ಇಂದು ಲವ್ಲಿ ಸ್ಟಾರ್ ಪ್ರೇಮ್ ಜನ್ಮದಿನ. ಅವರ ಹುಟ್ಟುಬ್ಬದ ಸ್ಪೆಷಲ್ ಆಗಿ ಹೊಸ ಚಿತ್ರ ಘೋಷಣೆಯಾಗಿದೆ. ಪ್ರತಿ ಸಿನಿಮಾಗಳಲ್ಲಿಯೂ ವಿಭಿನ್ನ ಪಾತ್ರಗಳನ್ನು ಮಾಡುತ್ತಾ ಅವರು ಬಂದಿದ್ದಾರೆ. ಬರೋ ಎಲ್ಲಾ ಪಾತ್ರಗಳನ್ನೂ ಪ್ರೇಮ್ ಒಪ್ಪಿಕೊಳ್ಳುವುದಿಲ್ಲ. ಅಳೆದು ತೂಗಿ ಪ್ರೇಕ್ಷಕರಿಗೆ ಇಷ್ಟವಾಗುವ ಸಿನಿಮಾಗಳನ್ನೇ ಮಾಡುತ್ತಾ ಬಂದಿದ್ದಾರೆ. ಈಗ ಪ್ರೇಮ್ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಅಣ್ಣನ ಮಗ ನಿರಂಜನ್ ಸುಧೀಂದ್ರ ನಾಯಕನಾಗಿ ನಟಿಸುತ್ತಿರುವ ಸ್ಪಾರ್ಕ್ ಚಿತ್ರಕ್ಕೆ ಪ್ರೇಮ್ ಎಂಟ್ರಿ ಕೊಟ್ಟಿದ್ದಾರೆ. ಸ್ಪಾರ್ಕ್ ಚಿತ್ರದಲ್ಲಿ ನಿರಂಜನ್ ಹೀರೋ. ಹಾಗಿದ್ದರೇ ಪ್ರೇಮ್ ಪಾತ್ರವೇನು? ಗೆಸ್ಟ್ ರೋಲ್‌ನಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರಾ? ಅಲ್ಲ. ಬದಲಾಗಿ ಒಂದು ವಿಶಿಷ್ಟ ಪಾತ್ರದಲ್ಲಿ ನೆನಪಿರಲಿ ಪ್ರೇಮ್ ಕಾಣಿಸಿಕೊಳ್ಳುತ್ತಿದ್ದಾರೆ. ನಿರ್ದೇಶಕ ಮಹಾಂತೇಶ್ ಹಂದ್ರಾಳ್ ಲವ್ಲಿ ಸ್ಟಾರ್ ಗೊಂದು ಸ್ಪೆಷಲ್ ಪಾತ್ರ ಡಿಸೈನ್ ಮಾಡಿದ್ದಾರೆ. ಹಿಂದೆಂದೂ ಕಾಣದ ಲುಕ್ ನಲ್ಲಿ ಪ್ರೇಮ್ ನಿಮಗೆ ಕಾಣಿಸ್ತಾರೆ. ಸ್ಪೆಷಲ್ ಪಾತ್ರವನ್ನು ಅವರಿಗಾಗಿ ಮಹಾಂತೇಶ್ ಎಣೆದಿದ್ದು, ಹೀಗಾಗಿ ಪ್ರೇಮ್ ಕೂಡ ಇಷ್ಟಪಟ್ಟು ಚಿತ್ರ ಮಾಡಲು ಮುಂದಾಗಿದ್ದಾರೆ. ತಮ್ಮ ಇಷ್ಟುವರ್ಷದ…
Author: Author AIN
ತೆಲುಗಿನ ಮೋಸ್ಟ್ ಹ್ಯಾಂಡ್ಸಮ್ ಹಾಗೂ ಸ್ಟೈಲೀಶ್ ಸ್ಟಾರ್ ಪ್ರಭಾಸ್ ಕೋಟ್ಯಾಂತರ ಅಭಿಮಾನಿಗಳ ನೆಚ್ಚಿನ ಡಾರ್ಲಿಂಗ್. ಮಾಸ್ ಸಿನಿಮಾಗೂ ಸೈ, ಕ್ಲಾಸ್ ಚಿತ್ರಕ್ಕೂ ಜೈ ಎನ್ನುವ ಬಾಹುಬಲಿ ಸ್ಟಾರ್ ಪ್ಯಾನ್ ಇಂಡಿಯಾ ಹೀರೋ. ಪ್ರಭಾಸ್ ರೀಲ್ ನಲ್ಲಿ ಮಾತ್ರವಲ್ಲ ರಿಯಲ್ ಲೈಫ್ ನಲ್ಲಿಯೂ ಹೀರೋ. ತಮ್ಮ ಅಭಿನಯದ ಮೂಲಕ ಪ್ರೇಕ್ಷಕರನ್ನು ರಂಜಿಸುವ ಮಿರ್ಚಿ ಬಾಯ್, ವ್ಯಕ್ತಿತ್ವದಲ್ಲೂ ಜನರಿಗೆ ಇಷ್ಟವಾಗುತ್ತಾರೆ.. ಜನರ ಕಷ್ಟಕ್ಕೆ ಸ್ಪಂದಿಸಿ, ಮಾದರಿಯಾದ ಹಲವು ಉದಾಹರಣೆಗಳಿವೆ.. ಇದೀಗ ಪ್ರಭಾಸ್ ಸಾಮಾಜಿಕ ಕೆಲಸಕ್ಕೆ ಮುಂದಾಗಿದ್ದಾರೆ. ಜನ ಸಾಮಾನ್ಯರಿಗೆ ಉಪಯೋಗವಾಗಲೆಂದು ಆಸ್ಪತ್ರೆ ನಿರ್ಮಾಣಕ್ಕೆ ಪ್ರಭಾಸ್ ಮುಂದಾಗಿದ್ದಾರೆ.. ವಿಶ್ವ ಮಟ್ಟದ ಡಯಾಬಿಟಿಸ್ ಟ್ರೀಟ್ಮೆಂಟ್ ಆಸ್ಪತ್ರೆ ತೆಗೆಯೋದು ಪ್ರಭಾಸ್ ಕನಸಾಗಿದೆ.. ಇದು ಪ್ರಭಾಸ್ ದೊಡ್ಡಪ್ಪ ಕೃಷ್ಣಂ ರಾಜು ಅವ್ರ ದೊಡ್ಡ ಆಸೆ ಆಗಿತ್ತು.. ಆ ಆಸೆಯನ್ನು ಈಡೇರಿಸಲು ಯಂಗ್ ರೆಬಲ್ ಸ್ಟಾರ್ ಪಣ ತೊಟ್ಟಿದ್ದು, ಅದಕ್ಕಾಗಿ ತೆರೆಮರೆಯಲ್ಲಿ ಕೆಲಸ ಮಾಡುತ್ತಿದ್ದಾರಂತೆ.
ಡೆವಿಲ್.. ದರ್ಶನ್ ನಟಿಸುತ್ತಿರುವ ಮೋಸ್ಟ್ ಅಪ್ ಕಮ್ಮಿಂಗ್ ಚಿತ್ರ. ಸದ್ಯ ಈ ಸಿನಿಮಾದ ಶೂಟಿಂಗ್ ಬೆಂಗಳೂರಿನಲ್ಲಿ ಭರದಿಂದ ಸಾಗುತ್ತಿದೆ. ಈ ವರ್ಷವೇ ಡೆವಿಲ್ ಚಿತ್ರವನ್ನು ಅಖಾಡಕ್ಕಿಳಿಸಲು ನಿರ್ದೇಶಕ ಪ್ರಕಾಶ್ ವೀರ್ ಸಜ್ಜಾಗುತ್ತಿದ್ದಾರಂತೆ. ಅದಕ್ಕಾಗಿ ಚಿತ್ರೀಕರಣಕ್ಕೆ ಆವೇಗ ನೀಡಲಾಗಿದೆಯಂತೆ. ಡೆವಿಲ್ ಟೈಟಲ್ ದರ್ಶನ್ ಫ್ಯಾನ್ಸ್ ಗೂ ಸಿಕ್ಕಾಪಟ್ಟೆ ಇಷ್ಟವಾಗಿದೆ. ಸದ್ಯ ಡಿಪಡೆ ಡೆವಿಲ್ ಜಪ ಮಾಡ್ತಿದೆ. ಹೀಗಿರುವಾಗ್ಲೇ ಇದೇ ಟೈಟಲ್ನಲ್ಲಿ ಸೌತ್ ಇಂಡಿಯಾದ ಸ್ಟಾರ್ ನಟರೊಬ್ಬರು ಸಿನಿಮಾ ಮಾಡ್ತಿದ್ದಾರೆ ಎಂಬ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ಅರ್ಜುನ್ ರೆಡ್ಡಿ, ಅನಿಮಲ್ ನಂತಹ ಸೂಪರ್ ಹಿಟ್ ಚಿತ್ರ ಕೊಟ್ಟಿರುವ ಸಂದೀಪ್ ರೆಡ್ಡಿ ವಂಗಾ ಡೆವಿಲ್ ಎಂಬ ಟೈಟಲ್ ನಡಿ ಹೊಸ ಚಿತ್ರ ಮಾಡೋದಿಕ್ಕೆ ಹೊರಟಿದ್ದಾರೆ ಎನ್ನಲಾಗ್ತಿದೆ. ಇದಕ್ಕೆ ಗ್ಲೋಬಲ್ ಸ್ಟಾರ್ ರಾಮ್ ಚರಣ್ ನಾಯಕನಾಗಿ ಅಭಿನಯಿಸಲಿದ್ದಾರಂತೆ. ಈ ಸಿನಿಮಾಗೆ ಡೆವಿಲ್ ಅಂತಾ ಟೈಟಲ್ ಫೈನಲ್ ಆಗಿದೆ ಎಂಬ ಸಮಾಚಾರ ಹೊರಬಿದ್ದಿದೆ. ಸದ್ಯ ಸಂದೀಪ್ ರೆಡ್ಡಿ ವಂಗಾ ಪ್ರಭಾಸ್ ಜೊತೆ ಸ್ಪಿರಿಟ್ ಸಿನಿಮಾ ಮಾಡುತ್ತಿದ್ದಾರೆ. ಇದಾದ ಬಳಿಕ…
ವಿಜಯಪುರ: ನವೆಂಬರ್, ಡಿಸೆಂಬರ್‌ನಲ್ಲಿ ಕಾಂಗ್ರೆಸ್‌ನಲ್ಲಿ ಮಹಾ ಸ್ಫೋಟವಾಗಲಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ಲಿಂಗಾಯತ, ಒಕ್ಕಲಿಗರು, ದಲಿತರನ್ನು ಒಡೆಯುವ ಹುನ್ನಾರ ಇದು. ಮುಸ್ಲಿಮರನ್ನು ಪ್ರೊಜೆಕ್ಟ್ ಮಾಡಲು ಜಾತಿ ಗಣತಿ ಮಂಡನೆ ಮಾಡಿದ್ದಾರೆ. https://ainkannada.com/you-should-never-keep-a-broom-in-this-direction-at-home-for-any-reason/ ಕಾಂಗ್ರೆಸ್‌ನಲ್ಲಿ ಆಂತರಿಕ ಯುದ್ಧ ನಡೆಯುತ್ತದೆ. ಸಿದ್ದರಾಮಯ್ಯ ಬಳಿಕ ಡಿಕೆಶಿ ಪಟ್ಟ ಏರಲು ಕಾಯುತ್ತಿದ್ದಾರೆ. ನವೆಂಬರ್, ಡಿಸೆಂಬರ್‌ನಲ್ಲಿ ಕಾಂಗ್ರೆಸ್‌ನಲ್ಲಿ ಮಹಾ ಸ್ಫೋಟವಾಗಲಿದೆ. ಟೈಂ ಬಾಂಬ್ ಸ್ಫೋಟವಾಗಲಿದೆ. ಅಧಿಕಾರದಲ್ಲಿ ಮುಂದುವರೆಯಲು ಗೊಂದಲ ಸೃಷ್ಟಿಸಿದ್ದಾರೆ. ಡಿಕೆಶಿ ನವೆಂಬರ್, ಡಿಸೆಂಬರ್‌ಗೆ ಟೈಂ ಬಾಂಬ್ ಫಿಕ್ಸ್ ಮಾಡಿದ್ದಾರೆ. ಅದು ಸ್ಫೋಟವಾಗುವ ಸಾಧ್ಯತೆ ಇದೆ ಎಂದು ತಿಳಿಸಿದರು. ಈ ಹಿಂದೆಯೆ ಜಾತಿ ಜನಗಣತಿ ಮಂಡನೆ ಮಾಡಬೇಕಿತ್ತು. ಅಂದಿನಿಂದಲೂ ವಿವಾದಾಸ್ಪದ ವರದಿ ಇದು. ಆಯೋಗ ಮಾಡಿದ್ದೇ ಸಿದ್ದರಾಮಯ್ಯ. ಅಂದು ಯಾಕೆ ಸ್ವೀಕಾರ ಮಾಡಲಿಲ್ಲ? ಅಂದೆ ಕ್ಯಾಬಿನೆಟ್‌ನಲ್ಲಿ ಇಡಬೇಕಿತ್ತು ಎಂದು ಹೇಳಿದರು.
ಮಾತು ಬರದ, ಕಿವಿನೂ ಕೇಳದ ವಿಶೇಷ ನಟಿ ಅಭಿನಯ ತಮ್ಮ 15 ವರ್ಷದ ಪ್ರೀತಿಗೆ ಮದುವೆ ಮುದ್ರೆ ಒತ್ತಿದ್ದಾರೆ. ತಮ್ಮ ಬಹುಕಾಲದ ಗೆಳೆಯ ವೇಗೇಶನಾ ಕಾರ್ತಿಕ್ ಜೊತೆ ಸಪ್ತಪದಿ ತುಳಿದಿದ್ದಾರೆ.ಹುಡುಗರು ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್ ತಂಗಿ ಪಾತ್ರದಲ್ಲಿ ನಟಿಸಿದ್ದ ಅಭಿನಯ ನಟಿಸಿದ್ದರು. ಕನ್ನಡ ಮಾತ್ರ ತಮಿಳು, ತೆಲುಗು, ಮಲಯಾಳಂ ಭಾಷೆಯ ಹಲವಾರು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.ಅಭಿನಯ ಪತಿ ವೇಗೇಶನಾ ಕಾರ್ತಿಕ್ ಕನ್‌ಸ್ಟ್ರಕ್ಷನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಚೆನ್ನೈನಲ್ಲಿ ಹುಟ್ಟಿ ಬೆಳೆದ ಅಭಿನಯ ಹಲವು ಭಾಷೆ ಚಿತ್ರಗಳಲ್ಲಿ ನಟಿಸಿದ್ದಾರೆ. ತಮ್ಮ ಮದುವೆ ಫೋಟೋಗಳನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳು ಹೊಸ ಜೋಡಿಗೆ ಶುಭಾಶಯ ತಿಳಿಸುತ್ತಿದ್ದಾರೆ.
ದೊಡ್ಡಬಳ್ಳಾಪುರ: ತಾಲ್ಲೂಕಿನ ಹಾಡೋನಹಳ್ಳಿ ವ್ಯವಸಾಯ ಸೇವಾ ಸಹಕಾರ ಸಂಘದ 2 ವರ್ಷದಿಂದ ಅಧ್ಯಕ್ಷರಾಗಿದ್ದ ಎಂ. ಮುನೇಗೌಡ ಇವರ ವಿರುದ್ದ ಇಂದು 11 ಜನ ನಿರ್ದೇಶಕರು ಅವಿಶ್ವಾಸ ಮಂಡನೆ ಮಾಡಿದರು. ಮೂರು ವರ್ಷಗಳ ಹಿಂದೆ ಹಾಡೋನಹಳ್ಳಿಯಲ್ಲಿ ವ್ಯವಸಾಯ ಸೇವಾ ಸಹಕಾರ ಸಂಘದ ಚುನಾವಣೆ ನಡೆದಿತ್ತು.ಚುನಾವಣೆಯಲ್ಲಿ 10 ಜನ ಪುರುಷ ಅಭ್ಯರ್ಥಿಗಳು,2 ಮಹಿಳಾ ಕಾಂಗ್ರೆಸ್ ಅಭ್ಯರ್ಥಿಗಳು ಜಯ ಗಳಿಸಿದ್ದರು. ಕಾಂಗ್ರೆಸ್ ನ ಹಿರಿಯ ಮುಖಂಡರು,ಪಕ್ಷದ ಕಾರ್ಯಕರ್ತರು ಸೇರಿ ಮೊದಲ ಬಾರಿಗೆ ಒಂದು ವರ್ಷಕ್ಕೆ ಸೀಮಿತವಾಗಿ ಗಂಗಸಂದ್ರದ ಶ್ರೀಧರ್ ಜಿ ಕೆ ಅವರನ್ನು ಆಯ್ಕೆ ಮಾಡಲಾಗಿತ್ತು. ಸಂಘದ ಎಲ್ಲಾ ನಿರ್ದೇಶಕರು ಸೇರಿ ಎರಡನೇ ಬಾರಿಗೆ ಅಧ್ಯಕ್ಷ ಸ್ಥಾನಕ್ಕೆ ತಿರುಮಗೊಂಡನಹಳ್ಳಿ ಗ್ರಾಮದ ಹೆಚ್ ನಂಜೇಗೌಡ ಆದ ನನ್ನನ್ನು ಆಯ್ಕೆ ಮಾಡಬೇಕೆಂದು ತೀರ್ಮಾನ ಕೈಗೊಂಡಿದ್ದರು. ಆದರೆ ಕೊನೆ ಕ್ಷಣದಲ್ಲಿ ಹಾಡೋನಹಳ್ಳಿ ಗ್ರಾಮದ ಎಂ.ಮುನೇಗೌಡ ರನ್ನು ಒಂದು ವರ್ಷಕ್ಕೆ ಸೀಮಿತವಾಗಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. https://ainkannada.com/you-should-never-keep-a-broom-in-this-direction-at-home-for-any-reason/ ಪಕ್ಷದ ಹಿರಿಯ ನಾಯಕರ ಮಾತಿಗೂ ಕ್ಯಾರೆ ಎನ್ನದೆ ಕಾರ್ಯಕರ್ತರು ಹಾಗೂ ಸಂಘದ ನಿರ್ದೇಶಕರಿಗೂ…
ಬೆಂಗಳೂರು: ಸೋಮವಾರ ಮಧ್ಯರಾತ್ರಿಯಿಂದಲೇ ಆರಂಭವಾಗಿರುವ ಲಾರಿ ಮುಷ್ಕರ ಅಂತ್ಯವಾಗಿದ್ದು, ರಾಮಲಿಂಗಾರೆಡ್ಡಿ ಜೊತೆ ನಡೆಸಿದ್ದ ಸಭೆ ಸಫಲವಾಗಿದೆ. ಸರ್ಕಾರವು ಲಾರಿ ಮಾಲೀಕರ ಹಲವು ಬೇಡಿಕೆಗಳನ್ನು ಒಪ್ಪಿಕೊಂಡಿದ್ದು, ಇದರಿಂದ 4500 ಕೋಟಿ ರೂಪಾಯಿಗಳಷ್ಟು ಅಂದಾಜು ನಷ್ಟವನ್ನು ತಪ್ಪಿಸಲಾಗಿದೆ. ಲಾರಿ ಮಾಲೀಕರ ಸಂಘದ ಅಧ್ಯಕ್ಷರು ಮುಷ್ಕರ ಹಿಂಪಡೆದ ಬಗ್ಗೆ ಘೋಷಿಸಿದ್ದಾರೆ. https://ainkannada.com/you-should-never-keep-a-broom-in-this-direction-at-home-for-any-reason/ ಮೂರು ದಿನಗಳಿಂದ ನಡೆಯುತ್ತಿದ್ದ ಲಾರಿ ಮುಷ್ಕರದ ಬಗ್ಗೆ ಮಾಧ್ಯಮಗಳೊಂದಿಗೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಮಾತನಾಡಿದರು. ಲಾರಿ ಮಾಲೀಕರು ಜೊತೆ ಸಭೆ ನಡೆಸಿದ್ದೇವೆ. ಆರು ಬೇಡಿಕೆಗಳನ್ನು ಇಟ್ಟಿದ್ದಾರೆ. ಮೊದಲು ಆಯುಕ್ತರ ಜೊತೆ ಸಭೆ ನಡೆಸಿದ್ದರು. ಆನ್‌ಲೈನ್‌ನಲ್ಲಿ ದಂಡ ಕಟ್ಟುವ ವ್ಯವಸ್ಥೆಯನ್ನು ಮಾಡಲಿದ್ದೇವೆ ಎಂದರು. ಒಟಿಎಸ್ ಮಾದರಿಯಲ್ಲಿ ದಂಡ ಪಾವತಿಗೆ ಅವಕಾಶ ಕಲ್ಪಿಸುವಂತೆ ಕೇಳಿದ್ದಾರೆ. ಅದನ್ನು ಸಿಎಂ ಗಮನಕ್ಕೆ ತರಲಿದ್ದೇವೆ ಹಾಗೂ ಟೋಲ್ ವಿಚಾರವನ್ನೂ ಸಿಎಂ ಗಮನಕ್ಕೆ ತರುತ್ತೇನೆ ಎಂದು ಹೇಳಿದರು. ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಪ್ರತಿಕ್ರಿಯಿಸಿ, ನಾಲ್ಕು ಪ್ರಮುಖ ಬೇಡಿಕೆ ಇತ್ತು. ಬಾರ್ಡರ್ ಚೆಕ್‌ಪೋಸ್ಟ್ ಸಮಸ್ಯೆಯನ್ನು 3 ತಿಂಗಳಲ್ಲಿ ಬಗೆಹರಿಸುವ ಭರವಸೆ…
ಉಡುಪಿ: ಡಿಕೆಶಿ, ಸಿದ್ದರಾಮಯ್ಯ, ಸತೀಶ್ ಜಾರಕಿಹೊಳಿ ಒಗ್ಗಟ್ಟಿನ ಬಗ್ಗೆ ನಾನು ಮಾತಾಡಲ್ಲ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಡಿಕೆಶಿ, ಸಿದ್ದರಾಮಯ್ಯ, ಸತೀಶ್ ಜಾರಕಿಹೊಳಿ ಒಗ್ಗಟ್ಟಿನ ಬಗ್ಗೆ ನಾನು ಮಾತಾಡಲ್ಲ. ಒಗ್ಗಟ್ಟಿಲ್ಲ ಅಂತ ಖರ್ಗೆಗೂ ಅನಿಸಿರಬೇಕು ಹಾಗಾಗಿ ಈ ಹೇಳಿಕೆ ಕೊಟ್ಟಿರಬಹುದು. ಬಿಜೆಪಿ ಸರ್ಕಾರವನ್ನು ವಜಾ ಮಾಡಲು ಯತ್ನಿಸಿದ್ದು ಕಾಂಗ್ರೆಸ್. ಮೋದಿ ಆಡಳಿತದಲ್ಲಿ ಈ ಥರದ ದುಷ್ಕೃತ್ಯ ಎಲ್ಲೂ ಆಗಿಲ್ಲ. ಮೋದಿ ಅವಧಿಯಲ್ಲಿ ರಾಜ್ಯಪಾಲರ ಆಡಳಿತ ತಂದ ಒಂದೇ ಒಂದು ಉದಾಹರಣೆ ಇಲ್ಲ. ಖರ್ಗೆ ಬಹಳ ದೊಡ್ಡವರು ಇತಿಹಾಸ ಗೊತ್ತಿದ್ದವರು. ನಾವಾದ್ರೆ ವಜಾ ಮಾಡ್ತಿದ್ದೆವು, ಬಿಜೆಪಿಯವರು ಬಿಟ್ಟಿದ್ದಾರೆ ಎಂಬರ್ಥದಲ್ಲಿ ಹೇಳಿರಬಹುದು. https://ainkannada.com/you-should-never-keep-a-broom-in-this-direction-at-home-for-any-reason/ ಸರ್ಕಾರ ವಜಾ ಮಾಡುವುದರಲ್ಲಿ ಕಾಂಗ್ರೆಸ್ ಎತ್ತಿದ ಕೈ. ಆ ಮಾನಸಿಕತೆ ಬಿಜೆಪಿಗೆ ಇಲ್ಲ. ರಾಜ್ಯಪಾಲರಾಗಿದ್ದ ಹಂಸರಾಜ ಭಾರದ್ವಾಜ್ ಗೋಹತ್ಯೆ ನಿಷೇಧ ಕಾಯ್ದೆ ಬಿಲ್‌ಗೆ ಸಹಿ ಹಾಕಿಲ್ಲ. ಬಿಲ್ಲನ್ನು ರಾಷ್ಟ್ರಪತಿಗೆ ವರ್ಗಾವಣೆ ಮಾಡಿದ್ದರು. ರಿಸರ್ವೇಶನ್ ಬಿಲ್ಲನ್ನು ಗೆಹ್ಲೋಟ್ ರಾಷ್ಟ್ರಪತಿಗೆ ಕಳುಹಿಸಿದ್ದಾರೆ. ಅಂದು ಸ್ವಾಗತಿಸಿದ ನೀವು…
ಚಿತ್ರರಂಗಕ್ಕೆ ನೂರಾರು ಕನಸ್ಸುಗಳನ್ನು ಕಟ್ಟಿಕೊಂಡು ಬರುವ ಹೊಸಬರ ಮೊದಲ ಹೆಜ್ಜೆಯೇ ಕಿರುಚಿತ್ರ ಇಲ್ಲ ಆಲ್ಬಂ ಸಾಂಗ್. ಇಲ್ಲಿಂದಲೇ ತಮ್ಮ ಪ್ರತಿಭೆಯ ಅನಾವರಣಕ್ಕೆ ಹೊಸಬರು ವೇದಿಕೆ ರೂಪಿಸಿಕೊಳ್ಳುತ್ತಾರೆ. ಕೆಲವರಂತೂ ಚೆಂದದ ಹಾಡಿನ ಮೂಲಕ ಚಮತ್ಕಾರ ಮಾಡಿ ಮೋಡಿ ಮಾಡುತ್ತಾರೆ. ಸದ್ಯ ತೇಲುತಾ ಸಾಗಿದೆ ಅಂತಾ ಕುಣಿದು ಎಲ್ಲರನ್ನೂ ಸಂತೋಷ್ ಮಂತ್ರ ಮುಗ್ದರನ್ನಾಗಿ ಮಾಡುತ್ತಿದ್ದಾರೆ. ಕನ್ನಡದಲ್ಲಿ ಹೊಸತಂಡವೊಂದು ಹೊಸ ಆಲ್ಬಂ ಮಾಡಿದೆ. ಅದೇ ತೆಲುತಾ ಸಾಗಿದೆ. Wallis flicks ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿರುವ ಈ ಗೀತೆಗೆ ಸಾಕಷ್ಟು ಮೆಚ್ಚುಗೆ ಸಿಕ್ಕುತ್ತಿದೆ. ಯುವ ಪ್ರತಿಭೆ ಸಂತೋಷ್ ನಿರ್ದೇಶಿಸಿ ತಾವೇ ಕೊರಿಯೋಗ್ರಫಿ ಮಾಡಿ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಸಿಂಧು ಆರ್ ಎಂಬುವವರು ಸೊಗಸಾದ ಪದ ಪೊಣಿಸಿ ಸಾಹಿತ್ಯ ಬರೆದಿದ್ದಾರೆ. ಸತ್ಯ ರಾಧಾಕೃಷ್ಣನ್ ಹಾಡಿಗೆ ಟ್ಯೂನ್ ಹಾಕಿ ಧ್ವನಿಯಾಗಿದ್ದಾರೆ. ಕೇಳಲಿಕ್ಕೆ ಸುಮಧುರ ಎನಿಸುವ, ನೋಡಲು ಹಿತವೆನಿಸುವ ʼತೇಲುತಾ ಸಾಗಿದೆʼ ಆಲ್ಬಂ ಸಾಂಗ್ ನ್ನು ಕನ್ನಡ Wallis flicks production ಸಂಸ್ಥೆ ನಿರ್ಮಿಸಿದೆ. ಒಂದೊಳ್ಳೆ ತಂಡ ಸೇರಿಕೊಂಡು ಕನ್ನಡದಕ್ಕೆ ಸೊಗಸಾದ…
ಬೆಂಗಳೂರು: ಸಚಿವರಲ್ಲಿ ಜಾತಿ ಜಟಾಪಟಿ ಕಿಡಿಹಾರಿದೆ. ಲಿಂಗಾಯತ, ಒಕ್ಕಲಿಗರ ಪ್ರಬಲ ವಿರೋಧದ ನಡುವೆ ಸಿದ್ದರಾಮಯ್ಯ ಸರ್ಕಾರ ಕೈಗೊಳ್ಳುವ ನಿರ್ಧಾರದ ಮೇಲೆ ಎಲ್ಲರ ಕಣ್ಣು ನೆಟ್ಟಿದ್ದು, ಇದರ ಬೆನ್ನಲ್ಲೇ ಜಾತಿ ಜನಗಣತಿ ವರದಿ ಜಾರಿಯಾದ್ರೆ ಶಾಸಕ ಸ್ಥಾನಕ್ಕೂ ರಾಜೀನಾಮೆ ಕೊಡೋಕೆ ಸಿದ್ಧ ಎಂದು ಎ. ಮಂಜು ಸವಾಲ್ ಹಾಕಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಈ ಸರ್ಕಾರಕ್ಕೆ ಜಾತಿ ಜನಗಣತಿ ಮಾಡಲು ಅಧಿಕಾರ ಕೊಟ್ಟವರು ಯಾರು? ಜಾತಿ ಜನಗಣತಿ ಮಾಡಬೇಕಿದ್ದು ಕೇಂದ್ರ ಸರ್ಕಾರ. ಇದು ಜಾತಿಗಣತಿ ಅಲ್ಲ. ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ. ಇಂತಹ ಸಮೀಕ್ಷೆಯಲ್ಲಿ ಜಾತಿಗಣತಿ ಯಾಕೆ ಮಾಡಿದ್ದು ಯಾಕೆ? ಕಾಂಗ್ರೆಸ್‌ನಲ್ಲಿ ಕುರ್ಚಿ ಕಿತ್ತಾಟ ಇರೋದಕ್ಕೆ ಇವೆಲ್ಲ ಮಾಡ್ತಿದ್ದಾರೆ. https://ainkannada.com/you-should-never-keep-a-broom-in-this-direction-at-home-for-any-reason/ ಕುರ್ಚಿ ಕಿತ್ತಾಟ ಮರೆ ಮಾಚೋಕೆ ಇದೆಲ್ಲ ಮಾಡ್ತಿದ್ದಾರೆ. ಇದು ಸರಿಯಲ್ಲ, ಈ ಜಾತಿ ಜನಗಣತಿ ವರದಿ ಅಂಗೀಕಾರ ಮಾಡಬಾರದು ಎಂದು ಒತ್ತಾಯಿಸಿದ್ದಾರೆ. ಈ ಜಾತಿ ಜನಗಣತಿ ವಿರುದ್ಧ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಎಲ್ಲಾ ಒಕ್ಕಲಿಗ ಶಾಸಕರು ಪಕ್ಷಾತೀತವಾಗಿ ಧ್ವನಿ ಎತ್ತಬೇಕು. ನಮ್ಮ ಸಮುದಾಯಕ್ಕೆ…