Author: Author AIN

ವಿಜಯಪುರ : ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆ ಬೆನ್ನಲ್ಲೇ ಬೆಂಬಲಿಗರ ರಾಜೀನಾಮೆ ಪರ್ವ ಮುಂದುವರೆದಿದೆ. ಬಿಜೆಪಿ ನಗರ ಮಂಡಲ ಅಧ್ಯಕ್ಷ , ಬಿಜೆಪಿ ನಗರ ಮಂಡಲ ಎಸ್ ಟಿ ಮೋರ್ಚಾ ಅಧ್ಯಕ್ಷ, ನಗರ ಮಂಡಲ ರೈತ ಮೊರ್ಚಾ ಅಧ್ಯಕ್ಷರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. https://ainkannada.com/i-have-also-been-served-with-a-notice-i-will-give-a-proper-reply-st-somashekar/ ನಗರ ಮಂಡಲ ರೈತ ಮೊರ್ಚಾ ಅಧ್ಯಕ್ಷ ಸ್ಥಾನಕ್ಕೆ ಪ್ರವೀಣ ನಾಟೀಕಾರ, ರೈತ ಮೊರ್ಚಾ ನಗರ ಮಂಡಲ‌ ಅಧ್ಯಕ್ಷ ರಾಚು ಬಿರಾದಾರ ಹಾಗೂ ಬಿಜೆಪಿ ನಗರ ಮಂಡಲ ಅಧ್ಯಕ್ಷ ಸ್ಥಾನಕ್ಕೆ ಶಂಕರ್ ಹೂಗಾರ್ ನಗರ ಮಂಡಲ ಯುವ ಮೊರ್ಚಾ ಉಪಾಧ್ಯಕ್ಷ ಸ್ಥಾನಕ್ಕೆ ನಂದು ಗಡಗಿ, ನಗರ ಮಂಡಲ ಒಬಿಸಿ ಮೊರ್ಚಾ ಉಪಾಧ್ಯಕ್ಷ ಸ್ಥಾನಕ್ಕೆ ಭೀಮು‌ ಮಾಶ್ಯಾಳ , ಒಬಿಸಿ ನಗರ ಮಂಡಲ ಪ್ರಧಾನ‌ ಕಾರ್ಯದರ್ಶಿ ಪಿಂಟು ಚೋರಗಿ , ನಗರ ಮಂಡಲ ಉಪಾಧ್ಯಕ್ಷ ಸ್ಥಾನಕ್ಕೆ ಬಸವರಾಜ್ ಗೊಳಸಂಗಿ‌, ನಗರ ಮಂಡಲ ಕಾರ್ಯಾಲಯ ಕಾರ್ಯದರ್ಶಿ ಅಮೀತ ಗರುಡಕರ ಸೇರಿದಂತೆ ಹಲವರು ತಮ್ಮ ರಾಜೀನಾಮೆ…

Read More

ಬೆಂಗಳೂರು: ಯತ್ನಾಳ್ ಉಚ್ಚಾಟನೆ ಬಿಜೆಪಿಯ ವೈಯಕ್ತಿಕ ವಿಚಾರ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಯತ್ನಾಳ್ ಉಚ್ಚಾಟನೆ ಬಿಜೆಪಿಯ ವೈಯಕ್ತಿಕ ವಿಚಾರ. ನಾವು ಅದರ ಬಗ್ಗೆ ಮಾತಾಡಲ್ಲ. ಅವರ ಪಾರ್ಟಿ ಅವರು ಅವರನ್ನು ಇಟ್ಟುಕೊಳ್ತಾರೋ, ತೆಗೆದು ಹಾಕ್ತಾರೋ ನಮಗೆ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಯತ್ನಾಳ್ ಅವರು ಕುಟುಂಬ ರಾಜಕೀಯ, ಭ್ರಷ್ಟರ ವಿರುದ್ದ ‌ಹೋರಾಟ ಮಾಡ್ತಿದ್ದರು. ಈಗ ಯತ್ನಾಳ್ ಅವರ ಬಿಜೆಪಿ ಶುದ್ಧೀಕರಣ ಹೋರಾಟಕ್ಕೆ ಕೇಂದ್ರದ ಹೈಕಮಾಂಡ್ ಜಟ್ಕಾ ಕಟ್ ಹೊಡೆದಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. https://ainkannada.com/according-to-vastu-sleep-in-this-direction-you-will-get-unexpected-luck-in-life/ ಕೇಂದ್ರ ಬಿಜೆಪಿ ನಾಯಕರು ಯತ್ನಾಳ್ ಅವರನ್ನು ಉಚ್ಚಾಟನೆ ಮಾಡಿ ಸ್ಪಷ್ಟ ಸಂದೇಶ ಕೊಟ್ಟಿದ್ದಾರೆ. ನಮಗೆ ಭ್ರಷ್ಟಾಚಾರ, ಕುಟುಂಬ ರಾಜಕೀಯ ಇಷ್ಟ ಎಂದು ತಿಳಿಸಿದ್ದಾರೆ. ಫೋಕ್ಸೋ ಆರೋಪ ಇರೋರ ನೇತ್ರತ್ವದಲ್ಲಿ ಚುನಾವಣೆ ಮಾಡ್ತೀವಿ ಎಂಬ ಸಂದೇಶ ಕೊಟ್ಟಿದ್ದಾರೆ. ಬ್ಲ್ಯಾಕ್‌ಮೇಲ್ ಮಾಡೋರಿಗೆ ನಾವು ಬೆಲೆ ಕೊಡೋದು ಅಂತ ಬಿಜೆಪಿ ಸ್ಪಷ್ಟಪಡಿಸಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

Read More

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಷ್ಯಾ ಮತ್ತು ಉಕ್ರೇನ್ ನಡುವೆ ಶಾಂತಿ ಮಂತ್ರಗಳನ್ನು ಜಪಿಸುತ್ತಿದ್ದರೂ, ದೃಶ್ಯ ಬದಲಾಗುತ್ತಿಲ್ಲ. ಅಲ್ಲಿನ ಪರಿಸ್ಥಿತಿಗಳು ಎರಡೂ ದೇಶಗಳ ನಡುವಿನ ಯುದ್ಧ ಇನ್ನೂ ಮುಗಿದಿಲ್ಲ ಎಂದು ಸೂಚಿಸುತ್ತವೆ. ಉಕ್ರೇನ್ ರಷ್ಯಾ ವಿರುದ್ಧ ವಾಗ್ದಾಳಿ ನಡೆಸಿದೆ. ಈ ಸಂದರ್ಭದಲ್ಲಿ, ವ್ಲಾಡಿಸ್ಲಾವ್ ರುಡೆಂಕೊ ಎಂಬ 16 ವರ್ಷದ ಬಾಲಕನ ಬಗ್ಗೆ ಉಕ್ರೇನ್‌ನಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಇದಕ್ಕೆ ಕಾರಣ ವ್ಲಾಡಿಸ್ಲಾವ್ ಪುಟಿನ್ ನೇರವಾಗಿ ಸೇನೆಗೆ ಸವಾಲು ಹಾಕುತ್ತಿರುವುದು..! ಕಪ್ಪು ಸಮುದ್ರದ ವ್ಲಾಡಿವೋಸ್ಟಾಕ್‌ನಲ್ಲಿ ಮೊದಲು ರಷ್ಯಾದ ಧ್ವಜವನ್ನು ಹರಿದು ಹಾಕಿ, ನಂತರ ತನ್ನ ಒಳ ಉಡುಪುಗಳನ್ನು ಅಲ್ಲಿ ನೇತುಹಾಕಿದ ವ್ಲಾಡಿಸ್ಲಾವ್ ಒಬ್ಬಂಟಿಯಾಗಿ ಪುಟಿನ್ ಸೈನ್ಯಕ್ಕೆ ದ್ರೋಹ ಬಗೆದಿದ್ದಾನೆ ಎಂದು ಸ್ಥಳೀಯ ಮಾಧ್ಯಮಗಳು ಹೇಳಿಕೊಂಡಿವೆ. ಪೊಲಿಟಿಕೊ ಲೇಖನದ ಪ್ರಕಾರ, 16 ವರ್ಷದ ವ್ಲಾಡಿಸ್ಲಾವ್ ರಷ್ಯಾದ ಸೈನಿಕರ ಶಿಬಿರದಲ್ಲಿ ವಾಸಿಸುತ್ತಿದ್ದಾನೆ. ಈ ಸಮಯದಲ್ಲಿ, ಒಂದು ದಿನ ಅವರಲ್ಲಿ ರಾಷ್ಟ್ರೀಯತೆಯ ಭಾವನೆ ಹುಟ್ಟಿಕೊಂಡಿತು. ನಂತರ ಅವರು ರಷ್ಯಾ ಮತ್ತು ಅದರ ಅಧ್ಯಕ್ಷ ಪುಟಿನ್ ಅವರನ್ನು ಸವಾಲು ಮಾಡಲು…

Read More

ಬೆಳಗಾವಿ :  ರಾಯಬಾಗ ತಾಲೂಕಿನ ಇಟ್ನಾಳ್ ಗ್ರಾಮ ಪಂಚಾಯತ್‌ ನ ಸಿಬ್ಬಂದಿ ಯುಗಾದಿ ಹಬ್ಬದ ಶಾಪಿಂಗ್‌ನಲ್ಲಿ ಬ್ಯುಸಿಯಾಗಿದ್ದು, ಸಿಬ್ಬಂದಿಗಳಿಲ್ಲದೆ ಗ್ರಾಮ ಪಂಚಾಯತಿ  ಕಚೇರಿ ಬಿಕೋ ಅಂತಿದೆ. https://www.youtube.com/watch?v=zvCJK9JBnWw ಎಸ್‌.. ಡ್ಯುಟಿ ಟೈಂನಲ್ಲಿ ಕೆಲಸಕ್ಕೆ ಚಕ್ಕರ ಹಾಕಿರೋ ಗ್ರಾಮ ಪಂಚಾಯತ ಪಿಡಿಓ ಹಾಗೂ ಸಿಬ್ಬಂದಿ ಯುಗಾದಿ ಶಾಪಿಂಗ್ ಹೋಗಿದ್ದು, ಮಧ್ಯಾಹ್ನ 12 ಗಂಟೆಯಾದರೂ ಕೂಡ ಯಾವುದೇ ಸಿಬ್ಬಂದಿ ಕಾಣ್ತಿಲ್ಲ. ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದ್ರು ಡೋಂಟ್ ಕೇರ್ ಅಂತಿದ್ದಾರೆ. ಕೆಲಸಕ್ಕೆ ಚಕ್ಕರ್ ಹಾಕಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.  

Read More

ಮೈಸೂರು : ರಾಜ್ಯ ರಾಜಕಾರಣದಲ್ಲಿ ಹೆಚ್‌ಡಿಕೆ ಮತ್ತು ಸತೀಶ್‌ ಜಾರಕಿಹೊಳಿ ಭೇಟಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದರ ನಡುವೆ ಸಚಿವ ಸತೀಶ್ ಜಾರಕಿಹೊಳಿ ಸಿಎಂ ಆಗಲು ಕುಮಾರಸ್ವಾಮಿಯವರನ್ನು ಭೇಟಿ ಮಾಡಿದ್ದಾರೆ ಎಂದು ಶಾಸಕ ಜಿ.ಟಿ ದೇವೇಗೌಡ ಹೊಸ ಬಾಂಬ್‌ ಸಿಡಿಸಿದ್ದಾರೆ. ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಂದೆ ಮುಖ್ಯಮಂತ್ರಿ ಆಗುವ ಅವಕಾಶ ಸಿಕ್ಕರೆ ಜೆಡಿಎಸ್‍ನ 18 ಶಾಸಕರ ಬೆಂಬಲವನ್ನು ಅವರು ಕೇಳಿರಬಹುದು. ರಾಜಕಾರಣದಲ್ಲಿ ಏನುಬೇಕಾದರೂ ಆಗಬಹುದು ಎಂದಿದ್ದಾರೆ.  ಜಾರಕಿಹೊಳಿಯವರು ಮಾಜಿ ಪ್ರಧಾನಿ, ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದಾರೆ ಎಂದರೆ ಅದಕ್ಕೆ ಇದೇ ಕಾರಣ. ಒಂದು ವೇಳೆ ಜೆಡಿಎಸ್ ಅವರಿಗೆ ಬೆಂಬಲ ನೀಡಿದರೂ ನಾನು ತಟಸ್ಥನಾಗಿರುತ್ತೇನೆ ಎಂದಿದ್ದಾರೆ. https://ainkannada.com/i-have-also-been-served-with-a-notice-i-will-give-a-proper-reply-st-somashekar/ ಹನಿಟ್ರ್ಯಾಪ್ ವಿಚಾರವಾಗಿ ಮಾತನಾಡಿ ಸದನದಲ್ಲಿ ಸುನಿಲ್ ಕುಮಾರ್ ಹಾಗೂ ರಾಜಣ್ಣ ಈ ವಿಚಾರ ಮಾತನಾಡಿದ್ದಾರೆ. ಇತ್ತೀಚಿನ ದಿನಗಳ ಘಟನೆ ನೋಡಿದ್ರೆ ಪ್ರಜಾಪ್ರಭುತ್ವ ವೇಗವಾಗಿ ಬೆಳೆಯುತ್ತಿದೆ ಎನಿಸುತ್ತಿದೆ ಎಂದು ಅವರು ವ್ಯಂಗ್ಯವಾಡಿದ್ದಾರೆ. ಇದೇ ವೇಳೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆ…

Read More

ಬೆಂಗಳೂರು: ನನಗೂ ನೋಟೀಸ್ ಜಾರಿಯಾಗಿದೆ, ಸಮರ್ಪಕ ಉತ್ತರ ನೀಡುತ್ತೇನೆ ಎಂದು ಶಾಸಕ ಎಸ್ ಟಿ ಸೋಮಶೇಖರ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗಲೇ ಯತ್ನಾಳ್ ಉಚ್ಚಾಟನೆಗೊಳ್ಳಬೇಕಿತ್ತು, ಆಗಿಂದಲೂ ಅವರು ಸರ್ಕಾರ ಹಾಗೂ ಮುಖ್ಯಮಂತ್ರಿಗಳ ವಿರುದ್ಧ ಮಾತಾಡುತ್ತಿದ್ದರು, ಹಾಗೆಲ್ಲ ಮಾತಾಡಬಾರದು ಅಂತ ಅವರಿಗೆ ತಾನು ಹೇಳಿದ್ದೂ ಉಂಟು, ಆದರೆ ಯತ್ನಾಳ್ ಬೇರೆಯವರ ಮಾತು ಕೇಳಲ್ಲ ಎಂದು ಸೋಮಶೇಖರ್ ಹೇಳಿದರು. https://ainkannada.com/according-to-vastu-sleep-in-this-direction-you-will-get-unexpected-luck-in-life/ ಇನ್ನೂ ಶಾಸಕರಾದ ಎಸ್ ಟಿ ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್ ಅವರಿಗೂ ನೋಟೀಸ್​​ಗಳು ಜಾರಿಯಾಗಿವೆ. ಆದ್ದರಿಂದ ಸಮರ್ಪಕ ಉತ್ತರ ನೀಡುತ್ತೇನೆ ಎಂದು ಶಾಸಕ ಎಸ್ ಟಿ ಸೋಮಶೇಖರ್ ಹೇಳಿದರು.

Read More

ನಟ ರಾಮ್ ಚರಣ್ ಅಭಿನಯದ ಇತ್ತೀಚಿನ ಚಿತ್ರ ಆರ್‌ಸಿ 16 ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಚರಣ್ ಅವರ ಕೊನೆಯ ಚಿತ್ರ ‘ಗೇಮ್ ಚೇಂಜರ್’ ನಿರೀಕ್ಷೆಯಂತೆ ಪ್ರೇಕ್ಷಕರನ್ನು ಮೆಚ್ಚಿಸುವಲ್ಲಿ ವಿಫಲವಾಯಿತು. ಇದರೊಂದಿಗೆ, ಅಭಿಮಾನಿಗಳು ಈಗ ಚರಣ್ ಅವರ ಆರ್‌ಸಿ 16 ಮೇಲೆ ಭಾರಿ ನಿರೀಕ್ಷೆಗಳನ್ನು ಹೊಂದಿದ್ದಾರೆ. ಬುಚಿಬಾಬು ಸನಾ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ರಾಮ್ ಚರಣ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ, ಅಂದರೆ ಮಾರ್ಚ್ 27 ರಂದು (ಇಂದು) ಚಿತ್ರದ ಮೊದಲ ನೋಟವನ್ನು ಬಿಡುಗಡೆ ಮಾಡಲಾಯಿತು. ಈ ಫಸ್ಟ್ ಲುಕ್ ಪೋಸ್ಟರ್‌ನಲ್ಲಿ ರಾಮ್ ಚರಣ್ ತಮ್ಮ ಸ್ಟೈಲಿಶ್ ಮತ್ತು ತೀವ್ರವಾದ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳಲ್ಲಿ ಭಾರಿ ಸಂಭ್ರಮವನ್ನು ಸೃಷ್ಟಿಸಿದೆ. https://ainkannada.com/according-to-vastu-sleep-in-this-direction-you-will-get-unexpected-luck-in-life/ ಫಸ್ಟ್ ಲುಕ್ ನಲ್ಲಿ, ರಾಮ್ ಚರಣ್ ಗ್ರಾಮೀಣ ಹಿನ್ನೆಲೆಯಲ್ಲಿ, ಗಡ್ಡವಿರುವ ಒರಟಾದ ಲುಕ್ ನಲ್ಲಿ ತುಂಬಾ ಶಕ್ತಿಶಾಲಿಯಾಗಿ ಕಾಣುತ್ತಿದ್ದಾರೆ. ಈ ಚಿತ್ರಕ್ಕೆ ‘ಪೆಡ್ಡಿ’ ಎಂದು ಶೀರ್ಷಿಕೆ ಅಂತಿಮಗೊಳಿಸಲಾಗಿದೆ. ಈ ಲುಕ್ ಅನ್ನು ಪ್ರಸಿದ್ಧ ಕೇಶ ವಿನ್ಯಾಸಕಿ ಆಲಿಮ್ ಹಕೀಮ್ ರಚಿಸಿದ್ದಾರೆ. ಇದು…

Read More

ಯಾದಗಿರಿ : ಸಿಎಂ ಕುರ್ಚಿ ಕಿತ್ತಾಟದಿಂದ ಕಾಂಗ್ರೆಸ್‌ನಲ್ಲಿ ಹನಿಟ್ರ್ಯಾಪ್ ನಡೆಯುತ್ತಿದೆ ಎಂದು ಮಾಜಿ ಸಚಿವ ರಾಜುಗೌಡ ಬಾಂಬ್‌ ಸಿಡಿಸಿದ್ದಾರೆ. ಯಾದಗಿರಿಯ ಕೊಡೇಕಲ್‌ ನಲ್ಲಿ ಮಾತನಾಡಿದ ಅವರು,  ಹನಿಟ್ರ್ಯಾಪ್ ಹಿಂದೆ ಯಾವ ಮಾಸ್ಟರ್ ಮೈಂಡ್ ಇದೆ ಅನ್ನೋದು ರಾಜಣ್ಣ ಅವರಿಗೆ ಗೊತ್ತು. ಅವರ ಪಕ್ಷದ ಪ್ರಮುಖರೇ ಇದರ ಹಿಂದೆ ಇದ್ದಾರೆ ಎಂದಿದ್ದಾರೆ. ರಾಜಣ್ಣ ಯಾವತ್ತು ಸಿಎಂ ಸಿದ್ದರಾಮಯ್ಯ ಪರ ಇರ್ತಾರೆ. ಅದಕ್ಕಾಗಿ ವ್ಯವಸ್ಥಿತವಾಗಿ ಕಾಂಗ್ರೆಸ್ ಪಕ್ಷದವರೇ ಹನಿಟ್ರ್ಯಾಪ್ ಮಾಡ್ತಿದ್ದಾರೆ. ಪಾಪ ರಾಜಣ್ಣವ್ರಿಗೆ ಗೊತ್ತು ಆದರೆ ಓಪನ್ ಹೇಳಲು ಆಗ್ತಿಲ್ಲ. ಕಾಂಗ್ರೆಸ್ ನಲ್ಲಿ ಸಿಎಂ ಕ್ಯಾಂಡಿಡೇಟ್ ಅಂತ ಯಾರ ಹೆಸರು ಬರುತ್ತೋ, ಯಾರು ಸಿಎಂ ಸಿದ್ದರಾಮಯ್ಯ ಪರ ಇರ್ತಾರೋ ಅವ್ರಿಗೆ ಟ್ರ್ಯಾಪ್ ಆಗುತ್ತರೆ.  ಮುಂದೆ ಸಚಿವರಾದ ಪರಮೇಶ್ವರ, ಸತೀಶ ಜಾರಕಿಹೊಳಿಗೂ ಟ್ರ್ಯಾಪ್ ಆಗುತ್ತದೆ ಎಂದರು. https://ainkannada.com/submission-of-the-internal-reservation-report-to-the-government/ ಸಿದ್ದರಾಮಯ್ಯ ಸಿಎಂ ಇದ್ದು, ಪರಮೇಶ್ವರ ಗೃಹ ಸಚಿವರಿದ್ದು ತನಿಖೆ ಆಗಲಿಲ್ಲ, ಕ್ರಮ ಆಗದಿದ್ರೆ ಜನರಿಗೆ ಏನು ಸಂದೇಶ ಹೋಗುತ್ತದೆ. ಹೀಗಾಗಿ ಹನಿಟ್ರ್ಯಾಪ್ ಬಗ್ಗೆ ಸೂಕ್ತ ತನಿಖೆ ಆಗಬೇಕು…

Read More

ಬೆಂಗಳೂರು: ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಬೇಡಿಕೆ ಈಡೇರುವ ಸಮಯ ಕೊನೆಗೂ ಸನ್ನಿಹಿತವಾಗಿದೆ. ಒಳಮೀಸಲಾತಿ ಕುರಿತಂತೆ ವರದಿ ಸಂಗ್ರಹಿಸಿದ್ದ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮತಿ, ರಾಜ್ಯ ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಸಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಸಚಿವರುಗಳಾದ ಕೆ.ಹೆಚ್.ಮುನಿಯಪ್ಪ, ಹೆಚ್.ಸಿ. ಮಹದೇವಪ್ಪ, ಆರ್.ಬಿ.ತಿಮ್ಮಾಪುರ್, ಮಾಜಿ ಸಚಿವ ಎಚ್. ಆಂಜನೇಯ, ಶಾಸಕ ಬಸಂತಪ್ಪ ಸೇರಿ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ವಿಧಾನಸೌಧದ ಸಿಎಂ ಕಚೇರಿಯಲ್ಲಿ ವರದಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನ್ಯಾ. ನಾಗಮೋಹನ್‌ ದಾಸ್‌ ವರದಿ ಸಲ್ಲಿಸಿದರು. ಇದು ಮಧ್ಯಂತರ ವರದಯಾಗಿದ್ದು ಪೂರ್ಣ ಪ್ರಮಾಣದ ವರದಿಯಷ್ಟೇ ಬಾಕಿ ಉಳಿದಿದೆ. ಮಧ್ಯಂತರ ವರದಿ ಆಧರಿಸಿ ಇಂದಿನ ಕ್ಯಾಬಿನೆಟ್ ನಲ್ಲಿ ಚರ್ಚೆ ನಡೆಸ ಸರ್ಕಾರ ಮಹತ್ವದ ಘೋಷಣೆ ಮಾಡುವ ಸಾಧ್ಯತೆ ಇದೆ. ಒಳ ಮೀಸಲಾತಿ ಬಗ್ಗೆ ಬದ್ಧತೆ ಇದೆ ದಲಿತ ಸಮುದಾಯಕ್ಕೆ ಒಳಮೀಸಲಾತಿ ಜಾರಿ ವಿಚಾರದಲ್ಲಿ ಸರ್ಕಾರಕ್ಕೆ ಬದ್ಧತೆ ಇದೆ. ಮೀಸಲಾತಿಯನ್ನ ಸರ್ಕಾರ ಜಾರಿ ಮಾಡುತ್ತೆ ಅಂತ ಸಚಿವ ಆರ್.ಬಿ ತಿಮ್ಮಾಪುರ…

Read More

ನ್ಯೂಯಾರ್ಕ್: ಈ ಜಗತ್ತಿನಲ್ಲಿ ಅನೇಕ ಅದ್ಭುತ ವಿಷಯಗಳು ಅಡಗಿವೆ. ಅಲ್ಲಿ ಅನೇಕ ಅದ್ಭುತಗಳು, ವಿಚಿತ್ರತೆಗಳು ಮತ್ತು ಬಗೆಹರಿಯದ ರಹಸ್ಯಗಳಿವೆ. ಅವು ಇನ್ನೂ ವಿಜ್ಞಾನಿಗಳಿಗೂ ಸಹ ಬಗೆಹರಿಯದ ಒಗಟಾಗಿ ಉಳಿದಿವೆ. ಈ ಸಂದರ್ಭದಲ್ಲಿ, ಅನ್ಯಗ್ರಹ ಜೀವಿಗಳು ಮತ್ತು ಮತ್ಸ್ಯಕನ್ಯೆಯರು ಶತಮಾನಗಳಿಂದ ಚರ್ಚೆಯ ವಿಷಯವಾಗಿರುವ ಎರಡು ಆಸಕ್ತಿದಾಯಕ ವಿಷಯಗಳಾಗಿವೆ. ಆದಾಗ್ಯೂ, ಅವರ ಅಸ್ತಿತ್ವದ ಹಿಂದಿನ ಸತ್ಯ ಯಾರಿಗೂ ತಿಳಿದಿಲ್ಲ. https://x.com/dotconnectinga/status/1903119784050294847?ref_src=twsrc%5Etfw%7Ctwcamp%5Etweetembed%7Ctwterm%5E1903119784050294847%7Ctwgr%5Ef010b8b0d5b915ec13bf12611943bfce0f2fa63f%7Ctwcon%5Es1_&ref_url=https%3A%2F%2Ftv9telugu.com%2Ftrending%2Fviral-post-mermaid-like-skeletal-creature-with-fins-on-uk-beach-stuns-internet-1496830.html ಪ್ರಸ್ತುತ, ಸಾಮಾಜಿಕ ಮಾಧ್ಯಮದಲ್ಲಿ ಮತ್ಸ್ಯಕನ್ಯೆಯ ಕುರಿತಾದ ಪೋಸ್ಟ್ ಚರ್ಚೆಯ ವಿಷಯವಾಗಿದೆ. ಇಂಗ್ಲೆಂಡ್‌ನ ಕಡಲತೀರದಲ್ಲಿ ದಂಪತಿಗಳು ಮತ್ಸ್ಯಕನ್ಯೆಯಂತಹ ಅಸ್ಥಿಪಂಜರವನ್ನು ಕಂಡುಕೊಂಡರು. ಅವರು ತಮ್ಮ ಫೋಟೋಗಳನ್ನು ಅಂತರ್ಜಾಲದಲ್ಲಿ ಹಂಚಿಕೊಂಡ ನಂತರ ಈಗ ಸಂಚಲನ ಸೃಷ್ಟಿಸಿದ್ದಾರೆ. https://ainkannada.com/according-to-vastu-sleep-in-this-direction-you-will-get-unexpected-luck-in-life/ ನ್ಯೂಯಾರ್ಕ್ ಪೋಸ್ಟ್‌ನ ವರದಿಯ ಪ್ರಕಾರ, ಇಂಗ್ಲೆಂಡ್‌ನ ದಂಪತಿಗಳು ಕಡಲತೀರದಲ್ಲಿ ನಡೆಯುವಾಗ ವಿಚಿತ್ರವಾದ, ಗೊಂದಲದ ವಿಷಯವನ್ನು ನೋಡಿ ಆಘಾತಕ್ಕೊಳಗಾದರು. ಮಾರ್ಚ್ 10 ರಂದು, ಪೌಲಾ ಮತ್ತು ಡೇವ್ ರೇಗನ್ ಕೆಂಟ್‌ನ ಮಾರ್ಗೇಟ್ ಬೀಚ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಮತ್ಸ್ಯಕನ್ಯೆಯನ್ನು ಹೋಲುವ ಅಸ್ಥಿಪಂಜರದ ಆಕೃತಿಯನ್ನು ನೋಡಿದರು. ಅಲ್ಲಿ ಅವರಿಗೆ ಸಿಕ್ಕ ಅಸ್ಥಿಪಂಜರದಂತಹ ಆಕೃತಿ…

Read More