ಬೆಂಗಳೂರು: ಬೆಲೆ ಏರಿಕೆಯ ಬರೆ ನಡುವೆ ರಾಜ್ಯದ ಜನರಿಗೆ ಕರೆಂಟ್ ಶಾಕ್ ಫಿಕ್ಸ್ ಆಗಿದೆ. ಪ್ರತಿ ಯೂನಿಟ್‌ಗೆ 36 ಪೈಸೆ ಏರಿಕೆ ಮಾಡಿ ಕೆಇಆರ್‌ಸಿ ಆದೇಶ ಹೊರಡಿಸಿದೆ. ಹಾಲಿನ ದರ ಏರಿಕೆಯಿಂದ ಶಾಕ್ ಆಗಿದ್ದ ಜನರಿಗೆ ಇದೀಗ ಕರೆಂಟ್ ಶಾಕ್‌ನ ಭೀತಿ ಶುರುವಾಗಿದೆ. ಈ ಬಗ್ಗೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್‌ಸಿ) ಇಂದು ಅಧಿಕೃತ ಆದೇಶ ಹೊರಡಿಸಿದೆ. https://ainkannada.com/according-to-vastu-sleep-in-this-direction-you-will-get-unexpected-luck-in-life/ ಯೂನಿಟ್‍ಗೆ 49 ಪೈಸೆ ಏರಿಕೆ ಮಾಡುವಂತೆ ಡಿಸೆಂಬರ್ ಕೊನೆಯ ವಾರದಲ್ಲಿ ಎಸ್ಕಾಂಗಳು ಕೆಇಆರ್‌ಸಿ ಪ್ರಸ್ತಾವನೆ ಸಲ್ಲಿಸಿದ್ದವು. ಪ್ರಸ್ತಾವನೆಯಂತೆ ಉತ್ಪಾದನೆಯ ಖರ್ಚು-ವೆಚ್ಚ ಮತ್ತು ನಿರ್ವಹಣೆಯ ನಷ್ಟ ಸರಿದೂಗಿಸುವ ನಿಟ್ಟಿನಲ್ಲಿ ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಹೀಗಾಗಿ ಇಂದು ಕೆಇಆರ್‌ಸಿ ಅಧಿಕೃತವಾಗಿ ಪ್ರತಿ ಯೂನಿಟ್ ವಿದ್ಯುತ್ಗೆ 36 ಪೈಸೆ ಏರಿಕೆ ಮಾಡಿ ಆದೇಶ ಹೊರಡಿಸಿದೆ. ಏಪ್ರಿಲ್ 1 ರಿಂದಲೇ ಹೊಸ ದರ ಜಾರಿಯಾಗಲಿದ್ದು, ರಾಜ್ಯದ ಜನರಿಗೆ ವಿದ್ಯುತ್ ದರದ ಬಿಸಿ ತಟ್ಟಲಿದೆ.
Author: Author AIN
ದಕ್ಷಿಣ ಕನ್ನಡ : ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ, ನಗರ ಸಭೆ, ಪುರಸಭೆಗಳ ಪೌರಕಾರ್ಮಿಕರ ಮಹಾ ಸಂಘವು ಎ.3ರಂದು ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಬೃಹತ್ ಸಮಾವೇಶವನ್ನು ಹಮ್ಮಿಕೊಂಡಿದೆ. https://ainkannada.com/accident-on-ben-mai-express-highway-service-road-three-dead/ ಈ ಕುರಿತು ಮಂಗಳೂರು ನಗರದ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಸಂಘದ ದ.ಕ. ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಪೌರಕಾರ್ಮಿಕರನ್ನು ನೇರಪಾವತಿ ವ್ಯವಸ್ಥೆಯಡಿ ತರಲಾಗಿದೆ ಎಂದರು. ಪಾಲಿಕೆಯ 462 ಪೌರಕಾರ್ಮಿಕರು, ಕಸ ಸಾಗಣೆ ವಾಹನಗಳ 157 ಚಾಲಕರು, 127 ಲೋಡರ್‌ಗಳು ಹಾಗೂ ಜಿಲ್ಲೆಯ ಇತರ ನಗರ ಸ್ಥಳೀಯ ಸಂಸ್ಥೆಗಳ ಪೌರಕಾರ್ಮಿಕರು ಸೇರಿ ನಮ್ಮ ಜಿಲ್ಲೆಯಲ್ಲಿ 671 ಮಂದಿಯ ಕೆಲಸ ಖಾಯಂಗೊಳ್ಳಬೇಕಿದೆ. ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕುರಿತು ಶುಭ ಸುದ್ದಿ ನೀಡುವ ನಿರೀಕ್ಷೆ ಇದೆ ಎಂದರು. ದೇಶದ ವಿವಿಧ ಭಾಗಗಳ ಸುಮಾರು 60 ಸಾವಿರ ಪೌರಕಾರ್ಮಿಕರು ಭಾಗವಹಿಸುವರು. ನಮ್ಮ ಜಿಲ್ಲೆಯಿಂದ 400 ಮಂದಿ ಭಾಗವಹಿಸಲಿದ್ದೇವೆ ಎಂದು ತಿಳಿಸಿದರು.
ತಮಿಳು ನಟಿ ಶ್ರುತಿ ನಾರಾಯಣನ್ ಅವರನ್ನು ತೋರಿಸಲಾಗಿದೆ ಎನ್ನಲಾದ 14 ನಿಮಿಷಗಳ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದ್ದು, ವಿವಾದಕ್ಕೆ ಕಾರಣವಾಗಿದೆ. ತಮಿಳು ಚಿತ್ರರಂಗದಲ್ಲಿನ ಕಾಸ್ಟಿಂಗ್ ಕೌಚ್ ಪದ್ಧತಿಗಳನ್ನು ಚಿತ್ರಿಸುತ್ತದೆ ಎಂದು ಹೇಳಲಾದ ಪರಿಶೀಲಿಸದ ದೃಶ್ಯಗಳು ಆಡಿಷನ್ ಸಮಯದಲ್ಲಿ ಸೋರಿಕೆಯಾಗಿವೆ ಎಂದು ವರದಿಯಾಗಿದೆ. ಕಿರಿ ಧಾರಾವಾಹಿ, ರಿಯಾಲಿಟಿ ಶೋಗಳ ಮೂಲಕ ಸಾಕಷ್ಟು ಸಂಖ್ಯೆಯ ಅಭಿಮಾನಿಗಳನ್ನು ಶ್ರುತಿ ನಾರಾಯಣ್ ಹೊಂದಿದ್ದಾರೆ. ಇದೀಗ ಲೀಕ್ ಆಗಿರುವ ವಿಡಿಯೋ, ಕಾಸ್ಟಿಂಗ್ ಕೌಚ್ ವಿಡಿಯೋ ಎನ್ನಲಾಗುತ್ತಿದೆ. ಪಾತ್ರವೊಂದನ್ನು ಪಡೆಯಲು ನಟಿ ಹೀಗೆಲ್ಲ ಮಾಡಿದ್ದು, ಅದನ್ನು ಯಾರೋ ರೆಕಾರ್ಡ್ ಮಾಡಿಕೊಂಡು ಇದೀಗ ವೈರಲ್ ಮಾಡಿದ್ದಾರೆ ಎಂಬ ವಾದಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬರುತ್ತಿವೆ. https://ainkannada.com/according-to-vastu-sleep-in-this-direction-you-will-get-unexpected-luck-in-life/ ಶ್ರುತಿ ನಾರಾಯಣ್, ಕೆಲವು ಧಾರಾವಾಹಿ ಹಾಗೂ ಕೆಲವು ಜನಪ್ರಿಯ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ತಮಿಳಿನ ಸೂಪರ್ ಹಿಟ್ ಧಾರಾವಾಹಿ ‘ಕಾರ್ತಿಕ ದೀಪಂ’ನಲ್ಲಿ ಶ್ರುತಿ ನಾರಾಯಣ್ ನಟಿಸಿದ್ದಾರೆ. ಅದರ ಹೊರತಾಗಿ ‘ಮಾರಿ’ ಸಿನಿಮಾದಲ್ಲಿಯೂ ಶ್ರುತಿ ನಟಿಸಿದ್ದರು. ಸಮಂತಾ ಹಾಗೂ ವರುಣ್ ಧವನ್ ನಟಿಸಿರುವ ವೆಬ್ ಸರಣಿ ‘ಸಿಟಾಡೆಲ್: ಹನಿ…
ಉತ್ತರ ಪ್ರದೇಶದ ಸಂತ ಕಬೀರ್ ನಗರ ಜಿಲ್ಲೆಯಲ್ಲಿ ನಡೆದ ಅಚ್ಚರಿಯ ಘಟನೆಯೊಂದು ನಡೆದಿದೆ. ವ್ಯಕ್ತಿಯೊಬ್ಬ ತನ್ನ ಪತ್ನಿಯ ಅಕ್ರಮ ಸಂಬಂಧದ ಬಗ್ಗೆ ತಿಳಿದ ನಂತರ ಆಕೆಯ ಪ್ರಿಯಕರ ಜೊತೆ ಮದುವೆ ಮಾಡಿಸಿದ್ದಾನೆ. ಹೌದು 2017ರಲ್ಲಿ ಬಬ್ಲೂ ಹಾಗೂ ರಾಧಿಕಾ ವಿವಾಹವಾಗಿದ್ದು, ದಂಪತಿಗೆ ಏಳು ಹಾಗೂ ಒಂಬತ್ತು ವರ್ಷದ ಇಬ್ಬರು ಮಕ್ಕಳಿದ್ದಾರೆ. ತಮ್ಮ ಜೀವನೋಪಾಯಕ್ಕಾಗಿ ಬಬ್ಲೂ ಹೆಚ್ಚಿನ ಸಮಯ ಮನೆಯಿಂದ ದೂರವಿದ್ದು, ಕೆಲಸ ಮಾಡುತ್ತಿದ್ದರು. ಈ ವೇಳೆ ರಾಧಿಕಾ ಅದೇ ಹಳ್ಳಿಯ ಓರ್ವ ಯುವಕನನ್ನು ಇಷ್ಟಪಡಲು ಪ್ರಾರಂಭಿಸಿದ್ದಳು. ಬಳಿಕ ಇದು ಪ್ರೀತಿಗೆ ತಿರುಗಿ ಇಬ್ಬರ ನಡುವೆ ಸಂಬಂಧ ಬೆಳೆದಿತ್ತು. https://ainkannada.com/according-to-vastu-sleep-in-this-direction-you-will-get-unexpected-luck-in-life/ ದೀರ್ಘಕಾಲದಿಂದ ನಡೆದಿದ್ದ ಈ ಅಕ್ರಮ ಸಂಬಂಧದ ಬಗ್ಗೆ ಒಂದು ದಿನ ಬಬ್ಲೂ ಕುಟುಂಬದವರಿಗೆ ತಿಳಿಯಿತು. ಬಳಿಕ ವಿಷಯ ತಿಳಿದ ಬಬ್ಲೂ ರಾಧಿಕಾಗೆ ಒಂದು ಆಯ್ಕೆ ನೀಡಿದನು. ಪ್ರಿಯಕರ ಅಥವಾ ಪತಿ ಎಂಬ ಆಯ್ಕೆ ನೀಡಿದಾಗ ರಾಧಿಕಾ ಪ್ರಿಯಕರನನ್ನು ಆರಿಸಿಕೊಂಡಳು. ಇದನ್ನು ಒಪ್ಪಿದ ಬಬ್ಲೂ ಪ್ರಿಯಕರನೊಂದಿಗೆ ಮದುವೆ ನಿಶ್ಚಯಿಸಿ, ಹಳ್ಳಿಯ ಜನರಿಗೆ ತಿಳಿಸಿದ.…
ಲೂಸಿಫರ್ ಚಿತ್ರವು ಪೃಥ್ವಿರಾಜ್ ಸುಕುಮಾರನ್ ನಿರ್ದೇಶನದ ಮೋಹನ್ ಲಾಲ್ ನಾಯಕನಾಗಿ ನಟಿಸಿರುವ ಚಿತ್ರ. ಐದು ವರ್ಷಗಳ ಹಿಂದೆ ಬಿಡುಗಡೆಯಾದ ಈ ಚಿತ್ರ ಮಲಯಾಳಂನಲ್ಲಿ ಮೊದಲ ಬಾರಿಗೆ 150 ಕೋಟಿ ಗಳಿಸುವ ಮೂಲಕ ಇತಿಹಾಸ ಸೃಷ್ಟಿಸಿತು. ಈಗ ಈ ಚಿತ್ರಕ್ಕೆ ಉತ್ತರಭಾಗ ಬಂದಿದೆ. ಮತ್ತು ಎಂಪುರಾನ್ ಚಿತ್ರ ಹೇಗಿದೆ? ಮತ್ತೊಮ್ಮೆ ನಿಮಗೆ ಇಷ್ಟವಾಗುತ್ತದೆಯೇ ಎಂದು ನೋಡೋಣ..ಮೋಹನ್ ಲಾಲ್, ಟೋವಿನೋ ಥಾಮಸ್, ಪೃಥ್ವಿರಾಜ್ ಸುಕುಮಾರನ್, ಮಂಜು ವಾರಿಯರ್, ಸಾಯಿ ಕುಮಾರ್, ಅಭಿಮನ್ಯು ಸಿಂಗ್, ಇಂದ್ರಜೀತ್ ಸುಕುಮಾರನ್ ಮತ್ತು ಇತರರು ಸಂಪಾದಕ: ಅಖಿಲೇಶ್ ಮೋಹನ್ ಛಾಯಾಗ್ರಹಣ: ಸುಜೀತ್ ವಾಸುದೇವ್ ಸಂಗೀತ: ದೀಪಕ್ ದೇವ್ ಕಥೆ, ಚಿತ್ರಕಥೆ: ಮುರಳಿ ಗೋಪಿ ನಿರ್ದೇಶಕ: ಪೃಥ್ವಿರಾಜ್ ಸುಕುಮಾರನ್ ನಿರ್ಮಾಪಕರು: ಸುಭಾಸ್ಕರನ್, ಗೋಕುಲಂ ಗೋಪಾಲನ್, ಆಂಟನಿ ಪೆರುಂಬವೂರ್ ಲೂಸಿಫರ್ ಚಿತ್ರವು ಪೃಥ್ವಿರಾಜ್ ಸುಕುಮಾರನ್ ನಿರ್ದೇಶನದ ಮೋಹನ್ ಲಾಲ್ ನಾಯಕನಾಗಿ ನಟಿಸಿರುವ ಚಿತ್ರ. ಐದು ವರ್ಷಗಳ ಹಿಂದೆ ಬಿಡುಗಡೆಯಾದ ಈ ಚಿತ್ರ ಮಲಯಾಳಂನಲ್ಲಿ ಮೊದಲ ಬಾರಿಗೆ 150 ಕೋಟಿ ಗಳಿಸುವ ಮೂಲಕ ಇತಿಹಾಸ…
‘ಕಿರಿಕ್ ಪಾರ್ಟಿ’ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಕೊಡಗಿನ ಕುವರಿ, ಕರ್ನಾಟಕದ ಸುಂದರಿ ರಶ್ಮಿಕಾ ಮಂದಣ್ಣ ಸದ್ಯ ಟಾಲಿವುಡ್ ಸೇರಿ ಬಾಲಿವುಡ್ ನಲ್ಲೂ ಸಖತ್ ಮಿಂಚುತ್ತಿದ್ದಾರೆ. ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಪ್ರಸ್ತುತ ವಿಶ್ವದಾದ್ಯಂತ ಟ್ರೆಂಡಿಂಗ್ ಮಾಡುತ್ತಿರುವ ಹೆಸರು. ಅನಿಮಲ್ ಮತ್ತು ಪುಷ್ಪ 2 ಚಿತ್ರಗಳೊಂದಿಗೆ ಬ್ಲಾಕ್‌ಬಸ್ಟರ್‌ಗಳನ್ನು ಪಡೆದ ಈ ಸುಂದರಿ, ಇತ್ತೀಚೆಗೆ ಚಾವಾ ಚಿತ್ರದೊಂದಿಗೆ ಮತ್ತೊಂದು ಯಶಸ್ಸನ್ನು ಗಳಿಸಿದರು. ಇದರೊಂದಿಗೆ, ಮೂರು ಪ್ಯಾನ್ ಇಂಡಿಯಾ ಚಿತ್ರಗಳು ಒಟ್ಟಾರೆಯಾಗಿ ರೂ.ಗಳಿಗೂ ಹೆಚ್ಚು ಗಳಿಸಿವೆ. ಕಳೆದ ಎರಡು ವರ್ಷಗಳಲ್ಲಿ 3,000 ಕೋಟಿ ರೂ.ಗಳಷ್ಟು ಆದಾಯ ಗಳಿಸಿ, ಹೊಸ ದಾಖಲೆಯನ್ನು ಸೃಷ್ಟಿಸಿದೆ. ಇದಲ್ಲದೆ, ಈ ನಟಿ ಪ್ರಸ್ತುತ ತೆಲುಗು ಮತ್ತು ಹಿಂದಿಯಲ್ಲಿ ಸರಣಿ ಚಿತ್ರಗಳಲ್ಲಿ ನಟಿಸುವುದರಲ್ಲಿ ನಿರತರಾಗಿದ್ದಾರೆ. ಇತ್ತೀಚೆಗೆ ಸಿಕಂದರ್ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದರು. ಸಲ್ಮಾನ್ ಖಾನ್ ನಟಿಸಿ, ಎ.ಆರ್. ಮುರುಗದಾಸ್ ನಿರ್ದೇಶನದ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಏತನ್ಮಧ್ಯೆ, ಇತ್ತೀಚಿನ ಫೋರ್ಬ್ಸ್ ವರದಿಯು ರಶ್ಮಿಕಾ ಅವರ ಗಳಿಕೆಯನ್ನು…
ತುಮಕೂರು: ಮಲಮಗನ ಕೊಂದು ಹಾವು ಕಚ್ಚಿದೆ ಎಂದು ನಾಟಕವಾಡಿದ್ದವ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಮೂರು ವರ್ಷದ ಮಿಥುನ್ ಗೌಡ ಕೊಲೆಯಾದ ಮಗುವಾಗಿದ್ದು, ಚಂದ್ರಶೇಖರ್ ಕೊಲೆ ಆರೋಪಿ. ಚಾಮರಾಜನಗರ ಮೂಲದ ಕಾವ್ಯಾಗೆ ಈ ಹಿಂದೆ ಮದುವೆಯಾಗಿದ್ದು, ಒಬ್ಬ ಮಿಥುನ್ ಗೌಡ ಎಂಬ ಮಗ ಕೂಡ ಇದ್ದ. ಆದರೆ ದಾಂಪತ್ಯದಲ್ಲಿ ಬಿರುಕು ಉಂಟಾಗಿ ಗಂಡನನ್ನು ತೊರೆದಿದ್ದಳು. ಕಳೆದ ಕೆಲವು ವರ್ಷಗಳಿಂದ ಕಾವ್ಯಾ ತನ್ನ ಮಗನೊಂದಿಗೆ ಚಂದ್ರಶೇಖರ್ ಜತೆಗೆ ವಾಸವಿದ್ದರು. ತಾಲೂಕಿನ ಉರ್ಡಿಗೆರೆ ಹೋಬಳಿಯ ಸಿದ್ಧಲಿಂಗಯ್ಯನಪಾಳ್ಯದಲ್ಲಿ ವಾಸಿಸುತ್ತಿದ್ದರು. https://ainkannada.com/accident-on-ben-mai-express-highway-service-road-three-dead/ ಕಾವ್ಯ ಮತ್ತು ಚಂದ್ರಶೇಖರ್ ನಡುವೆ ಮಗನ ವಿಚಾರಕ್ಕೆ ಆಗಾಗ ಗಲಾಟೆಯಾಗುತ್ತಿತ್ತು. ಮಾ.20ರಂದು ಕಾವ್ಯಾ ಕೆಲಸಕ್ಕೆ ಹೋಗಿದ್ದಾಗ ಮನೆಯಲ್ಲಿದ್ದ ಮಗು ಮೇಲೆ ಚಂದ್ರಶೇಖರ್ ಹಲ್ಲೆ ಮಾಡಿದ್ದು, ಪ್ರಜ್ಞೆ ತಪ್ಪಿತ್ತು. ಹಾವು ಕಚ್ಚಿದೆ ಎಂದು ನಾಟಕವಾಡಿ ಆಸ್ಪತ್ರೆಗೆ ದಾಖಲಿಸಿದ್ದಾನೆ. ಆ ಬಳಿಕ ಮಗುವಿನ ಅಂತ್ಯ ಸಂಸ್ಕಾರವು ನಡೆದಿದೆ. ಅಂತ್ಯ ಸಂಸ್ಕಾರದ ವೇಳೆ ಗ್ರಾಮಸ್ಥರು ಫೋಟೋ ತೆಗೆದಿದ್ದು, ಅದನ್ನು ನೋಡಿದಾಗ ಮಗುವಿನ ಸಾವಿನ ಬಗ್ಗೆ ಅನುಮಾನ ಬಂದಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ.…
ಬೆಂಗಳೂರು: ರಾಜ್ಯದ ಹಾಲು ಉತ್ಪಾದಕರಿಗೆ ನೆರವು ನೀಡುವ ನೆಪದಲ್ಲಿ ರಾಜ್ಯ ಸರ್ಕಾರ ಕೆಎಂಎಫ್ ನಂದಿನಿ ಹಾಲಿನ ದರವನ್ನು 4 ರೂ. ಏರಿಕೆ ಮಾಡಲಾಗಿದೆ. ನೂತನ ಹಾಲಿನ ದರ ಏಪ್ರಿಲ್ 1ರಿಂದಲೇ ಜಾರಿಗೆ ಬರಲಿದೆ. ಸಂಪುಟ ಸಭೆ ಬಳಿಕ ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್, ಸಹಕಾರ ಸಚಿವ ಕೆ.ಎನ್ ರಾಜಣ್ಣ ಜಂಟಿ ಸುದ್ದಿಗೋಷ್ಠಿ ನಡೆಸಿ ನಂದಿನಿ ಹಾಲಿನ ದರ ಏರಿಕೆ ನಿರ್ಧಾರವನ್ನು ಪ್ರಕಟಿಸಿದರು. ಹಾಲು ಉತ್ಪಾದನೆ ಮಾಡುವ ರೈತರಿಗೆ ಅನುಕೂಲ ಕಲ್ಪಿಸಲು ನಂದಿನಿ ಹಾಲಿನ ದರ ಏರಿಕೆ ಮಾಡಲಾಗಿದ್ದು, ಎಲ್ಲಾ ಹೆಚ್ಚಳದ ಹಣ ರಾಜ್ಯದ ರೈತರಿಗೆ ವರ್ಗವಣೆಯಾಗಲಿದೆ ಎಂದು ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಹೇಳಿದ್ದಾರೆ. ಬಹಳ ದಿನಗಳಿಂದ ಹಾಲಿನ ದರ ಏರಿಕೆಗೆ ರೈತರಿಂದ ಒತ್ತಡ ಇತ್ತು. ಹೀಗಾಗಿ ಸಿಎಂ ಜೊತೆ ಮಾತನಾಡಿ ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಲಾಗಿದೆ ಎಂದು ಹೇಳಿದರು. ಹಾಲಿನ ದರದ ಹೆಚ್ಚಳ ಪಟ್ಟಿ- ಪ್ರತಿ ಲೀಟರ್ ಗೆ.. ಟೋನ್ಡ್ ಹಾಲು ನೀಲಿ ಪೊಟ್ಟಣ ಹಳೆಯ ದರ- 42 ಹೊಸ ದರ- 46…
ಮಾತು ಆಡಿದರೆ ಹೋಯ್ತು ಮುತ್ತು ಒಡೆದರೆ ಹೋಯ್ತು ಹಿರಿಯರು ಹೇಳುವ ಈ ಗಾದೆ ಮಾತು ಕಿವಿಮೇಲೆ ಹಾಕಿಕೊಂಡು ಮಾತಾಡಿದ್ದರೆ ಇವತ್ತು ಬಿಗ್ ಬಾಸ್ ಮಾಜಿ ಸ್ಪರ್ಧಿ ರಕ್ಷಕ್ ಬುಲೆಟ್ ಗೆ ಸಂಕಷ್ಟ ಬರುತ್ತಿರಲಿಲ್ಲವೇನು. ಮೊದಲಿನಿಂದಲೂ ಈ ಹುಡ್ಗ ಆಡುವ ಮಾತುಗಳು ಟ್ರೋಲ್ ಆಗುತ್ತಲೇ ಇರುತ್ತವೆ. ಟ್ರೋಲ್ ಆದ್ರೆ ಸಮಸ್ಯೆ ಇಲ್ಲ ಹಲವರ ಭಾವನೆಗಳಿಗೆ ಧಕ್ಕೆ ತಂದರೆ ಸಂಕಷ್ಟವೇ. ಖಾಸಗಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ರಕ್ಷಕ್ ಬುಲೆಟ್ ಅವಹೇಳನಕಾರಿಯಾಗಿ ಮಾತನಾಡಿದ್ದು ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ. https://www.instagram.com/p/DHsgfsHvUQ-/?utm_source=ig_embed&ig_rid=a2621cba-2cfa-4513-a6f1-993298a4cbdd ಇದೀಗ ನಾಡದೇವಿ ಚಾಮುಂಡೇಶ್ವರಿಗೆ ಅವಮಾನ ಮಾಡಿದ್ದಾರೆ ಎಂದು ದೇವಿ ಆರಾಧಕರು ಮತ್ತು ಹಿಂದೂ ಸಂಘಟನೆಗಳು ತಿರುಗಿಬಿದ್ದಿದ್ದರು. ಈ ಬೆನ್ನಲ್ಲೇ ರಕ್ಷಕ್ ಕ್ಷಮೆಯಾಚಿಸಿದ್ದಾರೆ. ಯಾರಿಗಾದರೂ ಬೇಸರವಾಗಿದ್ದಲ್ಲಿ ನಾನು ಕ್ಷಮೆಯಾಚಿಸುತ್ತೇನೆ. ಮುಂದೆ ಇಂತಹ ಆಚಾತುರ್ಯ ನಡೆಯೋದಿಲ್ಲ ಎಂದು ಮನವಿ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ನಟ ಪೋಸ್ಟ್ ಮಾಡಿ ನಾನು ನಿಮ್ಮ ರಕ್ಷಕ್ ಬುಲೆಟ್, ಇತ್ತೀಚೆಗೆ ಒಂದು ರಿಯಾಲಿಟಿ ಶೋನಲ್ಲಿ ನಾನು ಒಂದು ಹೆಸರಾಂತ ಚಿತ್ರದ ಡೈಲಾಗ್ ಅನ್ನು ಒಂದು…
ಮಾಲಿವುಡ್ ಬಹುನಿರೀಕ್ಷಿತ ಸಿನಿಮಾ ‘ಎಲ್ 2 ಎಂಪುರಾನ್’ ಇಂದು ತೆರೆಗೆ ಬಂದಿದೆ. ಈಗಾಗಲೇ ನಾನಾ ರಾಜ್ಯದಲ್ಲಿ ಅದ್ಧೂರಿಯಾಗಿ ಪ್ರಚಾರ ಮಾಡಿರುವ ಚಿತ್ರತಂಡ ಇಂದು ಬೆಂಗಳೂರಿನಲ್ಲಿ ಪ್ರಚಾರ ನಡೆಸಿದೆ. ನಗರದ ಓರಿಯಾನ್ ಮಾಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಲಿವುಡ್ ಸೂಪರ್ ಸ್ಟಾರ್ ಮೋಹನ್ ಲಾಲ್, ಚಿತ್ರದ ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್, ನಟಿ ಮಂಜು ವಾರಿಯರ್, ನಟ ಟೊವಿನೋ ಥಾಮಸ್ ಭಾಗಿಯಾಗಿದ್ದರು. ಈ ವೇಳೆ ಸಿನಿಮಾದ ಬಗ್ಗೆ ಸಾಕಷ್ಟು ಮಾಹಿತಿ ಹಂಚಿಕೊಂಡರು. ಪೃಥ್ವಿರಾಜ್ ಸುಕುಮಾರನ್ ನಿರ್ದೇಶಿಸಿ ನಟಿಸಿರುವ ‘ಎಲ್-2:ಎಂಪುರಾನ್’ ಇಂದು ಮಲಯಾಳಂ, ತೆಲುಗು, ತಮಿಳು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಲೂಸಿಫರ್ ಸೀಕ್ವೆಲ್ ಆಗಿರುವುದರಿಂದ ಈ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ. ಪೃಥ್ವಿರಾಜ್ ಸುಕುಮಾರನ್ ಈ ಚಿತ್ರಕ್ಕೆ ಸ್ಯಾಂಡಲ್ವುಡ್ನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲ್ಮ್ಸ್ ಸಾಥ್ ನೀಡಿದೆ. ಕರ್ನಾಟಕದಾದ್ಯಂತ ಹೊಂಬಾಳೆ ಫಿಲಂಸ್ ಸಂಸ್ಥೆಯ ವಿಜಯ್ ಕಿರಗಂದೂರ್ ‘ಎಲ್-2:ಎಂಪುರಾನ್’ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ. L2E: ಎಂಪುರಾನ್ ಚಿತ್ರಕ್ಕೆ ಕಥೆ ಮುರಳಿ…