ಯಾದಗಿರಿ : ಜಿಲ್ಲಾ ಪೊಲೀಸ್ ಘಟಕದ ವತಿಯಿಂದ ಜಿಲ್ಲಾ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಮಕ್ಕಳಿಗಾಗಿ ಹಮ್ಮಿಕೊಂಡಿರುವ ಬೇಸಿಗೆ ಶಿಬಿರಕ್ಕೆ ಯಾದಗಿರಿ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಚಾಲನೆ ನೀಡಿದರು. ಅಧಿಕಾರಗಳ ಸಹಕಾರದೊಂದಿಗೆ ಒಂದು ತಿಂಗಳ ಕಾಲ ಶಿಬಿರ ಆಯೋಜಿಸಲಾಗಿದೆ. ಶಿಬಿರದಲ್ಲಿ ಯೋಗ, ವಾಲಿಬಾಲ್, ನೃತ್ಯ, ಸಂಗೀತ, ಚಿತ್ರಕಲೆ, ಕರಾಟೆ, ಯಕ್ಷಗಾನ, ದೊಡ್ಡಾಟ, ಹತ್ತಿರದ ಸ್ಥಳಕ್ಕೆ, ಮತ್ತಿತರ ಚಟುವಟಿಕೆಗಳನ್ನು ನಡೆಸುವುದಾಗಿ ಅವರು ತಿಳಿಸಿದರು. ಮಕ್ಕಳ ಪ್ರತಿಭೆಗೆ ವೇದಿಕೆ ಒದಗಿಸುವುದರ ಜತೆಗೆ ವ್ಯಕ್ತಿತ್ವ ರೂಪಿಸುವುದಕ್ಕಾಗಿ ಈ ವರ್ಷ ಉಚಿತ ಬೇಸಿಗೆ ತರಬೇತಿ ಶಿಬಿರ ಹಮ್ಮಿಕೊಂಡಿರುವುದು ಸಂತಸ ಮೂಡಿಸಿದೆ ಎಂದರು ಸಮಾರಂಭದಲ್ಲಿ ಡಿವೈಎಸ್ಪಿ ಭರತ್ ತಳವಾರ ಸಿಪಿಐ ಶ್ರೀದೇವಿ ಬಿರಾದಾರ್ ಮತ್ತು ಎಸ್ಪಿ ಕಚೇರಿಯ ಸಿಬ್ಬಂದಿ, ಮಕ್ಕಳು ಪಾಲ್ಗೊಂಡಿದ್ದರು. https://ainkannada.com/mla-janardhan-reddy-in-jail-again-delhi-cbi-court-sentences-him-to-7-years-in-prison/
Author: Author AIN
ಮಂಡ್ಯ: ಆಕೆ ಸುಂದರಿ ಚನ್ನಾಗಿ ಓದಿ ಟೀಚರ್ ಆಗಿದ್ದಳು, ಮದುವೆಯಾಗಿ ಮುದ್ದಾದ ಮಗು ಸಹ ಇತ್ತು. ಆದರೆ ಆಕೆಯೇ ಮಾಡಿದ ತಪ್ಪಿನಿಂದ ಯುವಕನ ಕೈಯಲ್ಲಿ ಬರ್ಬರವಾಗಿ ಕೊಲೆಯಾಗಿದ್ದಳು. ಇದೀಗ ಮಗಳನ್ನು ಕೊಂದ ಯುವಕನ ತಂದೆಯನ್ನು ಪ್ರತೀಕಾರಕ್ಕೆ ಆಕೆಯ ತಂದೆ ಕೊಲೆ ಮಾಡಿದ್ದಾನೆ. ಈ ಕುರಿತ ಕಂಪ್ಲೀಟ್ ಸ್ಟೋರಿ ಇಲ್ಲಿದೆ. ಈ ಫೋಟೋದಲ್ಲಿ ಕಾಣ್ತಾ ಇರುವಾಕೆಯ ಹೆಸರು ದೀಪಿಕಾ ಅಂತಾ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮಾಣಿಕ್ಯಹಳ್ಳಿ ಗ್ರಾಮದವಳು. ಈಕೆಯನ್ನು 2024 ಜನವರಿ 22 ರಂದು ಅದೇ ಗ್ರಾಮದ ನಿತೀಶ್ ಎಂಬಾತ ಬರ್ಬರವಾಗಿ ಕೊಲೆ ಮಾಡಿದ್ದ. ಇದೀಗ ಮಗಳ ಕೊಲೆಯ ಪ್ರತೀಕಾರಕ್ಕೆ ತಂದೆ ಕೊಲೆ ಆರೋಪಿಯ ತಂದೆಯನ್ನಯ ಕೊಲೆ ಮಾಡಿದ್ದಾನೆ. 2024 ಜನವರಿ 22 ರಂದು ಮಾಣಿಕ್ಯನಹಳ್ಳಿ ಗ್ರಾಮದ ದೀಪಿಕಾ ಎಂಬ ಟೀಚರ್ ನಾಪತ್ತೆಯಾಗಿದ್ದಳು. ಬಳಿಕ ಆಕೆ ಜನರಿ 23 ರಂದು ಮೇಲುಕೋಟೆಯ ಬೆಟ್ಟದಲ್ಲಿ ಶವವಾಗಿ ಪತ್ತೆಯಾಗಿದ್ದಳು. ಈ ವೇಳೆ ರಾಜ್ಯದಲ್ಲಿ ದೊಡ್ಡಮಟ್ಟದ ಸುದ್ದಿಯಾಗಿತ್ತು. ಬಳಿಕ ಮಂಡ್ಯ ಪೊಲೀಸರು ಮಾಣಿಕ್ಯನಹಳ್ಳಿ ಗ್ರಾಮದ ನಿತೀಶ್…
ದಳಪತಿ ವಿಜಯ್ ಸಿನಿಮಾ ರಂಗಕ್ಕೆ ವಿದಾಯ ಹೇಳಿ ರಾಜಕೀಯ ದಾಳ ಹಾಕೋದಿಕ್ಕೆ ಹೊರಟಿದ್ದಾರೆ. ಅದಕ್ಕಾಗಿ ಟಿವಿಕೆ- ತಮಿಳಗ ವೆಟ್ರಿ ಕಳಗಂ ಎಂಬ ಪಕ್ಷ ಸ್ಥಾಪಿಸಿದ್ದಾರೆ. ಪಕ್ಷ ಕಟ್ಟಿ ಜನ ಸಂಘಟಿಸುತ್ತಿರುವ ದಳಪತಿ ಅತ್ತ ಕೊನೆಯ ಸಿನಿಮಾ ಜನನಾಯಗನ್‌ನಲ್ಲಿಯೂ ಬ್ಯುಸಿಯಾಗಿದ್ದಾರೆ. ವಿಜಯ್ ಕಟ್ಟ ಕಡೆಯ ಚಿತ್ರ ಜನನಾಯಗನ್ ಶೂಟಿಂಗ್ ಸದ್ಯ ಕೊಡೈಕೆನಲ್ ನಲ್ಲಿ ನಡೆಯುತ್ತಿದೆ. ಬಹಳ ಅದ್ಧೂರಿಯಾಗಿ ಕೆವಿಎನ್ ಸಂಸ್ಥೆ ಈ ಸಿನಿಮಾ ನಿರ್ಮಾಣ ಮಾಡುತ್ತಿದೆ. ಜನನಾಯಗನ್‌ನಲ್ಲಿ ವಿಜಯ್ ಸಿನಿಮಾ ಮೂಲಕ ತಮ್ಮ ಪಕ್ಷವನ್ನು ಪ್ರಚಾರ ಮಾಡಲಿದ್ದಾರಂತೆ. ಅದೇಗೆ ಅಂತೀರಾ? ಮಾಜಿ ಪೊಲೀಸ್ ಅಧಿಕಾರಿ ಸಂಜಯ್ ವರದರಾಜನ್ ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಿಂದ ರಾಜಕೀಯಕ್ಕೆ ಎಂಟ್ರಿ ಕೊಡುವ ವಿಜಯ್ ಪಕ್ಷಕ್ಕೆ ತಮ್ಮದೇ ತಮಿಳಗ ವೆಟ್ರಿ ಕಳಗಂ ಹೆಸರನ್ನು ಬಳಸಿಕೊಂಡಿದ್ದಾರೆ ಎಂಬ ಬ್ರೇಕಿಂಗ್ ನ್ಯೂಸ್ ಈಗ ಹಬ್ಬಿದೆ. https://twitter.com/MoviesSingapore/status/1919634275600945271 ಜನನಾಯಗನ್ ಸಿನಿಮಾದಲ್ಲಿ ಟಿವಿಕೆ ಬಾವುಟ ಬಳಸಲಾಗುತ್ತಿದೆಯಂತೆ. ಅಲ್ಲದೇ ಕೈಯಲ್ಲಿ ಟಿವಿಕೆ ಟ್ಯಾಟು ಕೂಡ ಹಾಕಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಪಕ್ಕ ಕಮರ್ಷಿಯಲ್ ಎಮೋಷನಲ್ ಪಾಲಿಟಿಕ್ಸ್…
ದೊಡ್ಡಬಳ್ಳಾಪುರ: ದ್ವಿಚಕ್ರ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರ ಹೊರವಲಯದ ಫಾಕ್ಸ್ ಕಾನ್ ಸಮೀಪ ಇಂದು ಮಧ್ಯಾಹ್ನ ಸುಮಾರು 2 ಗಂಟೆಯಲ್ಲಿ ನಡೆದಿದೆ. ದೊಡ್ಡಬಳ್ಳಾಪುರ ತಾಲೂಕಿನ ಪಾಲ್ ಪಾಲ್ ದಿನ್ನೆ ಗ್ರಾಮದ ಚೆನ್ನಕೇಶವ (22) ಮೃತ ದುರ್ದೈವಿ.ಹಿಂಬದಿಯಲ್ಲಿ ಕುಳಿತಿದ್ದ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದು, https://ainkannada.com/where-are-your-house-keys-you-should-never-keep-them-in-this-direction-astrology-says-so/ ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ . ಫಾಕ್ಸ್ ಕಾನ್ ಕಂಪನಿಗೆ ಯುವತಿಯನ್ನು ಬಿಡಲು ಹೋದ ವೇಳೆ ಘಟನೆ ನಡೆದಿದೆ ಎನ್ನಲಾಗಿದೆ. ಸದ್ಯ ಮೃತದೇಹವನ್ನು ಶವಾಗಾರಕ್ಕೆ ರವಾನೆ ಮಾಡಲಾಗಿದ್ದು ವಿಶ್ವನಾಥಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮಾಜಿ ಸಚಿವ ಹಾಗೂ ಗಂಗಾವತಿ ಕ್ಷೇತ್ರದ ಶಾಸಕ ಜನಾರ್ದನ ರೆಡ್ಡಿಗೆ ಮತ್ತೊಮ್ಮೆ ಜೈಲುಪಾಲಾಗುವ ಭೀತಿ ಎದುರುರಾಗಿದೆ. ಓಎಂಸಿ ಅಕ್ರಮ ಮೈನಿಂಗ್ ಪ್ರಕರಣದ ವಿಚಾರವಾಗಿ ಇಂದು ದೆಹಲಿಯ ಸಿಬಿಐ ಕೋರ್ಟ್ ನಿಂದ ತೀರ್ಪು ಪ್ರಕಟವಾಗಿದ್ದು, https://ainkannada.com/where-are-your-house-keys-you-should-never-keep-them-in-this-direction-astrology-says-so/ ಜನಾರ್ದನ ರೆಡ್ಡಿ ಅಪರಾಧಿ ಎಂದು ಹೇಳಿದೆ. ಜನಾರ್ದನರೆಡ್ಡಿ , ಶ್ರೀನಿವಾಸರೆಡ್ಡಿ, ಸಿಬಿಐನ ಅಧಿಕಾರಿ ಲಕ್ಷ್ಮಿನಾರಾಯಣ, ಶ್ರೀನಿವಾಸ ರೆಡ್ಡಿ, ಅಲಿಖಾನ್, ಸಿಬಿಐನ ಅಧಿಕಾರಿ ಲಕ್ಷ್ಮಿನಾರಾಯಣ ಎಂದು ಕೋರ್ಟ್ ತೀರ್ಪು ಕೊಟ್ಟಿದ್ದಾರೆ. ಏಳು ವರ್ಷ ಜೈಲು ವರ್ಷ ಶಿಕ್ಷೆ ಪ್ರಕಟ! ಶಾಸಕ ಜನಾರ್ದನ ರೆಡ್ಡಿಗೆ ಸಿಬಿಐ ಕೋರ್ಟ್ ಏಳು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಜನಾರ್ದನ ರೆಡ್ಡಿ ಜೈಲಿ ಸೇರುತ್ತಿದ್ದಂತೆ ಅವರ ಶಾಸಕ ಸ್ಥಾನಕ್ಕೆ ಕುತ್ತು ಬರಲಿದೆ.
ದುಬೈನಲ್ಲಿ ಐಷಾರಾಮಿ ಜೀವನ ನಡೆಸುತ್ತಿರುವ ಭಾರತೀಯ ಬಿಲಿಯನೇರ್ ಬಲ್ವಿಂದರ್ ಸಿಂಗ್ ಸಾಹ್ನಿ ಅವರಿಗೆ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ 5 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ತನ್ನ ರೋಲ್ಸ್ ರಾಯ್ಸ್ ಕಾರಿನ ನಂಬರ್ ಪ್ಲೇಟ್ ಅನ್ನು ರೂ.ಗೆ ಖರೀದಿಸಿದ ಸಾಹ್ನಿ ಸೇರಿದಂತೆ 32 ಜನರಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿತು. 60 ಕೋಟಿ. ಇಷ್ಟೇ ಅಲ್ಲ, ದುಬೈ ನ್ಯಾಯಾಲಯವು ಆತನಿಗೆ ಗಡೀಪಾರು ಶಿಕ್ಷೆಯನ್ನೂ ವಿಧಿಸಿತು. ಇದರರ್ಥ ಸಾಹ್ನಿ ತನ್ನ ಜೈಲು ಶಿಕ್ಷೆ ಪೂರ್ಣಗೊಂಡಾಗ ದುಬೈ ತೊರೆಯಬೇಕಾಗುತ್ತದೆ. ಕಳೆದ ವರ್ಷ ಫೆಬ್ರವರಿಯಲ್ಲಿ ವಂಚನೆ ಪ್ರಕರಣವೊಂದರಲ್ಲಿ ಸಾಹ್ನಿಯನ್ನು ಬಂಧಿಸಲಾಗಿತ್ತು. ಯುಎಇ ಬ್ಯಾಂಕಿನಿಂದ 100 ಮಿಲಿಯನ್ ದಿರ್ಹಮ್‌ಗಳ ಸಾಲವನ್ನು ಸಾಹ್ನಿ ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪವೂ ಇದೆ. ಈ ಆರೋಪಗಳನ್ನು ಆಲಿಸಿದ ನಂತರ, https://ainkannada.com/where-are-your-house-keys-you-should-never-keep-them-in-this-direction-astrology-says-so/ ದುಬೈ ನ್ಯಾಯಾಲಯವು 5 ಲಕ್ಷ ದಿರ್ಹಮ್‌ಗಳ (ಸುಮಾರು 1.14 ಕೋಟಿ ರೂ.) ದಂಡವನ್ನು ವಿಧಿಸಿತು. ಇದರೊಂದಿಗೆ, 15 ಕೋಟಿ ದಿರ್ಹಮ್‌ಗಳನ್ನು (ಸುಮಾರು 344 ಕೋಟಿ ರೂ.) ಮುಟ್ಟುಗೋಲು ಹಾಕಿಕೊಳ್ಳುವಂತೆಯೂ ಆದೇಶಿಸಿದೆ. ಸಾಹ್ನಿಯ ಹಿರಿಯ…
ಮಾಜಿ ಸಚಿವ ಹಾಗೂ ಗಂಗಾವತಿ ಕ್ಷೇತ್ರದ ಶಾಸಕ ಜನಾರ್ದನ ರೆಡ್ಡಿಗೆ ಮತ್ತೊಮ್ಮೆ ಜೈಲುಪಾಲಾಗುವ ಭೀತಿ ಎದುರುರಾಗಿದೆ. ಓಎಂಸಿ ಅಕ್ರಮ ಮೈನಿಂಗ್ ಪ್ರಕರಣದ ವಿಚಾರವಾಗಿ ಇಂದು ದೆಹಲಿಯ ಸಿಬಿಐ ಕೋರ್ಟ್ ನಿಂದ ತೀರ್ಪು ಪ್ರಕಟವಾಗಿದ್ದು, ಜನಾರ್ದನ ರೆಡ್ಡಿ ಆಪರಾಧಿ ಎಂದು ಹೇಳಿದೆ. ಜನಾರ್ದನ ರೆಡ್ಡಿ, ಶ್ರೀನಿವಾಸರೆಡ್ಡಿ, , ಅಲಿಖಾನ್ ಅಪರಾಧಿ ಎಂದು ಕೋರ್ಟ್ ತೀರ್ಪು ಕೊಟ್ಟಿದೆ. ಏನಿದು ಪ್ರಕರಣ? ಆಂಧ್ರದಲ್ಲಿ ರಾಜಶೇಖರರೆಡ್ಡಿ ಕರ್ನಾಟಕದಲ್ಲಿ ಯಡಿಯೂರಪ್ಪ ಸರ್ಕಾರ ಆಡಳಿತದಲ್ಲಿದ್ದಾಗ ಓಎಂಸಿ ಅಕ್ರಮ ನಡೆದಿತ್ತು. ಆಂಧ್ರ ಮತ್ತು ಕರ್ನಾಟಕದ ಗಡಿ ಭಾಗಕ್ಕೆ ಹೊಂದಿಕೊಂಡ ಹೀರೆಹಾಳ್ ಮತ್ತು ಸಿದ್ದಾಪುರ ಬಳಿಯ ಓಬಳಾಪುರಂ ಬೆಟ್ಟದಲ್ಲಿ ಅದಿರಿನ ಅಕ್ರಮ ಗಣಿಕಾರಿಕೆಗೆ ನಡೆಸಲಾಗಿತ್ತು. ಅಂದಿನ ಸಮಯದಲ್ಲಿ ಶ್ರೀನಿವಾಸರೆಡ್ಡಿ ಓಎಂಸಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಜನಾರ್ದನರೆಡ್ಡಿ ಈ ಕಂಪನಿಯ ಮುಖ್ಯಸ್ಥರಾಗಿದ್ದರು. ಈ ಕಂಪನಿಗೆ ಗಣಿಗಾರಿಕೆ ಮಂಜೂರಾತಿ ನೀಡುವಲ್ಲಿ ಅರಣ್ಯ ಇಲಾಖೆ, ಗಣಿ ಇಲಾಖೆಯಿಂದಲೂ ಅಕ್ರಮ ನಡೆದಿತ್ತು. ನಿಗಧಿಗಿಂತ ಹೆಚ್ಚು ಅದರಿನ್ನು ಅಕ್ರಮವಾಗಿ ತೆಗೆದು ಸಾಗಾಣೆ ಮಾಡಲಾಗಿತ್ತು . ಕರ್ನಾಟಕದ ಗಡಿಯನ್ನು ಒತ್ತುವರಿ…
ಬ್ಯಾಂಕ್‌ಗಳು ಸಾಲವನ್ನು ತೆಗೆದುಕೊಳ್ಳುವ ಮೊದಲು ಗ್ರಾಹಕರ ಕ್ರೆಡಿಟ್ ಸ್ಕೋರ್ ಅನ್ನು ಮೊದಲು ನೋಡುತ್ತವೆ. ಸಾಲ ಪಡೆಯುವ ಮಾನದಂಡಗಳಲ್ಲಿ ಇದೂ ಒಂದು. ಸಾಲ ನೀಡಿದ ನಂತರ ಹಣವನ್ನು ಮರಳಿ ಪಡೆಯುವ ಸಂಭವನೀಯತೆ ಕಂಡುಬರುತ್ತದೆ. ನೀವು ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿದ್ದರೆ, ನೀವು ಸುಲಭವಾಗಿ ಸಾಲ ಪಡೆಯಬಹುದು. ಕ್ರೆಡಿಟ್ ಸ್ಕೋರ್ 300 ರಿಂದ ಪ್ರಾರಂಭವಾಗುತ್ತದೆ. 900ಕ್ಕೆ ಏರುತ್ತದೆ. ಕ್ರೆಡಿಟ್ ಸ್ಕೋರ್ ಅನ್ನು ವಹಿವಾಟಿನ ಇತಿಹಾಸ, ಎರವಲು ಮಾದರಿ, ಸಾಲ ಮರುಪಾವತಿ ಇತಿಹಾಸ, ಅಧಿಕಾರಾವಧಿ ಇತ್ಯಾದಿಗಳ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ. ಕ್ರೆಡಿಟ್ ಬ್ಯೂರೋಗಳು ಈ ಮಾಹಿತಿಯನ್ನು ಗ್ರಾಹಕರ ಆರ್ಥಿಕ ಚಟುವಟಿಕೆಯಿಂದ ಸಂಗ್ರಹಿಸುತ್ತವೆ. ಇದು ಹಿಂದಿನ ಸಾಲಗಳು, ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಇತಿಹಾಸ ಇತ್ಯಾದಿಗಳನ್ನು ಒಳಗೊಂಡಿರುತ್ತದೆ. https://ainkannada.com/where-are-your-house-keys-you-should-never-keep-them-in-this-direction-astrology-says-so/ ಕ್ರೆಡಿಟ್ ಸ್ಕೋರ್‌ನ ಮೂಲಗಳು ನಿಮ್ಮ ಕ್ರೆಡಿಟ್ ಸ್ಕೋರ್ ಮತ್ತು ಕ್ರೆಡಿಟ್ ರೇಟಿಂಗ್‌ನ ಪ್ರಯೋಜನಗಳನ್ನು ಪರಿಶೀಲಿಸುವ ಮೊದಲು, ಕ್ರೆಡಿಟ್ ಸ್ಕೋರ್ ಏನೆಂದು ಮೊದಲು ಅರ್ಥಮಾಡಿಕೊಳ್ಳೋಣ. ಕ್ರೆಡಿಟ್ ಸ್ಕೋರ್‌ಗಳು 300 ರಿಂದ 850 ರವರೆಗಿನ ಮೂರು-ಅಂಕಿಯ ಸಂಖ್ಯೆಗಳಾಗಿವೆ. ಸಾಲಗಾರರು ಸಾಲಗಾರನ…
ಇಂಡಿಯನ್ ಪ್ರೀಮಿಯರ್ ಲೀಗ್ನ 52ನೇ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡಗಳು ಮುಖಾಮುಖಿಯಾಗಿದ್ದವು. ಈ ಮ್ಯಾಚ್ನಲ್ಲಿ ಟಾಸ್ ಗೆದ್ದ ಮಹೇಂದ್ರ ಸಿಂಗ್ ಧೋನಿ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ಪರ ವಿರಾಟ್ ಕೊಹ್ಲಿ (62), ಜೇಕಬ್ ಬೆಥೆಲ್ (55) ಹಾಗೂ ರೊಮಾರಿಯೊ ಶೆಫರ್ಡ್ (53) ಅರ್ಧಶತಕ ಬಾರಿಸಿ ಮಿಂಚಿದ್ದರು. https://ainkannada.com/where-are-your-house-keys-you-should-never-keep-them-in-this-direction-astrology-says-so/ ಈ ಅರ್ಧಶತಕಗಳ ನೆರವಿನೊಂದಿಗೆ ಆರ್ಸಿಬಿ ತಂಡ 20 ಓವರ್ಗಳಲ್ಲಿ 213 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಚೆನ್ಣೈ ಸೂಪರ್ ಕಿಂಗ್ಸ್ ಪರ ಆಯುಷ್ ಮ್ಹಾತ್ರೆ 94 ರನ್ ಬಾರಿಸಿದರೆ, ರವೀಂದ್ರ ಜಡೇಜಾ ಅಜೇಯ 77 ರನ್ ಸಿಡಿಸಿದ್ದರು. ಇದಾಗ್ಯೂ ಅಂತಿಮ ಓವರ್ನಲ್ಲಿ 15 ರನ್ಗಳ ಗುರಿ ಪಡೆದ ಸಿಎಸ್ಕೆ ತಂಡವು 2 ರನ್ನಿಂದ ಸೋಲೊಪ್ಪಿಕೊಂಡಿತು. ಈ ಗೆಲುವನ್ನು ಅಭಿಮಾನಿಗಳು ಎಷ್ಟರ…
ಬೆಂಗಳೂರು: ಪನೀರ್, ಕಬಾಬ್, ಜಿಲೇಬಿ, ಶರಬತ್ತಿನ ಬಳಿಕ ಈಗ ಚಾಕೊಲೇಟ್, ಪೆಪ್ಪರ್ಮೆಂಟ್, ಜೆಲ್ಲಿಗಳ ಸರದಿ, ಬಾಯಿ ಚಪ್ಪರಿಸಿ ತಿನ್ನುವ ಚಾಕೊಲೇಟ್, ಪೆಪ್ಪರ್ಮೆಂಟ್, ಜೆಲ್ಲಿಗಳಲ್ಲಿ ಹಾನಿಕಾರಕ ರಾಸಾಯನಿಕಗಳ ಬಣ್ಣಗಳ ಬಳಕೆ ಮಾಡುವುತ್ತಿರುವ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ರಾಜ್ಯದಲ್ಲಿ ಅಲರ್ಟ್ ಆಗಿರುವ ಆಹಾರ ಇಲಾಖೆ ಸ್ಯಾಂಪಲ್ಸ್ ಪಡೆದು ಟೆಸ್ಟ್ಗೆ ಒಳಪಡಿಸಲು ಮುಂದಾಗಿದೆ. ಇವುಗಳ ಸೇವೆ ಮಕ್ಕಳ ಆರೋಗ್ಯಕ್ಕೆ ಕುತ್ತು ಬರುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ. ಹೌದು ಇವುಗಳ ಸೇವನೆಯಿಂದ ಕ್ಯಾನ್ಸರ್ ಸಹಿತ ಅಪಾಯಕಾರಿ ಕಾಯಿಲೆಗಳಿಗೆ ದಾರಿ ಮಾಡಿಕೊಡುವುದಲ್ಲದೇ, ಮಕ್ಕಳ ಆರೋಗ್ಯಕ್ಕೆ ಕುತ್ತು ಬರುವ ಸಾಧ್ಯತೆ ಇದೆ. ಈ ಬಗ್ಗೆ ಕೇಂದ್ರ ಎಫ್ಎಸ್ಎಸ್ಎಐ ಸೂಚನೆ ಬೆನ್ನಲೆ ರಾಜ್ಯದಲ್ಲಿ ಆಹಾರ ಇಲಾಖೆ ಅಲರ್ಟ್ ಆಗಿದ್ದು, ಸ್ಯಾಂಪಲ್ಸ್ ಪಡೆದು ಆಹಾರ ಇಲಾಖೆಯ ಲ್ಯಾಬ್ಗಳಲ್ಲಿ ಟೆಸ್ಟ್ಗೆ ಒಳಪಡಿಸಲು ಮುಂದಾಗಿದೆ. ಪೆಪ್ಪರಮೆಂಟ್, ಜೇಮ್ಸ್ ಮತ್ತು ಜೆಲ್ಲಿಸ್ಗಳಲ್ಲಿ ಕೃತಕ ಕಲರ್ ಬಳಕೆ ಮಾಡುತ್ತಿದ್ದು, ತಯಾರಿಕಾ ಘಟಕಗಳಲ್ಲಿ ಸ್ವಚ್ಛತೆ ಇರಲ್ಲ ಎನ್ನಲಾಗುತ್ತಿದೆ. https://ainkannada.com/where-are-your-house-keys-you-should-never-keep-them-in-this-direction-astrology-says-so/ ಚಾಕೊಲೇಟ್ಗಳ ತಯಾರಿಕೆಯಲ್ಲಿ ಕೆಲವು ರಾಸಾಯನಿಕಗಳ ಬಳಕೆ…