ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಅವರನ್ನು ಸಿನಿಮಾಪ್ರೇಮಿಗಳಿಗೆ ಪರಿಚಯ ಮಾಡಿಕೊಡುವ ಅಗತ್ಯವೇ ಇಲ್ಲ ಬಿಡಿ. ದೇಶ ವಿದೇಶಗಳಲ್ಲಿಯೂ ಬಾದ್ ಷಾ ಅಭಿಮಾನಿಗಳಿದ್ದಾರೆ. ಆದ್ರೆ ಪತ್ರಕರ್ತರೊಬ್ಬರು ನೀವು ಯಾರೆಂದ ಘಟನೆ ನಡೆದಿದ್ದು, ಕಿಂಗ್ ಖಾನ್ ಬೇಸರ ಮೂಡಿಸಿದೆ. ಅತಿದೊಡ್ಡ ಫ್ಯಾಷನ್ ಹಬ್ಬ ಎನಿಸಿಕೊಳ್ಳುವ ಮೆಟ್ ಗಾಲಾ ಮತ್ತೆ ಶುರುವಾಗಿದೆ. ಅಮೆರಿಕಾದ ನ್ಯೂಯಾರ್ಕ್ ನಲ್ಲಿ ನಡೆಯುತ್ತಿರುವ ಈ ಫ್ಯಾಷನ್ ಇವೆಂಟ್ ನಲ್ಲಿ ದೇಶ ವಿದೇಶಗಳ ಸೆಲೆಬ್ರಿಟಿಗಳು ಭಾಗಿಯಾಗಿದ್ದಾರೆ. ಭಾರತದಿಂದ ಬಾಲಿವುಡ್ ಕಿಂಗ್ ಖಾನ್ ಶಾರುಖ್, ನಟಿ ಕಿಯಾರಾ ಅಡ್ವಾನಿ, ದಿಲ್ಜಿತ್ ದೋಸಾಂಜ್ ಮೆಟ್ ಗಾಲಾಗೆ ರಂಗು ತುಂಬಿದ್ದಾರೆ. ಮೆಟ್ ಗಾಲಾ ರೆಡ್ ಕಾರ್ಪೆಟ್‌ನಲ್ಲಿ ಶಾರುಖ್ ಸ್ಟೈಲೀಶ್ ಆಗಿ ಕ್ಯಾಮೆರಾಗೆ ಕಣ್ಣು ಕೊಡಿದ್ದಾರೆ. ಸಬ್ಯಸಾಚಿ ಮುಖರ್ಚಿ ಅವರಿಂದ ತಯಾರಾದ ಡಿಸೈನರ್ ಬಟ್ಟೆಯಲ್ಲಿ ಕಿಂಗ್ ಸಖತ್ ಆಗಿ ಮಿಂಚಿದ್ದಾರೆ. ವಿಲನ್ ಖದರ್ ನಲ್ಲಿ ಕತ್ತಿನ ಮೇಲೆ ಚಿತ್ರ-ವಿಚಿತ್ರ ಮಣಿ ಸರಗಳನ್ನು ಶಾರುಖ್ ಮಿಂಚಿದ್ದಾರೆ. ಶಾರುಖ್ ಖಾನ್ ಅವರು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿರುವ ವಿಡಿಯೋಗಳು…
Author: Author AIN
ಬೆಂಗಳೂರು: ಬೆಂಗಳೂರಿನಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ವಿದೇಶಿ ಡ್ರಗ್ ಪೆಡ್ಲರ್ ಅನ್ನು ಮಾರತ್ ಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಒವುಸು ಕಾಲಿನ್ಸ್ ಘಾನಿಯನ್ (35), ಬಂಧಿತ ಆರೋಪಿಯಾಗಿದ್ದು, ಬೆಂಗಳೂರಿನ ಬಿದರಹಳ್ಳಿಯಲ್ಲಿ ಆರೋಪಿ ಒವುಸು ಕೊಲಿನ್ಸ್ ಘಾನಿಯನ್ ವಾಸವಾಗಿದ್ದನು. ಮೆಡಿಕಲ್ ವೀಸಾದಲ್ಲಿ ಭಾರತಕ್ಕೆ ಬಂದಿದ್ದ ಆರೋಪಿಯಾಗಿದ್ದು, ಈ ಹಿಂದೆ ಮಾರತ್ ಹಳ್ಳಿ ಪೊಲೀಸರಿಂದ ಡ್ರಗ್ಸ್ ಕೇಸ್ ನಲ್ಲಿ ಅರೆಸ್ಟ್ ಆಗಿದ್ದನು. ಪೊಲೀಸರು ನಂತರ ಸ್ವದೇಶಕ್ಕೆ ವಾಪಸ್ ಕಳಿಸಿದ್ದರು. https://ainkannada.com/where-are-your-house-keys-you-should-never-keep-them-in-this-direction-astrology-says-so/ ಆದ್ರೆ ಮತ್ತೆ ಭಾರತಕ್ಕೆ ಬಂದಿದ್ದ ಆರೋಪಿ ಡ್ರಗ್ಸ್ ಮಾರಾಟ ಮಾಡುತ್ತಿದ್ದನು. ಇನ್ನೂ ಬಂಧಿತ ಆರೋಪಿಯಾಗಿದ್ದು, ಬಂಧಿತನಿಂದ 50 ಲಕ್ಷ ರೂ. ಮೌಲ್ಯದ ಎಂಡಿಎಂಎ, 15 ಸಾವಿರ ನಗದು, ತೂಕದ ಯಂತ್ರ, ಕಾರು, ಬೈಕ್ ವಶಕ್ಕೆ ಪಡೆಯಲಾಗಿದೆ.
ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ನವವಧು ಸೇರಿದಂತೆ ಒಂದೇ ಕುಟುಂಬದ ಐವರು ಮೃತಪಟ್ಟಿದ್ದಾರೆ. ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ಅಪಘಾತದಲ್ಲಿ ಮೃತಪಟ್ಟ ಯುವತಿ ಶ್ವೇತಾಳ ನಿಶ್ಚಿತಾರ್ಥ ನಡೆದಿತ್ತು. ನಿಶ್ಚಿತಾರ್ಥ ಮುಗಿಸಿ ಕುಟುಂಬದವರು ವಾಪಾಸ್ ಬಾಗಲಕೋಟೆಗೆ ಕಾರಿನಲ್ಲಿ ತೆರಳುತ್ತಿದ್ದರು. ಹುಬ್ಬಳ್ಳಿ ತಾಲೂಕಿನ ಇಂಗಳಹಳ್ಳಿ ಕ್ರಾಸ್ ಬಳಿ ತೆರಳುತ್ತಿದ್ದಾಗ ಕಾರಿಗೆ ಲಾರಿ ಡಿಕ್ಕಿ ಹೊಡೆದು ಈ ದುರಂತ ನಡೆದಿದೆ. https://ainkannada.com/kolar-boodikote-psi-sunil-in-lokayukta-trap/ ಸಾಗರ ಮೂಲದ ಮೃತ ವಿಠಲ್ , ಬಾಗಲಕೋಟೆಯ ಕುಳಗೇರಿ ಕ್ರಾಸ್ ಬಳಿ ಹೊಟೇಲ್ ನಡೆಸುತ್ತಿದ್ದರು. ಮಗಳ ನಿಶ್ಚಿತಾರ್ಥ ಮುಗಿಸಿ ಸಾಗರದಿಂದ ವಾಪಸ್ ಬಾಗಲಕೋಟೆಗೆ ಮರಳುವಾಗ ದುರಂತ ನಡೆದಿದೆ. ಅಪಘಾತದಲ್ಲಿ ನವವಧು ಶ್ವೇತಾ (29), ಅಂಜಲಿ(26), ಸಂದೀಪ್ (26), ವಿಠಲ್ (55) ಶಶಿಕಲಾ (40) ಬಾರದ ಲೋಕಕ್ಕೆ ತೆರಳಿದ್ದಾರೆ.
ಬೆಂಗಳೂರು: ಸುಹಾಸ್‌ಶೆಟ್ಟಿ ವಿರುದ್ಧ ರೌಡಿಶೀಟರ್ ಓಪನ್ ಮಾಡಿದ್ದೇ ಬಿಜೆಪಿ ಅವಧಿಯಲ್ಲಿ ಎಂದು ಬಿಜೆಪಿ ನಾಯಕರಿಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿರುಗೇಟು ಕೊಟ್ಟಿದ್ದಾರೆ. ಮ್ಮ ಎಕ್ಸ್ ಖಾತೆಯಲ್ಲಿ ದಾಖಲೆ ಬಿಡುಗಡೆ ಮಾಡಿದ ಅವರು, ಅಮಾಯಕರ ತಲೆಯಲ್ಲಿ ಮತಾಂಧತೆಯ ಅಮಲು ತುಂಬಿ ಕಂಡವರ ಮಕ್ಕಳನ್ನು ಬಾವಿಗೆ ತಳ್ಳುತ್ತಿರುವ ಬಿಜೆಪಿ ನಾಯಕರ ಗಮನಕ್ಕೆ. ಇದು ಇತ್ತೀಚೆಗೆ ಹತ್ಯೆಯಾದ ಸುಹಾಶ್ ಶೆಟ್ಟಿ ವಿರುದ್ದ ರೌಡಿ ಶೀಟರ್ ತೆರೆಯಲು ಪೊಲೀಸ್ ಇಲಾಖೆ ನೀಡಿದ್ದ ಆದೇಶದ ಪ್ರತಿ. ಸುಹಾಸ್ ಶೆಟ್ಟಿ ವಿರುದ್ಧ ರೌಡಿಶೀಟರ್ ಓಪನ್ ಆಗಿದ್ದು 2020ರಲ್ಲಿ. ಆಗ ಅಧಿಕಾರದಲ್ಲಿದ್ದದ್ದು ಬಿಜೆಪಿ ಸರ್ಕಾರ. ಗೃಹ ಸಚಿವರಾಗಿದ್ದ ಪುಣ್ಯಾತ್ಮ ಬಸವರಾಜ್ ಬೊಮ್ಮಾಯಿ. ಇಂದು ಸುಹಾಸ್‌ನನ್ನು ಮಹಾತ್ಮ ಎಂದು ಬಿಂಬಿಸುತ್ತಿರುವ ಬಿಜೆಪಿಯವರು ಆಗ ಯಾಕೆ ಸುಹಾಸ್‌ನನ್ನು ರೌಡಿ ಪಟ್ಟಿಗೆ ಸೇರಿಸಿದ್ದರು? https://ainkannada.com/where-are-your-house-keys-you-should-never-keep-them-in-this-direction-astrology-says-so/ ಕರಾವಳಿಯನ್ನು ಕೋಮು ಪ್ರಯೋಗ ಶಾಲೆಯನ್ನಾಗಿ ಮಾಡಿಕೊಂಡಿರುವ ಬಿಜೆಪಿಯವರೇ ಕ್ರಿಮಿನಲ್‌ಗಳ ನಿಜವಾದ ಸೃಷ್ಟಿಕರ್ತರು. ಇವರು ಅಧಿಕಾರದಲ್ಲಿದ್ದಾಗ ಕ್ರಿಮಿನಲ್‌ಗಳನ್ನು ಸೃಷ್ಟಿಸುತ್ತಾರೆ. ಅವರ ಮೇಲೆ ರೌಡಿಶೀಟರ್ ತೆರೆಯುತ್ತಾರೆ. ಹೆಣ ಬಿದ್ದ ಕೂಡಲೆ…
ಟಾಲಿವುಡ್ ಮೆಗಾಸ್ಟಾರ್ ಫ್ಯಾಮಿಲಿಗೆ ಹೊಸ ಸದಸ್ಯನ ಎಂಟ್ರಿ ಖಚಿತವಾಗಿದೆ. ಚಿರಂಜೀವಿ ಸಹೋದರ ನಾಗಬಾಬು ಪುತ್ರ ವರುಣ್ ತೇಜ್ ಹಾಗೂ ಲಾವಣ್ಯ ತ್ರಿಪಾಠಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಕಳೆದ ಕೆಲ ದಿನಗಳಿಂದ ಜೋಡಿ ತಂದೆ ತಾಯಿ ಆಗಿ ಬಡ್ತಿ ಪಡೆಯಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಇದೀಗ ವರುಣ್ ತೇಜ್ ಹಾಗೂ ಲಾವಣ್ಯ ತ್ರಿಪಾಠಿ ಈ ಸುದ್ದಿಯನ್ನು ಖಚಿತ ಮಾಡಿದ್ದಾರೆ. ಜೀವನದ ಅತ್ಯಂತ ಸುಂದರವಾದ ಪಾತ್ರ -ಶೀಘ್ರದಲ್ಲೇ ಬರಲಿದೆ ಎಬ ಕ್ಯಾಪ್ಟನ್ ಕೊಟ್ಟು ಪುಟ್ಟ ಮಗುವಿನ ಶೋ ಹಿಡಿದು ಲಾವಣ್ಯ ಹಾಗೂ ವರುಣ್ ಫೋಟೋ ಹಂಚಿಕೊಂಡಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಈ ಜೋಡಿಗೆ ಎಲ್ಲೆಡೆಯಿಂದ ಶುಭಾಶಯಗಳು ಹರಿದು ಬರ್ತಿದೆ. View this post on Instagram A post shared by Varun Tej Konidela (@varunkonidela7) ವರುಣ್ ತೇಜ್ ಹಾಗೂ ಲಾವಣ್ಯ ಪ್ರೀತಿಸಿ ಸಪ್ತಪದಿ ತುಳಿದ ಜೋಡಿ. ‘ಮಿಸ್ಟರ್’ ಸಿನಿಮಾದಿಂದಲೇ ಇಬ್ಬರ ನಡುವೆ ಸ್ನೇಹ ಶುರುವಾಗಿ, ಅದು ಪ್ರೀತಿಗೆ ತಿರುಗಿತ್ತು.…
ಆನೇಕಲ್ : ನಿಗೂಢ ಸ್ಫೋಟಕ್ಕೆ ಕಾಂಕ್ರೆಟ್ ರಸ್ತೆ ಛಿದ್ರ ಛಿದ್ರ ವಾಗಿರುವ ಘಟನೆ ಆನೇಕಲ್ ತಾಲೂಕಿನ ಚಂದಾಪುರ ಸಮೀಪ ದ ಬನಹಳ್ಳಿಯಲ್ಲಿ ನಡೆದಿದೆ. ಸ್ಪೋಟದ ಜೊತೆಗೆ ಬೆಂಕಿ ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದು, ಸ್ಪೋಟದ ತೀವ್ರತೆಗೆ ಸಿಮೆಂಟ್ ಕಾಂಕ್ರೀಟ್ ರಸ್ತೆ ಛಿದ್ರ ಛಿದ್ರವಾಗಿದೆ. ಮನೆಯ ಹೊರಗಡೆ ಕುಳಿತ್ತಿದ್ದರು ಆತಂಕದಿಂದ ಮನೆಗಳ ಒಳಗೆ ಓಡಿ ಹೋಗಿದ್ದಾರೆ. ಸ್ಫೋಟಕ್ಕೂ ಕೆಲ ಕ್ಷಣದ ಮೊದಲು ವಾಟರ್ ಟ್ಯಾಂಕರ್ ಒಂದು ಆ ರಸ್ತೆಯಲ್ಲಿ ಹಾದು ಹೋಗಿತ್ತು. ಟ್ಯಾಂಕರ್ ಮುಂದಕ್ಕೆ ಸಾಗುತ್ತಿದ್ದಂತೆಯೇ ಭಾರಿ ಶಬ್ದ ಮತ್ತು ಬೆಂಕಿ ಜೊತೆ ರಸ್ತೆ ಸ್ಫೋಟಗೊಂಡಿತು. https://ainkannada.com/where-are-your-house-keys-you-should-never-keep-them-in-this-direction-astrology-says-so/ ಈ ರಸ್ತೆಯಲ್ಲಿ ನಿತ್ಯ ಸಾವಿರಾರು ಮಂದಿ ಸಂಚರಿಸುತ್ತಾರೆ. ರಸ್ತೆ ಮೇಲೆ ಹಾದುಹೋಗಿರುವ ಹೈವೋಲ್ಟೆಜ್ ವಿದ್ಯುತ್ ತಂತಿ ತೀರಾ ಕೆಳಗೆ ಜೋತು ಬಿದ್ದಿದೆ. ಅದರಿಂದಲೇ ಇಂತಹ ಅವಘಡ ಸಂಭವಿಸಿರುವ ಸಾಧ್ಯತೆ ಇದೆ ಎಂದು ಸ್ಥಳೀಯರು ಕೆಪಿಟಿಸಿಎಲ್ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಬಸ್ ನಿಲ್ದಾಣ & ರೈಲ್ವೆ ನಿಲ್ದಾಣದಲ್ಲಿ ಮಲಗಿದ್ದವರನ್ನು ಟಾರ್ಗೆಟ್ ಮಾಡಿ ಮೊಬೈಲ್ ಕದಿಯುತ್ತಿದ್ದ ರೌಡಿಶೀಟರ್ ಗಳನ್ನು ಗೋವಿಂದರಾಜ ನಗರ ಪೊಲೀಸರು ಬಂಧಿಸಿದ್ದಾರೆ. ತುರುವೆಕೆರೆ ರೌಡಿಶೀಟರ್ ನಾಗರಾಜ್ @ ರಾಕಿ ಹಾಗೂ ಸೋಮನಾಯ್ಕ್ ಬಂಧಿತ ಆರೋಪಿಗಳಾಗಿದ್ದು, ಬೈಕ್ ಕಳ್ಳತನ ಕೇಸ್ ನ ತನಿಖೆ ವೇಳೆ ಮೊಬೈಲ್ ಕಳ್ಳತನ ಪ್ರಕರಣ ಬಯಲಾಗಿದೆ. ಮೆಜೆಸ್ಟಿಕ್ ಬಸ್ ನಿಲ್ದಾಣ & ರೇಲ್ವೆ ನಿಲ್ದಾಣದಲ್ಲಿ ಮಲಗಿದ್ದವರ ಮೊಬೈಲ್ ಕಳ್ಳತನ ಮಾಡ್ತಿದ್ದರು. https://ainkannada.com/where-are-your-house-keys-you-should-never-keep-them-in-this-direction-astrology-says-so/ ತುರುವೆಕೆರೆ ರೌಡಿಶೀಟರ್ ನಾಗರಾಜ್ ಅಲಿಯಾಸ್ ರಾಕಿ ಮೇಲೆ 6 ಕೇಸ್ ಪ್ರಕರಣಗಳಿವೆ. ಇನ್ನೂ ಈ ಘಟನೆಗೆ ಸಂಬಂಧಿಸಿದಂತೆ ಗೋವಿಂದರಾಜ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಗಾರಪೇಟೆ: ಹುಡುಗಿ ಕಾಣಿಯಾಗಿರುವ ಕೇಸುವೊಂದರ ವಿಚಾರಣೆ ವೇಳೆ ವ್ಯಕ್ತಿಯೊಬ್ಬರಿಂದ ತೆಗೆದುಕೊಂಡಿದ್ದ ಪಿಎಸ್ ಐ ಅವರಿಂದ ಮೊಬೈಲ್ ವಾಪಾಸ್ ಪಡೆಯಲು 10 ಸಾವಿರ ಲಂಚ ಪಡೆಯುತ್ತಿರುವ ವೇಳೆ ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಪಿಎಸ್ ಐ ಸುನೀಲ್ ಐರೋಡಗಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ನಡೆದಿದೆ. ತಾಲೂಕಿನ ಬೂದಿಕೋಟೆ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಸುನೀಲ್ ಐರೋಡಗಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಅಧಿಕಾರಿಯಾಗಿದ್ದಾರೆ. https://ainkannada.com/where-are-your-house-keys-you-should-never-keep-them-in-this-direction-astrology-says-so/ ಗೊಲ್ಲಹಳ್ಳಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ರಾಮಚಂದ್ರಪ್ಪ ಎಂಬುವವರ ಮಧ್ಯಸ್ಥಿಕೆಯಲ್ಲಿ 10 ಸಾವಿರ ರೂಗಳ ನಗದನ್ನು ನೀಡುವ ವೇಳೆ ಲೋಕಾಯುಕ್ತ ಸರ್ಕಲ್ ಇನ್ಸ್ಪೆಕ್ಟರ್ ರೇಣುಕಾ ನೇತೃತ್ವದಲ್ಲಿ ದಾಳಿ ಮಾಡಿದ್ದಾರೆ. ಬೂದಿಕೋಟೆ ಪಿಎಸ್‌ಐ ಸುನಿಲ್ ಕುಮಾರರನ್ನು ಲೋಕಾಯುಕ್ತ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ.
ಬೇಸಿಗೆ ರಜೆ ವೇಳೆಯಲ್ಲಿ ಸರಕಾರಿ ಶಾಲೆಗಳಲ್ಲಿ ಬೇಸಿಗೆ ಶಿಬಿರದ ಹೆಸರಿನಲ್ಲಿ ಮಕ್ಕಳ ಪಾಲಕರ ಜೇಬಿಗೆ ಕತ್ತರಿ ಹಾಕುವ ಹುನ್ನಾರ ನಡಿದಿದೆ “ಬೇಸಿಗೆ ಶಿಬಿರಕ್ಕೆ ” ಸಂಬಂದಿಸಿದ ಹಾಗೆ ಆಯಾ ಕ್ಷೇತ್ರದ ಬಿ. ಇ. ಓ ಅವರಿಂದ ಪರವಾನಿಗೆ ಪಡೆದು ಶಿಬಿರ ನಡೆಸಲು ಅವಕಾಶ ಇದೆ ಆದರೆ ಅದು ಸಂಪೂರ್ಣವಾಗಿ ಉಚಿತವಾಗಿರಬೇಕು ಮಕ್ಕಳಿಂದ ಯಾವದೇ ರೀತಿಯಾದ ಶುಲ್ಕ ವಸೂಲಿ ಮಾಡುವಂತಿಲ್ಲ ಆದ್ರೆ ಈ ಶಾಲೆಯಲ್ಲಿ ಮಕ್ಕಳಿಂದ ಹಣ ವಸೂಲಿ ಮಾಡುತ್ತಿದ್ದಾರೆ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಮುಗಳಖೊಡ ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಂಟೆಪ್ಪವನರ ತೋಟದ ಶಾಲೆಯಲ್ಲಿ ಈ ವಸೂಲಿ ದಂದೆ ಶುರುವಾಗಿದೆ, ಮಕ್ಕಳಿಂದ 300ರಿಂದ 800 ರೂಪಾಯಿಗಳ ಪೀ ನೆಪದಲ್ಲಿ ಪಿಕುವದು ಬೆಳಕಿಗೆ ಬಂದಿದೆ. https://ainkannada.com/where-are-your-house-keys-you-should-never-keep-them-in-this-direction-astrology-says-so/ ಶಾಲಾ ಮುಖ್ಯಶಿಕ್ಷಕ ಮಾರುತಿ ಕಳ್ಳಿಗುದ್ದಿ ಹಾಗೂ ಎಸ್ ಡಿ ಎಂ ಸಿ ಹಾಗೂ CRC ಬೀರಪ್ಪ ಬಾಗೇನ್ನವರ ಹಾಗೂ BEO ಆರ್ ಬಸವರಾಜಪ್ಪ ಅವರ ಕೃಪಾಕಟಾಕ್ಷೆ ಈ ದಂದೆಗೆ ಇರಬಹುದೇ ಅನ್ನೋ ಅನುಮಾನ…
ಹುಬ್ಬಳ್ಳಿ: ಮಂಗಳೂರಿನಲ್ಲಿ ನಡೆದ ರೌಡಿ ಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ರಚನೆ ಮಾಡಿದ ಮಾದರಿಯಲ್ಲೇ ಮೈಸೂರಿನಲ್ಲೂ ವಿಶೇಷ ಪೋಲಿಸ್ ತಂಡ ರಚನೆ ಮಾಡುವಂತೆ ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ಗೃಹಸಚಿವರನ್ನು ಆಗ್ರಹಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ರೀತಿಯಲ್ಲೇ ಮೈಸೂರಿನಲ್ಲಿ ಯೂ ಸಹ ಈ ಹಿಂದೆ ಅನೇಕ ಕೋಮು ಸೌಹಾರ್ದತೆಗೆ ಧಕ್ಕೆ ಉಂಟಾಗುವಂತಹ ಘಟನೆಗಳು ನಡೆದಿತ್ತು ಅಲ್ಲದೆ ಹತ್ಯೆ ಗಳೂ ನಡೆದಿತ್ತು ಎಂದು ತೇಜಸ್ವಿ ಸ್ಮರಿಸಿದ್ದಾರೆ. ಮೈಸೂರು ಕೂಡ ಸೂಕ್ಷ್ಮಾತಿ ಸೂಕ್ಷ್ಮ ಪ್ರದೇಶ ವಾಗಿದ್ದು ಕ್ಯಾತಮಾರನಹಳ್ಳಿಯಲ್ಲಿ ರಾಜು ಹತ್ಯೆ ಪ್ರಕರಣ ಮತ್ತು ಮೊನ್ನೆ ನಡೆದಂತಹ ಉದಯಗಿರಿ ಪೋಲಿಸ್ ಠಾಣೆಯ ಮೇಲೆ ಕಲ್ಲು ತೂರಾಟ ಮತ್ತು ಮಸಿದಿ ಘಟನೆಗಳು ನಡೆದಿದ್ದವು. https://ainkannada.com/where-are-your-house-keys-you-should-never-keep-them-in-this-direction-astrology-says-so/ ಇದನ್ನು ಮೀರಿ ಮೈಸೂರು ನಗರ ಮತ್ತು ಜಿಲ್ಲೆಯಲ್ಲಿ ಮಿತಿಮೀರಿದ ರೌಡಿ ಶೀಟರ್ ಗಳ ಗ್ಯಾಂಗ್ ವಾರ್ ಮತ್ತು ರೌಡಿ ಶೀಟರ್ ಗಳಿಂದ ಬರುತ್ತಿರುವ ಹಫ್ತಾ ವಸೂಲಿ ಬೆದರಿಕೆ ಪ್ರಕರಣಗಳು ಕಳೆದ ಕೆಲವು ವರ್ಷಗಳಲ್ಲಿ ಹತ್ಯೆ ಮಾಡಿರುವ ಘಟನೆಗಳು ಇನ್ನೂ…