ಗದಗ: ಅಕ್ರಮವಾಗಿ ಪಡಿತರ ಅಕ್ಕಿ ಸಂಗ್ರಹಣೆ ಮಾಡಿ ಇಟ್ಟಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿರುವ ಘಟನೆ ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ನಡೆದಿದೆ. ಬಾಲಪ್ಪ ಗೌಡ್ರ ಎಂಬುವರು ಸಂಗ್ರಹಿಸಿಟ್ಟಿದ್ದರು. ಗಜೇಂದ್ರಗಡ ಭಾಗದಲ್ಲಿ ಅಕ್ರಮ ಅಕ್ಕಿ ಸಾಗಾಟ ದಂಧೆ ಎಗ್ಗಿಲ್ಲದೆ ನಡೆಯುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ರೋಣ ತಾಲೂಕಿನ ಆಹಾರ ಇಲಾಖೆ ಅಧಿಕಾರಿ ಶಾಂತಾ ಚವಡಿ, ಗಜೇಂದ್ರಗಡ ಪಿಎಸ್ಐ ಸೋಮನಗೌಡ ಹಾಗೂ ಸಿಬ್ಬಂದಿಗಳು ಭೇಟಿ ಪರಿಶೀಲನೆ ನಡೆಸಿದ್ದು, ಸುಮಾರು 75 ಪ್ಯಾಕೆಟ್ ಪಡಿತರ ಅಕ್ಕಿ ವಶಕ್ಕೆ ಪಡೆಯಲಾಗಿದೆ. https://ainkannada.com/if-a-cat-of-this-color-comes-to-your-house-it-is-a-sign-of-good-luck/ ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟದ ಕಿಂಗ್ ಪಿನ್ ಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಬಡಜನರು ಹೊಟ್ಟೆ ತುಂಬ ಊಟ ಮಾಡಲಿ ಎಂದು ಸರ್ಕಾರ ಕೋಟಿ ಕೋಟಿ ಖರ್ಚು ಮಾಡಿ ಪಡಿತರ ವಿತರಿಸುತ್ತದೆ. ಆದ್ರೆ ಕೊಪ್ಪಳ ಜಿಲ್ಲೆಯಲ್ಲಿ ಪಡಿತರ ಧಾನ್ಯಗಳು ಕಾಳ ಸಂತೆಯಲ್ಲಿ ಮಾರಾಟವಾಗುತ್ತಿವೆ.
Author: Author AIN
ಟಾಲಿವುಡ್ ಹೀರೋ ನಿತಿನ್ ಮತ್ತು ಶ್ರೀಲೀಲಾ ಅಭಿನಯದ ಇತ್ತೀಚಿನ ಚಿತ್ರ ರಾಬಿನ್ ಹುಡ್. ಈ ಚಿತ್ರವನ್ನು ವೆಂಕಿ ಕುಡುಮುಲ ನಿರ್ದೇಶಿಸುತ್ತಿದ್ದು, ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ನವೀನ್ ಎರ್ನೇನಿ ಮತ್ತು ವೈ. ನಿರ್ಮಿಸುತ್ತಿದ್ದಾರೆ. ರವಿಶಂಕರ್ ನಿರ್ಮಿಸುತ್ತಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಜಿ.ವಿ.ಪ್ರಕಾಶ್ ಕುಮಾರ್ ಸಂಗೀತ ಸಂಯೋಜಿಸುತ್ತಿದ್ದಾರೆ. ಇದರಲ್ಲಿ ಕ್ರಿಕೆಟಿಗ ಡೇವಿಡ್ ವಾರ್ನರ್ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಮಾರ್ಚ್ 23 ರಂದು ಹೈದರಾಬಾದ್‌ನಲ್ಲಿ ನಡೆದ ಚಿತ್ರದ ಪೂರ್ವ-ಬಿಡುಗಡೆ ಕಾರ್ಯಕ್ರಮದಲ್ಲಿ ನಟ ರಾಜೇಂದ್ರ ಪ್ರಸಾದ್ ಅವರು ಡೇವಿಡ್ ವಾರ್ನರ್ ಬಗ್ಗೆ ಮಾಡಿದ ಕಾಮೆಂಟ್‌ಗಳು ಇತ್ತೀಚೆಗೆ ಸಂಚಲನ ಮೂಡಿಸಿದವು. ಇದು ಸಾಮಾಜಿಕ ಮಾಧ್ಯಮದಲ್ಲಿ ವಾರ್ನರ್ ಅಭಿಮಾನಿಗಳನ್ನು ನಟ ರಾಜೇಂದ್ರ ಪ್ರಸಾದ್ ಬಗ್ಗೆ ಗಂಭೀರವಾಗಿ ಪರಿಗಣಿಸುವಂತೆ ಮಾಡಿದೆ. ಒಬ್ಬ ಅನುಭವಿ ನಟ, ಒಬ್ಬ ಸ್ಟಾರ್ ಕ್ರಿಕೆಟಿಗನ ಬಗ್ಗೆ ಇಂತಹ ಹೇಳಿಕೆ ನೀಡುವುದು ಸೂಕ್ತವಲ್ಲ ಎಂದು ಅವರು ಒಪ್ಪಿಕೊಂಡರು. ಈ ಹಿನ್ನೆಲೆಯಲ್ಲಿ ರಾಜೇಂದ್ರ ಪ್ರಸಾದ್ ಸಾಮಾಜಿಕ ಜಾಲತಾಣದಲ್ಲಿ ವಾರ್ನರ್‌ಗೆ ಕ್ಷಮೆಯಾಚಿಸಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ…
ತುಮಕೂರಿನಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದ್ದು, ಮನೆಯ ಮುಂದೆ ಆಟವಾಡುತ್ತಿದ್ದ 5 ವರ್ಷದ ಮಗುವಿನ ಮೇಲೆ ಮಣ್ಣು ತುಂಬಿದ ಟ್ರ್ಯಾಕ್ಟರ್ ಹರಿದು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಪಾವಗಡ ತಾಲೂಕಿನ ತಿಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ. ವರುಣ್ (5) ಮೃತ ಮಗುವಾಗಿದ್ದು, https://ainkannada.com/if-a-cat-of-this-color-comes-to-your-house-it-is-a-sign-of-good-luck/ ಮನೆಯ ಮುಂದೆ ವರುಣ್ ಆಟವಾಡುತ್ತಿದ್ದ. ಇದೇ ವೇಳೆ ಮಣ್ಣು ತುಂಬಿದ್ದ ಟ್ರ್ಯಾಕ್ಟರ್ ಬಂದಿದ್ದು, ಮಗುವಿನ ಮೇಲೆ ಹಾದು ಹೋಗಿದೆ. ಪರಿಣಾಮ ಮಗು ಸಾವನ್ನಪ್ಪಿದ್ದಾನೆ. ವೈಎನ್ ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬೀದರ್ (ಮಾ.26): ಅಷ್ಟೂರ ಗ್ರಾಮದ ಅಲ್ಲಮಪ್ರಭು ದೇವರ ಬಳಿ ಯಾವುದೇ ಭೇದಭಾವ ಇಲ್ಲ. ಜಾತಿ, ಧರ್ಮದ ಭೇದಭಾವ ಮಾಡದೇ ಸಹಸ್ರಾರು ಸಂಖ್ಯೆಯ ಭಕ್ತರು ಜಾತ್ರೆಯಲ್ಲಿ ಪಾಲ್ಗೊಳ್ಳುವುದು ವಿಶೇಷವಾಗಿದೆ ಎಂದು ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು. ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಷ್ಟೂರ ಗ್ರಾಮದ ಹೊರವಲಯದಲ್ಲಿರುವ ಶ್ರೀ ಅಲ್ಲಮಪ್ರಭು ದೇವರ ದರ್ಗಾದ ಆವರಣದಲ್ಲಿ ಮಂಗಳವಾರ ರಾತ್ರಿ ನಡೆದ ಶ್ರೀ ಅಲ್ಲಮಪ್ರಭು ದೇವರ ಜಾತ್ರಾ ಮಹೋತ್ಸವ & ಸಾಂಸ್ಕೃತಿಕ ಕಾರ್ಯಕ್ರಮ (ಉರ್ಸ್ /ಸಂದಲ್) ದಲ್ಲಿ ಪಾಲ್ಗೊಂಡು, ದರ್ಶನ ಪಡೆದು ಅವರು ಮಾತನಾಡಿದರು. https://ainkannada.com/if-a-cat-of-this-color-comes-to-your-house-it-is-a-sign-of-good-luck/ ಅಲ್ಲಮಪ್ರಭು ದೇವರ ಬಳಿ ಎಲ್ಲರೂ ಒಂದೇ. ಇಲ್ಲಿ ಅದು ಇದು, ಆ ಜಾತಿ ಈ ಜಾತಿ ಎಂಬ ಯಾವುದೇ ಭೇದಭಾವ ಇರುವುದಿಲ್ಲ. ಎಲ್ಲವನ್ನೂ, ಎಲ್ಲರನ್ನೂ ಇಲ್ಲಿ ಒಂದೇ ರೀತಿಯಲ್ಲಿ ಕಾಣಲಾಗುತ್ತದೆ. ಎಲ್ಲಾ ಸಮಾಜದವರು ಸೇರಿ ಈ ಜಾತ್ರೆ ಮಾಡುತ್ತಾರೆ. ಇದು ಬಹಳಷ್ಟು ಸಂತಸದ ವಿಷಯವಾಗಿದೆ.ನಮ್ಮ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಹುತೇಕ…
ಮಳೆ ಗಾಳಿಗೆ ಗೋಡೆ ಕುಸಿದು ಇಬ್ಬರು ಸಾವನ್ನಪ್ಪಿದ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಕಾಡನಕೊಪ್ಪ ಗ್ರಾಮದ ಹೊರವಲಯದಲ್ಲಿ ತಡರಾತ್ರಿ ನಡೆದಿದೆ. ಮಳೆ-ಗಾಳಿಗೆ ನಿರ್ಮಾಣ ಹಂತದ ಕಾರ್ಖಾನೆ ಗೋಡೆ ಕುಸಿದು ಇಬ್ಬರು ಕೂಲಿ ಕಾರ್ಮಿಕರು ಸ್ಥಳದಲ್ಲೇ ಸಾವು, ಓರ್ವನಿಗೆ ಗಾಯವಾಗಿದೆ. ಹುಬ್ಬಳ್ಳಿಯ ಹಳೇ ಹುಬ್ಬಳ್ಳಿಯ ಧಾರವಾಡ ಪ್ಲಾಟ್ ನಿವಾಸಿ ದಾವೂದ್ ಸವಣೂರು (52) ಹಾಗೂ ಹಳೇ ಹುಬ್ಬಳ್ಳಿ ನೂರಾಣಿ ಪ್ಲಾಟ್ ನಿವಾಸಿ ರಫಿಕಸಾಬ್ ಚನ್ನಾಪುರ (50) ಮೃತ ವ್ಯಕ್ತಿಗಳು. ಹುಬ್ಬಳ್ಳಿ ತಾಲೂಕಿನ ಅಂಚಟಗೇರಿ ಗ್ರಾಮದ ಮಹಾಂತೇಶ ಚವರಗುಡ್ಡ ಎಂಬುವವರಿಗೆ ಗಾಯವಾಗಿದ್ದು, https://ainkannada.com/if-a-cat-of-this-color-comes-to-your-house-it-is-a-sign-of-good-luck/ ಗಾಯಗೊಂಡ ವ್ಯಕ್ತಿಯನ್ನ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ನಿರ್ಮಾಣ ಆಗುತ್ತಿರುವ ಕಟ್ಟಡದ ಗಾರೆ ಕೆಲಸಕ್ಕೆ ತೆರಳಿದ್ದ ಕೂಲಿ ಕಾರ್ಮಿಕರು, ಮಧ್ಯಾಹ್ನ ಮಳೆ ಗಾಳಿ ಜೋರಾಗಿ ಬೀಸಿದ್ದರಿಂದ ಗೋಡೆಯ ಬಳಿ ನಿಂತಿದ್ದರು.ಗಾಳಿ ರಭಸಕ್ಕೆ ಗೋಡೆ ಕುಸಿದು ಕೆಳಗೆ ಸಿಲುಕಿ ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಸೂರು: ರಾಜ್ಯ ರಾಜಕಾರಣದ ಹನಿ ಪುರಾಣ ಇದೀಗ ಮತ್ತೊಂದು ಹಂತಕ್ಕೆ ಹೋಗಿದೆ. ಕಳೆದ ಮಾರ್ಚ್ 20ರಂದು ವಿಧಾನಸಭೆ ಕಲಾಪದಲ್ಲಿ ಹನಿಟ್ರ್ಯಾಪ್ ಪ್ರಸ್ತಾಪ ರಾಜಕೀಯದ ಅಸಹ್ಯ ತಂತ್ರಗಾರಿಕೆಯನ್ನು ಬೆತ್ತಲಾಗಿಸಿತ್ತು. ಸಹಕಾರ ಸಚಿವರ ಹೇಳಿಕೆ ಇಡೀ ಕಾಂಗ್ರೆಸ್ ಪಾಳಯ ಕಂಪಿಸುವಂತೆ ಮಾಡಿದೆ. ಇನ್ನೂ ಈ ವಿಚಾರವಾಗಿ ಮೈಸೂರಿನಲ್ಲಿ ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ ಮಾತನಾಡಿದ್ದಾರೆ. ಬಿಜೆಪಿಯಲ್ಲೇ ಹನಿಟ್ರ‍್ಯಾಪ್ ಗಳು ನಡೆದಿವೆ. ಹೀಗಾಗಿಯೇ ಬಿಜೆಪಿ ಶಾಸಕರು, ಮಾಜಿ ಸಿಎಂ ಕೋರ್ಟ್ ನಲ್ಲಿ ಸ್ಟೇ ತಂದಿದ್ದಾರೆ. ಹೀಗಿರುವಾಗ ಬಿಜೆಪಿಯವರಿಗೆ ನಮ್ಮ ನಾಯಕರ ಬಗ್ಗೆ ಮಾತನಾಡಲು ಏನು ಹಕ್ಕಿದೆ ಎಂದು ಪ್ರಶ್ನೆ ಮಾಡಿದ್ದಾರೆ. ಸಚಿವರ ಮನೆಗೆ ಸಿಸಿಟಿವಿ ಹಾಕದ ವಿಚಾರಕ್ಕೆ ಪ್ರತಿಕ್ರಿಯಿಸಿ, https://ainkannada.com/if-a-cat-of-this-color-comes-to-your-house-it-is-a-sign-of-good-luck/ ಕೆಲವರು ಹನಿಟ್ರ‍್ಯಾಪ್ ಮಾಡಲೆಂದೇ ಸಚಿವರ ಮನೆಗೆ ಬರುತ್ತಾರೆ. ಈಗಾಗಿ ಸಿಸಿಟಿವಿ ಹಾಕಿಸಬೇಕು. ಸಚಿವರ ಮನೆಗಳಿಗೆ ಸಿಸಿಟಿವಿ ಇಲ್ಲದ ವಿಚಾರ ನನಗೆ ಗೊತ್ತಿಲ್ಲ. ಆದ್ರೆ ಸಿಎಂ ಮನೆಗೆ ಸಿಸಿಟಿವಿ ಇದೆ. ನಾನು ಅಲ್ಲೇ ಇರುವುದರಿಂದ ಸಿಸಿಟಿವಿ ಇರುವ ಬಗ್ಗೆ ನನಗೆ ಗೊತ್ತಿದೆ, ಬೇರೆಯವರ ಮನೆಯ ವಿಚಾರ ನನಗೆ ಗೊತ್ತಿಲ್ಲ ಎಂದು…
ಧಾರವಾಡ; ಬಿಸಿಲಿನ ಧಗೆಗೆ ಬಸವಳಿದ ತಾಲ್ಲೂಕಿನ ಜನತೆಗೆ ಮಂಗಳವಾರ ಮಧ್ಯಾಹ್ನ ಮತ್ತು ಸಂಜೆ ಸುರಿದ ಉತ್ತಮ ಮಳೆಗೆ ತಂಪಿನ ಅನುಭವ ಸವಿಯುವುದರ ಜೊತೆಗೆ ವರ್ಷದ ಪ್ರಥಮ ಮಳೆಯ ಆನಂದ ಸವಿದರು. ಈ ಮಳೆಯ ವಿಶೇಷವಾಗಿ ರೈತನ ಮೊಗದಲ್ಲಿ ಮಂದಹಾಸ ಮೂಡಿಸಿತ್ತು. ಮಂಗಳವಾರ ಸಂಜೆ ವಾರದ ಸಂತೆಗೆ ಮಳೆಯಿಂದ ಅಡಚಣೆಯಾಯಿತು.ಮಳೆಯಿಂದ ರಕ್ಷಣೆ ಮಾಡಲು ಮಂಗಳವಾರ ಸಂತೆಯ ವ್ಯಾಪಾರಸ್ಥರು ತಾಡಪತ್ರಿಯ ಮೋರೆ ಹೋಗಿದ್ದರು. ಅಳ್ನಾವರ, ಕಾಶೇನಟ್ಟಿ, ಹೂಲಿಕೇರಿ, ಬೆಣಚಿ, ಕೋಗಿಲಗೇರಿ, ಕಡಬಗಟ್ಟಿ, ಡೋರಿ ಮುಂತಾದೆಡೆ ಮಳೆ ಸುರಿದ ಬಗ್ಗೆ ವರದಿಯಾಗಿದೆ. ಹಲವೆಡೆ ಜೋರಾದ ಗಾಳಿ ಬೀಸಿದ್ದರಿಂದ ಮಳೆ ಗಾಳಿಯ ಜೊತೆ ಹಾರಿ ಹೋಯಿತು ಎಂದು ರೈತ ಮಲ್ಲನಗೌಡ ಪಾಟೀಲ ತಿಳಿಸಿದರು. ಇನ್ನೂ ಹಲವೆಡೆ ಗುಡುಗು ಸಿಡಿಲಿನ ಆರ್ಭಟ ಕೇಳಿ ಬಂತು. https://ainkannada.com/if-a-cat-of-this-color-comes-to-your-house-it-is-a-sign-of-good-luck/ ‘ಈ ಮಳೆ ಕಬ್ಬು ಬೆಳೆಗೆ ಸಂಜೀವಿನಿ ಇದ್ದಂತೆ. ಬೇಸಿಗೆಯಲ್ಲಿ ದೊರೆಯುವ ಅಲ್ಪ ವಿದ್ಯುತ್ ಮೂಲಕ ಕಬ್ಬಿಗೆ ನೀರು ಹಾಯಿಸುವುದು ಸದ್ಯ ನಿಂತಿದೆ. ಈ ಮಳೆ ಕಬ್ಬು ಬೆಳೆಗೆ ತುಂಬಾ ಸಹಕಾರಿಯಾಗಿದೆ. ಮಳೆ…
ನವದೆಹಲಿ: ಏಪ್ರಿಲ್‌ನಿಂದ ರಾಷ್ಟ್ರ ರಾಜಧಾನಿಯ ವಾಹನ ಚಾಲಕರು ಮಾಲಿನ್ಯ ಮಾನದಂಡಗಳ ಕುರಿತು ಕಠಿಣ ಜಾರಿಗೊಳಿಸುವಿಕೆಯನ್ನು ಎದುರಿಸಬೇಕಾಗುತ್ತದೆ ಏಕೆಂದರೆ ನಗರದಾದ್ಯಂತ ಪೆಟ್ರೋಲ್ ಪಂಪ್‌ಗಳು ಅವಧಿ ಮೀರಿದ ಮಾಲಿನ್ಯ ನಿಯಂತ್ರಣ (ಪಿಯುಸಿ) ಪ್ರಮಾಣಪತ್ರಗಳನ್ನು ಹೊಂದಿರುವ ವಾಹನಗಳಿಗೆ ಇಂಧನ ನೀಡುವುದನ್ನು ನಿಲ್ಲಿಸುತ್ತವೆ. ಹಳೆಯ ಮತ್ತು ಸಂಭಾವ್ಯವಾಗಿ ಹೆಚ್ಚು ಮಾಲಿನ್ಯಕಾರಕ ವಾಹನಗಳು ಪರಿಸರ ನಿಯಮಗಳಿಗೆ ಅನುಸಾರವಾಗಿವೆ ಮತ್ತು ಪರಿಸರವನ್ನು ಮಾಲಿನ್ಯಗೊಳಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳುವ ಗುರಿಯನ್ನು ಈ ಕ್ರಮ ಹೊಂದಿದೆ. ಎನ್‌ಡಿಟಿವಿ ವರದಿಯ ಪ್ರಕಾರ, ದೆಹಲಿಯ ಸರಿಸುಮಾರು 500 ಇಂಧನ ಪಂಪ್‌ಗಳಲ್ಲಿ ಈ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕ್ರಿಯೆಯನ್ನು “ತಪ್ಪು ನಿರೋಧಕ” ಮಾಡಲು, ಪ್ರತಿ ನಿಲ್ದಾಣವು ಅವಧಿ ಮೀರಿದ ಪಿಯುಸಿ ಪ್ರಮಾಣಪತ್ರಗಳನ್ನು ಹೊಂದಿರುವ ವಾಹನಗಳನ್ನು ಗುರುತಿಸುವ ಸಾಮರ್ಥ್ಯವಿರುವ ಹೊಸ ಸಾಧನವನ್ನು ಹೊಂದಿರುತ್ತದೆ. ನಿಯಮ ಪಾಲಿಸದ ವಾಹನವು ಇಂಧನ ತುಂಬಲು ಬಂದಾಗ, ವ್ಯವಸ್ಥೆಯು ಸ್ವಯಂಚಾಲಿತವಾಗಿ ಇಂಧನ ಪಂಪ್ ಸಿಬ್ಬಂದಿಗೆ ಎಚ್ಚರಿಕೆ ನೀಡುತ್ತದೆ, ನಂತರ ಅವರು ಸೇವೆಯನ್ನು ನಿರಾಕರಿಸುತ್ತಾರೆ. ಈ ವ್ಯವಸ್ಥೆಯು ಸರ್ಕಾರದ ದಾಖಲೆಗಳಿಂದ ಪಿಯುಸಿ…
ಸೂರ್ಯೋದಯ – 6:19ಬೆ ಸೂರ್ಯಾಸ್ತ – 6:24 ಸಂಜೆ ಶಾಲಿವಾಹನ ಶಕೆ -1946 ಸಂವತ್-2080 ಕ್ರೋಧಿನಾಮ ಸಂವತ್ಸರ, ಉತ್ತರ ಅಯಣ, ಶುಕ್ಲ ಪಕ್ಷ, ಶಿಶಿರ ಋತು, ಪಾಲ್ಗುಣ ಮಾಸ, ತಿಥಿ – ದ್ವಾದಶಿ ನಕ್ಷತ್ರ – ಧನಿಷ್ಥೆ ಯೋಗ – ಸಿದ್ಧ ಕರಣ – ಕೌಲವ ರಾಹು ಕಾಲ -12:00 ದಿಂದ 01:30 ವರೆಗೆ ಯಮಗಂಡ – 07:30 ದಿಂದ 09:00 ವರೆಗೆ ಗುಳಿಕ ಕಾಲ – 10:30 ದಿಂದ 12:00 ವರೆಗೆ ಬ್ರಹ್ಮ ಮುಹೂರ್ತ – 4:43 ಬೆ. ದಿಂದ 5:31 ಬೆ.ವರೆಗೆ ಅಮೃತ ಕಾಲ – 4:39 ಸಾಯಂಕಾಲ. ದಿಂದ 6:10 ಸಂಜೆ. ವರೆಗೆ ಅಭಿಜಿತ್ ಮುಹುರ್ತ – ಇಲ್ಲ ಮೇಷ ರಾಶಿ: ಕಷ್ಟಕಾಲದಲ್ಲಿ ಪತ್ನಿಯ ಸಹಾಯ ದೊರೆಯಲಿದೆ, ಪ್ರೇಮಿಗಳ ನಡುವೆ ಅನುಮಾನ ಪ್ರಾರಂಭ, ಸ್ಥಾನ ಬದಲಾವಣೆಯಿಂದ ಉದ್ಯೋಗದಲ್ಲಿ ಹೊಂದಾಣಿಕೆ ಕಷ್ಟ, ವಾದ ವಿವಾದಗಳು ಎದುರಿಸಬೇಕಾಗುತ್ತದೆ, ತಂದೆಯ ಸ್ವಲ್ಪ ಧನ ಸಹಾಯದಿಂದ ಹೊಸ ವ್ಯಾಪಾರ ಪ್ರಾರಂಭ, ಆಕಸ್ಮಿಕ ಶರೀರಕ್ಕೆ…
ಹಿಂದೂ ಧರ್ಮದಲ್ಲಿ ಅನೇಕ ರೀತಿಯ ಪ್ರಾಣಿಗಳನ್ನು ಪ್ರಮುಖವೆಂದು ವಿವರಿಸಲಾಗಿದೆ. ವಿಶೇಷವಾಗಿ ನೀವು ಅನೇಕ ಧಾರ್ಮಿಕ ಕಥೆಗಳಲ್ಲಿ ಹಸು, ನಾಯಿ, ಬೆಕ್ಕು, ಪಾರಿವಾಳ ಇತ್ಯಾದಿಗಳ ಉಲ್ಲೇಖವನ್ನು ಕಾಣಬಹುದು. ಕೆಲವು ಪ್ರಾಣಿಗಳನ್ನು ಹಿಂದೂ ದೇವರು ಮತ್ತು ದೇವತೆಗಳ ವಾಹನ ಎಂದು ವಿವರಿಸಲಾಗಿದೆ. ಈ ಪ್ರಾಣಿಗಳಿಗೆ ಸಂಬಂಧಿಸಿದ ಶುಭ ಮತ್ತು ಅಶುಭ ಚಿಹ್ನೆಗಳ ಬಗ್ಗೆ ಅನೇಕ ವಿಷಯಗಳು ಪ್ರಚಲಿತದಲ್ಲಿವೆ. ವಾಸ್ತು ಶಾಸ್ತ್ರದ ಪ್ರಕಾರ ಕಂದು ಬಣ್ಣದ ಬೆಕ್ಕು ಅನಿರೀಕ್ಷಿತವಾಗಿ ಮನೆಗೆ ಬಂದರೆ ಅದನ್ನು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ಬಣ್ಣದ ಬೆಕ್ಕುಗಳು ಅದೃಷ್ಟವನ್ನು ತರುತ್ತವೆ ಎನ್ನುವ ನಂಬಿಕೆ ಇದೆ. ಮನೆಯಲ್ಲಿ ಕಂದು ಬೆಕ್ಕು ಬರುವುದರಿಂದ ಸಂಪತ್ತು ಡಬಲ್ ಆಗುತ್ತದೆ ಎನ್ನಲಾಗುತ್ತದೆ. ಇದಲ್ಲದೆ, ಈ ಬೆಕ್ಕು ಮನೆಗೆ ಬಂದಾಗ, ನಿಮ್ಮ ನಿಂತು ಹೋಗಿದ್ದ ಕೆಲಸ ಮತ್ತೆ ಆರಂಭವಾಗಿ, ಹಣ ಸಹ ಸಿಗುತ್ತದೆ ಎನ್ನುತ್ತಾರೆ ಹಿರಿಯರು. ಕಪ್ಪು ಬೆಕ್ಕು ಇದ್ದಕ್ಕಿದ್ದಂತೆ ಮನೆಗೆ ಬಂದು ಅಳಲು ಪ್ರಾರಂಭಿಸಿದರೆ, ಅದು ಕೆಟ್ಟ ಸಂಕೇತ ಎನ್ನಲಾಗುತ್ತದೆ. ಕಪ್ಪು ಬೆಕ್ಕಿನ ಕೂಗು ಕೆಲವು ಅಹಿತಕರ…