ಮಾಲಿವುಡ್ ಚಿತ್ರರಂಗದ ಈ ವರ್ಷದ ಸೂಪರ್ ಹಿಟ್ ಜೊತೆಗೆ ವಿವಾದಗಳಿಂದ ಸುದ್ದಿಯಾದ ಸಿನಿಮಾ ಎಂಪುರಾನ್. ಲೂಸಿಫರ್ ಚಿತ್ರದ ಮುಂದುವರೆದ ಭಾಗವಾಗಿರುವ ಎಂಪುರಾನ್ ನಲ್ಲಿ ಮೋಹನ್ ಲಾಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಪೃಥ್ವಿರಾಜ್ ಸುಕುಮಾರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಮಾರ್ಚ್ 27ರಂದು ತೆರೆಕಂಡ ಚಿತ್ರ 300ಕ್ಕೂ ಅಧಿಕ ಕೋಟಿ ಕಲೆಕ್ಷನ್ ಮಾಡಿತ್ತು ಎನ್ನಲಾಗಿತ್ತು. ಆದರೆ ಈ ಚಿತ್ರ ಸಾಕಷ್ಟು ವಿವಾದಗಳಿಂದ ಸುದ್ದಿಯಾಗಿತ್ತು.ಬಿಡುಗಡೆ ನಂತರ ಎಂಪುರಾನ್ ಸಿನಿಮಾ ಸಾಕಷ್ಟು ವಿವಾದ ಎದುರಿಸಿದೆ. ಚಿತ್ರದ ಕೆಲ ದೃಶ್ಯಗಳಿಗೆ ಕತ್ತರಿ ಹಾಕಲಾಗಿತ್ತು. ಬಿಜೆಪಿ ಹಾಗೂ ಸಂಘ ಪರಿವಾರದವರು ಈ ಚಿತ್ರವನ್ನು ತೀವ್ರವಾಗಿ ವಿರೋಧಿಸಿದ್ದರು. ಹಿಂದೂ ವಿರೋಧಿ ಮತ್ತು ಅಪಪ್ರಚಾರ ಹರಡಿದ ಆರೋಪದಡಿ ಕೆಲ ದೃಶ್ಯಗಳಿಗೆ ಬಳಿಕ ಕತ್ತರಿ ಹಾಕಲಾಗಿತ್ತು. ಆಶೀರ್ವಾದ್ ಸಿನಿಮಾಸ್, ಲೈಕಾ ಪ್ರೊಡಕ್ಷನ್ಸ್ ಹಾಗೂ ಶ್ರೀ ಗೋಕುಲಂ ಮೂವೀಸ್ ಸಂಸ್ಥೆಗಳು ಒಟ್ಟಿಗೆ ಸೇರಿದ್ದ ‘ಎಂಪುರಾನ್’ ಸಿನಿಮಾವೀಗ ಒಟಿಟಿಗೆ ಸಜ್ಜಾಗಿದೆ. ಜೀಯೋ ಹಾಟ್ ಸ್ಟಾರ್ ನಲ್ಲಿ ಏಪ್ರಿಲ್ 24ಕ್ಕೆ ಈ ಚಿತ್ರ ಸ್ಟ್ರೀಮಿಂಗ್ ಆಗಲಿದೆ. ಹೀಗಾಗಿ…
Author: Author AIN
ಬೆಂಗಳೂರು: ಪಿಯುಸಿ ಪರೀಕ್ಷೆ ಬೆನ್ನಲ್ಲೇ ವೃತ್ತಿಪರ ಕೋರ್ಸ್ಗಳ ಪ್ರವೇಶಾತಿಗಾಗಿ ರಾಜ್ಯಾದ್ಯಂತ ಏಪ್ರಿಲ್ 15, 16, 17 ಸಿಇಟಿ ಪರೀಕ್ಷೆ ನಡೆದಿದೆ. ಕೊನೆಯ ದಿನವಾದ ನಿನ್ನೆ, ಶಿವಮೊಗ್ಗ ಮತ್ತು ಬೀದರ್ನಲ್ಲಿ ಪರೀಕ್ಷಾರ್ಥಿಗೆ ತಪಾಸಣೆ ವೇಳೆ ಜನಿವಾರ ತೆಗೆದುಹಾಕುವಂತೆ ಸೂಚಿಸಿರೋದು ಭಾರೀ ವಿವಾದಕ್ಕೆ ಕಾರಣವಾಗಿದೆ. ಇನ್ನೂ ಈ ವಿಚಾರವಾಗಿ ಉನ್ನತ ಶಿಕ್ಷಣ ಸಚಿವ ಡಾ. ಎಂಸಿ ಸುಧಾಕರ್ ಪ್ರತಿಕ್ರಿಯೆ ನೀಡಿದ್ದು, https://ainkannada.com/do-you-have-the-habit-of-keeping-hot-rice-in-a-plastic-box-you-will-definitely-get-cancer-soon/ ಸಿಇಟಿ ಅಭ್ಯರ್ಥಿಯ ಜನಿವಾರ ತೆಗೆಸಿದ್ದು ನಿಜವೇ ಆದರೆ ಅದು ಅತಿರೇಕದ ವರ್ತನೆ. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ. ಯಾವುದೇ ಕೇಂದ್ರದಲ್ಲಿ ಆ ರೀತಿ ಆಗಿದ್ದರೆ ಗಂಭೀರವಾಗಿ ಪರಿಗಣಿಸುತ್ತೇವೆ ಎಂದು ಅವರು ಹೇಳಿದ್ದಾರೆ. ಎಲ್ಲಾ ಜಾತಿ, ಧರ್ಮಗಳ ಆಚರಣೆ ಸಂಪ್ರದಾಯಕ್ಕೆ ಗೌರವ ಕೊಡಬೇಕು. ನಾನು ಈ ರೀತಿಯ ಘಟನೆಗಳಿಗೆಲ್ಲ ಪ್ರೋತ್ಸಾಹ ಕೊಡುವುದಿಲ್ಲ. ಘಟನೆ ಸಂಬಂಧ ಅಧಿಕಾರಿಗಳ ಬಳಿ ವರದಿ ಪಡೆದು, ಮುಂದೆ ಏನು ಮಾಡಬಹುದು ಎಂದು ಯೋಚಿಸುತ್ತೇನೆ. ಆ ರೀತಿ ಆಗಿದ್ದು ಸತ್ಯವೇ ಆದರೆ ಇನ್ನೊಮ್ಮೆ ಪರಿಶೀಲನೆ ಮಾಡುತ್ತೇನೆ. ಆಯ್ದ…
ಬೆಂಗಳೂರು, ವೈಟ್‌ಫೀಲ್ಡ್: ಮೆಡಿಕವರ್ ಆಸ್ಪತ್ರೆ ತನ್ನ ಆರ್ಥೋಪೆಡಿಕ್ ವಿಭಾಗವನ್ನು ಮತ್ತಷ್ಟು ಬಲಪಡಿಸುವ ಸಲುವಾಗಿ, ಅತ್ಯಾಧುನಿಕ ಆರ್ಥೊ ರೊಬೋಟಿಕ್ ಶಸ್ತ್ರಚಿಕಿತ್ಸಾ ತಂತ್ರಜ್ಞಾನವನ್ನು ಯಶಸ್ವಿಯಾಗಿ ಆರಂಭಿಸಿದೆ. ಈ ತಂತ್ರಜ್ಞಾನದ ಮೂಲಕ ರೋಗಿಗಳಿಗೆ ಹೆಚ್ಚು ನಿಖರ ಹಾಗೂ ಅನುಕೂಲಕರ ಶಸ್ತ್ರಚಿಕಿತ್ಸೆಯನ್ನು ನೀಡುವುದು ಸಾಧ್ಯವಾಗಲಿದೆ. https://ainkannada.com/do-you-have-the-habit-of-keeping-hot-rice-in-a-plastic-box-you-will-definitely-get-cancer-soon/ ಈ ಹೊಸ ಉಪಕ್ರಮದಿಂದ ಮೂಳೆ ಮತ್ತು ಜೋಡಣೆ ಸಂಬಂಧಿತ ಜಟಿಲ ಸಮಸ್ಯೆಗಳಿಗೆ ಹೆಚ್ಚು ನಿಖರವಾದ ಮತ್ತು ಪರಿಣಾಮಕಾರಿ ಚಿಕಿತ್ಸೆ ದೊರೆಯಲಿದ್ದು, ವಿಶೇಷವಾಗಿ ಮಂಡಿ ಮತ್ತು ಹಿಪ್ ಜೋಡಣೆಯ ಬದಲಾವಣಾ ಶಸ್ತ್ರಚಿಕಿತ್ಸೆಗಳಲ್ಲಿ ರೊಬೋಟಿಕ್ ತಂತ್ರಜ್ಞಾನವು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಈ ತಂತ್ರಜ್ಞಾನದ ಅನುಷ್ಠಾನದಲ್ಲಿ ಮೆಡಿಕವರ್ ಆಸ್ಪತ್ರೆಯ ಹಿರಿಯ ಮೂಳೆ ತಜ್ಞರು –ಡಾ. ಆರ್. ಡಿ. ಚಕ್ರವರ್ತಿ, ಡಾ. ರವೀಂದ್ರ ಪುಟ್ಟಸ್ವಾಮಯ್ಯ, ಡಾ. ಸಂಜಯ್ ಹೆಗಡೆ, ಡಾ. ಕೃಷ್ಣಕುಮಾರ್ ಮತ್ತು ಡಾ. ರಾಘವೇಂದ್ರ ರವರು ಪ್ರಮುಖ ಪಾತ್ರವಹಿಸಿದ್ದಾರೆ. ಈ ತಜ್ಞರು ರೊಬೋಟಿಕ್ ತಂತ್ರಜ್ಞಾನದಲ್ಲಿ ಪರಿಣಿತರಾಗಿದ್ದು, ವಿಶ್ವಮಟ್ಟದ ಚಿಕಿತ್ಸೆ ನೀಡಲು ಸದಾ ಸಿದ್ಧರಾಗಿದ್ದಾರೆ. ಈ ಶಸ್ತ್ರಚಿಕಿತ್ಸಾ ಘಟಕದ ಉದ್ಘಾಟನಾ ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಮುಖ್ಯಸ್ಥರಾದ ಶ್ರೀ…
ನಟಿ ವೇದಿಕಾ ಮೂಲತಃ ಕನ್ನಡದ ಹುಡ್ಗಿ. ಅದರಲ್ಲಿಯೂ ಉತ್ತರ ಕರ್ನಾಟದ ಸುಂದರಿ. ಕನ್ನಡ ಸೇರಿದಂತೆ ಪರಭಾಷೆಯಲ್ಲಿಯೂ ವೇದಿಕೆ ಮಿಂಚುತ್ತಿದ್ದಾರೆ. ಶೂಟಿಂಗ್ ಬ್ರೇಕ್ ಕೊಟ್ಟು ವೇದಿಕಾ ಆಗಾಗಾ ಟ್ರಿಪ್ ಮಾಡ್ತಾರೆ. ಸದ್ಯ ಬೀಚ್ ನಲ್ಲಿ ಬಿಕಿನಿ ತೊಟ್ಟು ಬೆಡಗು ಬಿನ್ನಾಣ ತೋರಿಸುವ ಫೋಟೋವನ್ನ ಹಂಚಿಕೊಂಡಿದ್ದಾರೆ.ವೇದಿಕಾ ಫೋಟೋ ಅಭಿಮಾನಿಗಳಿಂದ ಮೆಚ್ಚುಗೆ ಸಿಗುತ್ತಿದೆ. ಬಿಕಿನಿಯಲ್ಲಿ ಪಡ್ಡೆಗಳ ಮೈ ಬೀಸಿ ಏರಿಸುವಂತೆ ಮಾಡಿದ್ದಾರೆ.`ಮದ್ರಾಸಿ’ ಚಿತ್ರದಿಂದ ಸಿನಿಪಯಣ ಆರಂಭಿಸಿದ ವೇದಿಕೆ, ನಂತರ ಇವರು ತಮಿಳು, ತೆಲುಗು, ಮಲಯಾಳಂ, ಕನ್ನಡ ಹೀಗೇ ಹಲವಾರು ಭಾಷೆಗಳಲ್ಲಿ ನಟಿಸಿದ್ದಾರೆ. ದಿ ಬಾಡಿ ಚಿತ್ರದ ಮೂಲಕ ಅವರು ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. 2019 ರಲ್ಲಿ, ಅವರು ತಮಿಳು ಚಿತ್ರ ಕಾಂಚನಾ 3 ನಲ್ಲಿ ಅಭಿನಯಿಸಿದ್ದಾರೆ. ವೇದಿಕಾ ಕನ್ನಡದಲ್ಲಿ ಶಿವರಾಜ್ ಕುಮಾರ್ ಜೊತೆ ಶಿವಲಿಂಗ, ಆ ನಂತರ ಸಂಗಮ, ಗೌಡ್ರು ಹೋಟೆಲ್ ಸೇರಿದಂತೆ ಹಲವು ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ.
ಮನೆಯ ಸುತ್ತಲೂ ಹಲ್ಲಿಗಳು ಓಡಾಡುವುದರಿಂದ ಅನೇಕ ಜನರು ಅನಾನುಕೂಲತೆಯನ್ನು ಅನುಭವಿಸುತ್ತಾರೆ. ಈ ವಿಷಯಗಳ ಬಗ್ಗೆ ಮಾತನಾಡುವುದರಿಂದ ಅನೇಕ ಜನರು ಭಯಭೀತರಾಗುತ್ತಾರೆ. ಯಾವುದೇ ಮನೆಯಲ್ಲಿ ಸಣ್ಣ ಕೀಟಗಳು ಇರಬಹುದು. ಆದರೆ ಹಲ್ಲಿಗಳನ್ನು ನೋಡುವುದು ಅನೇಕ ಜನರಿಗೆ ಅನಾನುಕೂಲವನ್ನುಂಟು ಮಾಡುತ್ತದೆ. ಅವುಗಳನ್ನು ಕಣ್ಮರೆಯಾಗಿಸಲು, ಮನೆಯಲ್ಲಿ ಲಭ್ಯವಿರುವ ಕೆಲವು ಸರಳ ವಸ್ತುಗಳನ್ನು ಬಳಸಿಕೊಂಡು ನಾವು ನಮ್ಮದೇ ಆದ ಪರಿಹಾರವನ್ನು ತಯಾರಿಸಬಹುದು. ಸಾಮಾನ್ಯ ಮನೆಯ ವಸ್ತುಗಳಿಂದ ಹಲ್ಲಿಗಳನ್ನು ಹಿಮ್ಮೆಟ್ಟಿಸಲು ಸಲಹೆಗಳಿವೆ. ಈ ಸಲಹೆಗೆ ನಿಮಗೆ ಬೇಕಾಗಿರುವುದು ಹತ್ತು ಕರ್ಪೂರಗಳು, ಐವತ್ತು ಮಿಲಿಲೀಟರ್ ಡೆಟಾಲ್, ಅರ್ಧ ಲೀಟರ್ ನೀರು, ಇಪ್ಪತ್ತು ಮಿಲಿಲೀಟರ್ ಸೋಪ್ ಎಣ್ಣೆ ಮತ್ತು ಒಂದು ಲೀಟರ್ ಸ್ಪ್ರೇ ಬಾಟಲ್. ಇವೆಲ್ಲವೂ ಲಭ್ಯವಿರುವುದರಿಂದ, ಪ್ರತ್ಯೇಕ ಅಂಗಡಿಗೆ ಹೋಗುವ ಅಗತ್ಯವಿಲ್ಲ. https://ainkannada.com/do-you-have-the-habit-of-keeping-hot-rice-in-a-plastic-box-you-will-definitely-get-cancer-soon/ ಕರ್ಪೂರವನ್ನು ತೆಗೆದುಕೊಂಡು ಅದನ್ನು ನುಣ್ಣಗೆ ಪುಡಿ ಮಾಡಿ. ಈಗ ಈ ಪುಡಿಗೆ ಸೋಪ್ ಎಣ್ಣೆಯನ್ನು ಸುರಿಯಿರಿ, ಡೆಟಾಲ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಸಂಪೂರ್ಣವಾಗಿ ಮಿಶ್ರಣ ಮಾಡಬೇಕು. ಈ ಮಿಶ್ರಣಕ್ಕೆ ಸ್ವಲ್ಪ ನೀರು…
ಅಮೆರಿಕದಲ್ಲಿರುವ ಭಾರತೀಯ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಟ್ರಂಪ್ ಸರ್ಕಾರ ಮತ್ತೊಂದು ಹೊಸ ಒಪ್ಪಂದವನ್ನು ಅನಾವರಣಗೊಳಿಸಿದೆ. ಅಮೆರಿಕದ ಕೆಲವು ವಿಶ್ವವಿದ್ಯಾನಿಲಯಗಳು ವಲಸೆ ಮತ್ತು ಕಸ್ಟಮ್ಸ್ ಜಾರಿ ಇಲಾಖೆಯು 287(g) ಅಡಿಯಲ್ಲಿ ICE ಜೊತೆ ಕೆಲವು ಒಪ್ಪಂದಗಳನ್ನು ಮಾಡಿಕೊಂಡಿದ್ದು, ಅದರ ಮೂಲಕ ಸ್ಥಳೀಯ ಪೊಲೀಸ್ ಇಲಾಖೆಗಳು ವಲಸೆ ಕಾನೂನುಗಳ ಜಾರಿಯಲ್ಲಿ ಫೆಡರಲ್ ಅಧಿಕಾರಿಗಳೊಂದಿಗೆ ಕೆಲಸ ಮಾಡುತ್ತವೆ. ಈ ಒಪ್ಪಂದಗಳ ಅಡಿಯಲ್ಲಿ, ವಿಶ್ವವಿದ್ಯಾನಿಲಯದ ಪೊಲೀಸರು ಅನುಮಾನಾಸ್ಪದ ವ್ಯಕ್ತಿಗಳನ್ನು ಪ್ರಶ್ನಿಸುವ ಮತ್ತು ಅವರ ವಲಸೆ ಸ್ಥಿತಿಯನ್ನು ಪರಿಶೀಲಿಸುವ ಅಧಿಕಾರವನ್ನು ಹೊಂದಿರುತ್ತಾರೆ. ಅಗತ್ಯವಿದ್ದರೆ ತನಿಖೆ ನಡೆಸುವ ಹಕ್ಕು ಪೊಲೀಸರಿಗೆ ಇದೆ. ಆದಾಗ್ಯೂ, ವಲಸೆ ಕಾನೂನುಗಳನ್ನು ಜಾರಿಗೊಳಿಸುವ ಪ್ರಾಥಮಿಕ ಜವಾಬ್ದಾರಿ ಫೆಡರಲ್ ಏಜೆನ್ಸಿಗಳ ಮೇಲಿದೆ. ಇದರ ಬಗ್ಗೆ ಈಗ ಅಮೆರಿಕದಲ್ಲಿ ದೊಡ್ಡ ಕೋಲಾಹಲವೇ ಶುರುವಾಗಿದೆ. ಈ ಒಪ್ಪಂದಗಳನ್ನು 1996 ರಲ್ಲಿ ಜಾರಿಗೆ ಬಂದ ವಲಸೆ ಮತ್ತು ರಾಷ್ಟ್ರೀಯತೆ ಕಾಯ್ದೆಯ ಸೆಕ್ಷನ್ 287(g) ಅಡಿಯಲ್ಲಿ ಮಾಡಲಾಗಿತ್ತು. ವಲಸೆ ಕಾನೂನುಗಳನ್ನು ಜಾರಿಗೊಳಿಸಲು ಸ್ಥಳೀಯ ಮತ್ತು ರಾಜ್ಯ ಪೊಲೀಸ್ ಇಲಾಖೆಗಳು ICE ಯೊಂದಿಗೆ ಕೆಲಸ ಮಾಡಲು…
ನವಜಾತ ಶಿಶುವನ್ನು ಕಂಬಳಿಯಲ್ಲಿ ಸುತ್ತಿ ತೊಟ್ಟಿಲಿನಲ್ಲಿ ಇಡುವುದನ್ನು ನೋಡುತ್ತೀರಿ. ಮಕ್ಕಳು ಹೀಗೆ ಮಲಗಲು ನಿಜವಾದ ಕಾರಣ ಹಲವರಿಗೆ ತಿಳಿದಿಲ್ಲ. ವಾಸ್ತವವಾಗಿ, ಈ ರೀತಿಯ ಅಭ್ಯಾಸವು ಹಲವು ವರ್ಷಗಳಿಂದಲೂ ನಡೆಯುತ್ತಿದೆ. ಇದನ್ನು ಅನುಸರಿಸುವ ಜನರು ಇನ್ನೂ ಇದ್ದಾರೆ. ಆದರೆ ಕೆಲವರು ತಮ್ಮ ಮಕ್ಕಳನ್ನು ಈ ರೀತಿ ಮಲಗಿಸಲು ಒಪ್ಪುವುದಿಲ್ಲ. ಮಕ್ಕಳನ್ನು ಸ್ನಾನ ಮಾಡಿಸಿ ಎಂದಿನಂತೆ ತೊಟ್ಟಿಲು ಅಥವಾ ಹಾಸಿಗೆಯಲ್ಲಿ ಇಡಲಾಗುತ್ತದೆ. ಏಕೆಂದರೆ ಮಕ್ಕಳನ್ನು ಬಟ್ಟೆಯಲ್ಲಿ ಸುತ್ತುವುದು ಅವರನ್ನು ಹಿಂಸಿಸಿದಂತೆ ಎಂದು ಅವರು ನಂಬುತ್ತಾರೆ. ವಾಸ್ತವವಾಗಿ, ಮಕ್ಕಳು ಇದನ್ನು ಏಕೆ ಮಾಡಬೇಕು? ನೀವು ಇದನ್ನು ಮಾಡದಿದ್ದರೆ ಏನಾಗುತ್ತದೆ? ಇಂತಹ ವಿಷಯಗಳನ್ನು ಇಲ್ಲಿ ತಿಳಿದುಕೊಳ್ಳೋಣ.. ಸಾಮಾನ್ಯವಾಗಿ, ಮಗುವನ್ನು ಸ್ನಾನ ಮಾಡಿದ ನಂತರ, ಅವರ ದೇಹವನ್ನು ಹತ್ತಿ ಬಟ್ಟೆಯಿಂದ ಸಂಪೂರ್ಣವಾಗಿ ಒರೆಸಲಾಗುತ್ತದೆ, ಮತ್ತು ನಂತರ ಮಗುವನ್ನು ಮೃದುವಾದ, ಹಗುರವಾದ ಬಟ್ಟೆಯಲ್ಲಿ ಸಂಪೂರ್ಣವಾಗಿ ಸುತ್ತಿ, ಚಲನೆಯನ್ನು ತಡೆಯಲು ತೋಳುಗಳು ಮತ್ತು ಕಾಲುಗಳನ್ನು ಕಟ್ಟಲಾಗುತ್ತದೆ. https://ainkannada.com/do-you-have-the-habit-of-keeping-hot-rice-in-a-plastic-box-you-will-definitely-get-cancer-soon/ ಈ ಅಭ್ಯಾಸ ನಿಮಗೆ ಮಕ್ಕಳ ಮೇಲಿನ ದೌರ್ಜನ್ಯದಂತೆ ಕಾಣಿಸಬಹುದು. ಮಕ್ಕಳನ್ನು ಏಕೆ ಹಿಂಸಿಸಬೇಕು…
ಸಾಮಾನ್ಯವಾಗಿ ಸೆಲೆಬ್ರಿಟಿಗಳು ಅಂದರೆ ಹೈಫ್ ಜೀವನ ನಡೆಸುತ್ತಾರೆ. ಕಾರಿನಲ್ಲಿ ಓಡಾಡುತ್ತಾರೆ. ದೊಡ್ಡ ದೊಡ್ಡ ಹೋಟೆಲ್ ನಲ್ಲಿ ತಿಂಡಿ ಊಟ ಮಾಡ್ತಾರೆ ಅನ್ನೋದು ಜನಸಾಮಾನ್ಯರಿಗೆ ಇರುವ ಅಭಿಪ್ರಾಯ. ಆದರೆ ಕೆಲವರು ನಮ್ಮ ನಿಮ್ಮ ನಡುವೆ ಜನಸಾಮಾನ್ಯರ ರೀತಿ ಬದುಕುತ್ತಾರೆ. ಕೆಲವರು ಮೆಟ್ರೋದಲ್ಲಿ, ಮತ್ತೆ ಕೆಲವರು ಆಟೋದಲ್ಲಿ ಪಯಣಿಸುತ್ತಾರೆ. ಅಂತೇಯೇ ನಿನ್ನೆ ಕನ್ನಡದ ಖ್ಯಾತ ನಟಿಯೊಬ್ಬರು ಮಾಸ್ಕ್ ಹಾಕಿ ಆಟೋ ಏರಿದ್ದಾರೆ. ನಟಿ ಅಮೃತಾ ಅಯ್ಯಂಗಾರ್ ಆಟೋ ಏರಿ ಸದಾಶಿವನಗರ ತಲುಪಿದ್ದಾರೆ. ಜೆಪಿ ನಗರದಿಂದ ಸದಾಶಿವ ನಗರಕ್ಕೆ ಬರೋದಿಕ್ಕೆ ಬರೋಬ್ಬರಿ ಎರಡು ಗಂಟೆ ಸಮಯ ಹಿಡಿದೆ. ನಟಿ ಅಮೃತಾ ಬೆಂಗಳೂರು ಟ್ರಾಫಿಕ್ ಗೆ ಹೈರಾಣಾಗಿದ್ದಾರೆ. ಈ ಕುರಿತು ತಮ್ಮ ಇನ್ ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಜೆಪಿ ನಗರದಿಂದ ಸದಾಶಿವನಗರಕ್ಕೆ ತಲುಪಲು ಬರೋಬ್ಬರಿ 1 ಗಂಟೆ 45 ನಿಮಿಷ ಆಯ್ತು ಫ್ರೆಂಡ್ಸ್. ಎರಡು ಗಂಟೆ ಬಳಿಕ ನಾನು ಸದಾಶಿವನಗರ ತಲುಪಿದೆ ಎಂದು ವಿಡಿಯೋ ಫೋಸ್ಟ್ ಮಾಡಿದ್ದಾರೆ. ಸ್ವತಃ ಮನೆ ಕಾರು ಇಲ್ಲ ಎಂದಿದ್ದ ನಟಿ ಅಮೃತಾ…
ಐಪಿಎಲ್ 18 ನೇ ಆವೃತ್ತಿಯ (ಐಪಿಎಲ್ 2025) 34 ನೇ ಪಂದ್ಯ ಬೆಂಗಳೂರು ಎಂ ತಂಡಗಳ ನಡುವೆ ನಡೆಯಲಿದೆ. ಇದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಬೆಂಗಳೂರು ಮತ್ತು ಪಂಜಾಬ್ ತಂಡಗಳು ತಮ್ಮ ಗೆಲುವಿನ ಓಟವನ್ನು ಮುಂದುವರೆಸಲು ಮತ್ತು ಪಾಯಿಂಟ್ ಪಟ್ಟಿಯಲ್ಲಿ ತಮ್ಮ ಸ್ಥಾನವನ್ನು ಬಲಪಡಿಸಿಕೊಳ್ಳಲು ಪ್ರಯತ್ನಿಸಲಿವೆ. ಏಕೆಂದರೆ, ಕಳೆದ ಪಂದ್ಯದಲ್ಲಿ ಎರಡು ಬಲಿಷ್ಠ ತಂಡಗಳನ್ನು ಸೋಲಿಸಿ ಚಿನ್ನಸ್ವಾಮಿ ರಿಂಗ್‌ನಲ್ಲಿ ಸ್ಪರ್ಧಿಸಲು ಈ ಎರಡೂ ತಂಡಗಳು ಸಿದ್ಧವಾಗಿವೆ. https://ainkannada.com/do-you-have-the-habit-of-keeping-hot-rice-in-a-plastic-box-you-will-definitely-get-cancer-soon/ ರಾಜಸ್ಥಾನ ರಾಯಲ್ಸ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಆರ್‌ಸಿಬಿ ಅದ್ಭುತ ಪ್ರದರ್ಶನ ನೀಡಿ 9 ವಿಕೆಟ್‌ಗಳಿಂದ ಜಯಗಳಿಸಿತು. ಮತ್ತೊಂದೆಡೆ, ಪಂಜಾಬ್ ತಂಡವು ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು 16 ರನ್‌ಗಳಿಂದ ಸೋಲಿಸಿತು. ಆದ್ದರಿಂದ, ಎರಡೂ ತಂಡಗಳು ತಮ್ಮ ಅಜೇಯ ಓಟವನ್ನು ಮುಂದುವರಿಸಲು ಎದುರು ನೋಡುತ್ತಿವೆ. ಆದರೆ, ಪಂದ್ಯ ರದ್ದಾಗುತ್ತದೆಯೇ ಎಂಬ ಆತಂಕ ಅಭಿಮಾನಿಗಳಲ್ಲಿದೆ. ಇದಕ್ಕೆ ಪ್ರಮುಖ ಕಾರಣ ಕಳೆದ ಕೆಲವು ದಿನಗಳಿಂದ ಬೆಂಗಳೂರಿನಲ್ಲಿ ಬೀಳುತ್ತಿರುವ ಮಳೆ. ಹೆಡ್ ಟು…
ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ರಾಜಮೌಳಿ ಜೊತೆ ಹೊಸ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಪ್ಯಾನ್ ವರ್ಲ್ಡ್ ಲೆವೆಲ್ ನಲ್ಲಿ ಈ ಪ್ರಾಜೆಕ್ಟ್ ತಯಾರಾಗುತ್ತಿದೆ. ಈ ಸಿನಿಮಾದಲ್ಲಿ ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ಕೂಡ ನಟಿಸುತ್ತಿದ್ದಾರೆ. ಹೀಗಾಗಿ ಮಹೇಶ್ ಬಾಬು ಫ್ಯಾಮಿಲಿ ಮತ್ತು ಪ್ರಿಯಾಂಕಾ ಫ್ಯಾಮಿಲಿ ನಡುವೆ ಆತ್ಮೀಯತೆ ಹುಟ್ಟಿಕೊಂಡಿದೆ. ಇತ್ತೀಚೆಗೆ ಇಡೀ ಪ್ರಿನ್ಸ್ ಕುಟುಂಬ ರೋಮ್ ಗೆ ಭೇಟಿ ನೀಡಿತ್ತು. ಈ ವೇಳೆ ಪ್ರಿಯಾಂಕಾ ಪತಿ ನಿಕ್ ಜೋನಸ್ ಕಾನ್ಸರ್ಟ್‌ನಲ್ಲಿ ಮಹೇಶ್ ಬಾಬು ಫ್ಯಾಮಿಲಿ ಭಾಗವಹಿಸಿದೆ. ನಿಕ್ ಸಂಗೀತ ಕಾರ್ಯಕ್ರಮದಲ್ಲಿ ಸಿತಾರಾ, ನಮ್ರತಾ ಹಾಗೂ ಗೌತಮ್ ಪಾಲ್ಗೊಂಡಿದ್ದಾರೆ. ಈ ಸಂದರ್ಭದ ಫೋಟೋಗಳನ್ನು ನಮ್ರತಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು, ಪ್ರಿಯಾಂಕಾಗೆ ಧನ್ಯವಾದ ತಿಳಿಸಿದ್ದಾರೆ.ಪ್ರಿಯಾಂಕಾ ಚೋಪ್ರಾ ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಅಮೆರಿಕದ ಖ್ಯಾತ ಪಾಪ್ ಸಿಂಗರ್ ನಿಕ್ ಜೋನಸ್ ಅವರು ಸಂಗೀತ ಕಾರ್ಯಕ್ರಮದ ಬಳಿಕ ಪ್ರಿನ್ಸ್ ಕುಟುಂಬ ಅವರ ಜೊತೆ ಫೋಟೋಗೆ ಪೋಸ್ ಕೊಟ್ಟಿದೆ.