ಕಿಚ್ಚ ಸುದೀಪ್ ನಟನೆಯ ಬಿಲ್ಲಾ ರಂಗ ಬಾಷಾ ಸಿನಿಮಾದ ಶೂಟಿಂಗ್ ಶುರುವಾಗಿದ್ದು, ಮೊದಲ ಹಂತದ ಚಿತ್ರೀಕರಣ ಭರ್ಜರಿಯಾಗಿ ಸಾಗುತ್ತಿದೆ.. ಸುಮಾರು 20 ದಿನಗಳ ಮೊದಲ ಶೆಡ್ಯೂಲ್ನಲ್ಲಿ ಫೈಟ್ ಸೀಕ್ವೆನ್ಸ್ ಚಿತ್ರೀಕರಣ ನಡೆಸಲಾಗ್ತಿದೆ.. ಅಂದ್ಹಾಗೆ ಬೃಹತ್ ಸೆಟ್ ಒಂದರಲ್ಲಿ ಚಿತ್ರೀಕರಣ ನಡೀತಿದ್ದು, ಚಿತ್ರೀಕರಣದ ಸುತ್ತಲೂ ಟೈಟ್ ಸೆಕ್ಯೂರಿಟಿ ನೀಡಲಾಗಿದೆ.. ಚಿತ್ರೀಕರಣದಲ್ಲಿ ಯಾರೂ ಮೊಬೈಲ್ ಬಳಸದಂತೆ, ದೃಶ್ಯಗಳು ಲೀಕ್ ಆಗದಂತೆ ಎಚ್ಚರಿಕೆ ವಹಿಸಲಾಗ್ತಿದೆ. ಬಿಲ್ಲಾ ರಂಗ ಭಾಷಾ ನಾಯಕಿ ಯಾರು ಅನ್ನೋ ಪ್ರಶ್ನೆಗೆ ಒಂದು ಹಿಂಟ್ ಸಿಕ್ಕಿದೆ.. ಮೂಲಗಳ ಪ್ರಕಾರ ಮಿಸ್ ಇಂಡಿಯಾ 2024ರ ವಿನ್ನರ್ ನಿಖಿತಾ ಪೊರ್ವಲ್ ಕಿಚ್ಚನಿಗೆ ಜೋಡಿಯಾಗಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಈ ಸಿನಿಮಾದಲ್ಲಿ ಇಬ್ಬರು ನಾಯಕಿಯರಿದ್ದು ಮತ್ತೊಂದು ನಾಯಕಿಯ ಪಾತ್ರದಲ್ಲಿ ರುಕ್ಮಿಣಿ ವಸಂತ್ ನಟಿಸೋ ಸಾಧ್ಯತೆ ಹೆಚ್ಚಿದೆ. ಬಹುಭಾಷಾ ನಟಿ ಪೂಜಾ ಹೆಗ್ಡೆ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ ಎಂಬ ಗುಲ್ಲೆದಿತ್ತು. ಬಿಲ್ಲ ರಂಗ ಭಾಷಾ ಮೂಲಕ ಕನ್ನಡಕ್ಕೆ ಕರಾವಳಿ ಸುಂದ್ರಿ ಎಂಟ್ರಿಯಾಗಲಿದ್ದಾರೆ ಎಂಬ ಸಮಾಚಾರ ಹರಿದಾಡಿತ್ತು. ಈ ಪೂಜಾ…
Author: Author AIN
ರೋಹಿತ್ ಶರ್ಮಾ ಟಿ20 ಮಾದರಿಯಲ್ಲಿ ಮುಂಬೈ ಇಂಡಿಯನ್ಸ್ ಪರ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ಹೊಸ ಇತಿಹಾಸವನ್ನು ಸೃಷ್ಟಿಸಿದರು. ಉನಾದ್ಕತ್ ಎಸೆತದಲ್ಲಿ ಜಯದೇವ್ ಸಿಕ್ಸರ್ ಬಾರಿಸುವ ಮೂಲಕ ಮುಂಬೈ ಪರ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇಲ್ಲಿಯವರೆಗೆ, ರೋಹಿತ್ ಮುಂಬೈ ಪರ ಒಟ್ಟು 259 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ, ಇದರಲ್ಲಿ ಐಪಿಎಲ್ ಮತ್ತು ಚಾಂಪಿಯನ್ಸ್ ಲೀಗ್ ಪಂದ್ಯಗಳು ಸೇರಿವೆ. ಇದರೊಂದಿಗೆ ಅವರು ಈ ಹಿಂದೆ 258 ಸಿಕ್ಸರ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದ ಕೀರನ್ ಪೊಲಾರ್ಡ್ ಅವರನ್ನು ಹಿಂದಿಕ್ಕಿದರು. ಸೂರ್ಯಕುಮಾರ್ ಯಾದವ್ 127 ಸಿಕ್ಸರ್‌ಗಳೊಂದಿಗೆ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದರೆ, ಹಾರ್ದಿಕ್ ಪಾಂಡ್ಯ 115 ಸಿಕ್ಸರ್‌ಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ. ಐದನೇ ಸ್ಥಾನದಲ್ಲಿ ಇಶಾನ್ ಕಿಶನ್ 106 ಸಿಕ್ಸರ್‌ಗಳೊಂದಿಗೆ ಇದ್ದಾರೆ, ಆದರೆ ಅವರು ಪ್ರಸ್ತುತ ಸನ್‌ರೈಸರ್ಸ್ ಹೈದರಾಬಾದ್ ಪರ ಆಡುತ್ತಿದ್ದಾರೆ. https://ainkannada.com/are-you-keeping-these-fruits-in-the-fridge-do-you-know-how-much-damage-this-can-do-to-your-body/ ರೋಹಿತ್ ಶರ್ಮಾ ಅವರು ಇಲ್ಲಿಯವರೆಗೆ 12,000 ಕ್ಕೂ ಹೆಚ್ಚು ಟಿ20 ರನ್ ಗಳಿಸಿದ್ದಾರೆ ಮತ್ತು…
ಬೆಂಗಳೂರು: 9 ಕೋಟಿ ಗೋಲ್ಡ್ ಖರೀದಿಸಿ ವಂಚನೆ ಮಾಡಿರುವ ಪ್ರಕರಣದಲ್ಲಿ ಆರೋಪಿಯಾಗಿರುವ ಐಶ್ವರ್ಯ ಅಲಿಯಾಸ್ ನವ್ಯಶ್ರೀಯ ಬೆಂಗಳೂರು ಹಾಗೂ ಮಂಡ್ಯದ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಐಶ್ವರ್ಯ ಅವರ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದಲ್ಲಿರುವ ಮನೆ ಹಾಗೂ ಬೆಂಗಳೂರಿನ ನಿವಾಸದ ಮೇಲೆ ದಾಳಿ ನಡೆದಿದ್ದು, https://ainkannada.com/are-you-keeping-these-fruits-in-the-fridge-do-you-know-how-much-damage-this-can-do-to-your-body/ ಕಡತಗಳು ಹಾಗೂ ದಾಖಲೆಗಳ ಶೋಧ ಮಾಡಿದ್ದಾರೆ. ಇಬ್ಬರು ಸಿಆರ್ಪಿಎಫ್ ಸಿಬ್ಬಂದಿಯ ಭದ್ರತೆಯೊಂದಿಗೆ ಈ ದಾಳಿ ನಡೆದಿದೆ. ಐಶ್ವರ್ಯ ಗೌಡ ವಿರುದ್ಧ ಸುಮಾರು 9 ಕೋಟಿ ರೂ. ಮೌಲ್ಯದ ಚಿನ್ನ ವಂಚನೆ ಮಾಡಿದ ಆರೋಪವಿದೆ. ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಜುವೆಲ್ಲರಿಯ ಮಾಲೀಕರಿಗೆ ಐಶ್ವರ್ಯ ಗೌಡ ವಂಚನೆ ಎಸಗಿದ್ದಾರೆ ಎಂಬ ಆರೋಪವಿದೆ. ಇಷ್ಟೇ ಅಲ್ಲದೆ, ಮಾಜ ಸಂಸದ ಡಿಕೆ ಸುರೇಶ್ ಹೆಸರಿನಲ್ಲಿ ವಂಚನೆ ಎಸಗಿದ್ದರು ಎನ್ನಲಾಗಿದೆ. ಈ ವಿಚಾರವಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ 2024ರ ಡಿಸೆಂಬರ್ನಲ್ಲೇ ಡಿಕೆ ಸುರೇಶ್ ದೂರು ನೀಡಿದ್ದರು.
ಸೂಪರ್ ಸ್ಟಾರ್ ರಜನಿಕಾಂತ್ ನಟಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ ಜೈಲರ್ 2 ಅಂಗಳದಿಂದ ಮತ್ತೊಂದು ಕ್ರೇಜಿಯೆಸ್ಟ್ ಸಮಾಚಾರ ಹೊರಬಿದ್ದಿದೆ. ಈಗಾಗಲೇ ತಾರಾಬಳಗದ ಮೂಲಕ ಸುದ್ದಿಯಾಗಿರುವ ಜೈಲರ್ ಸೀಕ್ವೆಲ್ ಗೆ ದಕ್ಷಿಣ ಚಿತ್ರರಂಗದ ಬಹುಮುಖ ಪ್ರತಿಭೆ ನಟ ಫಹಾದ್ ಫಾಸಿಲ್ ಎಂಟ್ರಿ ಕೊಡಲಿದ್ದಾರಂತೆ. ನಟ ಶಿವರಾಜ್ ಕುಮಾರ್ ಈ ಚಿತ್ರದಲ್ಲಿ ನಟಿಸೋದು ಖಚಿತವಾಗಿದ್ದು, ತೆಲುಗಿನ ಬಾಲಯ್ಯ ಕೂಡ ಜೈಲರ್ 2 ಭಾಗವಾಗಲಿದ್ದಾರೆ ಎನ್ನಲಾಗಿತ್ತು. ಇದೀಗ ಪುಷ್ಪ ಖಳನಾಯಕ ಫಹಾದ್ ಫಾಸಿಲ್ ಕೂಡ ಈ ಚಿತ್ರದಲ್ಲಿರಲಿದ್ದಾರೆ ಎಂಬ ಗುಲ್ಲೆದಿದೆ. ರಜನಿಯ ವೆಟ್ಟೈಯನ್ ನಲ್ಲಿ ನಟಿಸಿದ್ದ ಫಹಾದ್ ಫಾಸಿಲ್ ಮತ್ತೊಮ್ಮೆ ತಲೈವರ್ ಜೊತೆ ಅಭಿನಯಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಫಹಾದ್ ಗಾಗಿ ನಿರ್ದೇಶಕ ನೆಲ್ಸನ್ ದೀಲಿಪ್ ಕುಮಾರ್ ವಿಭಿನ್ನವಾದ ಪಾತ್ರ ಡಿಸೈನ್ ಮಾಡುತ್ತಿದ್ದಾರಂತೆ. ಶೀಘ್ರದಲ್ಲೇ ಜೈಲರ್ ಸೀಕ್ವೆಲ್ ಗೆ ಫಹಾದ್ ಎಂಟ್ರಿ ಬಗ್ಗೆ ಸನ್ ಪಿಕ್ಚರ್ಸ್ ಮಾಹಿತಿ ನೀಡಲಿದೆಯಂತೆ. ಜೈಲರ್ ಮೊದಲ ಭಾಗ ಬಾಕ್ಸ್ ಆಫೀಸ್‌ನಲ್ಲಿ ಧೂಳ್ ಎಬ್ಬಿಸಿತ್ತು. ಬರೋಬ್ಬರಿ 600 ಕೋಟಿ ರೂ.ಗಳಿಗೂ ಹೆಚ್ಚು ಗಳಿಕೆ…
ಇತ್ತೀಚೆಗೆ ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರವನ್ನು ಕಡಿಮೆ ಮಾಡಿತ್ತು. ಈ ನಿರ್ಧಾರವು ವಿವಿಧ ಸಾಲಗಳ ಮೇಲೆ, ವಿಶೇಷವಾಗಿ ಗೃಹ ಸಾಲಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ವಿಶೇಷವಾಗಿ ಫ್ಲೋಟಿಂಗ್ ಬಡ್ಡಿದರಗಳ ಆಧಾರದ ಮೇಲೆ ಸಾಲ ಪಡೆದವರಿಗೆ, ಅವರ ಇಎಂಐಗಳು ಗಮನಾರ್ಹವಾಗಿ ಕಡಿಮೆಯಾಗುತ್ತವೆ. ದೀರ್ಘಾವಧಿಯ ಅಗತ್ಯಗಳಿಗೆ ಅನುಗುಣವಾಗಿ ಗೃಹ ಸಾಲಗಳನ್ನು ಮರುಪಾವತಿಸಬೇಕು. ಆದ್ದರಿಂದ ಬಡ್ಡಿದರಗಳಲ್ಲಿ ಸಣ್ಣ ಕಡಿತ ಕೂಡ ಸಾಲಗಾರನ ಮಾಸಿಕ ಹೊರೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಕಡಿಮೆ ರೆಪೊ ದರವು ಸಾಮಾನ್ಯವಾಗಿ ಬ್ಯಾಂಕುಗಳು ತಮ್ಮದೇ ಆದ ಸಾಲ ದರಗಳನ್ನು ಕಡಿಮೆ ಮಾಡಲು ಪ್ರೋತ್ಸಾಹಿಸುತ್ತದೆ. https://ainkannada.com/are-you-keeping-these-fruits-in-the-fridge-do-you-know-how-much-damage-this-can-do-to-your-body/ ಆದಾಗ್ಯೂ, ಎಲ್ಲಾ ಬ್ಯಾಂಕುಗಳು ಈ ಪ್ರಯೋಜನವನ್ನು ಗ್ರಾಹಕರಿಗೆ ತ್ವರಿತವಾಗಿ ವರ್ಗಾಯಿಸುವುದಿಲ್ಲ, ಏಕೆಂದರೆ ಇದು ಅವರ ಲಾಭದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ಸಾಲಗಾರರು ಅಂತಹ ಮಾಹಿತಿಯ ಬಗ್ಗೆ ಪೂರ್ವಭಾವಿಯಾಗಿರುವುದು ನಿರ್ಣಾಯಕವಾಗಿದೆ. ಈ ಸಂದರ್ಭದಲ್ಲಿ, ಗೃಹ ಸಾಲದ ಇಎಂಐಗಳನ್ನು ಕಡಿಮೆ ಮಾಡಲು ತಜ್ಞರು ನೀಡುವ ಸಲಹೆಗಳ ಬಗ್ಗೆ ತಿಳಿದುಕೊಳ್ಳೋಣ. ಸಾಲ ವರ್ಗಾವಣೆ ನಿಮ್ಮ ಪ್ರಸ್ತುತ ಬ್ಯಾಂಕ್…
ಕನ್ನಡ ಚಿತ್ರರಂಗದಲ್ಲಿ ಹೊಸಬರು ಹೊಸ ಪ್ರಯೋಗಳನ್ನು ಮಾಡುತ್ತಲೇ ಇರುತ್ತಾರೆ. ಆ ಪ್ರಯೋಗಳು ಸಕ್ಸಸ್ ಆಗಲಿ ಬಿಡಲಿ ತಮ್ಮ ಪ್ರಯತ್ನಗಳನ್ನು ಯಾವತ್ತೂ ಕೈ ಬಿಡೋದಿಲ್ಲ. ಈಗ ಹೊಸಬರೇ ಸೇರಿಕೊಂಡು ಉತ್ತರ ಕರ್ನಾಟದ ಜವಾರಿ ಭಾಷೆಯಲ್ಲೊಂದು ಪಪ್ಪಿ ಎಂಬ ಸಿನಿಮಾ ಮಾಡಿದ್ದು, ಈ ಟ್ರೇಲರ್ ಈಗಾಗಲೇ ದಾಖಲೆ ಬರೆದಿದೆ. ಟ್ರೇಲರ್ ನೋಡಿದವವರೆಲ್ಲರೂ ಹೊಟ್ಟೆ ತುಂಬ ನಕ್ಕು ನಲಿಯುವುದರ ಜೊತೆಗೆ ಭಾವುಕರಾಗಿದ್ದಾರೆ. ಒಂದೊಳ್ಳೆ ಕಥೆ ಹೇಳೋದಿಕ್ಕೆ ಹೊರಟಿರುವ ಯುವ ಪ್ರತಿಭೆಗಳಿಗೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಾಥ್ ಕೊಟ್ಟಿದ್ದಾರೆ. ಈ ಹಿಂದೆ ಫಸ್ಟ್ ಲವ್ ಸಿನಿಮಾ ಮಾಡಿದ್ದ ಆಯುಷ್ ಮಲ್ಲಿ ಸಾರಥ್ಯದಲ್ಲಿ ಮೂಡಿಬಂದಿರುವ ಚಿತ್ರವೇ ಪಪ್ಪಿ. ಇಬ್ಬರು ಬಾಲಕರು ಹಾಗೂ ಶಾನ್ವದ ಸುತ್ತ ಸಾಗುವ ಪಪ್ಪಿ ಸಿನಿಮಾವನ್ನು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅರ್ಪಿಸುತ್ತಿದ್ದು, ಮೇ 1ಕ್ಕೆ ಈ ಚಿತ್ರ ತೆರೆಗೆ ಬರ್ತಿದೆ. ಹೀಗಾಗಿ ಚಿತ್ರತಂಡ ಪ್ರಚಾರ ನಡೆಸುತ್ತಿದೆ. ಅದರ ಭಾಗವಾಗಿ ನಿನ್ನೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ರೇಣುಕಾಂಬ ಸ್ಟುಡಿಯೋದಲ್ಲಿ ಪಪ್ಪಿ ಪ್ರತಿಕಾಗೋಷ್ಠಿ ಹಮ್ಮಿಕೊಳ್ಳಲಾಗತ್ತು. ಧ್ರುವ ಸರ್ಜಾ…
ನವದೆಹಲಿ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದಿರುವ ಉಗ್ರರ ನರಮೇಧಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಉಗ್ರರು ಹಾಗೂ ಪಾಕಿಸ್ತಾನದ ವಿರುದ್ಧ ಭಾರತ ಮತ್ತಷ್ಟು ಕಠಿಣ ನಿರ್ಧಾರಗಳನ್ನೇ ತೆಗೆದುಕೊಳ್ಳಬೇಕು ಅನ್ನೋ ಕೂಗು ದೇಶಾದ್ಯಂತ ಜ್ವಾಲಾಮುಖಿಯಂತೆ ಪ್ರತಿಧ್ವನಿಸುತ್ತಿದೆ. ಇದರ ಬೆನ್ನಲ್ಲೇ ಪಾಕ್ ಹೈಕಮಿಷನ್‌ನ ಬಳಿ ಇಂದು ಬೆಳಗ್ಗೆ ವ್ಯಕ್ತಿಯೊಬ್ಬ ಕೇಕ್ ತೆಗೆದುಕೊಂಡು ಹೋಗುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. https://ainkannada.com/are-you-keeping-these-fruits-in-the-fridge-do-you-know-how-much-damage-this-can-do-to-your-body/ ಮಾಧ್ಯಮದ ವ್ಯಕ್ತಿಗಳು ಆ ವ್ಯಕ್ತಿಯನ್ನು ಸುತ್ತುವರಿದು, ಯಾಕೆ ಈ ಆಚರಣೆ? ಎಲ್ಲಿಗೆ ತಗೆದುಕೊಂಡು ಹೋಗಲಾಗುತ್ತದೆ ಎಂದು ಪ್ರಶ್ನಿಸಿದರು. ಆದರೆ ಆ ವ್ಯಕ್ತಿ ಯಾವುದೇ ಪ್ರತಿಕ್ರಿಯೆ ನೀಡದೇ ತೆರಳಿದ್ದಾನೆ. ಪಾಕಿಸ್ತಾನ ಹೈಕಮಿಷನ್‌ನ ಉನ್ನತ ರಾಜತಾಂತ್ರಿಕ ಸಾದ್ ಅಹ್ಮದ್ ವಾರೈಚ್ ಅವರನ್ನು ಬುಧವಾರ ತಡರಾತ್ರಿ ಕೇಂದ್ರವು ಸಮನ್ಸ್ ಜಾರಿ ಮಾಡಿರುವ ಬಗ್ಗೆಯೂ ಅವರನ್ನು ಕೇಳಲಾಯಿತು. ಆದರೆ ಆ ವ್ಯಕ್ತಿ ಯಾವುದೇ ಪ್ರತಿಕ್ರಿಯೆ ನೀಡದೇ ನಡೆದುಕೊಂಡು ಮುಂದೆ ಹೋಗಿದ್ದಾನೆ. ಪಾಕ್ ಹೈಕಮಿಷನ್‌ಗೆ ನೀಡಲಾಗಿದ್ದ ಭದ್ರತೆಯನ್ನು ಈಗಾಗಲೇ ಭಾರತದ ಸರ್ಕಾರ ಕಡಿತ ಮಾಡಿದೆ. ಅಷ್ಟೇ ಅಲ್ಲದೇ 48 ಗಂಟೆಯ ಒಳಗಡೆ…
ಬೆಂಗಳೂರು: “ಭಯೋತ್ಪಾದನೆ ವಿರುದ್ಧ ನಾವು ಒಟ್ಟಾಗಿ ನಿಂತು ಹೋರಾಟ ಮಾಡಬೇಕು. ಈ ವಿಚಾರದಲ್ಲಿ ಕೇಂದ್ರ ಸರ್ಕಾರದ ನಿರ್ಧಾರಗಳಿಗೆ ನಮ್ಮ ಸಹಕಾರವಿದೆ” ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ತಿಳಿಸಿದರು. ಕಾಶ್ಮೀರದಲ್ಲಿ ಉಗ್ರರ ಗುಂಡಿಗೆ ಬಲಿಯಾದ ಕನ್ನಡಿಗ ಭರತ್ ಭೂಷಣ್ ಅವರ ಮತ್ತಿಕೆರೆ ನಿವಾಸಕ್ಕೆ ಮಾಜಿ ಸಂಸದ ಡಿ ಕೆ ಸುರೇಶ್ ಅವರು ಗುರುವಾರ ತೆರಳಿ, ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸುರೇಶ್ ಅವರು, “ಜಮ್ಮು ಕಾಶ್ಮೀರದಲ್ಲಿ ನಡೆದಿರುವ ಭಯೋತ್ಪಾದಕರ ದಾಳಿಯನ್ನು ನಾವು ಖಂಡಿಸುತ್ತೇವೆ. ಮೊದಲು ದೇಶ ನಂತರ ಉಳಿದ ವಿಚಾರಗಳು. ಈ ದಾಳಿ ವಿರುದ್ಧ ನಾವೆಲ್ಲರೂ ಒಟ್ಟಾಗಿ ನಿಲ್ಲಬೇಕು, ಭಯೋತ್ಪಾದನೆ ವಿರುದ್ಧ ಹೋರಾಟ ಮಾಡಬೇಕು. ಭವಿಷ್ಯದಲ್ಲಿ ನಮ್ಮ ಪ್ರಜೆಗಳ ರಕ್ಷಣೆ ಮಾಡಬೇಕು. ಪ್ರತಿಯೊಬ್ಬರ ಜೀವವೂ ಬಹಳ ಮುಖ್ಯವಾದುದು” ಎಂದು ತಿಳಿಸಿದರು. https://ainkannada.com/are-you-keeping-these-fruits-in-the-fridge-do-you-know-how-much-damage-this-can-do-to-your-body/ ಇದು ಗುಪ್ತಚರ ಇಲಾಖೆ ವೈಫಲ್ಯವೇ ಎಂದು ಕೇಳಿದಾಗ, “ಇಂತಹ ಪರಿಸ್ಥಿತಿಯಲ್ಲಿ ನಾನು ಈ ವಿಚಾರವಾಗಿ ನಾನು…
ಬೆಂಗಳೂರು: ಇಂದು ಸಂಜೆ 7.30ಕ್ಕೆ ಚಿನ್ನಸ್ವಾಮಿಯಲ್ಲಿ ಬೆಂಗಳೂರು ಮತ್ತು ರಾಜಸ್ಥಾನ್ ತಂಡಗಳು ಸೆಣಸಾಟ ನಡೆಸಲಿವೆ. ಎರಡೂ ತಂಡಗಳು ಪ್ಲೇ-ಆಫ್ ಕನಸು ಕಾಣುತ್ತಿದ್ದು, ಗೆಲುವು ಯಾರಿಗೆ ಸಿಗಲಿದೆ ಎಂಬ ಕುತೂಹಲ ಹೆಚ್ಚಾಗಿದೆ. ಪ್ಲೇ-ಆಫ್ಗೆ ಹೋಗಬೇಕು ಅಂದ್ರೆ ಆರ್ಸಿಬಿ ಇವತ್ತಿನ ಪಂದ್ಯ ಗೆಲ್ಲಲೇಬೇಕಿದೆ. ಈಗಾಗಲೇ 8 ಪಂದ್ಯಗಳಲ್ಲಿ ಐದು ಗೆದ್ದಿರುವ ಆರ್ಸಿಬಿ, ಪಾಯಿಂಟ್ಸ್ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಸಂಚಾರ ದಟ್ಟಣೆ ನಿರೀಕ್ಷಿಸಲಾಗಿದೆ. ಕ್ವೀನ್ಸ್ ರಸ್ತೆ, ಎಂಜಿ ರಸ್ತೆ ಮುಂತಾದ ಪ್ರಮುಖ ರಸ್ತೆಗಳಲ್ಲಿ ಭಾರೀ ಸಂಚಾರ ದಟ್ಟಣೆಯಾಗುವ ಸಾಧ್ಯತೆ ಇದೆ. https://ainkannada.com/are-you-keeping-these-fruits-in-the-fridge-do-you-know-how-much-damage-this-can-do-to-your-body/ ಅದಲ್ಲದೆ ಐಪಿಎಲ್ ಪಂದ್ಯಗಳ ದಿನ ಮೆಟ್ರೋ ಸೇವೆಯನ್ನು ತಡ ರಾತ್ರಿ 12.30ರ ವರೆಗೆ ವಿಸ್ತರಿಸಲಾಗಿದೆ ಎಂದು ಬಿಎಂಆರ್ಸಿಎಲ್ ಈ ಹಿಂದೆಯೇ ತಿಳಿಸಿದೆ. ಈ ಹಿಂದಿನ ಪಂದ್ಯಗಳ ವೇಳೆಯೂ ಮೆಟ್ರೋ ರೈಲು ಸಂಚಾರ ಅವಧಿ ವಿಸ್ತರಣೆಯಾಗಿತ್ತು. ಎಲ್ಲಾ ನಾಲ್ಕು ಟರ್ಮಿನಲ್ಗಳಿಂದ, ಅಂದರೆ ವೈಟ್‌ಫೀಲ್ಡ್ (ಕಾಡುಗೋಡಿ), ಚಲ್ಲಘಟ್ಟ ರೇಷ್ಮೆ ಸಂಸ್ಥೆ ಮತ್ತು ಮಾದಾವರ ಮೆಟ್ರೋ ನಿಲ್ದಾಣಗಳಿಂದ ಕೊನೆಯ ಮೆಟ್ರೋ ರೈಲು ಸೇವೆಯನ್ನು ರಾತ್ರಿ 12.30ರ ವರೆಗೆ…
ಅಕ್ಷಯ ತೃತೀಯದಂದು ಲಕ್ಷ್ಮಿ ದೇವಿಯ ಸಮೃದ್ಧಿಯು ಮನೆಗೆ ಶಾಂತಿ, ಸಮೃದ್ಧಿ ಮತ್ತು ಸಂಪತ್ತನ್ನು ತರುತ್ತದೆ. ಆದಾಗ್ಯೂ, ಈ ಆಶೀರ್ವಾದವನ್ನು ಪಡೆಯಲು, ನೀವು ಮೊದಲು ಮನೆಯಿಂದ ಕೆಲವು ವಸ್ತುಗಳನ್ನು ತೆಗೆದುಹಾಕಬೇಕು. ಏಕೆಂದರೆ ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಕೆಲವು ವಸ್ತುಗಳು ಇದ್ದರೆ, ಅವು ನಕಾರಾತ್ಮಕ ಶಕ್ತಿಯನ್ನು ಉಂಟುಮಾಡಬಹುದು. ಅಂತಹ ವಸ್ತುಗಳು ಮನೆಯಲ್ಲಿದ್ದರೆ, ಲಕ್ಷ್ಮಿ ದೇವಿಯು ಆ ಸ್ಥಳಕ್ಕೆ ಬರದಿರಬಹುದು. ಈಗ ಅಂತಹ ವಸ್ತುಗಳು ಯಾವುವು ಎಂದು ತಿಳಿದುಕೊಳ್ಳೋಣ. ಪೊರಕೆ ಪೊರಕೆಯು ಸ್ವಚ್ಛತೆಯನ್ನು ಪ್ರತಿನಿಧಿಸುವ ಒಂದು ವಸ್ತುವಾಗಿದೆ. ಆದರೆ ಅದು ಹಾನಿಗೊಳಗಾಗಿದ್ದರೆ, ಬಿರುಕು ಬಿಟ್ಟಿದ್ದರೆ ಅಥವಾ ಒಡೆದಿದ್ದರೆ, ಅದು ಮನೆಗೆ ಬಡತನವನ್ನು ತರುತ್ತದೆ ಎಂದು ನಂಬಲಾಗಿದೆ. ಅಂತಹ ಪೊರಕೆಯನ್ನು ಮನೆಯಲ್ಲಿ ಇಡುವುದರಿಂದ ಆರ್ಥಿಕ ತೊಂದರೆ ಉಂಟಾಗುತ್ತದೆ ಎಂದು ವಾಸ್ತು ತಜ್ಞರು ಸೂಚಿಸುತ್ತಾರೆ. ಆದ್ದರಿಂದ, ಅಕ್ಷಯ ತೃತೀಯ ಬರುವ ಮೊದಲು ಮುರಿದ ಪೊರಕೆಯನ್ನು ತೆಗೆದು ಹೊಸ ಪೊರಕೆಯನ್ನು ಮನೆಗೆ ತರುವುದು ಒಳ್ಳೆಯದು. ಬಟ್ಟೆಗಳು ಮನೆಯಲ್ಲಿ ಹರಿದ, ಕೊಳಕಾದ, ಹಾನಿಗೊಳಗಾದ ಅಥವಾ ಹಲವು ದಿನಗಳಿಂದ ಸ್ವಚ್ಛಗೊಳಿಸದ ಬಟ್ಟೆಗಳಿದ್ದರೆ,…