ಬೆಂಗಳೂರು: ಚಿನ್ನ ಮಾಡಿಸಿಕೊಳ್ಳಬೇಕು ಎಂದಾದರೆ ಬೆಲೆ ಇಳಿಕೆಯಾಗುವುದು ಮುಖ್ಯವಾಗಿದೆ. ಆದರೂ ಒಮ್ಮೊಮ್ಮೆ ಪರಿಸ್ಥಿತಿಗೆ ಕಟ್ಟುಬಿದ್ದು ಬೆಲೆ ಏರಿಕೆಯ ಸಮಯದಲ್ಲೇ ಸಾಕಷ್ಟು ಗ್ರಾಹಕರು ಚಿನ್ನ ಖರೀದಿಸುತ್ತಾರೆ. ಬೆಲೆ ತಗ್ಗಿದರೆ ನಮಗೊಂದಿಷ್ಟು ಲಾಭವಿತ್ತೆಂದು ಸಾಕಷ್ಟು ಜನ ಈ ಸಮಯದಲ್ಲಿ ಭಾವಿಸುತ್ತಾರೆ. ಚಿನ್ನದ ಮಾರುಕಟ್ಟೆಯೇ ಹಾಗೆ ಬೆಲೆ ಯಾವಾಗ ಏರುತ್ತದೆ? ಯಾವಾಗ ಇಳಿಯುತ್ತದೆ ಎಂಬುದನ್ನು ಹೇಳಲಾಗುವುದಿಲ್ಲ. ಚಿನ್ನ ಖರೀದಿಗೂ ಮುನ್ನ ಇಂದಿನ ರೇಟ್ ಹೇಗಿದೆ ಎಂಬುದನ್ನು ತಿಳ್ಕೊಳ್ಳೋಣ.. https://ainkannada.com/according-to-vastu-sleep-in-this-direction-you-will-get-unexpected-luck-in-life/ ನಿನ್ನೆ ಬುಧವಾರ ಗ್ರಾಮ್ಗೆ 10 ರೂನಷ್ಟು ಅಲ್ಪ ಹೆಚ್ಚಳವಾಗಿದ್ದ 22 ಕ್ಯಾರಟ್ ಚಿನ್ನದ ಬೆಲೆ ಇಂದು ಗುರುವಾರ 40 ರೂನಷ್ಟು ಹೆಚ್ಚಳವಾಗಿದೆ. ಅಪರಂಜಿ ಚಿನ್ನದ ಬೆಲೆ ಗ್ರಾಮ್ಗೆ 44 ರೂ ಏರಿಕೆ ಆಗಿದೆ. ಆಭರಣ ಚಿನ್ನದ ಬೆಲೆ ಬೆಂಗಳೂರಿನಲ್ಲಿ 8,235 ರೂ ಆದರೆ, ಅಪರಂಜಿ ಚಿನ್ನದ ಬೆಲೆ 8,984 ರೂಗೆ ಏರಿದೆ. ವಿದೇಶಗಳಲ್ಲಿ ದುಬೈನಲ್ಲಿ ಬೆಲೆ ತುಸು ಇಳಿಕೆ ಆಗಿದೆ. ಉಳಿದ ಹೆಚ್ಚಿನ ಕಡೆ ಅಲ್ಪ ಏರಿಕೆ ಆಗಿದೆ. ಬೆಳ್ಳಿ ಬೆಲೆ ಮತ್ತೆ ಸ್ಥಿರತೆ ಪಡೆದುಕೊಂಡಂತಿದೆ. ಇವತ್ತೂ ಕೂಡ…
Author: Author AIN
ರಾಯಚೂರು : ಭೂಗರ್ಭದಲ್ಲಿ ಕೆಲಸ ಮಾಡುವ ಕಾರ್ಮಿಕನಿಗೆ ಕಲ್ಲು ಬಿದ್ದು ತೀವ್ರ ಗಾಯಗಳಾಗಿವೆ. ರಾಯಚೂರು ಜಿಲ್ಲೆಯ ಲಿಂಗಸೂರು ತಾಲೂಕಿನ ಹಟ್ಟಿ ಚಿನ್ನದ ಗಣಿಯಲ್ಲಿ ಘಟನೆ ನಡೆದಿದೆ. https://ainkannada.com/mixture-of-polluted-water-from-sugar-factories-fish-die/ ಕಳೆದ ಬುಧವಾರ ರಾತ್ರಿ 8 ಗಂಟೆಗೆ 2,600 ಅಡಿಯ ಒಳಗಡೆ ಭೂಗರ್ಭದಲ್ಲಿ ಕೆಲಸ ಮಾಡುವಾಗ ನಡೆದಿರುವ ಅವಘಡ ಸಂಭವಿಸಿದೆ. ನರಸಪ್ಪ ಎನ್ನುವ ಕಾರ್ಮಿಕನಿಗೆ ಮೇಲಿಂದ ಕಲ್ಲು ಬಿದ್ದು ತೀವ್ರ ರಕ್ತಸ್ರಾವವಾಗಿದೆ. ಕಲ್ಲು ಬಿದಿದ್ದರಿಂದಾಗಿ ಪ್ರಜ್ಞೆತಪ್ಪಿ ಬಿದ್ದಿದ್ದ ಕಾರ್ಮಿಕನನ್ನು ಅಲ್ಲೇ ಪಕ್ಕದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ರಕ್ಷಿಸಿದ್ದು, ಬಾಗಲಕೋಟೆಯ ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಘಟನೆಯ ಬಗ್ಗೆ ಮಾಹಿತಿ ಪಡೆದಿದ್ದಾರೆ.
ಚಿಕ್ಕೋಡಿ : ಬೇಸಿಗೆ ಪ್ರಾರಂಭದಲ್ಲೇ ಹಲವೆಡೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಇದೀಗ ಕೃಷ್ಣಾನದಿ ನೀರು ಕುಡಿಯುಲು ಯೋಗ್ಯವಿಲ್ಲದಂತಾಗಿದ್ದು, ಸುತ್ತುಮುತ್ತಲ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ. ಈ ಬಗ್ಗೆ ಸಾಮಾಜಿಕ ಹೋರಾಟಗಾರ ಸಂತೋಷ ಕಾಮತ ಮಾತನಾಡಿದ್ದು, ಕೃಷ್ಣಾ ನದಿ ನೀರಿನಲ್ಲಿ ಸಕ್ಕರೆ ಕಾರ್ಖಾನೆಗಳ ಕಲುಷಿತ ನೀರು ಮಿಶ್ರಣದಿಂದಾಗಿ ಕೃಷ್ಣಾ ನದಿಯಲ್ಲಿರುವ ಮೀನುಗಳ ಮಾರಣಹೋಮವಾಗಿದೆ. ಬೆಳಗಾವಿ ಜಿಲ್ಲಾಡಳಿತದ ನಿರ್ಲಕ್ಷ್ಯತನದಿಂದ ಕೃಷ್ಣಾ ನದಿ ನೀರು ಕುಡಿಯಲು ಯೋಗ್ಯವಿಲ್ಲದಂತಾಗಿದೆ. ಈಗಾಗಲೇ ಲಕ್ಷಾಂತರ ಮೀನುಗಳು ಕಲುಷಿತ ನೀರಿನಿಂದ ಕೃಷ್ಣಾ ನದಿ ನೀರಿನಲ್ಲಿ ಸಾವನಪ್ಪಿವೆ. https://ainkannada.com/minor-raped-by-uncle-sslc-student-pregnant-erotic-andar/ ಈ ಸಾವನಪ್ಪಿದ ಮೀನುಗಳಿಂದ ಕೃಷ್ಣಾ ನದಿ ನೀರು ಕಲುಷಿತಗೊಂಡಿದ್ದು ಕುಡಿಯಲು ನೀರು ಯೋಗ್ಯವಾಗಿಲ್ಲ. ಇನ್ನೊಂದು ತಿಂಗಳು ಕಳೆದರೆ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಬಹುದು. ಹೀಗಾಗಿ ಜಿಲ್ಲಾಡಳಿತ ಈಗಲೇ ಎಚ್ಚೆತ್ತುಕೊಂಡು ಕೃಷ್ಣಾ ನದಿಗೆ ಬೊರವೆಲ್ ಕೊರಿಸಬೇಕೆಂದು. ಈಗಾಗಲೇ ನದಿ ನೀರು ಕುಡಿದು ಕೆಲವರಿಗೆ ಆರೋಗ್ಯದಲ್ಲಿ ಏರು ಪೇರಾಗಿದೆ. ಹೀಗಾಗಿ ಆದಷ್ಟು ಬಗ್ಗೆ ಕಲುಷಿತ ನೀರು ಕೃಷ್ಣಾ ನದಿಗೆ ಸೇರ್ಪಡೆಯಾಗದಂತೆ ಜಿಲ್ಲಾಡಳಿತ ತಡೆಯಬೇಕೆಂದು…
ಸೈನ್ಯ ಬೆಳೆದಿದೆ. ಇದು ರಾತ್ರಿಯ ನಿದ್ರೆಗೆ ಅಡ್ಡಿಯಾಗಬಹುದು. ಸೊಳ್ಳೆಗಳ ಶಬ್ದ ಕೆಲವೊಮ್ಮೆ ಕಿರಿಕಿರಿ ಉಂಟುಮಾಡಬಹುದು. ನೀವು ಇತ್ತೀಚಿನ ದಿನಗಳಲ್ಲಿ ಇದನ್ನೆಲ್ಲಾ ಅನುಭವಿಸುತ್ತಿದ್ದರೆ, ಈ ಯಂತ್ರವು ನಿಮಗೆ ಸಹಾಯ ಮಾಡುತ್ತದೆ. ಒಂದು ರೀತಿಯಲ್ಲಿ, ಈ ಯಂತ್ರವು ನಿಮ್ಮ ಮನೆಯ ಬಾಗಿಲನ್ನು ಕಾಯುತ್ತದೆ. ಇದು ಒಂದೇ ಒಂದು ಸೊಳ್ಳೆಯೂ ಒಳಗೆ ಬರದಂತೆ ತಡೆಯುತ್ತದೆ. ಈ ಯಂತ್ರವು ತುಂಬಾ ಕಡಿಮೆ ಬೆಲೆಗೆ ಲಭ್ಯವಿದೆ. PYXBE ವಿದ್ಯುತ್ ಸೊಳ್ಳೆ ನಿವಾರಕ: ಈ ಸೊಳ್ಳೆ ಕೊಲ್ಲುವ ಯಂತ್ರವು ನಿಮಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇದು ಪರಿಸರ ಸ್ನೇಹಿ ಯಂತ್ರ. ನೀವು ಅದನ್ನು ಒಳಾಂಗಣ ಮತ್ತು ಹೊರಾಂಗಣದಲ್ಲಿ ಇರಿಸಬಹುದು. ಇದನ್ನು ಮಲಗುವ ಕೋಣೆಯಿಂದ ಹಿಡಿದು ರೆಸ್ಟೋರೆಂಟ್‌ವರೆಗೆ ಕಚೇರಿಯವರೆಗೆ ಎಲ್ಲಿ ಬೇಕಾದರೂ ಬಳಸಬಹುದು. ಆದಾಗ್ಯೂ, ಇದರ ಮೂಲ ಬೆಲೆ 3,999 ರೂ. ಆದರೆ ನೀವು ಅದನ್ನು ಅಮೆಜಾನ್‌ನಿಂದ ಶೇ. 70 ರಷ್ಟು ರಿಯಾಯಿತಿಯಲ್ಲಿ ರೂ.ಗೆ ಪಡೆಯಬಹುದು. ಇದನ್ನು 1,199 ರೂ.ಗೆ ಖರೀದಿಸಬಹುದು. ಸೊಳ್ಳೆ ನಿವಾರಕ ದೀಪ ನೀವು ಈ ದೀಪವನ್ನು ಯಾವುದೇ ಆನ್‌ಲೈನ್…
ಮೈಸೂರು: ರಾಜ್ಯದಲ್ಲಿ ಅತ್ಯಾಚಾರ ಪ್ರಕರಣಗಳ ಸಂಖ್ಯೆ ಆತಂಕ ಮೂಡಿಸುವಂತೆ ಇದ್ದು, ಅತ್ಯಾಚಾರ ಪ್ರಕರಣಗಳು ಹೆಚ್ಚತ್ತಲೇ ಇದೆ. ಇದೀಗ ಮೈಸೂರಿನಲ್ಲಿ ಅಪ್ರಾಪ್ತೆ ಮೇಲೆ ಚಿಕ್ಕಪ್ಪನಿಂದಲೇ ಅತ್ಯಾಚಾರ ನಡೆದು ಬಾಲಕಿ ಗರ್ಭಿಣಿ ಆಗಿರುವ ಘಟನೆ ನಡೆದಿದೆ. ಇನ್ನೂ ಈ ಘಟನೆ ಸಂಬಂಧ ಕಾಮುಕ ಚಿಕ್ಕಪ್ಪನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ನಂಜುಂಡಸ್ವಾಮಿ ಅತ್ಯಾಚಾರವೆಸಗಿದ ಕಾಮುಕ ಚಿಕ್ಕಪ್ಪ. ಶಾಲೆಗೆ ತೆರಳಿದ್ದ ವಿದ್ಯಾರ್ಥಿನಿಯನ್ನು ಮನೆಗೆ ಕರೆದುಕೊಂಡು ಬಂದು ಅತ್ಯಾಚಾರ ಮಾಡಿದ್ದಾನೆ. ಮೈಸೂರು ಜಿಲ್ಲೆಯ ನಂಜನಗೂಡು ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. https://ainkannada.com/according-to-vastu-sleep-in-this-direction-you-will-get-unexpected-luck-in-life/ 10ನೇ ತರಗತಿ ಓದುತ್ತಿದ್ದ ಅಪ್ರಾಪ್ತೆ ಮೇಲೆ ಪಾಪಿ ಚಿಕ್ಕಪ್ಪ ಅತ್ಯಾಚಾರವೆಸಗಿದ್ದಾನೆ. ಕಳೆದ ಎರಡು ತಿಂಗಳಿಂದ ಪೀರಿಯೆಡ್ಸ್ ಆಗಿಲ್ಲವೆಂಬ ಕಾರಣಕ್ಕೆ ಬಾಲಕಿಯನ್ನ ವೈದ್ಯರು ಪರಿಶೀಲನೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ. ಕಳೆದ ಜನವರಿಯಲ್ಲಿ ವಿದ್ಯಾರ್ಥಿನಿಯನ್ನ ಪುಸಲಾಯಿಸಿ ಮನೆಗೆ ಕರೆತಂದಿದ್ದ ಕಾಮುಕ ಬಲವಂತವಾಗಿ ದೈಹಿಕ ಸಂಪರ್ಕ ನಡೆಸಿ ಯಾರಿಗೂ ತಿಳಿಸಬಾರದೆಂದು ತಿಳಿಸಿ ಅಮಾಯಕನಂತೆ ಮತ್ತೆ ಶಾಲೆಗೆ ಬಿಟ್ಟಿದ್ದಾನೆ. ಪಿರಿಯಡ್ಸ್‌ನಲ್ಲಿ ವ್ಯತ್ಯಾಸ ಕಂಡುಬಂದು ಹೊಟ್ಟೆ ನೋವಿದೆ…
ಜನರ ಮನರಂಜನೆಗಾಗಿ ನಮ್ಮಲ್ಲಿ ಹಲವಾರು ಕಲಾಪ್ರಕಾರಗಳಿವೆ. ಒಂದಕ್ಕಿಂತ ಒಂದು ವಿಶೇಷವಾಗಿರುವ ಈ ಕಲೆಗಳು ಜನರಿಗೆ ಮನರಂಜನೆ ನೀಡುವ ಜೊತೆಗೆ ಅವರಲ್ಲಿರುವ ಸೃಜನಶೀಲತೆಯನ್ನು ಅರಳಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತವೆ. ರಂಗಭೂಮಿ ಚಟುವಟಿಕೆ ನಿರತರಿಗೂ ಒಂದು ಸ್ಮರಣೀಯ ದಿನ ಬೇಕು ಎನ್ನುವ ಕಾರಣಕ್ಕೆ ಪ್ರತಿವರ್ಷ ಮಾರ್ಚ್ 27ರಂದು ಇಂಟರ್ ನ್ಯಾಷನಲ್ ಥಿಯೇಟರ್ ಇನ್‌ಸ್ಟಿಟ್ಯೂಟ್‌ನ ಕೇಂದ್ರಗಳು, ಐಟಿಐ ಸಹಕಾರ ಸದಸ್ಯರು, ರಂಗಭೂಮಿ ವೃತ್ತಿಪರರು, ರಂಗಭೂಮಿ ಸಂಘಟನೆಗಳು ಮತ್ತು ರಂಗಭೂಮಿ ಪ್ರೇಮಿಗಳಿಂದ ವಿಶ್ವ ರಂಗಭೂಮಿ ದಿನವನ್ನು ಭಾರತ ಸೇರಿದಂತೆ ವಿಶ್ವದ ನಾನಾ ಭಾಗದಲ್ಲಿ ಆಚರಿಸಲಾಗುತ್ತದೆ. ಒಂದು ನಾಟಕ ಅಥವಾ ರಂಗ ಕಲೆಯು ಉತ್ತಮವಾದ ಸಾಮಾಜಿಕ ಸಂದೇಶಗಳನ್ನು ನೀಡುವುದರ ಜೊತೆಗೆ ಜನರನ್ನು ಒಂದು ಅದೃಶ್ಯವಾದ ಲೋಕಕ್ಕೆ ಕರೆದೊಯ್ಯುತ್ತದೆ. ಇಲ್ಲಿ ಬರುವ ಒಂದೊಂದು ಪಾತ್ರಗಳನ್ನು ಜನರು ತಮ್ಮ ಬದುಕಿಗೆ ಹೋಲಿಸಿ ನೋಡುತ್ತಾರೆ. ಕೆಲವು ಪಾತ್ರಗಳನ್ನು ತಮ್ಮ ಬದುಕಿಗೆ ಅನ್ವಯಿಸಿಕೊಂಡು ಬಿಡುತ್ತಾರೆ. ಜನರ ಯೋಚನಾ ಶಕ್ತಿಯನ್ನು ಬದಲಿಸುವ ಸಾಮರ್ಥ್ಯ ನಾಟಕಗಳಿಗಿವೆ. https://ainkannada.com/according-to-vastu-sleep-in-this-direction-you-will-get-unexpected-luck-in-life/ ಆದ್ದರಿಂದ ಇದು ಕಲೆಯ ಒಂದು ಸಮರ್ಥ ಮಾಧ್ಯವಾಗಿದೆ. ನಮ್ಮ…
ಆರೋಗ್ಯಕ್ಕೆ ನಿದ್ರೆ ಬಹಳ ಮುಖ್ಯ. ನಾವು ಮಲಗುವ ಸ್ಥಳ ಮತ್ತು ದಿಕ್ಕು ನಮ್ಮ ದೇಹ ಮತ್ತು ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ವಾಸ್ತು ಪ್ರಕಾರ, ಸರಿಯಾದ ದಿಕ್ಕಿನಲ್ಲಿ ಮಲಗುವುದರಿಂದ ದೇಹದಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಆರೋಗ್ಯ ಮತ್ತು ಮಾನಸಿಕ ಶಾಂತಿ ದೊರೆಯುತ್ತದೆ. ಆದರೆ ತಪ್ಪು ದಿಕ್ಕಿನಲ್ಲಿ ಮಲಗುವುದರಿಂದ ಒತ್ತಡ, ಆಯಾಸ ಮತ್ತು ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ವಾಸ್ತು ಪ್ರಕಾರ ನಾವು ಯಾವ ದಿಕ್ಕಿನಲ್ಲಿ ಮಲಗಬೇಕು ಎಂಬುದನ್ನು ಈಗ ಕಂಡುಹಿಡಿಯೋಣ. ದಕ್ಷಿಣ ದಿಕ್ಕು ವಾಸ್ತು ಪ್ರಕಾರ, ದಕ್ಷಿಣಕ್ಕೆ ತಲೆಯಿಟ್ಟು ಮಲಗುವುದು ಉತ್ತಮ. ಭೂಮಿಯ ಕಾಂತೀಯ ಶಕ್ತಿಯೊಂದಿಗೆ ಸಮತೋಲನವನ್ನು ಸಾಧಿಸುವ ಮೂಲಕ, ನಿದ್ರೆಯ ಗುಣಮಟ್ಟ ಸುಧಾರಿಸುತ್ತದೆ. ಇದು ದೇಹವನ್ನು ಕ್ರಿಯಾಶೀಲವಾಗಿರಿಸುತ್ತದೆ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಆರೋಗ್ಯದ ದೃಷ್ಟಿಯಿಂದಲೂ ಇದು ತುಂಬಾ ಒಳ್ಳೆಯದು ಎಂದು ತಜ್ಞರು ಸೂಚಿಸುತ್ತಾರೆ. ಪೂರ್ವ ದಿಕ್ಕು ವಿದ್ಯಾರ್ಥಿಗಳು ಮತ್ತು ಬುದ್ಧಿಜೀವಿಗಳಿಗೆ ಪೂರ್ವ ದಿಕ್ಕಿನಲ್ಲಿ ಮಲಗುವುದು ಅತ್ಯಂತ ಸೂಕ್ತವಾಗಿದೆ. ಈ ನಿರ್ದೇಶನವು ಬುದ್ಧಿಶಕ್ತಿಯ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಸರಿಯಾದ ನಿದ್ರೆ ಮಾಡುವುದರಿಂದ ಹೊಸ…
ಸೂರ್ಯೋದಯ – 6:18 ಬೆ ಸೂರ್ಯಾಸ್ತ – 6:24 ಸಂಜೆ ಶಾಲಿವಾಹನ ಶಕೆ -1946 ಸಂವತ್-2080 ಕ್ರೋಧಿನಾಮ ಸಂವತ್ಸರ, ಉತ್ತರ ಅಯಣ, ಶುಕ್ಲ ಪಕ್ಷ, ಶಿಶಿರ ಋತು, ಪಾಲ್ಗುಣ ಮಾಸ, ತಿಥಿ – ತ್ರಯೋದಶಿ ನಕ್ಷತ್ರ – ಶತಭಿಷೆ ಯೋಗ – ಸಾಧ್ಯ ಕರಣ – ಗರಜೆ ರಾಹು ಕಾಲ – 01:30 ದಿಂದ 03:00 ವರೆಗೆ ಯಮಗಂಡ – 06:00 ದಿಂದ 07:30 ವರೆಗೆ ಗುಳಿಕ ಕಾಲ – 09:00 ದಿಂದ 10:30 ವರೆಗೆ ಬ್ರಹ್ಮ ಮುಹೂರ್ತ – 4:42 ಬೆ. ದಿಂದ 5:30 ಬೆ. ವರೆಗೆ ಅಮೃತ ಕಾಲ – 6:14 ಸಂಜೆ. ದಿಂದ 7:43 ರಾ.ವರೆಗೆ ಅಭಿಜಿತ್ ಮುಹುರ್ತ – 11:57ಬೆ. ದಿಂದ 12:45 ಮ. ವರೆಗೆ ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ. “ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು” ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು. Mob. 93534…
ಪುಷ್ಪ ಅಂದರೆ ಫ್ಲವರ್ ಅಲ್ಲ ಫೈರ್ ಅಂದುಕೊಂಡೇ ಬಾಕ್ಸಾಫೀಸ್ ನಲ್ಲಿ ಭರ್ಜರಿ ಬೇಟೆಯಾಡಿದವರು ಐಕಾನ್ ಸ್ಟಾರ್ ಅಲ್ಲು ಅರ್ಜುನ್. ಅಲ್ಲು ಹಾಗೂ ಸುಕುಮಾರ್ ಕಾಂಬೋದ ಪುಷ್ಪ ಸಿನಿಮಾ ಬರೆದ ದಾಖಲೆಗಳು ಅಷ್ಟಿಷ್ಟಲ್ಲ. ಪುಷ್ಪ ದಾಖಲೆಯನ್ನೀಗ ಮಮೋಹನ್ ಲಾಲ್ ಉಡೀಸ್ ಮಾಡಿದ್ದಾರೆ. ಚಿತ್ರ ಬಿಡುಗಡೆಯಾದ ಮೊದಲ ದಿನವೇ 50 ಕೋಟಿ ಗಳಿಗೆ ಮಾಡುವ ನಿರೀಕ್ಷೆ ಇದೆ. ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ನಲ್ಲಿ ಲೂಸಿಫರ್ 2 ಸಿನಿಮಾ ನಯಾ ರೆಕಾರ್ಡ್ ಕ್ರಿಯೇಟ್ ಮಾಡಿದೆ. ಮೋಹನ್ ಲಾಲ್ ಅಭಿನಯದ, ಪೃಥ್ವಿರಾಜ್ ಸುಕುಮಾರ್ ನಿರ್ದೇಶನದ ಎಂಪುರಾನ್ -2 ಅಡ್ವಾನ್ಸ್ ಬುಕಿಂಗ್‌ನಲ್ಲಿ ದಾಖಲೆಯ ಕೋಟಿ ಕೋಟಿ ರೂಪಾಯಿ ಬಾಚಿಕೊಂಡಿದೆ. ಅಲ್ಲು ಅರ್ಜುನ್ ಅಭಿನಯದ ಸೂಪರ್ ಹಿಟ್ ಚಿತ್ರ ‘ಪುಷ್ಪ 2’ ಮತ್ತು ದಳಪತಿ ವಿಜಯ್ ನಟನೆಯ ‘ಲಿಯೋ’, ‘ಜವಾನ್’, ‘ಲಿಯೋ’ ಮತ್ತು ‘ಕಲ್ಕಿ: 2898 AD’ ಗಳನ್ನು ಹಿಂದಿಕ್ಕಿ ‘ಎಂಪೂರನ್’ ಭಾರತೀಯ ಚಿತ್ರರಂಗದಲ್ಲಿ ಇದುವರೆಗೆ ಒಂದು ಗಂಟೆಯಲ್ಲಿ ಅಡ್ವಾನ್ಸ್ ಬುಕ್ಕಿಂಗ್ ಆದ ಚಿತ್ರ ಎಂಬ ಹೆಗ್ಗಳಿಕೆ ಪಡೆದಿದೆ.24 ಗಂಟೆಗಳಲ್ಲಿ…
ಬೆಂಗಳೂರು: ಕಡೆಗೂ ತಮ್ಮ ವಿರುದ್ಧವೇ ತೊಡೆತಟ್ಟಿದ್ದ ರೆಬೆಲ್ ಬಣ ನಾಯಕರಿಗೆ ಯತ್ನಾಳ್ ಉಚಾಟನೆ ಮೂಲಕ ಎಚ್ಚರಿಕೆ ಸಂದೇಶ ರವಾನಿಸುವಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಯಶಸ್ವಿಯಾಗಿದ್ದಾರೆ. ರೆಬೆಲ್ ಟೀಂನ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಉಚ್ಚಾಟನೆ ಶಿಕ್ಷೆ ಕೊಡಿಸಿರುವ ವಿಜಯೇಂದ್ರ, ಎಕ್ಸ್ ಖಾತೆಯಲ್ಲಿ ಟ್ವೀಟ್ ಮೂಲಕ ಗುಮ್ಮಿದ್ದಾರೆ. ಕೆಲ ದಿನಗಳ ಹಿಂದೆ ನಡೆದ ಕಹಿ ಪ್ರಸಂಗಗಳಿಂದ ಎಂದಿಗೂ ನಾನು ಉದ್ವೇಗಗೊಳ್ಳಲಿಲ್ಲ, ಯಾರೊಂದಿಗೂ ದುಃಖ ತೋಡಿಕೊಂಡಿಲ್ಲ, ವರಿಷ್ಠರು ತೆಗೆದುಕೊಂಡಿರುವ ಶಿಸ್ತು ಕ್ರಮವನ್ನು ನಾನು ಸಂಭ್ರಮಿಸಲಾರೆ. ಬದಲಾಗಿ ಈ ಬೆಳವಣಿಗೆಯನ್ನು ದುರದೃಷ್ಟಕರವೆಂದು ದುಃಖಿಸುತ್ತೇನೆ ಅನ್ನೋ ಮೂಲಕ ಹಿಗ್ಗಾಮುಗ್ಗ ಝಾಡಿಸಿದ್ದಾರೆ. ವಿಜಯೇಂದ್ರ ಟ್ವೀಟ್ ನಲ್ಲೇನಿದೆ.. ಭಾರತೀಯ ಜನತಾ ಪಾರ್ಟಿ, ಲಕ್ಷಾಂತರ ಕಾರ್ಯಕರ್ತರನ್ನು ಹೊಂದುವ ಮೂಲಕ ವಿಶ್ವದಲ್ಲಿ ಅಗ್ರಮಾನ್ಯತೆ ಪಡೆದಿರುವ ರಾಜಕೀಯ ಪಕ್ಷ. ಸಂಘ ಸಂಸ್ಕಾರ ಪಡೆದಿರುವ ಸಮರ್ಪಣಾ ಮನೋಭಾವದ ಕಾರ್ಯಕರ್ತರ ಬೆವರ ಪರಿಶ್ರಮದಿಂದ ಸಮೃದ್ಧ ವೃಕ್ಷದಂತೆ ಬೆಳೆದಿರುವ ಪಕ್ಷದಲ್ಲಿ ಶಿಸ್ತು-ತ್ಯಾಗಕ್ಕೆ ಮೊದಲ ಆದ್ಯತೆ. ಪಕ್ಷದ ಹಿರಿಯರು ಹಾಗೂ ವರಿಷ್ಠರು ಈ ವಿಷಯದಲ್ಲಿ ಎಂದಿಗೂ ರಾಜಿ ಮಾಡಿಕೊಂಡಿರುವ ಉದಾಹರಣೆ…