ಸಮಂತಾ ಸಿನಿಮಾ ಕೆಲಸಗಳಿಗೆ ಬ್ರೇಕ್ ಹಾಕಿ ಆಸ್ಟ್ರೇಲಿಯಾದಲ್ಲಿ ಪ್ರತ್ಯಕ್ಷರಾಗಿದ್ದಾರೆ. ಆಸ್ಟ್ರೇಲಿಯಾದ ಸುಂದರ ಜಾಗದಲ್ಲಿ ಜಾಲಿ ಮಾಡಿರುವ ಸ್ಯಾಮ್ ಅಲ್ಲಿಯು ಫಿಟ್ನೆಸ್ ಮಂತ್ರ ಮರೆತಿಲ್ಲ. ಸಿಡ್ನಿ ಸೌಂದರ್ಯಕ್ಕೆ ಸೋತ ಸಮಂತಾ ವರ್ಕೌಟ್, ಬಾಡಿ ಮಸಾಜ್ ಮೊರೆ ಹೋಗಿದ್ದಾರೆ. ಆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸಮಂತಾ ಸಮಯ ಸಿಕ್ಕಾಗಲೆಲ್ಲಾ ಒಂಟಿಯಾಗಿಯೇ ಟ್ರಿಪ್ ಗೆ ಹೋಗ್ತಾರೆ. ಸಮಯ ಕಳೆಯುತ್ತಾರೆ. ಅಂತೆಯೇ ಈ ಬಾರಿ ಸಮಂತಾ ಬೇಬಿ ಆಸ್ಟ್ರೇಲಿಯಾದಲ್ಲಿ ಏಕಾಂತವನ್ನು ಏಂಜಾಯ್ ಮಾಡುತ್ತಿದ್ದಾರೆ. ನಾಗಚೈತನ್ಯರಿಂದ ದೂರವಾದ್ಮೇಲೆ ಹೊಸ ದಾರಿ ಕಂಡುಕೊಂಡಿರುವ ಸಮಂತಾ ಬಾಲಿವುಡ್ ಸಿನಿಮಾರಂಗದಲ್ಲಿಯೂ ಬ್ಯುಸಿಯಾಗಿದ್ದಾರೆ. ಚಿತ್ರ ನಿರ್ಮಾಣಕ್ಕೂ ಸಮಂತಾ ಇಳಿದಿದ್ದು, ಈ ನಡುವೆಯೇ ಅವರು ನಿರ್ಮಾಪಕ ರಾಜ್ ನಿಡಿಮೋರು ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಇದೆ. ಇದಕ್ಕೆ ಇಲ್ಲಿವರೆಗೂ ಸಮಂತಾ ಪ್ರತಿಕ್ರಿಯೆ ನೀಡಿಲ್ಲ. ಇದು ಗಾಳಿ ಸುದ್ದಿಯೋ ಅನ್ನೋದನ್ನು ನಟಿ ಖಚಿತ ಮಾಡಿಲ್ಲ.
Author: Author AIN
ಚಿತ್ರದುರ್ಗ : ಯುಗಾದಿ ಹಬ್ಬಕ್ಕೆ ಊರಿಗೆ ಬರುತ್ತಿದ್ದ ಕೂಲಿ ಕಾರ್ಮಿಕರು ಇದೀಗ ಮಸಣ ಸೇರಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ಹೆಗ್ಗೆರೆ ಗೇಟ್ ಬಳಿ ಭೀಕರ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 9 ಮಂದಿಗೆ ಗಂಭೀರ ಗಾಯಗಳಾಗಿವೆ. ಮೃತರನ್ನು ಕುಮಾರನಾಯ್ಕ್, ಶಂಕರಿಬಾಯಿ ಮತ್ತು ಶ್ವೇತಾ ಎಂದು ಗುರುತಿಸಲಾಗಿದೆ. ಗಾಯಗೊಂಡ 9 ಜನರ ಹೆಸರು ತಿಳಿದು ಬರಬೇಕಿದೆ. ಮೃತರು ಚಳ್ಳಕೆರೆ ತಾಲೂಕಿನ ತಳಕು ಮೂಲದರಾಗಿದ್ದು, ಬೆಂಗಳೂರಿಗೆ ಕೂಲಿ ಕೆಲಸಕ್ಕೆ ತೆರಳಿದ್ದರು. ಯುಗಾದಿ ಹಬ್ಬಕ್ಕೆ ವಾಪಸ್ ಊರಿಗೆ ಬರುತ್ತಿದ್ದ ವೇಳೆ ಅವಘಡ ನಡೆದಿದೆ. https://ainkannada.com/street-vendors-fight-over-shop-one-of-them-gets-cut-on-the-head/ ಟಿಟಿ ವಾಹನ ಬೆಂಗಳೂರಿನಿಂದ ಚಳ್ಳಕೆರೆ ತಳುಕಿಗೆ ಬರುತ್ತಿದ್ದಾಗ, ಟಿಪ್ಪರ್ ಲಾರಿ ಅಡ್ಡ ಬಂದಿದ್ದು, ಅಪಘಾತ ತಪ್ಪಿಸಲು ಹೋಗಿ ಮತ್ತೊಂದು ಗಾಡಿಗೆ ಡಿಕ್ಕಿ ಹೊಡೆದಿದ್ದಾನೆ. ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಮಲಯಾಳಂನ ಸ್ಟಾರ್ ಹೀರೋಗಳಾದ ಮೋಹನ್ ಲಾಲ್ ಮತ್ತು ಪೃಥ್ವಿರಾಜ್ ಸುಕುಮಾರನ್ ನಟಿಸಿದ ಇತ್ತೀಚಿನ ಚಿತ್ರ ಎಲ್ 2: ಎಂಪೂರನ್. ಮಾರ್ಚ್ 27 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಈ ಸಂದರ್ಭದಲ್ಲಿ, ಈ ಚಿತ್ರದ HD ಮುದ್ರಣ ಆನ್‌ಲೈನ್‌ನಲ್ಲಿ ಪ್ರಸಾರವಾಗುವುದನ್ನು ನೋಡಿ ಅಭಿಮಾನಿಗಳು ಮತ್ತು ಚಲನಚಿತ್ರ ಪ್ರೇಕ್ಷಕರು ಆಘಾತಕ್ಕೊಳಗಾದರು. ಈ ಮುದ್ರಣವನ್ನು ಚಿತ್ರಮಂದಿರದಿಂದ ನಕಲು ಮಾಡಲಾಗಿಲ್ಲ ಎಂಬ ಅನುಮಾನಗಳಿವೆ. ಪ್ರಸ್ತುತ ಚಿತ್ರಮಂದಿರಗಳಲ್ಲಿ ಸಕಾರಾತ್ಮಕ ಪ್ರತಿಕ್ರಿಯೆ ಪಡೆಯುತ್ತಿರುವ ಈ ಚಿತ್ರದ ಮಲಯಾಳಂ, ಹಿಂದಿ ಮತ್ತು ತಮಿಳು ಆವೃತ್ತಿಗಳನ್ನು ಆನ್‌ಲೈನ್‌ನಲ್ಲಿ ಸ್ಟ್ರೀಮ್ ಮಾಡಲಾಗುತ್ತಿದೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ, ಟೆಲಿಗ್ರಾಮ್ ಮತ್ತು ಇತರ ವೇದಿಕೆಗಳಲ್ಲಿ ಮುದ್ರಣಗಳು ಲಭ್ಯವಿವೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ಚಲನಚಿತ್ರಗಳ ನಕಲಿ ಆವೃತ್ತಿಗಳು ಹೆಚ್ಚಾಗಿ ಆನ್‌ಲೈನ್‌ನಲ್ಲಿ ಪ್ರಸಾರವಾಗುತ್ತವೆ. https://ainkannada.com/do-this-to-get-the-blessings-of-goddess-lakshmi-dont-forget-to-light-lamps-in-these-4-places/ ಆದರೆ, ಆನ್‌ಲೈನ್‌ನಲ್ಲಿ ವೈರಲ್ ಆಗುವ ಚಲನಚಿತ್ರಗಳ ಗುಣಮಟ್ಟ ಕಳಪೆಯಾಗಿದೆ. ಈ ಆವೃತ್ತಿಗಳು ಸಾಮಾನ್ಯವಾಗಿ ಕಳಪೆ ದೃಶ್ಯಗಳು ಮತ್ತು ಧ್ವನಿಯನ್ನು ಹೊಂದಿರುತ್ತವೆ. ಎಂಪುರಾನ್ ಚಿತ್ರ ಎಂದು ಪ್ರಸಾರವಾಗುತ್ತಿರುವ ನಕಲಿ ಆವೃತ್ತಿಯು 1080…
ಕಲಬುರಗಿ: ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಎಚ್ಚರ ವಹಿಸಬೇಕೆಂದು ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಎಲ್ಲಾ ತಾಲೂಕಿನ ಪಿಡಿಓಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಸೇಡಂ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ತಾಲೂಕು ಮಟ್ಟದ `ಟಾಸ್ಕ್ ಪೋರ್ಸ್’ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವ ಶರಣಪ್ರಕಾಶ್ ಪಾಟೀಲ್ , ಪಂಚಾಯತ್ ಮಟ್ಟದಲ್ಲಿ ಪಿಡಿಓಗಳು ಬೋರ್‌ವೆಲ್‌ಗಳು ಹಾಗೂ ಜಲ ಮೂಲಗಳನ್ನು ಪರೀಕ್ಷಿಸಿ ಕ್ರಮಕೈಗೊಂಡು ವರದಿ ಸಲ್ಲಿಸಬೇಕು. ಹೆಚ್ಚು ನೀರಿನ ಸಮಸ್ಯೆ ಇರುವ ಗ್ರಾಮಗಳಲ್ಲಿ ಶಾಶ್ವತ ಬೋರ್‌ವೆಲ್ ಕೊರೆಸಿ, ಇತರೆ ಬೋರ್‌ವೆಲ್‌ಗಳನ್ನು ಫ್ಲಶಿಂಗ್ ಮಾಡಿಸಿ ಜನರ ಅನುಕೂಲಕ್ಕೆ ತಕ್ಕಂತೆ ನೀರು ಪೂರೈಕೆ ಮಾಡಬೇಕು ಎಂದು ತಿಳಿಸಿದರು. https://ainkannada.com/former-mlc-nagaraj-chhabbi-unhappy-with-minister-lad/ ಪಿಡಿಓಗಳು ಗ್ರಾಮಗಳಿಗೆ ಭೇಟಿ ನೀಡಿ ಒಂದು ವಾರದಲ್ಲಿ ನನಗೆ ವರದಿ ಸಲ್ಲಿಸಬೇಕು. ಹೆಚ್ಚು ಬಿಸಿಲಿದೆ ಎಂದು ಮನೆಯಲ್ಲಿಯೇ ಕುಳಿತು ಮೊಬೈಲ್‌ನಲ್ಲಿ ವರದಿ ಸಲ್ಲಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಬೆಂಗಳೂರು: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿದ ಬಳಿಕ ದೆಹಲಿಯಿಂದ ಬೆಂಗಳೂರಿಗೆ ಬಂದಿದ್ದಾರೆ. ಇಂದು ಅಮವಾಸ್ಯೆಯ ಪ್ರಯುಕ್ತ ಅವರು ನಗರದ ಶನಿಮಹಾತ್ಮ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ದೇವಸ್ಥಾನದಲ್ಲಿ ನಡೆದ ಪೂಜಾ ಕೈಂಕರ್ಯಗಳಲ್ಲಿ ಭಾಗಿಯಾಗಿದ್ದಾರೆ. https://ainkannada.com/do-this-to-get-the-blessings-of-goddess-lakshmi-dont-forget-to-light-lamps-in-these-4-places/ ಸದ್ಯ ನಿನ್ನೆ ಅವರು ಮಾಜಿ ಸಂಸದ ಮತ್ತು ಮಾಜಿ ಕೇಂದ್ರ ಸಚಿವ ಜಿಎಂ ಸಿದ್ದೇಶ್ವರ ಮನೆಗೆ ಭೇಟಿ ನೀಡಿದ್ದರು. ಯತ್ನಾಳ್ ವಿರುದ್ಧ ಹೈಕಮಾಂಡ್ ತೆಗೆದುಕೊಂಡಿರುವ ಕ್ರಮದ ಬಗ್ಗೆ ಪುನರ್ ಪರಿಶೀಲನೆ ಮಾಡುವಂತೆ ಪತ್ರದ ಮೂಲಕ ಮನವಿ ಮಾಡಲು ನಿರ್ಧಾರ ಮಾಡಿದ್ದಾರೆ ಎಂದು ಹೇಳಲಾಗಿದೆ. ಇನ್ನು ಮುಂದಿನ ನಡೆಯ ಬಗ್ಗೆ ಈ ಸಭೆಯಲ್ಲಿ ಚರ್ಚೆ ನಡೆಸುವ ಸಾಧ್ಯತೆ ಇದೆ.
ಧಾರವಾಡ : ಸಚಿವ ಸಂತೋಷ್ ಲಾಡ್ ವಿರುದ್ಧ ಮಾಜಿ ಎಂಎಲ್‌ಸಿ ನಾಗರಾಜ ಛಬ್ಬಿ ಅಸಮಾಧಾನ ವ್ಯಕ್ತಪಿಡಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಣಮಟ್ಟದ ವಿದ್ಯುತ್ ಇಲ್ಲದೇ ಕ್ಷೇತ್ರದ ಜನರು ಸಂಕಷ್ಟದಲ್ಲಿದ್ದಾರೆ. ಹೆಸ್ಕಾಂನವರು ಟಿಸಿ ಕೇಳಿದರೆ ಮೂರು ತಿಂಗಳು ಕಾಯುವ ಶಿಕ್ಷೆ ಕೊಡುತ್ತಾರೆ. ಇಂತಹ ಯಾವುದೇ ಸಮಸ್ಯೆಗಳು ಸಚಿವ ಸಂತೋಷ್ ಲಾಡ್ ಅವರಿಗೆ ಕಾಣುತ್ತಿಲ್ಲ. ಇತ್ತೀಚೆಗೆ ಅವರು ಕ್ಷೇತ್ರಕ್ಕೆ ಬರುವುದನ್ನೇ ಮರೆತಿದ್ದಾರೆ ಎಂದು ದೂರಿದರು. https://ainkannada.com/street-vendors-fight-over-shop-one-of-them-gets-cut-on-the-head/ ಪ್ರಧಾನಿ ಮೋದಿ ಅವರನ್ನು ಟೀಕಿಸಿದರೆ ದೊಡ್ಡವರಾಗುತ್ತೇವೆ ಎಂದು ಲಾಡ್ ತಿಳಿದಿದ್ದಾರೆ. ಆದರೆ ಅವರು ಕ್ಷೇತ್ರದಲ್ಲಿ ಒಂದೇ ಒಂದು ರಸ್ತೆ ಮಾಡಿಸಿಲ್ಲ. ಕಲಘಟಗಿಗೆ ಈ ಹಿಂದೆ ಮೂರು ಸಬ್ ಡಿವಿಜನ್‌ಗಳನ್ನು ಹಿಂದಿನ ಶಾಸಕ ನಿಂಬಣ್ಣವರ ಮಂಜೂರು ಮಾಡಿಸಿದ್ದರು. ಕಾಂಗ್ರೆಸ್‌ನವರು ಕ್ಷೇತ್ರದ ಜನರಿಗೆ ಸುಳ್ಳು ಹೇಳುತ್ತಿದ್ದಾರೆ ಎಂದರು. ಕ್ಷೇತ್ರದ ಜನರ ಸಮಸ್ಯೆ ಬಗೆ ಹರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಛಬ್ಬಿ ಎಚ್ಚರಿಸಿದರು.
ಪಿ.ಸಿ.ಡಿ 2 ಫಿಲಂ ಫ್ಯಾಕ್ಟರಿ ಲಾಂಛನದಲ್ಲಿ ಗಾಯತ್ರಿ ಎಂ ನಿರ್ಮಿಸಿರುವ, ಎಸ್.ಭಗತ್ ರಾಜ್ ನಿರ್ದೇಶನದ ಹಾಗೂ ಪ್ರವೀಣ್ ನಾಯಕನಾಗಿ ನಟಿಸಿರುವ “ಠಾಣೆ” ಚಿತ್ರಕ್ಕಾಗಿ ಖ್ಯಾತ ಗಾಯಕಿ ಮಜಾಟಾಕೀಸ್ ಖ್ಯಾತಿಯ ರೆಮೊ ಅವರು ಬರೆದಿರುವ “ಬಾಳಿನಲ್ಲಿ ಭರವಸೆಯ ಬೆಳಕು” ಎಂಬ ಅರ್ಥಗರ್ಭಿತ ಹಾಡು ಇತ್ತೀಚೆಗೆ ಬಿಡುಗಡೆಯಾಗಿ ಟ್ರೆಂಡಿಂಗ್ ನಲ್ಲಿದೆ. ಮಾನಸ ಹೊಳ್ಳ ಸಂಗೀತ ಸಂಯೋಜಿಸಿ, ಜ್ಞಾನ, ಅನುಷ್ಕ, ಜನ್ಯ ಆದರ್ಶ್ ಹಾಗೂ ಮೌಲ್ಯ ಅಚಿಂತ್ಯ ಎಂಬ ಬಾಲ ಪ್ರತಿಭೆಗಳು ಹಾಡಿರುವ ಈ ಸುಂದರ ಹಾಡಿಗೆ ಕನ್ನಡ ಕಲಾಭಿಮಾನಿಗಳು ಫಿದಾ ಆಗಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ನಾರಾಯಣ ಗೌಡ ಅವರಿಗೂ ಸಹ ಈ ಹಾಡು ಅಚ್ಚುಮೆಚ್ಚಂತೆ. ಬಾಲ ಪ್ರತಿಭೆಗಳ ಗಾಯನದಲ್ಲಿ ಮೂಡಿಬಂದಿರುವ ಈ ಹಾಡನ್ನು ಮೆಚ್ಚಿಕೊಂಡ ನಾರಾಯಣ ಗೌಡ ಅವರು ಚಿತ್ರತಂಡದವರನ್ನು ತಮ್ಮ ಕಚೇರಿಗೆ ಕರೆಸಿಕೊಂಡು ಅಭಿನಂದಿಸಿದರು. ಬಾಲ ಪ್ರತಿಭೆಗಳು ಹಾಡಿರುವ “ಠಾಣೆ” ಚಿತ್ರದ ಅರ್ಥಗರ್ಭಿತ ಈ ಹಾಡನ್ನು ನಾನು ದಿನಕ್ಕೆ ನಾಲ್ಕೈದು ಬಾರಿ ಕೇಳುತ್ತಲೇ ಇರುತ್ತೇನೆ. ಅಷ್ಟು ಇಷ್ಟವಾಗಿದೆ ನನಗೆ ಈ…
ಭಾರತದ ನೆರೆಯ ರಾಷ್ಟ್ರವಾದ ಮ್ಯಾನ್ಮಾರ್‌ನಲ್ಲಿ ಶುಕ್ರವಾರ ಸಂಭವಿಸಿದ ಸರಣಿ ಭೂಕಂಪಗಳು ಸಾವುನೋವುಗಳಿಗೆ ಕಾರಣವಾಯಿತು. ನೂರಾರು ಕಟ್ಟಡಗಳು ಕುಸಿದವು. ಅವಶೇಷಗಳ ಕೆಳಗೆ ಜನರು ಪಕ್ಷಿಗಳಂತೆ ಪುಡಿಪುಡಿಯಾದರು. ಏತನ್ಮಧ್ಯೆ, ಶುಕ್ರವಾರ ರಾತ್ರಿ 11:56 ರ ಸುಮಾರಿಗೆ ಮ್ಯಾನ್ಮಾರ್‌ನಲ್ಲಿ ಮತ್ತೊಂದು ಭೂಕಂಪ ಸಂಭವಿಸಿದೆ. ಇನ್ನೂ ಮಾಹಿತಿ ಪ್ರಕಾರ ಸಾವಿನ ಸಂಖ್ಯೆ 694ಕ್ಕೆ ಏರಿಕೆಯಾಗಿದ್ದು, 1,600ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಅವಶೇಷಗಳ ಅಡಿ ಇನ್ನೂ ನೂರಾರು ಮಂದಿ ಸಿಲುಕಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಧಾವಿಸಿರುವ ರಕ್ಷಣಾ ತಂಡಗಳು ಶೋಧ ಕಾರ್ಯ ಮುಂದುವರಿಸಿವೆ. ರಸ್ತೆಗಳಲ್ಲೇ ಚಿಕಿತ್ಸೆ: ಮ್ಯಾನ್ಮಾರ್‌ನಲ್ಲಿ ಉಂಟಾದ ಭೀಕರ ಭೂಕಂಪ ಸಾಕಷ್ಟು ಸಾವು-ನೋವು ಉಂಟುಮಾಡಿದೆ. ಒಂದೆಡೆ ಕ್ಷಣಕ್ಷಣಕ್ಕೂ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಈವರೆಗೆ 200ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಇನ್ನೂ ನೂರಾರು ಮಂದಿ ಅವಶೇಷಗಳ ಅಡಿ ಸಿಲುಕಿರುವ ಶಂಕೆಯಿದೆ. ಮತ್ತೊಂದೆಡೆ ಜೀವ ಉಳಿಸಬೇಕಾದ ಆಸ್ಪತ್ರೆಗಳೇ ಕಣ್ಣೀರಿನ ಕಥೆ ಹೇಳುತ್ತಿವೆ. ಸಾವಿರಾರು ಹಾಸಿಗೆ ಸೌಲಭ್ಯ ಹೊಂದಿರುವ ಆಸ್ಪತ್ರೆಗಳು ನಾಮಾವಶೇಷವಾಗಿದ್ದು, ನೊಂದ ಸಂತ್ರಸ್ತರಿಗೆ ರಸ್ತೆಯಲ್ಲೇ ಚಿಕಿತ್ಸೆ…
2019 ರಲ್ಲಿ, ಕೇಂದ್ರ ಸರ್ಕಾರವು ರೈತರಿಗೆ ಸಹಾಯ ಮಾಡಲು PM-KISAN ಯೋಜನೆಯನ್ನು ಪ್ರಾರಂಭಿಸಿತು. ಆದರೆ, ರೈತರಿಗೆ ಸಹಾಯ ಮಾಡುವ ಉದ್ದೇಶದಿಂದ ಪ್ರಾರಂಭಿಸಲಾದ ಈ ಯೋಜನೆಯ ಲಾಭವನ್ನು ಅನೇಕ ಅನರ್ಹ ಜನರು ಪಡೆದುಕೊಂಡಿದ್ದಾರೆ. ಆದಾಗ್ಯೂ, ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಇತ್ತೀಚೆಗೆ ಸಂಸತ್ತಿನಲ್ಲಿ ಮಾತನಾಡಿ, ಪಿಎಂ-ಕಿಸಾನ್ ಅಡಿಯಲ್ಲಿ ಸರ್ಕಾರ ಅನರ್ಹ ರೈತರಿಂದ 416 ಕೋಟಿ ರೂ.ಗಳನ್ನು ಸಂಗ್ರಹಿಸಿದೆ ಎಂದು ಹೇಳಿದರು. ಈ ಯೋಜನೆ ಆರಂಭವಾದಾಗಿನಿಂದ ಕೇಂದ್ರ ಸರ್ಕಾರವು ರೂ.ಗೂ ಹೆಚ್ಚು ಹಣವನ್ನು ವಿತರಿಸಿದೆ ಎಂದು ಅವರು ಸ್ಪಷ್ಟಪಡಿಸಿದರು. ರೈತರಿಗೆ 19 ಕಂತುಗಳಲ್ಲಿ 3.68 ಲಕ್ಷ ಕೋಟಿ ರೂ. https://ainkannada.com/do-this-to-get-the-blessings-of-goddess-lakshmi-dont-forget-to-light-lamps-in-these-4-places/ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿಯಲ್ಲಿ, 1000 ಕೋಟಿ ರೂ.ಗಳ ಆರ್ಥಿಕ ಪ್ರಯೋಜನವನ್ನು ಪಡೆಯಲಾಗುವುದು ಎಂದು ಕೇಂದ್ರ ಸಚಿವರು ಹೇಳಿದರು. ಅರ್ಹ ಭೂಹೀನ ರೈತರ ಆಧಾರ್-ಸಂಬಂಧಿತ ಬ್ಯಾಂಕ್ ಖಾತೆಗಳಿಗೆ ವರ್ಷಕ್ಕೆ 6,000 ರೂಪಾಯಿಗಳನ್ನು ಮೂರು ಸಮಾನ ಕಂತುಗಳಲ್ಲಿ ವರ್ಗಾಯಿಸಲಾಗುತ್ತಿದೆ. ಪಿಎಂ-ಕಿಸಾನ್ ಯೋಜನೆಯನ್ನು ಆರಂಭದಲ್ಲಿ ನಂಬಿಕೆ ಆಧಾರಿತ ವ್ಯವಸ್ಥೆಯಲ್ಲಿ ಪ್ರಾರಂಭಿಸಲಾಯಿತು ಮತ್ತು ರಾಜ್ಯಗಳು…
ಐಪಿಎಲ್ 2025 ರ ಋತುವಿನ ವೇಳಾಪಟ್ಟಿಯಲ್ಲಿ ಬದಲಾವಣೆಯಾಗಿದೆ. ಹಲವು ದಿನಗಳ ಚರ್ಚೆಯ ನಂತರ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಅಂತಿಮವಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಲಕ್ನೋ ಸೂಪರ್‌ಜೈಂಟ್ಸ್ ನಡುವಿನ ಪಂದ್ಯದ ವೇಳಾಪಟ್ಟಿಯಲ್ಲಿ ಬದಲಾವಣೆಯನ್ನು ಘೋಷಿಸಿದೆ. ಎಲ್ಲಾ ಊಹಾಪೋಹಗಳು ಮತ್ತು ವದಂತಿಗಳ ಹೊರತಾಗಿಯೂ, ಪಂದ್ಯವು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಘೋಷಿಸಲಾಗಿದೆ. https://ainkannada.com/do-this-to-get-the-blessings-of-goddess-lakshmi-dont-forget-to-light-lamps-in-these-4-places/ ಈಗ ಈ ಪಂದ್ಯದ ದಿನಾಂಕವನ್ನು ಬದಲಾಯಿಸಲಾಗಿದೆ. ಮಾರ್ಚ್ 28 ರ ಶುಕ್ರವಾರ, ಬಿಸಿಸಿಐ ಪತ್ರಿಕಾ ಪ್ರಕಟಣೆಯಲ್ಲಿ ಏಪ್ರಿಲ್ 6 ರಂದು ನಿಗದಿಯಾಗಿದ್ದ ಪಂದ್ಯವನ್ನು ಏಪ್ರಿಲ್ 8 ರಂದು ನಡೆಸಲಾಗುವುದು ಎಂದು ಘೋಷಿಸಿತು. ಅಂದರೆ, ಪಂದ್ಯದ ದಿನಾಂಕವನ್ನು ಬದಲಾಯಿಸಲಾಗಿದೆ. ಆದರೆ, ಸ್ಥಳದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇದರಿಂದಾಗಿ, ಬದಲಾವಣೆಗಳು… ಐಪಿಎಲ್ 2025 ರ 19 ನೇ ಪಂದ್ಯವು ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಲಕ್ನೋ ಸೂಪರ್‌ಜೈಂಟ್ಸ್ ನಡುವೆ ನಡೆಯಲಿದೆ. ಈ ಪಂದ್ಯ ಏಪ್ರಿಲ್ 6 ರಂದು ಕೋಲ್ಕತ್ತಾದ ತವರು ಮೈದಾನ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿದೆ.…