ಇಂದು, ನಮ್ಮ ಜೀವನವನ್ನು ಸಂಪೂರ್ಣವಾಗಿ ಬದಲಾಯಿಸುವ ಕೆಲವು ಪ್ರಮುಖ ವಾಸ್ತು ಸಲಹೆಗಳನ್ನು ಕಲಿಯೋಣ. ನೀವು ಈ ಸಲಹೆಗಳನ್ನು ಅನುಸರಿಸಿದರೆ, ಜೀವನವು ಸಂತೋಷ ಮತ್ತು ಸಮೃದ್ಧಿಯಿಂದ ತುಂಬಿರುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಅನುಸರಿಸಬೇಕಾದ ಕೆಲವು ಪ್ರಮುಖ ಹಂತಗಳನ್ನು ಈಗ ತಿಳಿದುಕೊಳ್ಳೋಣ. ನಮ್ಮ ಜೀವನದಲ್ಲಿ ವಾಸ್ತು ವಿಜ್ಞಾನ ಬಹಳ ಮುಖ್ಯ. ಯಾವುದೇ ವ್ಯಕ್ತಿಯ ಜೀವನದಲ್ಲಿ ಸಮಸ್ಯೆಗಳನ್ನು ತಪ್ಪಿಸಲು, ಯಾವುದೇ ಕೆಲಸವನ್ನು ಪ್ರಾರಂಭಿಸುವ ಮೊದಲು ಅಥವಾ ಮಾಡುವಾಗ ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಲಾದ ಕೆಲವು ನಿಯಮಗಳನ್ನು ಪಾಲಿಸಬೇಕು. ಈ ನಿಯಮಗಳನ್ನು ಪಾಲಿಸುವುದರಿಂದ ನಿಮ್ಮ ವೈಯಕ್ತಿಕ ಜೀವನದಲ್ಲಿ ಮಾತ್ರವಲ್ಲದೆ ವೃತ್ತಿಪರವಾಗಿಯೂ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಈ ಸಲಹೆಗಳನ್ನು ಅನುಸರಿಸುವುದರಿಂದ ನೀವು ಸಂತೋಷ, ಸಮೃದ್ಧಿ ಮತ್ತು ಸಕಾರಾತ್ಮಕ ಶಕ್ತಿಯ ಜೀವನವನ್ನು ನಡೆಸಲು ಸಹಾಯ ಮಾಡುತ್ತದೆ. https://ainkannada.com/according-to-vastu-sleep-in-this-direction-you-will-get-unexpected-luck-in-life/ ವಾಸ್ತು ಶಾಸ್ತ್ರದ ಪ್ರಕಾರ, ಮಲಗುವ ಕೋಣೆಯಲ್ಲಿ ಕನ್ನಡಿಗಳನ್ನು ಇಡುವುದನ್ನು ತಪ್ಪಿಸಬೇಕು. ಕನ್ನಡಿಗಳು ಸುತ್ತಮುತ್ತಲಿನ ಪರಿಸರಕ್ಕೆ ನಕಾರಾತ್ಮಕ ಶಕ್ತಿಯನ್ನು ಪ್ರವೇಶಿಸಲು ಕಾರಣವಾಗಬಹುದು. ವಾಸ್ತುದಲ್ಲಿ ನೈಋತ್ಯ ದಿಕ್ಕು ಸ್ಥಿರತೆ ಮತ್ತು ಬಲಕ್ಕೆ ಸಂಬಂಧಿಸಿದೆ. ಆದ್ದರಿಂದ ನೈಋತ್ಯ…
Author: Author AIN
ಸಾಮಾನ್ಯವಾಗಿ ಚಿಕನ್ ಕಬಾಬ್ ಬೆಲೆ ಎಷ್ಟು? ದೊಡ್ಡದಾಗಿದ್ದರೆ ಹೆಚ್ಚೆಂದರೆ ಸಾವಿರ ರೂಪಾಯಿ. ಆದರೆ, ಚೀನಾದಲ್ಲಿ ಇದರ ಬೆಲೆ ರೂ. 5,500. ಶಾಂಘೈನಲ್ಲಿರುವ ಒಂದು ರೆಸ್ಟೋರೆಂಟ್ ಅರ್ಧ ಬೇಯಿಸಿದ ಕೋಳಿ ಮಾಂಸವನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದೆ. ಇದಕ್ಕೆ ರೆಸ್ಟೋರೆಂಟ್ ಆಡಳಿತ ಮಂಡಳಿ ವಿಚಿತ್ರ ಕಾರಣ ನೀಡುತ್ತದೆ. ಆ ರೆಸ್ಟೋರೆಂಟ್‌ನಲ್ಲಿ ಇತ್ತೀಚೆಗೆ ಒಬ್ಬ ಉದ್ಯಮಿ ಅರ್ಧ ಬೇಯಿಸಿದ ಕೋಳಿ ಕರಿ ಖರೀದಿಸಿ ತಿಂದರು. ರಶೀದಿಯಲ್ಲಿರುವ ಬೆಲೆ 480 ಯುವಾನ್. ಅಂದರೆ ರೂ. ನಮ್ಮ ಕರೆನ್ಸಿಯಲ್ಲಿ. ಅದು 5,500. ಬೆಲೆ ನೋಡಿ ಉದ್ಯಮಿ ಆಘಾತಕ್ಕೊಳಗಾದರು. ಆ ಉದ್ಯಮಿ ಕೋಪಗೊಂಡು ಚಿಕನ್ ಕಬಾಬ್‌ಗಳನ್ನು ಇಷ್ಟೊಂದು ಬೆಲೆಗೆ ಏಕೆ ಮಾರಾಟ ಮಾಡುತ್ತಿದ್ದೀರಿ ಎಂದು ಕೇಳಿದನು. “ನೀನು ಕೋಳಿಯನ್ನು ನೀರಿನ ಬದಲು ಹಾಲಿನಲ್ಲಿ ಸಾಕಿದ್ದೀಯಾ?” ಆ ಉದ್ಯಮಿ ರೆಸ್ಟೋರೆಂಟ್ ಮಾಲೀಕರಿಗೆ ಸವಾಲು ಹಾಕಿದರು. ಅವರು ಹೌದು ಎಂದು ಉತ್ತರಿಸುತ್ತಾ, ಕೋಳಿ ಸಾಂಪ್ರದಾಯಿಕ ಚೀನೀ ಸಂಗೀತವನ್ನು ಕೇಳುತ್ತಾ ಬೆಳೆದಿದೆ ಎಂದು ಹೇಳಿದರು. ಅವರು ನೀರಿನ ಬದಲು ಹಾಲು ಕುಡಿದು ಬೆಳೆದರು…
ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಈಗಾಗಲೇ ಶುರುವಾಗಿದೆ. ಕೆಕೆಆರ್ ವಿರುದ್ಧ ಮೊದಲ ಪಂದ್ಯದಲ್ಲಿ ಗೆದ್ದು ಬೀಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು 2ನೇ ಪಂದ್ಯದಲ್ಲಿ ಚೆನ್ನೈ ವಿರುದ್ಧ ಸೆಣಸಾಡಲಿದೆ. ಇಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಬೆಂಗಳೂರು ಟೀಮ್ ಕಣಕ್ಕಿಳಿಯಲಿದೆ. ಇದರ ಮಧ್ಯೆ ಮಳೆ ಅಡ್ಡಿಯಾಗಲಿದೆ ಎಂಬ ಆತಂಕವೊಂದು ಕಾಡುತ್ತಿದೆ. https://ainkannada.com/according-to-vastu-sleep-in-this-direction-you-will-get-unexpected-luck-in-life/ ಆದ್ರೆ ತಜ್ಞರು ಹೇಳುವ ಪ್ರಕಾರ ಹವಾಮಾನ ಪಂದ್ಯಕ್ಕೆ ಅನುಕೂಲಕರವಾಗಿಯೇ ಇದೆ. ಆದ್ರೆ ಕೇವಲ ಶೇಕಡಾ 5 ರಷ್ಟು ಪಂದ್ಯಕ್ಕೆ ಅಡ್ಡಿಯಾಗುವ ವಾತಾವರಣ ನಿರ್ಮಾಣವಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಸದ್ಯ ಚೆನ್ನೈನಲ್ಲಿ 28 ಡಿಗ್ರಿ ಸೆಲ್ಸಿಯಸ್ನಿಂದ 32 ಡಿಗ್ರಿಸೆಲ್ಸ್ನಷ್ಟು ತಾಪಮಾನವಿದೆ. ಈ ಒಂದು ಹವಾಮಾನ ಪಂದ್ಯಕ್ಕೆ ಅಡ್ಡಿಯಾಗುವ ಸಾಧ್ಯತೆ ಕಡಿಮೆ ಎಂದು ಹವಾಮಾನ ಇಲಾಖೆಯ ತಜ್ಞರು ಹೇಳಿದ್ದಾರೆ. ಪಿಚ್ ರಿಪೋರ್ಟ್ ಚೆನ್ನೈನ ಎಂ.ಎ. ಚಿದಂಬರಂ ಸ್ಟೇಡಿಯಂನ ಪಿಚ್ ಸ್ಪಿನ್ನರ್‌ಗಳಿಗೆ ಸ್ವರ್ಗ ಎಂದು ಪರಿಗಣಿಸಲಾಗಿದೆ. ಈ ಮೈದಾನದಲ್ಲಿ ಸ್ಪಿನ್ನರ್‌ಗಳಿಗೆ ಸಾಕಷ್ಟು ನೆರವು ಸಿಗುತ್ತದೆ. ಕಳೆದ ಐಪಿಎಲ್ನಲ್ಲಿ ಮೊದಲ ಇನಿಂಗ್ಸ್‌ನ ಸರಾಸರಿ ಸ್ಕೋರ್…
ಸೂರ್ಯೋದಯ – 6:17 ಬೆ. ಸೂರ್ಯಾಸ್ತ – 6:25 ಸಂಜೆ. ಶಾಲಿವಾಹನ ಶಕೆ -1946 ಸಂವತ್-2080 ಕ್ರೋಧಿನಾಮ ಸಂವತ್ಸರ, ಉತ್ತರ ಅಯಣ, ಶುಕ್ಲ ಪಕ್ಷ, ಶಿಶಿರ ಋತು, ಪಾಲ್ಗುಣ ಮಾಸ, ತಿಥಿ – ಚತುರ್ದಶಿ ನಕ್ಷತ್ರ – ಪೂರ್ವಾಭಾದ್ರೆ ಯೋಗ – ಶುಕ್ಲ ಕರಣ – ವಿಷ್ಟಿ ರಾಹು ಕಾಲ – 10:30 ದಿಂದ 12:00 ವರೆಗೆ ಯಮಗಂಡ – 03:00 ದಿಂದ 04:30 ವರೆಗೆ ಗುಳಿಕ ಕಾಲ – 09:00 ದಿಂದ 10:30 ವರೆಗೆ ಬ್ರಹ್ಮ ಮುಹೂರ್ತ – 4:41 ಬೆ. ದಿಂದ 5:29 ಬೆ. ವರೆಗೆ ಅಮೃತ ಕಾಲ – 2:56 ಮ. ದಿಂದ 4:23 ಸಂಜೆ. ವರೆಗೆ ಅಭಿಜಿತ್ ಮುಹುರ್ತ – 11:57 ಬೆ.ದಿಂದ 12:45 ಮ. ವರೆಗೆ ನಿಮ್ಮ ಹೆಸರು, ಜನ್ಮ ದಿನಾಂಕ, ಜನ್ಮ ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು ಅದರ ಜೊತೆಗೆ ಭಾವ ಚಿತ್ರ ಹಾಗೂ ಹಸ್ತಸಾಮುದ್ರಿಕೆ ಕಳಿಸಿದರೆ ಸಂಪೂರ್ಣ ಭವಿಷ್ಯ ತಿಳಿಸಲಾಗುವುದು.…
ಕಲಬುರಗಿ: ಲಂಚ ಸ್ವೀಕರಿಸುವಾಗಲೇ ರಾಜ್ಯ ಮಾಹಿತಿ ಹಕ್ಕು ಆಯೋಗದ ಕಲಬುರಗಿ ಪೀಠದ ಆಯುಕ್ತ ರವೀಂದ್ರ ಢಾಕಪ್ಪ ಲೋಕಾಯುಕ್ತ ಬಲೆಗೆ ಬಿದಿದ್ದಾರೆ. ಮಾಹಿತಿ ಹಕ್ಕು ಕಾರ್ಯಕರ್ತನ ಹೆಸರನ್ನು ಬ್ಲಾಕ್ ಲೀಸ್ಟ್ ನಿಂದ ತೆಗೆಯಲು ಹಣದ ಬೇಡಿಕೆ ಇಟ್ಟಿದ್ದು, ಫೋನ್ ಪೇ ಮೂಲಕ ಹಣವನ್ನ ಪಡೆಯುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. https://ainkannada.com/kpcc-womens-wing-general-secretary-shobha-hegde-passes-away/ ಬ್ಲಾಕ್ ಲಿಸ್ಟ್ ನಲ್ಲಿರುವ ಆರ್ ಟಿಐ ಕಾರ್ಯಕರ್ತ ಸೈಬಣ್ಣ ಸಾಸಿ ಬೆನಕನಳ್ಳಿ ಹೆಸರನ್ನು ಅಲ್ಲಿಂದ ತೆಗೆದು ಹಾಕಲು ಆಯುಕ್ತ ರವೀಂದ್ರ ಢಾಕಪ್ಪ ಇವರು 3 ಲಕ್ಷ ರೂ, ಗೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈಗಾಗಲೇ 1 ಲಕ್ಷ ರೂ, ಗಳನ್ನು ಫೋನ್ ಪೇ ಮೂಲಕ ಹಣ ಹಾಕಿಸಿಕೊಂಡಿದ್ದ ಆಯುಕ್ತರು, ಉಳಿದ ಹಣ ಪಡೆಯುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದಾರೆ ಎಂದು ತಿಳಿದುಬಂದಿದೆ. ಎಸ್.ಪಿ ಬಿಕೆ. ಉಮೇಶ್ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಗೀತಾ ಬೆನಾಳ, ಪೊಲೀಸ್ ಇನ್‌ಸ್ಪೆಕ್ಟರ್ ಅರುಣ್ ಕುಮಾರ್ ಅವರ ತಂಡದಿಂದ ತನಿಖೆ ಮುಂದುವರಿದಿದೆ.
ಉತ್ತರ ಕನ್ನಡ : ಸಾವು ಯಾರಿಗೆ ಹೇಗೆ ಬರುವುದೆಂದು ಊಹಿಸಲು ಸಾಧ್ಯವಿಲ್ಲ. ಇದಕ್ಕೆ ಉದಾಹರಣೆ ಶಿರಿಸಿಯಲ್ಲಿ ನಡೆದ ಘಟನೆ. ಕೃಷಿ ಕೆಲಸದಲ್ಲಿ ತೊಡಗಿದ್ದ ಕೆಪಿಸಿಸಿ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಶೋಭಾ ಹೆಗಡೆ ಆಕಸ್ಮಿಕ ಅವಘಡದಿಂದಾಗಿ ಸಾವನ್ನಪ್ಪಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಹೊಸಬಾಳೆ ನಿವಾಸಿ ಶೋಭಾ ಹೆಗಡೆ ಅವರು ಕಳೆದ ಬುಧವಾರ ಮೃತರಾಗಿದ್ದಾರೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಜಿ.ಪಂ. ಮಾಜಿ ಸದಸ್ಯ ವೆಂಕಟೇಶ ಹೆಗಡೆ ಹೊಸಬಾಳೆ ಅವರ ಧರ್ಮ ಪತ್ನಿಯಾಗಿದ್ದ ಶೋಭಾ ಹೆಗಡೆ ಅವರು ಕೃಷಿ ಕಾರ್ಯದಲ್ಲೂ ತಮ್ಮನ ತಾವು ತೊಡಗಿಸಿಕೊಂಡಿದ್ದರು. ಅವರ ಮನೆಯಲ್ಲಿ ಅಡಿಕೆ ಸುಲಿಯುವ ಕೆಲಸ ನಡೆಯುತ್ತಿತ್ತು https://ainkannada.com/accident-on-ben-mai-express-highway-service-road-three-dead/ ಈ ವೇಳೆ ಅಡಿಕೆ ಸುಲಿಯುವ ಯಂತ್ರಕ್ಕೆ ಆಕಸ್ಮಿಕವಾಗಿ ಸೀರೆಯ ಸೆರಗು ಸಿಲುಕಿದ್ದು, ಯಂತ್ರ ತನ್ನತ್ತ ಸೆಳೆದು ಬಿಸಾಕಿದ ಪರಿಣಾಮ ಶೋಭಾ ಸ್ಥಳದಲ್ಲಿಯೇ ಮೃತರಾಗಿದ್ದಾರೆ. ಈ ಘಟನೆ ಕುರಿತು ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಐಪಿಎಲ್ 2025 ರಲ್ಲಿ ನಿನ್ನೆ ನಡೆದ ರಾಜಸ್ಥಾನ ರಾಯಲ್ಸ್ (ಆರ್‌ಆರ್) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಪಂದ್ಯದ ಸಮಯದಲ್ಲಿ ಒಂದು ಕುತೂಹಲಕಾರಿ ಘಟನೆ ನಡೆಯಿತು. ಗುವಾಹಟಿಯಲ್ಲಿ ನಡೆದ ಪಂದ್ಯದ ಸಮಯದಲ್ಲಿ, ಅಭಿಮಾನಿಯೊಬ್ಬರು ಸ್ಟ್ಯಾಂಡ್‌ಗಳಿಂದ ಮೈದಾನಕ್ಕೆ ಪ್ರವೇಶಿಸಿ ರಿಯಾನ್ ಪರಾಗ್ ಅವರ ಪಾದಗಳನ್ನು ಮುಟ್ಟಿ, ಅವರನ್ನು ತಬ್ಬಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದರು. ಇದು ನೆಟಿಜನ್‌ಗಳಲ್ಲಿ ಕೋಲಾಹಲಕ್ಕೆ ಕಾರಣವಾಯಿತು. ಕೆಲವರು ಅವರನ್ನು ಗುವಾಹಟಿ ಅಭಿಮಾನಿಗಳ ನಿಜವಾದ ನಾಯಕ ಎಂದು ಶ್ಲಾಘಿಸಿದರೆ, ಇನ್ನು ಕೆಲವರು ಇದನ್ನು ಪಿಆರ್ ಸ್ಟಂಟ್ ಎಂದು ಬಣ್ಣಿಸಿದರು. https://ainkannada.com/according-to-vastu-sleep-in-this-direction-you-will-get-unexpected-luck-in-life/ ಈ ಐಪಿಎಲ್ ಋತುವಿನಲ್ಲಿ ಸಂಜು ಸ್ಯಾಮ್ಸನ್ ಬೆರಳಿಗೆ ಗಾಯವಾಗಿದ್ದು, ರಾಜಸ್ಥಾನ್ ರಾಯಲ್ಸ್ ತಂಡವು ರಿಯಾನ್ ಪರಾಗ್ ಅವರನ್ನು ಮೂರು ಪಂದ್ಯಗಳಿಗೆ ಮಧ್ಯಂತರ ನಾಯಕನನ್ನಾಗಿ ನೇಮಿಸಿದೆ. ನಾಯಕನಾಗಿ ಅವರ ಮೊದಲ ಪಂದ್ಯದಲ್ಲಿ, ಅವರ ತಂಡವು ಸನ್‌ರೈಸರ್ಸ್ ಹೈದರಾಬಾದ್ (SRH) ವಿರುದ್ಧ 44 ರನ್‌ಗಳಿಂದ ಸೋತಿತು. ಈ ಸೋಲಿನ ನಂತರ, ಪರಾಗ್ ತಮ್ಮ ತವರು ಗುವಾಹಟಿಯಲ್ಲಿ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ತಂಡವನ್ನು ಮತ್ತೆ ಮುನ್ನಡೆಸಿದರು.…
ಬೆಂಗಳೂರು: ಹೌದು, ಕರ್ನಾಟಕದ ಜನತೆಗೆ ಇಂದು ಒಂದೇ ದಿನ ರಾಜ್ಯ ಸರ್ಕಾರ ಡಬಲ್ ಶಾಕ್ ಮೇಲೆ ಶಾಕ್ ಕೊಟ್ಟಿದೆ. ಮಧ್ಯಾಹ್ನ ನಂದಿನಿ ಹಾಲಿನ ದರವನ್ನು 4ರೂ. ಹೆಚ್ಚಳ ಮಾಡಿದ್ದ ಸರ್ಕಾರಮ ಏಪ್ರಿಲ್ 1ರಿಂದಲೇ ಜಾರಿಗೆ ಬರಲಿದೆ ಎಂದು ಘೋಷಣೆ ಮಾಡಿದೆ. ಇದೀಗ ಸಂಜೆ 5 ಗಂಟೆ ಹೊತ್ತಿಗೆ ಕರೆಂಟ್ ಶಾಕ್ ನೀಡಿದೆ. ಐದು ಗ್ಯಾರಂಟಿ ನೀಡಿದ್ದ ಸಿದ್ದರಾಮಯ್ಯ ಸರ್ಕಾರ ಇದೀಗ ರಾಜ್ಯದ ಜನರಿಗೆ ಕರೆಂಟ್ ಶಾಕ್ ಗ್ಯಾರಂಟಿ ನೀಡಿದೆ. ಅದು ಏನಂತೀರ ಅಂದರೆ, ಏಪ್ರಿಲ್ 1ರಿಂದಲೇ ರಾಜ್ಯದಲ್ಲಿ ವಿದ್ಯುತ್ ದರವೂ ಏರಿಕೆಯಾಗಲಿದೆ. ಹೌದು, ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ, ಏಪ್ರಿಲ್ 1ರಿಂದ ಪ್ರತಿ ಯೂನಿಟ್ ವಿದ್ಯುತ್ ದರವನ್ನು 36 ಪೈಸೆಯಷ್ಟು ಹೆಚ್ಚಳ ಮಾಡಿದೆ. ಇಷ್ಟೇ ಅಲ್ಲ, ಮುಂದಿನ 3 ವರ್ಷಕ್ಕೂ ವಿದ್ಯುತ್ ದರವನ್ನು ಈಗಲೇ ಏರಿಕೆ ಮಾಡಿ ಆದೇಶ ಹೊರಡಿಸಿದೆ. 2025-26ರಲ್ಲಿ ಪ್ರತಿ ಯೂನಿಟ್ ಗೆ 36 ಪೈಸೆ ಹೆಚ್ಚಳ 2026-27ಕ್ಕೆ ಪ್ರತಿ ಯೂನಿಟ್ ಗೆ 34 ಪೈಸೆ ಹೆಚ್ಚಳ 2027-28ಕ್ಕೆ…
ಬೆಂಗಳೂರು: ಚಿನ್ನ ಕಳ್ಳಸಾಗಣೆ ಪ್ರಕರಣದ ಆರೋಪಿ ನಟಿ ರನ್ಯಾ ರಾವ್‌ಗೆ ದೊಡ್ಡ ಶಾಕ್ ಆಗಿದೆ. ನ್ಯಾಯಾಲಯ ಆಕೆಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ಪ್ರಕರಣದ ಗಂಭೀರತೆ ಮತ್ತು ನಟಿಯ ಖ್ಯಾತಿಯನ್ನು ಪರಿಗಣಿಸಿ, ಬೆಂಗಳೂರಿನ 64 ನೇ CCH ಸೆಷನ್ಸ್ ನ್ಯಾಯಾಲಯವು ರನ್ಯಾ ರಾವ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ರನ್ಯಾ ರಾವ್ ಪ್ರಕರಣದಲ್ಲಿ ಅಂತರರಾಷ್ಟ್ರೀಯ ಸಂಪರ್ಕಗಳಿವೆ, ಕಸ್ಟಮ್ಸ್ ನಿಯಮಗಳನ್ನು ಉಲ್ಲಂಘಿಸಲಾಗಿದೆ ಮತ್ತು ರನ್ಯಾ ರಾವ್‌ಗೆ ಜಾಮೀನು ನೀಡುವುದರಿಂದ ಸಾಕ್ಷ್ಯ ನಾಶ ಮತ್ತು ತನಿಖೆಗೆ ಅಡ್ಡಿಯಾಗುವ ಸಾಧ್ಯತೆ ಇದೆ ಎಂದು ನ್ಯಾಯಾಲಯ ಹೇಳಿದೆ. ರನ್ಯಾ ರಾವ್ ಒಂದು ವರ್ಷದಲ್ಲಿ ಇಪ್ಪತ್ತೇಳು ಬಾರಿ ವಿದೇಶಕ್ಕೆ ಹೋಗಿದ್ದಾರೆ. ಶೇ. ಮೂವತ್ತೆಂಟುರಷ್ಟು ಕಸ್ಟಮ್ಸ್ ಸುಂಕವನ್ನು ವಿಧಿಸಲಾಗಿತ್ತು. ಒಟ್ಟು ರೂ. 4,83,72,694 ತೆರಿಗೆ ವಂಚನೆ ಮಾಡಲಾಗಿದೆ. ಜಾಮೀನು ನೀಡಿದರೆ, ಅವರು ದೇಶ ಬಿಟ್ಟು ಹೋಗುವ ಸಾಧ್ಯತೆ ಇದೆ. ಪ್ರಕರಣದಲ್ಲಿ ಪ್ರಭಾವಿ ವ್ಯಕ್ತಿಗಳು ಭಾಗಿಯಾಗಿರುವ ಸಾಧ್ಯತೆ ಇದ್ದು, ತನಿಖೆಯನ್ನು ಬೇರೆಡೆಗೆ ತಿರುಗಿಸುವ ಸಾಧ್ಯತೆ ಇದೆ ಎಂದು ತಿಳಿಸಿದ ನ್ಯಾಯಾಲಯ, ಜಾಮೀನು ಅರ್ಜಿಯನ್ನು…
ಕೊಪ್ಪಳ : ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಉಚ್ಚಾಟನೆಯಿಂದ ಕಾರ್ಯಕರ್ತರಿಗೆ ಎಚ್ಚರಿಕೆ ಸಂದೇಶ ರವಾನೆಯಾಗಿದೆ ಎಂದು ಶಾಸಕ ಜನಾರ್ದನ ರೆಡ್ಡಿ ಪ್ರತಿಕ್ರಿಯಿಸಿದ್ದಾರೆ. ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತ್ನಾಳ್ ಅವರು ವಾಜಪೇಯಿ ಅವರ ಕಾಲದಿಂದ ಇದ್ದವರು, ಪಕ್ಷಕ್ಕಾಗಿ ಅವರು ಕೂಡಾ ದುಡದಿದ್ದಾರೆ. ಆದರೆ ಪಕ್ಷ ಅವರಿಗೆ ಎರಡು ಬಾರಿ ಸುಧಾರಣೆಗೆ ಅವಕಾಶ ನೀಡಿತ್ತು. ಉಚ್ಚಾಟನೆ ವಿಚಾರದಲ್ಲಿ ಪಾರ್ಟಿ ನಿರ್ಣಯವೇ ಅಂತಿಮ ಎಂದರು. https://www.youtube.com/watch?v=dashV_C7m1M ಯತ್ನಾಳ್ ಅವರು ಪಕ್ಷದ ಇತಿಮಿತಿಯಲ್ಲಿ ಕೆಲಸ ಮಾಡಬೇಕಿತ್ತು, ಪಕ್ಷದ ಶಿಸ್ತನ್ನು ಬಿಡಬಾರದಿತ್ತು. ಎಲ್ಲೋ ಒಂದುಕಡೆ ಅವರು ಎಡವಿದ್ರು ಅಂತ ಅನ್ಸುತ್ತೆ. ಬಿಜೆಪಿ ರೆಡ್ಡಿ, ಯತ್ನಾಳ್, ವಿಜಯೇಂದ್ರ ಮೇಲೆ ಇಲ್ಲಾ, ಅದು ತಳಮಟ್ಟದ ಕಾರ್ಯಕರ್ತರ ಮೇಲೆ ನಿಂತಿದೆ. ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ವಿತ್ತು. ಅದು ಇದೀಗ ನಿವಾರಣೆಯಾಗಿದೆ. ಯಾರೇ ಪಕ್ಷದ ಶಿಸ್ತನ್ನು ಉಲ್ಲಂಘನೆಯ ಮಾಡಿದ್ರು ಇದೇ ಕ್ರಮವಾಗುತ್ತೆ ಅಂತ ಸಂದೇಶ ರವಾನೆಯಾಗಿದೆ ಎಂದರು. ಇನ್ನೂ ಸತೀಶ್ ಜಾರಕಿಹೊಳಿ ಕುಮಾರಸ್ವಾಮಿ ಬೇಟಿ…