ಆರೋಗ್ಯಕ್ಕೆ ನಿದ್ರೆ ಬಹಳ ಮುಖ್ಯ. ನಾವು ಮಲಗುವ ಸ್ಥಳ ಮತ್ತು ದಿಕ್ಕು ನಮ್ಮ ದೇಹ ಮತ್ತು ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ವಾಸ್ತು ಪ್ರಕಾರ, ಸರಿಯಾದ ದಿಕ್ಕಿನಲ್ಲಿ ಮಲಗುವುದರಿಂದ ದೇಹದಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಆರೋಗ್ಯ ಮತ್ತು ಮಾನಸಿಕ ಶಾಂತಿ ದೊರೆಯುತ್ತದೆ. ಆದರೆ ತಪ್ಪು ದಿಕ್ಕಿನಲ್ಲಿ ಮಲಗುವುದರಿಂದ ಒತ್ತಡ, ಆಯಾಸ ಮತ್ತು ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ವಾಸ್ತು ಪ್ರಕಾರ ನಾವು ಯಾವ ದಿಕ್ಕಿನಲ್ಲಿ ಮಲಗಬೇಕು ಎಂಬುದನ್ನು ಈಗ ಕಂಡುಹಿಡಿಯೋಣ. ದಕ್ಷಿಣ ದಿಕ್ಕು ವಾಸ್ತು ಪ್ರಕಾರ, ದಕ್ಷಿಣಕ್ಕೆ ತಲೆಯಿಟ್ಟು ಮಲಗುವುದು ಉತ್ತಮ. ಭೂಮಿಯ ಕಾಂತೀಯ ಶಕ್ತಿಯೊಂದಿಗೆ ಸಮತೋಲನವನ್ನು ಸಾಧಿಸುವ ಮೂಲಕ, ನಿದ್ರೆಯ ಗುಣಮಟ್ಟ ಸುಧಾರಿಸುತ್ತದೆ. ಇದು ದೇಹವನ್ನು ಕ್ರಿಯಾಶೀಲವಾಗಿರಿಸುತ್ತದೆ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಆರೋಗ್ಯದ ದೃಷ್ಟಿಯಿಂದಲೂ ಇದು ತುಂಬಾ ಒಳ್ಳೆಯದು ಎಂದು ತಜ್ಞರು ಸೂಚಿಸುತ್ತಾರೆ. ಪೂರ್ವ ದಿಕ್ಕು ವಿದ್ಯಾರ್ಥಿಗಳು ಮತ್ತು ಬುದ್ಧಿಜೀವಿಗಳಿಗೆ ಪೂರ್ವ ದಿಕ್ಕಿನಲ್ಲಿ ಮಲಗುವುದು ಅತ್ಯಂತ ಸೂಕ್ತವಾಗಿದೆ. ಈ ನಿರ್ದೇಶನವು ಬುದ್ಧಿಶಕ್ತಿಯ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಸರಿಯಾದ ನಿದ್ರೆ ಮಾಡುವುದರಿಂದ ಹೊಸ…
Author: Author AIN
ಸೂರ್ಯೋದಯ – 6:18 ಬೆ ಸೂರ್ಯಾಸ್ತ – 6:24 ಸಂಜೆ ಶಾಲಿವಾಹನ ಶಕೆ -1946 ಸಂವತ್-2080 ಕ್ರೋಧಿನಾಮ ಸಂವತ್ಸರ, ಉತ್ತರ ಅಯಣ, ಶುಕ್ಲ ಪಕ್ಷ, ಶಿಶಿರ ಋತು, ಪಾಲ್ಗುಣ ಮಾಸ, ತಿಥಿ – ತ್ರಯೋದಶಿ ನಕ್ಷತ್ರ – ಶತಭಿಷೆ ಯೋಗ – ಸಾಧ್ಯ ಕರಣ – ಗರಜೆ ರಾಹು ಕಾಲ – 01:30 ದಿಂದ 03:00 ವರೆಗೆ ಯಮಗಂಡ – 06:00 ದಿಂದ 07:30 ವರೆಗೆ ಗುಳಿಕ ಕಾಲ – 09:00 ದಿಂದ 10:30 ವರೆಗೆ ಬ್ರಹ್ಮ ಮುಹೂರ್ತ – 4:42 ಬೆ. ದಿಂದ 5:30 ಬೆ. ವರೆಗೆ ಅಮೃತ ಕಾಲ – 6:14 ಸಂಜೆ. ದಿಂದ 7:43 ರಾ.ವರೆಗೆ ಅಭಿಜಿತ್ ಮುಹುರ್ತ – 11:57ಬೆ. ದಿಂದ 12:45 ಮ. ವರೆಗೆ ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ. “ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು” ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು. Mob. 93534…
ಪುಷ್ಪ ಅಂದರೆ ಫ್ಲವರ್ ಅಲ್ಲ ಫೈರ್ ಅಂದುಕೊಂಡೇ ಬಾಕ್ಸಾಫೀಸ್ ನಲ್ಲಿ ಭರ್ಜರಿ ಬೇಟೆಯಾಡಿದವರು ಐಕಾನ್ ಸ್ಟಾರ್ ಅಲ್ಲು ಅರ್ಜುನ್. ಅಲ್ಲು ಹಾಗೂ ಸುಕುಮಾರ್ ಕಾಂಬೋದ ಪುಷ್ಪ ಸಿನಿಮಾ ಬರೆದ ದಾಖಲೆಗಳು ಅಷ್ಟಿಷ್ಟಲ್ಲ. ಪುಷ್ಪ ದಾಖಲೆಯನ್ನೀಗ ಮಮೋಹನ್ ಲಾಲ್ ಉಡೀಸ್ ಮಾಡಿದ್ದಾರೆ. ಚಿತ್ರ ಬಿಡುಗಡೆಯಾದ ಮೊದಲ ದಿನವೇ 50 ಕೋಟಿ ಗಳಿಗೆ ಮಾಡುವ ನಿರೀಕ್ಷೆ ಇದೆ. ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ನಲ್ಲಿ ಲೂಸಿಫರ್ 2 ಸಿನಿಮಾ ನಯಾ ರೆಕಾರ್ಡ್ ಕ್ರಿಯೇಟ್ ಮಾಡಿದೆ. ಮೋಹನ್ ಲಾಲ್ ಅಭಿನಯದ, ಪೃಥ್ವಿರಾಜ್ ಸುಕುಮಾರ್ ನಿರ್ದೇಶನದ ಎಂಪುರಾನ್ -2 ಅಡ್ವಾನ್ಸ್ ಬುಕಿಂಗ್‌ನಲ್ಲಿ ದಾಖಲೆಯ ಕೋಟಿ ಕೋಟಿ ರೂಪಾಯಿ ಬಾಚಿಕೊಂಡಿದೆ. ಅಲ್ಲು ಅರ್ಜುನ್ ಅಭಿನಯದ ಸೂಪರ್ ಹಿಟ್ ಚಿತ್ರ ‘ಪುಷ್ಪ 2’ ಮತ್ತು ದಳಪತಿ ವಿಜಯ್ ನಟನೆಯ ‘ಲಿಯೋ’, ‘ಜವಾನ್’, ‘ಲಿಯೋ’ ಮತ್ತು ‘ಕಲ್ಕಿ: 2898 AD’ ಗಳನ್ನು ಹಿಂದಿಕ್ಕಿ ‘ಎಂಪೂರನ್’ ಭಾರತೀಯ ಚಿತ್ರರಂಗದಲ್ಲಿ ಇದುವರೆಗೆ ಒಂದು ಗಂಟೆಯಲ್ಲಿ ಅಡ್ವಾನ್ಸ್ ಬುಕ್ಕಿಂಗ್ ಆದ ಚಿತ್ರ ಎಂಬ ಹೆಗ್ಗಳಿಕೆ ಪಡೆದಿದೆ.24 ಗಂಟೆಗಳಲ್ಲಿ…
ಬೆಂಗಳೂರು: ಕಡೆಗೂ ತಮ್ಮ ವಿರುದ್ಧವೇ ತೊಡೆತಟ್ಟಿದ್ದ ರೆಬೆಲ್ ಬಣ ನಾಯಕರಿಗೆ ಯತ್ನಾಳ್ ಉಚಾಟನೆ ಮೂಲಕ ಎಚ್ಚರಿಕೆ ಸಂದೇಶ ರವಾನಿಸುವಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಯಶಸ್ವಿಯಾಗಿದ್ದಾರೆ. ರೆಬೆಲ್ ಟೀಂನ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಉಚ್ಚಾಟನೆ ಶಿಕ್ಷೆ ಕೊಡಿಸಿರುವ ವಿಜಯೇಂದ್ರ, ಎಕ್ಸ್ ಖಾತೆಯಲ್ಲಿ ಟ್ವೀಟ್ ಮೂಲಕ ಗುಮ್ಮಿದ್ದಾರೆ. ಕೆಲ ದಿನಗಳ ಹಿಂದೆ ನಡೆದ ಕಹಿ ಪ್ರಸಂಗಗಳಿಂದ ಎಂದಿಗೂ ನಾನು ಉದ್ವೇಗಗೊಳ್ಳಲಿಲ್ಲ, ಯಾರೊಂದಿಗೂ ದುಃಖ ತೋಡಿಕೊಂಡಿಲ್ಲ, ವರಿಷ್ಠರು ತೆಗೆದುಕೊಂಡಿರುವ ಶಿಸ್ತು ಕ್ರಮವನ್ನು ನಾನು ಸಂಭ್ರಮಿಸಲಾರೆ. ಬದಲಾಗಿ ಈ ಬೆಳವಣಿಗೆಯನ್ನು ದುರದೃಷ್ಟಕರವೆಂದು ದುಃಖಿಸುತ್ತೇನೆ ಅನ್ನೋ ಮೂಲಕ ಹಿಗ್ಗಾಮುಗ್ಗ ಝಾಡಿಸಿದ್ದಾರೆ. ವಿಜಯೇಂದ್ರ ಟ್ವೀಟ್ ನಲ್ಲೇನಿದೆ.. ಭಾರತೀಯ ಜನತಾ ಪಾರ್ಟಿ, ಲಕ್ಷಾಂತರ ಕಾರ್ಯಕರ್ತರನ್ನು ಹೊಂದುವ ಮೂಲಕ ವಿಶ್ವದಲ್ಲಿ ಅಗ್ರಮಾನ್ಯತೆ ಪಡೆದಿರುವ ರಾಜಕೀಯ ಪಕ್ಷ. ಸಂಘ ಸಂಸ್ಕಾರ ಪಡೆದಿರುವ ಸಮರ್ಪಣಾ ಮನೋಭಾವದ ಕಾರ್ಯಕರ್ತರ ಬೆವರ ಪರಿಶ್ರಮದಿಂದ ಸಮೃದ್ಧ ವೃಕ್ಷದಂತೆ ಬೆಳೆದಿರುವ ಪಕ್ಷದಲ್ಲಿ ಶಿಸ್ತು-ತ್ಯಾಗಕ್ಕೆ ಮೊದಲ ಆದ್ಯತೆ. ಪಕ್ಷದ ಹಿರಿಯರು ಹಾಗೂ ವರಿಷ್ಠರು ಈ ವಿಷಯದಲ್ಲಿ ಎಂದಿಗೂ ರಾಜಿ ಮಾಡಿಕೊಂಡಿರುವ ಉದಾಹರಣೆ…
ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲ್ಲೂಕಿನ ಮಹಾಲಿಂಗಪುರ ಪಟ್ಟಣದ ವಾರ್ಡ್ ನಂಬರ್ 14ರ ಕೆಂಗೇರಿಮಡ್ಡಿಯಲಿ ಸರಿ ಸುಮಾರು ಒಂದು ತಿಂಗಳಾದರೂ ಕುಡಿಯೋಕೆ ನೀರಿಲ್ಲದೆ ಜನರು ಪರದಾಡುತ್ತಿದ್ದಾರೆ.. ಸಾರ್ವಜನಿಕರು ಅವರ ಗೋಳು ಹೇಳಲ್ಲೂ ಸಂಬಂಧ ಪಟ್ಟ ಅಧಿಕಾರಿಗಳ ಮೊರೆ ಹೋದರು ಸಹ ಕ್ಯಾರೆ ಅನ್ನುತ್ತಿಲ್ಲ…. ಅಲ್ಲಿನ ಮಹಿಳೆಯರು ಚಿಕ್ಕ ಚಿಕ್ಕ ಮಕ್ಕಳನ್ನು ಕರೆದುಕೊಂಡು ಬೇರೆಯವರ ತೋಟಕ್ಕೆ ಹೋಗಿ ಕುಡಿಯಲು ನೀರು ತರೋದು ನೋಡಿದರೆ… ಕರುಳು ಕಿತ್ತು ಬರುತ್ತದೆ.. ಈ ಸುದ್ದಿಯನ್ನು ನೋಡಿಯಾದರು ಸಂಬಂಧ ಪಟ್ಟ ಅಧಿಕಾರಿಗಳ ಮನಸ್ಸು ಕರಗಿ ಇಲ್ಲಿ ವಾಸಿಸುವ ಬಡ ಕುಟುಂಬಗಳಿಗೆ ಕುಡಿಯೋ ನೀರಿನ ಸಮಸ್ಯೆಗೆ ಬ್ರೇಕ್ ಹಾಕುತ್ತಾರೋ ಅತ್ವಾ ಅವರು ಹಾಕುವ ಹಿಡಿ ಶಾಪಕ್ಕೆ ಗುರಿಯಾಗುತ್ತಾರೋ ಎಂದು ಕಾದು ನೋಡೋಣ.. ಪ್ರಕಾಶ ಕುಂಬಾರ ಬಾಗಲಕೋಟೆ
ಐಪಿಎಲ್ 18ನೇ ಋತುವಿನ ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ತಮ್ಮ ಅತ್ಯುತ್ತಮ ಬ್ಯಾಟಿಂಗ್ ಮೂಲಕ ಪ್ರಭಾವಿತರಾದರು. ಅವರು ಪಂಜಾಬ್ ನಾಯಕನಾಗಿ ತಮ್ಮ ಮೊದಲ ಜಯವನ್ನು ಸಾಧಿಸಿದರು. ಮಂಗಳವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ಗುಜರಾತ್ ಟೈಟಾನ್ಸ್ ತಂಡವನ್ನು 11 ರನ್‌ಗಳಿಂದ ಸೋಲಿಸಿತು. ಆದಾಗ್ಯೂ, ಈ ಪಂದ್ಯದ ಸಮಯದಲ್ಲಿ, ಶ್ರೇಯಸ್ ಅಯ್ಯರ್ ತಂಡದ ಸ್ಟಾರ್ ಆಲ್‌ರೌಂಡರ್ ಮತ್ತು ಆಸ್ಟ್ರೇಲಿಯಾದ ಕ್ರಿಕೆಟಿಗ ಗ್ಲೆನ್ ಮ್ಯಾಕ್ಸ್‌ವೆಲ್ ಅವರಲ್ಲಿ ಕ್ಷಮೆಯಾಚಿಸಿದರು. ಅಯ್ಯರ್ ಕ್ಷಮೆಯಾಚಿಸಲು ಏಕೆ ಬಂದರು ಎಂದು ಈಗ ನೋಡೋಣ.. ಈ ಪಂದ್ಯದಲ್ಲಿ, ಗುಜರಾತ್ ಟೈಟಾನ್ಸ್ ಬೆನ್ನಟ್ಟುತ್ತಿದ್ದಾಗ, ಅವರ ಆರಂಭಿಕ ಆಟಗಾರ ಸಾಯಿ ಸುದರ್ಶನ್ ಅದ್ಭುತವಾಗಿ ಬ್ಯಾಟಿಂಗ್ ಮಾಡಿದರು. https://ainkannada.com/if-a-cat-of-this-color-comes-to-your-house-it-is-a-sign-of-good-luck/ ಉತ್ತಮ ಆರಂಭಿಕ ಪಾಲುದಾರಿಕೆಯ ಜೊತೆಗೆ, ಅವರು ಬಟ್ಲರ್ ಜೊತೆ ಪ್ರಮುಖ ಪಾಲುದಾರಿಕೆಯನ್ನು ರೂಪಿಸಿದರು. ಅವರು 41 ಎಸೆತಗಳಲ್ಲಿ ಒಟ್ಟು 74 ರನ್ ಗಳಿಸಿದರು. ಆದರೆ, ಅಪಾಯಕಾರಿಯಾಗಿ ಆಡುತ್ತಿದ್ದ ಸಾಯಿ ಸುದರ್ಶನ್ ಅವರನ್ನು ಬೇಗನೆ…
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ ಡೆವಿಲ್ ಶೂಟಿಂಗ್ ಭರದಿಂದ ಸಾಗುತ್ತಿದೆ. ಮೈಸೂರಿನಲ್ಲಿ ಶೂಟಿಂಗ್ ಮುಗಿಸಿ ರಾಜಸ್ತಾನದಲ್ಲಿ ಇಡೀ ತಂಡ ಬೀಡುಬಿಟ್ಟಿದೆ. ಡೆವಿಲ್ ಮೂರನೇ ಹಂತದ ಚಿತ್ರೀಕರಣ ರಾಜಸ್ತಾನದ ಉದಯಪುರ್‌ದಲ್ಲಿ ಮಾತಿನ ಭಾಗದ ಚಿತ್ರೀಕರಣ ನಡೆಯುತ್ತಿದ್ದು, ನಟ ದರ್ಶನ್, ನಟಿ ರಚನಾ ರೈ, ಮಹೇಶ್ ಮಂಜ್ರೇಕರ್, ಅಚ್ಯುತಕುಮಾರ್ ಮುಂತಾದ ಕಲಾವಿದರು ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ರಾಜಸ್ತಾನದ ಮೊದಲ ದಿನದ ಚಿತ್ರೀಕರಣದಲ್ಲಿ ಭಾಗಿಯಾಗಿರುವ ನಟಿ ರಚನಾ ರೈ ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಹಾಗಂತ ಶೂಟಿಂಗ್ ಫೋಟೋಗಳಲ್ಲ. ಬದಲಾಗಿ ಚಿತ್ರೀಕರಣ ಮುಗಿಯುತ್ತಿದ್ದಂತೆ ಉದಯಪುರದ ಕರ್ಣಿ ಮಾತಾ ದೇವಾಲಯಕ್ಕೆ ಭೇಟಿ ಕೊಟ್ಟಿದ್ದಾರೆ, ಅಲ್ಲದೇ ಉದಯಪುರ ಸೌಂದರ್ಯಕ್ಕೆ ಫಿದಾ ಆಗಿ, ಉದಯ್ ಪುರ್ ಯು ಸಿಟಿ ಎಂದು ಹಾರ್ಟ್ ಸಿಂಬಲ್ ಆಗಿದ್ದಾರೆ. ಡೆವಿಲ್ ಸಿನಿಮಾ ಮೂಲಕ ರಚನಾ ರೈ ನಾಯಕಿಯಾಗಿ ಸ್ಯಾಂಡಲ್ ವುಡ್ ಗೆ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಬ್ಯಾಡ್ಮಿಂಟನ್ ಪ್ಲೇಯರ್ ಆಗಿರುವ ಈ ತುಳುನಾಡ ಚೆಲುವೆ, ಮಾಡೆಲ್, ಡ್ಯಾನ್ಸರ್ ಹಾಗೇ ಬರಹಗಾರ್ತಿ ಕೂಡ. ಓ…
ಬೆಳಗಾವಿ: ದೇಶದಲ್ಲಿ ಹತ್ಯೆಗೊಳಗಾಗಿ ಸಾಯುವವರಿಗಿಂತ, ಆತ್ಮಹತ್ಯೆ ಮಾಡಿಕೊಂಡು ಸಾಯುವವರ ಸಂಖ್ಯೆಯೇ ಹೆಚ್ಚಾಗುತ್ತಿದೆ. ಇಂದು ಬೆಳ್ಳಗೆಯಷ್ಟೆ ಎಂಬಿಎ ಪದವೀಧರೆ ಪಿ.ಜಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿತ್ತು. ಇದೀಗ ಮತ್ತೋರ್ವ ಯುವತಿ ನನ್ನ ಸಾವಿಗೆ ನಾನೇ ಕಾರಣವೆಂದು ಗೋಡೆ ಮೇಲೆ ಬರೆದಿಟ್ಟು ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಮಾಡಿಕೊಂಡಿರುವ ಘಟನೆ ಬೆಳಗಾವಿ ತಾಲೂಕಿನ ಸಾಂಬ್ರಾ ಗ್ರಾಮದಲ್ಲಿ ನಡೆದಿದೆ. https://ainkannada.com/if-a-cat-of-this-color-comes-to-your-house-it-is-a-sign-of-good-luck/ ಜಾಹ್ನವಿ(22) ಆತ್ಮಹತ್ಯೆ ಮಾಡಿಕೊಂಡ ದುರ್ಧೈವಿಯಾಗಿದ್ದು, ನನ್ನ ಸಾವಿಗೆ ನಾನೇ ಕಾರಣ, ನನ್ನ ಮೇಲೆ ಯಾರೂ ವಿಶ್ವಾಸವಿಡುತ್ತಿಲ್ಲ. ನನಗೆ ಯಾರೂ ಸ್ನೇಹಿತರು ಇಲ್ಲ, ಅಪ್ಪ ಅಮ್ಮ ಕೂಡ ನಂಬುತ್ತಿಲ್ಲ. ಪೋಷಕರು ನನ್ನ ಮಾತಿಗೆ ಸ್ಪಂದಿಸುತ್ತಿಲ್ಲ, ಕಾಳಜಿ ವಹಿಸುತ್ತಿಲ್ಲ. ಮತ್ತೆ ಹುಟ್ಟಿ ಬರುತ್ತೇನೆ ಎಂದು ಗೋಡೆ ಮೇಲೆ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪೋಷಕರು ಹಾಸನದಲ್ಲಿ ಕೆಲಸ ಮಾಡುತ್ತಿದ್ದರೆ, ಜಾಹ್ನವಿ ಓದಲು ಬೆಳಗಾವಿಯಲ್ಲಿ ಚಿಕ್ಕಪ್ಪನ ಮನೆ ಮೇಲೆ ರೂಮ್ ಮಾಡಿಕೊಂಡಿದ್ದಳು. ಆದ್ರೆ, ಇದೀಗ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇನ್ನು ಮರಣೋತ್ತರ ಪರೀಕ್ಷೆ ನಡೆಸಿ ಜಾಹ್ನವಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿಲಾಗಿದ್ದು,…
ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿನ ಬಣಬಡಿದಾಟಕ್ಕೆ ಕೊನೆಗೂ ಹೈಕಮಾಂಡ್ ಬ್ರೇಕ್ ಹಾಕಿದ್ದು, ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು 6 ವರ್ಷಗಳ ಕಾಲ ಉಚ್ಛಾಟನೆ ಮಾಡಲಾಗಿದೆ. ವಿಜಯೇಂದ್ರ ಹಾಗೂ ಯಡಿಯೂರಪ್ಪ ವಿರುದ್ಧ ಬಹಿರಂಗವಾಗಿಯೇ ಹೇಳಿಕೆ ನೀಡುತ್ತಿದ್ದ ಯತ್ನಾಳ್‌ಗೆ ಬಿಜೆಪಿ ಹೈಕಮಾಂಡ್‌ನಿಮದ ಶೋಕಾಸ್ ನೋಟಿಸ್ ಕೂಡ ಜಾರಿ ಮಾಡಲಾಗಿತ್ತು. ಅದಕ್ಕೆ ಉತ್ತರವನ್ನೂ ಕೊಟ್ಟಿದ್ದರು. ಇದೀಗ ದೆಹಲಿ ಬಿಜೆಪಿ ಹೈಕಮಾಂಡ್‌ಗೆ ಅವರ ಉತ್ತರದಿಂದ ಸೂಕ್ತ ಉತ್ತರ ಸಿಕ್ಕಿಲ್ಲವೆಂದು ಶಾಸಕ ಬಸನಗೌಡ ಪಾಟೀಲ್ ಅವರನ್ನು ಉಚ್ಛಾಟನೆ ಮಾಡಲಾಗಿದೆ. ಇನ್ನು ಅವರ ಶಾಸಕ ಸ್ಥಾನಕ್ಕೂ ಕುತ್ತು ಬರುತ್ತಾ ಎಂಬ ಪ್ರಶ್ನೆ ಶುರುವಾಗಿದೆ. ಶಾಸಕ ಸ್ಥಾನದಲ್ಲಿ ಅವರು ಸ್ವತಂತ್ರವಾಗಿ ಮುಂದುವರೆಯಬಹುದು. ಒಂದು ವೇಳೆ ಪಕ್ಷದ ಚಿಹ್ನೆಯಡಿ ಗೆದ್ದಿರುವುದು ತನಗೆ ಬೇಡವೆಂದು ರಾಜೀನಾಮೆ ಕೊಟ್ಟರೆ, ಶಾಸಕ ಸ್ಥಾನ ರದ್ದಾಗಿ ಪುನಃ ಚುನಾವಣೆಗೆ ಹೋಗಬಹುದು. https://ainkannada.com/if-a-cat-of-this-color-comes-to-your-house-it-is-a-sign-of-good-luck/ ಬಿಜೆಪಿ ಶಾಸಕ ಯತ್ನಾಳ್ ಸದಾ ಪಕ್ಷದ ಬಗ್ಗೆ ಆಗಲಿ, ನಾಯಕರ ಬಗ್ಗೆ ಆರೋಪಗಳನ್ನು ಮಾಡುತ್ತಲೇ ಇದ್ದರು. ಅದರಲ್ಲೂ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ…
ದುನಿಯಾ ವಿಜಯ್ ಕುಮಾರ್ ತಾವೊಬ್ಬ ಅದ್ಭುತ ಸಿನಿಮಾಕರ್ಮಿ ಅನ್ನೋದನ್ನು ಸಲಗ, ಭೀಮ ಮೂಲಕ ಪ್ರೋವ್ ಮಾಡಿದ್ದಾರೆ. ಬ್ಯಾಕ್ ಟು ಬ್ಯಾಕ್ ಹಿಟ್ ಕೊಟ್ಟಿರುವ ಬ್ಲಾಕ್ ಕೋಬ್ರಾ ಹ್ಯಾಟ್ರಿಕ್ ಬಾರಿಸುವ ಹುಮ್ಮಸ್ಸಿನಲ್ಲಿದ್ದಾರೆ. ಒಂದ್ಕಡೆ ನಟನೆ ಮತ್ತೊಂದ್ಕಡೆ ನಿರ್ದೇಶನ..ಇವರೆಡರ ಜೊತೆಯಲ್ಲಿ ಇಬ್ಬರು ಹೆಣ್ಣು ಮಕ್ಕಳನ್ನು ಸ್ಯಾಂಡಲ್ ವುಡ್ ಸಿನಿಮಾಪ್ರೇಮಿಗಳ ಮುಂದೆ ತರುವ ಜವಾಬ್ದಾರಿ ಕೂಡ ಹೊತ್ತುಕೊಂಡಿದ್ದಾರೆ. ಲ್ಯಾಂಡ್ ಲಾರ್ಡ್ ಚಿತ್ರದಲ್ಲಿ ಅಭಿನಯಿಸುತ್ತಿರುವ ಸ್ಯಾಂಡಲ್ ವುಡ್ ಸಿಂಗಲ್ ಸಲಗ ʼಸಿಟಿ ಲೈಟ್ಸ್ʼ ಎಂಬ ಚಿತ್ರವನ್ನು ನಿರ್ದೇಶಿಸಿ, ನಿರ್ಮಿಸುತ್ತಿದ್ದಾರೆ. ಈ ಚಿತ್ರದ ಮೂಲಕವೇ ವಿಜಯ್ ಎರಡನೇ ಪುತ್ರಿ ಮೋನಿಷಾ ನಾಯಕಿಯಾಗಿ ಮೆರವಣಿಗೆ ಹೊರಡುತ್ತಿದ್ದಾರೆ. ಅದು ಕೂಡ ದೊಡ್ಮನೆ ಹುಡ್ಗ ವಿನಯ್ ರಾಜ್ ಕುಮಾರ್ ಗೆ ಜೋಡಿಯಾಗಿ ಅನ್ನೋದು ವಿಶೇಷ. ಕಳೆದ ತಿಂಗಳಷ್ಟೇ ಸಿಟಿ ಲೈಟ್ಸ್ ಸಿನಿಮಾ ಅದ್ಧೂರಿಯಾಗಿ ಸೆಟ್ಟೇರಿತ್ತು. ಬೆಂಗಳೂರಿನ ಬಂಡೇ ಮಹಾಕಾಳಿ ದೇವಿ ಆಶೀರ್ವಾದ ಪಡೆದು ಶೂಟಿಂಗ್ ಅಖಾಡಕ್ಕೆ ತಂಡ ಕಟ್ಟಿಕೊಂಡು ಇಳಿದಿದ್ದ ದುನಿಯ್ ವಿಜಯ್ ಕುಮಾರ್ ಈಗ ಪ್ರೇಕ್ಷಕರಿಗೆ ಸ್ಪೆಷಲ್ ಆಗಿ ಕುಕ್ಕಿಂಗ್ ಮಾಡ್ತಿದ್ದಾರೆ…