ತುಮಕೂರು : ತಮ್ಮ ಮೇಲೆ ಹನಿಟ್ರ್ಯಾಪ್ ಪ್ರಯತ್ನ ನಡೆದಿದೆ ಎಂಬ ಆರೋಪದ ಬಳಿಕ ತಮ್ಮ ಮೇಲೆ ಕೊಲೆಯತ್ನ ನಡೆದಿದೆ ಎಂಬ ಸ್ಫೋಟಕ ಮಾಹಿತಿ ಬಹಿರಂಗ ಪಡಿಸಿದ್ದ ಪರಿಷತ್ ಸದಸ್ಯರ ಎಲ್‌ಸಿ ರಾಜೇಂದ್ರ ಇದೀಗ ತುಮಕೂರು ಪೊಲೀಸರಿಗೆ ದೂರು ನೀಡಿದ್ದಾರೆ. ನಿನ್ನೆ ಡಿಐಜಿ ಭೇಟಿ ಮಾಡಿದ್ದ ಎಂಎಲ್ ಸಿ ರಾಜೇಂದ್ರ ಇಂದು ತುಮಕೂರು ಎಸ್ ಪಿ ಅಶೋಕ್ ವೆಂಕಟ್ ಅವರನ್ನು ಖುದ್ದು ಭೇಟಿಯಾಗಿ ತಮ್ಮ ಮೇಲೆ ಕೊಲೆಯತ್ನ ನಡೆದಿದೆ ಎಂಬ ದೂರು ನೀಡಿದ್ದಾರೆ. ತುಮಕೂರಿನ ಕ್ಯಾತ್ಸಂದದ ರಜತಾದ್ರಿ ನಿವಾಸದಲ್ಲಿ ಕಳೆದ ನವೆಂಬರ್ ತಿಂಗಳಲ್ಲಿ ಕೊಲೆಯತ್ನ ನಡೆದಿದೆ ಎಂದು ದೂರು ಸಲ್ಲಿಸಿದ್ದಾರೆ. https://ainkannada.com/honey-trap-case-supreme-court-dismisses-honey-trap-petition/ ಗುರುವಾರ ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ರಾಜ್ಯ ಪೊಲೀಸ್ ಪ್ರಧಾನ ಕಚೇರಿಯಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಹಾಗೂ ಕಾನೂನು ಮತ್ತು ಸುವ್ಯವಸ್ತೆಯ ಹೆಚ್ಚುವರಿ ಮಹಾನಿರ್ದೇಶಕ ಹಿತೇಂದ್ರ ಅವರನ್ನು ಭೇಟಿಯಾಗಿ ನನ್ನ ಮೇಲೆ ಕೊಲೆಯತ್ನ ನಡೆದಿದೆ ಎಂದು ದೂರು ನೀಡಿದ್ದರು.
Author: Author AIN
ತಮಿಳು ಚಿತ್ರರಂಗ ಹಾಗೂ ಕಿರುತೆರೆಯಲ್ಲಿ ಹೆಸರು ಮಾಡಿರುವ ಖ್ಯಾತ ನಟಿ ಶ್ರುತಿ ನಾರಾಯಣ್ ಅವರದ್ದು ಎನ್ನಲಾಗುತ್ತಿರುವ ಖಾಸಗಿ ವಿಡಿಯೋ ಒಂದು ಲೀಕ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಎಬ್ಬಿಸಿತ್ತು. ಇನ್ನೂ ಈ ವಿಚಾರವಾಗಿ ನಟಿ ರಿಯಾಕ್ಟ್ ಮಾಡಿದ್ದಾರೆ. ನಿಮ್ಮ ತಾಯಿ, ತಂಗಿ ಕೂಡ ನನ್ನಂತೆಯೇ ಹೆಣ್ಣು ಅವರ ವಿಡಿಯೋ ನೋಡಿ ಖುಷಿಪಡಿ ಎಂದು ನಟಿ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. https://ainkannada.com/according-to-vastu-sleep-in-this-direction-you-will-get-unexpected-luck-in-life/ ಇದೀಗ ಹರಿದಾಡುತ್ತಿರುವ ವಿಚಾರ ನಿಮಗೆ ಜೋಕ್ ಅಥವಾ ತಮಾಷೆ ಆಗಿರಬಹುದು. ಆದರೆ ನನಗೆ ನನ್ನ ಕುಟುಂಬಕ್ಕೆ ಇದು ಕಷ್ಟಕರ ಸಂದರ್ಭವಾಗಿದೆ. ಅದರಲ್ಲೂ ನನಗೆ ಇದನ್ನು ನಿಭಾಯಿಸೋದು ಕಷ್ಟಕರವಾಗಿದೆ ಎಂದಿದ್ದಾರೆ. ನಾನು ಒಬ್ಬಳು ಹುಡುಗಿ, ನನಗೂ ಭಾವನೆಗಳಿವೆ. ನನ್ನ ಆಪ್ತರಿಗೂ ಭಾವನೆಗಳಿವೆ. ಅದಕ್ಕೆ ಬೆಲೆ ಕೊಡಿ. ನೀವೆಲ್ಲಾ ಇದನ್ನು ಮತ್ತಷ್ಟು ಕೆಟ್ಟದಾಗಿ ಮಾಡುತ್ತಿದ್ದೀರಿ ಎಂದು ನಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದಯವಿಟ್ಟು ಆ ವಿಡಿಯೋಗಳನ್ನು ಕಾಡ್ಗಿಚ್ಚಿನಂತೆ ಹಬ್ಬಿಸಬೇಡಿ. ಒಂದು ವೇಳೆ ನೀವು ಹಾಗೆಯೇ ಮಾಡಬೇಕು ಎಂದಿದ್ರೆ, ನಿಮ್ಮ ತಾಯಿ, ಗರ್ಲ್‌ಫ್ರೆಂಡ್, ಸಹೋದರಿ ವಿಡಿಯೋಗಳನ್ನು…
ಗಂಡ ಹೆಂಡತಿ ಜಗಳ ಅಂದರೆ ಉಂಡು ಮಲಗೋ ತನಕ ಅಂತಾರೆ ಆದರೆ ದರ್ಶನ್ ವಿಷಯದಲ್ಲಿ ತುಸು ಜಾಸ್ತಿನೇ ಅನ್ನಬಹುದು. ದರ್ಶನ್-ವಿಜಯಲಕ್ಷ್ಮೀ ಸಂಸಾರದ ವಿರಸ ಜೈಲು ತನಕ ಹೋಗಿ ಬಂದಿದೆ. ಇದೆಲ್ಲಾ ಮುಗಿದು ಹೋದ ಅಧ್ಯಾಯ. ಪತಿ ದಾಸನನ್ನು ಶತಪ್ರಯತ್ನ ಮಾಡಿ ವಿಜಯಲಕ್ಷ್ಮೀ ಜೈಲಿನಿಂದ ಹೊರತಂದು ಈಗ ಅಭಿಮಾನಿಗಳ ಕಣ್ಣಿಗೆ ಸಾಕ್ಷಾತ್ ಲಕ್ಷ್ಮಿಯಂತೆ ಗೋಚರಿಸುತ್ತಿದ್ದಾರೆ. ಫ್ಯಾನ್ಸ್ ಗೆ ಅತ್ತಿಗೆ ಲಕ್ಷ್ಮಿಯಾದ್ರೆ ದರ್ಶನ್ ಅವರಿಗೆ ಪತ್ನಿ ಮುದ್ದು ರಾಕ್ಷಸಿಯಂತೆ. ಹೀಗಂತ ನಾವು ಹೇಳ್ತಿಲ್ಲ. ಸ್ವತಃ ದರ್ಶನ್ ಪತ್ನಿಯನ್ನು ಮುದ್ದು ರಾಕ್ಷಸಿ ಅಂತಾ ಕರೆದಿದ್ದಾರೆ. ದಚ್ಚು ಆತ್ಮೀಯ ಧನ್ವೀರ್ ನಟನೆಯ ವಾಮನ ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿರುವ ದರ್ಶನ್, ‘ನಾನು ಧನ್ವೀರ್ ಅವರನ್ನು ಬೇರೆ ಬೇರೆ ರೀತಿ ನೋಡಿದ್ದೇನೆ. ‘ಬಜಾರ್’ ಸಿನಿಮಾದಲ್ಲಿ ಒಂದು ರೀತಿ ನೋಡಿದೆ, ‘ಬೈಟು ಲವ್’ ಚಿತ್ರದಲ್ಲಿ ಬೇರೆ ರೀತಿ ನೋಡಿದೆ. ಅವರ ‘ಕೈವ’ ಸಿನಿಮಾ ನನಗೆ ತುಂಬ ಇಷ್ಟವಾಗಿತ್ತು. ಈಗ ವಾಮನ ನೋಡುತ್ತೇವೆ. ಈ ನಾಲ್ಕು ಸಿನಿಮಾಗಳಲ್ಲಿ ಖುಷಿ ವಿಷಯ ಏನೆಂದರೆ…
ಎಲ್ಲಾ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಪಂದ್ಯವೆಂದರೆ ಆರ್‌ಸಿಬಿ ವರ್ಸಸ್ ಸಿಎಸ್‌ಕೆ. ಐಪಿಎಲ್ ನಲ್ಲಿ ಈ ಪಂದ್ಯಕ್ಕೆ ಸಾಕಷ್ಟು ಕ್ರೇಜ್ ಇದೆ. ಏಕೆಂದರೆ.. ಒಂದು ಕಡೆ ವಿರಾಟ್ ಕೊಹ್ಲಿ ಮತ್ತು ಇನ್ನೊಂದು ಕಡೆ ಮಹೇಂದ್ರ ಸಿಂಗ್ ಧೋನಿ. ಅದಕ್ಕಾಗಿಯೇ ಈ ಪಂದ್ಯಕ್ಕೆ ಬೇಡಿಕೆ ಹೆಚ್ಚಿದೆ. ಐಪಿಎಲ್ 2025 ರ ಭಾಗವಾಗಿ ಈ ಎರಡೂ ತಂಡಗಳು ಶುಕ್ರವಾರ ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ. ಚೆಪಾಕ್ ಪಿಚ್ ಸ್ಪಿನ್ ಬೌಲಿಂಗ್ ಅನ್ನು ನೆನಪಿಸುತ್ತದೆ. ಇಲ್ಲಿ ಸ್ಪಿನ್ನರ್‌ಗಳು ಪ್ರಮುಖರು.. ಆ ಬಲದಿಂದ ಸಿಎಸ್‌ಕೆ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿತು. ಈಗ ಅವರು ಸ್ಪಿನ್ ಮೂಲಕವೂ ಆರ್‌ಸಿಬಿಗೆ ಹಾನಿ ಮಾಡುವ ಭರವಸೆಯಲ್ಲಿದ್ದಾರೆ. ಇದಲ್ಲದೆ, ಆರ್‌ಸಿಬಿಯ ಪ್ರಮುಖ ಶಕ್ತಿ ವಿರಾಟ್ ಕೊಹ್ಲಿ ಸ್ಪಿನ್ ಬೌಲಿಂಗ್ ಅನ್ನು ಸರಿಯಾಗಿ ಆಡಲು ಸಾಧ್ಯವಾಗುತ್ತಿಲ್ಲ ಎಂಬ ವಾದವಿದೆ. ಆ ದೌರ್ಬಲ್ಯದ ಮೇಲೆ ಕೇಂದ್ರೀಕರಿಸುವ ಮೂಲಕ ಸಿಎಸ್‌ಕೆ ಆರ್‌ಸಿಬಿಯನ್ನು ಸೋಲಿಸಲು ಯೋಜಿಸುತ್ತಿದೆ. https://ainkannada.com/according-to-vastu-sleep-in-this-direction-you-will-get-unexpected-luck-in-life/ ಆದಾಗ್ಯೂ, ಸಿಎಸ್‌ಕೆ ಪಂದ್ಯಕ್ಕಾಗಿ ವಿರಾಟ್ ಕೊಹ್ಲಿ ಮಾಸ್ಟರ್…
ಬೆಂಗಳೂರು: ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇರೆಗೆ ಬಿಜೆಪಿಯಿಂದ ರೆಬೆಲ್ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆ ಮಾಡಲಾಗಿದೆ. ಇದು ಯತ್ನಾಳ್ ಬಣದ ನಾಯಕರ ಆತಂಕ ಹೆಚ್ಚಿಸಿದೆ. ಈ ಹಿನ್ನೆಲೆಯಲ್ಲಿ ಮುಂದಿನ ನಡೆ ಏನು ? ಹೈಕಮಾಂಡ್ ನಿರ್ಧಾರಕ್ಕೆ ಕೌಂಟರ್ ಕೊಡಬೇಕಾ ? ಹೊಸ ಪಕ್ಷ ರಚನೆ ಮಾಡಬೇಕಾ ? ಉಚ್ಛಾಟನೆ ಆದೇಶ ಮರು ಪರಿಶೀಲನೆ ನಡೆಸುವಂತೆ ಹೈಕಮಾಂಡ್ ಶಿಸ್ತು ಸಮಿತಿಗೆ ಮರುಪರಿಶೀಲನಾ ಅರ್ಜಿ ಬರೆಯಬೇಕಾ ? ನಮ್ಮ ಮುಂದಿನ ನಡೆ ಏನು ಅನ್ನೋದರ ಬಗ್ಗೆ ಚರ್ಚಿಸಲು ಯತ್ನಾಳ್ ಟೀಂ ಸಭೆ ನಡೆಸ್ತಿದೆ. ಬೆಂಗಳೂರಿನ ಯುಬಿಸಿಟಿಯಲ್ಲಿರುವ ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ್ ನಿವಾಸದಲ್ಲಿ ಯತ್ನಾಳ್ ಟೀಮ್ ಸಭೆ ನಡೆದಿದೆ. ಜಿ ಎಂ ಸಿದ್ದೇಶ್ವರ್ ಮನೆಯಲ್ಲಿ ನಡೆಯುತ್ತಿರುವ ಸಭೆಯಲ್ಲಿ ರೆಬೆಲ್ಸ್ ನಾಯಕರಾದ ಬಸನಗೌಡಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ, ಬಿಪಿ ಹರೀಶ್ ಪಾಲ್ಗೊಂಡಿದ್ದಾರೆ. ಬಿಜೆಪಿಯಿಂದ ಉಚ್ಛಾಟನೆ ಬಳಿಕ ಬಸನಗೌಡ ಪಾಟೀಲ್ ಯತ್ನಾಳ್ ಎಲ್ಲೂ ಮಾಧ್ಯಮಗಳ ಮುಂದೆ ಮಾತನಾಡಿಲ್ಲ. ಹೀಗಾಗಿ ಯತ್ನಾಳ್ ಬಣದ ನಿರ್ಧಾರವೇನು…
ಒಂದು ಸುಂದರವಾದ ಮನೆಯ ಅಂದವನ್ನು ಅದರ ಆವರಣದಲ್ಲಿ ಹಚ್ಚ ಹಸಿರಿನ ಉದ್ಯಾನವನವು ಹೆಚ್ಚಿಸುತ್ತದೆ. ಪ್ರತಿಯೊಬ್ಬರೂ ತಮ್ಮ ಮನೆಯ ಮುಂದೆ ವಿವಿಧ ರೀತಿಯ ಹೂವಿನ ಗಿಡಗಳನ್ನು ಹೊಂದಿರುವ ಉದ್ಯಾನವನ್ನು ಹೊಂದಲು ಬಯಸುತ್ತಾರೆ. ಆದಾಗ್ಯೂ, ಈ ಹೂಬಿಡುವ ಸಸ್ಯಗಳನ್ನು ಬೆಳೆಸುವುದು ಕೂಡ ಒಂದು ಕಲೆ. ವಿಶೇಷವಾಗಿ ಈ ಬೇಸಿಗೆಯಲ್ಲಿ ತೋಟದಲ್ಲಿ ಸಸ್ಯಗಳನ್ನು ನಿರ್ವಹಿಸುವುದು ಸವಾಲಿನ ಕೆಲಸ. ಗಿಡಗಳಿಗೆ ಒಂದು ದಿನ ನೀರು ಹಾಕದಿದ್ದರೆ ಅಥವಾ ಸರಿಯಾದ ಕಾಳಜಿ ವಹಿಸದಿದ್ದರೆ ಗಿಡ ಒಣಗಿ ಹೋಗುತ್ತದೆ. ಆದ್ದರಿಂದ, ಬೇಸಿಗೆಯಲ್ಲಿ ಹೂವಿನ ತೋಟಗಳನ್ನು ಸಾಕಷ್ಟು ಕಾಳಜಿಯಿಂದ ನೋಡಿಕೊಳ್ಳಬೇಕು. ಆ ಸಲಹೆಗಳು.. https://ainkannada.com/according-to-vastu-sleep-in-this-direction-you-will-get-unexpected-luck-in-life/ ಸಾಕಷ್ಟು ನೀರು ಹಾಕಿರಿ: ಈ ಬೇಸಿಗೆಯಲ್ಲಿ ಸೂರ್ಯನ ಕಿರಣಗಳು ಪ್ರಖರವಾಗಿರುತ್ತವೆ. ಈ ಅವಧಿಯಲ್ಲಿ ಸಸ್ಯಗಳು ಒಣಗಲು ಅಥವಾ ಸಾಯಲು ಮುಖ್ಯ ಕಾರಣವೆಂದರೆ ಅವುಗಳಿಗೆ ಸಾಕಷ್ಟು ನೀರು ಹಾಕದಿರುವುದು. ಆದ್ದರಿಂದ ಸಸ್ಯಗಳಿಗೆ ನಿಯಮಿತವಾಗಿ ನೀರು ಹಾಕಿ. ಸೂರ್ಯನ ಶಾಖವು ಮಣ್ಣಿನಲ್ಲಿರುವ ತೇವಾಂಶವನ್ನು ಆವಿಯಾಗಿಸುತ್ತಿದೆ. ಆದ್ದರಿಂದ, ಬೆಳಿಗ್ಗೆ ಸಸ್ಯಗಳಿಗೆ ನೀರುಣಿಸುವುದು ಬಹಳ ಮುಖ್ಯ. ಆದ್ದರಿಂದ, ದಿನಕ್ಕೆ ಎರಡು ಬಾರಿ…
ಹುಬ್ಬಳ್ಳಿ; ಬೃಹತ್ ಗಾತ್ರದ ಮರವೊಂದು ನೆಲಕ್ಕೆ ಬಿದ್ದಿರುವುದು ಮಾತ್ರವಲ್ಲದೇ ದುಡಿದು ತಿನ್ನುವ ಬಡ ಕುಟುಂಬಗಳ ಜೀವನಕ್ಕೆ ಆಧಾರವಾಗಿದ್ದ ವಾಹನಗಳ ಮೇಲೆಯೇ ಬಿದ್ದಿರುವುದು ಬಡ ಕುಟುಂಬಗಳು ಕಣ್ಣಿರು ಹಾಕುವಂತಾಗಿದೆ. ರಸ್ತೆಯಲ್ಲಿ ಏಕಾಏಕಿ ಬೃಹತ್ ಗಾತ್ರದ ಮರ ಬಿದ್ದಿದ್ದು, ಬಡ ಕುಟುಂಬಕ್ಕೆ ಆಸರೆಯಾಗಿದ್ದ ವಾಹನಗಳು ಸಂಪೂರ್ಣ ಜಖಂಗೊಂಡಿವೆ. ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ಮಂಜುನಾಥ ನಗರದ ಬಳಿಯಲ್ಲಿ ಬೃಹತ್ ಗಾತ್ರದ ಮರವೊಂದು ಏಕಾಏಕಿ ನೆಲಕ್ಕೆ ಬಿದ್ದಿರುವ ಪರಿಣಾಮ ಓಮಿನಿ ಕಾರ್ ಹಾಗೂ ಆಟೋ ರಿಕ್ಷಾ ಸಂಪೂರ್ಣ ಜಖಂಗೊಂಡಿರುವ ಘಟನೆ ನಡೆದಿದೆ. ಆಟೋ ಹಾಗೂ ಓಮಿನಿ ಓಡಿಸಿ ಜೀವನ ನಡೆಸುವ ಬಡ ಕುಟುಂಬಕ್ಕೆ ಈಗ ಬರಸಿಡಿಲು ಬಡೆದಂತಾಗಿದೆ. ಆಟೋ ಚಾಲಕ ರಸುಲ್ ಸಾಬ ನದಾಫ್, ಓಮಿನಿ ಚಾಲಕ ಸಿಖಂದರ್ ನದಾಫ್ ಎಂಬುವವರ ವಾಹನಗಳು ಸಂಪೂರ್ಣ ಹಾಳಾಗಿದ್ದು ಪರಿಹಾರಕ್ಕೆ ಅಳಲನ್ನು ತೋಡಿಕೊಂಡಿದ್ದಾರೆ. https://ainkannada.com/inhuman-act-in-dharwad-mentally-retarded-man-attacked-dies-after-being-stoned/ ಇನ್ನೂ ಮಳೆ ಗಾಳಿಗೆ ಮರ ಬಿದ್ದಿದೆಯೋ..? ಕಟ್ಟಡ ನಿರ್ಮಾಣ ಕಾಮಗಾರಿಯಿಂದ ಮರ ಬಿದ್ದಿದೆಯೋ ಎಂಬುವುದನ್ನು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಪತ್ತೆ ಹಚ್ಚಿ ನೊಂದವರಿಗೆ ಪರಿಹಾರ…
ನಿರ್ಮಾಪಕ, ನಿರ್ದೇಶಕ, ನಟನಾಗಿ ಹಾಗೂ ಈಗಲ್ ಮೀಡಿಯಾ ಕ್ರಿಯೇಷನ್ಸ್ ಮೂಲಕ ಇವೆಂಟ್ ಗಳನ್ನು ಆಯೋಜಿಸುವ ಮೂಲಕ ಜನಪ್ರಿಯರಾಗಿರುವ ನವರಸನ್ “ಸೆಲೆಬ್ರಿಟಿ ವುಮೆನ್ಸ್ ಕಬ್ಬಡಿ ಲೀಗ್” ಆಯೋಜಿಸುವ ಮೂಲಕ ಕ್ರೀಡಾಲೋಕಕ್ಕೂ ಪಾದಾರ್ಪಣೆ ಮಾಡಿರುವುದು ಎಲ್ಲರಿಗೂ ತಿಳಿದ ಸಂಗತಿ. ಕಳೆದ ಕೆಲವು ದಿನಗಳ ಹಿಂದೆ “CWKL” ಲೋಗೊ ಅನಾವರಣವನ್ನು ನವರಸನ್ ಅದ್ದೂರಿಯಾಗಿ ಬಿಡುಗಡೆ ಮಾಡಿದ್ದರು. ಪ್ರಸ್ತುತ ಹೆಸರಾಂತ ಗಾಯಕ, ನಾಯಕ ಹಾಗೂ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಅವರು “CWKL” ಗಾಗಿ “ಕಬ್ಬಡಿ ಕಬ್ಬಡಿ” ಎಂಬ ಚಂದದ ಥೀಮ್ ಸಾಂಗ್ ಬರೆದು ಸಂಗೀತ ಸಂಯೋಜಿಸಿದ್ದಾರೆ. ಇದೇ ಸಂದರ್ಭದಲ್ಲಿ “CWKL” ಪಂದ್ಯಗಳು ನಡೆಯುವ ದಿನಾಂಕಗಳನ್ನು ಸಹ ತಿಳಿಸಲಾಯಿತು. ವಿಧಾನ ಪರಿಷತ್ ಸದಸ್ಯರು ಹಾಗೂ ಸಾಯಿಗೋಲ್ಡ್ ಸಂಸ್ಥೆಯ ಮಾಲೀಕರಾದ ಶರವಣ ಅವರು ಪಂದ್ಯಗಳು ನಡೆಯುವ ದಿನಾಂಕಗಳ ಬಗ್ಗೆ ತಿಳಿಸಿ, “CWKL” ಯಶಸ್ವಿಯಾಗಲೆಂದು ಶುಭ ಹಾರೈಸಿದರು. ಏಪ್ರಿಲ್ 5 ಹಾಗೂ 6 “CWKL” ನ ಪಂದ್ಯಗಳು ನಡೆಯಲಿದೆ. ಥೀಮ್ ಸಾಂಗ್ ಅನ್ನು ಪಿ.ಆರ್.ಓ ಸುಧೀಂದ್ರ ವೆಂಕಟೇಶ್ ಬಿಡುಗಡೆ ಮಾಡಿದರು.…
ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಗ್ರಾಹಕರಿಗಾಗಿ ವಿವಿಧ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಎಸ್‌ಬಿಐ ತನ್ನ ಗ್ರಾಹಕರಿಗೆ ಉಳಿತಾಯ ಖಾತೆ, ಚಾಲ್ತಿ ಖಾತೆ, ಎಫ್‌ಡಿ ಖಾತೆ, ಆರ್‌ಡಿ ಖಾತೆಯಂತಹ ವಿವಿಧ ಬ್ಯಾಂಕಿಂಗ್ ಉತ್ಪನ್ನಗಳನ್ನು ನೀಡುತ್ತದೆ. https://ainkannada.com/according-to-vastu-sleep-in-this-direction-you-will-get-unexpected-luck-in-life/ ಎಸ್‌ಬಿಐ ನೀಡುವ ಈ ಯೋಜನೆಯಲ್ಲಿ ಗ್ರಾಹಕರು ಉತ್ತಮ ಲಾಭವನ್ನು ಪಡೆಯುತ್ತಿದ್ದಾರೆ. ಅಮೃತ್ ವೃಷ್ಟಿ ಯೋಜನೆಯಡಿಯಲ್ಲಿ SBI ತನ್ನ ಗ್ರಾಹಕರಿಗೆ FD ಮೇಲೆ ಹೆಚ್ಚಿನ ಬಡ್ಡಿದರವನ್ನು ನೀಡುತ್ತದೆ. SBI ಅಮೃತ್ ವೃಷ್ಟಿ FD ಎಂದರೇನು? SBI ಅಮೃತ್ ವೃಷ್ಟಿ ಯೋಜನೆಯು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಜುಲೈ 15, 2024 ರಿಂದ ಮಾರ್ಚ್ 31, 2025 ರವರೆಗೆ ಸೀಮಿತ ಅವಧಿಗೆ ನೀಡುವ ವಿಶೇಷ ಸ್ಥಿರ ಠೇವಣಿ ಯೋಜನೆಯಾಗಿದೆ. ‘ಅಮೃತ್ ವೃಷ್ಟಿ’ ಎಫ್‌ಡಿ ಯೋಜನೆಯು 444 ದಿನಗಳಲ್ಲಿ ಪಕ್ವವಾಗುತ್ತದೆ. ‘ಅಮೃತ್ ವೃಷ್ಟಿ’ ಎಫ್‌ಡಿ ಯೋಜನೆಯಡಿಯಲ್ಲಿ, ಎಸ್‌ಬಿಐ ತನ್ನ ಗ್ರಾಹಕರಿಗೆ ಸಾಮಾನ್ಯ ನಾಗರಿಕರಿಗೆ ಶೇಕಡಾ 7.25 ರಷ್ಟು ಮತ್ತು…
STellar studio & event management ಸಂಸ್ಥೆ, PRK AUDIO ಸಂಸ್ಥೆಯ ಸಹಯೋಗದೊಂದಿಗೆ ಚೇತನ್ ಸೂರ್ಯ, ಅರ್ಜುನ್ ಹಾಗೂ ಪಾರಿತೋಷ್ ಅವರು ಆಯೋಜಿಸುತ್ತಿರುವ “CSBL” “ಸೆಲೆಬ್ರಿಟಿ ಶಟಲ್ ಬ್ಯಾಡ್ಮಿಂಟನ್ ಲೀಗ್ ಸೀಸನ್ 1” ಉದ್ಘಾಟನಾ ಹಾಗೂ ಲೋಗೊ ಲಾಂಚ್ ಸಮಾರಂಭ ನಗರದ ಖಾಸಗಿ ಹೋಟೆಲ್ ನಲ್ಲಿ ಅದ್ದೂರಿಯಾಗಿ ನೆರವೇರಿತು. ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ಭಾರತದ ಖ್ಯಾತ ಶಟಲ್ ಬ್ಯಾಡ್ಮಿಂಟನ್ ಆಟಗಾರ ಶ್ರೀಕಾಂತ್ ಕಿಡಂಬಿ “CSBL” ಸೀಸನ್ 1 ಲೋಗೊ ಹಾಗೂ ಟ್ರೋಫಿ ಅನಾವರಣ ಮಾಡಿದರು. ಇದೇ ಸಂದರ್ಭದಲ್ಲಿ ಪುನೀತ್ ರಾಜಕುಮಾರ್ ಅವರ 50 ನೇ ಹುಟ್ಟುಹಬ್ಬವನ್ನು ಸಹ ಅದ್ದೂರಿಯಾಗಿ ಆಚರಿಸಲಾಯಿತು. ವಿಧಾನ ಪರಿಷತ್ ಸದಸ್ಯರಾದ ಗೋವಿಂದರಾಜು, ಶರವಣ(ಸಾಯಿ ಗೋಲ್ಡ್ ಪ್ಯಾಲೆಸ್), ನಟ ಅನಿರುದ್ಧ್ ಜತ್ಕರ್, ನಟಿ ರಾಗಿಣಿ ದ್ವಿವೇದಿ, ಸಾ.ರಾ.ಗೋವಿಂದು, ಪತ್ರಕರ್ತ ಸದಾಶಿವ ಶೆಣೈ ಮುಂತಾದವರು ಸಮಾರಂಭಕ್ಕೆ ಆಗಮಿಸಿ “CSBL” ಯಶಸ್ವಿಯಾಗಲೆಂದು ಹಾರೈಸಿದರು. ವರ್ಣರಂಜಿತ ವೇದಿಕೆಯಲ್ಲಿ ಪುನೀತ್ ರಾಜಕುಮಾರ್ ಚಿತ್ರದ ಹಾಡುಗಳಿಗೆ ಹೆಸರಾಂತ ನೃತ್ಯ ತಂಡದವರು ಹೆಜ್ಜೆ ಹಾಕಿದರು. “CSBL”…