Author: Author AIN

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿನ ಬಣಬಡಿದಾಟಕ್ಕೆ ಕೊನೆಗೂ ಹೈಕಮಾಂಡ್​ ಬ್ರೇಕ್ ಹಾಕಿದ್ದು, ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್​​ ಯತ್ನಾಳ್​ ಅವರನ್ನು 6 ವರ್ಷಗಳ ಕಾಲ ಉಚ್ಛಾಟನೆ ಮಾಡಲಾಗಿದೆ. ವಿಜಯೇಂದ್ರ ಹಾಗೂ ಯಡಿಯೂರಪ್ಪ ವಿರುದ್ಧ ಬಹಿರಂಗವಾಗಿಯೇ ಹೇಳಿಕೆ ನೀಡುತ್ತಿದ್ದ ಯತ್ನಾಳ್​​ಗೆ ಬಿಜೆಪಿ ಹೈಕಮಾಂಡ್‌ನಿಮದ ಶೋಕಾಸ್ ನೋಟಿಸ್ ಕೂಡ ಜಾರಿ ಮಾಡಲಾಗಿತ್ತು. ಅದಕ್ಕೆ ಉತ್ತರವನ್ನೂ ಕೊಟ್ಟಿದ್ದರು. ಇದೀಗ ದೆಹಲಿ ಬಿಜೆಪಿ ಹೈಕಮಾಂಡ್‌ಗೆ ಅವರ ಉತ್ತರದಿಂದ ಸೂಕ್ತ ಉತ್ತರ ಸಿಕ್ಕಿಲ್ಲವೆಂದು ಶಾಸಕ ಬಸನಗೌಡ ಪಾಟೀಲ್ ಅವರನ್ನು ಉಚ್ಛಾಟನೆ ಮಾಡಲಾಗಿದೆ. ಇನ್ನು ಅವರ ಶಾಸಕ ಸ್ಥಾನಕ್ಕೂ ಕುತ್ತು ಬರುತ್ತಾ ಎಂಬ ಪ್ರಶ್ನೆ ಶುರುವಾಗಿದೆ. ಶಾಸಕ ಸ್ಥಾನದಲ್ಲಿ ಅವರು ಸ್ವತಂತ್ರವಾಗಿ ಮುಂದುವರೆಯಬಹುದು. ಒಂದು ವೇಳೆ ಪಕ್ಷದ ಚಿಹ್ನೆಯಡಿ ಗೆದ್ದಿರುವುದು ತನಗೆ ಬೇಡವೆಂದು ರಾಜೀನಾಮೆ ಕೊಟ್ಟರೆ, ಶಾಸಕ ಸ್ಥಾನ ರದ್ದಾಗಿ ಪುನಃ ಚುನಾವಣೆಗೆ ಹೋಗಬಹುದು. https://ainkannada.com/if-a-cat-of-this-color-comes-to-your-house-it-is-a-sign-of-good-luck/ ಬಿಜೆಪಿ ಶಾಸಕ ಯತ್ನಾಳ್‌ ಸದಾ ಪಕ್ಷದ ಬಗ್ಗೆ ಆಗಲಿ, ನಾಯಕರ ಬಗ್ಗೆ ಆರೋಪಗಳನ್ನು ಮಾಡುತ್ತಲೇ ಇದ್ದರು. ಅದರಲ್ಲೂ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ…

Read More

ದುನಿಯಾ ವಿಜಯ್‌ ಕುಮಾರ್‌ ತಾವೊಬ್ಬ ಅದ್ಭುತ ಸಿನಿಮಾಕರ್ಮಿ ಅನ್ನೋದನ್ನು ಸಲಗ, ಭೀಮ ಮೂಲಕ ಪ್ರೋವ್‌ ಮಾಡಿದ್ದಾರೆ. ಬ್ಯಾಕ್‌ ಟು ಬ್ಯಾಕ್‌ ಹಿಟ್‌ ಕೊಟ್ಟಿರುವ ಬ್ಲಾಕ್‌ ಕೋಬ್ರಾ ಹ್ಯಾಟ್ರಿಕ್‌ ಬಾರಿಸುವ ಹುಮ್ಮಸ್ಸಿನಲ್ಲಿದ್ದಾರೆ. ಒಂದ್ಕಡೆ ನಟನೆ ಮತ್ತೊಂದ್ಕಡೆ ನಿರ್ದೇಶನ..ಇವರೆಡರ ಜೊತೆಯಲ್ಲಿ ಇಬ್ಬರು ಹೆಣ್ಣು ಮಕ್ಕಳನ್ನು ಸ್ಯಾಂಡಲ್‌ ವುಡ್‌ ಸಿನಿಮಾಪ್ರೇಮಿಗಳ ಮುಂದೆ ತರುವ ಜವಾಬ್ದಾರಿ ಕೂಡ ಹೊತ್ತುಕೊಂಡಿದ್ದಾರೆ. ಲ್ಯಾಂಡ್‌ ಲಾರ್ಡ್‌ ಚಿತ್ರದಲ್ಲಿ ಅಭಿನಯಿಸುತ್ತಿರುವ ಸ್ಯಾಂಡಲ್‌ ವುಡ್‌ ಸಿಂಗಲ್‌ ಸಲಗ ʼಸಿಟಿ ಲೈಟ್ಸ್ʼ‌ ಎಂಬ ಚಿತ್ರವನ್ನು ನಿರ್ದೇಶಿಸಿ, ನಿರ್ಮಿಸುತ್ತಿದ್ದಾರೆ. ಈ ಚಿತ್ರದ ಮೂಲಕವೇ ವಿಜಯ್‌ ಎರಡನೇ ಪುತ್ರಿ ಮೋನಿಷಾ ನಾಯಕಿಯಾಗಿ ಮೆರವಣಿಗೆ ಹೊರಡುತ್ತಿದ್ದಾರೆ. ಅದು ಕೂಡ ದೊಡ್ಮನೆ ಹುಡ್ಗ ವಿನಯ್‌ ರಾಜ್‌ ಕುಮಾರ್‌ ಗೆ ಜೋಡಿಯಾಗಿ ಅನ್ನೋದು ವಿಶೇಷ. ಕಳೆದ ತಿಂಗಳಷ್ಟೇ ಸಿಟಿ ಲೈಟ್ಸ್‌ ಸಿನಿಮಾ ಅದ್ಧೂರಿಯಾಗಿ ಸೆಟ್ಟೇರಿತ್ತು. ಬೆಂಗಳೂರಿನ ಬಂಡೇ ಮಹಾಕಾಳಿ ದೇವಿ ಆಶೀರ್ವಾದ ಪಡೆದು ಶೂಟಿಂಗ್‌ ಅಖಾಡಕ್ಕೆ ತಂಡ ಕಟ್ಟಿಕೊಂಡು ಇಳಿದಿದ್ದ ದುನಿಯ್‌ ವಿಜಯ್‌ ಕುಮಾರ್‌ ಈಗ ಪ್ರೇಕ್ಷಕರಿಗೆ ಸ್ಪೆಷಲ್‌ ಆಗಿ ಕುಕ್ಕಿಂಗ್‌ ಮಾಡ್ತಿದ್ದಾರೆ…

Read More

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಕಚೇರಿ ನಿರ್ಮಾಣಕ್ಕೆ ಸ್ಥಳ ಮಂಜೂರು ವಿಚಾರದಲ್ಲಿ ಸಿದ್ದು ಸರ್ಕಾರಕ್ಕೆ ಆರಂಭಿಕ ಹಿನ್ನಡೆಯಾಗಿದೆ. ಹುಬ್ಬಳ್ಳಿಯ ಕೇಶ್ವಾಪುರ ಸರ್ಕಲ್ ಬಳಿಯ ಜಾಗವನ್ನು ಕಾಂಗ್ರೆಸ್ ಕಚೇರಿ ಸ್ಥಾಪನೆಗೆ ನೀಡಿ ಆದೇಶ ಹೊರಡಿಸಿದ್ದ ಸರ್ಕಾರಕ್ಕೆ ಭಾರೀ ಹಿನ್ನಡೆಯಾಗಿದೆ. ಹೌದು ಮಹಾನಗರ ಪಾಲಿಕೆ ಸ್ಥಳವನ್ನು ಅತ್ಯಂತ ಕಡಿಮೆ ಬೆಲೆ ಖರೀದಿಸಿ ಬಳಿಕ ಅಲ್ಲಿ ಕಾಂಗ್ರೆಸ್ ಕಚೇರಿ ನಿರ್ಮಾಣ ಮಾಡಲು ಸರ್ಕಾರ ಮುಂದಾಗಿತ್ತು. ಆದ್ರೆ ಸರ್ಕಾರದ ನಿರ್ಧಾರಕ್ಕೆ ಕರ್ನಾಟಕ ಹೈಕೋರ್ಟ್​ನ ಧಾರವಾಡ ಪೀಠ ತಡೆ ನೀಡಿದೆ. ಹುಬ್ಬಳ್ಳಿಯ ಕೇಶ್ವಾಪುರ ಸರ್ಕಲ್ ಬಳಿಯ 25ಗುಂಟೆಗಿಂತಲೂ ಅಧಿಕ ಜಾಗದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕುಡಿಯುವ ನೀರು ಸಂಗ್ರಹಣೆಗೆ ಮೀಸಲಿಟ್ಟಿತ್ತು. ಈ ಜಾಗದಲ್ಲಿ ಕಾಂಗ್ರೆಸ್ ಕಚೇರಿ ಸ್ಥಾಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಶೇಕಡಾ 5 ರಷ್ಟು ಹಣವನ್ನು ಪಾಲಿಕೆಗೆ ನೀಡಿ, 25ಗುಂಟೆಗಿಂತಲೂ ಅಧಿಕ ಭೂಮಿಯ ಹಕ್ಕುನ್ನು ಪಡೆಯಲು ಕ್ಯಾಬಿನೆಟ್ ತೀರ್ಮಾನ ಮಾಡಿತ್ತು. https://ainkannada.com/if-a-cat-of-this-color-comes-to-your-house-it-is-a-sign-of-good-luck/ ಸಂಪುಟದ ಈ ನಿರ್ಧಾರಕ್ಕೆ ಹುಬ್ಬಳ್ಳಿ-ಧಾರವಾಡ ಮಹಾನಗರ…

Read More

ತುಮಕೂರು: ನಗರದಲ್ಲಿ ಹೃದಯವಿದ್ರಾವಕ ಘಟನೆಯೊಂದು ವರದಿಯಾಗಿದೆ. ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತದೆ ಎಂಬ ಕಾರಣಕ್ಕೆ ಮೂರು ವರ್ಷದ ಮಗುವನ್ನು ಕೊಲೆ ಮಾಡಿ ಹಾವು ಕಚ್ಚಿ ಸಾವನ್ನಪ್ಪಿದೆ ಎಂದು ನಾಟಕವಾಡಿದ್ದ 24 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿದ್ದಾರೆ. ಮಿಥುನ್‌ಗೌಡ (4) ಕೊಲೆಯಾದ ಮಗುವಾಗಿದ್ದು, ಚಾಮರಾಜನಗರ ಮೂಲದ ಚಂದ್ರಶೇಖರ್‌ ಮತ್ತು ಕಾವ್ಯಾ ತುಮಕೂರು ತಾಲೂಕಿನ ಸಿದ್ಧಲಿಂಗಯ್ಯನಪಾಳ್ಯದಲ್ಲಿ ನೆಲೆಸಿದ್ದರು.. ಕಾವ್ಯ ಮಂಡ್ಯ ಜಿಲ್ಲೆ, ಬೆಳ್ಳೂರು ಕ್ರಾಸ್ ಮೂಲದವಳಾಗಿದ್ದು, ಕಾವ್ಯಾಗೆ ಈಗಾಗಲೇ ಅಶೋಕ ಎಂಬುವರ ಜತೆ ಮದುವೆಯಾಗಿತ್ತು. ಪ್ರೆಗ್ನೆಂಟ್ ಇದ್ದಾಗಲೇ ಚಂದ್ರಶೇಖರ್ ಜೊತೆ ಓಡಿ ಬಂದಿದ್ದ ಕಾವ್ಯ, ಬಳಿಕ ಮಿಥುನ್ ಗೌಡಗೆ ಜನ್ಮ ನೀಡಿದ್ದಳು. ನಂತರ ಮಗುವಿನ ವಿಚಾರವಾಗಿ ಈ ಜೋಡಿ ಮಧ್ಯೆ ಜಗಳವಾಗುತ್ತಿತ್ತು. ಮಗುವಿನ ವಿಷಯವಾಗಿ ಇಬ್ಬರ ನಡುವೆ ಕಲಹ ನಡೆಯುತ್ತಿತ್ತು ಎನ್ನಲಾಗಿದೆ. https://ainkannada.com/if-a-cat-of-this-color-comes-to-your-house-it-is-a-sign-of-good-luck/ ಮಾರ್ಚ್ 20ರಂದು, ಕಾವ್ಯ ಕೆಲಸಕ್ಕೆ ಹೋದ ಸಮಯದಲ್ಲಿ ಚಂದ್ರಶೇಖರ್ ಮಗುವಿಗೆ (ಮಿಥುನ್ ಗೌಡ) ಹಲ್ಲೆ ನಡೆಸಿದ್ದ. ಇದರಿಂದ, ತೀವ್ರ ಗಾಯಗೊಂಡ ಮಿಥುನ್ ಪ್ರಜ್ಞೆ ತಪ್ಪಿಬಿದ್ದಿದ್ದ. ಇದನ್ನು ಮುಚ್ಚಿಹಾಕಲು, ಮಗುವಿಗೆ ಹಾವು ಕಚ್ಚಿದೆ ಎಂದು…

Read More

ನಮಗೆಲ್ಲರಿಗೂ ಟೀಮ್ ಇಂಡಿಯಾ ಕ್ರಿಕೆಟಿಗ ಮತ್ತು ನಮ್ಮ ಹೈದರಾಬಾದ್ ಕ್ರಿಕೆಟಿಗ ಮೊಹಮ್ಮದ್ ಸಿರಾಜ್ ಬಗ್ಗೆ ತಿಳಿದಿದೆ. ಅವರು ಭಾರತೀಯ ತಂಡದಲ್ಲಿ ಅತ್ಯಂತ ಅರ್ಹ ಬ್ಯಾಚುಲರ್. ಪ್ರಸ್ತುತ ಕ್ರಿಕೆಟ್ ಮೇಲೆ ಗಮನ ಕೇಂದ್ರೀಕರಿಸಿದ್ದರೂ, ಅವರು ಶೀಘ್ರದಲ್ಲೇ ಮನೆಮಾತಾಗುವ ಲಕ್ಷಣಗಳು ಕಂಡುಬರುತ್ತಿವೆ. ಒಳ್ಳೆಯ ಹುಡುಗಿಯನ್ನು ನೋಡಿದ ನಂತರ ಮನೆಯಲ್ಲಿರುವವರು ಮನೋನನ್ನು ಮದುವೆಯಾಗಲು ಪ್ರಯತ್ನಿಸುತ್ತಿದ್ದಾರೆ ಎಂದು ವರದಿಯಾಗಿದೆ. ಸಿರಾಜ್ ಭಾಯ್ ಈಗಾಗಲೇ ಒಬ್ಬ ಹುಡುಗಿಯನ್ನು ಪ್ರೀತಿಸುತ್ತಿರುವಂತೆ ತೋರುತ್ತದೆ. ಆ ಹುಡುಗಿ ಸಾಮಾನ್ಯ ಹುಡುಗಿಯಲ್ಲ.. ವಿಶ್ವಾದ್ಯಂತ ಮನ್ನಣೆ ಪಡೆದ ಗ್ಲಾಮರ್ ಹುಡುಗಿ. ಸಿರಾಜ್ ಪ್ರಸ್ತುತ ಐಪಿಎಲ್‌ನಲ್ಲಿ ಬ್ಯುಸಿಯಾಗಿರುವುದು ತಿಳಿದಿದೆ. ಮಿಯಾ ಭಾಯ್ ಈ ಋತುವಿನಲ್ಲಿ ಗುಜರಾತ್ ಟೈಟಾನ್ಸ್ ಪರ ಆಡುತ್ತಿದ್ದಾರೆ. https://ainkannada.com/if-a-cat-of-this-color-comes-to-your-house-it-is-a-sign-of-good-luck/ ಆದರೆ.. ಇತ್ತೀಚೆಗೆ ಸಿರಾಜ್ ಇನ್‌ಸ್ಟಾಗ್ರಾಮ್‌ನಲ್ಲಿ ಒಬ್ಬ ಹುಡುಗಿಯ ಫೋಟೋವನ್ನು ಲೈಕ್ ಮಾಡಿದ್ದಾರೆ. ಸಾಮಾನ್ಯವಾಗಿ, ಕ್ರಿಕೆಟಿಗರು ಎಷ್ಟೇ ಸಣ್ಣ ಕೆಲಸ ಮಾಡಿದರೂ ಅದು ಹೈಲೈಟ್ ಆಗುತ್ತದೆ ಮತ್ತು ತಕ್ಷಣವೇ ನೆಟಿಜನ್‌ಗಳ ಗಮನ ಸೆಳೆಯುತ್ತದೆ. ಈಗ ಸಿರಾಜ್ ಒಬ್ಬ ಸುಂದರ ಹುಡುಗಿಯ ಫೋಟೋವನ್ನು ಲೈಕ್ ಮಾಡಿದ್ದು ಕೂಡ…

Read More

ದೇಶದಲ್ಲಿ ಆದಾಯ ತೆರಿಗೆದಾರರು ಈಗ ತೆರಿಗೆ ಉಳಿಸಲು ಧಾವಿಸುತ್ತಾರೆ. ಆದಾಯ ತೆರಿಗೆ ಉಳಿಸಲು ವಿವಿಧ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ತೆರಿಗೆ ಉಳಿಸಲು ಕೆಲವು ಉತ್ತಮ ಮಾರ್ಗಗಳಿವೆ. ಇದು ತೆರಿಗೆಗಳನ್ನು ಉಳಿಸುವುದಲ್ಲದೆ ಹೂಡಿಕೆಗಳನ್ನು ಹೆಚ್ಚಿಸುತ್ತದೆ. ಇದಕ್ಕಾಗಿ ಮಾರ್ಚ್ 31 ರೊಳಗೆ ಹೂಡಿಕೆ ಮಾಡಬೇಕು. 2024-25ನೇ ಹಣಕಾಸು ವರ್ಷಕ್ಕೆ ಆದಾಯ ತೆರಿಗೆ ನಿಯಮಗಳ ಸೆಕ್ಷನ್ 80C ಅಡಿಯಲ್ಲಿ ನೀವು ವಿನಾಯಿತಿ ಪಡೆಯುತ್ತೀರಿ. ಈ ವಿನಾಯಿತಿ ರೂ. 1.5 ಲಕ್ಷದವರೆಗೆ. ಹಳೆಯ ಆದಾಯ ತೆರಿಗೆ ವ್ಯವಸ್ಥೆಯನ್ನು ಒಪ್ಪಿಕೊಳ್ಳುವವರಿಗೆ ಮಾತ್ರ ಈ ಸೌಲಭ್ಯ ಲಭ್ಯವಿದೆ. https://ainkannada.com/dont-make-these-mistakes-even-when-youre-stuck-at-home-these-will-affect-your-life/ ತೆರಿಗೆ ಉಳಿಸಲು ನೀವು ಬ್ಯಾಂಕಿನಲ್ಲಿ 5 ವರ್ಷಗಳ ತೆರಿಗೆ ಉಳಿತಾಯ ಬ್ಯಾಂಕ್ ಠೇವಣಿ ಕೂಡ ಮಾಡಬಹುದು. ನೀವು ಇದರಲ್ಲಿ 5 ವರ್ಷಗಳ ಕಾಲ ಹಣವನ್ನು ಹೂಡಿಕೆ ಮಾಡಬಹುದು. ಆದಾಗ್ಯೂ, ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ನಂತರ ಐದು ವರ್ಷಗಳವರೆಗೆ ಹಣವನ್ನು ಹಿಂಪಡೆಯಲು ಸಾಧ್ಯವಿಲ್ಲ. ತೆರಿಗೆ ಉಳಿಸುವ ಮಾರ್ಗಗಳು ಯಾವುವು? ಸುಕನ್ಯಾ ಸಮೃದ್ಧಿ ಯೋಜನೆ: ಸುಕನ್ಯಾ ಸಮೃದ್ಧಿ ಯೋಜನೆ (SSY) ಆದಾಯ ತೆರಿಗೆ…

Read More

ಮಾಲಿವುಡ್‌ ಸೂಪರ್‌ ಸ್ಟಾರ್‌ ಮೋಹನ್‌ ಲಾಲ್‌ ಬೆಂಗಳೂರಿಗೆ ಬಂದಿದ್ದಾರೆ. ಅದಕ್ಕೆ ಕಾರಣ ಅವರು ಅಭಿನಯದ ಬಹುನಿರೀಕ್ಷಿತ ಸಿನಿಮಾ ಲೂಸಿಫರ್‌-2. ಈ ಹಿಂದೆ ರಿಲೀಸ್‌ ಆಗಿ ಬ್ಲಾಕ್‌ ಬಸ್ಟರ್‌ ಹಿಟ್‌ ಕಂಡಿದ್ದ ಲೂಸಿಫರ್‌ ಮುಂದುವರೆದ ಭಾಗ ಇದಾಗಿದ್ದು, ಸಹಜವಾಗಿ ನಿರೀಕ್ಷೆ ಹೆಚ್ಚಿಸಿದೆ. ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಮೋಹನ್‌ ಲಾಲ್‌ ಅಭಿನಯಿಸಿದ್ದು,  ಅದೇ ಚಿತ್ರರಂಗ ಮತ್ತೊಬ್ಬ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್ ಆಕ್ಷನ್ ಕಟ್ ಹೇಳಿದ್ದಾರೆ. ನಾಳೆ ತೆರೆಗೆ ಬರ್ತಿರುವ ಲೂಸಿಫರ್-2 ಪ್ರಮೋಷನ್‌ ಗಾಗಿ ಇವರಿಬ್ಬರು ಬೆಂಗಳೂರಿಗೆ ಆಗಮಿಸಿದ್ದಾರೆ. ಬೆಂಗಳೂರಿಗೆ ಲ್ಯಾಂಡ್‌ ಆಗುತ್ತಿದ್ದಂತೆ ಮೋಹನ್‌ ಲಾಲ್‌ ಹಾಗೂ ಪೃಥ್ವಿ ರಾಜ್‌ ಸುಕುಮಾರ್‌ ಮೊದಲು ಭೇಟಿ ಕೊಟ್ಟಿದ್ದೇ ಹೊಂಬಾಳೆ ಪ್ರೊಡಕ್ಷನ್‌ ಗೆ.. ಕೆಜಿಎಫ್’ ಮತ್ತು ‘ಕಾಂತಾರ’ ಸಿನಿಮಾಗಳನ್ನು ನಿರ್ಮಿಸಿರುವ ಹೊಂಬಾಳೆ ಫಿಲ್ಮ್ಸ್ ಲೂಸಿಫರ್-2 ಸಿನಿಮಾವನ್ನು ಕರ್ನಾಟಕದ ಏರಿಯಾಗಳಲ್ಲಿ ದೊಡ್ಡ ಮಟ್ಟದಲ್ಲಿ ಡಿಸ್ಟ್ರಿಬ್ಯೂಟ್ ಮಾಡುತ್ತಿದೆ. ಕನ್ನಡ ಸಿನಿಮಾಪ್ರೇಮಿಗಳ ಎದುರು ‘ಲೂಸಿಫರ್ 2’ ಸಿನಿಮಾವನ್ನು ಹೊಂಬಾಳೆ ಫಿಲ್ಮ್ಸ್ ತೆರೆಗೆ ತರ್ತಿದೆ. ಅಲ್ಲದೇ ಪೃಥ್ವಿರಾಜ್‌ ಸುಕುಮಾರ್‌ ಗೂ ಹೊಂಬಾಳೆಗೂ…

Read More

ಬೆಂಗಳೂರು: ಸ್ಮಾರ್ಟ್‌ ಮೀಟರ್‌ ಟೆಂಡರ್‌ ನಲ್ಲಿ 15 ಸಾವಿರ ಕೋಟಿ ಹಗರಣ ನಡೆದಿದೆ ಎಂದು ಆರೋಪಸಿದ್ದ ಬಿಜೆಪಿ ನಾಯಕ ಡಾ.ಅಶ್ವಥ್‌ ನಾರಾಯಣಗೆ ಇಂಧನ ಸಚಿವ ಕೆ.ಜೆ ಜಾರ್ಜ್ ತಿರುಗೇಟು ನೀಡಿದ್ದಾರೆ. ಸ್ಮಾರ್ಟ್ ಮೀಟರ್ ಟೆಂಡರ್ ವಿವಾದ ಹಿನ್ನೆಲೆಯಲ್ಲಿ ಇಂಧನ ಸಚಿವ ಜಾರ್ಜ್ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ರು. ರಾಜಶ್ರೀ ಕಂಪನಿ ಬ್ಲಾಕ್ ಲಿಸ್ಟ್ ಹಾಕಿದ್ದಾರೆಂಬ ಅನ್ನೋದು ಸುಳ್ಳು. ಆ ಕಂಪನಿಯನ್ನ ಬ್ಲಾಕ್ ಲೀಸ್ಟ್ ಗೆ ಹಾಕಿಲ್ಲ. ಉತ್ತರಾಂಚಲದಲ್ಲಿ ನಿಷೇಧ ಮಾಡಿದ್ದಾರೆ. ಆದರೆ ಎರಡು ವರ್ಷ ಮಾತ್ರ ರಾಜಶ್ರೀಗೆ ಕಂಪನಿಗೆ ಟೆಂಡರ್‌ ನೀಡೋದನ್ನ ನಿಷೇಧ ಮಾಡಿದ್ದಾರಷ್ಟೇ. ಅದಾದ ಮೇಲೆಯೂ ಎಂಒಯು ಮಾಡಿಕೊಂಡಿದ್ದಾರೆ. ಮಧ್ಯಪ್ರದೇಶ, ರಾಜಸ್ತಾನದಲ್ಲಿ ರಾಜಶ್ರೀ ಕಂಪನಿಗೆ  ಟೆಂಡರ್ ನೀಡಲಾಗಿದೆ. ನಿಷೇಧ ಮಾಡಿರುವ ವೇಳೆಯೇ ಟೆಂಡರ್ ಕೊಟ್ಟಿದ್ದಾರೆ.‌ ಆರೋಪ ಮಾಡ್ತಿರೋರ ಸರ್ಕಾರಗಳೇ ಟೆಂಡರ್‌ ಕೊಡ್ತಿದ್ದಾರೆ. ಇದರ ಬಗ್ಗೆ ಅವರು ಮಾತನಾಡೋಕೆ ಹೇಳಿ ಎಂದು ಬಿಜೆಪಿ ನಾಯಕರಿಗೆ ಜಾರ್ಜ್ ತಿರುಗೇಟು ನೀಡಿದ್ದಾರೆ. ಬಿಜೆಪಿ ನಾಯಕರು ಆರೋಪ ಮಾಡಿದಂತೆ ಟೆಂಡರ್ ನಲ್ಲಿ ತಪ್ಪುಗಳಾಗಿದ್ದರೆ ಸ್ಟೇ ಮಾಡ್ತೇವೆ. ತನಿಖೆ…

Read More

ಕುಂದಾಪುರ: ಭಕ್ತರು ಯಾವುದೇ ದೇವಾಲಯ, ದೈವಸ್ಥಾನಗಳಿಗೆ ಹೋದಾಗಲೂ ತಮಗೆ ಬೇಕಾದ ಪ್ರಾರ್ಥನೆ, ಆಸೆಗಳನ್ನು ಈಡೇರಿಸುವಂತೆ ಬೇಡಿಕೊಳ್ಳುತ್ತಾರೆ. ದೇವರ ಮುಂದೆ ಹೋಗಿ ಭಕ್ತರು ಏನೇನೋ ಕೇಳುತ್ತಾರೆ. ಇದೀಗ ಇಂಥದ್ದೇ ಬೇಡಿಕೆಯೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ. ಕುಂದಾಪುರದ ಹೊಳ ಮಗ್ಗಿ ಹೊರ ಬೊಬ್ಬರ್ಯ ದೈವಸ್ಥಾನದ ಕಾಣಿಕೆ ಹುಂಡಿಯಲ್ಲಿ ವಿದ್ಯಾರ್ಥಿಯೊಬ್ಬ ನನ್ನನ್ನು ಜಸ್ಟ್‌ ಪಾಸ್‌ ಮಾಡು ಎಂದು ಚೀಟಿ ಬರೆದು ದೇವರಿಗೆ ಮಾಡಿದ್ದಾನೆ. ದೈವಸ್ಥಾನದ ಹುಂಡಿ ಎಣಿಕೆ ಕಾರ್ಯ ನಡೆಯುವ ವೇಳೆ ವಿದ್ಯಾರ್ಥಿ ಜಸ್ಟ್‌ ಪಾಸ್‌ ಮಾಡುವಂತೆ ಕೋರಿದ್ದ ಚೀಟಿ ಲಭ್ಯವಾಗಿದ್ದು, ಇದರ ಫೋಟೋ ಇದೀಗ ಭಾರೀ ವೈರಲ್‌ ಆಗುತ್ತಿದೆ. https://ainkannada.com/if-a-cat-of-this-color-comes-to-your-house-it-is-a-sign-of-good-luck/ ಈ ಕುರಿತ ಫೋಟೋವನ್ನು Namma Kundapura ಹೆಸರಿನ ಫೇಸ್‌ಬುಕ್‌ ಪೇಜ್‌ ಒಂದರಲ್ಲಿ ಶೇರ್‌ ಮಾಡಲಾಗಿದೆ. ಈ ಚೀಟಿ ಫೋಟೋದಲ್ಲಿ “ಪರೀಕ್ಷೆಯಲ್ಲಿ ನನಗೆ ಇಷ್ಟು ಮಾರ್ಕ್‌ ಬರಬೇಕು ದೇವರೇ ಹೊರ ಬೊಬ್ಬರ್ಯ; ಗಣಿತ- 39, 38, 37, 36, ಇಂಗ್ಲೀಷ್-‌ 39, 38, 37, ಕನ್ನಡ- 40, 39 ವಿಜ್ಞಾನ- 39, 38,…

Read More

ಬೆಂಗಳೂರು: ಯುಗಾದಿ ಹಬ್ಬ ಹಾಗೂ ರಂಜಾನ್ ಪ್ರಯುಕ್ತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವಿವಿಧ ಊರುಗಳಿಗೆ 2000ಕ್ಕೂ ಹೆಚ್ಚು ವಿಶೇಷ ಬಸ್​ಗಳ ವ್ಯವಸ್ಥೆ ಮಾಡಿದೆ. ಯುಗಾದಿ ಹಬ್ಬ ಹಾಗೂ ಸಾಲು ರಜೆಗಳ ಕಾರಣ ಊರಿಗೆ ತೆರಳುವವರಿಗೆ ಹಾಗೂ ಪ್ರವಾಸ ತೆರಳುವವರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕೆಎಸ್​​ಆರ್​ಟಿಸಿ ಈ ಕ್ರಮಕ್ಕೆ ಮುಂದಾಗಿದೆ. ಮುಂಗಡ ಬುಕ್ಕಿಂಗ್‌ಗೆ ಅವಕಾಶವಿದೆ. ಈ ಬಗ್ಗೆ ಕೆಎಸ್‌ಆರ್‌ಟಿಸಿ ಪ್ರಕಟಣೆ ನೀಡಿದ್ದು, ಮಾರ್ಚ್‌ 30 ರಂದು ಚಂದ್ರಮಾನ ಯುಗಾದಿ, ಮಾರ್ಚ್‌ 31 ರಂದು ರಂಜಾನ್ ಹಬ್ಬವಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಬೆಂಗಳೂರಿನಿಂದ ಪ್ರಯಾಣಿಕರು ತಮ್ಮ ಊರುಗಳಿಗೆ ಸಂಚಾರ ನಡೆಸುತ್ತಾರೆ. ಇವರ ಅನುಕೂಲಕ್ಕಾಗಿ ವಿಶೇಷ ಬಸ್‌ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದೆ. https://ainkannada.com/if-a-cat-of-this-color-comes-to-your-house-it-is-a-sign-of-good-luck/ ಮಾರ್ಚ್ 30ರಂದು ಚಂದ್ರಮಾನ ಯುಗಾದಿ, ಮಾ.31ರಂದು ರಂಜಾನ್ ಹಬ್ಬವಿರುವುದರಿಂದ ಕರ್ನಾಟಕ ರಸ್ತೆ ಸಾರಿಗೆ ನಿಗಮವು, ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಮಾ.28 ರಿಂದ ಮಾ.30ರವರೆಗೆ ಬೆಂಗಳೂರಿನಿಂದ ಈ ಕೆಳಕಂಡ ಸ್ಥಳಗಳಿಗೆ 2000 ಹೆಚ್ಚುವರಿ ವಾಹನಗಳ ವಿಶೇಷ ಸಾರಿಗೆ ವ್ಯವಸ್ಥೆ ಮಾಡಿದೆ.…

Read More