E.K. ಎಂಟರ್ ಟೈನರ್ಸ್ ಲಾಂಛನದಲ್ಲಿ ಇ.ಕೃಷ್ಣಪ್ಪ ಅವರು ನಿರ್ಮಿಸಿ, ಯೋಗರಾಜ್ ಭಟ್ ನಿರ್ದೇಶಿಸಿದ್ದ ಯಶಸ್ವಿ “ಮುಂಗಾರು ಮಳೆ” ಚಿತ್ರದ ನಂತರ ಇದೇ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ “ಮನದ ಕಡಲು” ಚಿತ್ರ ಈ ವಾರ ರಾಜ್ಯಾದ್ಯಂತ (ಮಾರ್ಚ್ 28) ಬಿಡುಗಡೆಯಾಗುತ್ತಿದೆ. ಜಿ.ಗಂಗಾಧರ್ ಅವರ ಸಹ ನಿರ್ಮಾಣ ಹಾಗೂ ಪ್ರತಾಪ್ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿರುವ ಈ ಚಿತ್ರ ಈಗಾಗಲೇ ಟೀಸರ್, ಟ್ರೇಲರ್ ಹಾಗೂ ಹಾಡುಗಳ ಮೂಲಕ ಪ್ರೇಕ್ಷಕರ ಮನ ಗೆದ್ದಿದೆ. ನಾಯಕನಾಗಿ ಸುಮುಖ ಅಭಿನಯಿಸಿದ್ದಾರೆ. ನಾಯಕಿಯರಾಗಿ ರಾಶಿಕಾ ಶೆಟ್ಟಿ ಹಾಗೂ ಅಂಜಲಿ ಅನೀಶ್ ನಟಿಸಿದ್ದಾರೆ. ರಂಗಾಯಣ ರಘು, ದತ್ತಣ್ಣ, ಶಿವಧ್ವಜ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ವಿ.ಹರಿಕೃಷ್ಣ ಸಂಗೀತ ಸಂಯೋಜಿಸಿರುವ ಈ ಚಿತ್ರದ ಹಾಡುಗಳನ್ನು ಜಯಂತ ಕಾಯ್ಕಿಣಿ, ಯೋಗರಾಜ್ ಭಟ್ ಬರೆದಿದ್ದಾರೆ. ಸಂತೋಷ್ ರೈ ಪಾತಾಜೆ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಶಿವಕುಮಾರ್ ಕಲಾ ನಿರ್ದೇಶನ, ವಿನೋದ್ ಹಾಗೂ ಕೌರವ ವೆಂಕಟೇಶ್ ಸಾಹಸ ನಿರ್ದೇಶನ ಮತ್ತು ಮುರಳಿ, ಕಂಬಿ ರಾಜು , ಗೀತಾ ಸಾಯಿ ಅವರ ನೃತ್ಯ…
Author: Author AIN
ಐಪಿಎಲ್ 2025 ರಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಪರಸ್ಪರ ವಿರುದ್ಧವಾಗಿ ತಮ್ಮ ಅಭಿಯಾನವನ್ನು ಪ್ರಾರಂಭಿಸಲಿವೆ. ಮಂಗಳವಾರ ಅಹಮದಾಬಾದ್‌ನಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯಕ್ಕೂ ಮುನ್ನ ಗುಜರಾತ್ ನಾಯಕ ಶುಭಮನ್ ಗಿಲ್, ಸ್ಟಾರ್ ಆಟಗಾರ ಜೋಸ್ ಬಟ್ಲರ್ ಅವರ ಬ್ಯಾಟಿಂಗ್ ಸ್ಥಾನದ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ದರು. ಪಂದ್ಯಕ್ಕೂ ಮುನ್ನ, ಬಟ್ಲರ್ ಅವರ ಬ್ಯಾಟಿಂಗ್ ಸ್ಥಾನದ ಬಗ್ಗೆ ಮಾತನಾಡಿದ ಗಿಲ್, ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗೆ ಯಾವುದೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದರು. https://ainkannada.com/dont-make-these-mistakes-even-when-youre-stuck-at-home-these-will-affect-your-life/ ಬಟ್ಲರ್ ಮೂರನೇ ಸ್ಥಾನದಲ್ಲಿ ಓಪನಿಂಗ್ ಅಥವಾ ಬ್ಯಾಟಿಂಗ್ ಮಾಡುವುದರಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಗಿಲ್ ಹೇಳಿದರು. ಪಂದ್ಯಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಗುಜರಾತ್ ನಾಯಕ, “ಮೊದಲನೆಯದಾಗಿ, ಟಿ20 ಕ್ರಿಕೆಟ್ ಮತ್ತು ಐಪಿಎಲ್‌ನಲ್ಲಿ ಇಂಗ್ಲೆಂಡ್‌ಗಾಗಿ ಅವರು ಏನು ಮಾಡಿದ್ದಾರೆಂದು ನಾವೆಲ್ಲರೂ ನೋಡಿದ್ದೇವೆ” ಎಂದು ಹೇಳಿದರು. ನನ್ನ ಪ್ರಕಾರ ಅವರು ಕಳೆದ ಸರಣಿಯಲ್ಲಿ ಮೂರನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿದ್ದರು. ಹಾಗಾಗಿ,…
ಬೆಂಗಳೂರು: ಚಿನ್ನ ಕಳ್ಳಸಾಗಾಣಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿರುವ ಆರೋಪಿ ನಟಿ ರನ್ಯಾ ರಾವ್ ಜಾಮೀನು ಅರ್ಜಿ ಮುಕ್ತಾಯವಾಗಿದ್ದು, ಮಾರ್ಚ್ 27ರಂದು ಆದೇಶ ಪ್ರಕಟ ಆಗಲಿದೆ ಎಂದು ಬೆಂಗಳೂರಿನ 64ನೇ ಸಿಸಿಹೆಚ್ ಕೋರ್ಟ್ ಹೇಳಿದೆ. ನಟಿ ರನ್ಯಾ ರಾವ್ ದುಬೈನಿಂದ ಚಿನ್ನದ ಜೊತೆ ಬಂದಿದ್ದಾರೆ. ಬೆಂಗಳೂರು ಏರ್‌ಪೋರ್ಟ್‌ಗೆ ಸಂಜೆ 6.30ಕ್ಕೆ ಲ್ಯಾಂಡ್ ಆಗಿದ್ದಾರೆ. ಈ ವೇಳೆ ಪ್ರೊಟೋಕಾಲ್ ಅಧಿಕಾರಿ ಹೋಗಿದ್ದಾರೆ. ಅಲ್ಲಿಗೆ ಪ್ರೊಟೋಕಾಲ್ ಅಧಿಕಾರಿ ಹೋಗಿದ್ದಾರೆ ಅಂದರೆ ರನ್ಯಾ ರಾನ್ ಗ್ರೀನ್ ಚಾನಲ್ ಮೂಲಕ ಬರ್ತಿದ್ದಾರೆಂದು ಅರ್ಥ’ ಎಂದು ಡಿಆರ್‌ಐ ಪರ ವಕೀಲ ಮಧು ರಾವ್ ವಾದ ಮಂಡಿಸಿದ್ದಾರೆ. https://ainkannada.com/dont-make-these-mistakes-even-when-youre-stuck-at-home-these-will-affect-your-life/ ‘ಕಸ್ಟಮ್ಸ್ ಏರಿಯಾ, ಇಮ್ಮಿಗ್ರೇಷನ್ ಏರಿಯಾ ಎಲ್ಲಾ ಆದ ಮೇಲೆ ಡಿಆರ್‌ಐ ಅಧಿಕಾರಿಗಳು ರನ್ಯಾ ರಾವ್‌ನನ್ನು ಮಾತನಾಡಿಸಿದ್ದಾರೆ. ಮೊದಲು ಬ್ಯಾಗ್ ಪರಿಶೀಲಿಸಲಾಗಿದೆ. ಅಲ್ಲಿ ಏನೂ ಪತ್ತೆಯಾಗಿರಲಿಲ್ಲ. ಬಳಿಕ ಆಕೆಯನ್ನ ತಪಾಸಣೆಗೆ ಒಳಪಡಿಸಲಾಗಿದೆ. ಕಸ್ಟಮ್ಸ್ ಕಾಯ್ದೆ 102 ಅಡಿಯಲ್ಲಿ ಕೂಡಲೇ ನೋಟಿಸ್ ನೀಡಲಾಗಿದೆ. ಇದನ್ನು ಕೊಡಲೇಬೇಕು ಎಂದಿಲ್ಲ. ವಸ್ತು ಪತ್ತೆಯಾದಾಗ ಆರೋಪಿಯ ಸ್ವಾತಂತ್ರ್ಯ, ಸಂವಿಧಾನದ…
ಬೆಂಗಳೂರು: ಹೃದಯ ವೈಫಲ್ಯಕ್ಕೆ ಒಳಗಾಗುವ ಸ್ಥಿತಿಗೆ ತಲುಪಿದ್ದ 9 ವರ್ಷದ ಬಾಲಕನಿಗೆ ಯಶಸ್ವಿಯಾಗಿ ಹೃದಯ ಕಸಿ ಮಾಡುವ ಮೂಲಕ ಬಾಲಕನಿಗೆ ಮರುಹುಟ್ಟು ನೀಡಲಾಗಿದೆ. ಯಶವಂತಪುರ ಸ್ಪರ್ಶ್ ಆಸ್ಪತ್ರೆಯ ಹೃದಯ ಕಸಿತಜ್ಞ, ಹೃದಯ ರಕ್ತನಾಳಗಳ ಹಿರಿಯ ಶಸ್ತ್ರ ಚಿಕಿತ್ಸಕರಾದ ಡಾ.ರವಿಶಂಕರ್ ಶೆಟ್ಟಿ.ಕೆ. ಅವರ ವೈದ್ಯ ತಂಡ ಈ ಯಶಸ್ವಿ ಹೃದಯ ಕಸಿ ನಡೆಸಿದೆ. ಈ ಕುರಿತು ಮಾತನಾಡಿದ ಡಾ.ರವಿಶಂಕರ್ ಶೆಟ್ಟಿ, 9 ವರ್ಷದ ರಿಯಾಂಶ್ ರಾವಲ್ ಎಂಬ ಬಾಲಕ ಹುಟ್ಟಿನಿಂದಲೇ ತೀವ್ರತರದ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ. ಕ್ರಮೇಣ ಈ ಸಮಸ್ಯೆ ಬಾಲಕನಿಗೆ ಉಸಿರಾಡಲು ಸಹ ಕಷ್ಟಪಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಬಾಲಕ ಬೆಳೆದಂತೆ ಹೃದಯ ಸಮಸ್ಯೆಯೂ ದೊಡ್ಡದಾಗುತ್ತಾ, ಹೃದಯ ವೈಫಲ್ಯದವರೆಗೂ ತಲುಪಿತ್ತು. ಹೃದಯ ಕಸಿ ಮಾಡುವುದೊಂದೇ ಬಾಲಕನನ್ನು ಬದುಕುಳಿಸುವ ಮಾರ್ಗವಾಗಿತ್ತು. ಆದರೆ, ಸೂಕ್ತ ಸಮಯಕ್ಕೆ ಹೃದಯ ದೊರೆಯುವುದು ಸವಾಲಿನ ಕೆಲಸವಾಗಿತ್ತು. ಹೀಗಾಗಿ ನೋಂದಣಿ ಮಾಡುತ್ತಾ ಕಾಯುತ್ತಿದ್ದರು. ಸೂಕ್ತ ಸಮಯಕ್ಕೆ ರಿಯಾಂಶ್‌ಗೆ ಹೊಂದಾಣಿಕೆಯಾಗುವ ಹೃದಯವು ಕರ್ನಾಟಕ ಅಂಗ ಮತ್ತು ಅಂಗಾಂಶಗಳ ಕಸಿ ಸಂಸ್ಥೆ (SOTTO Karnataka)ಯ…
ಚಿಕ್ಕಬಳ್ಳಾಪುರ : ಅವರಿಬ್ಬರದು ವರ್ಷಗಳ ಪ್ರೀತಿ.. ಪೋಷಕರ ವಿರುದ್ಧದ ನಡುವೆಯೂ ಈ ಜೋಡಿ ಇದೀಗ ಹೊಸ ಬದುಕಿಗೆ ಕಾಲಿಟ್ಟಿದೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಬಳಿ ಭಾರೀ ಹೈಡ್ರಾಮ ನಡೆದಿದ್ದು, ಬಳಿಕ ಮದುವೆ ನಡೆದಿದೆ. https://www.youtube.com/watch?v=e-zuEy7Te8Q ಪೋಷಕರ ವಿರೋಧದ ನಡುವೆ ಹಿಂದು ಮತ್ತು ಮುಸ್ಲಿಂ ಯುವತಿಯ ಮದುವೆ ನಡೆದಿದೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಈ ಜೋಡಿ ಒಂದಾಗಿದೆ. ತಾಲೂಕಿನ ಮೈಲಪ್ಪನಹಳ್ಳಿ ಪಸೀಹಾ ಹಾಗೂ ನಾಗಾರ್ಜುನ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇದೀಘ ಪೋಷಕರ ವಿರೋಧ ನಡುವೆ ಹಿಂದು – ಮುಸ್ಲಿಂ ಜೋಡಿ ಹಸೆಮಣೆ ಏರಿದೆ.
ಬಿರ್ಲಾ ಓಪಸ್ ಪೇಂಟ್ಸ್ ತನ್ನ ಹೊಸ ಫ್ಯಾಂಚೈಸಿಯನ್ನ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಬೇಗೂರು ಮುಖ್ಯರಸ್ತೆಯ ಮೈಲ್ ಸಾಂದ್ರ ಗ್ರಾಮದಲ್ಲಿ 17ನೇ ಫ್ರಾಂಚೈಸಿ ಮಳಿಗೆಯನ್ನು ಉದ್ಘಾಟನೆಯನ್ನು ಮಾಡಲಾಯಿತು. ಬಿರ್ಲಾ ಓಪಸ್ ಪೇಂಟ್ಸ್ ಸೆಲ್ಸ್ ಹಡ್ ಆಶಿಶ್ ಜಾಜೂ ಉದ್ಘಾಟನೆ ಮಾಡವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.. ಇನ್ನು ಮನೆಗೆ ಬೇಕಾಗುವ ಟೈಲ್ಸ್ ಎಲೆಕ್ಟ್ರಿಕಲ್ ಪೈಂಟ್ ಒಂದೇ ಜಾಗದಲ್ಲಿ ಸಿಗಲಿದೆ. ಜನರಿಗೆ ಉತ್ತಮ ಗುಣಮಟ್ಟದ ವಸ್ತುಗಳನ್ನು ನೀಡಲು ನಾವು ಸಿದ್ಧರಿದ್ದೇವೆ ಎಂದು ಸೇಲ್ಸ್ ಹೆಡ್ ಆಶಿಶ್ ಜಾಜು ತಿಳಿಸಿದರು. https://ainkannada.com/dont-make-these-mistakes-even-when-youre-stuck-at-home-these-will-affect-your-life/ ಇನ್ನು ರಾಜ್ಯದ್ಯಂತ 45 ಫ್ರಾಂಚೈಸಿ ಗಳನ್ನು ಒಳಗೊಂಡಿದೆ .ಇನ್ನು ಗ್ರಾಹಕರಿಗೆ ಬೇಕಾದ ಗುಣಮಟ್ಟದ ಪೇಂಟ್ ಗಳು ಇಲ್ಲಿ ಸಿಗಲಿದೆ ಹಾಗಾಗಿ ಇದನ್ನ ಸದುಪಯೋಗಪಡಿಸಿಕೊಳ್ಳಬೇಕು ಗ್ರಾಹಕರಲ್ಲಿ ಕೇಳಿಕೊಂಡರು ಆದಷ್ಟು ಬೇಗ ನಮ್ಮ ಪ್ರಾಂಚೈಸಿ ಒಳ್ಳೆ ಬ್ರಾಂಡ್ ಆಗಲಿದೆ ವಿಶ್ವಾಸ ವ್ಯಕ್ತಪಡಿಸಿದರು..
ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕೆಡಿ ಸಿನಿಮಾ ಅಖಾಡದಲ್ಲಿ ಬ್ಯುಸಿಯಾಗಿದ್ದಾರೆ. ಜೋಗಿ ಪ್ರೇಮ್ ಜೊತೆ ಫರ್ ದಿ ಫಸ್ಟ್ ಟೈಮ್ ಭರ್ಜರಿ ಗಂಡು ಕೈ ಜೋಡಿಸಿರುವುದು ಅಭಿಮಾನಿ ಬಳಗದಲ್ಲಿಯೂ ನಿರೀಕ್ಷೆ ಹೆಚ್ಚಿದೆ. ಕೆಡಿ ಚಿತ್ರಕ್ಕಾಗಿ ಧ್ರುವ ವಿಐಪಿಗಳು ಕಾತುರ ಆತುರದಿಂದ ಕಾಯ್ತಿದ್ದಾರೆ. ಈ ನಡುವೆಯೇ ಧ್ರುವ ಸರ್ಜಾ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಫ್ಯೂಚರ್ ಸಿಎಂ ಎಂದು ಭವಿಷ್ಯ ನುಡಿದ್ದಾರೆ. ಸಿಎಂ ಗದ್ದುಗೇರಲು ಡಿಕೆಶಿ ಶತಪ್ರಯತ್ನ ಮಾಡುತ್ತಿದ್ದಾರೆ. ಅಪ್ಪನನ್ನು ರಾಜ್ಯದ ಮುಖ್ಯಮಂತ್ರಿಯಾಗಿ ನೋಡಲು ಮಗಳು ಐಶ್ವರ್ಯ ಹಾಗೂ ಅವರ ಪತ್ನಿ ಉಷಾ ಅವರಿಗೂ ಕನಸಿದೆ. ಆ ಕನಸು ಯಾವಾಗ ನನಸು ಆಗಲಿದೆ ಎಂದು ಇಡೀ ಕುಟುಂಬ ಎದುರು ನೋಡುತ್ತಿದೆ. ಇಂತಹ ಸಮಯದಲ್ಲಿ ಪೊಗರು ಪೋರ ಡಿಕೆ ಭವಿಷ್ಯದ ಸಿಎಂ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಬೆಂಗಳೂರಿನ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ ಯಲ್ಲಿ ಏರ್ಪಡಿಸಲಾಗಿದ್ದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಯುವಜನೋತ್ಸವ 2025 ಉದ್ಘಾಟನಾ ಸಮಾರಂಭದಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್, GAT ಅಧ್ಯಕ್ಷೆ…
ಹುಬ್ಬಳ್ಳಿ: ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ ಖಂಡಿಸಿ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುವ ಮೂಲಕ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾನು ಸಂವಿಧಾನ ಬದಲಾವಣೆ ಮಾಡುತ್ತೇನೆ ಎಂಬ ಡಿಸಿಎಂ ಶಿವಕುಮಾರ್ ಹೇಳಿಕೆಗೆ ಎಲ್ಲೆಡೆಯೂ ಬಾರಿ ವಿರೋಧ ವ್ಯಕ್ತವಾಗಿದ್ದು, ಹುಬ್ಬಳ್ಳಿಯಲ್ಲಿ ಶಾಸಕ ಮಹೇಶ ಟೆಂಗಿನಕಾಯಿ ನೇತೃತ್ವದಲ್ಲಿ ಹುಬ್ಬಳ್ಳಿಯ ಸಂಗೊಳ್ಳಿ ರಾಯಣ್ಣ ಸರ್ಕಲ್ ಬಳಿಯಲ್ಲಿ ಡಿ.ಕೆ.ಶಿವಕುಮಾರ್ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಲಾಯಿತು. https://ainkannada.com/anti-constitutional-statement-protest-in-bagalkot-dcms-effigy-burnt-anger/ ಡಿಸಿಎಂ ಡಿ.ಕೆ. ಶಿವಕುಮಾರ್ ಕೂಡಲೇ ರಾಜೀನಾಮೆ ನೀಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.
ಬಾಗಲಕೋಟೆ : ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂವಿಧಾನ ವಿರೋಧಿ ಹೇಳಿಕೆ ಖಂಡಿಸಿ ಬಾಗಲಕೋಟೆಯಲ್ಲಿ ಪ್ರತಿಭಟನೆ ನಡೆಸಲಾಯಿತು. ಪರಿಷತ್ ಸದಸ್ಯ ಪಿ.ಹೆಚ್.ಪೂಜಾರ್ , ಡಾ.ಶೇಖರ್ ಮಾನೆ ಅವರ ನೇತೃತ್ವದಲ್ಲಿ ಪ್ರತಿಭಟನೆ ಜರುಗಿತು. ಬಾಗಲಕೋಟೆ ನಗರದ ಎಂಎಲ್‌ಸಿ ಕಾರ್ಯಾಲಯದಿಂದ ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ವರೆಗೆ ನಡೆದ ಪ್ರತಿಭಟನಾ ಮೆರವಣಿಗೆ ನಡೆಸಿ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಘೋಷಣೆ ಕೂಗಿ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು. https://ainkannada.com/constitution-amendment-statement-protest-against-dksh-in-mangaluru-too/ ಇದೇ ವೇಳೆಬಿಜೆಪಿ ಮುಖಂಡ ಡಾ. ಶೇಖರ್ ಮಾನೆ ಮಾತನಾಡಿ ಮೊದಲು ಮುಸ್ಲಿಂ ತುಷ್ಠೀಕರಣವನ್ನು ಬಿಡಿ ಎಂದು ಕಿಡಿಕಾರಿದರು. ಲೋಕಸಭೆ ಚುನಾವಣೆಯಲ್ಲಿ ಎರಡು ಅಂಕಿಯಷ್ಟು ಸೀಟು ಗೆಲ್ಲಲಾಗದವರು ಸಂವಿಧಾನ ಬದಲಿಸುವ ಹೇಳಿಕೆ ನೀಡುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಮಂಗಳೂರು : ಸಂವಿಧಾನ ವಿರೋಧಿ ಹೇಳಿಕೆ ನೀಡಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ವಿರುದ್ಧ ಮಂಗಳೂರು ಪುರಭವನದ ಬಳಿ ಇರುವ ಡಾ. ಬಿ ಆರ್ ಅಂಬೇಡ್ಕರ್ ಪ್ರತಿಮೆಯ ಬಳಿ ಪ್ರತಿಭಟನೆ ನಡೆಸಲಾಯಿತು. https://ainkannada.com/statement-on-changing-the-constitution-dksh-effigy-burnt-angered/ ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ , ಶಾಸಕರಾದ ವೇದವ್ಯಾಸ್ ಕಾಮತ್ , ಭರತ್ ಶೆಟ್ಟಿ , ಹರೀಶ್ ಪೂಂಜಾ , ಭಾಗೀರಥಿ ಮುರುಳ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಮತ್ತು ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರು , ಪ್ರಧಾನ ಕಾರ್ಯದರ್ಶಿಗಳಾದ ಪ್ರೇಮಾನಂದ ಶೆಟ್ಟಿ, ಯತೀಶ್ ಆರ್ವರ್, ಬಿಜೆಪಿ ಪ್ರಮುಖರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಸುಧೀರ್ ಶೆಟ್ಟಿ ಕಣ್ಣೂರು, ಜಿಲ್ಲಾ ಉಪಾಧ್ಯಕ್ಷರುಗಳು, ಜಿಲ್ಲಾ ಪದಾಧಿಕಾರಿಗಳು, ಮಂಡಲದ ಅಧ್ಯಕ್ಷರುಗಳು, ಮೋರ್ಚಾದ ಅಧ್ಯಕ್ಷರು ಮತ್ತು ಸದಸ್ಯರು, ಪ್ರಕೋಷ್ಠದ ಸದಸ್ಯರುಗಳು ಮತ್ತು ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.