Author: Author AIN

ಬೆಳಗಾವಿ : ರಸ್ತೆ ಬದಿಯಲ್ಲಿ ಅಂಗಡಿ ಇಡುವ ವಿಚಾರಕ್ಕೆ ಗಲಾಟೆ ನಡೆದಿದ್ದು, ಓರ್ವನ ಮೂಗನ್ನೇ ಕತ್ತರಿಸಿದ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ಖಡೇ ಬಜಾರ್‌ನ ಖಂಜಾರ್‌ ಗಲ್ಲಿಯಲ್ಲಿ ಈ ಘಟನೆ ನಡೆದಿದೆ. ಬೀದಿಬದಿ ವ್ಯಾಪಾರಿಗಳ ನಡುವೆ ಅಂಗಡಿ ಇಡುವ ವಿಚಾರಕ್ಕೆ ಆರಂಭವಾದ ಚಕಮಕಿ ಬಳಿಕ ಹೊಡೆದಾಟ ಬಡಿದಾಟಕ್ಕೆ ತಿರುಗಿದೆ. ಈ ವೇಳೆ ಇಬ್ಬರ ಮೇಲೆ ಹಲ್ಲೆ ಮಾಡಲಾಗಿದ್ದು, ಓರ್ವನ ಮೂಗೇ ಕಟ್‌ ಆಗಿದ್ದು, ಮತ್ತೋರ್ವನಿಗೆ ಗಾಯಗಳಾಗಿವೆ. https://ainkannada.com/protest-in-muddebihal-for-yatal-outrage-as-bsys-portrait-burned/ ಸುಫಿಯಾನ್‌ ಫಠಾಣ್‌ (42)ನ ಮೂಗು ಕಟ್‌ ಆಗಿದ್ದು, ಸಮೀರ್‌ ಪಠಾಣ್‌ ಎಂಬುವನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಬೆಳಗಾವಿಯ ಬಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸುಫಿಯಾನ್‌ ಮತ್ತು ಅಯಾನ್‌ ಮಧ್ಯೆ ಅಂಗಡಿ ಇಡುವ ವಿಚಾರಕ್ಕೆ ಗಲಾಟೆಯಾಗಿದ್ದು, ಅಯಾನ್‌ ಸುಫಿಯಾನ್‌ ಮೂಗನ್ನೇ ಕತ್ತಿರಿಸಿದ್ದಾರೆನ. ಬೆಳಗಾವಿ ಮಾರ್ಕೆಟ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More

ವಿಜಯಪುರ : ಯತ್ನಾಳ್ ಉಚ್ಚಾಟನೆ ಖಂಡಿಸಿ ಜಿಲ್ಲೆಯಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ.  ಮುದ್ದೇಬಿಹಾಳದಲ್ಲಿ ಪ್ರತಿಭಟನೆ ನಡೆಸಿದ ಯತ್ನಾಳ್‌ ಬೆಂಬಲಿಗರು, ಟೈರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಒದಲ್ಲದೇ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ಪ್ರತಿಭಟನೆ ನಡೆಯಿತು. ಪಂಚಮಸಾಲಿ ಸಮಾಜದ ಅಭಿಮಾನಿಗಳು ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಅವರ ಅಭಿಮಾನಿಗಳು ನಗರದ ಬಸವೇಶ್ವರ ವೃತ್ತದಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದರು. ಅಲ್ಲದೇ ಬಿಎಸ್‌ವೈ, ವಿಜಯೇಂದ್ರ ಭಾವಚಿತ್ರಗಳನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. https://ainkannada.com/yatnals-expulsion-resolution-passed-by-vijayapura-district-bjp-core-committee/ ಇದೇ ವೇಳೆ ಮಾತನಾಡಿದ ಪಂಚಮಸಾಲಿ ಸಮಾಜ ತಾಲ್ಲೂಕು ಹೋರಾಟ ಸಮಿತಿ ಅಧ್ಯಕ್ಷ ಶ್ರೀಕಾಂತ್ ಕೊಟ್ರಶೆಟ್ಟಿ, ಬಸನಗೌಡ ಪಾಟೀಲ್ ಯತ್ನಾಳ್ ಅವರು ಒಂದು ಸಮಾಜಕ್ಕೆ ಸೀಮಿತವಾಗದೆ ಇಡೀ ಹಿಂದೂ ಸಮಾಜಕ್ಕೆ ಶಕ್ತಿಯಾಗಿದ್ದಾರೆ.  ಬಿಜೆಪಿ ಅವರನ್ನು ಹೊರಹಾಕಿದ್ದು ಖಂಡನೀಯ. ಮುಂದಿನ ದಿನಗಳಲ್ಲಿ ಯತ್ನಾಳ್ ಅವರ ಶಕ್ತಿ ಏನೆಂದು ತೋರಿಸುತ್ತೇವೆ ಎಂದರು. ಪಂಚಮಸಾಲಿ ಸಮಾಜದ ವಿನಾಯಕರು ಮತ್ತು ಯತ್ನಾಳ್‌ ಅಭಿಮಾನಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Read More

ವಾಸ್ತು ಶಾಸ್ತ್ರದ ಪ್ರಕಾರ, ಶನಿವಾರದಂದು ಕೆಲವು ವಿಶೇಷ ಸ್ಥಳಗಳಲ್ಲಿ ದೀಪ ಹಚ್ಚಿದರೆ, ಒಬ್ಬರ ಆಸೆಗಳು ಈಡೇರುತ್ತವೆ ಎಂದು ನಂಬಲಾಗಿದೆ. ಶನಿದೇವರ ಅನುಗ್ರಹದಿಂದ ಕರ್ಮದ ಪರಿಣಾಮಗಳು ಕಡಿಮೆಯಾಗಬಹುದು ಮತ್ತು ಶುಭ ಫಲಗಳನ್ನು ಅನುಭವಿಸಬಹುದು ಎಂದು ಹಿರಿಯರು ಹೇಳುತ್ತಾರೆ. ಈ ನಂಬಿಕೆಯನ್ನು ಅನುಸರಿಸಿ, ಅನೇಕ ಜನರು ಶನಿವಾರ ದೀಪ ಹಚ್ಚುವುದಕ್ಕೆ ವಿಶೇಷ ಪ್ರಾಮುಖ್ಯತೆಯನ್ನು ನೀಡುತ್ತಾರೆ. ವಾಸ್ತು ತಜ್ಞರ ಪ್ರಕಾರ, ಶನಿವಾರದಂದು ಈ ನಾಲ್ಕು ಸ್ಥಳಗಳಲ್ಲಿ ದೀಪಗಳನ್ನು ಹಚ್ಚುವುದು ವಿಶೇಷವಾಗಿ ಶುಭವಾಗಿದೆ. ಆ ಸ್ಥಳಗಳ ಬಗ್ಗೆ ಈಗ ತಿಳಿದುಕೊಳ್ಳೋಣ. ಶನಿ ದೇವನನ್ನು ನ್ಯಾಯದ ದೇವರು ಎಂದು ಪರಿಗಣಿಸಲಾಗುತ್ತದೆ. ಕರ್ಮಗಳಿಗೆ ಫಲ ನೀಡುವ ಶನಿ ದೇವನನ್ನು ಮೆಚ್ಚಿಸಲು ಶನಿವಾರ ದೇವಾಲಯದಲ್ಲಿ ದೀಪ ಹಚ್ಚುವುದು ಬಹಳ ಮುಖ್ಯ ಎಂದು ಹಿರಿಯರು ಹೇಳುತ್ತಾರೆ. ಸಂಜೆ ಶನಿ ದೇವಸ್ಥಾನಕ್ಕೆ ಹೋಗಿ ಸಾಸಿವೆ ಎಣ್ಣೆಯಿಂದ ದೀಪ ಹಚ್ಚಿದರೆ, ಪಾಪಗಳು ಪರಿಹಾರವಾಗುತ್ತವೆ ಮತ್ತು ಹಿಂದಿನ ಜನ್ಮದ ಕರ್ಮದ ಪರಿಣಾಮಗಳು ಕಡಿಮೆಯಾಗುತ್ತವೆ ಎಂದು ನಂಬಲಾಗಿದೆ. ಇದು ಕೆಲಸ ಮತ್ತು ವ್ಯವಹಾರದಲ್ಲಿ ಯಶಸ್ಸನ್ನು ಸಾಧಿಸಲು ಮತ್ತು ಆರೋಗ್ಯ…

Read More

ಸೂರ್ಯೋದಯ – 6:16 ಬೆ ಸೂರ್ಯಾಸ್ತ – 6:25 ಸಂಜೆ ಶಾಲಿವಾಹನ ಶಕೆ -1946 ಸಂವತ್-2080 ಕ್ರೋಧಿನಾಮ ಸಂವತ್ಸರ, ಉತ್ತರ ಅಯಣ, ಶುಕ್ಲ ಪಕ್ಷ, ಶಿಶಿರ ಋತು, ಪಾಲ್ಗುಣ ಮಾಸ, ತಿಥಿ – ಅಮಾವಾಸ್ಯೆ ನಕ್ಷತ್ರ – ಉತ್ತರಾಭಾದ್ರೆ ಯೋಗ – ಬ್ರಹ್ಮ ಕರಣ – ನಾಗವ ರಾಹು ಕಾಲ – 09:00 ದಿಂದ 10:30 ವರೆಗೆ ಯಮಗಂಡ – 01:30 ದಿಂದ 03:00 ವರೆಗೆ ಗುಳಿಕ ಕಾಲ – 06:00 ದಿಂದ 07:30 ವರೆಗೆ ಬ್ರಹ್ಮ ಮುಹೂರ್ತ – 4:40 ಬೆ. ದಿಂದ 5:28 ಬೆ. ವರೆಗೆ ಅಮೃತ ಕಾಲ – 3:10 ಮ.ದಿಂದ 4:35 ಸಂಜೆ ವರೆಗೆ ಅಭಿಜಿತ್ ಮುಹುರ್ತ – 11:56 ಬೆ. ದಿಂದ 12:45 ಮ. ವರೆಗೆ ನಿಮ್ಮ ಹೆಸರು, ಜನ್ಮ ದಿನಾಂಕ, ಜನ್ಮ ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು ಅದರ ಜೊತೆಗೆ ಭಾವ ಚಿತ್ರ ಹಾಗೂ ಹಸ್ತಸಾಮುದ್ರಿಕೆ ಕಳಿಸಿದರೆ ಸಂಪೂರ್ಣ ಭವಿಷ್ಯ ತಿಳಿಸಲಾಗುವುದು.…

Read More

ಮಡಿಕೇರಿ: ದೀರ್ಘಕಾಲದಿಂದ ಬಾಕಿ ಉಳಿದಿದ್ದ ಮೈಸೂರು-ಕುಶಾಲನಗರ ಚತುಷ್ಪಥ ಹೆದ್ದಾರಿ ಯೋಜನೆಯ ಪ್ಯಾಕೇಜ್-3 ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. 2023ರ ಮಾ.12ರಂದು ಪ್ರಧಾನಿ ನರೇಂದ್ರ ಮೋದಿ ಅವರು, ಮೈಸೂರು-ಕುಶಾಲನಗರ ಚತುಷ್ಪಥ ಹೆದ್ದಾರಿ ನಿರ್ಮಾಣಕ್ಕೆ ವರ್ಚುವಲ್‌ ಮೂಲಕ ಶಂಕುಸ್ಥಾಪನೆ ನೆರವೇರಿಸಿದ್ದರು. ಇದೀಗ 3ನೇ ಹಂತದ ಪ್ಯಾಕೇಜ್‌ಗೆ ಕೇಂದ್ರ ಸರ್ಕಾರ ಅನುಮೋದನೆ ಕೊಟ್ಟಿದ್ದು, ಮೈಸೂರು ಕೊಡಗು ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ತಮ್ಮ ಎಕ್ಸ್‌ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. https://ainkannada.com/tejaswi-surya-couple-met-modi-what-was-the-gift-they-received-from-the-prime-minister/ ಇದು ನಮ್ಮ ಪ್ರದೇಶಕ್ಕೆ ಒಂದು ಪ್ರಮುಖ ಮೈಲಿಗಲ್ಲು, ವಿಶೇಷವಾಗಿ ಯೋಜನೆಯು ವರ್ಷಗಳಲ್ಲಿ ಎದುರಿಸಿದ ಹಲವು ವಿಳಂಬಗಳ ನಂತರ ಯಶಸ್ವಿಯಾಗಿದೆ. ಗೌರವಾನ್ವಿತ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಜೀ ಅವರೊಂದಿಗಿನ ನನ್ನ ಇತ್ತೀಚಿನ ಸಭೆಯಲ್ಲಿ, ಈ ಯೋಜನೆಯ ಸುತ್ತಲಿನ ಸವಾಲುಗಳು ಮತ್ತು ಸಮಸ್ಯೆಗಳನ್ನು ವೈಯಕ್ತಿಕವಾಗಿ ಪ್ರಸ್ತುತಪಡಿಸಲು ನನಗೆ ಅವಕಾಶ ಸಿಕ್ಕಿತು. ಅವರು ತ್ವರಿತ ಕ್ರಮ ಕೈಗೊಳ್ಳುವುದಾಗಿ ನನಗೆ ಭರವಸೆ ನೀಡಿದ್ದರು, ಭರವಸೆ ನೀಡಿದಂತೆ…

Read More

ಕೊಡಗು : ಗಿರೀಶ್ ಎಂಬ ವ್ಯಕ್ತಿಯೊಬ್ಬ ತನ್ನ ಪತ್ನಿ, ಪುತ್ರಿ, ಅತ್ತೆ ಹಾಗೂ ಮಾವನನ್ನು ಭೀಕರವಾಗಿ ಕೊಲೆ ಮಾಡಿ ತಲೆ ಮರೆಸಿಕೊಂಡಿರುವ ಘಟನೆ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಬೇಗೂರು ಗ್ರಾಮದಲ್ಲಿ ನಡೆದಿದೆ. ಕೇರಳ ಮೂಲದ ಗಿರೀಶ್(35) ಎಂಬಾತ ಕೊಲೆ ಆರೋಪಿಯಾಗಿದ್ದು, ಘಟನೆ ಬಳಿಕ ತಲೆ ಪರೆಸಿಕೊಂಡಿದ್ದಾನೆ. ಈತನ ಮಾವ ಜೇನು ಕುರುಬರ ಕರಿಯ(75), ಅತ್ತೆ ಗೌರಿ(70), ಪತ್ನಿ ನಾಗಿ (30) ಹಾಗೂ ಪುತ್ರಿ ಕಾವೇರಿ(5) ಕತ್ತಿಯಿಂದ ಹತ್ಯೆಗೀಡಾದವರಾಗಿದ್ದಾರೆ. https://ainkannada.com/breaking-suspicion-of-adultery-the-barbaric-killing-of-four/ ಏಳು ವರ್ಷಗಳ ಹಿಂದೆ ಗಿರೀಶ್ ಹಾಗೂ ನಾಗಿ ವಿವಾಹವಾಗಿದ್ದು, ಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಕಾರ್ಮಿಕರಾಗಿದ್ದ ದಂಪತಿ ಹಾಗೂ ಪುತ್ರಿ ಇತ್ತೀಚೆಗೆ ಬೇಗೂರಿನ ಮಾವನ ಮನೆಗೆ ಬಂದು ವಾಸವಿದ್ದರು ಎಂದು ಹೇಳಲಾಗಿದೆ. ಘಟನಾ  ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಹಾಗೂ ಪೊನ್ನಂಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.  ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಗಿರೀಶ್ ಪತ್ತೆಗೆ ಕಾರ್ಯಾಚರಣೆ ಕೈಗೊಂಡಿದ್ದಾರೆ.

Read More

ಬಾಲಿವುಡ್‌ ಗ್ರೀಡ್‌ ಗಾಡ್ ಖ್ಯಾತಿಯ ಹೃತಿಕ್‌ ರೋಷನ್ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ. ಡ್ಯಾನ್ಸಿಂಗ್‌ ಕಿಂಗ್‌ ಡೈರೆಕ್ಟರ್‌ ಕ್ಯಾಪ್‌ ಕುರ್ಚಿ ಅಲಂಕರಿಸಲು ರೆಡಿಯಾಗಿದ್ದಾರೆ. ಸೂಪರ್‌ ಹೀರೋ ಕ್ರಿಶ್-4 ಮೂಲಕ ಹೀರೋ ಹೃತಿಕ್ ರೋಷನ್‌ ಡೈರೆಕ್ಟರ್‌ ಆಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಕ್ರಿಶ್, ಇಂಡಿಯನ್‌ ಸಿನಿರಂಗದ ಸೂಪರ್‌ ಹಿಟ್‌ ಸರಣಿ ಸಿನಿಮಾ. 2006ರಲ್ಲಿ ಕ್ರಿಶ್‌ ಮೊದಲ ಭಾಗವನ್ನು ಹೃತಿಕ್ ತಂದೆ ನಿರ್ದೇಶಿಸಿ, ನಿರ್ಮಿಸಿದ್ದರು. ಮುಖಕ್ಕೆ ಮಾಸ್ಕ್‌ ಧರಿಸಿ ಸೂಪರ್‌ ಹೀರೋ ಆಗಿ ಗ್ರೀಕ್‌ ಗಾಡ್‌ ದಾಖಲೆ ಬರೆದಿದ್ದರು. ಆದಾದ 12 ವರ್ಷಗಳ ನಂತ್ರ ಬಂದ ಕ್ರಿಶ್-3 ಸಿನಿಮಾ ಕೂಡ ಗಲ್ಲಪೆಟ್ಟಿಗೆಯಲ್ಲಿ ಭರ್ಜರಿ ಕಮಾಯ್‌ ಮಾಡಿತ್ತು. ಈ ಚಿತ್ರಕ್ಕೂ ಕೂಡ ರಾಕೇಶ್‌ ರೋಷನ್‌ ಆಕ್ಷನ್‌ ಕಟ್‌ ಹೇಳಿದ್ದರು. ಈಗ ರೆಡಿಯಾಗ್ತಿರುವ ಕ್ರಿಶ್-4 ಗೆ ಹೃತಿಕ್‌ ರೋಷನ್‌ ಸಾರಥಿ ಅನ್ನೋದೇ ವಿಶೇಷ. ವಾರ್-2 ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿರುವ ಹೃತಿಕ್‌ ರೋಷನ್‌ ಕ್ರಿಶ್-4 ಅಖಾಡಕ್ಕೆ ಇಳಿಯಲು ರೆಡಿಯಾಗಿದ್ದಾರೆ. ಚಿತ್ರರಂಗಕ್ಕೆ ಬಂದ ಹೊಸದರಲ್ಲಿ ತಂದೆ ರಾಕೇಶ್ ರೋಷನ್…

Read More

ವಿಜಯಪುರ : ಯತ್ನಾಳ್ ಉಚ್ಚಾಟನೆಗೆ ವಿಜಯಪುರ ಜಿಲ್ಲಾ ಬಿಜೆಪಿ ಕೋರ್ ಕಮೀಟಿಯಿಂದ ಠರಾವು ಪಾಸು ಮಾಡಲಾಗಿದೆ.   ಯತ್ನಾಳ್ ಉಚ್ಚಾಟನೆ ಸರ್ವಾನುಮತದಿಂದ ಅಂಗಿಕರಿಸಲಾಗಿದೆ ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿಯಿಂದ ಠರಾವು ಪಾಸು ಮಾಡಿದ್ದಾರೆ. ಯತ್ನಾಳ್ ಅವರನ್ನು 6 ವರ್ಷಗಳ ಕಾಲ ಉಚ್ಚಾಟನೆ ಮಾಡಿ ಶಿಸ್ತು ಸಮಿತಿಯಿಂದ ಆದೇಶವಾಗಿದೆ. ನಾವು ಉಚ್ಚಾಟನೆಯನ್ನ ಅಂಗೀಕರಿಸಿದ್ದೇವೆ ಎಂದು ಜಿಲ್ಲಾ ಬಿಜೆಪಿ ಕೋರ್ ಕಮೀಟಿಯಿಂದ ಠರಾವು ಪಾಸಾಗಿದೆ.  https://ainkannada.com/bjp-leader-suresh-biradar-defends-yatnals-expulsion/ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಬದಲಿಗೆ ಮಾಜಿ ಎಮ್‌ಎಲ್ ಸಿ ಅರುಣ ಶಹಾಪುರ ಠರಾವು ಓದಿದ್ದಾರೆ.

Read More

ವಿಜಯಪುರ: ಒಂದು ಕಡೆ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಉಚ್ಚಾಟನೆ ಖಂಡಿಸಿ ಪ್ರತಿಭಟನೆ ನಡೆಯುತಿದ್ದರೆ. ಇತ್ತ ವಿಜಯೇಂದ್ರ ಆಪ್ತರು ಸುದ್ದಿಗೋಷ್ಟಿ ನಡೆಸಿದ್ದಾರೆ. ಯತ್ನಾಳ್‌ ಉಚ್ಚಾಟನೆ ಸಮರ್ಥಿಸಿಕೊಂಡಿರುವ ಬಿಜೆಪಿ ಮುಖಂಡ ಸುರೇಶ ಬಿರಾದಾರ್‌ ನಿನ್ನೆ ಯತ್ನಾಳ್ ಪರ ಪಂಚಮಸಾಲಿ ಪ್ರತಿಭಟನೆ ಖಂಡಿಸಿದ್ದಾರೆ. ಇಂದು ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ನಿನ್ನೆ ಪ್ರತಿಭಟನೆ ಪಂಚಮಸಾಲಿ ಸಮುದಾಯವನ್ನ ಇಕ್ಕಟ್ಟಿಗೆ ಸಿಲುಕಿಸಿದೆ. ನಿನ್ನೆ ಯತ್ನಾಳ್ ಬ್ಯಾಂಕ್ ನೌಕರರೇ ಹೆಚ್ಚಾಗಿದ್ದರು. ನಿನ್ನೆ ನಡೆದದ್ದು ಪಂಚಮಸಾಲಿ ಹೋರಾಟ ಅಲ್ಲ, ವಿಜಯೇಂದ್ರ, ಯಡಿಯೂರಪ್ಪರನ್ನ ಟಾರ್ಗೆಟ್ ಮಾಡಲಾಗ್ತಿದೆ. ವಿನಾಕಾರಣ ಬಿ ಎಸ್ ವೈ ಕುಟುಂಬನ್ನ ಲಿಂಗಾಯತ ವಿರೋಧಿ, ಭ್ರಷ್ಟಾಚಾರಿಗಳು ಎಂದು ಬಿಂಬಿಸಲಾಗ್ತಿದೆ. ಪ್ರತಿಭಟನೆಗಳಲ್ಲಿ ಬಿ ಎಸ್ ವೈ ಹಾಗೂ ವಿಜಯೇಂದ್ರ ಪೋಟೊಗಳಿಗೆ ಅವಮಾನ ಮಾಡಲಾಗಿದೆ, ಇದು ಸರಿಯಲ್ಲ,  ಯತ್ನಾಳ್ ಮಾತುಗಳನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು, ಮುಂದೆ ಒಳ್ಳೆ ಭವಿಷ್ಯ ಇದೆ ಎಂದರು. https://ainkannada.com/panchamasali-community-protests-against-yatnals-expulsion/ ಇನ್ನೂ ಯತ್ನಾಳ್‌ ಉಚ್ಚಾಟನೆ ಬೆನ್ನಲ್ಲೇ ರಾಜೀನಾಮೆ ಪರ್ವ ವಿಚಾರವಾಗಿ ಪ್ರತಿಕ್ರಿಯಿಸಿ, 174 ಪದಾಧಿಕಾರಿಗಳ ರಾಜೀನಾಮೆ…

Read More

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಐಪಿಎಲ್ 2025 ಪಂದ್ಯವು ಶುಕ್ರವಾರ ಚೆನ್ನೈನ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಕ್ರಿಕೆಟಿಗರಾದ ಅಂಬಟಿ ರಾಯುಡು ಮತ್ತು ಎಸ್ ಬದ್ರಿನಾಥ್ ಆರ್‌ಸಿಬಿ ವಿರುದ್ಧ ಜೋಕ್‌ಗಳನ್ನು ಸಿಡಿಸಿ ನಕ್ಕರು. ಈ ಬಾರಿ ಆರ್‌ಸಿಬಿ ಟ್ರೋಫಿ ಗೆಲ್ಲುವ ಕನಸು ನನಸಾಗುತ್ತದೆಯೇ ಎಂದು ಬದರಿನಾಥ್ ಕೇಳಿದಾಗ, ರಾಯುಡು ಆಟಗಾರರು ನಗುತ್ತಿರುವ ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಇಬ್ಬರು ಮಾಜಿ ಸಿಎಸ್‌ಕೆ ಆಟಗಾರರು ಆರ್‌ಸಿಬಿ ಟ್ರೋಫಿ ಗೆಲ್ಲಲು ಹೋರಾಡಬೇಕಾದ ಹೋರಾಟದ ಬಗ್ಗೆ ಚರ್ಚಿಸಿದರು. “ಟ್ರೋಫಿ ಗೆಲ್ಲಲು ಆರ್‌ಸಿಬಿ ಹೋರಾಡುವುದನ್ನು ನೋಡಲು ನನಗೆ ಯಾವಾಗಲೂ ಇಷ್ಟ” ಎಂದು ರಾಯುಡು ಈ ಪ್ರಶ್ನೆಗೆ ಉತ್ತರಿಸಿದರು. https://ainkannada.com/according-to-vastu-sleep-in-this-direction-you-will-get-unexpected-luck-in-life/ ಆರ್‌ಸಿಬಿ ಒಂದು ದಿನ ಟ್ರೋಫಿ ಗೆಲ್ಲಬೇಕೆಂದು ನಾನು ಬಯಸುತ್ತೇನೆ, ಆದರೆ ಈ ವರ್ಷ ಅಲ್ಲ! ವಾಸ್ತವವಾಗಿ, ಐಪಿಎಲ್‌ಗೆ ನಿರಂತರವಾಗಿ ನಿರೀಕ್ಷೆಗಳನ್ನು ಹೆಚ್ಚಿಸುವ ಇಂತಹ ತಂಡದ ಅಗತ್ಯವಿದೆ.…

Read More