Author: Author AIN

ಜೂನಿಯರ್‌ ಎನ್‌ಟಿಆರ್‌ ಹಾಗೂ ಪ್ರಶಾಂತ್‌ ನೀಲ್‌ ಕಳೆದೊಂದು ವಾರದಿಂದ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಬೀಡು ಬಿಟ್ಟಿದ್ದರು. ಕುಮಟಾದ ರಾಮನಗಿಂಡಿ ಬೀಚ್‌ ದಡದಲ್ಲಿ ಅದ್ಧೂರಿ ಸೆಟ್‌ ಹಾಕಿ ತಮ್ಮ ಬಹುನಿರೀಕ್ಷಿತ ಚಿತ್ರದ ಶೂಟಿಂಗ್ ನಲ್ಲಿ ತೊಡಗಿಸಿಕೊಂಡಿದ್ದರು. ಇದೀಗ ರಾಮನಗಿಂಡಿ ಬೀಚ್‌ನಲ್ಲಿ ಚಿತ್ರೀಕರಣ ಮುಗಿಸಿ ತಾರಕ್‌ ಹೈದ್ರಾಬಾದ್‌ಗೆ ಹಾರಿದ್ದಾರೆ. ಹತ್ತು ದಿನಗಳ ಕಾಲ ಈ ಜಾಗದಲ್ಲಿ ಹೈವೋಜ್ಟೇಜ್‌ ಆಕ್ಷನ್‌ ದೃಶ್ಯಗಳ ಚಿತ್ರೀಕರಣ ನಡೆಸಲಾಗಿದೆ. ಮೈತ್ರಿ ಮೂವೀ ಮೇಕರ್ಸ್‌ ನಿರ್ಮಾಣದಲ್ಲಿ ಅದ್ಧೂರಿಯಾಗಿ ಮೂಡಿ ಬರ್ತಿರುವ ಈ ಚಿತ್ರಕ್ಕೆ ಡ್ರ್ಯಾಗನ್‌ ಎಂಬ ಟೈಟಲ್‌ ಇಡಲಾಗಿದೆ. ಆದ್ರೆ ಚಿತ್ರತಂಡ ಈ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಜೂನಿಯರ್‌ ಎನ್‌ಟಿಆರ್‌ ಹಾಗೂ ಪ್ರಶಾಂತ್‌ ನೀಲ್, ಈ ಡೆಡ್ಲಿ ಕಾಂಬೋದಲ್ಲಿ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಇದೇ ತಿಂಗಳ 20ಕ್ಕೂ ಜೂನಿಯರ್‌ ಎನ್‌ಟಿಆರ್‌ ಹುಟ್ಟುಹಬ್ಬವಿದೆ. ಹೀಗಾಗಿ ಚಿತ್ರತಂಡ ಟೀಸರ್‌ ರಿಲೀಸ್‌ ಮಾಡೋದಾಗಿ ಘೋಷಣೆ ಮಾಡಿದೆ. ಯಂಗ್‌ ಟೈಗರ್‌ ಸಿನಿಮಾ ಕರಿಯರ್‌ನ ಅತಿ ದೊಡ್ಡ ಬಜೆಟ್‌ ಸಿನಿಮಾ ಇದಾಗಿದೆ ಎನ್ನಲಾಗುತ್ತಿದೆ.…

Read More

ಬೆಂಗಳೂರು: ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧದ ಕರಿಛಾಯೆ ಜೋರಾಗ್ತಿದೆ. ಹೀಗಾಗಿ ಮೊನ್ನೆ ಪಂಜಾಬ್​ ಗಡಿಯಲ್ಲಿ ಸೇನೆ ಮಾಕ್​ ಡ್ರಿಲ್ ಮಾಡಿದಂತೆ ದೇಶಾದ್ಯಂತ ಮಾಕ್​ ಡ್ರಿಲ್​​ ಮಾಡಲು ಸರ್ಕಾರ ಆಜ್ಞೆ ಹೊರಡಿಸಿದೆ. ಈಗಾಗಲೇ ಬೇರೆ ರಾಜ್ಯಗಳಲ್ಲಿ ಮಾಕ್​ ಡ್ರಿಲ್​​ ಮಾಡಲಾಗುತ್ತಿದೆ. ಇತ್ತ ಕರ್ನಾಟಕದಲ್ಲಿ ಕೂಡ ಮಾಕ್​ ಡ್ರಿಲ್​​ ಮಾಡಲು ನಿರ್ಧರಿಸಲಾಗಿದೆ. ಬೆಂಗಳೂರು, ಕಾರವಾರ ಮತ್ತು ರಾಯಚೂರಿನಲ್ಲಿ ನಾಳೆ ಮಾಕ್​ ಡ್ರಿಲ್​ಗೆ ನಿರ್ಧರಿಸಲಾಗಿದೆ ಎಂದು ಅಗ್ನಿಶಾಮಕ ದಳದ ಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರ್ ಹೇಳಿದ್ದಾರೆ. ಈ ಬಗ್ಗೆ ಕೇಂದ್ರ ಸರ್ಕಾರದಿಂದ ಸುತ್ತೋಲೆ ಬರುತ್ತದೆ ಎಂದಿದ್ದಾರೆ. https://ainkannada.com/where-are-your-house-keys-you-should-never-keep-them-in-this-direction-astrology-says-so/ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅಗ್ನಿಶಾಮಕ ದಳದ ಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರ್, ಬೆಂಗಳೂರು, ಕಾರವಾರ, ರಾಯಚೂರಿನಲ್ಲಿ ನಾಳೆ ಸಂಜೆ 4 ಗಂಟೆ ಮಾಕ್​ಡ್ರಿಲ್​ಗೆ ನಿರ್ಧಾರ ಮಾಡಿದ್ದೇವೆ. ಈ ಕುರಿತಾಗಿ ಈಗಾಗಲೇ ಅಗ್ನಿಶಾಮಕದಳ, ಸಿವಿಲ್ ಡಿಫೆನ್ಸ್ ಅಧಿಕಾರಿಗಳ ಜತೆ ಸಭೆ ಮಾಡಲಾಗಿದೆ‌ ಎಂದು ತಿಳಿಸಿದ್ದಾರೆ. ಮಾಕ್​ಡ್ರಿಲ್​ನಲ್ಲಿ ಎನ್​​ಸಿಸಿ, ಎನ್​​ಎಸ್​​ಎಸ್​, ಸಿವಿಲ್‌ ಡಿಫೆನ್ಸ್ ಮತ್ತು ವೈದ್ಯರು ಭಾಗಿಯಾಗುತ್ತಾರೆ. ಪೊಲೀಸ್…

Read More

ಬೆಂಗಳೂರು: ಮಂಗಳೂರಿನಲ್ಲಿ ನಡೆದ ಹಿಂದೂ ಕಾರ್ಯಕರ್ತ ಸುಹಾಷ್ ಶೆಟ್ಟಿ ಒಬ್ಬ ರೌಡಿಶೀಟರ್‌ . ರೌಡಿಶೀಟರ್‌ ಬಿಜೆಪಿಗರು ವಿಜೃಂಭಿಸಿ ರಾಜಕೀಯ ಮಾಡುತ್ತಿರುವುದು ಅಸಹ್ಯ ಹುಟ್ಟಿಸುತ್ತಿದೆ ಎಂದು ಸಚಿವ ಎಂ.ಬಿ ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ. ಎಲ್ಲವನ್ನೂ ತೆಗೆದುಕೊಂಡು ಹಿಂದುತ್ವದ ಜಾತಿಗೆ ಹಚ್ಚುವ ಕೆಲಸ ಆಗಬಾರದು. ಕೆಲವು ಸಾರಿ ಕ್ರಿಮಿನಲ್, ರೌಡಿಶೀಟರ್‌ ಗಳು ಇರುತ್ತಾರೆ. ವಿಜಯಪುರ ಜಿಲ್ಲೆಯ ಭೀಮಾತೀರದಲ್ಲಿ ಬೇಕಾದಷ್ಟು ಮರ್ಡರ್ ಗಳಾಗುತ್ತವೆ. ಅವೆಲ್ಲವನ್ನೂ ಒಂದು ಪಕ್ಷಕ್ಕೆ ಸೇರಿಸಲು ಆಗುತ್ತಾ ಎಂದು ಪ್ರಶ್ನಿಸಿದ್ದಾರೆ. ಸುಹಾಸ್ ಶೆಟ್ಟಿ ಮೇಲೆ ಕೇಸ್ ಗಳಿತ್ತು. ಅವರು ಬಡಿದಾಡಿಕೊಂಡರೆ ಮುಸಲ್ಮಾನರೇ ಇರಬಹುದು, ಹಿಂದೂಗಳೇ ಇರಬಹುದು. ಮೊನ್ನೆ ಬಿಜಾಪುರದಲ್ಲಿ ಶೂಟ್ ಔಟ್ ಆಗಲಿಲ್ವಾ? ಅದನ್ನು ಒಯ್ದು ಹಿಂದೂ-ಮುಸ್ಲಿಂ ಅಂತ ಬಣ್ಣ ಹಚ್ಚೋದು ಸರಿಯಲ್ಲ. Criminals are Criminals. ಕ್ರಿಮಿನಲ್‌ ಗಳಿಗೆ ಯಾವುದೇ ಜಾತಿ ಇರಲಿ, ಯಾವುದೇ ಧರ್ಮ ಇರಲಿ. ಯಾವುದೇ ಪಕ್ಷಕ್ಕೆ ಅಂಟಿಕೊಂಡಿರಲಿ. ಅವರು ಕ್ರಿಮಿನಲ್ಸ್, ಕ್ರಿಮಿನಲ್ ಅನ್ನೋದೇ ಒಂದು ಜಾತಿ ಅದು ಹಿಂದೂನೂ ಅಲ್ಲ, ಮುಸ್ಲೀಮೂ ಅಲ್ಲ, ಬೌದ್ದರೂ ಅಲ್ಲ ಸಿಖ್ಖರೂ…

Read More

ರಾಯಚೂರು: ಆರೋಗ್ಯ ಇಲಾಖೆಯ ಲ್ಯಾಬ್ ಟೆಕ್ನಿಷಿಯನ್​​ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವಂತಹ ಘಟನೆ ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ನಡೆದಿದೆ. ಮಂಜುನಾಥ್​ (33) ಮೃತ ಲ್ಯಾಬ್ ಟೆಕ್ನಿಷಿಯನ್ ನಾಗಿದ್ದು, ಕಳೆದ ಎರಡು ದಿನಗಳಿಂದ ಮಂಜುನಾಥ್​ ನಾಪತ್ತೆಯಾಗಿದ್ದರು. ಚರಂಡಿಯೊಂದರ ಬಳಿ 2 ದಿನ ನಿಂತಲ್ಲೇ ನಿಲ್ಲಿಸಲಾಗಿದ್ದ ಬೈಕ್​​ ಪರಿಶೀಲನೆ ಮಾಡಿದಾಗ ಘಟನೆ ಬೆಳಕಿಗೆ ಬಂದಿದೆ. ಮೃತ ಮಂಜುನಾಥ್​​ ಮೆದಿಕಿನಾಳದಲ್ಲಿರುವ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು.​ https://ainkannada.com/where-are-your-house-keys-you-should-never-keep-them-in-this-direction-astrology-says-so/ ಪತ್ನಿ ಲಕ್ಷ್ಮೀ ಮತ್ತು ಇಬ್ಬರು ಮಕ್ಕಳೊಂದಿಗೆ ಮಸ್ಕಿ ಪಟ್ಟಣದಲ್ಲಿ ವಾಸವಾಗಿದ್ದರು. ಸದ್ಯ ಸ್ಥಳಕ್ಕೆ ಮಸ್ಕಿ ಪಟ್ಟಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮೃತ ಮಂಜುನಾಥ್ ಪತ್ನಿ ಲಕ್ಷ್ಮೀ ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ನಡೆಸಿದ್ದಾರೆ.

Read More

ಬೆಂಗಳೂರು: ಸಂವಿಧಾನ ಶಿಲ್ಪಿ ಬಾಬಾಸಾಹೇಬ್‌ ಅಂಬೇಡ್ಕರ್ ಸೋಲಿಗೆ ಕಾಂಗ್ರೆಸ್ ಕಾರಣ ಎಂಬ ವಿಧಾನ ಪರಿಷತ್ ವಿಪಕ್ಷ ನಾಯಕ‌ ಛಲವಾದಿ ನಾರಾಯಣ್ ಸ್ವಾಮಿ  ಸವಾಲಿಗೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ದಾಖಲೆ ಬಿಡುಗಡೆ ಮಾಡುವ ಮೂಲಕ ಓಪನ್‌ ಚಾಲೆಂಜ್‌ ಹಾಕಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಬಾಬಾ ಸಾಹೇಬ್‌ ಅಂಬೇಡ್ಕರ್‌ ಬರೆದ ಪತ್ರಗಳ ದಾಖಲೆ ಬಿಡುಗಡೆ ಮಾಡಿದ ಪ್ರಿಯಾಂಕ್‌ ಖರ್ಗೆ, ಛಲವಾದಿ ನಾರಾಯಣಸ್ವಾಮಿ ಹಾಕಿದ ಚಾಲೆಂಜ್‌ ನ್ನು ಸ್ವೀಕಾರ ಮಾಡಿದರು. ಛಲವಾದಿ ನಾರಾಯಣ್ ಸ್ವಾಮಿ ಅವರಿಗೆ ಎಲೆಕ್ಷನ್ ಗೆಲ್ಲೋಕೆ ಆಗಿರಲಿಲ್ಲ. ಬಿಜೆಪಿಯವರು ಒಳ್ಳೆ ಬಕ್ರನನ್ನು ಹಿಡಿದುಕೊಂಡಿದ್ದಾರೆ. ಮೂರು ನಾಲ್ಕು ಜನರನ್ನ‌ ಬಯ್ಯೋದಕ್ಕೆ ಅವರನ್ನ ಇಟ್ಟುಕೊಂಡಿದ್ದಾರೆ. ಚಡ್ಡಿ ಅಭಿಯಾನ ಉಲ್ಲೇಖಿಸಿ ಛಲವಾದಿ ನಾರಾಯಣ್ ಸ್ವಾಮಿಗೆ ಪ್ರಿಯಾಂಕ್‌ ಖರ್ಗೆ ತಿರುಗೇಟು ನೀಡಿದ್ದಾರೆ. ಸಂವಿಧಾನ ರಚನೆ ಮಾಡಿದಾಗ ಅಂಬೇಡ್ಕರ್ ಸೇರಿ ಎಲ್ಲಾ ಒಂದಾಗಿ ಕೆಲಸ ಮಾಡಿದ್ದೇವೆ ಎಂಬುದನ್ನ ಇತಿಹಾಸ ಹೇಳುತ್ತೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕೊನೆಯ ಭಾಷಣದಲ್ಲಿ ಕಾಂಗ್ರೆಸ್ ಬಗ್ಗೆ ಏನು ಮಾತನಾಡಿದ್ದಾರೆ ಅನ್ನೋದನ್ನ ಅವರು ಹೇಳಿದ್ದಾರೆ.…

Read More

ಸಕ್ಕರೆ ಕಾಯಿಲೆ ಇರುವವರು ಎಲ್ಲಾ ಆಯಾಮದಲ್ಲೂ ಎಚ್ಚರಿಕೆಯಿಂದ ಇರಬೇಕು ಎಂದು ವೈದ್ಯರು ಸುಮ್ಮನೆ ಹೇಳುವುದಿಲ್ಲ. ಅಪ್ಪಿ ತಪ್ಪಿ ಸ್ವಲ್ಪ ನಿರ್ಲಕ್ಷ ಮಾಡಿದರು ಕೂಡ ಆರೋಗ್ಯಕ್ಕೆ ತೊಂದರೆ ತಪ್ಪಿದ್ದಲ್ಲ. ದೇಹಕ್ಕೆ ವ್ಯಾಯಾಮ ನೀಡಬೇಕು ಜೊತೆಗೆ ಎಲ್ಲೂ ಸಹ ಬೀಳದಂತೆ ಅಥವಾ ಚರ್ಮದ ಭಾಗಕ್ಕೆ ಯಾವುದೇ ಗಾಯ ಆಗದಂತೆ ಎಚ್ಚರಿಕೆ ವಹಿಸಬೇಕು. https://ainkannada.com/where-are-your-house-keys-you-should-never-keep-them-in-this-direction-astrology-says-so/ ಹೌದು, ಗಾಯದ ವಿಚಾರದಲ್ಲಿ ಸಕ್ಕರೆ ಕಾಯಿಲೆ ಇರುವವರು ತುಂಬಾ ಎಚ್ಚರದಿಂದ ಇರಬೇಕು. ಬೇರೆಯವರಿಗೆ ಹೋಲಿಸಿದರೆ ಇವರಿಗೆ ಗಾಯಗಳು ಅಷ್ಟು ಬೇಗನೆ ವಾಸಿಯಾಗುವುದಿಲ್ಲ. ಏಕೆ ಹೀಗೆ? ಈ ಬಗ್ಗೆ ವೈದ್ಯರನ್ನು ಕೇಳಿದರೆ ಅವರು ಏನು ಹೇಳುತ್ತಾರೆ, ನೋಡೋಣ ಬನ್ನಿ. ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ ರಕ್ತದಲ್ಲಿ ಯಾವಾಗ ಹೆಚ್ಚಿನ ಪ್ರಮಾಣದ ಸಕ್ಕರೆ ಅಂಶ ಶೇಖರಣೆಯಾಗುತ್ತದೆ ಆ ಸಂದರ್ಭದಲ್ಲಿ ಕ್ರಮೇಣವಾಗಿ ರೋಗ ನಿರೋಧಕ ಶಕ್ತಿ ಕುಸಿತ ಕಾಣುತ್ತದೆ. ಏಕೆಂದರೆ ಸಕ್ಕರೆ ಅಂಶ ಪ್ರೊಟೀನ್ ಅಂಶಕ್ಕೆ ಸೇರಿಕೊಳ್ಳುವುದರಿಂದ. ಇದರಿಂದ ದೇಹದಲ್ಲಿ ಸರಿಯಾಗಿ ಕೆಲಸ ಮಾಡಬೇಕಾದ ಪ್ರೋಟೀನ್ ತನ್ನ ಕಾರ್ಯ ಚಟುವಟಿಕೆ ಕಡಿಮೆ ಮಾಡುತ್ತದೆ.…

Read More

ದೈಜಿ ಚಿತ್ರ ರಮೇಶ್ ಅರವಿಂದ್ ಅವರ 106ನೇ ಚಿತ್ರವಾಗಿದ್ದು, ಇದನ್ನು ಶಿವಾಜಿ ಸುರತ್ಕಲ್ ಖ್ಯಾತಿಯ ಆಕಾಶ್ ಶ್ರೀವತ್ಸ ಅವರು ನಿರ್ದೇಶನ ಮಾಡುತ್ತಿದ್ದಾರೆ. ಇದರ ತಾರಾಗಣ ಬಳಗದಲ್ಲಿ ರಾಧಿಕಾ ನಾರಾಯಣ್, ಅವಿನಾಶ್ ಇತ್ಯಾದಿ ನಟರು ಕಾಣಿಸಿ ಕೊಳ್ಳಲಿದ್ದಾರೆ. ಹೊಸ ವಿಷಯ ಏನೆಂದರೆ ಗಾಳಿಪಟ ಖ್ಯಾತಿಯ ದಿಗಂತ್ ಅವರು ಸೇರ್ಪಡೆಯಾಗಿದ್ದಾರೆ. ದಿಗಂತ್ ರಮೇಶ್ ಅರವಿಂದ್ ಅವರ ತಮ್ಮನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಭಿನ್ನ ರೀತಿಯ ಪಾತ್ರದಲ್ಲಿ ಇವರಿಬ್ಬರು ಜೊತೆಯಾಗಿ ಕಾಣಿಸಿ ಕೊಳ್ಳಲಿದ್ದಾರೆ. ರಮೇಶ್ ಅರವಿಂದ್ ಅವರು ಸೂರ್ಯ ಪಾತ್ರದಲ್ಲಿ, ರಾಧಿಕಾ ನಾರಾಯಣ್ ಅವರು ಭೂಮಿ ಪಾತ್ರದಲ್ಲಿ, ದಿಗಂತ್ ಅವರು ಗಗನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‌ ದೈಜಿ ಸಿನಿಮಾದಲ್ಲಿ ಶೂಟಿಂಗ್ ನಡೆಯುತ್ತಿದ್ದು ಶೇಕಡ 50% ರಷ್ಟು ಚಿತ್ರೀಕರಣ ಮುಕ್ತಾಯಗೊಂಡಿದೆ. ಈ ಚಿತ್ರದ ಛಾಯಾಗ್ರಹಣ ಶ್ರೀಶಾ ಕುದುವಳ್ಳಿ ಅವರು ಮಾಡುತ್ತಿದ್ದು, ನಿರ್ಮಾಣ ರವಿ ಕಶ್ಯಪ್ ಅವರು ಮಾಡಿದ್ದಾರೆ.

Read More

ಬೆಂಗಳೂರು: ಕನ್ನಡ, ಕನ್ನಡ, ಕನ್ನಡ ಅಂತಾ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದ ಗಾಯಕ ಸೋನು ನಿಗಮ್‌ ಕನ್ನಡ ಚಿತ್ರರಂಗದಿಂದ ಬ್ಯಾನ್‌ ಮಾಡಲಾಗಿದೆ. ಸ್ಯಾಂಡಲ್‌ವುಡ್‌ನಿಂದ ಬ್ಯಾನ್‌ ಆಗುತ್ತಿದ್ದಂತೆ ಕನ್ನಡಿಗರೇ ಕ್ಷಮಿಸಿ ಎಂದು ಸೋನು ಅಂಗಲಾಚಿದ್ದಾರೆ. ಈ ಬಗ್ಗೆ ಮೊದಲ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್‌ ತಂಗಡಗಿ ಪ್ರತಿಕ್ರಿಯೆ ನೀಡಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಸಚಿವ ಶಿವರಾಜ್‌ ತಂಗಡಗಿ, ಕನ್ನಡ ಹಾಡು ಹಾಡಿ‌ ಕರ್ನಾಟಕಕ್ಕೆ ಬಂದೂ ದುಡ್ಡು ಮಾಡುವಂತವರು ಹಗುರವಾಗಿ ಮಾತನಾಡುವುದನ್ನ ಸಹಿಸಲ್ಲ. ಈಗಾಗಲೇ FIR ಆಗಿದೆ. ಸರ್ಕಾರ ಇಂತಹವರ ವಿರುದ್ಧ ಕ್ರಮ ವಹಿಸುವ ಕೆಲಸ ಮಾಡ್ತಿದೆ. ಕನ್ನಡ ಚಿತ್ರರಂಗ ಅವರನ್ನ ಬ್ಯಾನ್ ಮಾಡಿರುವುದು ಅಭಿನಂದನ ಕಾರ್ಯವಾಗಿದೆ. ಯಾವ ನಿರ್ಮಾಪಕರು ಅವರಿಂದ ಹಾಡು ಹಾಡಿಸಬಾರದು. ಯಾವುದೇ ಸಂಗೀತ ಸಂಜೆಗೂ ಅವರನ್ನು ಕರೆಸಬಾರದು. ಯಾರೇ ಇತಂಹ ಕೆಲಸ ಮಾಡಿದ್ರು ಕನ್ನಡಿಗರು ಸಹಿಸಲ್ಲ. ಸೋನು ನಿಗಮ್‌ ಅವರನ್ನು ಅರೆಸ್ಟ್ ಮಾಡುವ ಕುರಿತು ಸಿಎಂ ಗೃಹ ಸಚಿವರ ಜೊತೆ ಚರ್ಚೆ ಮಾಡುವೆ. ಕನ್ನಡ, ಕನ್ನಡಿಗರ ಮೇಲೆ ನಡೆಯುವ ದಬ್ಬಾಳಿಕೆ ವಿರುದ್ಧ…

Read More

ತಿರುವನಂತಪುರಂ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಸಿದ್ಧ ಶಬರಿಮಲೆ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸುವ ಮೊದಲ ಭಾರತೀಯ ರಾಷ್ಟ್ರಪತಿಯಾಗಲಿದ್ದಾರೆ ಎಂಬ ಸುದ್ದಿಯನ್ನು ತಿರುವಾಂಕೂರು ದೇವಸ್ವಂ ಮಂಡಳಿಯ ಮುಖ್ಯಸ್ಥ ಪಿ.ಎಸ್. ಪ್ರಶಾಂತ್ ದೃಢಪಡಿಸಿದ್ದಾರೆ. ಹೌದು ಮೇ 18ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಕೇರಳಕ್ಕೆ ಆಗಮಿಸಲಿದ್ದು, ಬಳಿಕ ಕೊಟ್ಟಾಯಂ ಜಿಲ್ಲೆಯ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. 19ರಂದು ಬೆಳಗ್ಗೆ ಶಬರಿಮಲೆಯ ಬಳಿಯಿರುವ ನೀಲಕ್ಕಲ್ ಹೆಲಿಪ್ಯಾಡ್‌ಗೆ ಬಂದಿಳಿಯಲಿದ್ದು, ಬಳಿಕ ಪಂಪಾ ಬೇಸ್ ಕ್ಯಾಂಪ್‌ಗೆ ತೆರಳಿದ್ದಾರೆ. https://ainkannada.com/where-are-your-house-keys-you-should-never-keep-them-in-this-direction-astrology-says-so/ ಪಂಪಾ ಬೇಸ್ ಕ್ಯಾಂಪ್‌ನಿಂದ ದೇವಾಲಯಕ್ಕೆ ತೆರಳುವ ಪ್ರಯಾಣ ವಿಧಾನದ ಕುರಿತು ಅಂತಿಮ ನಿರ್ಧಾರವನ್ನು ಭದ್ರತಾ ವ್ಯವಸ್ಥೆಯ ವಿಶೇಷ ರಕ್ಷಣಾ ಗುಂಪು ತೆಗೆದುಕೊಳ್ಳಲಿದೆ. ರಾಷ್ಟ್ರಪತಿಯೊಬ್ಬರು ಶಬರಿಮಲೆ ದೇಗುಲಕ್ಕೆ ಭೇಟಿ ನೀಡಲು ನಿರ್ಧರಿಸಿದ್ದು ಇದೇ ಮೊದಲು ಎಂದು ತಿರುವಾಂಕೂರು ದೇವಸ್ವಂ ಮಂಡಳಿಯ ಅಧ್ಯಕ್ಷ ಪಿ.ಎಸ್.ಪ್ರಶಾಂತ್ ತಿಳಿಸಿದರು. ರಾಷ್ಟ್ರಪತಿ ಅವರ ಭೇಟಿಯ ಬಗ್ಗೆ ಕೆಲವು ವಾರಗಳಿಂದ ಗಾಳಿ ಸುದ್ದಿ ಹರಿದಾಡುತ್ತಿದ್ದವು. ಅಧಿಕೃತ ಮಾಹಿತಿ ಬಂದ ನಂತರ ಮುಖ್ಯಮಂತ್ರಿ ಪಿಣರಾಯಿ ವಿಜಯನ್ಅವರು ಸಭೆಯನ್ನು ಕರೆಯಲಿದ್ದಾರೆ. ಅಲ್ಲದೇ ನಾವು…

Read More

ಬೆಂಗಳೂರು: ಟ್ರಕ್ ನಲ್ಲಿ ಬರೋಬ್ಬರಿ 62 ಕೆಜಿ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಎಚ್ ಎಸ್ ಆರ್ ಪೊಲೀಸರು ಬಂಧಿಸಿದ್ದಾರೆ. ಸುರೇಶ್ ಅಲಿಯಾಸ್ ಬಿಡ್ಡ ಬಂಧಿತ ಆರೋಪಿಯಾಗಿದ್ದು, ಹೊಗೆಸೊಪ್ಪು ಎಂದು ಟ್ರಕ್ ಡ್ರೈವರ್ ಗೆ ಸುಳ್ಳು ಹೇಳಿ ಒರಿಸ್ಸಾದಿಂದ ಟ್ರಕ್ ನಲ್ಲಿ ಬರೋಬ್ಬರಿ 62 ಕೆಜಿ ಗಾಂಜಾ ಸಾಗಾಟ ಮಾಡುತ್ತಿದ್ದನು. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಹಿಂದೆ ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರೋಪಿ ರೌಡಿ ಶೀಟರ್‌ ಆಗಿದ್ದನು. ಆದ್ರೆ ಆರೋಗ್ಯ ಕಾರಣ ಕೊಟ್ಟು ರೌಡಿ ಶೀಟರ್ ತೆಗೆಯಲಾಗಿತ್ತು. https://ainkannada.com/where-are-your-house-keys-you-should-never-keep-them-in-this-direction-astrology-says-so/ ಕೊಲೆ ,ರಾಬರಿ, ಮನೆಕಳ್ಳತನ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿ ಕುಡಿತ ಹಾಗೂ ಹುಡುಗಿಯರ ಚಟಕ್ಕೆ ಬಿದ್ದು ಗಾಂಜಾ ಪೆಡ್ಲಿಂಗ್ ಶುರು ಮಾಡಿದ್ದನು. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More