ಬೆಂಗಳೂರು: ನಮ್ಮದೇ ಗಾಡಿ ಫುಲ್ ಇದೆ, ಜೆಡಿಎಸ್ 14 ಜನರನ್ನು ತೆಗೆದುಕೊಂಡು ನಾವೇನು ಮಾಡೋಣ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಓವರ್ ಲೋಡೆಡ್ ಇದ್ರೂ ನಮ್ಮದು ಕಾಂಗ್ರೆಸ್ ಪಕ್ಷವೇ. ಇಲ್ಲಿಯೇ ಅಧ್ಯಕ್ಷ ಆಗಬೇಕು ಇಲ್ಲಿಯೇ ಸಿಎಂ ಆಗಬೇಕು. ಸದ್ಯಕ್ಕೆ ವೈಟಿಂಗ್ ಲಿಸ್ಟ್ ನಲ್ಲಿ ಇದ್ದೇವೆ ಇಲ್ಲಿಯೇ ಕಾಯ್ತೇವೆ ಎಂದು ಹೇಳಿದ್ದಾರೆ. https://ainkannada.com/according-to-vastu-sleep-in-this-direction-you-will-get-unexpected-luck-in-life/ ನನ್ನದು ಆರ್.ಎಸ್.ಸಿ ಟಿಕೆಟ್. ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದು ಕಾಯುತ್ತೇನೆ. ಯಾರಾದ್ರೂ ಮೆಜೆಸ್ಟಿಕ್ ಜಾಂನಲ್ಲಿ ಸಿಕ್ಕಿಹಾಕಿಕೊಂಡು ಬರುವುದು ತಡವಾದರೆ ನಮಗೆ ಅವಕಾಶ ಸಿಗಬಹುದು. ಎಲ್ಲರೂ ಆರ್ ಎಸ್ ಸಿ ಟಿಕೆಟ್ ಇಟ್ಟುಕೊಂಡೇ ಕಾಯ್ತಿದ್ದಾರೆ ಎಂದು ಹೇಳಿದ್ದಾರೆ. ನಾವು ಇಲ್ಲೇ ಮಂತ್ರಿ,ಮುಖ್ಯಮಂತ್ರಿ ಆಗಬೇಕು, ನಾವೇನು ಫೋಟೋ ತೆಗೆಸಿಕೊಂಡು ಆಕಬೇಕಿಲ್ಲ, ಇಲ್ಲಿ ಶಿಂಧೆ, ಪವಾರ್ ಯಾರು ಇಲ್ಲ ಆ ಸಾಮರ್ಥ್ಯ ಯಾರಿಗೂ ಇಲ್ಲ ಎಂದರು.
Author: Author AIN
ಗದಗ : ಬಿಜೆಪಿಯಿಂದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆ ಖಂಡಿಸಿ ಗದಗ ನಗರದ ಫೀಲ್ಟ್ ಮಾರ್ಷಲ್ ಕೆ ಎಂ ಕಾರ್ಯಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದಿಂದ ಪ್ರತಿಭಟನೆ ನಡೆಸಿ, ಮಾಜಿ ಸಿಎಂ ಬಿ ಎಸ್ ವೈ ಹಾಗೂ ವಿಜಯೇಂದ್ರ ಫೋಟೋಗಳಿಗೆ ಧಿಕ್ಕಾರ ಬರೆದು, ಅಡ್ಜಸ್ಟ್ಮೆಂಟ್ ರಾಜಕಾರಣ ಮಾಡುತ್ತಿರೋ ವಿಜಯೇಂದ್ರ ಎಂದು ಆಕ್ರೋಶ ವ್ಯಕ್ತಪಡಿಸಿದರು. ಚುನಾವಣೆಗಳಲ್ಲಿ ಹಿಂದುತ್ವದ ಪ್ರಚಾರಕ್ಕೆ ಯತ್ನಾಳ್ ಬೇಕು ಈಗ ಬೇಡವೇ ಅಂತಾ ಕಿಡಿ ಕಾರಿದ್ದು, ಕೂಡಲೇ ಉಚ್ಚಾಟನೆ ಹಿಂಪಡೆಯುವಂತೆ ಒತ್ತಾಯಿಸಿದರು. https://ainkannada.com/basanagowda-patil-yatnal-invited-to-our-party-mla-raju-kage/ ಅಲ್ಲದೇ ಪ್ರತಿಭಟನಾಕಾರರು, ಮಾಜಿ ಬಿಎಸ್ ವೈ ಭಾವಚಿತ್ರ ಸುಡಲು ಮುಂದಾಗಿದ್ದು, ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ವಿರುದ್ದ ಕೆಲ ಕಾಲ ವಾಗ್ವಾದ ನಡೆಯಿತು.
ಬೆಂಗಳೂರು: ಮುಸ್ಲಿಮರಿಗೆ ಗುತ್ತಿಗೆ ಮೀಸಲಾತಿ ಕೊಡಲು ಸಂವಿಧಾನ ಬದಲಾವಣೆ ಮಾಡ್ತೀವಿ ಎಂಬ ಡಿಕೆಶಿ ಹೇಳಿಕೆ ಖಂಡಿಸಿ ಜನತಾದಳ ಜಾತ್ಯತೀತ ಪಕ್ಷದ ಕರ್ನಾಟಕ ರಾಜ್ಯ ಹಾಗೂ ಬೆಂಗಳೂರು ನಗರದ ಪರಿಶಿಷ್ಟ ಜಾತಿ ವಿಭಾಗದ ವತಿಯಿಂದ ಉಗ್ರ ಪ್ರತಿಭಟನೆ ಹಮ್ಮಿಕೊಂಡಿದ್ದರು. ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿದ್ದು, ಡಿಕೆಶಿ ಪೋಸ್ಟರ್ ಹಿಡಿದು, ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿ ದ್ದಾರೆ. ಈ ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಶಾಸಕರಾದ ಟಿ ಎ ಶರವಣ, ಮಾಜಿ ಶಾಸಕರು ಹಾಗೂ ಪರಿಶಿಷ್ಟ ಜಾತಿ ವಿಭಾಗ, ಕರ್ನಾಟಕ ಪ್ರದೇಶ ಜನತಾದಳ (ಜಾತ್ಯತೀತ) ಅಧ್ಯಕ್ಷರು ಡಾ. ಕೆ. ಅನ್ನದಾನಿ ಅವರು ಸೇರಿದಂತೆ ಪಕ್ಷದ ಮುಖಂಡರು, ಶಾಸಕರು, ಮಾಜಿ ಸಚಿವರು, ಮಾಜಿ ಸಂಸದರು, ಮಾಜಿ ಶಾಸಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಬೆಳಗಾವಿ : ಸೈಬರ್ ವಂಚಕರ ಕಿರುಕುಳಕ್ಕೆ ವೃದ್ಧ ದಂಪತಿ ಬಲಿಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ಗ್ರಾಮದಲ್ಲಿ ನಡೆದಿದೆ. ಡಿಯಾಂಗೋ ನಜರತ್ (83) ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರೆ, ಇವರ ಪತ್ನಿ ಪ್ಲೇವಿಯಾನಾ ನಜರತ್ (79) ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. https://ainkannada.com/ugadi-background-mandya-police-department-puts-a-brake-on-gambling/ ಕೆಲ ದಿನಗಳ ಹಿಂದೆ ಈ ದಂಪತಿಗಳಿಗೆ ವಿಡಿಯೋ ಕರೆಯೊಂದು ಬಂದಿತ್ತು. ದೆಹಲಿ ಕ್ರೈಂ ಬ್ರ್ಯಾಂಚ್ನಿಂದ ಕರೆ ಮಾಡುತ್ತಿದ್ದೇವೆ, ನೀವು ಅಪರಾಧ ಕೃತ್ಯದಲ್ಲಿ ಶಾಮೀಲಾಗಿದ್ದೀರಿ ಎಂದು ಬೆದರಿಕೆ ಹಾಕಲಾಗಿತ್ತು. ಬಳಿಕ ಸೈಬರ್ ವಂಚಕರು ದಂಪತಿ ವಳಿ 5 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹಣ ಕೊಟ್ಟ ಬಳಿಕವೂ ಮತ್ತೆ ವಿಡಿಯೋ ಕಾಲ್ ಮಾಡಿ ಧಮ್ಕಿ ಹಾಕಿದ್ದರು. ಹಣ ಕೊಡದಿದ್ದರೆ ಅರೆಸ್ಟ್ ಮಾಡುವುದಾಗಿ ಹೆದರಿಸಿದ್ದರು. ಇದರಿಂದ ಮನನೊಂದ ದಂಪತಿ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸ್ಥಳಕ್ಕೆ ನಂದಗಡ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೇಸಿಗೆಯಲ್ಲಿ ಅನೇಕ ಜನರು ತಣ್ಣೀರು ಕುಡಿಯಲು ಇಷ್ಟಪಡುತ್ತಾರೆ. ಈ ಕಾರಣಕ್ಕಾಗಿ, ಅನೇಕ ಮನೆಗಳು ಬೇಸಿಗೆಯ ಆರಂಭದಲ್ಲಿ ತಣ್ಣೀರಿಗಾಗಿ ರೆಫ್ರಿಜರೇಟರ್‌ನಲ್ಲಿ ನೀರಿನ ಬಾಟಲಿಗಳನ್ನು ಇಡಲು ಪ್ರಾರಂಭಿಸುತ್ತವೆ. ಆದರೆ, ಫ್ರಿಡ್ಜ್‌ನಿಂದ ತಣ್ಣೀರು ಕುಡಿಯುವುದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಅಂತಹ ಪರಿಸ್ಥಿತಿಯಲ್ಲಿ, ನೀವು ಫ್ರಿಡ್ಜ್‌ನಲ್ಲಿರುವ ತಣ್ಣೀರಿನ ಬದಲು ಪಾತ್ರೆಯಿಂದ ತಣ್ಣೀರನ್ನು ಕುಡಿಯಬಹುದು. ಪಾತ್ರೆಯಲ್ಲಿರುವ ನೀರು ನೈಸರ್ಗಿಕವಾಗಿ ತಣ್ಣಗಾಗುತ್ತದೆ. ಇದು ಆರೋಗ್ಯಕ್ಕೆ ಒಳ್ಳೆಯದು. https://ainkannada.com/according-to-vastu-sleep-in-this-direction-you-will-get-unexpected-luck-in-life/ ಇಂದು ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಮಣ್ಣಿನ ಮಡಕೆಗಳು ಮತ್ತು ಮಣ್ಣಿನ ಬಾಟಲಿಗಳು ಲಭ್ಯವಿದೆ. ಇವುಗಳನ್ನು ಅನೇಕ ಜನರು ಬಳಸುತ್ತಿದ್ದಾರೆ. ಅವುಗಳು ತಮ್ಮಲ್ಲಿ ಸಂಗ್ರಹವಾಗಿರುವ ನೀರನ್ನು ಕುಡಿಯಲು ಇಷ್ಟಪಡುತ್ತವೆ. ಆದಾಗ್ಯೂ, ಮಣ್ಣಿನಿಂದ ಮಾಡಿದ ಮಡಕೆ ಅಥವಾ ಬಾಟಲಿಯನ್ನು ಬಳಸುವ ಮೊದಲು ಹೆಚ್ಚಿನ ಕಾಳಜಿ ವಹಿಸಬೇಕು. ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ವಿಷಯಗಳು. ಇಲ್ಲದಿದ್ದರೆ, ಇವುಗಳಲ್ಲಿರುವ ನೀರು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಮಡಕೆಯನ್ನು ಹೇಗೆ ಸ್ವಚ್ಛಗೊಳಿಸುವುದು ಮಡಕೆಯನ್ನು ಬಳಸುವ ಮೊದಲು, ಅದನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ. ಜೇಡಿಮಣ್ಣಿನಿಂದ ಮಾಡಿದ ಮಡಕೆಗಳು ಬ್ಯಾಕ್ಟೀರಿಯಾ ಮತ್ತು ಕೊಳೆಯನ್ನು ಸಂಗ್ರಹಿಸುತ್ತವೆ.…
ಬೆಂಗಳೂರು: ಸಂವಿಧಾನ ಬದಲಾವಣೆ ಮಾಡ್ತೀನಿ ಎಂದಿರುವ ಡಿಕೆಶಿ ಕೂಡಲೇ ರಾಜೀನಾಮೆ ಕೊಡಬೇಕು ಎಂದು ಜೆಡಿಎಸ್ ಎಸ್‌ಸಿ ಘಟಕದ ಅಧ್ಯಕ್ಷ ಮಾಜಿ ಶಾಸಕ ಅನ್ನದಾನಿ ಆಗ್ರಹಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಎಸ್‌ಸಿಎಸ್‌ಪಿ-ಟಿಎಸ್‌ಪಿ ಹಣವನ್ನು ಗ್ಯಾರಂಟಿಗೆ ಬಳಕೆ ಮಾಡಿಕೊಂಡಿದ್ದಾರೆ. ಇದನ್ನ ಕೇಳಿದರೆ ಭಂಡ ಮಾತು ಆಡುತ್ತೀರಿ. ಕಾಂಗ್ರೆಸ್‌ನವರು ಮಾನ ಮರ್ಯಾದೆ ಇಟ್ಟುಕೊಂಡು ಮಾತಾಡಬೇಕು. ಡಿಕೆಶಿ ಮನಸಿನಲ್ಲಿ ಇರೋದು ಬಾಯಲ್ಲಿ ಬಂದಿದೆ. ಅವರಿಗೆ ನಾಚಿಕೆ ಆಗಬೇಕು. ಕೂಡಲೇ ಹೇಳಿಕೆ ವಾಪಸ್ ತೆಗೆದುಕೊಂಡು ಕ್ಷಮೆ ಕೇಳಬೇಕು. ಡಿಕೆಶಿ ಅವರೇ ನಿಮ್ಮಿಂದ ಸಂವಿಧಾನ ಬದಲಾವಣೆ ಸಾಧ್ಯವಿಲ್ಲ. ದಲಿತರ ಹಣವನ್ನ ನುಂಗಿರುವುದು ಕಾಂಗ್ರೆಸ್. ಸಂವಿಧಾನ ಬದಲಾವಣೆ ಮಾಡ್ತೀನಿ ಎಂದಿರುವ ಡಿಕೆಶಿ ಕೂಡಲೇ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು. https://ainkannada.com/according-to-vastu-sleep-in-this-direction-you-will-get-unexpected-luck-in-life/ ಈ ದೇಶದಲ್ಲಿ ಸಂವಿಧಾನವನ್ನು ಅಪಮಾನ ಮಾಡಿರುವುದು ಕಾಂಗ್ರೆಸ್. ದೇವೇಗೌಡರನ್ನ, ಅಡ್ವಾಣಿ, ಜೆಪಿ ಅವರನ್ನ ಜೈಲಿಗೆ ಹಾಕಿದ್ದೀರಿ. ಅಂಬೇಡ್ಕರ್ ಸಂವಿಧಾನ ಅಮಾನತು ಮಾಡಿ, ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಜಾರಿ ಮಾಡಿದರು. ಇದನ್ನ ಜನರು ಅರ್ಥ ಮಾಡಿಕೊಳ್ಳಬೇಕು ಎಂದು ಕಾಂಗ್ರೆಸ್ ವಿರುದ್ದ…
ಕನ್ನಡ ಬೆಳ್ಳಿಪರದೆಗೆ ತುಂಟ ತುಂಟಿಗಳ ಮೂಲಕ ಕಿಸ್ ಕೊಟ್ಟು ತೆಲುಗಿನಲ್ಲಿ ಕಿಸಿಕ್ ಎಂದು ಕುಣಿದು ಈಗ ಬಾಲಿವುಡ್ ಅಂಗಳದಲ್ಲಿ ರಶ್ಮಿಕಾ ಮಂದಣ್ಣಳಂತೆ ಮೋಡಿ ಮಾಡೋದಿಕ್ಕೆ ರೆಡಿಯಾಗಿರುವ ನಟಿ ಶ್ರೀಲೀಲಾ. ತೆಲುಗಿನಲ್ಲಿ ಶ್ರೀಲೀಲಾ ಕ್ರೇಜ್ ಜೋರಾಗಿಯೇ ಇದೆ. ಪೆಳ್ಳಿ ಸಂದಡಿ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದ ಭರಾಟೆ ಬ್ಯೂಟಿ ಈಗ ಮಹೇಶ್ ಬಾಬು, ಅಲ್ಲು ಅರ್ಜುನ್, ಬಾಲಯ್ಯ ಹಾಗೂ ಪವನ್ ಕಲ್ಯಾಣ್ ಅವರಂತಹ ಸ್ಟಾರ್ ಹೀರೋಗಳ ಜೊತೆ ನಟಿಸಿದ್ದಾರೆ. ಈ ನಡುವೆ ಬಿಟೌನ್ ನತ್ತ ಹೆಜ್ಜೆ ಇಟ್ಟಿದ್ದಾರೆ. ಬಾಲಿವುಡ್ ನಲ್ಲಿ ಸದ್ಯ ಬಹುಬೇಡಿಕೆ ಕ್ರಿಯೇಟ್ ಮಾಡಿಕೊಂಡಿರುವ ಕಾರ್ತಿಕ್ ಆರ್ಯನ್ ಹೊಸ ಸಿನಿಮಾದಲ್ಲಿ ಶ್ರೀಲೀಲಾ ನಾಯಕಿ. ಈ ಹಿಂದೆ ಬಿಡುಗಡೆಯಾಗಿದ್ದ ಈ ಚಿತ್ರದ ಸಣ್ಣ ತುಣುಕು ನೋಡಿ ಫ್ಯಾನ್ಸ್ ಎಕ್ಸೈಟ್ ಆಗಿದ್ದಾರೆ. ಮುತ್ತಿನ ಮತ್ತೇರಿಸಿದ್ದ ಶ್ರೀಲೀಲಾ ಕಾರ್ತಿಕ್ ನೋಡಿ ಬಿಟೌನ್ ಹೊಸ ಜೋಡಿ ಅಂತಾ ಕರೆಯುತ್ತಿದ್ದಾರೆ. ಈ ಸಿನಿಮಾಗೆ ಆಶಿಕಾ-3 ಎಂಬ ಟೈಟಲ್ ಇಡಲು ಚಿತ್ರತಂಡ ಸಜ್ಜಾಗುತ್ತಿದೆಯಂತೆ. ಬಾಲಿವುಡ್ನ ಪ್ರಖ್ಯಾತ ನಿರ್ದೇಶಕ ಅನುರಾಗ್…
ಮಂಡ್ಯ : ಜೂಜಾಟಕ್ಕೆ ಮಂಡ್ಯದಲ್ಲಿ ಬ್ರೇಕ್ ಬಿದ್ದಿದೆ. ಯುಗಾದಿ ಹಬ್ಬದಂದು ಜೂಜಾಟ ನಡೆಸಿದರೆ, ಕೇಸ್ ಬೀಳೋದು ಗ್ಯಾರಂಟಿ ಎಂದು ಮಂಡ್ಯ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಹಿಂದೂಗಳ ನೂತನ ವರ್ಷ ಯುಗಾದಿ ಹಬ್ಬ ಎಂದರೆ ಜನರಲ್ಲಿ ಸಡಗರ ಮನೆ ಮಾಡುತ್ತದೆ. ಹಬ್ಬದಂದು ಹೊಸ ಬಟ್ಟೆ ತೊಟ್ಟು, ಹಬ್ಬದೂಟ ಸವಿದು, ಪರಸ್ಪರ ಶುಭಾಶಯ ಕೋರುವುದು ವಾಡಿಕೆ. ಆದರೆ ಇದರ ಜೊತೆಗೆ ಯುಗಾದಿ ಹಬ್ಬದಂದೂ ಜೂಜಾಟ ಆಡುವ ಪದ್ಧತಿ ಕೂಡ ನಡೆದುಕೊಂಡು ಬಂದಿದೆ. https://ainkannada.com/people-are-outraged-by-the-increase-in-electricity-prices-following-the-rise-in-milk-and-yogurt-prices/ ಯುಗಾದಿ ಹಬ್ಬದ ಸಂಭ್ರಮಕ್ಕೆ ಕ್ಷಣಗಣನೆ ಪ್ರಾರಂಭವಾಗಿದ್ದು, ಹಬ್ಬದ ಆಚರಣೆ ನೆಪದಲ್ಲಿ ಇಸ್ಪೀಟ್ ಆಟ, ಜೌಕಬಾರ ಸೇರಿದಂತೆ ನಾನಾ ಬಗೆಯ ಜೂಜಾಟದ ಕನವರಿಕೆಯಲ್ಲಿದ್ದ ಜನರಿಗೆ ಮಂಡ್ಯ ಜಿಲ್ಲಾ ಪೊಲೀಸರು ಜೂಜಾಟ ನಿರ್ಬಂಧಿಸಿ, ವಾರ್ನಿಂಗ್ ನೀಡಿದ್ದಾರೆ. ಯುಗಾದಿ ಹಬ್ಬದ ಜೂಜಾಟಕ್ಕೆ ಬ್ರೇಕ್ ಹಾಕಲು ಮುಂದಾಗಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಈ ಸಂಬಂಧ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. ಯುಗಾದಿ ಹಬ್ಬದಂದು ಎಲ್ಲಾ ಮಾದರಿಯ…
ಬೆಂಗಳೂರು: ಎಸ್ ಟಿ ಸೋಮಶೇಖರ್ ಹೆಬ್ಬಾರ್ ಉಚ್ಚಾಟನೆ ಆಗುತ್ತೆ ಎಂದು ಛಲವಾದಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಆರ್.ಅಶೋಕ್ ಪ್ರತಿಕ್ರಿಯೇ ನೀಡಿದ್ದಾರೆ. ಎಲ್ಲಾ ಮಾಹಿತಿ ಪಡೆದು, ಕೇಂದ್ರ ನಾಯಕರು ತೀರ್ಮಾನ ಮಾಡ್ತಾರೆ. ನಾವೆಲ್ಲಾ ಒಟ್ಟಿಗೆ ಹೋಗಬೇಕು ಕಾಂಗ್ರೆಸ್ ನ ಎದುರಿಸಬೇಕು ಅನ್ನೊದು ನಮ್ಮ ಉದ್ದೇಶ ಎಂದು ಹೇಳಿದರು. ಪಾರ್ಟಿ ನಮ್ಮ ತಾಯಿ ಇದ್ದಾಗೆ, ಪಕ್ಷದ ವಿರುದ್ದ ಯಾವುದೇ ಹೇಳಿಕೆ ಕೊಡಬಾರದು ಎಂದು ಮನವಿ ಮಾಡ್ತಿವಿ ಎಂದರು. ಇನ್ನೂ ಮತ್ತೆ ರೆಬಲ್ ನಾಯಕರ ಸಭೆ ವಿಚಾರಕ್ಕೆ ಸಂಬಂಧಿಸಿದಂತೆ ಎಲ್ಲವನ್ನ ಕೇಂದ್ರದ ನಾಯಕರು ಗಮನ ಮಾಡ್ತಿದ್ದಾರೆ. https://ainkannada.com/according-to-vastu-sleep-in-this-direction-you-will-get-unexpected-luck-in-life/ ನನಗೆ ಸಭೆ ಬಗ್ಗೆ ಮಾಹಿತಿ ಇಲ್ಲ, ಉಚ್ಚಾಟನೆ ವಾಪಸ್ಸು ಪಡೆಯುವುದು ಕೇಳೊದಕ್ಕೆ ಕಾರ್ಯಕರ್ತರಿಗೆ ಹಕ್ಕಿದೆ. ಪಕ್ಷದ ವಿರುದ್ದ ಯಾರು ಮಾತಾಡಬಾರದು ಎಂದು ಮನವಿ ಮಾಡಿದ್ದಾರೆ. ಯತ್ನಾಳ್ ಉಚ್ಚಾಟನೆ ವಾಪಸ್ಸು ಒಡೆಯಬೇಕೆಂದು ಜಯಮೃತ್ಯುಂಜಯ ಸ್ವಾಮೀಜಿಗಳ ಎಚ್ಚರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಆಶ್ಚರ್ಯವಾಗಿದೆ ನಮ್ಮದು ಪೊಲಿಟಿಕಲ್ ಪಾರ್ಟಿ, ಅವರದ್ದು ಮಠ. ಆದ್ದರಿಂದ ಮತ್ತೊಮ್ಮೆ ಜಯಮೃತ್ಯುಂಜಯ ಸ್ವಾಮಿಜಿಗಳು ಇದರ ಬಗ್ಗೆ…
ಮ್ಯಾನ್ಮಾರ್: ಭಾರತದ ನೆರೆಯ ಮ್ಯಾನ್ಮಾರ್‌ನಲ್ಲಿ ಇಂದು ಭಾರಿ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 7.7 ರಷ್ಟಿದೆ ಎಂದು ಯುನೈಟೆಡ್ ಸ್ಟೇಟ್ಸ್ ಭೂವೈಜ್ಞಾನಿಕ ಸಮೀಕ್ಷೆ (ಯುಎಸ್‌ಜಿಎಸ್) ತಿಳಿಸಿದೆ. ಮಧ್ಯಾಹ್ನ ಸಂಭವಿಸಿದ ಭೂಕಂಪ 5 ನಿಮಿಷಗಳಿಗೂ ಹೆಚ್ಚು ಕಾಲ ನಡೆಯಿತು ಎಂದು ಸ್ಥಳೀಯರು ಹೇಳುತ್ತಾರೆ. https://ainkannada.com/according-to-vastu-sleep-in-this-direction-you-will-get-unexpected-luck-in-life/ ಮತ್ತೊಂದೆಡೆ, ಬ್ಯಾಂಕಾಕ್‌ನಲ್ಲೂ ಭೂಮಿ ಕಂಪಿಸಿತು. ಇಲ್ಲಿ ಭೂಕಂಪದ ತೀವ್ರತೆ 7.3 ಎಂದು ದಾಖಲಾಗಿದೆ. ಭೂಕಂಪದ ತೀವ್ರತೆಗೆ ಕಟ್ಟಡಗಳು ಕುಸಿದವು. ಇದರಿಂದಾಗಿ ಭಾರೀ ಆಸ್ತಿಪಾಸ್ತಿ ಹಾನಿಯಾಯಿತು. ಶುಕ್ರವಾರ ಮಧ್ಯಾಹ್ನ ಒಂದರ ನಂತರ ಒಂದರಂತೆ ಎರಡು ಭೂಕಂಪಗಳು ಸಂಭವಿಸಿದ ನಂತರ ಜನರು ಭಯಭೀತರಾಗಿದ್ದರು. ಅವರು ತಮ್ಮ ಮನೆಗಳಿಂದ ಹೊರಗೆ ಓಡಿ ತಮ್ಮ ಜೀವಗಳನ್ನು ಉಳಿಸಿಕೊಂಡರು. https://x.com/Bahis_sikayetim/status/1905513799907410307?ref_src=twsrc%5Etfw%7Ctwcamp%5Etweetembed%7Ctwterm%5E1905513799907410307%7Ctwgr%5Eb62de5bb3f49f46e84a75cc20e2432ab332c8050%7Ctwcon%5Es1_&ref_url=https%3A%2F%2Ftv9telugu.com%2Fworld%2Ftwo-massive-earthquakes-jolt-myanmar-strong-tremors-felt-in-bangkok-1499839.html ಸತತ ಎರಡು ಭೂಕಂಪಗಳು ಸಂಭವಿಸಿದವು, ಮೊದಲು 7.7 ತೀವ್ರತೆಯೊಂದಿಗೆ ಮತ್ತು ನಂತರ 6.4 ತೀವ್ರತೆಯೊಂದಿಗೆ. ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್‌ನಲ್ಲೂ ಬಲವಾದ ಕಂಪನದ ಅನುಭವವಾಗಿದೆ. ಮ್ಯಾನ್ಮಾರ್‌ನ ಮಂಡಲೆಯಲ್ಲಿರುವ ಐಕಾನಿಕಲ್ ಅವಾ ಸೇತುವೆ, ಭಾರಿ ಭೂಕಂಪದಿಂದಾಗಿ ಇರಾವತಿ ನದಿಗೆ ಕುಸಿದು ಬಿದ್ದಿದೆ. ಹಲವು…