Author: Author AIN

ಟೀಮ್ ಇಂಡಿಯಾ ಉಪನಾಯಕಿ ಸ್ಮೃತಿ ಮಂಧಾನ ಅವರು ಏಕದಿನ ತ್ರಿಕೋನ ಸರಣಿಯ ಫೈನಲ್‌ನಲ್ಲಿ ಐತಿಹಾಸಿಕ ಶತಕ ಗಳಿಸಿದರು. ಶ್ರೀಲಂಕಾ ವಿರುದ್ಧದ ಈ ಪಂದ್ಯದಲ್ಲಿ ಅವರು ಅತ್ಯಂತ ವೇಗವಾಗಿ ರನ್ ಗಳಿಸಿದರು. ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಈ ಇನ್ನಿಂಗ್ಸ್‌ನೊಂದಿಗೆ, ಅವರು ಮಹಿಳಾ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ತಮ್ಮ ಹೆಸರನ್ನು ದಾಖಲಿಸಿದರು. ವಿಶ್ವ ಕ್ರಿಕೆಟ್‌ನಲ್ಲಿ ಈ ಹಿಂದೆ ಇಬ್ಬರು ಮಹಿಳಾ ಕ್ರಿಕೆಟಿಗರು ಮಾತ್ರ ಸಾಧಿಸಿದ್ದ ಸಾಧನೆಯನ್ನು ಸ್ಮೃತಿ ಮಂಧಾನ ಸಾಧಿಸಿದರು. https://ainkannada.com/do-you-know-the-history-and-significance-of-mothers-day-here-is-the-information/ ಸ್ಮೃತಿ ಮಂಧಾನ ಅವರ ಐತಿಹಾಸಿಕ ಶತಕ.. ಸ್ಮೃತಿ ಮಂಧಾನ ಪಂದ್ಯವನ್ನು ಬಹಳ ಎಚ್ಚರಿಕೆಯಿಂದ ಪ್ರಾರಂಭಿಸಿದರು. ಅದಾದ ನಂತರ ಅವಳು ವೇಗವಾಗಿ ಓಡಿದಳು. ಶ್ರೀಲಂಕಾ ವಿರುದ್ಧದ ಈ ಪಂದ್ಯದಲ್ಲಿ ಅವರು 101 ಎಸೆತಗಳಲ್ಲಿ 116 ರನ್ ಗಳಿಸಿದರು. ಅವರು 114.85 ಸ್ಟ್ರೈಕ್ ರೇಟ್‌ನಲ್ಲಿ ಈ ರನ್‌ಗಳನ್ನು ಗಳಿಸಿದರು. ಇದರಲ್ಲಿ 15 ಬೌಂಡರಿ ಮತ್ತು 2 ಸಿಕ್ಸರ್‌ಗಳು ಸೇರಿದ್ದವು. ವಿಶೇಷವೆಂದರೆ ಸ್ಮೃತಿ ಮಂಧಾನ ಶತಕ ತಲುಪಲು ಕೇವಲ 92 ಎಸೆತಗಳನ್ನು ಎದುರಿಸಿದರು. https://twitter.com/BCCIWomen/status/1921454460452081847…

Read More

ಕೋಲಾರ: ಸಮಾಜಕ್ಕೆ ಮಾರಕವಾಗುವ ಕೆಲಸದಲ್ಲಿ ಭಾಗಿಯಾದ ರೌಡಿ ಶೀಟರ್‌ಗಳನ್ನು ಭಾನುವಾರ ಕೋಲಾರ ನಗರ ಪೊಲೀಸರಿಂದ ಪೆರೇಡ್​ ನಡೆಸಲಾಯಿತು. ಕೋಲಾರ ನಗರ ಇನ್ಸ್​ಪೆಕ್ಟರ್​ ಸದಾನಂದ್ ಅವರು, https://ainkannada.com/do-you-know-the-history-and-significance-of-mothers-day-here-is-the-information/ ರೌಡಿಶೀಟರ್​ಗಳನ್ನು ಪೊಲೀಸ್ ಠಾಣೆಗೆ ಕರೆಯಿಸಿ ಎಚ್ಚರಿಕೆ ನೀಡಿದ್ದಾರೆ. ಪದೇ ಪದೇ ಅಪರಾಧ ಪ್ರಕರಣಗಳಲ್ಲಿ ಬಾಗಿಯಾಗುತ್ತಿರುವ ಹಿನ್ನೆಲೆ ಮಿತಿ ಮೀರಿದರೆ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಗಡಿಪಾರು ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

Read More

ಶ್ರೀಲಂಕಾದಲ್ಲಿ ಭೀಕರ ಬಸ್ ಅಪಘಾತ ಸಂಭವಿಸಿದೆ. ಶ್ರೀಲಂಕಾದಲ್ಲಿ ಭಾನುವಾರ ಪ್ರಯಾಣಿಕರ ಬಸ್ಸೊಂದು ಬಂಡೆಯಿಂದ ಉರುಳಿಬಿದ್ದ ಪರಿಣಾಮ ಕನಿಷ್ಠ 21 ಜನರು ಸಾವನ್ನಪ್ಪಿದ್ದಾರೆ ಎಂದು ನಂಬಲಾಗಿದೆ. ಅಪಘಾತದಲ್ಲಿ 30 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊತ್ಮಲೆ ನಡುವಿನ ಗುಡ್ಡಗಾಡು ಪ್ರದೇಶದ ಮೂಲಕ ಬಸ್ ಚಲಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. https://ainkannada.com/do-you-know-the-history-and-significance-of-mothers-day-here-is-the-information/ ಚಾಲಕನ ನಿಯಂತ್ರಣ ತಪ್ಪಿದ ಕಾರಣ ಬಸ್ ಕಣಿವೆಗೆ ಉರುಳಿ ಬಿದ್ದಿದೆ ಎಂದು ತಿಳಿದುಬಂದಿದೆ. ಬೌದ್ಧ ಯಾತ್ರಿಕರೊಂದಿಗೆ ಪ್ರಯಾಣಿಸುತ್ತಿದ್ದ ಬಸ್‌ನಲ್ಲಿ ಸುಮಾರು 75 ಜನರು ಇದ್ದರು ಎಂದು ವರದಿಯಾಗಿದೆ. ದಕ್ಷಿಣದ ಯಾತ್ರಾ ಸ್ಥಳವಾದ ಕತರಗಮದಿಂದ ವಾಯುವ್ಯ ಪಟ್ಟಣವಾದ ಕುರುನಗರಕ್ಕೆ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಬಸ್ 100 ಮೀಟರ್ ಬಂಡೆಯಿಂದ ಕೆಳಗೆ ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Read More

ಬೆಳಗಾವಿ: ಪಾಕಿಸ್ತಾನದವರು ಸಾಯುವವರೆಗೂ ನಮಗೆ ವೈರಿಗಳೇ ಎಂದು ಸಭಾಪತಿ ಬಸವರಾಜ್ ಹೊರಟ್ಟಿ ಅಸಮಾಧಾನ ಹೊರಹಾಕಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ಈ ಸಂಘರ್ಷದಲ್ಲಿ ಪಾಕಿಸ್ತಾನವನ್ನು ನಾಶ ಮಾಡಬೇಕಿತ್ತು. ಕದನ ವಿರಾಮದ ನಂತರ ಮತ್ತೆ ದಾಳಿ ಮಾಡಿದ್ದಾರೆ. https://ainkannada.com/do-you-know-the-history-and-significance-of-mothers-day-here-is-the-information/ ಬೇರೆಯವರ ಮಾತು ಕೇಳಿ ಪಾಕಿಸ್ತಾನದ ಜೊತೆ ನಡೆಸುತ್ತಿದ್ದ ಸಂಘರ್ಷ ಕೈ ಬಿಟ್ಟಿದ್ದು ತಪ್ಪು. ಪಾಕಿಸ್ತಾನದವರು ಸಾಯುವವರೆಗೂ ವೈರಿಗಳೇ. ಅವರು ಎಂದಿಗೂ ನಮಗೆ ಒಳ್ಳೆಯದು ಮಾಡಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪಾಕ್ ಹಾಗೂ ಭಾರತದ ನಡುವೆ ಸಂಧಾನದಲ್ಲಿ ಟ್ರಂಪ್ ಮಧ್ಯಸ್ಥಿಕೆ ವಹಿಸಲು ಅವರು ಯಾರು? ಅಮೆರಿಕದ ವಿಚಾರದಲ್ಲಿ ನಾವು ಏನಾದರೂ ಹೇಳಿದರೆ ಅವರು ಕೇಳುತ್ತಾರಾ? ಮೋದಿಯವರು ಕಠಿಣ ಹಾಗೂ ಗಟ್ಟಿ ನಿರ್ಧಾರ ತೆಗೆದುಕೊಳ್ಳಬೇಕಿತ್ತು. ಈ ವಿಚಾರದಲ್ಲಿ ಟ್ರಂಪ್ ಮಾತು ಕೇಳಿದ್ದು ತಪ್ಪು. ಭಯೋತ್ಪಾದಕರ ವಿಚಾರದಲ್ಲಿ ಎಲ್ಲಾ ದೇಶಗಳು ಶೃಂಗಸಭೆಯನ್ನ ನಡೆಸಿ ಭಯೋತ್ಪಾದಕರನ್ನು ನಾಶ ಮಾಡಬೇಕು ಎಂದು ಒತ್ತಾಯಿಸಿದರು.  

Read More

ಇಂದು, 11 ಮೇ 2025 ರಂದು ವಿಶ್ವ ತಾಯಂದಿರ ದಿನ. ಜಗತ್ತಿನಲ್ಲಿ ತಾಯಿಯ ಸ್ಥಾನ ವಿಶಿಷ್ಠ ಹಾಗೂ ವಿಶೇಷ ಎಂಬ ಪ್ರಜ್ಞೆ ಜಗತ್ತಿನ ಬಹುತೇಕ ಎಲ್ಲಾ ಭಾಗಗಳಲ್ಲಿಯೂ ಇದೆ. ಇಂದು ಎಲ್ಲಾ ಕಡೆ ತಾಯಂದಿರ ದಿನವನ್ನು ಆಚರಿಸುತ್ತಿದ್ದಾರೆ. ಜನಸಾಮಾನ್ಯರು, ಸಿನಿಮಾ ತಾರೆಯರು ಹಾಗೂ ಎಲ್ಲಾ ಕ್ಷೇತ್ರಗಳ ಪ್ರತಿಭಾನ್ವಿತರು ಎಂಬ ಯಾವುದೇ ಬೇಧ-ಭಾವ ಇಲ್ಲದೇ ತಾಯಂದಿರ ದಿನವನ್ನು ಆಚರಣೆ ಮಾಡಲಾಗುತ್ತಿದೆ. View this post on Instagram A post shared by Radhika Pandit (@iamradhikapandit) ಅದೇ ರೀತಿ ಮುದ್ದಾದ ಮಕ್ಕಳು ಮತ್ತು ಅಮ್ಮ ಮಂಗಳ ಪಂಡಿತ್ ಜೊತೆಗಿನ ಫೋಟೋ ಶೇರ್ ಮಾಡಿ, ಅವಳ ಕೈ ಹಿಡಿದು, ಕೈ ಹಿಡಿಯುವ ಕೈಯಾಗಿ ಬದಲಾಗುವವರೆಗೆ. ತಾಯ್ತನವು ಹೃದಯದಿಂದ ಹೃದಯಕ್ಕೆ ಹಾದುಹೋಗುವ ಕಥೆ. ಪಾಠಗಳಿಗೆ, ಪ್ರೀತಿಗೆ ಮತ್ತು ಪರಂಪರೆಗೆ ಕೃತಜ್ಞತೆ. ಪೀಳಿಗೆಗಳನ್ನು ರೂಪಿಸುವ ಮಹಿಳೆಯರಿಗೆ ಅಮ್ಮಂದಿರ ದಿನದ ಶುಭಾಶಯಗಳು ಎಂದು ರಾಧಿಕಾ ಪಂಡಿತ್ ಬರೆದುಕೊಂಡಿದ್ದಾರೆ. ಪಿಂಕ್ ಬಣ್ಣದ ಉಡುಗೆಯಲ್ಲಿ ನಟಿ ಮಿಂಚಿದ್ದಾರೆ.…

Read More

ಬೆಂಗಳೂರು ಗ್ರಾಮಾಂತರ: ಜಿಲ್ಲೆಯಲ್ಲಿ ಅಪರಾಧ ಪ್ರಕರಣ ಹೆಚ್ಚಾದ ಹಿನ್ನಲೆ ದೊಡ್ಡಬಳ್ಳಾಪುರ ಉಪ ವಿಭಾಗದ ರೌಡಿ ಪೆರೇಡ್ ಮಾಡಿಸಿ 248 ಕ್ಕೂ ಹೆಚ್ಚು ರೌಡಿ ಶೀಟರ್​ಗಳಿಗೆ ಸಜ್ಜನರಾಗಿ ಬದುಕುವಂತೆ ಎಚ್ಚರಿಕೆ ನೀಡಿದರು. ದೊಡ್ಡಬಳ್ಳಾಪುರ ನಗರ ಪೋಲೀಸ್ ಠಾಣೆಯ ಬಳಿ ಎಎಸ್ಪಿ ನಾಗರಾಜ್ ನೇತೃತ್ವದಲ್ಲಿ  ಪೆರೇಡ್ ನಡೆದಿದ್ದು, ಪೆರೇಡ್ ನಲ್ಲಿ 8 ಪೋಲೀಸ್ ಠಾಣಾ ವ್ಯಾಪ್ತಿಯ ರೌಡಿ ಶೀಟರ್ ಗಳು ಭಾಗಿಯಾಗಿದ್ದರು. https://ainkannada.com/do-you-know-the-history-and-significance-of-mothers-day-here-is-the-information/ 10 ವರ್ಷದಿಂದ ಯಾವುದೇ ಕೃತ್ಯದಲ್ಲಿ ಭಾಗಿಯಾಗದೇ ಇರುವವರನ್ನು ರೌಡಿ ಶೀಟರ್ ನಿಂದ ಬಿಡುಗಡೆ ಮಾಡುವ ಆಶ್ವಾಸನೆ ನೀಡಿದರು. 25 ಜನ ಕೊಲೆ ಆರೋಪದಲ್ಲಿ ಭಾಗಿಯಾಗಿದ್ದ ರೌಡಿ ಶೀಟರ್ ಗಳ ಮೇಲೆ ಹೆಚ್ಚಿನ ನಿಗಾ ಇಡಲಾಗುತ್ತದೆ. , ಯಾವುದೇ ಅಕ್ರಮದಲ್ಲಿ ಭಾಗಿಯಾದರೆ, ಕಲಹಗಳಲ್ಲಿ ಪಾಲ್ಗೊಂಡರೆ, ಡಾನ್ ಗಳ ಹಾಗೆ ಮಧ್ಯಸ್ಥಿಕೆ ವಹಿಸಿ ಜಗಳಗಳನ್ನು ಬಿಡಿಸಲು ಹೋದರೆ ತಕ್ಕ ಶಾಸ್ತಿ ಮಾಡಲಾಗುವುದು ಮಾಡಲಾಗುವುದು ಎಂದು ಎಎಸ್ಪಿ ನಾಗರಾಜ್ ಎಚ್ಚರಿಕೆ ನೀಡಿದರು.  

Read More

ನವದೆಹಲಿ: ಭಾರತ ಹಾಗೂ ಪಾಕಿಸ್ತಾನ ಎರಡೂ ರಾಷ್ಟ್ರಗಳು ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಅವರು ತಿಳಿಸಿದ್ದರು. ಇನ್ನೂ ಇದಕ್ಕೆ ಸಂಬಂಧ ಪಟ್ಟಂತೆ ಪ್ರಧಾನಿ ಮೋದಿಗೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಪತ್ರ ಬರೆದಿದ್ದಾರೆ. ಆಪರೇಷನ್ ಸಿಂಧೂರ ಮತ್ತು ಕದನ ವಿರಾಮದ ಬಗ್ಗೆ ಚರ್ಚಿಸಲು ಸಂಸತ್ತಿನ ವಿಶೇಷ ಅಧಿವೇಶನ ಕರೆಯುವಂತೆ ಒತ್ತಾಯಿಸಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್  ಮೊದಲು ಕದನ ವಿರಾಮವನ್ನು ಘೋಷಿಸಿದರು ಎಂದು ಪ್ರಶ್ನಿಸಿದ್ದಾರೆ. https://ainkannada.com/do-you-know-the-history-and-significance-of-mothers-day-here-is-the-information/ ಪತ್ರದಲ್ಲೇನಿದೆ? ಆತ್ಮೀಯ ಪ್ರಧಾನ ಮಂತ್ರಿಯವರೇ, ಸಂಸತ್ತಿನ ವಿಶೇಷ ಅಧಿವೇಶನವನ್ನು ತಕ್ಷಣವೇ ಕರೆಯಬೇಕೆಂಬ ವಿರೋಧ ಪಕ್ಷದ ಸರ್ವಾನುಮತದ ವಿನಂತಿಯನ್ನು ನಾನು ಪುನರುಚ್ಚರಿಸುತ್ತೇನೆ. ಪಹಲ್ಗಾಮ್ ಭಯೋತ್ಪಾದಕ ದಾಳಿ ನಡೆಯಿತು. ಪ್ರತೀಕಾರವಾಗಿ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಯಿತು. ಆದರೆ, ಇಂದಿನ ಕದನ ವಿರಾಮವನ್ನು ಅಮೆರಿಕ ಅಧ್ಯಕ್ಷ ಟ್ರಂಪ್ ಮೊದಲು ಘೋಷಿಸಿದರು. ಇದು ಮುಂಬರುವ ಸವಾಲುಗಳನ್ನು ಎದುರಿಸಲು ನಮ್ಮ ಸಾಮೂಹಿಕ ಸಂಕಲ್ಪವನ್ನು ಪ್ರದರ್ಶಿಸಲು ಒಂದು ಅವಕಾಶವಾಗಿದೆ. ನೀವು ಈ ಬೇಡಿಕೆಯನ್ನು…

Read More

ಉತ್ತರ ಪ್ರದೇಶ: ಬ್ರಹ್ಮೋಸ್ ಕ್ಷಿಪಣಿಯ ಶಕ್ತಿ ಬಗ್ಗೆ ಸಂದೇಹವಿದ್ದರೆ ಪಾಕಿಸ್ತಾನವನ್ನೇ ಕೇಳಿ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಹೇಳಿದ್ದಾರೆ. ಉತ್ತರ ಪ್ರದೇಶ ರಕ್ಷಣಾ ಕಾರಿಡಾರ್‌ನ ಲಕ್ನೋ ನೋಡ್‌ನಲ್ಲಿ ಬ್ರಹ್ಮೋಸ್ ಏರೋಸ್ಪೇಸ್ ಇಂಟಿಗ್ರೇಷನ್ ಮತ್ತು ಪರೀಕ್ಷಾ ಸೌಲಭ್ಯದ ಉದ್ಘಾಟನೆಯಲ್ಲಿ ಮಾತನಾಡಿದ ಸಿಎಂ, ಆಪರೇಷನ್ ಸಿಂಧೂರ್ ನಮಗೆ ಬ್ರಹ್ಮೋಸ್ ಕ್ಷಿಪಣಿಗಳ ಶಕ್ತಿಯನ್ನು ಸ್ಪಷ್ಟವಾಗಿ ತೋರಿಸಿಕೊಟ್ಟಿದೆ ಮತ್ತು ನಿಮಗೆ ಯಾವುದೇ ಸಂದೇಹವಿದ್ದರೆ, ಹೋಗಿ ಪಾಕಿಸ್ತಾನದ ಜನರನ್ನು ಕೇಳಿ ಎಂದು ಹೇಳಿದ್ದಾರೆ. https://ainkannada.com/do-you-know-the-history-and-significance-of-mothers-day-here-is-the-information/ ಉತ್ತರ ಪ್ರದೇಶದಲ್ಲಿ ಶೀಘ್ರದಲ್ಲೇ ಉತ್ಪಾದನೆ ಆರಂಭವಾಗಲಿರುವ ಬ್ರಹ್ಮೋಸ್ ಯೋಜನೆಗಾಗಿ ರಾಜ್ಯ ಸರ್ಕಾರ 200 ಎಕರೆ ಭೂಮಿಯನ್ನು ಮಂಜೂರು ಮಾಡಿದೆ ಎಂದು ಇದೇ ವೇಳೆ ಯೋಗಿ ಆದಿತ್ಯನಾಥ್ ಹೇಳಿದರು. ‘ಮುಂದೆ ನಡೆಯುವ ಯಾವುದೇ ಭಯೋತ್ಪಾದನಾ ಕೃತ್ಯವನ್ನು ಯುದ್ಧ ಕೃತ್ಯವೆಂದು ಪರಿಗಣಿಸಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಭಯೋತ್ಪಾದನೆಯನ್ನು ಸಂಪೂರ್ಣವಾಗಿ ಹತ್ತಿಕ್ಕುವವರೆಗೆ ಭಯೋತ್ಪಾದನೆಯ ಸಮಸ್ಯೆಯನ್ನು ಪರಿಹರಿಸಲಾಗುವುದಿಲ್ಲ. ಭಯೋತ್ಪಾದನೆಯನ್ನು ಹತ್ತಿಕ್ಕಲು, ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ನಾವೆಲ್ಲರೂ ಒಂದೇ ಧ್ವನಿಯಲ್ಲಿ ಒಟ್ಟಾಗಿ ಹೋರಾಡಬೇಕು’ ಎಂದು ಅವರು…

Read More

ಬೆಂಗಳೂರು: ನಮ್ಮ ದಾಳಿಗೆ ಹೆದರಿ ಪಾಕಿಸ್ತಾನ ಅಮೆರಿಕ ಕಾಲು ‌ಹಿಡಿದುಕೊಳ್ತು ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ನಮ್ಮ ದಾಳಿಗೆ ಹೆದರಿ ಪಾಕಿಸ್ತಾನ ಅಮೆರಿಕ ಮತ್ತು ಬೇರೆ ಬೇರೆ ದೇಶಗಳ ಕಾಲು ‌ಹಿಡಿದುಕೊಳ್ತು. ಈ ಯುದ್ಧ ನಿಲ್ಲಿಸಬೇಕು, ಯುದ್ಧ ಮುಂದುವರೆಸುವ ಶಕ್ತಿ‌ನಮಗಿಲ್ಲ ಅಂತ ಪಾಕಿಸ್ತಾನ ಕೇಳಿಕೊಳ್ತು ಎಂದ ಅವರು, ಅಮೆರಿಕ ಮಧ್ಯಸ್ಥಿಕೆ ಮೂಲಕ ಕದನ ವಿರಾಮ ನಂತರವೂ ಪಾಕಿಸ್ತಾನ ತನ್ನ ನರಿ ಬುದ್ಧಿ ತೋರಿಸಿದೆ. ನಾವು ದೇಶಕ್ಕಾಗಿ ನಡಿಗೆ ಮಾಡಿದ್ದೇವೆ, ನಮ್ಮ ಸೈನಿಕರ ಪರ ಇಡೀ ದೇಶ ನಿಂತಿದೆ. ತಿನ್ನೋಕೆ, ಕುಡಿಯೋಕೆ ಇಲ್ಲದ ದೇಶ ಪಾಕಿಸ್ತಾನ ನಿರಂತರ ತೊಂದರೆ ಕೊಡ್ತಿದೆ, ಇದು ನಿಲ್ಲಬೇಕು ಎಂದು ಹೇಳಿದರು. https://ainkannada.com/do-you-know-the-history-and-significance-of-mothers-day-here-is-the-information/ ಇನ್ನೂ ಪಾಕಿಸ್ತಾನದ ನಡೆಯನ್ನು ವಿಶ್ವ ನೋಡಿದೆ, ಈಗ ವಿಶ್ವವೇ ಯೋಚಿಸಬೇಕು ಎಂದು ಹೇಳಿದ ಬಿಜೆಪಿ ನಾಯಕಿ, ಶೋಭಾ ಕರಂದ್ಲಾಜೆ, ನಾವು ಸೂಚನೆ ಪಾಲಿಸಿದ್ದೇವೆ, ಪಾಕಿಸ್ತಾನ ಪಾಲಿಸಿಲ್ಲ. ನಾವು ಪಾಕಿಸ್ತಾನದಲ್ಲಿ ಉಗ್ರ ನೆಲೆಗಳ ಮೇಲೆ ದಾಳಿ ಮಾಡಿದ್ವಿ. ಪಾಕಿಸ್ತಾನದಲ್ಲಿ ಉಗ್ರರ…

Read More

ಬೀದರ್: ಏಪ್ರಿಲ್ 22ರಂದು ಉಗ್ರರು ಪಹಲ್ಗಾಮ್ ​ನಲ್ಲಿ ಅಮಾಯಕರ ಮೇಲೆ ದಾಳಿ ನಡೆಸಿ 26 ಮಂದಿಯನ್ನು ಹತ್ಯೆ ಮಾಡಿತ್ತು, ಇದಕ್ಕೆ ಪ್ರತೀಕಾರವಾಗಿ ಭಾರತವು ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಪಾಕಿಸ್ತಾನದ ಮೇಲೆ ಪ್ರತಿದಾಳಿ ನಡೆಸಿತ್ತು. ಇದಾದ ಬಳಿಕ ನಿರಂತರವಾಗಿ ದಾಳಿ ಪ್ರತಿದಾಳಿಗಳು ನಡೆಯುತ್ತಿವೆ. ಅಮೆರಿಕದ ಮಧ್ಯಸ್ಥಿಕೆಯಲ್ಲಿ ಎರಡೂ ದೇಶಗಳು ಕದನ ವಿರಾಮ ಘೋಷಿಸಿವೆ. ಆದರೂ ಪಾಕಿಸ್ತಾನ ತನ್ನ ವರಸೆಯನ್ನು ಬಿಡದೆ ಭಾರತದ ಮೇಲೆ ಗುಂಡಿನ ದಾಳಿ ನಡೆಸುತ್ತಿದೆ. https://ainkannada.com/do-you-know-the-history-and-significance-of-mothers-day-here-is-the-information/ ತಂಗಿ ಮದುವೆಗೆಂದು ರಜೆ ಮೇಲೆ ಬಂದಿದ್ದ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಚಂದಾಪುರ ಗ್ರಾಮದ ಬಸವಕಿರಣ ಸೇವೆಗೆ ವಾಪಸ್ ಆಗಿದ್ದಾರೆ. ಪಂಜಾಬ್‌ನ ಅಮೃತಸರದಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧ ಬಸವಕಿರಣ, ಏಪ್ರಿಲ್ 27ರಂದು ರಜೆ ಮೇಲೆ ಊರಿಗೆ ಬಂದಿದ್ದರು. ಇದೀಗ ಸೇನೆಯ ತುರ್ತು ಕರೆಯ ಮೇರೆಗೆ ಕರ್ತವ್ಯಕ್ಕೆ ಮರಳಿದ್ದಾರೆ. ಸಹೋದರ ಬಸವಕಿರಣಗೆ ಅಕ್ಕ ವಚನಶ್ರೀ ಶುಭ ಹಾರೈಸಿದ್ದಾರೆ.  

Read More