ಚಿತ್ರರಂಗಕ್ಕೆ ನೂರಾರು ಕನಸ್ಸುಗಳನ್ನು ಕಟ್ಟಿಕೊಂಡು ಬರುವ ಹೊಸಬರ ಮೊದಲ ಹೆಜ್ಜೆಯೇ ಕಿರುಚಿತ್ರ ಇಲ್ಲ ಆಲ್ಬಂ ಸಾಂಗ್. ಇಲ್ಲಿಂದಲೇ ತಮ್ಮ ಪ್ರತಿಭೆಯ ಅನಾವರಣಕ್ಕೆ ಹೊಸಬರು ವೇದಿಕೆ ರೂಪಿಸಿಕೊಳ್ಳುತ್ತಾರೆ. ಕೆಲವರಂತೂ ಚೆಂದದ ಹಾಡಿನ ಮೂಲಕ ಚಮತ್ಕಾರ ಮಾಡಿ ಮೋಡಿ ಮಾಡುತ್ತಾರೆ. ಸದ್ಯ ತೇಲುತಾ ಸಾಗಿದೆ ಅಂತಾ ಕುಣಿದು ಎಲ್ಲರನ್ನೂ ಸಂತೋಷ್ ಮಂತ್ರ ಮುಗ್ದರನ್ನಾಗಿ ಮಾಡುತ್ತಿದ್ದಾರೆ. ಕನ್ನಡದಲ್ಲಿ ಹೊಸತಂಡವೊಂದು ಹೊಸ ಆಲ್ಬಂ ಮಾಡಿದೆ. ಅದೇ ತೆಲುತಾ ಸಾಗಿದೆ. Wallis flicks ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿರುವ ಈ ಗೀತೆಗೆ ಸಾಕಷ್ಟು ಮೆಚ್ಚುಗೆ ಸಿಕ್ಕುತ್ತಿದೆ. ಯುವ ಪ್ರತಿಭೆ ಸಂತೋಷ್ ನಿರ್ದೇಶಿಸಿ ತಾವೇ ಕೊರಿಯೋಗ್ರಫಿ ಮಾಡಿ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಸಿಂಧು ಆರ್ ಎಂಬುವವರು ಸೊಗಸಾದ ಪದ ಪೊಣಿಸಿ ಸಾಹಿತ್ಯ ಬರೆದಿದ್ದಾರೆ. ಸತ್ಯ ರಾಧಾಕೃಷ್ಣನ್ ಹಾಡಿಗೆ ಟ್ಯೂನ್ ಹಾಕಿ ಧ್ವನಿಯಾಗಿದ್ದಾರೆ. ಕೇಳಲಿಕ್ಕೆ ಸುಮಧುರ ಎನಿಸುವ, ನೋಡಲು ಹಿತವೆನಿಸುವ ʼತೇಲುತಾ ಸಾಗಿದೆʼ ಆಲ್ಬಂ ಸಾಂಗ್ ನ್ನು ಕನ್ನಡ Wallis flicks production ಸಂಸ್ಥೆ ನಿರ್ಮಿಸಿದೆ. ಒಂದೊಳ್ಳೆ ತಂಡ ಸೇರಿಕೊಂಡು ಕನ್ನಡದಕ್ಕೆ ಸೊಗಸಾದ…
Author: Author AIN
ಬೆಂಗಳೂರು: ಸಚಿವರಲ್ಲಿ ಜಾತಿ ಜಟಾಪಟಿ ಕಿಡಿಹಾರಿದೆ. ಲಿಂಗಾಯತ, ಒಕ್ಕಲಿಗರ ಪ್ರಬಲ ವಿರೋಧದ ನಡುವೆ ಸಿದ್ದರಾಮಯ್ಯ ಸರ್ಕಾರ ಕೈಗೊಳ್ಳುವ ನಿರ್ಧಾರದ ಮೇಲೆ ಎಲ್ಲರ ಕಣ್ಣು ನೆಟ್ಟಿದ್ದು, ಇದರ ಬೆನ್ನಲ್ಲೇ ಜಾತಿ ಜನಗಣತಿ ವರದಿ ಜಾರಿಯಾದ್ರೆ ಶಾಸಕ ಸ್ಥಾನಕ್ಕೂ ರಾಜೀನಾಮೆ ಕೊಡೋಕೆ ಸಿದ್ಧ ಎಂದು ಎ. ಮಂಜು ಸವಾಲ್ ಹಾಕಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಈ ಸರ್ಕಾರಕ್ಕೆ ಜಾತಿ ಜನಗಣತಿ ಮಾಡಲು ಅಧಿಕಾರ ಕೊಟ್ಟವರು ಯಾರು? ಜಾತಿ ಜನಗಣತಿ ಮಾಡಬೇಕಿದ್ದು ಕೇಂದ್ರ ಸರ್ಕಾರ. ಇದು ಜಾತಿಗಣತಿ ಅಲ್ಲ. ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ. ಇಂತಹ ಸಮೀಕ್ಷೆಯಲ್ಲಿ ಜಾತಿಗಣತಿ ಯಾಕೆ ಮಾಡಿದ್ದು ಯಾಕೆ? ಕಾಂಗ್ರೆಸ್‌ನಲ್ಲಿ ಕುರ್ಚಿ ಕಿತ್ತಾಟ ಇರೋದಕ್ಕೆ ಇವೆಲ್ಲ ಮಾಡ್ತಿದ್ದಾರೆ. https://ainkannada.com/you-should-never-keep-a-broom-in-this-direction-at-home-for-any-reason/ ಕುರ್ಚಿ ಕಿತ್ತಾಟ ಮರೆ ಮಾಚೋಕೆ ಇದೆಲ್ಲ ಮಾಡ್ತಿದ್ದಾರೆ. ಇದು ಸರಿಯಲ್ಲ, ಈ ಜಾತಿ ಜನಗಣತಿ ವರದಿ ಅಂಗೀಕಾರ ಮಾಡಬಾರದು ಎಂದು ಒತ್ತಾಯಿಸಿದ್ದಾರೆ. ಈ ಜಾತಿ ಜನಗಣತಿ ವಿರುದ್ಧ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಎಲ್ಲಾ ಒಕ್ಕಲಿಗ ಶಾಸಕರು ಪಕ್ಷಾತೀತವಾಗಿ ಧ್ವನಿ ಎತ್ತಬೇಕು. ನಮ್ಮ ಸಮುದಾಯಕ್ಕೆ…
ದೊಡ್ಡಬಳ್ಳಾಪುರ: ತಾಲೂಕಿನ ನಾಗದೇನಹಳ್ಳಿ ಬಳಿಯ ಗೀತಂ ಯೂನಿರ್ವಸಿಟಿಯಲ್ಲಿ ಸಿರೆನಾ ಟೆಕ್ನೋಲಾಜೀಸ್ ಸಹಭಾಗಿತ್ವದಲ್ಲಿ ವಿದ್ಯಾರ್ಥಿಗಳ ಸಾಮರ್ಥ್ಯ ಹೆಚ್ಚಿಸಲು ನೂತನವಾಗಿ ರೊಬೋಟಿಕ್ ಆರ್ಟಿಫಿಷಿಯಲ್ ಕೋರ್ಸ್ ಜೊತೆಗೆ ಆರ್ & ಡಿ ವಿಭಾಗವನ್ನು ಎಂಜಿನಿಯರಿಂಗ್ ಕಾಲಿನ್ಸ್ ಏರೋಸ್ಪೇಸ್ ನ ಉಪಾಧ್ಯಕ್ಷ ಸವ್ಯಸಾಚಿ ಶ್ರೀನಿವಾಸ್ ಅವರು ಉದ್ಘಾಟನೆ ಮಾಡಿದರು. ಇದೆ ವೇಳೆ ಮಾಧ್ಯಮದವರೊಂದಿಗೆ ಗೀತಂ ಯೂನಿರ್ವಸಿಟಿಯ ಉಪಕುಲಪತಿ ಪ್ರೊ. ಕೆ.ಎನ್ ಎಸ್ ಆರ್ಚಾಯ ಮಾತನಾಡಿ, ಗೀತಂ ಯೂನಿರ್ವಸಿಟಿಯಲ್ಲಿ ಸಿರೆನಾ ಟೆಕ್ನೋಲಾಜೀಸ್ ಸಹಭಾಗಿತ್ವದಲ್ಲಿ ನೂತನವಾಗಿ ರೊಬೋಟಿಕ್, ಆರ್ಟಿಫಿಷಿಯಲ್ ಆರ್ & ಡಿ ವಿಭಾಗವನ್ನು ಪ್ರಾರಂಭ ಮಾಡಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ತುಂಬಾ ಉಪಯೋಗವಾಗಲಿದೆ. ರೊಬೋಟಿಕ್, ಆರ್ಟಿಫಿಷಿಯಲ್ ಆರ್ & ಡಿ ಕೋರ್ಸ್ ಮುಗಿಯುವದೊಳಗೆ ಒಳ್ಳೆ ಸಂಬಳ ಸಿಗುವ ಕೆಲಸ ಪಡೆಯಬಹುದು ಎಂದರು. ಸಿರೆನಾ ಟೆಕ್ನೋಲಾಜೀಸ್ ಕಂಪನಿಗೆ ನಮ್ಮ ಕಾಲೇಜಿನಿಂದ ಈಗಾಗಲೇ 11 ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, ಇದು ನಮ್ಮ ಯೂನಿರ್ವಸಿಟೆಗೆ ಹೆಮ್ಮೆಯ ಸಂಗತಿ. ಮುಂದೆ ಈ ಕೋರ್ಸ್ ಪಡೆದ ವಿದ್ಯಾರ್ಥಿಗಳಿಗೆ ಹೆಚ್ಚಿನ ಉದ್ಯೋಗ ಸಿಗುವಂತೆ ಆಗಲಿ ಎಂದು ಆಶಿಸಿದರು. ನಾಲ್ಕು ವರ್ಷಗಳ…
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ನಾಳೆ ಕರ್ನಾಟಕ ರಾಜ್ಯದಾದಂತ ಕೋರ ಕನ್ನಡ ಚಲನಚಿತ್ರ ಬಿಡುಗಡೆ ಆಗಲಿದೆ ಕೋರ ಚಿತ್ರವು ಅದ್ದೂರಿಯಾಗಿ ಮೂಡಿ ಬಂದಿದೆ. ಇದು ಬುಡಕಟ್ಟು ಜನಾಂಗದಲ್ಲಿ ಯಾವ ರೀತಿ ವಾಸವಾಗಿದ್ದರು ಮತ್ತು ಅಲ್ಲಿ ರಾಕ್ಷಸನ ಪಾತ್ರ ಬಹಳ ಅದ್ದೂರಿಯಾಗಿ ಮೂಡಿಬಂದಿದೆ. ಕನ್ನಡ ಕೋರ ಸಿನಿಮಾದಲ್ಲಿ ಬಿಗ್ಗಬಾಸ ಖ್ಯಾತಿಯ ಮತ್ತು ರಿಯಾಲಿಟಿ ಶೋ ಸುನಾಮಿ ಕಿಟ್ಟಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು ನಟಿಯಾಗಿ ಚರಿಷ್ಮಾ. ನೀದೇಶಕರು ವರಟಾ ಶ್ರೀ. ನಿರ್ಮಾಣ ಮತ್ತು ವಿಲನ ಪಾತ್ರದಲ್ಲಿ ಪೀ ಮೂರ್ತಿ ಕಾಣಿಸಿಕೊಂಡಿದ್ದಾರೆ. ಇದು ಕನ್ನಡ ಚಲನಚಿತ್ರದಲ್ಲಿ ಅತ್ಯುತ್ತಮವಾಗಿ ಚಿತ್ರ ಮೂಡಿಬಂದಿದೆ. ರಾಜ್ಯದ ಜನ ಮತ್ತು ತೇರದಾಳ ಮತಕ್ಷೇತ್ರದ ಎಲ್ಲಾ ನೇಕಾರ ಬಾಂಧವರು ಈ ಚಿತ್ರವನ್ನು ನೋಡಿ. ನಾಳೆ ಗುರುವಾರ ಬೆಳಿಗ್ಗೆ 10.30 ಕ್ಕೆ ರಬಕವಿಯ ಮಲ್ಲಿಕಾರ್ಜುನ ಶ್ರೀನಿವಾಸ್ ಚಿತ್ರಮಂದಿರದಲ್ಲಿ ಮತ್ತು ಮಾಲಿಂಗಪುರ ಬೆಳಗಾವಿ ಗೋಕಾಕ ಜಮಖಂಡಿ ಹೀಗೆ ಕರ್ನಾಟಕ ರಾಜ್ಯದ ತುಂಬೆಲ್ಲ ಕೋರ ಚಿತ್ರ ನಾಳೆ ಬಿಡುಗಡೆ…
ಬೆಂಗಳೂರು: ರಜತ್ ವಿಚಾರಣೆಗೆ ಹಾಜರಾಗದೆ, ಮುಂಚಿತ ಅರ್ಜಿಯನ್ನೂ ಸಲ್ಲಿಸದೆ ಇರುವ ಕಾರಣ ನ್ಯಾಯಾಲಯ ಅವರ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಿತ್ತು. ಇದೇ ಕಾರಣಕ್ಕೆ ಬಸವೇಶ್ವರನಗರ ಠಾಣೆ ಪೊಲೀಸರು ರಜತ್‌ನನ್ನ ಅರೆಸ್ಟ್ ಮಾಡಿದ್ದಾರೆ. ನಿನ್ನೆಯೇ ಅವರನ್ನ 24ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ರಜತ್‌ಗೆ ಏಪ್ರಿಲ್ 29ರ ವರೆಗೆ ನ್ಯಾಯಾಲಯ ಬಂಧನ ವಿಧಿಸಿತ್ತು. ಇದೀಗ ನಗರದ 24ನೇ ಎಸಿಜೆಎಂ ಕೋರ್ಟ್ ಜಾಮೀನು ಮಂಜೂರು ಮಾಡಿ ರಜತ್ ಕಿಶನ್ಗೆ ರಿಲೀಫ್ ನೀಡಿದೆ. https://ainkannada.com/you-should-never-keep-a-broom-in-this-direction-at-home-for-any-reason/ ಮಚ್ಚು ಹಿಡಿದು ರೀಲ್ಸ್ ಮಾಡಿದ ಪ್ರಕರಣದಲ್ಲಿ ಬಿಗ್‌ಬಾಸ್ ಮಾಜಿ ಸ್ಪರ್ಧಿ ರಜತ್ ಕಿಶನ್ ಅವರನ್ನು ಪೊಲೀಸರು ನಿನ್ನೆ ಬಂಧಿಸಿ ಕೋರ್ಟ್ಗೆ ಹಾಜರು ಪಡಿಸಿದ್ದರು. ಈ ವೇಳೆ ಕೋರ್ಟ್ ರಜತ್ ಕಿಶನ್ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿತ್ತು. ಇದರ ಬೆನ್ನಲ್ಲೇ ರಜತ್ ಕಿಶನ್ ಅವರಿಗೆ ಇಂದು ಜಾಮೀನು ಮಂಜೂರು ಮಾಡಲಾಗಿದೆ. ಈ ರೀಲ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಜತ್‌ಗೆ ಮಾತ್ರ ವಾರೆಂಟ್ ಇತ್ತು. ವಿನಯ್‌ಗೌಡಗೆ ವಾರೆಂಟ್ ಇರಲಿಲ್ಲ. ಹೀಗಾಗಿ ವಿನಯ್ ಗೌಡ ಅವರಿಗೆ ನಿನ್ನೆಯೇ…
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಪೀಣ್ಯದ ಫ್ಲೈಓವರ್ ಮೇಲೆ ಲಾರಿಯೊಂದು ಏಕಾಏಕಿ ಹೊತ್ತಿ ಉರಿದ ಘಟನೆ ನಡೆದಿದೆ. ಲಾರಿಯಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಚಾಲಕ ಕೂಡಲೇ ಲಾರಿಯಿಂದ ಕೆಳಗಿಳಿದಿದ್ದಾರೆ. ಬೆಂಕಿ ಹೊತ್ತಿಕೊಂಡ ಹಿನ್ನೆಲೆ ನಗರದ ಕಡೆಗೆ ತಾತ್ಕಾಲಿಕವಾಗಿ ಪೀಣ್ಯ ಫ್ಲೈಓವರ್ ಬಂದ್ ಮಾಡಲಾಗಿದೆ. https://ainkannada.com/you-should-never-keep-a-broom-in-this-direction-at-home-for-any-reason/ ನಗರದ ಕಡೆಗೆ ಬರುವವರು ಫ್ಲೈಓವರ್ ಕೆಳಗಡೆ ಬರುವಂತೆ ಸೂಚನೆ ನೀಡಲಾಗಿದೆ. ಘಟನೆ ನಡೆದ ಕೂಡಲೇ ಸ್ಥಳೀಯರು 112ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಬೆಂಗಳೂರು: ಬೆಂಗಳೂರು ಮೂಲದ ನಾಯಿ ತಳಿಗಾರ ಎಸ್ ಸತೀಶ್ ಅವರು ವಿಶ್ವದ ಅತ್ಯಂತ ದುಬಾರಿ ತೋಳ ನಾಯಿಯನ್ನು 50 ಕೋಟಿ ರೂ.ಗೆ ಖರೀದಿಸಿರುವುದಾಗಿ ಹೇಳಿಕೊಂಡಿದ್ದರು. ಇದೀಗ ಶ್ವಾನಪ್ರೇಮಿ ಸತೀಶ್ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸತೀಶ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದ ಇಡಿ (ED) ಅಧಿಕಾರಿಗಳು ಇಂದು ಮನೆ ಮೇಲೆ ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ನಾಯಿಯ ಬೆಲೆ 50 ಕೋಟಿ ಅನ್ನೋದು ಸುಳ್ಳು ಎಂಬುದು ಗೊತ್ತಾಗಿದೆ. ಸದ್ಯ ಸ್ಥಳದಲ್ಲೇ ಬೀಡುಬಿಟ್ಟಿರುವ ಅಧಿಕಾರಿಗಳಿ ಪರಿಶೀಲನೆ ಮುಂದುವರಿಸಿದ್ದಾರೆ. https://ainkannada.com/you-should-never-keep-a-broom-in-this-direction-at-home-for-any-reason/ ಸತೀಶ್ 50 ಕೋಟಿ ರೂ. ಕೊಟ್ಟು ಶ್ವಾನವೊಂದನ್ನು ಖರೀದಿ ಮಾಡಿರುವಿದಾಗಿ ಹೇಳಿಕೊಂಡಿದ್ದರು. ಕಾಡು ತೋಳ ಮತತ್ತು ಕಕೇಶಿಯನ್ ಶೆಫರ್ಡ್ ತಳಿಯ ಮಿಶ್ರಣವಾಗಿರುವ ಇದನ್ನು ತೋಳನಾಯಿ ಎಂದೂ ಕರೆಯುತ್ತಾರೆ.
ಚಾಲೆಂಜಿಂಗ್ ಸ್ಟಾರ್ ಬಹುನಿರೀಕ್ಷಿತ ಸಿನಿಮಾ ಡೆವಿಲ್. ರಾಜಸ್ಥಾನದಲ್ಲಿ ಮೂರನೇ ಹಂತದ ಚಿತ್ರೀಕರಣ ಮುಗಿಸಿಕೊಂಡು ಬಂದಿರುವ ಚಿತ್ರತಂಡವೀಗ ಸದ್ದಿಲ್ಲದೇ ಮತ್ತೆ ಶೂಟಿಂಗ್ ಅಖಾಡಕ್ಕೆ ಇಳಿದಿದೆ.ಕಳೆದ ಒಂದು ವಾರಗಳ ಕಾಲ ರಾಜಸ್ಥಾನದ ಜೈಪುರದಲ್ಲಿ ದರ್ಶನ್ ಹಾಗೂ ಇಡೀ ತಂಡ ಡೆವಿಲ್ ಶೂಟಿಂಗ್ ನಲ್ಲಿ ಭಾಗಿಯಾಗಿತ್ತು. ಅಲ್ಲಿಂದ ಶೂಟಿಂಗ್ ಮುಗಿಸಿ ವಾಸಪ್ ಆಗಿದ್ದ ಚಿತ್ರತಂಡ ನಾಲ್ಕನೇ ಹಂತದ ಚಿತ್ರೀಕರಣಕ್ಕೆ ಹೈದ್ರಾಬಾದ್ ಗೆ ಹೋಗಲಿದೆ ಎನ್ನಲಾಗಿತ್ತು. ಆದರೆ ಸದ್ದಿಲ್ಲದೇ ಬೆಂಗಳೂರಿನಲ್ಲಿಯೇ ಡೆವಿಲ್ 4ನೇ ಹಂತದ ಚಿತ್ರೀಕರಣ ನಡೆಸಲಾಗುತ್ತಿದೆ. ಡೆವಿಲ್ ಲುಕ್ ನಲ್ಲಿ ದಾಸ ಸಖತ್ ಆಗಿ ಕಾಣಿಸಿಕೊಂಡಿದ್ದಾರೆ. ಶುಭ್ರ ಬಿಳಿಬಣ್ಣದ ಬಟ್ಟೆಯಲ್ಲಿ ಸಖತ್ ಸ್ಟೈಲೀಶ್ ಆಗಿ ದರ್ಶನ್ ಮಿಂಚಿದ್ದು, ಅವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರಕಾಶ್ ವೀರ್ ನಿರ್ದೇಶನದಲ್ಲಿ ಡೆವಿಲ್ ಸಿನಿಮಾ ತಯಾರಾಗುತ್ತಿದೆ. ದರ್ಶನ್ ಗೆ ಜೋಡಿಯಾಗಿ ಯುವ ನಟಿ ರಚನಾ ರೈ ಅಭಿನಯಿಸುತ್ತಿದ್ದಾರೆ. ಈ ವರ್ಷವೇ ಡೆವಿಲ್ ಸಿನಿಮಾ ತೆರೆಗೆ ಬರಲಿದೆ ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿದೆ.
ಪರಿಸರವಾದಿಗಳು ಪ್ಲಾಸ್ಟಿಕ್ ನಿಷೇಧಕ್ಕೆ ಕರೆ ನೀಡಿದ್ದಾರೆ, ಆದರೆ ಮನೆಗಳಲ್ಲಿ ಅವುಗಳ ಬಳಕೆಯನ್ನು ತಡೆಯಲಾಗುತ್ತಿಲ್ಲ. ಪ್ಲಾಸ್ಟಿಕ್ ಪಾತ್ರೆಗಳನ್ನು ಬಳಸುವುದು ಹಾನಿಕಾರಕ, ವಿಶೇಷವಾಗಿ ಬಿಸಿ ಆಹಾರಗಳಿಗೆ. ಯಾವುದೇ ಸಂದರ್ಭದಲ್ಲೂ ಬಿಸಿ ಆಹಾರಗಳನ್ನು ಪ್ಲಾಸ್ಟಿಕ್ ಪಾತ್ರೆಗಳಲ್ಲಿ ಸಂಗ್ರಹಿಸಬಾರದು. https://ainkannada.com/you-should-never-keep-a-broom-in-this-direction-at-home-for-any-reason/ ವಿಶೇಷವಾಗಿ ನೀವು ಪ್ಲಾಸ್ಟಿಕ್ ಪಾತ್ರೆಯಲ್ಲಿ ಬಿಸಿ ಅನ್ನವನ್ನು ಇಟ್ಟರೆ ಅದು ನಿಮ್ಮ ಜೀವಕ್ಕೆ ಅಪಾಯಕಾರಿ. ಅನೇಕ ಜನರು ಪ್ಲಾಸ್ಟಿಕ್ ಪಾತ್ರೆಗಳಿಗೆ ಒಗ್ಗಿಕೊಂಡಿದ್ದು, ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ಅವನ್ನೇ ಬಳಸುತ್ತಿದ್ದಾರೆ. ಬಿಸಿ ಅನ್ನವನ್ನು ಪ್ಲಾಸ್ಟಿಕ್ ಪಾತ್ರೆಗಳಲ್ಲಿ ಇಟ್ಟರೆ ಏನಾಗುತ್ತದೆ ಎಂದು ತಜ್ಞರ ಮಾತಿನಲ್ಲಿ ಇಲ್ಲಿ ತಿಳಿದುಕೊಳ್ಳೋಣ. ಬೇಯಿಸಿದ ಅನ್ನವನ್ನು ಪ್ಲಾಸ್ಟಿಕ್ ಪಾತ್ರೆಯಲ್ಲಿ ಏಕೆ ಸಂಗ್ರಹಿಸಬಾರದು? ಬಿಸಿ ಅನ್ನವನ್ನು ಪ್ಲಾಸ್ಟಿಕ್ ಪಾತ್ರೆಗಳಲ್ಲಿ ಸಂಗ್ರಹಿಸಬಾರದು. ಆಯುರ್ವೇದ ಆರೋಗ್ಯ ತಜ್ಞರ ಪ್ರಕಾರ, ಅಕ್ಕಿಯನ್ನು ಪ್ಲಾಸ್ಟಿಕ್ ಪಾತ್ರೆಗಳಲ್ಲಿ ಸಂಗ್ರಹಿಸಿದರೆ ಅದು ವಿಷಕಾರಿಯಾಗುತ್ತದೆ. ಶಾಖವು ಪ್ಲಾಸ್ಟಿಕ್ ಪಾತ್ರೆಗಳ ಒಳಗೆ ಆಫ್ಲಾಟಾಕ್ಸಿನ್‌ಗಳು ಮತ್ತು ಮೈಕೋಟಾಕ್ಸಿನ್‌ಗಳ ಉತ್ಪಾದನೆಗೆ ಕಾರಣವಾಗುತ್ತದೆ. ಇದು ಮೂತ್ರಪಿಂಡ ಮತ್ತು ಯಕೃತ್ತಿಗೆ ಹಾನಿಯನ್ನುಂಟುಮಾಡುತ್ತದೆ. ಇದಕ್ಕಾಗಿಯೇ ನೀವು ಅಕ್ಕಿಯನ್ನು ಪ್ಲಾಸ್ಟಿಕ್ ಪಾತ್ರೆಗಳಲ್ಲಿ ಸಂಗ್ರಹಿಸುವುದನ್ನು ತಪ್ಪಿಸಬೇಕು.…
ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಎರಡನೇ ಪುತ್ರಿ ಸದ್ದಿಲ್ಲದೇ ಎಂಗೇಜ್ ಆಗಿದ್ದಾರೆ. ಫಾರಿನ್ ಹುಡ್ಗನ ಪ್ರೀತಿಗೆ ಅಂಜನ್ ಸರ್ಜಾ ಒಪ್ಪಿಗೆ ಸೂಚಿಸಿದ್ದಾರೆ. ಇವರದ್ದು 13 ವರ್ಷದ ಪ್ರೀತಿ. ಆದರೆ ಆ ಹುಡುಗ ಯಾರು ಏನೋ ಅನ್ನೋದನ್ನು ಅಂಜನ್ ಸರ್ಜಾ ಹೇಳಿಕೊಂಡಿಲ್ಲ. ಇಟಲಿಯಲ್ಲಿ ಊಂಗುರ ಬದಲಿಸಿಕೊಂಡ ಫೋಟೋಗಳನ್ನು ಅರ್ಜುನ್ ಸರ್ಜಾ ಪುತ್ರಿ ಹಂಚಿಕೊಂಡಿದ್ದಾಳೆ. ಅಪ್ಪ ಅಮ್ಮನನ್ನು ಒಪ್ಪಿಸಿ ಅಂಜನ್ ಎಂಗೇಜ್ ಆಗಿದ್ದಾರೆ. ಸ್ಟೈಲೀಶ್ ಕಾಸ್ಟ್ಯೂಮ್ ತೊಟ್ಟು ಇಡೀ ಕುಟುಂಬ ಫೋಟೋಗೆ ಪೋಸ್ ಕೊಟ್ಟಿದೆ.ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಮೂಲತಃ ಕನ್ನಡದವರು. ಅವರು ಹೆಚ್ಚಾಗಿ ಮಿಂಚಿದ್ದು ಮಾತ್ರ ಕಾಲಿವುಡ್‌ನಲ್ಲಿ. ಸದ್ಯ ಅರ್ಜುನ್ ಕುಟುಂಬ ಚೆನ್ನೈನಲ್ಲೇ ನೆಲೆಸಿದೆ. ಹೀಗಿದ್ದರೂ ಅರ್ಜುನ್ ಅವರಿಗೆ ಕನ್ನಡದ ಮೇಲಿನ ಪ್ರೀತಿ ಮಾತ್ರ ಕಡಿಮೆಯಾಗಿಲ್ಲ. ಆಗಾಗ ಕನ್ನಡ ಸಿನಿಮಾಗಳನ್ನು ಸಹ ಮಾಡುತ್ತಿರುತ್ತಾರೆ. ಅರ್ಜುನ್ ಸರ್ಜಾಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಒಬ್ಬರು ಐಶ್ವರ್ಯಾ, ಇನ್ನೊಬ್ಬರು ಅಂಜನ್. ಈಗಾಗಲೇ ಐಶ್ವರ್ಯ ಕೂಡ ಹೊಸ ಬಾಳಿಗೆ ಹೆಜ್ಜೆ ಇಟ್ಟಿದ್ದು ಅದರ ಬೆನ್ನಲ್ಲೆ ಎರಡನೇ ಮಗಳು ಕೂಡ…