Author: Author AIN

ರಾಕಿಂಗ್‌ ಸ್ಟಾರ್‌ ಯಶ್‌ ಲಂಕಾಧಿಪತಿ ರಾವಣನಾಗುವ ಮೊದಲು ಮಹತ್ತರ ಕಾರ್ಯವೊಂದನ್ನು ಮಾಡಿದ್ದಾರೆ. ನಾಳೆಯಿಂದ ರಾಮಾಯಾಣ 2 ಸಿನಿಮಾದ ಶೂಟಿಂಗ್ ಆರಂಭಗೊಳ್ಳಲಿದೆ. ಹೀಗಾಗಿ ಶೂಟಿಂಗ್ ಆರಂಭಕ್ಕೂ ಮುನ್ನ ಯಶ್‌ ಉಜ್ಜನಿಯ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. https://youtu.be/T0D4qB2iMXU ಇದೇ ವೇಳೆ ಯಶ್,  ಶಿವನ ಆಶೀರ್ವಾದ ಪಡೆಯಲು ಬಂದೆ. ಬಹಳ ಖುಷಿ ಆಗುತ್ತಿದೆ. ನಾನು ಚಿಕ್ಕಂದಿನಿಂದ ಶಿವನ ದೊಡ್ಡ ಭಕ್ತ. ನಾವು ಮನೆದೇವರು ಎಂದು ಕರೆಯುತ್ತೇನೆ. ಕುಲದೇವರು ಶಿವ. ಇಲ್ಲಿಗೆ ಬಂದಿರುವುದು ಸಂತಸ ತಂದಿದೆ. ದೇವರ ಸನ್ನಿಧಿಯಲ್ಲಿ ಧ್ಯಾನ ಮಾಡುತ್ತಾ ಕುಳಿತಾಗ ಸಮಯ ಕಳೆದಿದ್ದೇ ಗೊತ್ತಾಗಲಿಲ್ಲ. ಅದ್ಭುತ ಅನುಭವ ಸಿಕ್ಕಿದೆ”  ಎಂದು ಹೇಳಿದ್ದಾರೆ. ರಾಕಿಭಾಯ್ ತಮ್ಮ ಬ್ಯಾನರ್, ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಅಡಿಯಲ್ಲಿ ಮಲ್ಹೋಟಾ ಅವರ ಪ್ರೈಮ್ ಫೋಕಸ್ ಸ್ಟುಡಿಯೋಸ್ ಜೊತೆಗೆ ರಾಮಾಯಣ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರ ನಿರ್ಮಾಣದ ಜೊತೆಗೆ ರಾವಣಾಸುರನಾಗಿ ಗಹಗಹಿಸಲಿದ್ದಾರೆ. ಅದಕ್ಕೂ ಮುನ್ನ ಶಿವನಿಗೆ ನಮಿಸಿದ್ದಾರೆ. ಪ್ರತಿ ಸಿನಿಮಾ ಆರಂಭಕ್ಕೂ ಮುನ್ನ ಯಶ್‌ ಟೆಂಪಲ್‌ ರನ್‌ ಮಾಡೋದು…

Read More

ಸಿನಿಮಾ ಹಾಗೂ ಕ್ರಿಕೆಟ್‌ ಗೂ ಅವಿನಾಭಾವ ನಂಟಿದೆ. ಭಾರತೀಯ ಕ್ರಿಕೆಟ್‌ ತಂಡದ ಸ್ಟಾರ್‌ ಆಟಗಾರ ಕಿಂಗ್‌ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಸಿನಿಮಾ ರಂಗದವರೇ. ಕ್ರಿಕೆಟಿಗರಿಗೆ ನಟಿಯರ ಮೇಲೆ ಲವ್‌ ಆಗೋದು ಹೊಸತೇನಲ್ಲ. ಈಗ ಕನ್ನಡದ ನಟಿಯೊಬ್ಬರು ಕ್ರಿಕೆಟಿಗನ್ನು ವರಿಸುತ್ತಿದ್ದಾರೆ. ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ, ಡಿಯರ್‌ ಸತ್ಯ, ಫಾರೆಸ್ಟ್‌ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿರುವ ಪ್ರತಿಭಾನ್ವಿತ ನಟಿ ಅರ್ಚನಾ ಕೊಟ್ಟಿಗೆ ಹೊಸ ಬಾಳಿಗೆ ಹೆಜ್ಜೆ ಇಡಲು ಹೊರಟ್ಟಿದ್ದಾರೆ. ಕ್ರಿಕೆಟಿಗ ಶರತ್ ಬಿ.ಆರ್ ಜೊತೆ ಅರ್ಚನಾ ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಕರ್ನಾಟಕ ಕ್ರಿಕೆಟ್ ತಂಡದ ಪ್ರಮುಖ ಆಟಗಾರರಾಗಿರುವ ಶರತ್ ಬಿ.ಆರ್ ರಂಜಿ ಟ್ರೋಫಿಗಾಗಿ ಆಡಿದ್ದಾರೆ. ಅಲ್ಲದೇ ಕಳೆದ ವರ್ಷ ಗುಜರಾತ್ ಟೈಟಾನ್ ಮೂಲಕ ಐಪಿಎಲ್ ಗೂ ಪಾದಾರ್ಪಣೆ ಕೂಡ ಮಾಡಿದ್ದಾರೆ. ಇದೀಗ ಅವರು ಇದೇ ತಿಂಗಳ ಏಪ್ರಿಲ್‌ 23ರಂದು ಅರ್ಚನಾ ಜೊತೆ ಏಳು ಹೆಜ್ಜೆ ಇಡಲಿದ್ದಾರೆ. ಶರತ್-ಅರ್ಚನಾ ಪ್ರೀತಿಸಿ ಮದುವೆಯಾಗುತ್ತಿದ್ದಾರೆ. ಇಬ್ಬರು ಒಂದೇ ಕಾಲೇಜಿನಲ್ಲಿ ಓದುತ್ತಿರುವಾಗ ಸ್ನೇಹಿತರಾಗಿದ್ದರು . ಆ ಸ್ನೇಹ ಪ್ರೀತಿಗೆ ತಿರುಗಿ…

Read More

ಗಟ್ಟಿಮೇಳ ಧಾರಾವಾಹಿ ಮೂಲಕ ವೀಕ್ಷಕರ ಮನೆ ಮಾತಾಗಿದ್ದ ನಟಿ ನಿಶಾ ರವಿಕೃಷ್ಣನ್. ಈ ಸೀರಿಯಲ್‌ ಅವರು ರೌಡಿಬೇಬಿ ಅಂತಾ ಖ್ಯಾತಿ ಪಡೆದಿದ್ದರು. ಸದ್ಯ ಅಣ್ಣಯ್ಯ ಧಾರಾವಾಹಿ ಪಾರ್ವತಿ ಪಾತ್ರದಲ್ಲಿ ನಿಶಾ ಮಿಂಚುತ್ತಿದ್ದಾರೆ. ಅಲ್ಲದೇ ತೆಲುಗು, ತಮಿಳು ಸೀರಿಯಲ್‌ ನಲ್ಲಿಯೂ ಅವರು ಮಿಂಚುತ್ತಿದ್ದಾರೆ. ತೆಲುಗಿನ ಅಮ್ಮಾಯಿಗಾರು ಸೀರಿಯಲ್‌ ನಲ್ಲಿ ನಿಶಾ ಜೊತೆಗೆ ಕನ್ನಡದ ಹುಡ್ಗ ಯಶ್ವಂತ್‌ ನಾಯಕನಾಗಿ ಬಣ್ಣ ಹಚ್ಚಿದ್ದಾರೆ. ಈ ಧಾರಾವಾಹಿಗೆ ಸಖತ್‌ ರೆಸ್ಪಾನ್ಸ್‌ ಸಿಗುತ್ತಿದೆ. ಈ ನಡುವೆ ಶೋವೊಂದರಲ್ಲಿ ಈ ಜೋಡಿಗೆ ಟಾಸ್ಕ್‌ ವೊಂದನ್ನು ಕೊಡಲಾಗಿತ್ತು. ಯಶ್ವಂತ್‌ ತಮ್ಮ ತುಟಿಗೆ ಲಿಪ್‌ ಸ್ಟಿಕ್‌ ಹಾಕಿ ನಿಶಾಗೆ ಚುಂಚಿಸುವ ಟಾಸ್ಕ್‌ ಇಡಲಾಗಿತ್ತು. ಇದರಲ್ಲಿ ಯಶ್ವಂತ್‌ ಯಾವುದೇ ಮುಜುಗರವಿಲ್ಲದ ನಿಶಾಗೆ ಕಿಸ್‌ ಮಾಡಿದ್ದಾರೆ. ಆದ್ರೆ ನಿಶಾಗೆ ಸ್ವಲ್ಪ ಇರುಸು ಮುರುಸು ಆದಂತಿದೆ. ಆದರೆ ಅದನ್ನು ಅವರು ತೋರಿಸಿಕೊಂಡಂತಿಲ್ಲ. ಆದ್ರೆ ಈ ಶೋ ನೋಡಿ ನೆಟ್ಟಿಗರು ಕ್ಯಾಕರಿಸಿ ಉಗಿದಿದ್ದಾರೆ. https://www.youtube.com/shorts/VAfNmqazbM4?feature=share ಸೆನ್ಸಾರ್‌ ಬೋರ್ಡ್‌ ಅವರು ಈ ಟಿವಿ ಶೋ ಕಡೆ ಸ್ವಲ್ಪ ನೋಡಿ..ಸೆನ್ಸ್‌…

Read More

ಬೆಂಗಳೂರು: ಜನಿವಾರ ತೆಗೆದು ಒಂದು ಸಮುದಾಯಕ್ಕೆ ಅವಮಾನ ಮಾಡೋದು ಸರಿಯಲ್ಲ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಸ್ಮಾರ್ಟ್ ವಾಚ್, ಎಲೆಕ್ಟ್ರಿಕ್ ವಸ್ತು ಅಂತಹದ್ದನ್ನ ಬೇಕಿದ್ರೆ ನೀವು ತೆಗೆಸಬೇಕು ಸರಿ. ಆದರೆ ಜನಿವಾರ ತೆಗೆದು ಒಂದು ಸಮುದಾಯಕ್ಕೆ ಅವಮಾನ ಮಾಡೋದು ಸರಿಯಲ್ಲ. ಈ ಘಟನೆಗೆ ಕಾರಣವಾಗಿರೋರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಅವರಿಗೆ ಬುದ್ದಿವಾದ ಹೇಳಬೇಕು. ಮುಂದೆ ಇಂತಹ ಘಟನೆ ಆಗದಂತೆ ಕ್ರಮವಹಿಸಬೇಕು ಅಂತ ಆಗ್ರಹ ಮಾಡಿದರು. https://ainkannada.com/do-you-know-what-happens-if-you-mix-saffron-with-hot-milk-and-drink-it/ ನಿವಾರ ಹಾಕಿದ್ದಕ್ಕೆ ಪರೀಕ್ಷೆಗೆ ಕೂರಿಸದೇ ಇರುವುದು ಸರಿಯಲ್ಲ.ಈ ಘಟನೆಯನ್ನ ನಾನು ಖಂಡಿಸುತ್ತೇನೆ. ಜನಿವಾರ ಹಾಕಿಕೊಂಡು ಕಾಪಿ ಹೊಡೆಯೋಕೆ ಆಗುತ್ತಾ?ಜನಿವಾರದಲ್ಲಿ ಕಾಪಿ ಚೀಟಿ ಇಟ್ಟುಕೊಂಡು ಹೋಗೋಕೆ ಆಗುತ್ತಾ?ಜನಿವಾರ ಇದ್ದರೆ ಏನು ಸಮಸ್ಯೆ ಅಂತ ಪ್ರಶ್ನೆ ಮಾಡಿದರು.

Read More

ಬೆಂಗಳೂರು: ಐಪಿಎಲ್ 2025 ರ ಭಾಗವಾಗಿ ಶುಕ್ರವಾರ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೋಲಿಸಿತು. ಆರ್‌ಸಿಬಿ ತನ್ನ ತವರು ನೆಲದಲ್ಲಿ ಮತ್ತೊಂದು ಸೋಲು ಅನುಭವಿಸಿತು. ಈ ಋತುವಿನಲ್ಲಿ ಬೆಂಗಳೂರು ತಂಡವು ತನ್ನ ತವರು ಮೈದಾನ ಚಿನ್ನಸ್ವಾಮಿಯಲ್ಲಿ ಒಂದೇ ಒಂದು ಪಂದ್ಯವನ್ನು ಗೆದ್ದಿಲ್ಲ. ಆರ್‌ಸಿಬಿಯ ಈ ಸೋಲಿನ ಹೊರತಾಗಿಯೂ, ತಂಡದ ಬಿರುಗಾಳಿ ಬ್ಯಾಟ್ಸ್‌ಮನ್ ಟಿಮ್ ಡೇವಿಡ್ ಬೃಹತ್ ದಾಖಲೆಯನ್ನು ಸೃಷ್ಟಿಸಿದರು. ಐಪಿಎಲ್ 2025 ರಲ್ಲಿ ಅವರು ಇಲ್ಲಿಯವರೆಗೆ ಯಾವುದೇ ಬ್ಯಾಟ್ಸ್‌ಮನ್ ಸಾಧಿಸದ ದಾಖಲೆಯನ್ನು ಹೊಂದಿದ್ದಾರೆ. https://ainkannada.com/do-you-know-what-happens-if-you-mix-saffron-with-hot-milk-and-drink-it/ ಮಳೆಯಿಂದಾಗಿ ಪಂದ್ಯವನ್ನು 14 ಓವರ್‌ಗಳಿಗೆ ಕಡಿತಗೊಳಿಸಲಾಯಿತು. ಬೆಂಗಳೂರಿನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ತಂಡ ನಿಗದಿತ 14 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 95 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಪಂಜಾಬ್ ತಂಡ 13ನೇ ಓವರ್ ನಲ್ಲಿ ಐದು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಈ ಟೂರ್ನಿಯಲ್ಲಿ ಪಂಜಾಬ್ ತಂಡಕ್ಕೆ ಇದು ಐದನೇ ಗೆಲುವು.…

Read More

ಭೂಮಿಯ ಮೇಲಿನ ಸ್ವರ್ಗ..ಹೀಗೆ ಕರೆಸಿಕೊಳ್ಳುವ ದೇಶ ಅಂದ್ರೆ ಅದು ಕಾಶ್ಮೀರ. ಆದ್ರೆ ದಶಕಗಳಿಂದ, ಭಯೋತ್ಪಾದನೆ ಮತ್ತು ಅಶಾಂತಿ ಅಲ್ಲಿ ತಾಂಡವವಾಡುತ್ತಿದೆ. ಈ ನೆಲದಲ್ಲಿ ಬರೋಬ್ಬರಿ 38 ವರ್ಷಗಳಿಂದ ಒಂದೇ ಒಂದು ಸಿನಿಮಾ ಪ್ರದರ್ಶನವಾಗಿರಲ್ಲಿಲ್ಲವೆಂದರೇ ನೀವು ನಂಬಲೇಬೇಕು. ಹೀಗಾಗಿ ಕಣಿವೆಯ ಜನರಿಗೆ ಸಿನಿಮಾ ಕನಸಾಗಿಯೇ ಉಳಿದಿತ್ತು. ಆದರೀಗ 38 ವರ್ಷದ ಬಳಿಕ ಮೊದಲ ಬಾರಿಗೆ ಚಿತ್ರದ ಪ್ರದರ್ಶನವೊಂದು ನಡೆದಿದೆ. 38 ವರ್ಷಗಳ ಸುಧೀರ್ಘ ಗ್ಯಾಪ್‌ ಬಳಿಕ, ಕಾಶ್ಮೀರದಲ್ಲಿ ಬೆಳ್ಳಿ ಪರದೆಯಲ್ಲಿ ಸಿನಿಮಾ ಪ್ರದರ್ಶನ ಆರಂಭವಾಗಿದೆ. ಬಾಲಿವುಡ್ ನಟ ಇಮ್ರಾನ್ ಹಶ್ಮಿ ಅವರ ‘ಗ್ರೌಂಡ್ ಝೀರೋ’ ಚಿತ್ರವು ಶ್ರೀನಗರದಲ್ಲಿ ಹೊಸದಾಗಿ ನಿರ್ಮಿಸಲಾದ ಐನಾಕ್ಸ್ ಚಿತ್ರಮಂದಿರದಲ್ಲಿ ವಿಶೇಷ ಪ್ರಥಮ ಪ್ರದರ್ಶನಗೊಂಡಿದೆ. ಸುಮಾರು ನಾಲ್ಕು ದಶಕಗಳಲ್ಲಿ ಕಾಶ್ಮೀರದ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳುತ್ತಿರುವ ಮೊದಲ ಚಿತ್ರ ಇದಾಗಿದೆ. ಇಮ್ರಾನ್ ಹಶ್ಮಿ, ನಿರ್ಮಾಪಕ ಫರ್ಹಾನ್ ಅಖ್ತರ್, ನಟಿ ಸಾಯಿ ತಮ್ಹಂಕರ್ ಮತ್ತು ಉಳಿದ ಚಿತ್ರತಂಡ ಸ್ಪೆಷಲ್‌ ಸ್ಕ್ರೀನ್‌ ನಲ್ಲಿ ಭಾಗವಹಿಸಿದ್ದರು. ತೇಜಸ್ ಪ್ರಭಾ ವಿಜಯ್ ನಿರ್ದೇಶನದ ‘ಗ್ರೌಂಡ್ ಝೀರೋ’ ಚಿತ್ರವನ್ನು ಫರ್ಹಾನ್ ಅಖ್ತರ್…

Read More

ಬೆಂಗಳೂರು: ಕಾನೂನು ಸುವ್ಯವಸ್ಥೆ ಸರಿಯಾಗಿದೆ ಎಂದು ಎಲ್ಲಾ ಪ್ಯಾರಾ ಮೀಟರ್ಸ್ ಹೇಳುತ್ತಿವೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ.  ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಿಲ್ಲ ಎಂಬ ವಿಪಕ್ಷಗಳ ಆರೋಪದ ವಿಚಾರವಾಗಿ ಮಾತನಾಡಿದ ಅವರು, ಕಾನೂನು ಸುವ್ಯವಸ್ಥೆ ಸರಿಯಾಗಿದೆ ಎಂದು ಎಲ್ಲಾ ಪ್ಯಾರಾ ಮೀಟರ್ಸ್ ಹೇಳುತ್ತಿವೆ. ಕ್ರೈಂ ಪ್ರಕರಣಗಳು ಕಡಿಮೆಯಾಗಿವೆ. ಪೊಲೀಸ್ ಕಮಿಷನರ್ ಬ್ರೀಫ್ ಮಾಡಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕಡಿಮೆಯಾಗಿದೆ. ಸೈಬರ್ ಕೇಸ್ ಕಡಿಮೆಯಾಗಿದೆ. ಕಾನೂನು ಸುವ್ಯವಸ್ಥೆ ಎಲ್ಲಾ ಸರಿಯಾಗಿದೆ ಎಂದರು. https://ainkannada.com/do-you-know-what-happens-if-you-mix-saffron-with-hot-milk-and-drink-it/ ಒಳಮೀಸಲಾತಿಗೆ ಜಾತಿಗಣತಿ ವರದಿ ಬಳಸುವ ಚರ್ಚೆ ವಿಚಾರವಾಗಿ ಮಾತನಾಡಿ, ನ್ಯಾ. ನಾಗಮೋಹನ್ ದಾಸ್ ಅವರಿಗೆ ಈಗಾಗಲೇ ಕೊಟ್ಟಿದ್ದೇವೆ. ಈ ಜಾತಿಗಣತಿ ವರದಿಯನ್ನು ಅದರೊಂದಿಗೆ ಹೋಲಿಸುತ್ತಾರೆ. ಡಬಲ್ ಆದರೆ ಒಳ್ಳೆಯದಲ್ವಾ. ಕಮಿಷನ್ ಡಾಟಾ ಕಲೆಕ್ಟ್ ಮಾಡಲು ಶುರು ಮಾಡಿದೆ. ಈಗ ನಿಲ್ಲಿಸಿ ಅಂತ ಹೇಳೋದು ಸರಿಯಲ್ಲ ಎಂದು ಹೇಳಿದರು.

Read More

ಸ್ಪಾರ್ಕ್‌ ಸಿನಿಮಾ ಪೋಸ್ಟರ್‌ ವಿವಾದಕ್ಕೆ ತೆರೆಬಿದ್ದಿದೆ. ನೆನಪಿರಲಿ ಪ್ರೇಮ್‌ ಹುಟ್ಟುಹಬ್ಬಕ್ಕೆ ಸ್ಪಾರ್ಕ್‌ ಚಿತ್ರ ತಂಡದಿಂದ ನಿನ್ನೆ ಪೋಸ್ಟರ್‌ ವೊಂದನ್ನು ಬಿಡುಗಡೆ ಮಾಡಲಾಗಿತ್ತು. ಈ ಚಿತ್ರದಲ್ಲಿ ನಿರಂಜನ್‌ ಸುಧೀಂದ್ರ ನಾಯಕನಾಗಿ ನಟಿಸುತ್ತಿದ್ದು, ಪ್ರೇಮ್‌ ವಿಶೇಷ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಪೋಸ್ಟರ್‌ ವಿರುದ್ಧ ನಟಿ, ನಿರ್ಮಾಪಕಿ ಶೃತಿ ನಾಯ್ಡು ಅವರು ಕಾನೂನು ಹೋರಾಟ ಮಾಡುವುದಾಗಿ ಹೇಳಿದ್ದರು. ಆ ವಿವಾದವೀಗ ತಣ್ಣಗಾಗಿದ್ದು, ಚಿತ್ರದ ನಿರ್ದೇಶಕರು ರಮೇಶ್‌ ಇಂದಿರಾ ಬಳಿ ಕ್ಷಮೆಯಾಚಿಸಿದ್ದಾರೆ. ಸ್ಪಾರ್ಕ್‌ ಸಿನಿಮಾಗೆ ಯುವ ನಿರ್ದೇಶಕ ಮಹಾಂತೇಶ್ ಹಂದ್ರಾಳ್ ಆಕ್ಷನ್‌ ಕಟ್‌ ಹೇಳಿದ್ದಾರೆ. ನಿರ್ದೇಶಕರಾಗಿ ಇದು ಇವರಿಗೆ ಮೊದಲ ಅನುಭವ. ಹೀಗಾಗಿ ಸಣ್ಣದೊಂದು ತಪ್ಪು ನಡೆದು ಹೋಗಿದೆ. ಆ ತಪ್ಪನ್ನು ಈಗ ತಿದ್ದಿಕೊಂಡಿದ್ದಾರೆ. “ರಮೇಶ್‌ ಇಂದಿರಾ ಅವರ ಬಳಿ ಕ್ಷಮೆ ಕೇಳಿದ್ದು, ನಿಮ್ಮಿಂದ ಪರ್ಮಿಷನ್‌ ತೆಗೆದುಕೊಂಡು ಮಾಡಬೇಕಿತ್ತು. ಮ್ಯಾನೇಜರ್‌ ಹೇಳಿದ್ದಾರೆಂದು ಫೋಟೋ ಬಳಸಲಾಗಿದೆ. ಆದರೆ ಅದು ಮಿಸ್‌ ಕಮ್ಯೂನಿಕೇಷನ್‌ ಆಗಿದೆ ಕ್ಷಮಿಸಿ” ಎಂದು ಕೇಳಿಕೊಂಡಿದ್ದಾರೆ. ಹೊಸ ನಿರ್ದೇಶಕರಿಗೆ ಒಳ್ಳೆದಾಗಲಿ. ತೊಂದರೆ ಇಲ್ಲ ಮಾಡಿ. ಮೊದಲು ನೀವು…

Read More

ಬೆಂಗಳೂರು: ಮಿಸ್ಟರ್ ಡಿ.ಕೆ.ಶಿವಕುಮಾರ್ ಅವರೇ.. ಖಾಲಿ ಸಿಲಿಂಡರ್ ಎತ್ತೋಕೆ ನೀವೇ ಬೇಕಾ?‌ ಒಳ್ಳೆ ನಟನೆ ಕಣ್ರಿ ನಿಮ್ದು ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ವೈಜ್ಞಾನಿಕವಾಗಿ ಸಮೀಕ್ಷೆ ಮಾಡೋಕೆ ಆಗಿಲ್ಲ ಅಂದರೆ ಹೇಗೆ? ಯಾರೋ ಅಮಾಯಕರ ಕೈಯಲ್ಲಿ ಪೆನ್ನು ಕೊಟ್ಟು ವರದಿ ಬರೆಸಿದ್ದೀರಾ. ಡಿಸಿಎಂ ಡಿಕೆಶಿ ಅವರೇ ಪೆನ್ನು ಪೇಪರ್ ಕೇಳಿದ್ರು ಕೊಟ್ಟಿದ್ದಾರೆ. ನೀವು ಯಾವುದಕ್ಕೆ ಉಪಯೋಗ ಮಾಡ್ತಿದ್ದೀರಾ. https://ainkannada.com/do-you-know-what-happens-if-you-mix-saffron-with-hot-milk-and-drink-it/ ನಿಮ್ಮ ಆತ್ಮಸಾಕ್ಷಿಯನ್ನು ನೀವೇ ಪ್ರಶ್ನೆ ಮಾಡಿಕೊಳ್ಳಿ ಮಿಸ್ಟರ್ ಡಿ.ಕೆ.ಶಿವಕುಮಾರ್ ಅವರೇ. ಬನ್ನಿ ಸಮಾಜದ ಪರವಾಗಿ ಪೆನ್ನು, ಪೇಪರ್ ಇಟ್ಟುಕೊಳ್ಳಿ. ಬನ್ನಿ ಸಮಾಜ ಕಟ್ಟೋಣ. ಕೊಟ್ಟಿರೋ ಪೆನ್ನು ಪೇಪರ್ ಅನ್ನು ಸರಿಯಾದ ಕೆಲಸಕ್ಕೆ ಬಳಸಿಕೊಳ್ಳಿ. ಮೊನ್ನೆ ಖಾಲಿ‌ ಸಿಲಿಂಡರ್ ಎತ್ತಿಕೊಂಡು ಪೋಸ್ ಕೊಡ್ತೀರಾ. ಖಾಲಿ ಸಿಲಿಂಡರ್ ಎತ್ತೋಕೆ ನೀವೇ ಬೇಕಾ?‌ ಭಾರವನ್ನ ಜನರ ಮೇಲೆ ಹಾಕಿರೋದು ನೀವು. ಒಳ್ಳೆ ನಟನೆ ಕಣ್ರಿ ನಿಮ್ದು ಎಂದು ವಾಗ್ದಾಳಿ ನಡೆಸಿದರು. ಸಾಮಾನ್ಯವಾಗಿ ನಾಗರಿಕನಾಗಿ ನಾನು…

Read More

ಬೆಂಗಳೂರು: ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ಮೇಲೆ ಗುಂಡಿನ ದಾಳಿಯಾಗಿದೆ. ಬಿಡದಿಯ ಮುತ್ತಪ್ಪ ರೈ ನಿವಾಸದ ಕೂಗಳತೆಯಲ್ಲೇ ಅಪರಿಚಿತರು ಫೈರಿಂಗ್ ಮಾಡಿ ಎಸ್ಕೇಪ್​ ಆಗಿದ್ದಾರೆ. ರಿಕ್ಕಿ ರೈ ಮೂಗು ಹಾಗೂ ಬಲ ಭುಜಕ್ಕೆ ಗುಂಡು ತಾಗಿದ್ದು, ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮಧ್ಯೆ ಘಟನೆಗೆ ಸಂಬಂಧಿಸಿದಂತೆ ನಾಲ್ವರ ವಿರುದ್ಧ ರಾಮನಗರ ತಾಲೂಕಿನ ಬಿಡದಿ ಠಾಣೆಯಲ್ಲಿ ಎಫ್​​ಐಆರ್ ದಾಖಲಾಗಿದೆ. ಘಟನೆ ವೇಳೆ ಬಸವರಾಜ್​​ ಕಾರು ಚಾಲನೆ ಮಾಡುತ್ತಿದ್ದರು. ಹೀಗಾಗಿ ಫೈರಿಂಗ್​ ಆಗುತ್ತಿದ್ದಂತೆ ಅವರು ಮುಂದೆ ಬಾಗಿದ್ದಾರೆ. ಹಾಗಾಗಿ ಕೂದಳೆಲೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದೀಗ ಬಸವರಾಜ್ ದೂರು ಆಧರಿಸಿ A1 ರಾಕೇಶ್ ಮಲ್ಲಿ, A2 ಅನುರಾಧಾ, A3 ನಿತೇಶ್ ಶೆಟ್ಟಿ ಹಾಗೂ A4 ವೈದ್ಯನಾಥನ್ ವಿರುದ್ಧ ಬಿಎನ್​ಎಸ್ 109,3(5) ಹಾಗೂ ಆರ್ಮ್ಸ್ ಆ್ಯಕ್ಟ್ ಅಡಿ ಕೇಸ್​ ದಾಖಲಾಗಿದೆ. https://ainkannada.com/do-you-know-what-happens-if-you-mix-saffron-with-hot-milk-and-drink-it/ ಇನ್ನೂ ಮಾಜಿ ಡಾನ್ ಮುತ್ತಪ್ಪ ರೈ ಬೆಂಗಳೂರು, ಬಿಡದಿ, ಕರಾವಳಿ ಪ್ರದೇಶ, ದುಬೈ, ರಷ್ಯಾ ಸೇರಿದಂತೆ ಹಲವು ಕಡೆಗಳಲ್ಲಿ…

Read More