ಕನ್ನಡದ ಆಪಲ್ ಬ್ಯೂಟಿ ಆಶಿಕಾ ರಂಗನಾಥ್ ಗ್ಲಾಮರ್ ಲುಕ್ ಗೂ ಸೈ, ಡಿ ಗ್ಲಾಮರ್ ಲುಕ್ ಗೂ ಜೈ ಎನ್ನುವ ನಟಿ..ಮಾರ್ಡನ್ ಡ್ರೆಸ್ ಮಾತ್ರವಲ್ಲ ಟ್ರೆಡಿಷನಲ್ ಅವತಾರದಲ್ಲಿಯೂ ಆಶಿಕಾ ಮುದ್ದಾಗಿ ಕಾಣಿಸುತ್ತಾರೆ. ಸೀರೆಯುಟ್ಟು ಬೋಲ್ಡ್ ಲುಕ್ ನಲ್ಲಿ ಕ್ಯಾಮೆರಾ ಕಣ್ಣು ಹೊಡೆದಿದ್ದಾರೆ. ಸೀರೆಯುಟ್ಟು ಮಲ್ಲಿಗೆ ಮುಡಿದು ಮುದ್ದು ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಕನ್ನಡ ಮಾತ್ರವಲ್ಲ ಆಶಿಕಾ ಇತರ ಭಾಷೆಗಳಲ್ಲಿಯೂ ಬ್ಯುಸಿಯಾಗಿದ್ದಾರೆ. ತೆಲುಗು, ತಮಿಳು ಸಿನಿಮಾಗಳಲ್ಲೂ ನಟಿಸುವ ಮೂಲಕ ಬಹುಭಾಷಾ ನಟಿಯಾಗಿ ಮಿಂಚುತ್ತಿದ್ದಾರೆ. ಆಶಿಕಾ ರಂಗನಾಥ್ ಬ್ಯೂಟಿಫುಲ್ ಫೋಟೋಸ್ ನೋಡಿ ಪಡ್ಡೆಗಳು ಕ್ಯೂಟ್ ಎಂದು ಕಮೆಂಟ್ ಮಾಡುತ್ತಿದ್ದಾರೆ. ಆಶಿಕಾ ಸದ್ಯ ಗತವೈಭವ ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ, ಇದರ ಜೊತೆಗೆ ಫರ್ ದಿ ಫಸ್ಟ್ ಟೈಮ್ ಚಿರಂಜೀವಿ ಜೊತೆ ನಟಿಸುತ್ತಿದ್ದಾರೆ. ವಿಶ್ವಂಭರಂ ಚಿತ್ರಕ್ಕೆ ನಾಯಕಿಯಾಗಿ ಚುಟು ಚುಟು ಸುಂದರಿ ಅಭಿನಯಿಸುತ್ತಿದ್ದು, ಫ್ಯಾನ್ಸ್ ಈ ಕಾಂಬಿನೇಷನ್ ನೋಡಲು ಕಾತರದಿಂದ ಕಾಯುತ್ತಿದ್ದಾರೆ.
Author: Author AIN
ನವದೆಹಲಿ, ಮಾ.28: “ಎಐಸಿಸಿಯು ಪಕ್ಷದ ಜಿಲ್ಲಾ ಅಧ್ಯಕ್ಷರಿಗೆ ಶಕ್ತಿ ತುಂಬಿ ಸಂಘಟನೆಗೆ ಹೊಸ ಸ್ವರೂಪ ನೀಡಲು ಮುಂದಾಗಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ದೆಹಲಿಯಲ್ಲಿ ನಡೆಯುತ್ತಿರುವ ಜಿಲ್ಲಾ ಅಧ್ಯಕ್ಷರುಗಳ ಸಭೆ ವೇಳೆ ಕೆಪಿಸಿಸಿ ಅಧ್ಯಕ್ಷರೂ ಆದ ಡಿ.ಕೆ. ಶಿವಕುಮಾರ್ ಅವರು ಮಾಧ್ಯಮಗಳಿಗೆ ಶುಕ್ರವಾರ ಪ್ರತಿಕ್ರಿಯೆ ನೀಡಿದರು. “ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಸೇರಿ ಎಲ್ಲಾ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಸಭೆ ನಡೆಸಿದ್ದಾರೆ. ಪಕ್ಷವು ಸರ್ಕಾರಕ್ಕಿಂತ ದೊಡ್ಡದು, ಹೀಗಾಗಿ ಹೈಕಮಾಂಡ್ ನಾಯಕರು ಜಿಲ್ಲಾ ಅಧ್ಯಕ್ಷರಿಗೆ ವಿಶೇಷ ಕಾರ್ಯಕ್ರಮ ನೀಡಿದ್ದಾರೆ” ಎಂದರು. “ಈ ಸಭೆ ವೇಳೆ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಮಾಡುವ ಸಂದರ್ಭದಲ್ಲಿ ನಿಮ್ಮ ಅಭಿಪ್ರಾಯ ಪಡೆಯಲಾಯಿತೇ?, ನಿಮ್ಮನ್ನು ವಿಶ್ವಾಸಕ್ಕೆ ಪಡೆದರೆ ಎಂದು ಕೇಳಿದ್ದಾರೆ. ಜಿಲ್ಲಾ ಅಧ್ಯಕ್ಷರಿಗೆ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ” ಎಂದು ಹೇಳಿದರು. https://ainkannada.com/according-to-vastu-sleep-in-this-direction-you-will-get-unexpected-luck-in-life/ “ಸದಸ್ಯತ್ವ ಅಭಿಯಾನ ಹೇಗೆ ಮಾಡಬೇಕು, ಮತದಾರರ ಪಟ್ಟಿ ಪರಿಶೀಲನೆ, ಬಿಎಲ್ ಓಗಳ ನೇಮಕ,…
ನವದೆಹಲಿ: ಭಯೋತ್ಪಾದನೆಗೆ ಬೆಂಬಲ ನೀಡುವವಳು ಎಂಬ ಆರೋಪದ ಮೇಲೆ ವಿದ್ಯಾರ್ಥಿ ವೀಸಾ ರದ್ದುಗೊಂಡ ನಂತರ ಕೆನಡಾಕ್ಕೆ ಸ್ವಯಂ ಗಡೀಪಾರು ಮಾಡಲ್ಪಟ್ಟ ಅಮೆರಿಕದಲ್ಲಿರುವ 37 ವರ್ಷದ ಭಾರತೀಯ ಪಿಎಚ್‌ಡಿ ವಿದ್ಯಾರ್ಥಿನಿ ರಂಜಿನಿ ಶ್ರೀನಿವಾಸನ್ ಇಂದು ತನ್ನ ಕಷ್ಟದ ಬಗ್ಗೆ ಬಹಿರಂಗಪಡಿಸಿದ್ದಾರೆ. ತಾನು ಕಲಿತ ಕೊಲಂಬಿಯಾ ವಿಶ್ವವಿದ್ಯಾಲಯದಿಂದ ‘ದ್ರೋಹ’ ಅನುಭವಿಸುತ್ತಿದ್ದೇನೆ ಎಂದು ಅವರು ಹೇಳಿದರು. ಶ್ರೀಮತಿ ಶ್ರೀನಿವಾಸನ್ ಅವರು ಗಾಜಾದ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿ ಗೊತ್ತುಪಡಿಸಿದ ಭಯೋತ್ಪಾದಕ ಸಂಘಟನೆಯಾದ ಹಮಾಸ್‌ನ ಬೆಂಬಲಿಗ ಮತ್ತು ಸಹಾನುಭೂತಿ ಹೊಂದಿರುವ ಆರೋಪವನ್ನು ಎದುರಿಸುತ್ತಿದ್ದಾರೆ. ಅವರು ಸಾರ್ವಜನಿಕ ಯೋಜನೆಯಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆಯುತ್ತಿದ್ದರು ಮತ್ತು ಹಮಾಸ್‌ನೊಂದಿಗೆ ಪ್ರಚಾರ ಮತ್ತು ಹೊಂದಾಣಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬ ಆರೋಪದ ಮೇಲೆ ಟ್ರಂಪ್ ಆಡಳಿತವು ಅವರ ವಿದ್ಯಾರ್ಥಿ ವೀಸಾವನ್ನು ರದ್ದುಗೊಳಿಸಿದಾಗ ಅವರು ತಮ್ಮ ಪಿಎಚ್‌ಡಿ ಪೂರ್ಣಗೊಳಿಸುವ ಹಂತದಲ್ಲಿದ್ದರು. https://ainkannada.com/according-to-vastu-sleep-in-this-direction-you-will-get-unexpected-luck-in-life/ ಟ್ರಂಪ್ ಶ್ವೇತಭವನಕ್ಕೆ ಅಧಿಕಾರ ವಹಿಸಿಕೊಳ್ಳುವ ಕೇವಲ ಒಂದು ತಿಂಗಳ ಮೊದಲು ಡಿಸೆಂಬರ್‌ನಲ್ಲಿ ಅವರ ವಿದ್ಯಾರ್ಥಿ ವೀಸಾವನ್ನು ನವೀಕರಿಸಲಾಯಿತು. ಅವರು ಈಗ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ತಮ್ಮ ಮನವಿಯನ್ನು ಪರಿಗಣಿಸಿ…
ಹುಬ್ಬಳ್ಳಿ; ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನರಿಗೆ ಹಾಲು, ಮೊಸರಿನ ದರ ಏರಿಕೆ ದೊಡ್ಡ ಹೊರೆಯಾದಂತಾಗಿದೆ. ಇದರ ಬೆನ್ನಲ್ಲೇ ಇದೀಗ ವಿದ್ಯುತ್ ದರ ಹೆಚ್ಚಳವಾಗಿದೆ. ಈ ಬಗ್ಗೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ದರ ಏರಿಕೆ ಮಾಡಿದ್ದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗಷ್ಟೇ ಬೆಂಗಳೂರು ನಮ್ಮ ಮೆಟ್ರೋ ದರ ಏರಿಕೆ ಮಾಡಲಾಗಿತ್ತು. ಅದಕ್ಕೂ ಮುನ್ನ ಕೆಎಸ್ಆರ್ಟಿಸಿ ಬಸ್ ಪ್ರಯಾಣ ದರವೂ ಹೆಚ್ಚಿಸಲಾಗಿತ್ತು. ಹಾಗೇ ಮದ್ಯದ ದರ ಏರಿಕೆ. ಹೀಗೆ ಸಾಲು ಸಾಲು ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನತೆಗೆ ಹಾಲು ಹಾಗೂ ಮೋಸರು ದರ ಏರಿಕೆ ಬಿಸಿ ಮುಟ್ಟಿದ್ದು ವಾಣಿಜ್ಯ ನಗರಿ ಹುಬ್ಬಳ್ಳಿ ಜನತೆ ಸರಕಾರದ ವಿರುದ್ಧ ಕಿಡಿ ಕಾರತಾ ಇದ್ದಾರೆ. ಇದರ ಬೆನ್ನಲ್ಲೇ ಇದೀಗ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಕೂಡ ವಿದ್ಯುತ್ ಶಾಕ್ ಕೊಟ್ಟಿದ್ದು ಶಾಕ್ ಆಗಿದೆ .ಒಂದು ಕಡೆ ಒಂದೊಂದಾಗಿ ದರ ಏರಿಕೆ ಮಾಡಿ ಬಡವರ ,ಜನಸಾಮಾನ್ಯರ ಹಾಗೂ ಅನ್ನದಾತರನ್ನಬೀದಿಗೆ ತಳ್ಳಿದೆ.ಕೂಡಲೇ ಸರಕಾರ ಜನಸಾಮಾನ್ಯರ…
ತುಮಕೂರು : ತಮ್ಮ ಮೇಲೆ ಹನಿಟ್ರ್ಯಾಪ್ ಪ್ರಯತ್ನ ನಡೆದಿದೆ ಎಂಬ ಆರೋಪದ ಬಳಿಕ ತಮ್ಮ ಮೇಲೆ ಕೊಲೆಯತ್ನ ನಡೆದಿದೆ ಎಂಬ ಸ್ಫೋಟಕ ಮಾಹಿತಿ ಬಹಿರಂಗ ಪಡಿಸಿದ್ದ ಪರಿಷತ್ ಸದಸ್ಯರ ಎಲ್‌ಸಿ ರಾಜೇಂದ್ರ ಇದೀಗ ತುಮಕೂರು ಪೊಲೀಸರಿಗೆ ದೂರು ನೀಡಿದ್ದಾರೆ. ನಿನ್ನೆ ಡಿಐಜಿ ಭೇಟಿ ಮಾಡಿದ್ದ ಎಂಎಲ್ ಸಿ ರಾಜೇಂದ್ರ ಇಂದು ತುಮಕೂರು ಎಸ್ ಪಿ ಅಶೋಕ್ ವೆಂಕಟ್ ಅವರನ್ನು ಖುದ್ದು ಭೇಟಿಯಾಗಿ ತಮ್ಮ ಮೇಲೆ ಕೊಲೆಯತ್ನ ನಡೆದಿದೆ ಎಂಬ ದೂರು ನೀಡಿದ್ದಾರೆ. ತುಮಕೂರಿನ ಕ್ಯಾತ್ಸಂದದ ರಜತಾದ್ರಿ ನಿವಾಸದಲ್ಲಿ ಕಳೆದ ನವೆಂಬರ್ ತಿಂಗಳಲ್ಲಿ ಕೊಲೆಯತ್ನ ನಡೆದಿದೆ ಎಂದು ದೂರು ಸಲ್ಲಿಸಿದ್ದಾರೆ. https://ainkannada.com/honey-trap-case-supreme-court-dismisses-honey-trap-petition/ ಗುರುವಾರ ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ರಾಜ್ಯ ಪೊಲೀಸ್ ಪ್ರಧಾನ ಕಚೇರಿಯಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಹಾಗೂ ಕಾನೂನು ಮತ್ತು ಸುವ್ಯವಸ್ತೆಯ ಹೆಚ್ಚುವರಿ ಮಹಾನಿರ್ದೇಶಕ ಹಿತೇಂದ್ರ ಅವರನ್ನು ಭೇಟಿಯಾಗಿ ನನ್ನ ಮೇಲೆ ಕೊಲೆಯತ್ನ ನಡೆದಿದೆ ಎಂದು ದೂರು ನೀಡಿದ್ದರು.
ತಮಿಳು ಚಿತ್ರರಂಗ ಹಾಗೂ ಕಿರುತೆರೆಯಲ್ಲಿ ಹೆಸರು ಮಾಡಿರುವ ಖ್ಯಾತ ನಟಿ ಶ್ರುತಿ ನಾರಾಯಣ್ ಅವರದ್ದು ಎನ್ನಲಾಗುತ್ತಿರುವ ಖಾಸಗಿ ವಿಡಿಯೋ ಒಂದು ಲೀಕ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಎಬ್ಬಿಸಿತ್ತು. ಇನ್ನೂ ಈ ವಿಚಾರವಾಗಿ ನಟಿ ರಿಯಾಕ್ಟ್ ಮಾಡಿದ್ದಾರೆ. ನಿಮ್ಮ ತಾಯಿ, ತಂಗಿ ಕೂಡ ನನ್ನಂತೆಯೇ ಹೆಣ್ಣು ಅವರ ವಿಡಿಯೋ ನೋಡಿ ಖುಷಿಪಡಿ ಎಂದು ನಟಿ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. https://ainkannada.com/according-to-vastu-sleep-in-this-direction-you-will-get-unexpected-luck-in-life/ ಇದೀಗ ಹರಿದಾಡುತ್ತಿರುವ ವಿಚಾರ ನಿಮಗೆ ಜೋಕ್ ಅಥವಾ ತಮಾಷೆ ಆಗಿರಬಹುದು. ಆದರೆ ನನಗೆ ನನ್ನ ಕುಟುಂಬಕ್ಕೆ ಇದು ಕಷ್ಟಕರ ಸಂದರ್ಭವಾಗಿದೆ. ಅದರಲ್ಲೂ ನನಗೆ ಇದನ್ನು ನಿಭಾಯಿಸೋದು ಕಷ್ಟಕರವಾಗಿದೆ ಎಂದಿದ್ದಾರೆ. ನಾನು ಒಬ್ಬಳು ಹುಡುಗಿ, ನನಗೂ ಭಾವನೆಗಳಿವೆ. ನನ್ನ ಆಪ್ತರಿಗೂ ಭಾವನೆಗಳಿವೆ. ಅದಕ್ಕೆ ಬೆಲೆ ಕೊಡಿ. ನೀವೆಲ್ಲಾ ಇದನ್ನು ಮತ್ತಷ್ಟು ಕೆಟ್ಟದಾಗಿ ಮಾಡುತ್ತಿದ್ದೀರಿ ಎಂದು ನಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದಯವಿಟ್ಟು ಆ ವಿಡಿಯೋಗಳನ್ನು ಕಾಡ್ಗಿಚ್ಚಿನಂತೆ ಹಬ್ಬಿಸಬೇಡಿ. ಒಂದು ವೇಳೆ ನೀವು ಹಾಗೆಯೇ ಮಾಡಬೇಕು ಎಂದಿದ್ರೆ, ನಿಮ್ಮ ತಾಯಿ, ಗರ್ಲ್‌ಫ್ರೆಂಡ್, ಸಹೋದರಿ ವಿಡಿಯೋಗಳನ್ನು…
ಗಂಡ ಹೆಂಡತಿ ಜಗಳ ಅಂದರೆ ಉಂಡು ಮಲಗೋ ತನಕ ಅಂತಾರೆ ಆದರೆ ದರ್ಶನ್ ವಿಷಯದಲ್ಲಿ ತುಸು ಜಾಸ್ತಿನೇ ಅನ್ನಬಹುದು. ದರ್ಶನ್-ವಿಜಯಲಕ್ಷ್ಮೀ ಸಂಸಾರದ ವಿರಸ ಜೈಲು ತನಕ ಹೋಗಿ ಬಂದಿದೆ. ಇದೆಲ್ಲಾ ಮುಗಿದು ಹೋದ ಅಧ್ಯಾಯ. ಪತಿ ದಾಸನನ್ನು ಶತಪ್ರಯತ್ನ ಮಾಡಿ ವಿಜಯಲಕ್ಷ್ಮೀ ಜೈಲಿನಿಂದ ಹೊರತಂದು ಈಗ ಅಭಿಮಾನಿಗಳ ಕಣ್ಣಿಗೆ ಸಾಕ್ಷಾತ್ ಲಕ್ಷ್ಮಿಯಂತೆ ಗೋಚರಿಸುತ್ತಿದ್ದಾರೆ. ಫ್ಯಾನ್ಸ್ ಗೆ ಅತ್ತಿಗೆ ಲಕ್ಷ್ಮಿಯಾದ್ರೆ ದರ್ಶನ್ ಅವರಿಗೆ ಪತ್ನಿ ಮುದ್ದು ರಾಕ್ಷಸಿಯಂತೆ. ಹೀಗಂತ ನಾವು ಹೇಳ್ತಿಲ್ಲ. ಸ್ವತಃ ದರ್ಶನ್ ಪತ್ನಿಯನ್ನು ಮುದ್ದು ರಾಕ್ಷಸಿ ಅಂತಾ ಕರೆದಿದ್ದಾರೆ. ದಚ್ಚು ಆತ್ಮೀಯ ಧನ್ವೀರ್ ನಟನೆಯ ವಾಮನ ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿರುವ ದರ್ಶನ್, ‘ನಾನು ಧನ್ವೀರ್ ಅವರನ್ನು ಬೇರೆ ಬೇರೆ ರೀತಿ ನೋಡಿದ್ದೇನೆ. ‘ಬಜಾರ್’ ಸಿನಿಮಾದಲ್ಲಿ ಒಂದು ರೀತಿ ನೋಡಿದೆ, ‘ಬೈಟು ಲವ್’ ಚಿತ್ರದಲ್ಲಿ ಬೇರೆ ರೀತಿ ನೋಡಿದೆ. ಅವರ ‘ಕೈವ’ ಸಿನಿಮಾ ನನಗೆ ತುಂಬ ಇಷ್ಟವಾಗಿತ್ತು. ಈಗ ವಾಮನ ನೋಡುತ್ತೇವೆ. ಈ ನಾಲ್ಕು ಸಿನಿಮಾಗಳಲ್ಲಿ ಖುಷಿ ವಿಷಯ ಏನೆಂದರೆ…
ಎಲ್ಲಾ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಪಂದ್ಯವೆಂದರೆ ಆರ್‌ಸಿಬಿ ವರ್ಸಸ್ ಸಿಎಸ್‌ಕೆ. ಐಪಿಎಲ್ ನಲ್ಲಿ ಈ ಪಂದ್ಯಕ್ಕೆ ಸಾಕಷ್ಟು ಕ್ರೇಜ್ ಇದೆ. ಏಕೆಂದರೆ.. ಒಂದು ಕಡೆ ವಿರಾಟ್ ಕೊಹ್ಲಿ ಮತ್ತು ಇನ್ನೊಂದು ಕಡೆ ಮಹೇಂದ್ರ ಸಿಂಗ್ ಧೋನಿ. ಅದಕ್ಕಾಗಿಯೇ ಈ ಪಂದ್ಯಕ್ಕೆ ಬೇಡಿಕೆ ಹೆಚ್ಚಿದೆ. ಐಪಿಎಲ್ 2025 ರ ಭಾಗವಾಗಿ ಈ ಎರಡೂ ತಂಡಗಳು ಶುಕ್ರವಾರ ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ. ಚೆಪಾಕ್ ಪಿಚ್ ಸ್ಪಿನ್ ಬೌಲಿಂಗ್ ಅನ್ನು ನೆನಪಿಸುತ್ತದೆ. ಇಲ್ಲಿ ಸ್ಪಿನ್ನರ್‌ಗಳು ಪ್ರಮುಖರು.. ಆ ಬಲದಿಂದ ಸಿಎಸ್‌ಕೆ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿತು. ಈಗ ಅವರು ಸ್ಪಿನ್ ಮೂಲಕವೂ ಆರ್‌ಸಿಬಿಗೆ ಹಾನಿ ಮಾಡುವ ಭರವಸೆಯಲ್ಲಿದ್ದಾರೆ. ಇದಲ್ಲದೆ, ಆರ್‌ಸಿಬಿಯ ಪ್ರಮುಖ ಶಕ್ತಿ ವಿರಾಟ್ ಕೊಹ್ಲಿ ಸ್ಪಿನ್ ಬೌಲಿಂಗ್ ಅನ್ನು ಸರಿಯಾಗಿ ಆಡಲು ಸಾಧ್ಯವಾಗುತ್ತಿಲ್ಲ ಎಂಬ ವಾದವಿದೆ. ಆ ದೌರ್ಬಲ್ಯದ ಮೇಲೆ ಕೇಂದ್ರೀಕರಿಸುವ ಮೂಲಕ ಸಿಎಸ್‌ಕೆ ಆರ್‌ಸಿಬಿಯನ್ನು ಸೋಲಿಸಲು ಯೋಜಿಸುತ್ತಿದೆ. https://ainkannada.com/according-to-vastu-sleep-in-this-direction-you-will-get-unexpected-luck-in-life/ ಆದಾಗ್ಯೂ, ಸಿಎಸ್‌ಕೆ ಪಂದ್ಯಕ್ಕಾಗಿ ವಿರಾಟ್ ಕೊಹ್ಲಿ ಮಾಸ್ಟರ್…
ಬೆಂಗಳೂರು: ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇರೆಗೆ ಬಿಜೆಪಿಯಿಂದ ರೆಬೆಲ್ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆ ಮಾಡಲಾಗಿದೆ. ಇದು ಯತ್ನಾಳ್ ಬಣದ ನಾಯಕರ ಆತಂಕ ಹೆಚ್ಚಿಸಿದೆ. ಈ ಹಿನ್ನೆಲೆಯಲ್ಲಿ ಮುಂದಿನ ನಡೆ ಏನು ? ಹೈಕಮಾಂಡ್ ನಿರ್ಧಾರಕ್ಕೆ ಕೌಂಟರ್ ಕೊಡಬೇಕಾ ? ಹೊಸ ಪಕ್ಷ ರಚನೆ ಮಾಡಬೇಕಾ ? ಉಚ್ಛಾಟನೆ ಆದೇಶ ಮರು ಪರಿಶೀಲನೆ ನಡೆಸುವಂತೆ ಹೈಕಮಾಂಡ್ ಶಿಸ್ತು ಸಮಿತಿಗೆ ಮರುಪರಿಶೀಲನಾ ಅರ್ಜಿ ಬರೆಯಬೇಕಾ ? ನಮ್ಮ ಮುಂದಿನ ನಡೆ ಏನು ಅನ್ನೋದರ ಬಗ್ಗೆ ಚರ್ಚಿಸಲು ಯತ್ನಾಳ್ ಟೀಂ ಸಭೆ ನಡೆಸ್ತಿದೆ. ಬೆಂಗಳೂರಿನ ಯುಬಿಸಿಟಿಯಲ್ಲಿರುವ ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ್ ನಿವಾಸದಲ್ಲಿ ಯತ್ನಾಳ್ ಟೀಮ್ ಸಭೆ ನಡೆದಿದೆ. ಜಿ ಎಂ ಸಿದ್ದೇಶ್ವರ್ ಮನೆಯಲ್ಲಿ ನಡೆಯುತ್ತಿರುವ ಸಭೆಯಲ್ಲಿ ರೆಬೆಲ್ಸ್ ನಾಯಕರಾದ ಬಸನಗೌಡಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ, ಬಿಪಿ ಹರೀಶ್ ಪಾಲ್ಗೊಂಡಿದ್ದಾರೆ. ಬಿಜೆಪಿಯಿಂದ ಉಚ್ಛಾಟನೆ ಬಳಿಕ ಬಸನಗೌಡ ಪಾಟೀಲ್ ಯತ್ನಾಳ್ ಎಲ್ಲೂ ಮಾಧ್ಯಮಗಳ ಮುಂದೆ ಮಾತನಾಡಿಲ್ಲ. ಹೀಗಾಗಿ ಯತ್ನಾಳ್ ಬಣದ ನಿರ್ಧಾರವೇನು…
ಒಂದು ಸುಂದರವಾದ ಮನೆಯ ಅಂದವನ್ನು ಅದರ ಆವರಣದಲ್ಲಿ ಹಚ್ಚ ಹಸಿರಿನ ಉದ್ಯಾನವನವು ಹೆಚ್ಚಿಸುತ್ತದೆ. ಪ್ರತಿಯೊಬ್ಬರೂ ತಮ್ಮ ಮನೆಯ ಮುಂದೆ ವಿವಿಧ ರೀತಿಯ ಹೂವಿನ ಗಿಡಗಳನ್ನು ಹೊಂದಿರುವ ಉದ್ಯಾನವನ್ನು ಹೊಂದಲು ಬಯಸುತ್ತಾರೆ. ಆದಾಗ್ಯೂ, ಈ ಹೂಬಿಡುವ ಸಸ್ಯಗಳನ್ನು ಬೆಳೆಸುವುದು ಕೂಡ ಒಂದು ಕಲೆ. ವಿಶೇಷವಾಗಿ ಈ ಬೇಸಿಗೆಯಲ್ಲಿ ತೋಟದಲ್ಲಿ ಸಸ್ಯಗಳನ್ನು ನಿರ್ವಹಿಸುವುದು ಸವಾಲಿನ ಕೆಲಸ. ಗಿಡಗಳಿಗೆ ಒಂದು ದಿನ ನೀರು ಹಾಕದಿದ್ದರೆ ಅಥವಾ ಸರಿಯಾದ ಕಾಳಜಿ ವಹಿಸದಿದ್ದರೆ ಗಿಡ ಒಣಗಿ ಹೋಗುತ್ತದೆ. ಆದ್ದರಿಂದ, ಬೇಸಿಗೆಯಲ್ಲಿ ಹೂವಿನ ತೋಟಗಳನ್ನು ಸಾಕಷ್ಟು ಕಾಳಜಿಯಿಂದ ನೋಡಿಕೊಳ್ಳಬೇಕು. ಆ ಸಲಹೆಗಳು.. https://ainkannada.com/according-to-vastu-sleep-in-this-direction-you-will-get-unexpected-luck-in-life/ ಸಾಕಷ್ಟು ನೀರು ಹಾಕಿರಿ: ಈ ಬೇಸಿಗೆಯಲ್ಲಿ ಸೂರ್ಯನ ಕಿರಣಗಳು ಪ್ರಖರವಾಗಿರುತ್ತವೆ. ಈ ಅವಧಿಯಲ್ಲಿ ಸಸ್ಯಗಳು ಒಣಗಲು ಅಥವಾ ಸಾಯಲು ಮುಖ್ಯ ಕಾರಣವೆಂದರೆ ಅವುಗಳಿಗೆ ಸಾಕಷ್ಟು ನೀರು ಹಾಕದಿರುವುದು. ಆದ್ದರಿಂದ ಸಸ್ಯಗಳಿಗೆ ನಿಯಮಿತವಾಗಿ ನೀರು ಹಾಕಿ. ಸೂರ್ಯನ ಶಾಖವು ಮಣ್ಣಿನಲ್ಲಿರುವ ತೇವಾಂಶವನ್ನು ಆವಿಯಾಗಿಸುತ್ತಿದೆ. ಆದ್ದರಿಂದ, ಬೆಳಿಗ್ಗೆ ಸಸ್ಯಗಳಿಗೆ ನೀರುಣಿಸುವುದು ಬಹಳ ಮುಖ್ಯ. ಆದ್ದರಿಂದ, ದಿನಕ್ಕೆ ಎರಡು ಬಾರಿ…