದು ಕಿಡಿಕಾರಿದರು.

Read More

ಬೆಂಗಳೂರು: ಇದೇ ಮಾರ್ಚ್ 27ರಂದು ದೊಡ್ಡ ಕಮ್ಮನಹಳ್ಳಿಯ ಮನೆಯಲ್ಲಿ ಭಯಾನಕ ಕೃತ್ಯ ಬೆಳಕಿಗೆ ಬಂದಿತ್ತು. ಹುಳಿಮಾವು ಪೊಲೀಸರು ಮನೆಯ ಬಾಗಿಲು ತೆರೆದು ನೋಡಿದಾಗ ಸೂಟ್‌ಕೇಸ್‌ನಲ್ಲಿ ಗೌರಿ ಅನ್ನೋ ಮಹಿಳೆಯ ತುಂಡು, ತುಂಡಾದ ದೇಹ ಪತ್ತೆಯಾಗಿತ್ತು. ಗೌರಿ ಸಾವಿನ ತನಿಖೆ ಬೆನ್ನತ್ತಿ ಹೋದ ಸಾಕಷ್ಟು ಮಾಹಿತಿ ಹೊರ ಬಂದಿದೆ.  ಹೌದು ಆರೋಪಿ ರಾಕೇಶ್​ನನ್ನು 9ನೇ ಎಸಿಜೆಎಂ ನ್ಯಾಯಾಲಯಕ್ಕೆ ಹಾಜರುಪಡಿಸಿ ಆರು ದಿನಗಳ ಕಾಲ ವಶಕ್ಕೆ ಪಡೆದಿದ್ದಾರೆ. ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಮುನ್ನ ಪ್ರಾಥಮಿಕ ವಿಚಾರಣೆ ನಡೆಸಿದ್ದರು. ವಿಚಾರಣೆ ವೇಳೆ ಆರೋಪಿ ರಾಕೇಶ್​ ಹಲವು ವಿಚಾರಾಗಳನ್ನು ಪೊಲೀಸರ ಮುಂದೆ ಬಾಯಿಟ್ಟಿದ್ದಾನೆ. “ ಗೌರಿ ನಡವಳಿಕೆಯಿಂದ ಬೇಸತ್ತು ಕೊಲೆ ಮಾಡಿದ್ದಾಗಿ” ಹೇಳಿದ್ದಾನೆ. ಇಷ್ಟೇ ಅಲ್ಲದೇ, ಆರೋಪಿ ರಾಕೇಶ್​ ಇನ್ನೂ ಹಲವು ವಿಚಾರಗಳನ್ನು ಪೊಲೀಸರ ಮುಂದೆ ಹೇಳಿದ್ದಾನೆ. https://ainkannada.com/one-cup-of-french-fries-is-equivalent-to-smoking-25-cigarettes-do-you-know-how-dangerous-it-is-for-you/ “ಗೌರಿ ನನ್ನ ಕುಟುಂಬದ ಜೊತೆಗೆ ಹೊಂದಾಣಿಕೆ ಆಗಲಿಲ್ಲ. ಆಕೆ ಕುಟುಂಬದ ಒಳಗೆ ದಬ್ಬಾಳಿಕೆ ಮಾಡುತ್ತಿದ್ದಳು. ಕುಟುಂಬದ ಯಾವ ಸದಸ್ಯರ ಜೊತೆಗೆ ಹೊಂದಿಕೊಳ್ಳಲಿಲ್ಲಾ. ಬದಲಾಗಿ ಬೆಂಗಳೂರಿಗೆ ಹೋಗುವ, ಅಲ್ಲಿಯೇ…

Read More

ಚಿಕ್ಕಬಳ್ಳಾಪುರ: ರಂಜಾನ್ ಬಳಿಕ ಕುಟುಂಬ ಸಮೇತ ಪ್ರವಾಸಕ್ಕೆಂದು ಬಂದಿದ್ದ ವೇಳೆ ಶ್ರೀನಿವಾಸ ಸಾಗರ ಜಲಾಶಯದಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ರಂಜಾನ್ ಬಳಿಕ ಕುಟುಂಬ ಸಮೇತ ಪ್ರವಾಸಕ್ಕೆಂದು ಬಂದಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಇಬ್ಬರು ಮಹಿಳೆಯರು ಹಾಗೂ ಒರ್ವ ಪುರುಷ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮೃತದೇಹಗಳನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.  

Read More