2025ನೇ ವರ್ಷ ಭಾರತೀಯ ಕ್ರಿಕೆಟ್ ತಂಡಕ್ಕೆ ಅನಿರೀಕ್ಷಿತ ತಿರುವುಗಳಿಂದ ತುಂಬಿದೆ. ಹತ್ತು ವರ್ಷಗಳ ನಂತರ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಕಳೆದುಕೊಂಡು, ಎರಡೇ ತಿಂಗಳಲ್ಲಿ 2025 ರ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದಂತಹ ಘಟನೆಗಳು ನಡೆದವು. ಇತ್ತೀಚಿನ ಟೂರ್ನಿಯನ್ನು ಒಟ್ಟಿಗೆ ಗೆದ್ದಿದ್ದರೂ, ಭಾರತದ ಕೋಚ್ ಗೌತಮ್ ಗಂಭೀರ್ ಮತ್ತು ನಾಯಕ ರೋಹಿತ್ ಶರ್ಮಾ ನಡುವೆ ಭಿನ್ನಾಭಿಪ್ರಾಯಗಳಿರಬಹುದು ಎಂಬ ವರದಿಗಳು ಹರಿದಾಡುತ್ತಿವೆ. https://ainkannada.com/if-you-get-nervous-pain-when-you-go-to-bed-at-night-dont-neglect-do-these-3-tests/ ನಿಜವಾಗಿಯೂ ಏನಾಯಿತು? ಭಾರತ ತಂಡ 12 ವರ್ಷಗಳ ನಂತರ ತವರಿನಲ್ಲಿ ಟೆಸ್ಟ್ ಸರಣಿಯನ್ನು ಸೋತಿತು. ನಂತರ, ಆಸ್ಟ್ರೇಲಿಯಾ ಪ್ರವಾಸದ ಸಮಯದಲ್ಲಿ, ರೋಹಿತ್ ಸ್ವತಃ ತಮ್ಮನ್ನು ಕೈಬಿಡಲಾಗಿದೆ ಎಂದು ಹೇಳಿದ್ದರು, ಆದರೆ ಕೆಲವರು ಗಂಭೀರ್ ಅವರನ್ನು ಕೈಬಿಟ್ಟಿದ್ದಾರೆ ಎಂದು ಹರಡಿದರು. ಬಿಸಿಸಿಐ ಭಾರತದ ಸಹಾಯಕ ಕೋಚ್ ಅಭಿಷೇಕ್ ನಾಯರ್ ಅವರನ್ನು ಐಪಿಎಲ್ 2025 ರಿಂದ ತೆಗೆದುಹಾಕಿದೆ. ನಾಯರ್ ರೋಹಿತ್ ಅವರಿಗೆ ತುಂಬಾ ಆಪ್ತರು. ಗಂಭೀರ್ ಮತ್ತು ರೋಹಿತ್ ನಡುವಿನ ಭಿನ್ನಾಭಿಪ್ರಾಯಗಳೇ ನಾಯರ್ ವಜಾಕ್ಕೆ ಕಾರಣ ಎಂಬ ಊಹಾಪೋಹಗಳು ಕೇಳಿಬಂದಿವೆ. ಟೆಸ್ಟ್ ನಾಯಕತ್ವದ ಭವಿಷ್ಯ? ಭಾರತ…
Author: Author AIN
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರ ದಾಳಿಯ ನಂತರದಲ್ಲಿ ಭಾರತ ಪಾಕಿಸ್ತಾನದ ಮೇಲೆ ತೀವ್ರ ಪ್ರತೀಕಾರದ ತೀರಿಸಿಕೊಂಡಿದೆ. ಈಗಾಗಲೇ ಪಾಕ್ ದಾಳಿ ನಡೆಸಿದ ಹದಿಮೂರು ದಿನಗಳಲ್ಲೇ ಪಾಕ್ ಮೇಲೆ ದಾಳಿ ನಡೆಸುವ ಮೂಲಕ ಸರಿಯಾದ ಉತ್ತರ ನೀಡಿದೆ. ಈ ಹಿಂದೆ ನಡೆದ ಬಾಲ್ ಕೋಟೆ ದಾಳಿ, ಪುಲ್ವಾಮ ದಾಳಿ ಹಾಗೂ ಇತ್ತೀಚೆಗೆ ನಡೆದ ಪಹಲ್ಗಾಮ್ ದಾಳಿ ಸೇರಿದಂತೆ ಈ ಮೂರು ದಾಳಿಗೂ 11, 12 ಹಾಗೂ 13 ದಿನಗಳಲ್ಲಿಯೇ ಭಾರತ ಪ್ರತೀಕಾರ ತೀರಿಸುವಲ್ಲಿ ಯಶಸ್ವಿಯಾಗಿದೆ. ಆಪರೇಷನ್ ಸಿಂಧೂರ್ ನಂತರ ಭಾರತೀಯ ಸೇನಾಧಿಕಾರಿಗಳು ತುರ್ತು ಪತ್ರಿಕಾಗೋಷ್ಠಿ ನಡೆಸಿದ್ದು, ಇಬ್ಬರು ಮಹಿಳಾ ಅಧಿಕಾರಿಗಳೇ ಮುಖ್ಯ ಮಾಹಿತಿ ನೀಡಿದರು. https://ainkannada.com/pakistan-shakes-in-just-23-minutes-how-was-indias-attack-what-happened-here-are-the-complete-details/ ಭಾರತ ವಿದೇಶಾಂಗ ಸಚಿವಾಲಯ ನಡೆಸಿದ ಸುದ್ದಿಗೋಷ್ಠಿಯಲ್ಲಿ, ಆಪರೇಷನ್ ಸಿಂಧೂರದ (Operation Sindoor) ಕುರಿತು ಮಹಿಳಾ ಅಧಿಕಾರಿಗಳಿಂದಲೇ ಮಾಹಿತಿ ಕೊಡಿಸಲಾಯಿತು. ಏಕೆಂದರೆ ಪಹಲ್ಗಾಮ್ ದಾಳಿಯಲ್ಲಿ 26 ಮಹಿಳೆಯರ ಸಿಂಧೂರ ಅಳಿಸಲಾಗಿತ್ತು, ಇದಕ್ಕೆ ಪ್ರತ್ಯುತ್ತರ ನೀಡಿದ ಭಾರತ ಮಹಿಳಾ ಅಧಿಕಾರಿಗಳಿಂದಲೇ ದಾಳಿಯ ವಿವರ ಕೊಡಿಸಿದೆ. ವಿಂಗ್…
ಬೆಂಗಳೂರು: ಪಾಕ್ ಉಗ್ರರ ವಿರುದ್ಧ ಭಾರತೀಯ ಸೇನೆಯು ಆಪರೇಷನ್ ಸಿಂಧೂರ್ ನಡೆಸಿದೆ. ಮಾಹಿತಿಗಳ ಪ್ರಕಾರ 80ಕ್ಕೂ ಹೆಚ್ಚು ಉಗ್ರರು ಹತರಾಗಿದ್ದಾರೆ. ಬೆನ್ನಲ್ಲೇ ಭಾರತದಲ್ಲಿ ಸಂಭ್ರಮಾಚರಣೆ ಜೋರಾಗಿದೆ. ಇದರ ನಡುವೆ ಕೇಂದ್ರ ಸರ್ಕಾರದಿಂದ ಸೂಚನೆ ಹಿನ್ನೆಲೆ ಭಾರತದ ವಿವಿಧೆಡೆ ವಿಮಾನ ಸಂಚಾರ ರದ್ದು ಮಾಡಲಾಗಿದೆ. ಅದೇ ರೀತಿಯಾಗಿ ಬೆಂಗಳೂರಿನಿಂದ ಬೇರೆ ರಾಜ್ಯಗಳಿಗೆ ತೆರಳಬೇಕಿದ್ದ ವಿಮಾನಗಳನ್ನು ರದ್ದು ಮಾಡಲಾಗಿದೆ. https://twitter.com/blrairport_kn/status/1920009551526691080 ಸದ್ಯ ದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಬೆಂಗಳೂರಿನಿಂದ ಜಮ್ಮು-ಕಾಶ್ಮೀರ, ರಾಜಸ್ಥಾನದ ಜೋಧಪುರ್, ಯುಪಿಯ ಅಯೋಧ್ಯೆ, ಲಖನೌ ಮತ್ತು ಘಾಜಿಯಾಬಾದ್ಗೆ ತೆರಳಬೇಕಿದ್ದ ವಿಮಾನಗಳ ಸಂಚಾರ ರದ್ದು ಮಾಡಲಾಗಿದೆ. https://ainkannada.com/pakistan-shakes-in-just-23-minutes-how-was-indias-attack-what-happened-here-are-the-complete-details/ ಈ ಬಗ್ಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ಟ್ವೀಟ್ ಮಾಡಿದ್ದು, ಕೆಲವು ವಾಯುಯಾನ ಪ್ರದೇಶಗಳಲ್ಲಿ ವಿಮಾನ ಹಾರಾಟಕ್ಕೆ ನಿರ್ಬಂಧ ಜಾರಿಯಲ್ಲಿದ್ದು, ಇದು ನಮ್ಮ ಸಂಪರ್ಕ ಜಾಲದಲ್ಲಿನ ಕೆಲವು ವಿಮಾನಗಳ ಸೇವೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಈ ಕಾರಣ, ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಮುನ್ನ, ತಾವು ಪ್ರಯಾಣ ಮಾಡಲಿರುವ…
ಬೆಂಗಳೂರು: ಪಾಕ್ ಉಗ್ರರ ವಿರುದ್ಧ ಭಾರತೀಯ ಸೇನೆಯು ಆಪರೇಷನ್ ಸಿಂಧೂರ್ ನಡೆಸಿದೆ. ಮಾಹಿತಿಗಳ ಪ್ರಕಾರ 80ಕ್ಕೂ ಹೆಚ್ಚು ಉಗ್ರರು ಹತರಾಗಿದ್ದಾರೆ. ಬೆನ್ನಲ್ಲೇ ಭಾರತದಲ್ಲಿ ಸಂಭ್ರಮಾಚರಣೆ ಜೋರಾಗಿದೆ. ಸೇನೆಯ ಪರಾಕ್ರಮದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶ್ಲಾಘಿಸಿದ್ದಾರೆ. ಕಾವೇರಿ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಸೇನಾಪಡೆ ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರಗಾಮಿಗಳ ನೆಲೆಗಳನ್ನು ನಾಶಗೊಳಿಸಿ ಪರಾಕ್ರಮ ಮೆರೆದಿದ್ದಾರೆ. ದೇಶದ ರಾಜ್ಯದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ರಾಷ್ಟ್ರೀಯ ಭದ್ರತೆ ವಿಷಯಲ್ಲಿ ಯಾವುದೇ ರಾಜಿ ಸಾಧ್ಯವಿಲ್ಲ. ಈ ದಾಳಿಯನ್ನು ಎಲ್ಲರೂ ಬೆಂಬಲಿಸಿದ್ದೇವೆ. ಇದು ಪಾಕಿಸ್ತಾನಕ್ಕೆ ಎಚ್ಚರಿಕೆಯ ಗಂಟೆಯಾಗಿದೆ. ನಮ್ಮ ಸರ್ಕಾರ ನೂರಕ್ಕೆ ನೂರರಷ್ಟು ಸೇನೆ ಕೈಗೊಂಡಿರುವ ಕ್ರಮವನ್ನು ಬೆಂಬಲಿಸುತ್ತದೆ ಎಂದರು. ಆಪರೇಷನ್ ಸಿಂಧೂರ ಹೆಸರಿನಲ್ಲಿ ಸುಮಾರು 9 ಉಗ್ರಗಾಮಿಗಳ ನೆಲೆಗಳನ್ನು ನಾಶಗೊಳಿಸಿದೆ. ಕೇವಲ ಉಗ್ರಗಾಮಿಗಳ ನೆಲೆಗಳ ಮೇಲೆ ಮಾತ್ರ ದಾಳಿ ನಡೆಸಲಾಗಿದೆ. ನಮ್ಮ ಸೈನಿಕರು ಉಗ್ರರ ನೆಲೆಗಳನ್ನು ಪತ್ತೆ ಹಚ್ಚಿ ದಾಳಿ ಮಾಡಿದ್ದು, ಅಮಾಯಕ ಜನರ ಸಾವು ನೋವು ತಪ್ಪಿಸಿದ್ದಾರೆ.…
ಗದಗ: ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆಯು ‘ಆಪರೇಷನ್ ಸಿಂಧೂರ್’ ಆರಂಭಿಸಿದೆ. ಪಾಕಿಸ್ತಾನದಲ್ಲಿರುವ ಒಟ್ಟು 9 ಭಯೋತ್ಪಾದಕ ಅಡಗುತಾಣಗಳ ಮೇಲೆ ಅಟ್ಯಾಕ್ ಮಾಡಲಾಗಿದೆ. ಇನ್ನೂ ಈ ವಿಚಾರವಾಗಿ ಸಚಿವ ಎಚ್ ಕೆ ಪಾಟೀಲ್ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ್ದಾರೆ.ಪಹಲ್ಗಾಮನಲ್ಲಿ ಉಗ್ರಗಾಮಿಗಳು ಪಾಕಿಸ್ತಾನ ಕುತಂತ್ರದಿಂದ ಭಾರತೀಯರ ಮೇಲೆ ನಡೆದ ದಾಳಿ ಮಾಡಿದ್ರು. https://ainkannada.com/if-you-get-nervous-pain-when-you-go-to-bed-at-night-dont-neglect-do-these-3-tests/ ಅದಕ್ಕೆ ತಕ್ಕ ಶಾಸ್ತಿಯಾಗಿ ಉಗ್ರಗಾಮಿಗಳ ತಾಣಗಳನ್ನು ಭಾರತ ಸೈನ್ಯ ಧ್ವಂಸ ಮಾಡಿದೆ. ಭಾರತವನ್ನ ಕೆಣಕಿದ್ರೆ ತಕ್ಕ ಶಾಸ್ತಿ ಆಗುತ್ತೆ ಅನ್ನೊದು ಅವರಿಗೆ ತಿಳಿದಿರುತ್ತೆ. ಆದ್ದರಿಂದ ಭಾರತೀಯ ಸೈನ್ಯದ ದಾಳಿ ಸಮಾಧಾನ ತಂದಿದೆ ಎಂದು ಹೇಳಿದರು. ಸುಮಾರು ಒಂಬತ್ತು ಕಡೆಗಳಲ್ಲಿ ಕಾರ್ಯಾಚರಣೆ ನಡೆದಿತ್ತು. ಸೂಕ್ತವಾದ ಪ್ರತಿಫಲ ಸಿಕ್ಕಿದೆ. ದೇಶದ ಜನ ಏನು ನಿರ್ಣಯ ಮಾಡಿ, ಒಕ್ಕಟ್ಟಿನ ಬಲವನ್ನು ಸೈನ್ಯಕ್ಕೆ ನೀಡಿದ್ದೇವೆ. ಸಮರ್ಥ ಬಲ ಮೂಡುವ ಹಾಗೆ ಸೂಕ್ತ ಕಾರ್ಯಾಚರಣೆ ಆಗಿದ್ದು, ಇದು ಯುದ್ಧ ಕಾಲ ಎಲ್ಲರೂ ಸನ್ನದ್ಧರಾಗಿ ಇರಬೇಕು ಎಂದರು.
ಗದಗ: ಪಾಕ್ ಉಗ್ರರ ವಿರುದ್ಧ ಭಾರತೀಯ ಸೇನೆಯು ಆಪರೇಷನ್ ಸಿಂಧೂರ್ ನಡೆಸಿದೆ. ಮಾಹಿತಿಗಳ ಪ್ರಕಾರ 80ಕ್ಕೂ ಹೆಚ್ಚು ಉಗ್ರರು ಹತರಾಗಿದ್ದಾರೆ. ಬೆನ್ನಲ್ಲೇ ಭಾರತದಲ್ಲಿ ಸಂಭ್ರಮಾಚರಣೆ ಜೋರಾಗಿದೆ. ಇದರ ಜೊತೆಗೆ ಗದಗನಲ್ಲಿ ಮಾಜಿ ಸೈನಿಕರ ಸಂಭ್ರಮ ಮನೆಮಾಡಿದ್ದು, ಮಾಜಿ ಸೈನಿಕರು ಸೇನಾ ಕಾರ್ಯಾಚರಣೆಯನ್ನು ಸಿಹಿ ಹಂಚುವ ಮೂಲಕ ಸಂಭ್ರಮಿಸುತ್ತಿದ್ದಾರೆ. ಈ ವೇಳೆ ಮಾತನಾಡಿದ ಮಾಜಿ ಸೈನಿಕರು, ಉಗ್ರರ ನೆಲೆಗಳನ್ನು ನೆಲಸಮ ಮಾಡುವ ಕೆಲಸ ಭಾರತಸ ಸೇನೆ ಶುರುಮಾಡಿದ್ದು ಬಹಳ ಖುಷಿಯಾಗುತ್ತಿದೆ, ಪಾಪಿ ಪಾಕಿಸ್ತಾನದ ನೀಚ ಕೃತ್ಯಗಳಿಗೆ ಕಡಿವಾಣ ಹಾಕಲೇಬೇಕಿತ್ತು, ಭಾರತದ ಬಲಿಷ್ಠ ಸೇನೆಯನ್ನು ಎದುರು ಹಾಕಿಕೊಳ್ಳುವ ಕೆಲಸ ಮಾಡಿದೆ, ಹೇಡಿಗಳಿಗೆ ತಕ್ಕ ಶಾಸ್ತಿಯಾಗಲಿದೆ ಎಂದರು. https://ainkannada.com/if-you-get-nervous-pain-when-you-go-to-bed-at-night-dont-neglect-do-these-3-tests/ ಅದಲ್ಲದೆ ಎಷ್ಟೋ ಬಾರಿ ಯುದ್ದದಲ್ಲಿ ಪಾಕಿಸ್ತಾನವನ್ನ ಬಗ್ಗು ಬಡಿದಿದ್ದೇವೆ. ಭಾರತದ ಜೊತೆಗೆ ಯುದ್ಧ ಮಾಡಿದ್ರೆ ಅರ್ಧ ಪಾಕಿಸ್ತಾನ ಮುಳುಗುತ್ತೆ ಅನ್ನೋ ಭಯ ಇದೆ. ಭಾರತಮಾತೆ ಮೇಲೆ ಕಣ್ಣು ಹಾಕಿದವ್ರನ್ನ ಸುಮ್ಮೆ ಬಿಡಬಾರ್ದು ಎಂದು ಹೇಳಿದರು.
ಬೆಂಗಳೂರು: ತಡರಾತ್ರಿ ಪಾಕಿಸ್ತಾನದಲ್ಲಿರುವ ಉಗ್ರರ 9 ಅಡುಗುತಾಣಗಳ ಮೇಲೆ ದಾಳಿ ನಡೆಸುವ ಮೂಲಕ ಪಹಲ್ಗಾಮ್‌ನಲ್ಲಿ ನಡೆದ ನರಮೇಧಕ್ಕೆ ಭಾರತ ತಕ್ಕ ಪಾಠ ಕಲಿಸಿದೆ. ಈ ಹಿನ್ನೆಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿ, “ಆಪರೇಷನ್ ಸಿಂಧೂರ್ ಹಿಂದಿನ ನಮ್ಮ ಸಶಸ್ತ್ರ ಪಡೆಗಳ ಅಸಾಧಾರಣ ಧೈರ್ಯಕ್ಕೆ ನಾನು ಸೆಲ್ಯೂಟ್ ಮಾಡುತ್ತೇನೆ. ಅವರ ವೀರೋಚಿತ ಕಾರ್ಯಾಚರಣೆ ಭಾರತ ಯಾವುದೇ ರೀತಿಯ ಭಯೋತ್ಪಾದನೆಯನ್ನು ಸಹಿಸುವುದಿಲ್ಲ ಎಂದು ಪುನರುಚ್ಚರಿಸುತ್ತದೆ” ಎಂದಿದ್ದಾರೆ. https://ainkannada.com/if-you-get-nervous-pain-when-you-go-to-bed-at-night-dont-neglect-do-these-3-tests/ “ಪಹಲ್ಗಾಮ್‌ನಲ್ಲಿ ನಡೆದ ಕ್ರೂರ ದಾಳಿ ಕೇವಲ ಮುಗ್ಧ ಜೀವಗಳ ಮೇಲೆ ನಡೆದದ್ದಲ್ಲ, ಅದು ಭಾರತದ ಕನಸುಗಳು ಮತ್ತು ಚೈತನ್ಯದ ಮೇಲಿನ ದಾಳಿಯಾಗಿದೆ. ನಮ್ಮ ಧೈರ್ಯಶಾಲಿ ಸೈನಿಕರ ಪ್ರತಿಯೊಂದು ಪ್ರಯತ್ನವೂ ದಾಳಿಯ ಸಂತ್ರಸ್ತರಿಗೆ, ಅವರ ಕುಟುಂಬಗಳಿಗೆ ಮತ್ತು ಶಾಂತಿ ಮತ್ತು ಮಾನವೀಯತೆಯಲ್ಲಿ ನಂಬಿಕೆ ಹೊಂದಿರುವ ಪ್ರತಿಯೊಬ್ಬ ಭಾರತೀಯರಿಗೆ ನ್ಯಾಯ ಒದಗಿಸುವ ಪ್ರತಿಜ್ಞೆಯಾಗಿದೆ” ಎಂದು ಹೇಳಿದ್ದಾರೆ. “ನಮ್ಮ ಪಡೆಗಳೊಂದಿಗೆ ಅಚಲವಾದ ಒಗ್ಗಟ್ಟನ್ನು ಪ್ರದರ್ಶಿಸಲು ಕರ್ನಾಟಕ ದೇಶದ ಜೊತೆ ನಿಲುತ್ತದೆ. ನಿಮ್ಮ ಶೌರ್ಯ,…
ಭಾರತ ದೇಶದ ನಾಗರಿಕರು ಭಾರತದ ಪರವಾಗಿದ್ದಾರೆ ಈ ಯುದ್ಧದಲ್ಲಿ ನಾವೇ ಗೆಲ್ಲುತ್ತೇವೆ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ಶಂಕರಲಿಂಗ ದೇವಸ್ಥಾನದಲ್ಲಿ ದೇವರಿಗೆ ಪೂಜೆ ಸಲ್ಲಿಸಿ ಮತ್ತು ಭಾರತ ದೇಶದ ಸೈನಿಕರಿಗೆ ಅಭಿನಂದನೆ ಸಲ್ಲಿಸಿದರು.ಜಮ್ಮು-ಕಾಶ್ಮೀರದ ರಾಜ್ಯದ ಅನಂತನಾಗ್ ಜಿಲ್ಲೆಯ ಪಹಲ್ಗಾಮದಲ್ಲಿ ಭಾರತದ ನಾಗರಿಕರ ಮೇಲೆ ಉಗ್ರರ ಅಟ್ಟಹಾಸ ಅದರ ಪ್ರತಿ ದಾಳಿಗೆ ಭಾರತ ದೇಶದ ಹೆಮ್ಮೆಯ ಸೈನಿಕರು ನೂರು ಉಗ್ರರು ಮತ್ತು ಮೂರು ಕಮಾಂಡೋ ಮತ್ತು 9 ಉಗ್ರರಿಗೆ ಆಶ್ರಯ ನೀಡಿದ ಕಟ್ಟಡಗಳ ದ್ವಂಸ ಮಾಡಿದ್ದಾರೆ. ಇದರಿಂದ ಪಾಕಿಸ್ತಾನದ ಉಗ್ರಗಾಮಿಗಳು ಪತರ ಗುಟ್ಟುತ್ತಿದ್ದಾರೆ.ಇದು ಭಾರತ ದೇಶದ ತಾಕತ್ತು ಭಾರತ ದೇಶದ ತಂಟೆಗೆ ಬಂದರೆ ನಿಮ್ಮನ್ನ ಸರ್ವನಾಶ ಮಾಡುವುದು ಶತಸಿದ್ಧ ಎಂದು ಸಂಜಯ್ ತೇಗಿ ಹೇಳಿದರು. https://ainkannada.com/if-you-get-nervous-pain-when-you-go-to-bed-at-night-dont-neglect-do-these-3-tests/ ಈಶ್ವರ ನಾಗರಾಳ ಮಾತನಾಡಿಎಲ್ಲಾ ರಾಷ್ಟ್ರಕ್ಕಿಂತಲೂ ಭಾರತ ದೇಶ ಬಹಳ ಅತಿ ಹೆಚ್ಚು ಸೈನಿಕರು ಮತ್ತು ಶಸ್ತ್ರಾಸ್ತ್ರಗಳನ್ನು ಹೊಂದಿದ ದೇಶ ಪಾಕಿಸ್ತಾನವನ್ನು ಸರ್ವನಾಶ ಮಾಡಲು ನಮಗೆ ಕೆಲವೇ ಗಂಟೆ ಸಾಕು ಭೂಪಟದಲ್ಲಿ ಹುಡುಕಿದರೂ ಪಾಕಿಸ್ತಾನ…
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ಶ್ರೀ ಶಂಕರಲಿಂಗ ದೇವಸ್ಥಾನ ಟ್ರಸ್ಟ್ ಇದರ ಅಡಿಯಲ್ಲಿ ನಡೇಯುವ ಜೂನ್ ತಿಂಗಳ ೫, ೬ ಮತ್ತು ೭, ೨೦೨೫ ರಂದು ಶ್ರೀ ಹನುಮಾನ್ ದೇವರ ನೀರೋಕಳಿ ಮತ್ತು ಹಾಲೋಕಳಿ ಜರುಗಲಿದೆ. ಅದಕ್ಕೆ ಪೂರ್ವಭಾವಿಯಾಗಿ ನಾಳೆ ತಾ. ೮-೫-೨೦೨೫ ಗುರುವಾರ ಬೆಳಿಗ್ಗೆ ೧೦ ಗಂಟೆಗೆ ಓಕುಳಿ ಹೊಂಡದ ಪೂಜಾ ಕೈಂಕರ್ಯವನ್ನು ನಗರದ ಶ್ರೀ ನಾಯಕರು, ಶ್ರೀ ಗೌಡರು, ಟ್ರಸ್ಟ್ ಸದಸ್ಯರು ಮತ್ತು ಎಲ್ಲ ಸದ್ಭಕ್ತರ ಸಮ್ಮುಖದಲ್ಲಿ ಜರುಗಲಿದೆ. https://ainkannada.com/if-you-get-nervous-pain-when-you-go-to-bed-at-night-dont-neglect-do-these-3-tests/ ಎಲ್ಲರೂ ಈ ಪೂಜೆಯಲ್ಲಿ ಪಾಲ್ಗೊಳ್ಳಬೇಕೆಂದು ತಮ್ಮೆಲ್ಲರಲ್ಲಿ ವಿನಂತಿ. ಇದೇ ತಿಂಗಳ ೧೬ ರಿಂದ ದೇವರಿಗೆ ಐದು ವಾರ ಹಿಡಿಯುವುದು ಇದೆ. ಜೂನ್ ೧೧ ರಂದು ಕಾರಹುಣ್ಣಿಮೆ ನಿಮಿತ್ತ ಎತ್ತುಗಳನ್ನು ಓಡಿಸುವುದು ಇದೇ ಎಂದು , ಶ್ರೀ ಶಂಕರಲಿಂಗ ದೇವಸ್ಥಾನ ಟ್ರಸ್ಟ್ ಅಧ್ಯಕ್ಷರು ಬಾಲಚಂದ್ರ ಉಮದಿ ಹೇಳಿದರು.
ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಸಾಹಿತಿ, ಲೇಖಕ ಜಿ ಎಸ್ ಸಿದ್ದಲಿಂಗಯ್ಯ (94) ಅವರು ಮಂಗಳವಾರ ರಾತ್ರಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಸಿದ್ದಲಿಂಗಯ್ಯ ಅವರು ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ರಾತ್ರಿ ನಿಧನರಾಗಿದ್ದರು. ಚಾಮರಾಜಪೇಟೆಯ ಲಿಂಗಾಯತರ ರುದ್ರಭೂಮಿಯಲ್ಲಿ ಇಂದು ಬುಧವಾರ ಮಧ್ಯಾಹ್ನ 3 ನಂತರ ಮೃತರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. https://ainkannada.com/if-you-get-nervous-pain-when-you-go-to-bed-at-night-dont-neglect-do-these-3-tests/ ಸಿದ್ದಲಿಂಗಯ್ಯ ಅವರು ಸಾಹಿತಿ, ಕವಿ ಹಾಗೂ ವಿಮರ್ಶಕರಾಗಿದ್ದ ಸಿದ್ದಲಿಂಗಯ್ಯನವರು, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದರು. ಸಾಹಿತ್ಯ ಅಕಾಡೆಮಿಯ ವಿಶೇಷ ಗೌರವ, ರಾಜ್ಯೋತ್ಸವ ಪ್ರಶಸ್ತಿ,ಬಸವ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ ಸೇರಿ ಹಲವು ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.