Author: Author AIN

ರಾಮನಗರ: ಡಿಸಿಎಂ ಆಗಿ ಮುಂದುವರೆಯುವ ನೈತಿಕತೆ ಡಿಕೆಶಿಗೆ ಇಲ್ಲ ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದ್ದಾರೆ. ರಾಮನಗರದಲ್ಲಿ ಮಾತನಾಡಿದ ಅವರು, ದಲಿತರ ಹಣವನ್ನ ಸರ್ಕಾರ ತಿಂದು ಹಾಕುತ್ತಿದೆ. ದಲಿತರಿಗೆ ಸರ್ಕಾರ ಅನ್ಯಾಯ ಮಾಡುತ್ತಿದ್ದರೂ ಕಾಂಗ್ರೆಸ್ ದಲಿತ ಸಚಿವರು, ಶಾಸಕರು ಬಾಯಿ ಬಿಡುತ್ತಿಲ್ಲ. ಇಂತಹ ಗುಲಾಮಗಿರಿಯನ್ನ ನಾನು ಎಲ್ಲಿಯೂ ನೋಡಿಲ್ಲ. ದಲಿತರ ಹಣ, ದಲಿತರಿಗೆ ಮೀಸಲಾಗಿ ಇಡಬೇಕು. ಗ್ಯಾರಂಟಿಗಾಗಿ ದಲಿತರ ಹಣ ಬಳಸಿಕೊಳ್ಳಲಾಗಿದೆ. ಅಲ್ಲದೇ ಧರ್ಮಾಧಾರಿತ ಮೀಸಲಾತಿ ಸಂವಿಧಾನ ವಿರೋಧಿ. ಡಿಸಿಎಂ ಡಿಕೆಶಿ ಸಂವಿಧಾನ ಬದಲಾವಣೆ ಮಾಡುತ್ತೇವೆ ಅಂದಿದ್ದಾರೆ. https://ainkannada.com/if-a-cat-of-this-color-comes-to-your-house-it-is-a-sign-of-good-luck/ ಸಂವಿಧಾನ ಬದಲಿಸಿ ಧರ್ಮಾಧಾರಿತ ಮೀಸಲಾತಿ ಕೊಡುತ್ತೇವೆ ಎನ್ನುತ್ತಾರೆ. ಅಂಬೇಡ್ಕರ್ ಬಗ್ಗೆ ಮಾತನಾಡುವ ಕಾಂಗ್ರೆಸ್ಸಿಗರು ಇದನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಡಿಸಿಎಂ ಆಗಿ ಮುಂದುವರೆಯುವ ನೈತಿಕತೆ ಡಿಕೆಶಿಗೆ ಇಲ್ಲ. ಸಿಎಂ ಸಿದ್ದರಾಮಯ್ಯ ಕೂಡಲೇ ಡಿಕೆಶಿಯನ್ನ ಸಂಪುಟದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು.  

Read More

ಬೆಂಗಳೂರು: ಕೆಲ ದಿನಗಳ ಹಿಂದಷ್ಟೇ ಡಿಸಿಎಂ ಡಿ.ಕೆ ಶಿವಕುಮಾರ್‌, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೇರಿದಂತೆ ಕೆಲ ಬಿಜೆಪಿ ನಾಯಕರಿದ್ದ ಸಭೆಗಳಲ್ಲಿ ಪಾಲ್ಗೊಂಡು ಭಾರಿ ಸದ್ದು  ಮಾಡಿದ್ರು. ಇದೀಗ ಬೆಳಗಾವಿ ಸಾಹುಕಾರ, ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಸರದಿ. ಹೌದು, ರಾಜ್ಯ ಕಾಂಗ್ರೆಸ್‌ ನಲ್ಲಿ ಪವರ್‌ ಶೇರಿಂಗ್‌ ಜಟಾಪಟಿ ತಾರಕಕ್ಕೇರಿದ ದಿನಗಳಲ್ಲೇ ಡಿಸಿಎಂ ಡಿಕೆ ಶಿವಕುಮಾರ್‌, ದೆಹಲಿ ಬಿಜೆಪಿ ನಾಯಕರನ್ನು ಭೇಟಿ ಮಾಡಿದ್ದಲ್ಲದೆ, ಕಳೆದ ಶಿವರಾತ್ರಿಯಂದು ಜಗ್ಗಿ ವಾಸುದೇವ್‌ ಅವರ ಇಶಾ ಫೌಂಡೇಶನ್‌ ತಮಿಳುನಾಡಿನ ಕೊಯಮತ್ತೂರಿನಲ್ಲಿ ಅಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಮಿತ್‌ ಶಾ ಜತೆ ವೇದಿಕೆ ಹಂಚಿಕೊಂಡಿದ್ದರು. ಈ ಮೂಲಕ ಪವರ್‌ ಶೇರಿಂಗ್‌ ಬಗ್ಗೆ ಮಾತನಾಡುತ್ತಿದ್ದ ಸಿಎಂ ಸಿದ್ದರಾಮಯ್ಯ ಆಪ್ತರಿಗೆ ಶಾಕ್‌ ಕೊಟ್ಟಿದ್ದರು. ಈ ಬೆಳವಣಿಗೆಗಳ ಬೆನ್ನಲ್ಲೇ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಕೇಂದ್ರ ಸಚಿವ HD ಕುಮಾರಸ್ವಾಮಿ ಅವರನ್ನು ಸಂಸತ್ ಭವನದ ಕಚೇರಿಯಲ್ಲಿ ಭೇಟಿ ಮಾತುಕತೆ ನಡೆಸಿದ್ದಾರೆ. ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿ ಬೀಡು ಬಿಟ್ಟಿರುವ ಸತೀಶ್‌ ಜಾರಕಿಹೊಳಿ…

Read More

ಉತ್ತರ ಪ್ರದೇಶ: 100 ಮುಸ್ಲಿಂ ಕುಟುಂಬಗಳ ನಡುವೆ 50 ಹಿಂದೂ ಕುಟುಂಬಗಳಿದ್ದರೂ ಸುರಕ್ಷಿತವಾಗಿರಲು ಸಾಧ್ಯವಿಲ್ಲ ಎಂದು ಸಿಎಂ ಯೋಗಿ ಆದಿತ್ಯನಾಥ್‌ ಹೇಳಿದ್ದಾರೆ. ಪಾಡ್‌ಕಾಸ್ಟ್‌ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, 100 ಮುಸ್ಲಿಂ ಕುಟುಂಬಗಳ ನಡುವೆ 50 ಹಿಂದೂ ಕುಟುಂಬಗಳಿದ್ದರೂ ಸುರಕ್ಷಿತವಾಗಿರಲು ಸಾಧ್ಯವಿಲ್ಲ. ಆದ್ರೆ  100 ಹಿಂದೂ ಕುಟುಂಬಳ ನಡುವೆ ಒಂದು ಮುಸ್ಲಿಂ ಕುಟುಂಬ ಭದ್ರವಾಗಿದೆ.ಹಿಂದೂ ಆಡಳಿತಗಾರರು ಇತರರ ಮೇಲೆ ಅಧಿಪತ್ಯ ಸ್ಥಾಪಿಸಿದ ಉದಾಹರಣೆ ವಿಶ್ವ ಇತಿಹಾಸದಲ್ಲಿ ಇಲ್ಲ. ಇದಕ್ಕೆ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರವೇ ಕಾರಣ, ಇದಕ್ಕೂ ಮುನ್ನ ಪಾಕಿಸ್ತಾನದಲ್ಲೂ ಈ ಉದಾಹರಣೆ ಇತ್ತು. ಅಫ್ಘಾನಿಸ್ತಾನದಲ್ಲೂ ಏನಾಯ್ತು ಅನ್ನೋದು ನಮಗೆ ಗೊತ್ತಿದೆ ಎಂದು ಹೇಳಿದರು. https://ainkannada.com/if-a-cat-of-this-color-comes-to-your-house-it-is-a-sign-of-good-luck/ 2017ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಒಂದೇ ಒಂದು ಕೊಮುಗಲಭೆ ನಡೆದಿಲ್ಲ ಎಂದ ಸಿಎಂ ಯೋಗಿ, ಉತ್ತರ ಪ್ರದೇಶದಲ್ಲಿ ಹಿಂದೂಗಳು ಸುರಕ್ಷಿತವಾಗಿದ್ದರೆ ಮುಸ್ಲಿಮರೂ ಸುರಕ್ಷಿತ. ನಾನು ಒಬ್ಬ ಸಾಮಾನ್ಯ ಪ್ರಜೆ, ಉತ್ತರ ಪ್ರದೇಶದ ಪ್ರಜೆ. ಎಲ್ಲರ ಸಂತೋಷಕ್ಕಾಗಿ ಹಾರೈಸುವ ʻಯೋಗಿʼ ನಾನು. ಎಲ್ಲರ ಬೆಂಬಲದಿಂದ ಅಭಿವೃದ್ಧಿ…

Read More

ಮಾತು ಆಡಿದರೆ ಹೋಯ್ತು ಮುತ್ತು ಒಡೆದರೆ ಹೋಯ್ತು ಹಿರಿಯರು ಹೇಳುವ ಈ ಗಾದೆ ಮಾತು ಕಿವಿಮೇಲೆ ಹಾಕಿಕೊಂಡು ಮಾತಾಡಿದ್ದರೆ ಇವತ್ತು ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ರಕ್ಷಕ್‌ ಬುಲೆಟ್‌ ಗೆ ಸಂಕಷ್ಟ ಬರುತ್ತಿರಲಿಲ್ಲವೇನು. ಮೊದಲಿನಿಂದಲೂ ಈ ಹುಡ್ಗ ಆಡುವ ಮಾತುಗಳು ಟ್ರೋಲ್‌ ಆಗುತ್ತಲೇ ಇರುತ್ತವೆ. ಟ್ರೋಲ್‌ ಆದ್ರೆ ಸಮಸ್ಯೆ ಇಲ್ಲ ಹಲವರ ಭಾವನೆಗಳಿಗೆ ಧಕ್ಕೆ ತಂದರೆ ಸಂಕಷ್ಟವೇ. ಖಾಸಗಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ರಕ್ಷಕ್‌ ಬುಲೆಟ್ ಅವಹೇಳನಕಾರಿಯಾಗಿ ಮಾತನಾಡಿದ್ದು ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ. ರಕ್ಷಕ್ ಬುಲೆಟ್ ವಿರುದ್ಧ ಇಂದು ಹಿಂದೂ ಕಾರ್ಯಕರ್ತ ಮಹೇಶ್ ಎಂಬುವವರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಅವರಿಗೆ ದೂರು ಸಲ್ಲಿಸಿದ್ದಾರೆ. ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗಿದೆ. ರಕ್ಷಕ್ ಬುಲೆಟ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ರಕ್ಷಕ್‌ ಹೇಳಿದ್ದೇನು? ರಕ್ಷಕ್ ಹಾಗೂ ರಮೋಲಾ ಜೋಡಿಗೆ ‘ಬುಲ್ ಬುಲ್’ ಸಿನಿಮಾದ ದೃಶ್ಯವನ್ನ ರೀ-ಕ್ರಿಯೇಟ್ ಮಾಡಲು ಟಾಸ್ಕ್ ನೀಡಲಾಗಿತ್ತು.  ‘ನಾವೂ ಮಂಡ್ಯದವರೆ ಕಂಡ್ರಿ. ನಿಮ್ಮನ್ನ ನೋಡ್ತಾ ಇದ್ದಂತೆ…

Read More

ಬೆಂಗಳೂರು: ರಾಜ್ಯ ಹಾಗೂ ದೇಶದ ರಾಜಕಾರಣದಲ್ಲಿ ಭಾರೀ ಸದ್ದು ಮಾಡುತ್ತಿರುವ ಹನಿಟ್ರ್ಯಾಪ್ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಇಂದು ನ್ಯಾಯಪೀಠದ ಮುಂದೆ ವಿಚಾರಣೆ ಮಾಡಿ ಲಾಯರ್​ ವಿನಯ್ ಕುಮಾರ್ ಸಿಂಗ್​​ ಎಂಬುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂಕೋರ್ಟ್​​ ಬುಧವಾರ ವಜಾಗೊಳಿಸಿ ಆದೇಶ ಹೊರಡಿಸಿದೆ. ನೀವು ಜಾರ್ಖಂಡ್​​ನವರು ನಿಮಗೇನು ಸಂಬಂಧ? ಪೊಲಿಟಿಕಲ್ ನಾನ್​ಸೆನ್ಸ್​ಗಳನ್ನೆಲ್ಲಾ ವಿಚಾರಣೆ ಮಾಡಲು ಆಗಲ್ಲ. ಜಡ್ಜ್​ಗಳು ಏಕೆ ಹನಿಟ್ರ್ಯಾಪ್​​ಗೆ ಒಳಗಾಗುತ್ತಾರೆ, ಅದನ್ನು ಜಡ್ಜ್​ಗಳು ನೋಡಿಕೊಳ್ಳುತ್ತಾರೆ ನಿಮಗೇನು ಸಂಬಂಧ ಎಂದು ಸುಪ್ರೀಂ ಪ್ರಶ್ನೆ ಮಾಡಿದೆ. https://ainkannada.com/if-a-cat-of-this-color-comes-to-your-house-it-is-a-sign-of-good-luck/ ರಾಜ್ಯ ರಾಜಕೀಯದಲ್ಲಿ ಸಚಿವರ ಹನಿಟ್ರ್ಯಾಪ್ ಯತ್ನದ ವಿಚಾರ ಸಾಕಷ್ಟು ಕೋಲಾಹಲ ಸೃಷ್ಟಿಸಿತ್ತು. ಇದರ ಬೆನ್ನಲ್ಲೇ ಪ್ರಕರಣ ಕುರಿತು ತನಿಖೆಗೆ ಆಗ್ರಹಿಸಿ ಇತ್ತೀಚೆಗೆ ಸುಪ್ರೀಂಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಈ ಬಗ್ಗೆ ಇಂದು ಸುಪ್ರೀಂಕೋರ್ಟ್ ವಿಚಾರಣೆ ಮಾಡಿದೆ. ಹಿರಿಯ ಸಚಿವರು, ಶಾಸಕರು, ರಾಜಕೀಯ ಮುಖಂಡರು ಮತ್ತು ನ್ಯಾಯಾಧೀಶರ ಹನಿಟ್ರ್ಯಾಪ್​​ ಆರೋಪಗಳ ಬಗ್ಗೆ ಅರ್ಜಿದಾರರು ವಾದವನ್ನು ಮಂಡಿಸಿದರು. ವಾದ-ವಿವಾದ ಆಲಿಸಿದ ಸುಪ್ರೀಂಕೋರ್ಟ್ ಲಾಯರ್​ ವಿನಯ್…

Read More

ಬೆಂಗಳೂರು: ಸ್ಯಾಂಡಲ್​ವುಡ್​ ನಟಿ ರನ್ಯಾ ರಾವ್​ ಅಕ್ರಮ ಚಿನ್ನ ಸಾಗಾಟ ಪ್ರಕರಣದಲ್ಲಿ ಬಂಧನವಾಗಿದ್ದು, ಈ ಪ್ರಕರಣದಲ್ಲಿ ಈಗಾಗಲೇ ಡಿಆರ್​ಐ, ಸಿಬಿಐ ತನಿಖೆ ನಡೆಸುತ್ತಿವೆ. ಇದರ ಮಧ್ಯ ಮತ್ತೊಂದು ಸ್ಫೋಟಕ ಮಾಹಿತಿ ಹೊರ ಬಂದಿದೆ. ರನ್ಯಾ ರಾವ್ ಬಂಧನವಾದ ಬಳಿಕ ರನ್ಯಾ ಅಪಾರ್ಟ್ಮೆಂಟ್ ಮೇಲೆ ದಾಳಿ ಮಾಡಿದ್ದ ಡಿಆರ್‌ಐ ಹಲವು ರಹಸ್ಯಗಳನ್ನ ಪತ್ತೆಹಚ್ಚಿತ್ತು. ಇದೇ ವೇಳೆ ತರುಣ್‌ ಸಂಪರ್ಕದಲ್ಲಿರೋದು ಪತ್ತೆಯಾಗಿತ್ತು. ಕೂಡಲೇ ಲುಕ್‌ಔಟ್‌ ನೋಟಿಸ್‌ ಜಾರಿ ಮಾಡಿ ತರುಣ್‌ನನ್ನ ಡಿಆರ್‌ಐ ಹದರಾಬಾದ್‌ನಲ್ಲಿ ಬಂಧಿಸಿತ್ತು. https://ainkannada.com/if-a-cat-of-this-color-comes-to-your-house-it-is-a-sign-of-good-luck/ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣ ಬರೀ ದುಬೈ, ಭಾರತದ ಕಥೆಯಲ್ಲ. ಮೊದಲು ದಕ್ಷಿಣಾ ಅಫ್ರಿಕಾದಿಂದ ದುಬೈಗೆ ಚಿನ್ನ ಸಾಗಾಟ ಮಾಡುತ್ತಿದ್ದರಂತೆ. ನಂತರ ಅದನ್ನ ಜಿನೀವಾಗೆ ಸಾಗಿಸುವ ನೆಪದಲ್ಲಿ ಭಾರತಕ್ಕೆ ರವಾನೆ ಮಾಡುತ್ತಿದ್ದಂತೆ. ಅಷ್ಟೇ ಅಲ್ಲ ದಕ್ಷಿಣ ಅಫ್ರಿಕಾಗೆ ಹೋಗಲು ಅಲ್ಲಿಯ ಗೃಹ ಮಂತ್ರಾಲಯದಿಂದಲೂ ಆರೋಪಿಗಳು ಅನುಮತಿ ಪಡೆದಿದ್ದರು. ದುಬೈನಲ್ಲಿ ಇವರು ಶುರು ಮಾಡಿದ್ದ ವೈರಾ ಡೈಮಂಡ್ ಕಂಪನಿಗೆ ಮೊದಲು ಚಿನ್ನ ಸಾಗಾಟ ಮಾಡಿದ್ದರಂತೆ. ನಂತರ ಅಲ್ಲಿಂದ…

Read More

ಪ್ರಶಾಂತ್‌ ನೀಲ್ ಹಾಗೂ ಜೂನಿಯರ್‌ ಎನ್‌ ಟಿಆರ್‌ ಈ ಕ್ರೇಜಿ ಕಾಂಬೋದ ಮೆಗಾ ಪ್ರಾಜೆಕ್ಟ್ ಮೇಲೆ ಈಗಾಗಲೇ ನಿರೀಕ್ಷೆಗಳು ದುಪ್ಪಟ್ಟಿವೆ. ನೀಲ್-ತಾರಕ್‌ ಜೋಡಿ ದೊಡ್ಡದಾಗಿ ಏನೋ ಮಾಡೋದಿಕ್ಕೆ ಹೊರಟಿರುವ ಸೂಚನೆಯಂತೂ ಸಿಕ್ಕಿದೆ. ಇತ್ತೀಚೆಗಷ್ಟೇ ಹೈದರಾಬಾದ್​​ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಶೂಟಿಂಗ್ ಗೆ ಕಿಕ್‌ ಸ್ಟಾರ್ಟ್‌ ಸಿಕ್ಕಿತ್ತು. ಆದ್ರೆ ಜೂನಿಯರ್‌ ಎನ್‌ ಟಿಆರ್‌ ಇನ್ನೂ ಸೆಟ್‌ ಗೆ ಎಂಟ್ರಿಯಾಗಿಲ್ಲ. ಅತ್ತ ಹೃತಿಕ್‌ ರೋಷನ್‌ ವಾರ್‌ ಶೂಟಿಂಗ್ ಜೊತೆ ಜೊತೆಯಲಿಯೇ ನೀಲ್‌ ಸಿನಿಮಾದ ಚಿತ್ರೀಕರಣದಲ್ಲಿ ಯಂಗ್‌ ಟೈಗರ್‌ ಭಾಗಿಯಾಗಲಿದ್ದಾರೆ. ಭರದಿಂದ ಚಿತ್ರೀಕರಣ ನಡೆಯುತ್ತಿದ್ದು, ಚಿತ್ರಕ್ಕೆ ಡ್ರ್ಯಾಗನ್‌ ಎಂಬ ಶೀರ್ಷಿಕೆ ಫೈನಲ್‌ ಆಗಿದೆ ಎನ್ನಲಾಗ್ತಿದೆ. ಬಟ್‌ ಚಿತ್ರತಂಡ ಈ ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ. ಶೂಟಿಂಗ್‌ ಹಂತದಲ್ಲಿರುವ ಪ್ರಶಾಂತ್‌ ನೀಲ್‌ ಹಾಗೂ ಜೂನಿಯರ್‌ ಎನ್ ಟಿಆರ್‌ ಬಹುನಿರೀಕ್ಷಿತ ಪ್ರಾಜೆಕ್ಟ್‌ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ನೀಲ್ ಹಾಗೂ ಯಂಗ್‌ ಟೈಗರ್‌ ಹೊಸ ಸಿನಿಮಾ ಮುಂದಿನ ವರ್ಷ ಬಿಡುಗಡೆಯಾಗಲಿದೆ. 2026ರ ಜನವರಿ 9 ರಂದು ಸಿನಿಮಾ ತೆರೆಗೆ ಬರಲಿದೆ.…

Read More

ಹುಬ್ಬಳ್ಳಿ: ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ಬಹುದೊಡ್ಡ ಆರ್ಥಿಕ ಸಂಕಷ್ಟ ಎದುರಾಗಿದೆ. ಅಭಿವೃದ್ಧಿ ಕಾರ್ಯಗಳನ್ನು ಮಾಡದೇ, ಜನರ ಸಮಸ್ಯೆ ಬಗೆಹರಿಸಲು ಸಾಧ್ಯವಾಗದ ಮಟ್ಟಿಗೆ ಆರ್ಥಿಕ ಸಂಕಷ್ಟದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸಿಲುಕಿದೆಯಾ..? ಎಂಬ ಅನುಮಾನ ದಟ್ಟವಾಗಿದೆ. ಕಳೆದ ಮೂರು ತಿಂಗಳಗಳಿಂದ ಸಿಬ್ಬಂದಿಗಳಿಗಿಲ್ಲ ವೇತನ. ವೇತನವಿಲ್ಲದೇ ನೌಕರರು ಪರದಾಡುವಂತಹ ಸ್ಥಿತಿ ನಿರ್ಮಾಣ. ಇನ್ನೊಂದು ತಿಂಗಳಲ್ಲಿ ಮಹಾನಗರ ಪಾಲಿಕೆ ಮುಚ್ಚುವ ಪರಿಸ್ಥಿತಿ ಬಂದ್ರು ಅಚ್ಚರಿಯಿಲ್ಲ‌. ಹೌದು.. ಮೂರು ತಿಂಗಳಿಂದ ಕಾಯಂ ಪೌರಕಾರ್ಮಿಕರಿಂದ ಹಿಡಿದು ಆಯುಕ್ತರಿಗೂ ಸರ್ಕಾರದಿಂದ ವೇತನ ಆಗಿಲ್ಲ‌. https://ainkannada.com/if-a-cat-of-this-color-comes-to-your-house-it-is-a-sign-of-good-luck/ ಸರ್ಕಾರದಿಂದ ಕಳೆದ ಮೂರು ತಿಂಗಳಿನಿಂದ ವೇತನದ ಅನುದಾನ ಬಿಡುಗಡೆ ಆಗಿಲ್ಲ. ಇದನ್ನು ಪ್ರಶ್ನಿಸಿ ಪಾಲಿಕೆಯಿಂದ ಪತ್ರ ಬರೆದರೇ, ಪಾಲಿಕೆಯ ಸಾಮಾನ್ಯ ನಿಧಿಯಿಂದ ವೇತನ ನೀಡುವಂತೆ ಸರ್ಕಾರ ಉತ್ತರ ನೀಡಿದ್ದು, ಪಾಲಿಕೆಯ ಚುನಾಯಿತ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 15 ನೇ ಹಣಕಾಸು, ಎಸ್‌ಎಫ್‌ಸಿ ಮುಕ್ತನಿಧಿ, ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ, ಪಿಂಚಣಿ…

Read More

ಕೋಲಾರ: ಮುಸ್ಲಿಮರಿಗೆ ಗುತ್ತಿಗೆ ಮೀಸಲಾತಿ ವಿರೋಧಿಸಿ ಕೋಲಾರ ನಗರದ ಹೊಸ ಬಸ್ ನಿಲ್ದಾಣ ವೃತ್ತದಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿದೆ. ಮುಸ್ಲಿಮರಿಗೆ ಗುತ್ತಿಗೆ ಕಾಮಗಾರಿಯಲ್ಲಿ 4% ಮೀಸಲಾತಿ ನೀಡಲು ರಾಜ್ಯ ಸರ್ಕಾರದ ತೀರ್ಮಾನಕ್ಕೆ ಖಂಡನೆ ವ್ಯಕ್ತವಾಗಿದ್ದು, https://ainkannada.com/if-a-cat-of-this-color-comes-to-your-house-it-is-a-sign-of-good-luck/ ರಾಜ್ಯ ಸರ್ಕಾರದ ಅಸಂವಿಧಾನಿಕ ನಡೆ ಖಂಡಿಸಿ ಮಾನವ ಸರಪಳಿ ಮಾಡಿ ಪ್ರತಿಭಟನೆ ನಡೆಸಿದ್ದಾರೆ. ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ಧೋರಣೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷ ಓಂ ಶಕ್ತಿ ಚಲಪತಿ ಹಾಗೂ ಮಾಜಿ ಸಂಸದ ಮುನಿಸ್ವಾಮಿ, ಮಾಜಿ ಶಾಸಕರು ಸೇರಿದಂತೆ ಪ್ರತಿಭಟನೆಯಲ್ಲಿ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದರು.

Read More

ಕರುನಾಡ ಚಕ್ರವರ್ತಿ ಶಿವರಾಜ್‌ ಕುಮಾರ್‌ ಕ್ಯಾನ್ಸರ್‌ ವಿರುದ್ಧ ಹೋರಾಡಿ ಗೆದ್ದಿದ್ದಾರೆ. ಸದ್ಯ ಕ್ಯಾನ್ಸರ್‌ ಮುಕ್ತರಾಗಿರುವ ಶಿವಣ್ಣ ಸಿನಿಮಾ, ಶೂಟಿಂಗ್‌ ಅಂತಾ ಬ್ಯುಸಿಯಾಗಿದ್ದಾರೆ. ಈ ನಡುವೆ ಶಿವರಾಜ್‌ ಕುಮಾರ್‌ ಮಡದಿ ಹಾಗೂ ನಿರ್ಮಾಪಕಿಯೂ ಆಗಿರುವ ಗೀತಾ ಶಿವರಾಜ್​ಕುಮಾರ್ ಅವರಿಗೆ ಸರ್ಜರಿಗೆ ಒಳಗಾಗಿದ್ದಾರೆ. ಗೀತಾಕ್ಕ ಅವರಿಗೆ ಕಳೆದ ಕೆಲವು ದಿನಗಳಿಂದ ಕತ್ತಿನ ಭಾಗದಲ್ಲಿ ನೋವು ಕಾಣಿಸಿಕೊಂಡಿತ್ತು. ಈ ಸಂಬಂಧ ವೈದ್ಯರು ಅವರಿಗೆ ಕತ್ತಿನ ಭಾಗದಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ನಿನ್ನೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನಡೆದಿದ್ದು, ಇಂದು ಸಂಜೆ ವೇಳೆಗೆ ಆಸ್ಪತ್ರೆಯಿಂದ ಗೀತಾ ಶಿವರಾಜ್ ಕುಮಾರ್ ಡಿಸ್ಚಾರ್ಜ್ ಆಗಲಿದ್ದಾರೆ. ಮಧು ಬಂಗಾರಪ್ಪ ಹೇಳಿದ್ದೇನು? ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಿನ್ನೆ ಹಮ್ಮಿಕೊಂಡಿದ್ದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರ ಸಭೆಯಲ್ಲಿ ಮಧು ಬಂಗಾರಪ್ಪ ಗೀತಾಕ್ಕ ಆರೋಗ್ಯದ ಬಗ್ಗೆ ಮಾತನಾಡಿದ್ದಾರೆ. ಸಮಾರಂಭಕ್ಕೆ ನಾನು ಬೆಳಗ್ಗೆ ಬರಬೇಕಿತ್ತು, ಆದರೆ ಬರಲು ಆಗಲಿಲ್ಲ. ಕಾರಣ ಗೀತಕ್ಕ ಅವರದ್ದು ಸರ್ಜರಿ ಇತ್ತು, ಹಾಗಾಗಿ…

Read More