Author: Author AIN

ಬೆಂಗಳೂರು: 9 ಕೋಟಿ ರೂಪಾಯಿ ಮೌಲ್ಯದ ಚಿನ್ನದ ವಂಚನೆ ಆರೋಪ ಎದುರಿಸುತ್ತಿರುವ ಐಶ್ವರ್ಯ ಗೌಡ ಅವರ ಬೆಂಗಳೂರು ಮತ್ತು ಮಂಡ್ಯದಲ್ಲಿರುವ ನಿವಾಸಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿತ್ತು. ಇದೀಗ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಆರೋಪಿ ಐಶ್ವರ್ಯ ಗೌಡ ಅವರನ್ನು ವಶಕ್ಕೆ ಪಡೆದಿದ್ದಾರೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದಲ್ಲಿರುವ ಐಶ್ವರ್ಯ ಗೌಡ ನಿವಾಸ ಮತ್ತು ಗೊರಗುಂಟೆಪಾಳ್ಯದಲ್ಲಿರುವ ಫ್ಲ್ಯಾಟ್‌ ಮೇಲೆ ಇಡಿ ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದರು. ಈ ವೇಳೆ ಇಡಿ ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ. https://ainkannada.com/did-you-know-mango-prevents-weight-gain/ ಇನ್ನು, ಇಡಿ ಅಧಿಕಾರಿಗಳು ಬೆಂಗಳೂರಿನ ಆರ್.ಆರ್.ನಗರದ ಕಾಂಗ್ರೆಸ್ ಮುಖಂಡ ತಿಬ್ಬೇಗೌಡ ನಿವಾಸದ ಮೇಲೂ ದಾಳಿ ನಡೆಸಿದ್ದರು. ತಿಬ್ಬೇಗೌಡ ಅವರ ಬ್ಯಾಂಕ್ ಅಕೌಂಟ್ಸ್ ಡೀಟೆಲ್ಸ್‌, ದಾಖಲೆಗಳನ್ನು ಇಡಿ ಅಧಿಕಾರಿಗಳು ಕೊಂಡೊಯ್ದಿದ್ದಾರೆ.

Read More

ಹುಬ್ಬಳ್ಳಿ: ನಗರದ ಗೋಕುಲ ರಸ್ತೆಯ ಗಾಂಧಿನಗರದ ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವವುಳ್ಳ ಶ್ರೀ ಗಜಾನನ ಶ್ರೀ ವೀರಭದ್ರೇಶ್ವರ ದೇವಸ್ಥಾನಗಳು ಭಕ್ತರ ಆರಾಧ್ಯ ಕೇಂದ್ರ ಆಗಿವೆ.‌ ಒಂದೇ ಆವರಣದಲ್ಲಿ ಈ ದೇವಸ್ಥಾನಗಳಿದ್ದು ಬೇಡಿದವರಿಗೆ ಬೇಡಿದನ್ನ ಕೊಡುವ ದೈವಿ ಪುರುಷರಾಗಿದ್ದರೆ.ಇಂದು ಈ ದೇವಸ್ಥಾನದ‌ ಸಕಲ ಭಕ್ತರ ಆರಾಧ್ಯ ಕೇಂದ್ರ ಆಗಿದೆ.‌ ಆರಂಭದಲ್ಲಿಗಾಂಧಿನಗರದಲ್ಲಿ ಖಾಲಿ ಜಾಗೆ ಇತ್ತುಸ್ಥಳೀಯರು ಸೇರಿಕೊಂಡು ಮಹಿಳಾ ಸಂಘ ಹಾಗೂ ಗುರುಹಿರಿಯರು ಜೊತೆಯಲ್ಲಿ ಸಾಮಾಜ ಮುಖಿಯಾಗಿ ಚಟುವಟಿಕೆಗಳನ್ನ ನಡೆಸಿಕೊಂಡು ಹೋಗತಾ ಇದ್ದರು. ನಂತರ ಇದೇ ಜಾಗೆಯಲ್ಲಿ ಒಂದು ಧಾರ್ಮಿಕ ಕೇಂದ್ರ ಆಗಬೇಕು ಎಂಬ ನಿರ್ಧಾರ ತೆಗೆದುಕೊಳ್ಳಲಾಯಿತು. ಕೇಲವರ ವಿರೋಧದ ನಡುವೆ ದೊಡ್ಡ ಮಟ್ಟದ ಧಾರ್ಮಿಕ ಕೇಂದ್ರ ನಿರ್ಮಾಣದ ನಿರ್ಧಾರ ತೆಗೆದುಕೊಳ್ಳಲಾಯಿತು. https://ainkannada.com/did-you-know-mango-prevents-weight-gain/ ಸ್ಥಳೀಯ ನಾಯಕರು ಹಾಗೂ ಹಿರಿಯರ ಮಾರ್ಗದರ್ಶನದಲ್ಲಿ ಶ್ರೀ ಗಣಪತಿ ದೇವಸ್ಥಾನ ನಿರ್ಮಾಣದ ಸಂಕಲ್ಪದೊಂದಿಗೆ ಆರಂಭ ಆಯಿತು. ಕೇವಲ ಗಾಂಧಿನಗರ ಅಷ್ಟೇ ಅಲ್ಲ ಹುಬ್ಬಳ್ಳಿ ಧಾರವಾಡ ಸೇರಿದಂತೆ ಸುತ್ತಲಿನ ಭಕ್ತರು ಆಗಮಿಸಲು ಆರಂಭಿಸಿದರು. ‌1996 ರಲ್ಲಿ ಶ್ರಿ ಬಲಮುರಿ ಗಣಪತಿ ದೇವಸ್ಥಾನ…

Read More

ಕೆಜಿಎಫ್‌ ಸರಣಿ ಸಿನಿಮಾದಲ್ಲಿ ರಾಕಿಂಗ್‌ ಸ್ಟಾರ್‌ ಯಶ್‌ ಗೆ ಜೋಡಿಯಾಗಿ ಮಿಂಚಿದ್ದವರು ಶ್ರೀನಿಧಿ ಶೆಟ್ಟಿ. ಆ ಬಳಿಕ ಅವರು ಕನ್ನಡದ ಜೊತೆಗೆ ತೆಲುಗು, ತಮಿಳು ಚಿತ್ರಗಳಲ್ಲಿಯೂ ಬ್ಯುಸಿಯಾಗಿದ್ದಾರೆ. ರಾಕಿಭಾಯ್‌ ಮನದರಸಿ ರೀನಾ ಪಾತ್ರದಲ್ಲಿ ಶ್ರೀನಿಧಿ ಶೆಟ್ಟಿ ಅಮೋಘವಾಗಿ ನಟಿಸಿದ್ದರು. ಇವರಿಬ್ಬರ ಕಾಂಬೋ ಪ್ರೇಕ್ಷಕರಿಗೂ ಇಷ್ಟವಾಗಿತ್ತು. ಈ ಜೋಡಿಯನ್ನು ಮತ್ತೊಮ್ಮೆ ನೋಡಲು ಕಾಯುತ್ತಿದ್ದವರಿಗೆ ಶ್ರೀನಿಧಿ ಶೆಟ್ಟಿ ಇಂಟ್ರೆಸ್ಟಿಂಗ್‌ ವಿಚಾರವೊಂದನ್ನು ರಿವೀಲ್‌ ಮಾಡಿದ್ದಾರೆ. ಹಿಟ್‌ 3 ಸಿನಿಮಾ ಪ್ರಚಾರದ ವೇಳೆ ಶ್ರೀನಿಧಿ ತಮಗೆ ರಾಮಾಯಣ ಸಿನಿಮಾದಿಂದ ಆಫರ್‌ ಬಂದಿರುವುದಾಗಿ ಹೇಳಿದ್ದಾರೆ. ರಾಮಾಯಣ ಚಿತ್ರಕ್ಕೆ ಸ್ಕ್ರೀನ್ ಟೆಸ್ಟ್ ನೀಡಿ ಬಂದಿದ್ದರಂತೆ. ಈ ಬಗ್ಗೆ ಮಾತನಾಡಿರುವ ಅವರು, “ಹೌದು, ನಾನು ಸ್ಕ್ರೀನ್ ಟೆಸ್ಟ್ ನೀಡಿದ್ದೇನೆ. ಮೂರು ದೃಶ್ಯಗಳನ್ನು ಮಾಡಿ ತೋರಿಸಿದ್ದೆ. ಆ ವೇಳೆ, ಯಶ್ ಕೂಡ ಈ ಸಿನಿಮಾದ ಭಾಗವಾಗ್ತಾರೆ ಎಂದು ಕೇಳಿಪಟ್ಟಿದ್ದೆ, ಅದೇ ಸಮಯದಲ್ಲೇ ‘ಕೆಜಿಎಫ್ 2’ ರಿಲೀಸ್ ಆಗಿತ್ತು. ನನ್ನ ಮತ್ತು ಯಶ್ ಜೋಡಿಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಎರಡೂ ತಿಂಗಳಲ್ಲಿ, ರಾಮಾಯಣ ಆಡಿಷನ್ ಆಗಿತ್ತು.…

Read More

ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಸೇನೆ ಶೋಧ ಕಾರ್ಯಾಚರಣೆ ಆರಂಭಿಸಿದೆ. ಭದ್ರತಾ ಪಡೆಗಳು ಪ್ರಸ್ತುತ ಬಿಜ್‌ಬೆಹರಾ ಮತ್ತು ಟ್ರಾಲ್ ಪ್ರದೇಶಗಳನ್ನು ಶೋಧಿಸುತ್ತಿವೆ. ಇದರ ಭಾಗವಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ಥಳೀಯ ಭಯೋತ್ಪಾದಕರ ಮನೆಗಳ ಮೇಲೆ ದಾಳಿ ನಡೆಸಲಾಗುತ್ತಿದೆ. ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ಈ ಎನ್‌ಕೌಂಟರ್ ನಡೆದಿದೆ. ಭಯೋತ್ಪಾದಕರು ಇದ್ದಾರೆ ಎಂಬ ಮಾಹಿತಿಯ ಮೇರೆಗೆ ಕುಲ್ನಾರ್‌ನ ಬಾಜಿಪುರದಲ್ಲಿ ಕಾರ್ಡನ್ ಶೋಧ ಕಾರ್ಯಾಚರಣೆ ನಡೆಸಲಾಯಿತು. ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಟ್ರಾಲ್‌ನ ಮೊಂಗಮಾ ಪ್ರದೇಶದಲ್ಲಿ ಸೇನೆಯು ಭಯೋತ್ಪಾದಕನ ಮನೆಯನ್ನು ಗುರುತಿಸಿದೆ. ಪಡೆಗಳು ಐಇಡಿ ಬಾಂಬ್‌ಗಳಿಂದ ಭಯೋತ್ಪಾದಕನ ಮನೆಯನ್ನು ಸ್ಫೋಟಿಸಿದವು. ಅಧಿಕಾರಿಗಳು ಆ ಮನೆಯನ್ನು ಆಸಿಫ್ ಶೇಖ್ ಎಂಬ ಭಯೋತ್ಪಾದಕನಿಗೆ ಸೇರಿದ್ದು ಎಂದು ಗುರುತಿಸಿದ್ದಾರೆ. ಏಪ್ರಿಲ್ 22 ರಂದು ಪಹಲ್ಗಾಮ್ ಕಣಿವೆಯಲ್ಲಿ ಪ್ರವಾಸಿಗರ ಮೇಲೆ ನಡೆದ ದಾಳಿಯಲ್ಲಿ 26 ಅಮಾಯಕರ ಜೀವವನ್ನು ಬಲಿ ಪಡೆದ ಭಯೋತ್ಪಾದಕರಲ್ಲಿ ಆಸಿಫ್ ಶೇಖ್ ಹೆಸರು ಕೂಡ ಒಂದು ಎಂದು ತಿಳಿದುಬಂದಿದೆ. ಇದರಿಂದಾಗಿ…

Read More

ಇಂಗ್ಲೆಂಡ್ ಕ್ರಿಕೆಟ್ ದಂತಕಥೆ ಆಂಡ್ರ್ಯೂ ಫ್ಲಿಂಟಾಫ್ 2022 ರಲ್ಲಿ ಸಂಭವಿಸಿದ ಭೀಕರ ಕಾರು ಅಪಘಾತವನ್ನು ನೆನಪಿಸಿಕೊಳ್ಳುತ್ತಾ ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದಾರೆ. ಸರ್ರೆಯ ಡನ್ಸ್‌ಫೋಲ್ಡ್ ಪಾರ್ಕ್ ಏರೋಡ್ರೋಮ್‌ನಲ್ಲಿ ಬಿಬಿಸಿಯ ಜನಪ್ರಿಯ ಆಟೋಮೊಬೈಲ್ ಶೋ “ಟಾಪ್ ಗೇರ್” ಚಿತ್ರೀಕರಣ ಮಾಡುತ್ತಿದ್ದಾಗ, ಫ್ಲಿಂಟಾಫ್ ಚಲಾಯಿಸುತ್ತಿದ್ದ ತ್ರಿಚಕ್ರ ವಾಹನ (ಮಾರ್ಗನ್ ಸೂಪರ್ 3) ಇದ್ದಕ್ಕಿದ್ದಂತೆ ನಿಯಂತ್ರಣ ತಪ್ಪಿ, ಪಲ್ಟಿಯಾಗಿ ಉರುಳಿತು. ಅಪಘಾತದಲ್ಲಿ ಅವರ ಮುಖ ಮತ್ತು ಪಕ್ಕೆಲುಬುಗಳಿಗೆ ಗಂಭೀರ ಗಾಯಗಳಾಗಿವೆ. ಫ್ಲಿಂಟಾಫ್ ಅವರ ಕಾಲಿನಲ್ಲಿ ಸೀಳಿದಂತೆ ಕಂಡುಬಂದ ಗಾಯಗಳಿಂದಾಗಿ ಅವರಿಗೆ ಶಸ್ತ್ರಚಿಕಿತ್ಸೆ ಅಗತ್ಯವಾಯಿತು. ಈ ಘಟನೆಯ ನಂತರ, ಬಿಬಿಸಿ ಕಾರ್ಯಕ್ರಮದ ನಿರ್ಮಾಣವನ್ನು ಸ್ಥಗಿತಗೊಳಿಸಿತು ಮತ್ತು ಹಿಂದಿನ ಇಂಗ್ಲೆಂಡ್ ಕ್ರಿಕೆಟ್ ತಂಡಕ್ಕೆ £9 ಮಿಲಿಯನ್ ಪರಿಹಾರವನ್ನು ನೀಡಿತು. https://ainkannada.com/did-you-know-mango-prevents-weight-gain/ ಈಗ ಡಿಸ್ನಿ+ ಸಾಕ್ಷ್ಯಚಿತ್ರದಲ್ಲಿ ಮಾತನಾಡುತ್ತಾ, ಘಟನೆಯ ಬಗ್ಗೆ ಮಾತನಾಡುವಾಗ ಫ್ಲಿಂಟಾಫ್ ಭಾವುಕರಾದರು. “ನಾನು ಸತ್ತಿದ್ದೇನೆ ಎಂದು ನಾನು ಭಾವಿಸಿದೆ. ನನಗೆ ಪ್ರಜ್ಞೆ ಇತ್ತು ಆದರೆ ನನಗೆ ಏನೂ ಕಾಣಲಿಲ್ಲ. ನನ್ನ ಜೀವನ ಇಷ್ಟೇನಾ? ನನ್ನ ಉಳಿದ ದಿನಗಳಲ್ಲಿ ನಾನು…

Read More

ಹುಬ್ಬಳ್ಳಿ: ಶ್ರೀ ಜಗಜ್ಯೋತಿ ಬಸವೇಶ್ವರರ ಜಯಂತ್ರೋತ್ಸವದ ಅಂಗವಾಗಿ ನಗರದ ಮೂರುಸಾವಿರಹ ಮಠದಲ್ಲಿ ಏ. 27 ರಿಂದ 30 ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷೆ ಗಿರಿಜಾ ಎಸ್. ಹೂಗಾರ ಹೇಳಿದರು. ನಗರದಲ್ಲಿಂದುಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏ. 27 ರಂದು ಬೆಳಿಗ್ಗೆ 8.30 ಗಂಟೆಗೆ ಜಗದ್ಗುರು ಡಾ.ಗುರುಸಿದ್ದ ರಾಜಯೋಗೀಂದ್ರ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಷಟಸ್ಥಲ ಧ್ವಜಾರೋಹಣ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ, ಮೂರುಸಾವಿರಮಠ ವಿದ್ಯಾವರ್ಧಕ ಸಂಘದ ಗೌರವ ಕಾರ್ಯಾಧ್ಯಕ್ಷ ಅರವಿಂದ ಕುಬಸದ, ವೀರಶೈವ ಸಂಘಟನಾ ಸಮಿತಿ ಅಧ್ಯಕ್ಷ ವೀರಣ್ಣ ಕಲ್ಲೂರ ಹಾಗೂ ಸಿದ್ಧಾರೂಢಮಠದ ಧರ್ಮದರ್ಶಿ ಮಂಜುನಾಥ ಎಸ್. ಮುನವಳ್ಳಿ ಭಾಗವಹಿಸಲಿದ್ದಾರೆ. ಅಂದು ಸಂಜೆ 4 ಗಂಟೆಗೆ ಬೈಕ್ ರ್ಯಾಲಿ ನಡೆಯಲಿದ್ದು, ಬಸವಣ್ಣನವರ ಭಾವಚಿತ್ರ ಭವ್ಯ ಮೆರವಣಿಗೆಮುಖ್ಯ ಅತಿಥಿಗಳಾಗಿ ವಸಂತ ಹೊರಟ್ಟಿ, ನಾಗರಾಜ ಗೌರಿ, ಸಂಕಲ್ಪ ಶೆಟ್ಟರ ಆಗಮಿಸಲಿದ್ದಾರೆ ಎಂದರು. https://ainkannada.com/did-you-know-mango-prevents-weight-gain/ ಏ. 28 ರಂದು ಸಂಜೆ 4 ಗಂಟೆಗೆ ಮಹಿಳೆಯರಿಂದ ಮತ್ತು…

Read More

ಭಾರತ ಇತ್ತೀಚೆಗೆ ಒಂದು ತೀವ್ರ ಆತಂಕಕಾರಿ ಘಟನೆಯನ್ನು ಎದುರಿಸಿದೆ. ಕಾಶ್ಮೀರದ ಪಹಲ್ಗಾಮ್ ಪ್ರದೇಶದಲ್ಲಿ ಭಯೋತ್ಪಾದಕರು ಪ್ರವಾಸಿಗರ ಮೇಲೆ ನಡೆಸಿದ ದಾಳಿಯಲ್ಲಿ 26 ಅಮಾಯಕರು ಪ್ರಾಣ ಕಳೆದುಕೊಂಡರು. ಈ ಘಟನೆ ದೇಶಾದ್ಯಂತ ಆಕ್ರೋಶ ಮತ್ತು ಕೋಪಕ್ಕೆ ಕಾರಣವಾಗಿದೆ. ಈ ಆಕ್ರೋಶಕ್ಕೆ ಪ್ರತೀಕಾರವಾಗಿ, ಕ್ರೀಡಾ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಫ್ಯಾನ್‌ಕೋಡ್ ಭಾರತದಲ್ಲಿ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್) ನ ನೇರ ಪ್ರಸಾರವನ್ನು ನಿಲ್ಲಿಸಲು ನಿರ್ಧರಿಸಿದೆ. ಇದು ಕೇವಲ ಸರಳ ನಿರ್ಧಾರವಲ್ಲ. ಭಾರತದ ಜನರ ಭಾವನೆಗಳಿಗೆ ಬೆಂಬಲವಾಗಿ ನಿಲ್ಲುವ ಒಂದು ದಿಟ್ಟ ನಿರ್ಧಾರ. ಮಂಗಳವಾರ ಮಧ್ಯಾಹ್ನ ನಡೆದ ದಾಳಿಯ ನಂತರ, ಫ್ಯಾನ್‌ಕೋಡ್ ತನ್ನ ಅಪ್ಲಿಕೇಶನ್‌ನಿಂದ PSL-ಸಂಬಂಧಿತ ನೇರ ಪ್ರಸಾರಗಳು, ವೀಡಿಯೊಗಳು, ಮುಖ್ಯಾಂಶಗಳು ಮತ್ತು ಪೂರ್ಣ ಹೊಂದಾಣಿಕೆಗಳನ್ನು ಸಂಪೂರ್ಣವಾಗಿ ತೆಗೆದುಹಾಕಿದೆ. https://ainkannada.com/did-you-know-mango-prevents-weight-gain/ ಈ ಹಿನ್ನೆಲೆಯಲ್ಲಿ ಈ ವರ್ಷದ ಏಪ್ರಿಲ್ 11 ರಂದು ಆರಂಭವಾದ ಪಾಕಿಸ್ತಾನ ಸೂಪರ್ ಲೀಗ್‌ನ 10 ನೇ ಆವೃತ್ತಿಯು ಮೇ 18 ರವರೆಗೆ ನಡೆಯಲಿದೆ. ಐಪಿಎಲ್ ಪ್ರಸಾರ ಹಕ್ಕುಗಳಿಗಾಗಿ ಪೈಪೋಟಿ ನಡೆಸುವ ಹಂತಕ್ಕೆ ತಲುಪಿರುವ ಪಿಎಸ್‌ಎಲ್‌ಗೆ…

Read More

ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಚಿಲಕವಾಡ ಗ್ರಾಮದಲ್ಲಿ ಕೆ.ವ್ಹಿ.ಹುಲಕೋಟಿ ಅವರ 1.5 ಎಕರೆ ಕ್ಷೇತ್ರದಲ್ಲಿರುವ ಮನೆ ಮತ್ತು ಸುತ್ತಲಿನ ವೈವಿದ್ಯಮಯ ಸಸ್ಯ ಗಿಡಗಳಿಂದ ಕಂಗೊಳಿಸುತ್ತಿರುವ “ನಂದನ ವನ” ಇನ್ನೂಬ್ಬರಿಗೆ ಮಾದರಿಯಾಗಿದೆ. ಬಯಲು ನಾಡಿನ ನವಲಗುಂದ ತಾಲೂಕಿನ ಈ ಹಳ್ಳಿ ಚಿಲಕವಾಡ ಗ್ರಾಮದಲ್ಲಿ ಅದೆಂಥ ತೋಟ ಅಂತಾ ನನಗೂ ಕುತೂಹಲವಾಗಿತ್ತು ಈ ನಂದನವನ ಆವರಣಕ್ಕೆ ಕಾಲಿಟ್ಟಾಗ ಒಂದು ರೀತಿಯ ಅಚ್ಚರಿಯ ಮಲೆನಾಡಿನಲ್ಲಿ ಬಂದಂತಹ ಅನುಭವವಾಯಿತು. ಶ್ರೀ ಕೆ.ವ್ಹಿ.ಹೊಲಕೋಟಿಯವರು ಪ್ರಾಥಮಿಕ ಶಿಕ್ಷಣ ಚಿಲಕವಾಡ ಗ್ರಾಮದಲ್ಲಿ ಹಾಗೂ ಹೆಚ್ಚಿನ ವ್ಯಾಸಂಗ ಧಾರವಾಡದ ಯುನಿವರ್ಸಿಟಿಯಲ್ಲಿ ಸಸ್ಯಶಾಸ್ತ್ರದಲ್ಲಿ ಉನ್ನತ ಪದವಿ (ಎಮ್.ಎಸ್.ಸಿ) ಮುಗಿಸಿ 3 ವರ್ಷ (1971-74) ವರೆಗೆ ಹುನಗುಂದದ ಶ್ರೀ ವಿಜಯ ಮಹಾಂತೇಶ ಆರ್ಟ & ಸಾಯಿನ್ಸ ಕಾಲೇಜದಲ್ಲಿ ಉಪನ್ಯಾಸಕರ ವೃತ್ತಿ 1974 ರಲ್ಲಿ ರಾಜಿನಾಮೆ ನೀಡಿ ಸ್ವಂತ ಊರಾದ ಚಿಲಕವಾಡದಲ್ಲಿ ಕೃಷಿಯನ್ನು ಪೂರ್ಣ ಪ್ರಮಾಣದಲ್ಲಿ ವ್ಯವಸಾಯವನ್ನು ಕೈಗೊಂಡು ಸುಮಾರು ನೂರಾರು ಎಕರೆ ಜಮೀನು ಒಣಬೇಸಾಯ ಪದ್ದತಿ ಒಳಪಡಿಸಿ ಸಾವಯವ ರೀತಿಯಲ್ಲಿ ಉಳ್ಳಾಗಡ್ಡಿ, ಮೆಣಸಿನಕಾಯಿ, ಇತರೆ…

Read More

ರಾಜ್ಯದ ಕೆಲವೇ ಜಿಲ್ಲೆಗಳಲ್ಲಿ ಸಿಹಿಗೆಣಸು ಬೆಳೆಯಲಾಗುತ್ತಿದ್ದು, ಬಹುಪಾಲು ಸಿಹಿಗೆಣಸು ಉತ್ತರ ಭಾರತದ ರಾಜ್ಯಗಳಿಗೆ ಸರಬರಾಜಾಗುತ್ತವೆ. ಹೆಚ್ಚಿನ ಭಾಗದ ರೈತರು ಇದನ್ನು ಬೆಳೆಯುವುದಿಲ್ಲ ಎನ್ನುವುದಕ್ಕಿಂತಲೂ ಮುಖ್ಯವಾಗಿ ಬಹಳಷ್ಟು ರೈತರಿಗೆ ಸಿಹಿ ಗೆಣಸು ಕೂಡ ಒಂದು ಲಾಭದಾಯಕ ಬೆಳೆ ಎಂಬ ವಿಷಯ ಗೊತ್ತಿಲ್ಲ. https://ainkannada.com/are-you-keeping-these-fruits-in-the-fridge-do-you-know-how-much-damage-this-can-do-to-your-body/ ಇನ್ನೊಂದೆಡೆ ಈ ಬೆಳೆಗೆ ಹೊಂದಿಕೆಯಾಗುವ ಮಣ್ಣು ಎಲ್ಲೆಡೆ ಇಲ್ಲದಿರುವುದು ಕೂಡ ಬೇರೆ ಭಾಗದ ರೈತರು ಸಿಹಿ ಗೆಣಸು ಬೆಳೆಯಲು ಆಸಕ್ತಿ ತೋರಿಸದೇ ಇರುವುದಕ್ಕೆ ಕಾರಣವಿರಬಹುದು. ಹಾಗಂತ ಬೇರೆ ಜಿಲ್ಲೆಗಳ ರೈತರು ಗೆಣಸು ಬೆಳೆಯಲು ಪ್ರಯತ್ನಿಸಿಲ್ಲ ಎಂದಲ್ಲ. ಮಧ್ಯ ಕರ್ನಾಟಕದ ಚಿತ್ರದುರ್ಗ, ದಾವಣಗೆರೆ, ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣದಲ್ಲಿ ತುಮಕೂರು, ಕೋಲಾರ ಹಾಗೂ ಉತ್ತರ ಕರ್ನಾಟಕದ ಹುಬ್ಬಳ್ಳಿ-ಧಾರವಾಡ, ಗದಗ ಜಿಲ್ಲೆಗಳ ರೈತರು ಸಿಹಿ ಗೆಣಸು ಬೆಳೆದಿದ್ದಾರೆ. ಕೆಲವರು ಅಧಿಕ ಲಾಭವನ್ನೂ ಗಳಿಸಿದ್ದಾರೆ. ಮಣ್ಣು, ಹವಾಗುಣ ಹಗುರವಾದ ರಚನೆಯನ್ನು ಹೊಂದಿರುವ ಹಾಗೂ ಅತ್ಯಂತ ಫಲವತ್ತಾಗಿರುವ ಮರಳು ಮಿಶ್ರಿತ ಗೋಡು ಮಣ್ಣು ಸಿಹಿ ಗೆಣಸು ಬೆಳೆಯಲು ಸೂಕ್ತವಾಗಿದೆ. ಈ ವಿಧದ ಮಣ್ಣು ಸಡಿಲವಾಗಿರುವುದರಿಂದ ಗೆಣಸುಗಳು ನೆಲದಲ್ಲಿ…

Read More

ಸದ್ಯ ಭಾರತದಲ್ಲಿ ಮಾವಿನ ಹಣ್ಣಿನ ಸೀಸನ್ ಜೋರಾಗಿಯೇ ಇದೆ. ಎಲ್ಲೇ ನೋಡಿದರೂ ಬಗೆಬಗೆಯ ಮಾವಿನ ಹಣ್ಣುಗಳನ್ನು ಕಾಣಬಹುದು. ಹಣ್ಣುಗಳ ರಾಜ ಎಂದೇ ಕರೆಯಲ್ಪಡುವ ಮಾವಿನ ಹಣ್ಣನ್ನು ಈ ಸಮಯದಲ್ಲಿ ಕೊಳ್ಳದವರೇ ಇಲ್ಲ ಸವಿಯದವರೇ ಇಲ್ಲ ಎನ್ನಬಹುದು! ತನ್ನಲ್ಲಿ ನೈಸರ್ಗಿಕವಾಗಿ ಸಿಗುವ ಅಪ್ರತಿಮ ರುಚಿಯನ್ನು ಹೊಂದಿರುವ, ಈ ಹಣ್ಣುಗಳನ್ನು ಮನೆಯಲ್ಲಿ ಹಿರಿಯರಿಂದ ಹಿಡಿದು, ಸಣ್ಣ ಮಕ್ಕಳವರೆಗೂ ಕೂಡ ಇಷ್ಟವಾಗುತ್ತದೆ. ಮಾವಿನಹಣ್ಣುಗಳು ಉತ್ಕರ್ಷಣ ನಿರೋಧಕಗಳು, ಜೀವಸತ್ವಗಳು, ಖನಿಜಗಳು ಮತ್ತು ಆಹಾರದ ಫೈಬರ್ಗಳಿಂದ ತುಂಬಿರುತ್ತವೆ, ಆದರೆ ಅತಿಯಾದ ಸೇವನೆಯು ತೊಂದರೆಗೊಳಗಾಗಬಹುದು ಮತ್ತು ತೂಕ ನಷ್ಟದ ಪ್ರಯಾಣವನ್ನು ಹಳಿತಪ್ಪಿಸಬಹುದು. ಮಾವಿನಹಣ್ಣನ್ನು ಮಿತವಾಗಿ ತಿನ್ನುವುದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ, ನಿಮ್ಮ ಮಾನಸಿಕ ಆರೋಗ್ಯ, ಹೃದಯದ ಆರೋಗ್ಯ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಹಣ್ಣಿನಲ್ಲಿ ನಾರಿನಂಶ ಸಮೃದ್ಧವಾಗಿದ್ದು ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಮಲಬದ್ಧತೆಯನ್ನು ಕಡಿಮೆ ಮಾಡುತ್ತದೆ. ಮಾವಿನಹಣ್ಣುಗಳನ್ನು ತಿನ್ನುವುದರಿಂದ ಉರಿಯೂತ, ಅಜೀರ್ಣ ಮತ್ತು ಅತಿಸಾರದಂತಹ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ. ಮಾವಿನ ಹಣ್ಣಿನಲ್ಲಿ ಪೊಟ್ಯಾಸಿಯಮ್ ಇರುತ್ತದೆ. ಇದು ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಪೊಟ್ಯಾಸಿಯಮ್…

Read More