Author: Author AIN

ಬೆಂಗಳೂರು: ಸೋಮವಾರ ಮಧ್ಯರಾತ್ರಿಯಿಂದಲೇ ಆರಂಭವಾಗಿರುವ ಲಾರಿ ಮುಷ್ಕರ ಅಂತ್ಯವಾಗಿದ್ದು, ರಾಮಲಿಂಗಾರೆಡ್ಡಿ ಜೊತೆ ನಡೆಸಿದ್ದ ಸಭೆ ಸಫಲವಾಗಿದೆ. ಸರ್ಕಾರವು ಲಾರಿ ಮಾಲೀಕರ ಹಲವು ಬೇಡಿಕೆಗಳನ್ನು ಒಪ್ಪಿಕೊಂಡಿದ್ದು, ಇದರಿಂದ 4500 ಕೋಟಿ ರೂಪಾಯಿಗಳಷ್ಟು ಅಂದಾಜು ನಷ್ಟವನ್ನು ತಪ್ಪಿಸಲಾಗಿದೆ. ಲಾರಿ ಮಾಲೀಕರ ಸಂಘದ ಅಧ್ಯಕ್ಷರು ಮುಷ್ಕರ ಹಿಂಪಡೆದ ಬಗ್ಗೆ ಘೋಷಿಸಿದ್ದಾರೆ. https://ainkannada.com/you-should-never-keep-a-broom-in-this-direction-at-home-for-any-reason/ ಮೂರು ದಿನಗಳಿಂದ ನಡೆಯುತ್ತಿದ್ದ ಲಾರಿ ಮುಷ್ಕರದ ಬಗ್ಗೆ ಮಾಧ್ಯಮಗಳೊಂದಿಗೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಮಾತನಾಡಿದರು. ಲಾರಿ ಮಾಲೀಕರು ಜೊತೆ ಸಭೆ ನಡೆಸಿದ್ದೇವೆ. ಆರು ಬೇಡಿಕೆಗಳನ್ನು ಇಟ್ಟಿದ್ದಾರೆ. ಮೊದಲು ಆಯುಕ್ತರ ಜೊತೆ ಸಭೆ ನಡೆಸಿದ್ದರು. ಆನ್‌ಲೈನ್‌ನಲ್ಲಿ ದಂಡ ಕಟ್ಟುವ ವ್ಯವಸ್ಥೆಯನ್ನು ಮಾಡಲಿದ್ದೇವೆ ಎಂದರು. ಒಟಿಎಸ್ ಮಾದರಿಯಲ್ಲಿ ದಂಡ ಪಾವತಿಗೆ ಅವಕಾಶ ಕಲ್ಪಿಸುವಂತೆ ಕೇಳಿದ್ದಾರೆ. ಅದನ್ನು ಸಿಎಂ ಗಮನಕ್ಕೆ ತರಲಿದ್ದೇವೆ ಹಾಗೂ ಟೋಲ್ ವಿಚಾರವನ್ನೂ ಸಿಎಂ ಗಮನಕ್ಕೆ ತರುತ್ತೇನೆ ಎಂದು ಹೇಳಿದರು. ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಪ್ರತಿಕ್ರಿಯಿಸಿ, ನಾಲ್ಕು ಪ್ರಮುಖ ಬೇಡಿಕೆ ಇತ್ತು. ಬಾರ್ಡರ್ ಚೆಕ್‌ಪೋಸ್ಟ್ ಸಮಸ್ಯೆಯನ್ನು 3 ತಿಂಗಳಲ್ಲಿ ಬಗೆಹರಿಸುವ ಭರವಸೆ…

Read More

ಉಡುಪಿ: ಡಿಕೆಶಿ, ಸಿದ್ದರಾಮಯ್ಯ, ಸತೀಶ್ ಜಾರಕಿಹೊಳಿ ಒಗ್ಗಟ್ಟಿನ ಬಗ್ಗೆ ನಾನು ಮಾತಾಡಲ್ಲ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಡಿಕೆಶಿ, ಸಿದ್ದರಾಮಯ್ಯ, ಸತೀಶ್ ಜಾರಕಿಹೊಳಿ ಒಗ್ಗಟ್ಟಿನ ಬಗ್ಗೆ ನಾನು ಮಾತಾಡಲ್ಲ. ಒಗ್ಗಟ್ಟಿಲ್ಲ ಅಂತ ಖರ್ಗೆಗೂ ಅನಿಸಿರಬೇಕು ಹಾಗಾಗಿ ಈ ಹೇಳಿಕೆ ಕೊಟ್ಟಿರಬಹುದು. ಬಿಜೆಪಿ ಸರ್ಕಾರವನ್ನು ವಜಾ ಮಾಡಲು ಯತ್ನಿಸಿದ್ದು ಕಾಂಗ್ರೆಸ್. ಮೋದಿ ಆಡಳಿತದಲ್ಲಿ ಈ ಥರದ ದುಷ್ಕೃತ್ಯ ಎಲ್ಲೂ ಆಗಿಲ್ಲ. ಮೋದಿ ಅವಧಿಯಲ್ಲಿ ರಾಜ್ಯಪಾಲರ ಆಡಳಿತ ತಂದ ಒಂದೇ ಒಂದು ಉದಾಹರಣೆ ಇಲ್ಲ. ಖರ್ಗೆ ಬಹಳ ದೊಡ್ಡವರು ಇತಿಹಾಸ ಗೊತ್ತಿದ್ದವರು. ನಾವಾದ್ರೆ ವಜಾ ಮಾಡ್ತಿದ್ದೆವು, ಬಿಜೆಪಿಯವರು ಬಿಟ್ಟಿದ್ದಾರೆ ಎಂಬರ್ಥದಲ್ಲಿ ಹೇಳಿರಬಹುದು. https://ainkannada.com/you-should-never-keep-a-broom-in-this-direction-at-home-for-any-reason/ ಸರ್ಕಾರ ವಜಾ ಮಾಡುವುದರಲ್ಲಿ ಕಾಂಗ್ರೆಸ್ ಎತ್ತಿದ ಕೈ. ಆ ಮಾನಸಿಕತೆ ಬಿಜೆಪಿಗೆ ಇಲ್ಲ. ರಾಜ್ಯಪಾಲರಾಗಿದ್ದ ಹಂಸರಾಜ ಭಾರದ್ವಾಜ್ ಗೋಹತ್ಯೆ ನಿಷೇಧ ಕಾಯ್ದೆ ಬಿಲ್‌ಗೆ ಸಹಿ ಹಾಕಿಲ್ಲ. ಬಿಲ್ಲನ್ನು ರಾಷ್ಟ್ರಪತಿಗೆ ವರ್ಗಾವಣೆ ಮಾಡಿದ್ದರು. ರಿಸರ್ವೇಶನ್ ಬಿಲ್ಲನ್ನು ಗೆಹ್ಲೋಟ್ ರಾಷ್ಟ್ರಪತಿಗೆ ಕಳುಹಿಸಿದ್ದಾರೆ. ಅಂದು ಸ್ವಾಗತಿಸಿದ ನೀವು…

Read More

ಚಿತ್ರರಂಗಕ್ಕೆ ನೂರಾರು ಕನಸ್ಸುಗಳನ್ನು ಕಟ್ಟಿಕೊಂಡು ಬರುವ ಹೊಸಬರ ಮೊದಲ ಹೆಜ್ಜೆಯೇ ಕಿರುಚಿತ್ರ ಇಲ್ಲ ಆಲ್ಬಂ ಸಾಂಗ್. ಇಲ್ಲಿಂದಲೇ ತಮ್ಮ ಪ್ರತಿಭೆಯ ಅನಾವರಣಕ್ಕೆ ಹೊಸಬರು ವೇದಿಕೆ ರೂಪಿಸಿಕೊಳ್ಳುತ್ತಾರೆ. ಕೆಲವರಂತೂ ಚೆಂದದ ಹಾಡಿನ ಮೂಲಕ ಚಮತ್ಕಾರ ಮಾಡಿ ಮೋಡಿ ಮಾಡುತ್ತಾರೆ. ಸದ್ಯ ತೇಲುತಾ ಸಾಗಿದೆ ಅಂತಾ ಕುಣಿದು ಎಲ್ಲರನ್ನೂ ಸಂತೋಷ್‌ ಮಂತ್ರ ಮುಗ್ದರನ್ನಾಗಿ ಮಾಡುತ್ತಿದ್ದಾರೆ. ಕನ್ನಡದಲ್ಲಿ ಹೊಸತಂಡವೊಂದು ಹೊಸ ಆಲ್ಬಂ ಮಾಡಿದೆ. ಅದೇ ತೆಲುತಾ ಸಾಗಿದೆ. Wallis flicks ಯೂಟ್ಯೂಬ್‌ ನಲ್ಲಿ ಬಿಡುಗಡೆಯಾಗಿರುವ ಈ ಗೀತೆಗೆ ಸಾಕಷ್ಟು ಮೆಚ್ಚುಗೆ ಸಿಕ್ಕುತ್ತಿದೆ. ಯುವ ಪ್ರತಿಭೆ ಸಂತೋಷ್‌ ನಿರ್ದೇಶಿಸಿ ತಾವೇ ಕೊರಿಯೋಗ್ರಫಿ ಮಾಡಿ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಸಿಂಧು ಆರ್‌ ಎಂಬುವವರು ಸೊಗಸಾದ ಪದ ಪೊಣಿಸಿ ಸಾಹಿತ್ಯ ಬರೆದಿದ್ದಾರೆ. ಸತ್ಯ ರಾಧಾಕೃಷ್ಣನ್‌ ಹಾಡಿಗೆ ಟ್ಯೂನ್‌ ಹಾಕಿ ಧ್ವನಿಯಾಗಿದ್ದಾರೆ. ಕೇಳಲಿಕ್ಕೆ ಸುಮಧುರ ಎನಿಸುವ, ನೋಡಲು ಹಿತವೆನಿಸುವ ʼತೇಲುತಾ ಸಾಗಿದೆʼ ಆಲ್ಬಂ ಸಾಂಗ್‌ ನ್ನು ಕನ್ನಡ Wallis flicks production ಸಂಸ್ಥೆ ನಿರ್ಮಿಸಿದೆ. ಒಂದೊಳ್ಳೆ ತಂಡ ಸೇರಿಕೊಂಡು ಕನ್ನಡದಕ್ಕೆ ಸೊಗಸಾದ…

Read More

ಬೆಂಗಳೂರು: ಸಚಿವರಲ್ಲಿ ಜಾತಿ ಜಟಾಪಟಿ ಕಿಡಿಹಾರಿದೆ. ಲಿಂಗಾಯತ, ಒಕ್ಕಲಿಗರ ಪ್ರಬಲ ವಿರೋಧದ ನಡುವೆ ಸಿದ್ದರಾಮಯ್ಯ ಸರ್ಕಾರ ಕೈಗೊಳ್ಳುವ ನಿರ್ಧಾರದ ಮೇಲೆ ಎಲ್ಲರ ಕಣ್ಣು ನೆಟ್ಟಿದ್ದು, ಇದರ ಬೆನ್ನಲ್ಲೇ ಜಾತಿ ಜನಗಣತಿ ವರದಿ ಜಾರಿಯಾದ್ರೆ ಶಾಸಕ ಸ್ಥಾನಕ್ಕೂ ರಾಜೀನಾಮೆ ಕೊಡೋಕೆ ಸಿದ್ಧ ಎಂದು ಎ. ಮಂಜು ಸವಾಲ್‌ ಹಾಕಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಈ ಸರ್ಕಾರಕ್ಕೆ ಜಾತಿ ಜನಗಣತಿ ಮಾಡಲು ಅಧಿಕಾರ ಕೊಟ್ಟವರು ಯಾರು? ಜಾತಿ ಜನಗಣತಿ ಮಾಡಬೇಕಿದ್ದು ಕೇಂದ್ರ ಸರ್ಕಾರ. ಇದು ಜಾತಿಗಣತಿ ಅಲ್ಲ. ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ. ಇಂತಹ ಸಮೀಕ್ಷೆಯಲ್ಲಿ ಜಾತಿಗಣತಿ ಯಾಕೆ ಮಾಡಿದ್ದು ಯಾಕೆ? ಕಾಂಗ್ರೆಸ್‌ನಲ್ಲಿ ಕುರ್ಚಿ ಕಿತ್ತಾಟ ಇರೋದಕ್ಕೆ ಇವೆಲ್ಲ ಮಾಡ್ತಿದ್ದಾರೆ. https://ainkannada.com/you-should-never-keep-a-broom-in-this-direction-at-home-for-any-reason/ ಕುರ್ಚಿ ಕಿತ್ತಾಟ ಮರೆ ಮಾಚೋಕೆ ಇದೆಲ್ಲ ಮಾಡ್ತಿದ್ದಾರೆ. ಇದು ಸರಿಯಲ್ಲ, ಈ ಜಾತಿ ಜನಗಣತಿ ವರದಿ ಅಂಗೀಕಾರ ಮಾಡಬಾರದು ಎಂದು ಒತ್ತಾಯಿಸಿದ್ದಾರೆ. ಈ ಜಾತಿ ಜನಗಣತಿ ವಿರುದ್ಧ ಬಿಜೆಪಿ, ಜೆಡಿಎಸ್, ಕಾಂಗ್ರೆಸ್‌ ಎಲ್ಲಾ ಒಕ್ಕಲಿಗ ಶಾಸಕರು ಪಕ್ಷಾತೀತವಾಗಿ ಧ್ವನಿ ಎತ್ತಬೇಕು. ನಮ್ಮ ಸಮುದಾಯಕ್ಕೆ…

Read More

ದೊಡ್ಡಬಳ್ಳಾಪುರ: ತಾಲೂಕಿನ ನಾಗದೇನಹಳ್ಳಿ ಬಳಿಯ ಗೀತಂ ಯೂನಿರ್ವಸಿಟಿಯಲ್ಲಿ ಸಿರೆನಾ ಟೆಕ್ನೋಲಾಜೀಸ್ ಸಹಭಾಗಿತ್ವದಲ್ಲಿ ವಿದ್ಯಾರ್ಥಿಗಳ ಸಾಮರ್ಥ್ಯ ಹೆಚ್ಚಿಸಲು ನೂತನವಾಗಿ ರೊಬೋಟಿಕ್‌ ಆರ್ಟಿಫಿಷಿಯಲ್ ಕೋರ್ಸ್ ಜೊತೆಗೆ ಆರ್ &‌ ಡಿ ವಿಭಾಗವನ್ನು ಎಂಜಿನಿಯರಿಂಗ್ ಕಾಲಿನ್ಸ್ ಏರೋಸ್ಪೇಸ್ ನ ಉಪಾಧ್ಯಕ್ಷ ಸವ್ಯಸಾಚಿ ಶ್ರೀನಿವಾಸ್ ಅವರು ಉದ್ಘಾಟನೆ ಮಾಡಿದರು. ಇದೆ ವೇಳೆ ಮಾಧ್ಯಮದವರೊಂದಿಗೆ ಗೀತಂ ಯೂನಿರ್ವಸಿಟಿಯ ಉಪಕುಲಪತಿ ಪ್ರೊ. ಕೆ.ಎನ್ ಎಸ್ ಆರ್ಚಾಯ ಮಾತನಾಡಿ, ಗೀತಂ ಯೂನಿರ್ವಸಿಟಿಯಲ್ಲಿ ಸಿರೆನಾ ಟೆಕ್ನೋಲಾಜೀಸ್ ಸಹಭಾಗಿತ್ವದಲ್ಲಿ ನೂತನವಾಗಿ ರೊಬೋಟಿಕ್‌, ಆರ್ಟಿಫಿಷಿಯಲ್ ಆರ್ &‌ ಡಿ ವಿಭಾಗವನ್ನು ಪ್ರಾರಂಭ ಮಾಡಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ತುಂಬಾ ಉಪಯೋಗವಾಗಲಿದೆ. ರೊಬೋಟಿಕ್‌, ಆರ್ಟಿಫಿಷಿಯಲ್ ಆರ್ &‌ ಡಿ ಕೋರ್ಸ್ ಮುಗಿಯುವದೊಳಗೆ ಒಳ್ಳೆ ಸಂಬಳ ಸಿಗುವ ಕೆಲಸ ಪಡೆಯಬಹುದು ಎಂದರು. ಸಿರೆನಾ ಟೆಕ್ನೋಲಾಜೀಸ್ ಕಂಪನಿಗೆ ನಮ್ಮ ಕಾಲೇಜಿನಿಂದ ಈಗಾಗಲೇ 11 ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, ಇದು ನಮ್ಮ ಯೂನಿರ್ವಸಿಟೆಗೆ ಹೆಮ್ಮೆಯ ಸಂಗತಿ. ಮುಂದೆ ಈ ಕೋರ್ಸ್ ಪಡೆದ ವಿದ್ಯಾರ್ಥಿಗಳಿಗೆ ಹೆಚ್ಚಿನ ಉದ್ಯೋಗ ಸಿಗುವಂತೆ ಆಗಲಿ ಎಂದು ಆಶಿಸಿದರು. ನಾಲ್ಕು ವರ್ಷಗಳ…

Read More

ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ನಾಳೆ ಕರ್ನಾಟಕ ರಾಜ್ಯದಾದಂತ ಕೋರ ಕನ್ನಡ ಚಲನಚಿತ್ರ ಬಿಡುಗಡೆ ಆಗಲಿದೆ ಕೋರ ಚಿತ್ರವು ಅದ್ದೂರಿಯಾಗಿ ಮೂಡಿ ಬಂದಿದೆ. ಇದು ಬುಡಕಟ್ಟು ಜನಾಂಗದಲ್ಲಿ ಯಾವ ರೀತಿ ವಾಸವಾಗಿದ್ದರು ಮತ್ತು ಅಲ್ಲಿ ರಾಕ್ಷಸನ ಪಾತ್ರ ಬಹಳ ಅದ್ದೂರಿಯಾಗಿ ಮೂಡಿಬಂದಿದೆ. ಕನ್ನಡ ಕೋರ ಸಿನಿಮಾದಲ್ಲಿ ಬಿಗ್ಗಬಾಸ ಖ್ಯಾತಿಯ ಮತ್ತು ರಿಯಾಲಿಟಿ ಶೋ ಸುನಾಮಿ ಕಿಟ್ಟಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು ನಟಿಯಾಗಿ ಚರಿಷ್ಮಾ. ನೀದೇಶಕರು ವರಟಾ ಶ್ರೀ. ನಿರ್ಮಾಣ ಮತ್ತು ವಿಲನ ಪಾತ್ರದಲ್ಲಿ ಪೀ ಮೂರ್ತಿ ಕಾಣಿಸಿಕೊಂಡಿದ್ದಾರೆ. ಇದು ಕನ್ನಡ ಚಲನಚಿತ್ರದಲ್ಲಿ ಅತ್ಯುತ್ತಮವಾಗಿ ಚಿತ್ರ ಮೂಡಿಬಂದಿದೆ. ರಾಜ್ಯದ ಜನ ಮತ್ತು ತೇರದಾಳ ಮತಕ್ಷೇತ್ರದ ಎಲ್ಲಾ ನೇಕಾರ ಬಾಂಧವರು ಈ ಚಿತ್ರವನ್ನು ನೋಡಿ. ನಾಳೆ ಗುರುವಾರ ಬೆಳಿಗ್ಗೆ 10.30 ಕ್ಕೆ ರಬಕವಿಯ ಮಲ್ಲಿಕಾರ್ಜುನ ಶ್ರೀನಿವಾಸ್ ಚಿತ್ರಮಂದಿರದಲ್ಲಿ ಮತ್ತು ಮಾಲಿಂಗಪುರ ಬೆಳಗಾವಿ ಗೋಕಾಕ ಜಮಖಂಡಿ ಹೀಗೆ ಕರ್ನಾಟಕ ರಾಜ್ಯದ ತುಂಬೆಲ್ಲ ಕೋರ ಚಿತ್ರ ನಾಳೆ ಬಿಡುಗಡೆ…

Read More

ಬೆಂಗಳೂರು: ರಜತ್‌ ವಿಚಾರಣೆಗೆ ಹಾಜರಾಗದೆ, ಮುಂಚಿತ ಅರ್ಜಿಯನ್ನೂ ಸಲ್ಲಿಸದೆ ಇರುವ ಕಾರಣ ನ್ಯಾಯಾಲಯ ಅವರ ವಿರುದ್ಧ ಜಾಮೀನು ರಹಿತ ವಾರೆಂಟ್‌ ಹೊರಡಿಸಿತ್ತು. ಇದೇ ಕಾರಣಕ್ಕೆ ಬಸವೇಶ್ವರನಗರ ಠಾಣೆ ಪೊಲೀಸರು ರಜತ್‌ನನ್ನ ಅರೆಸ್ಟ್‌ ಮಾಡಿದ್ದಾರೆ. ನಿನ್ನೆಯೇ ಅವರನ್ನ 24ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ರಜತ್​ಗೆ ಏಪ್ರಿಲ್ 29ರ  ವರೆಗೆ ನ್ಯಾಯಾಲಯ ಬಂಧನ ವಿಧಿಸಿತ್ತು. ಇದೀಗ ನಗರದ 24ನೇ ಎಸಿಜೆಎಂ ಕೋರ್ಟ್​ ಜಾಮೀನು ಮಂಜೂರು ಮಾಡಿ ರಜತ್ ಕಿಶನ್‌​​ಗೆ ರಿಲೀಫ್ ನೀಡಿದೆ. https://ainkannada.com/you-should-never-keep-a-broom-in-this-direction-at-home-for-any-reason/ ಮಚ್ಚು ಹಿಡಿದು ರೀಲ್ಸ್‌ ಮಾಡಿದ ಪ್ರಕರಣದಲ್ಲಿ ಬಿಗ್‌ಬಾಸ್‌ ಮಾಜಿ ಸ್ಪರ್ಧಿ ರಜತ್‌ ಕಿಶನ್‌ ಅವರನ್ನು ಪೊಲೀಸರು ನಿನ್ನೆ ಬಂಧಿಸಿ ಕೋರ್ಟ್​ಗೆ ಹಾಜರು ಪಡಿಸಿದ್ದರು. ಈ ವೇಳೆ ಕೋರ್ಟ್​ ರಜತ್‌ ಕಿಶನ್‌ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿತ್ತು. ಇದರ ಬೆನ್ನಲ್ಲೇ ರಜತ್ ಕಿಶನ್ ಅವರಿಗೆ ಇಂದು ಜಾಮೀನು ಮಂಜೂರು ಮಾಡಲಾಗಿದೆ. ಈ ರೀಲ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಜತ್‌ಗೆ ಮಾತ್ರ ವಾರೆಂಟ್ ಇತ್ತು. ವಿನಯ್‌ಗೌಡಗೆ ವಾರೆಂಟ್ ಇರಲಿಲ್ಲ. ಹೀಗಾಗಿ ವಿನಯ್ ಗೌಡ ಅವರಿಗೆ ನಿನ್ನೆಯೇ…

Read More

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರಿನ ಪೀಣ್ಯದ ಫ್ಲೈಓವರ್ ಮೇಲೆ ಲಾರಿಯೊಂದು ಏಕಾಏಕಿ ಹೊತ್ತಿ ಉರಿದ ಘಟನೆ ನಡೆದಿದೆ. ಲಾರಿಯಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಚಾಲಕ ಕೂಡಲೇ ಲಾರಿಯಿಂದ ಕೆಳಗಿಳಿದಿದ್ದಾರೆ. ಬೆಂಕಿ ಹೊತ್ತಿಕೊಂಡ ಹಿನ್ನೆಲೆ ನಗರದ ಕಡೆಗೆ ತಾತ್ಕಾಲಿಕವಾಗಿ ಪೀಣ್ಯ ಫ್ಲೈಓವರ್ ಬಂದ್ ಮಾಡಲಾಗಿದೆ. https://ainkannada.com/you-should-never-keep-a-broom-in-this-direction-at-home-for-any-reason/ ನಗರದ ಕಡೆಗೆ ಬರುವವರು ಫ್ಲೈಓವರ್ ಕೆಳಗಡೆ ಬರುವಂತೆ ಸೂಚನೆ ನೀಡಲಾಗಿದೆ. ಘಟನೆ ನಡೆದ ಕೂಡಲೇ ಸ್ಥಳೀಯರು 112ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.  

Read More

ಬೆಂಗಳೂರು: ಬೆಂಗಳೂರು ಮೂಲದ ನಾಯಿ ತಳಿಗಾರ ಎಸ್ ಸತೀಶ್ ಅವರು ವಿಶ್ವದ ಅತ್ಯಂತ ದುಬಾರಿ ತೋಳ ನಾಯಿಯನ್ನು 50 ಕೋಟಿ ರೂ.ಗೆ ಖರೀದಿಸಿರುವುದಾಗಿ ಹೇಳಿಕೊಂಡಿದ್ದರು. ಇದೀಗ ಶ್ವಾನಪ್ರೇಮಿ ಸತೀಶ್‌ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸತೀಶ್‌ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದ ಇಡಿ (ED) ಅಧಿಕಾರಿಗಳು ಇಂದು ಮನೆ ಮೇಲೆ ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ನಾಯಿಯ ಬೆಲೆ 50 ಕೋಟಿ ಅನ್ನೋದು ಸುಳ್ಳು ಎಂಬುದು ಗೊತ್ತಾಗಿದೆ. ಸದ್ಯ ಸ್ಥಳದಲ್ಲೇ ಬೀಡುಬಿಟ್ಟಿರುವ ಅಧಿಕಾರಿಗಳಿ ಪರಿಶೀಲನೆ ಮುಂದುವರಿಸಿದ್ದಾರೆ. https://ainkannada.com/you-should-never-keep-a-broom-in-this-direction-at-home-for-any-reason/ ಸತೀಶ್‌ 50 ಕೋಟಿ ರೂ. ಕೊಟ್ಟು ಶ್ವಾನವೊಂದನ್ನು ಖರೀದಿ ಮಾಡಿರುವಿದಾಗಿ ಹೇಳಿಕೊಂಡಿದ್ದರು. ಕಾಡು ತೋಳ ಮತತ್ತು ಕಕೇಶಿಯನ್‌ ಶೆಫರ್ಡ್‌ ತಳಿಯ ಮಿಶ್ರಣವಾಗಿರುವ ಇದನ್ನು ತೋಳನಾಯಿ ಎಂದೂ ಕರೆಯುತ್ತಾರೆ.

Read More

ಚಾಲೆಂಜಿಂಗ್‌ ಸ್ಟಾರ್‌ ಬಹುನಿರೀಕ್ಷಿತ ಸಿನಿಮಾ ಡೆವಿಲ್.‌ ರಾಜಸ್ಥಾನದಲ್ಲಿ ಮೂರನೇ ಹಂತದ ಚಿತ್ರೀಕರಣ ಮುಗಿಸಿಕೊಂಡು ಬಂದಿರುವ ಚಿತ್ರತಂಡವೀಗ ಸದ್ದಿಲ್ಲದೇ ಮತ್ತೆ ಶೂಟಿಂಗ್‌ ಅಖಾಡಕ್ಕೆ ಇಳಿದಿದೆ.ಕಳೆದ ಒಂದು ವಾರಗಳ ಕಾಲ ರಾಜಸ್ಥಾನದ ಜೈಪುರದಲ್ಲಿ ದರ್ಶನ್‌ ಹಾಗೂ ಇಡೀ ತಂಡ ಡೆವಿಲ್‌ ಶೂಟಿಂಗ್‌ ನಲ್ಲಿ ಭಾಗಿಯಾಗಿತ್ತು. ಅಲ್ಲಿಂದ ಶೂಟಿಂಗ್‌ ಮುಗಿಸಿ ವಾಸಪ್‌ ಆಗಿದ್ದ ಚಿತ್ರತಂಡ ನಾಲ್ಕನೇ ಹಂತದ ಚಿತ್ರೀಕರಣಕ್ಕೆ ಹೈದ್ರಾಬಾದ್‌ ಗೆ ಹೋಗಲಿದೆ ಎನ್ನಲಾಗಿತ್ತು. ಆದರೆ ಸದ್ದಿಲ್ಲದೇ ಬೆಂಗಳೂರಿನಲ್ಲಿಯೇ ಡೆವಿಲ್‌ 4ನೇ ಹಂತದ ಚಿತ್ರೀಕರಣ ನಡೆಸಲಾಗುತ್ತಿದೆ. ಡೆವಿಲ್‌ ಲುಕ್‌ ನಲ್ಲಿ ದಾಸ ಸಖತ್‌ ಆಗಿ ಕಾಣಿಸಿಕೊಂಡಿದ್ದಾರೆ. ಶುಭ್ರ ಬಿಳಿಬಣ್ಣದ ಬಟ್ಟೆಯಲ್ಲಿ ಸಖತ್‌ ಸ್ಟೈಲೀಶ್‌ ಆಗಿ ದರ್ಶನ್‌ ಮಿಂಚಿದ್ದು, ಅವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಪ್ರಕಾಶ್‌ ವೀರ್‌ ನಿರ್ದೇಶನದಲ್ಲಿ ಡೆವಿಲ್‌ ಸಿನಿಮಾ ತಯಾರಾಗುತ್ತಿದೆ. ದರ್ಶನ್‌ ಗೆ ಜೋಡಿಯಾಗಿ ಯುವ ನಟಿ ರಚನಾ ರೈ ಅಭಿನಯಿಸುತ್ತಿದ್ದಾರೆ. ಈ ವರ್ಷವೇ ಡೆವಿಲ್‌ ಸಿನಿಮಾ ತೆರೆಗೆ ಬರಲಿದೆ ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿದೆ.

Read More