ಹುಬ್ಬಳ್ಳಿ: ಮಂಗಳೂರಿನಲ್ಲಿ ನಡೆದ ರೌಡಿ ಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ರಚನೆ ಮಾಡಿದ ಮಾದರಿಯಲ್ಲೇ ಮೈಸೂರಿನಲ್ಲೂ ವಿಶೇಷ ಪೋಲಿಸ್ ತಂಡ ರಚನೆ ಮಾಡುವಂತೆ ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ಗೃಹಸಚಿವರನ್ನು ಆಗ್ರಹಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ರೀತಿಯಲ್ಲೇ ಮೈಸೂರಿನಲ್ಲಿ ಯೂ ಸಹ ಈ ಹಿಂದೆ ಅನೇಕ ಕೋಮು ಸೌಹಾರ್ದತೆಗೆ ಧಕ್ಕೆ ಉಂಟಾಗುವಂತಹ ಘಟನೆಗಳು ನಡೆದಿತ್ತು ಅಲ್ಲದೆ ಹತ್ಯೆ ಗಳೂ ನಡೆದಿತ್ತು ಎಂದು ತೇಜಸ್ವಿ ಸ್ಮರಿಸಿದ್ದಾರೆ. ಮೈಸೂರು ಕೂಡ ಸೂಕ್ಷ್ಮಾತಿ ಸೂಕ್ಷ್ಮ ಪ್ರದೇಶ ವಾಗಿದ್ದು ಕ್ಯಾತಮಾರನಹಳ್ಳಿಯಲ್ಲಿ ರಾಜು ಹತ್ಯೆ ಪ್ರಕರಣ ಮತ್ತು ಮೊನ್ನೆ ನಡೆದಂತಹ ಉದಯಗಿರಿ ಪೋಲಿಸ್ ಠಾಣೆಯ ಮೇಲೆ ಕಲ್ಲು ತೂರಾಟ ಮತ್ತು ಮಸಿದಿ ಘಟನೆಗಳು ನಡೆದಿದ್ದವು. https://ainkannada.com/where-are-your-house-keys-you-should-never-keep-them-in-this-direction-astrology-says-so/ ಇದನ್ನು ಮೀರಿ ಮೈಸೂರು ನಗರ ಮತ್ತು ಜಿಲ್ಲೆಯಲ್ಲಿ ಮಿತಿಮೀರಿದ ರೌಡಿ ಶೀಟರ್ ಗಳ ಗ್ಯಾಂಗ್ ವಾರ್ ಮತ್ತು ರೌಡಿ ಶೀಟರ್ ಗಳಿಂದ ಬರುತ್ತಿರುವ ಹಫ್ತಾ ವಸೂಲಿ ಬೆದರಿಕೆ ಪ್ರಕರಣಗಳು ಕಳೆದ ಕೆಲವು ವರ್ಷಗಳಲ್ಲಿ ಹತ್ಯೆ ಮಾಡಿರುವ ಘಟನೆಗಳು ಇನ್ನೂ…
Author: Author AIN
ದೊಡ್ಡಬಳ್ಳಾಪುರ: ಪಿಎಲ್ ಡಿ (ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತ) ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಅಧಿಕಾರಿ ನಾಗಮಣಿ ಅವರ ನೇತೃತ್ವದಲ್ಲಿ ಚುನಾವಣೆ ಇಂದು ನಡೆದಿದೆ. ಈ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ರಾಜಘಟ್ಟ ಶಿವಣ್ಣ, ಉಪಾಧ್ಯಕ್ಷರಾಗಿ ಜೆಡಿಎಸ್‌ನ ಎಲ್.ಕೆ.ರಾಮಚಂದ್ರ ಬಾಬು (ಮಿಲ್ಕ್ ಬಾಬು)ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತಕ್ಕೆ ಫೆಬ್ರವರಿ 16 ರಿಂದ ಮುಂದಿನ 05 ವರ್ಷಗಳ ಅವಧಿಗೆ ಆಡಳಿತ ಮಂಡಳಿಯ ಚುನಾವಣೆ ನಡೆಸಲಾಗಿದೆ. ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ಮೂರು ಪಕ್ಷಗಳು ಮೈತ್ರಿ ಸಾಧಿಸಿ, ತಲಾ 20 ತಿಂಗಳ ಅಧಿಕಾರ ಹಂಚಿಕೆ ಮಾಡಿಕೊಂಡಿವೆ. ಮೊದಲ ಅವಧಿಗೆ ಜೆಡಿಎಸ್, ಎರಡನೇ ಅವಧಿಗೆ ಬಿಜೆಪಿ ಹಾಗೂ ಮೂರನೇ ಅವಧಿಗೆ ಕಾಂಗ್ರೆಸ್ ಬೆಂಬಲಿತರು ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿದು ಬಂದಿದೆ. ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಜೆಡಿಎಸ್ ಜಿಲ್ಲಾ ಅಧ್ಯಕ್ಷ ಬಿ.ಮುನೇಗೌಡ, ತಾಲೂಕು ಅಧ್ಯಕ್ಷ ಜಿ ಲಕ್ಷ್ಮೀಪತಯ್ಯ, ಹಿರಿಯು ಮುಖಂಡರಾದ…
ಹುಬ್ಬಳ್ಳಿ: ರಾಜ್ಯದಲ್ಲಿ ಮತ್ತೊಂದು ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಲಾರಿ ಡಿಕ್ಕಿಯಾಗಿ ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಶ್ವೇತ (29), ಅಂಜಲಿ(26), ಸಂದೀಪ್ (26), ವಿಠ್ಠಲ (55) ಮತ್ತು ಶಶಿಕಲಾ ಮೃತರು. https://ainkannada.com/where-are-your-house-keys-you-should-never-keep-them-in-this-direction-astrology-says-so/ ಇವರೆಲ್ಲರೂ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನವರು ಎಂದು ತಿಳಿದುಬಂದಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿರುವ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು, ಮೃತದೇಹಗಳನ್ನು ಹುಬ್ಬಳ್ಳಿಯ ಕಿಮ್ಸ್ ಗೆ ರವಾನೆ ಮಾಡಿದ್ದಾರೆ. ಹೋಟೆಲ್ ವ್ಯಾಪಾರಕ್ಕೆಂದು ಬಾಗಲಕೋಟೆಗೆ ತೆರಳುತ್ತಿದ್ದ ಸಮಯದಲ್ಲಿ ಈ ದುರ್ಘಟನೆ ನಡೆದಿದೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬಳ್ಳಾರಿ: ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಒಡೆತನದ ಓಬಳಾಪೂರಂ ಮೈನಿಂಗ್ ಕಂಪನಿ(ಓಎAಸಿ) ಆಂಧ್ರ-ಕರ್ನಾಟಕ ಗಡಿ ಒತ್ತುವರಿ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬAಧಿಸಿದ ವಿಚಾರಣೆ ಪೂರ್ಣಗೊಳಿಸಿರುವ ಆಂಧ್ರದ ಸಿಬಿಐ ವಿಶೇಷ ಕೋರ್ಟ್ ಮೇ.೬ರಂದು ತೀರ್ಪು ಕಾಯ್ದಿರಿಸಿದ್ದು, ಪ್ರಕರಣದ ಆರೋಪ ಹೊತ್ತ ಜನಾರ್ದನರೆಡ್ಡಿ ಸೇರಿ ನಿವೃತ್ತ ಐಎಎಸ್, ಐಎಫ್‌ಎಸ್ ಅಧಿಕಾರಿಗಳಲ್ಲಿ ನಡುಕ ಶುರುವಾಗಿದೆ. ಆಂಧ್ರಪ್ರದೇಶದಲ್ಲಿ ವೈಎಸ್ ರಾಜಶೇಖರರೆಡ್ಡಿ ಕರ್ನಾಟಕದಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಆಡಳಿತದಲ್ಲಿದ್ದಾಗ ಎರಡು ರಾಜ್ಯಗಳ ಗಡಿಯಲ್ಲಿ ಅಕ್ರಮ ಗಣಿಗಾರಿಕೆಯ ಆರೋಪ ಕೇಳಿ ಬಂದಿತ್ತು. ಆಂಧ್ರ ಮತ್ತು ಕರ್ನಾಟಕದ ಗಡಿ ಭಾಗಕ್ಕೆ ಹೊಂದಿಕೊAಡ ಬಳ್ಳಾರಿ ಜಿಲ್ಲೆಯ ಹೀರೆಹಾಳ್ ಮತ್ತು ಸಿದ್ದಾಪುರ ಬಳಿಯ ಓಬಳಾಪುರಂ ಬೆಟ್ಟದಲ್ಲಿ ೬೮.೫ ಹೆಕ್ಟೇರ್ ಮತ್ತು ೩೯.೫ ಹೆಕ್ಟೇರ್ ಕಬ್ಬಿಣದ ಅದಿರು ಗಣಿಗಾರಿಕೆ ಗುತ್ತಿಗೆಗಳನ್ನು https://ainkannada.com/where-are-your-house-keys-you-should-never-keep-them-in-this-direction-astrology-says-so/ ಅಕ್ರಮವಾಗಿ ಜಿ.ಜನಾರ್ದನರೆಡ್ಡಿ ಒಡೆತನದ ಓಎಂಸಿಗೆ ಹಂಚಿಕೆ ಮಾಡಲಾಗಿದೆ. ಅದಿರು ಬಗೆಯಲು ಆಂಧ್ರ ಪ್ರದೇಶದ ಪರ್ಮಿಟ್ ಪಡೆದು ರಾಜ್ಯದ ಗಡಿರೇಖೆಯನ್ನು ದ್ವಂಸ ಮಾಡಿ ಅಕ್ರಮ ಅದಿರು ತೆಗೆಯಲಾಗಿದೆ ಎನ್ನುವ ದೂರುಗಳಿದ್ದವು. ತನಿಖೆ ನೆಡಸಿದ್ದ ಸಿಬಿಐ…
ರಿಷಭ್ ಪಂತ್ ಐಪಿಎಲ್ 2025 ರ ಋತುವಿನಲ್ಲಿ ಬ್ಯಾಟಿಂಗ್‌ನಲ್ಲಿ ಗಂಭೀರ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ನಿನ್ನೆ ಧರ್ಮಶಾಲಾದಲ್ಲಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 237 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟುವ ವೇಳೆ ಪಂತ್ ಮತ್ತೊಮ್ಮೆ ನಿರಾಸೆ ಮೂಡಿಸಿದರು. ಬ್ಯಾಟಿಂಗ್‌ಗೆ ಅನುಕೂಲಕರವಾದ ಪಿಚ್‌ನಲ್ಲಿಯೂ ಸಹ ಅವರು ಚೆಂಡನ್ನು ಸರಿಯಾಗಿ ಸಮಯಕ್ಕೆ ಸರಿಯಾಗಿ ಹೊಂದಿಸಲು ಸಾಧ್ಯವಾಗಲಿಲ್ಲ. ಅವರು ಕೇವಲ 17 ಎಸೆತಗಳಲ್ಲಿ 18 ರನ್ ಗಳಿಸಿ ಔಟಾದರು. ಈ ಋತುವಿನಲ್ಲಿ ಅವರು 10 ಕ್ಕೂ ಹೆಚ್ಚು ರನ್ ಗಳಿಸಿರುವುದು ಇದು ಕೇವಲ ನಾಲ್ಕನೇ ಇನ್ನಿಂಗ್ಸ್ ಆಗಿದೆ. ಆದರೆ, ಅದನ್ನು ದೊಡ್ಡ ಸ್ಕೋರ್ ಆಗಿ ಪರಿವರ್ತಿಸುವಲ್ಲಿ ಅವರು ವಿಫಲರಾದರು. ಒಟ್ಟು 11 ಪಂದ್ಯಗಳಲ್ಲಿ ಕೇವಲ 128 ರನ್ ಗಳಿಸಿದ ಅವರ ಸರಾಸರಿ 12.8 ಕ್ಕೆ ಸೀಮಿತವಾಯಿತು. ಈ ಆಟದ ಶೈಲಿಯನ್ನು ಕಂಡ ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್, ಪಂತ್‌ಗೆ ಸರಳ ಆದರೆ ಪರಿಣಾಮಕಾರಿ ಸಲಹೆ ನೀಡಿದರು. ಅವರು ಮಾನಸಿಕವಾಗಿ ದಣಿದಿದ್ದರೆ, ಅವರ ಆತ್ಮವಿಶ್ವಾಸವನ್ನು ಮರಳಿ…
ಮಂಡ್ಯ: ಸಕ್ಕರೆನಾಡು ಮಂಡ್ಯ ಜಿಲ್ಲೆಯ ಜನರ ಬಾಯಾರಿಕೆ ನೀಗಿಸಲು ಪಣ ತೊಟ್ಟಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಸತ್ತೇಗಾಲ ಕುಡಿಯುವ ನೀರಿನ ಯೋಜನೆಯನ್ನು ಪೂರ್ಣಗೊಳಿಸಲು ಭಗೀರಥ ಪ್ರಯತ್ನ ಮಾಡುತ್ತಿದ್ದಾರೆ. ಕಾವೇರಿ ಕುಡಿಯುವ ನೀರಿನ 5 ನೇ ಹಂತ, ಎತ್ತಿನಹೊಳೆ ಸೇರಿದಂತೆ ಹಲವಾರು ಅಸಾಧ್ಯಗಳನ್ನು ಸಾಧ್ಯವಾಗಿಸಿದ ಕೀರ್ತಿ ಇವರದ್ದು. ಇದರ ಭಾಗವಾಗಿ ಮೊದಲಿಗೆ ಸತ್ತೇಗಾಲ ಅಣೆಕಟ್ಟಿನ ಬಳಿ ಯೋಜನೆಗೆ ಗುದ್ದಲಿ ಪೂಜೆ ರ ನೆರವೇರಿಸಿ ಸ್ಥಳ ಪರಿಶೀಲನೆ ಮಾಡಿದರು. ಏಕೆ ಕೆಲಸ ವಿಳಂಬವಾಗುತ್ತಿದೆ, ಏನಾದರೂ ಅಡೆತಡೆಗಳಿವೆಯೇ ಎಂದು ಅಧಿಕಾರಿಗಳು, ಯೋಜನೆಯ ಕಾಮಗಾರಿ ನಡೆಸುತ್ತಿರುವ ಹೈದರಾಬಾದಿನ ಮೆಘಾ ಇಂಜಿನಿಯರಿಂಗ್ ಸಂಸ್ಥೆಯ ಎಂಜಿನಿಯರ್ ಗಳ ಬಳಿ ಮಾಹಿತಿ ಪಡೆದುಕೊಂಡ ಡಿ.ಕೆ ಶಿವಕುಮಾರ್ ಅಧಿಕಾರಿಗಳ ಬಳಿ ಯೋಜನೆಯ ಪ್ರಗತಿಯ ಬಗ್ಗೆ ವಿವರಗಳನ್ನು ಪಡೆದರು. ಇದಾದ ನಂತರ ಇಗ್ಗಲೂರು ಬ್ಯಾರೇಜ್ ವರೆಗೆ ನೀರು ಹರಿಸಲು ಕೊರೆಯುತ್ತಿರುವ ಸುರಂಗ ಹಾಗೂ ಅದರ ಲೈನಿಂಗ್ ಕಾಮಗಾರಿಯನ್ನು ವೀಕ್ಷಣೆ ಮಾಡಿದರು. ಮಾಜಿ ಸಂಸದ ಡಿ.ಕೆ.ಸುರೇಶ್, ಶಾಸಕರಾದ ಸಿ.ಪಿ.ಯೋಗೆಶ್ವರ್, ಕದಲೂರು ಉದಯ್, ವಿಧಾನಪರಿಷತ್ ಸದಸ್ಯರಾದ ಎಸ್.ರವಿ, ಸುಧಾಮ್…
ಶ್ರೀಲೀಲಾ ಡಿಮ್ಯಾಂಡ್ ಬಗ್ಗೆ ಹೊಸದಾಗಿ ಹೇಳೋದೇನು ಬೇಡ. ಕನ್ನಡದ ಬೆಳ್ಳಿಪರದೆಗೆ ತುಂಟ ತುಟಿಗಳ ಮೂಲಕ ಕಿಸ್ ಕೊಟ್ಟ ಹುಡ್ಗಿ ಅಲ್ಲು ಅರ್ಜನ್ ಜೊತೆ ಕಿಸ್ಸಿಕ್ ಎಂದು ಕುಣಿದು ಈಗ ಬಾಲಿವುಡ್ ನಲ್ಲಿ ಬೇಜಾನ್ ಬ್ಯುಸಿಯಾಗಿದ್ದಾರೆ. ಶ್ರೀಲೀಲಾ ಸದ್ಯ ಆಶಿಕಿ 3 ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆದಾದ ಬಳಿಕ ಮತ್ತೊಂದು ಹಿಂದಿ ಚಿತ್ರಕ್ಕೂ ಸಹಿ ಮಾಡಿರುವ ಸುದ್ದಿ ಇದೆ. ಈ ನಡುವೆ ಶ್ರೀಲೀಲಾ ರಾಮ್ ಚರಣ್ ಜೊತೆ ನಟಿಸುವ ಹೊಸ ಸುದ್ದಿ ಮುತ್ತಿನ ನಗರಿಯಿಂದ ತೂರಿಬಂದಿದೆ. ಶ್ರೀಲೀಲಾ ರಾಮ್ ಚರಣ್ ಜೊತೆ ನಟಿಸುತ್ತಿದ್ದಾರೆ. ಆದ್ರೆ ನಾಯಕಿಯಾಗಿ ಅಲ್ಲ. ಬದಲಿಗೆ ಸ್ಪೆಷಲ್ ನಂಬರ್ ನಲ್ಲಿ ಗ್ಲೋಬಲ್ ಸ್ಟಾರ್ ಜೊತೆ ಡಾಕ್ಟರಮ್ಮ ಕಾಲು ಶೇಕ್ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡ್ತಿದೆ. ಬುಚ್ಚಿ ಬಾಬು ಸನಾ ನಿರ್ದೇಶನದ ಪೆದ್ದಿ ಸಿನಿಮಾದಲ್ಲಿ ಜಾನ್ವಿ ಕಪೂರ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಮೊದ್ಲೂ ನಾಯಕಿ ಪಾತ್ರಕ್ಕೆ ಶ್ರೀಲೀಲಾ ಅವರನ್ನೇ ಚಿತ್ರತಂಡ ಅಪ್ರೋಚ್ ಮಾಡಿತ್ತು ಎಂಬ ಸುದ್ದಿ ಇದೆ. ಆದ್ರೆ ಅದ್ಯಾವ ಕಾರಣ ಶ್ರೀಲೀಲಾ…
ಬೀದರ್: ಮಂಗಳೂರಿನಲ್ಲಿ ಸುಹಾಸ್ ಶೆಟ್ಟಿ ಕೊಲೆ ಸೇರಿದಂತೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಕೊಲೆ ಸುಲಿಗೆ ನಿರಂತರವಾಗಿದೆ. ಯಾವುದನ್ನು ತಡೆಯುವ ಶಕ್ತಿ ಸಿಎಂ ಸಿದ್ದರಾಮಯ್ಯ ಅವರಿಗೆ ಇಲ್ಲ. ಹೀಗಾಗಿ ಕಾಂಗ್ರೆಸ್ ಸರ್ಕಾರ ಬಹಳ ದಿನ ಉಳಿಯೊಲ್ಲಾ ಅನ್ನೊದು ಗ್ಯಾರಂಟಿ ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ. ಮುಂದಿನ ದಿನ ರಾಜ್ಯದ ಜನತೆ ಕಾಂಗ್ರೆಸ್‌ಗೆ ತಕ್ಕಪಾಠ ಕಲಿಸುತ್ತಾರೆ. ಸಿಎಂ ಪ್ರಚಾರಕ್ಕಾಗಿ ಜೀವ ಬೆದರಿಕೆ ಇದೆ ಎಂದಿದ್ದಾರೆ. ಸರ್ಕಾರದಲ್ಲಿ ಹಣಕಾಸಿನ ಸ್ಥಿತಿ ಸರಿಯಿಲ್ಲ. ಯಾವುದೇ ಅಭಿವೃದ್ದಿ ಕೆಲಸ ಆಗ್ತಾ ಇಲ್ಲ. ರಾಜ್ಯದಲ್ಲಿ ವಿಚಿತ್ರವಾದ ಪರಿಸ್ಥಿತಿ ಎದುರಾಗಿದೆ. ರಾಜ್ಯ ಸರ್ಕಾರ ಅಭಿವೃದ್ದಿಯನ್ನ ಸಂಪೂರ್ಣ ಕಡೆಗಣಿಸಿದೆ. ಮುಂದಿನ ದಿನ ಬಿಜೆಪಿ ಅಧಿಕಾರಕ್ಕೆ ಬರುತ್ತೆ, ನಾವೆಲ್ಲ ಪಕ್ಷ ಸಂಘಟನೆ ಮಾಡ್ತೇವೆ ಎಂದು ಬೀದರ್‌ನಲ್ಲಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಭರವಸೆ ನೀಡಿದ್ದಾರೆ. https://ainkannada.com/the-government-should-stop-scolding-suhas-and-take-action-nalin-kumar-kateel/
ಎಸ್ ಎನ್ ಟಿ ಎಂಟರ್ಪ್ರೈಸಸ್ ಲಾಂಛನದಲ್ಲಿ ಎಸ್ ಸಿ ರವಿ ಭದ್ರಾವತಿ ಅವರು ನಿರ್ಮಿಸುತ್ತಿರುವ, ಖ್ಯಾತ ಗೀತಸಾಹಿತಿ ಅರಸು ಅಂತಾರೆ ನಿರ್ದೇಶನ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸುತ್ತಿರುವ ನೂತನ ಚಿತ್ರದ ಮುಹೂರ್ತ ಸಮಾರಂಭ ಕಳೆದ ತಿಂಗಳು ಅದ್ದೂರಿಯಾಗಿ ನೆರವೇರಿತ್ತು. ಬಹು ನಿರೀಕ್ಷಿತ ಹಾಗೂ ಅಪಾರ ವೆಚ್ಚದಲ್ಲಿ ಅದ್ದೂರಿಯಾಗಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಬೆಂಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ಯಶಸ್ವಿಯಾಗಿ ಪೂರ್ಣವಾಗಿದೆ. ಚಿತ್ರತಂಡದ ಸಹಕಾರದಿಂದ ನಮ್ಮ “ಪ್ರೊಡಕ್ಷನ್ ನಂ ೧” ಚಿತ್ರದ ಮೊದಲ ಹಂತದ ಚಿತ್ರೀಕರಣ ನಿಗದಿತ ಯೋಜನೆಯಂತೆ ಪೂರ್ಣವಾಗಿದೆ. ನಾಯಕ ಗಣೇಶ್, ನಾಯಕಿ ಅಮೃತ ಅಯ್ಯರ್, ರಂಗಾಯಣ ರಘು, ರವಿಶಂಕರ್ ಗೌಡ, ಕಾಕ್ರೋಜ್ ಸುಧೀ, ಅರುಣ ಬಾಲರಾಜ್ ಮುಂತಾದವರು ಈ ಹಂತದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಸದ್ಯದಲ್ಲೇ ಎರಡನೇ ಹಂತದ ಚಿತ್ರೀಕರಣ ಆರಂಭವಾಗಲಿದೆ ಎಂದು ನಿರ್ಮಾಪಕ ರವಿ ಭದ್ರಾವತಿ ತಿಳಿಸಿದ್ದಾರೆ. ಸುಜ್ಞಾನ್ ಛಾಯಾಗ್ರಹಣ, ಅಕ್ಷಯ್ ಪಿ ರಾವ್ ಸಂಕಲನವಿರುವ ಈ ಚಿತ್ರಕ್ಕೆ ಕ್ರಾಂತಿ ಕುಮಾರ್ ಹಾಗೂ ಶೈಲೇಶ್ ಕುಮಾರ್ ಸಂಭಾಷಣೆ…
ಬೆಂಗಳೂರು: ಪಹಲ್ಗಾಮ್ ನಲ್ಲಿ 26 ಜನರ ಹತ್ಯೆ ಪ್ರಕರಣ ವಿಚಾರದಲ್ಲಿ ರಾಜಕೀಯ ಕೆಸರೆರಚಾಟ ಮುಂದುವರೆದಿದೆ. ನಾನೂ ಕೂಡ ಬಾಂಬ್ ಕಟ್ಟಿಕೊಂಡು ಪಾಕಿಸ್ತಾನ ವಿರುದ್ಧ ಯುದ್ಧ ಮಾಡೋಕೆ ರೆಡಿ ಎಂದಿದ್ದ ವಕ್ಫ್ ಸಚಿವ ಜಮೀರ್ ಅಹಮದ್ ಖಾನ್ ಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಟಕ್ಕರ್ ಕೊಟ್ಟಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಶೋಭಾ ಕರಂದ್ಲಾಜೆ, ಜಮೀರ್ ಅಹಮದ್ ಬಾಂಬ್ ಕಟ್ಟಿಕೊಂಡು ಪಾಕಿಸ್ತಾನಕ್ಕೆ ಹೋಗೋದು ಬೇಡ. ಸಂಸಾರ ಸಮೇತ ಪಾಕಿಸ್ತಾನದಲ್ಲಿ ಹೋಗಿ ಎರಡು ವರ್ಷ ಇದ್ದು ಬರಲಿ. ಪ್ರಕರಣದಲ್ಲಿ ದಾರಿ ತಪ್ಪಿಸಲು ಏನು ಬೇಕಾದರೂ ಮಾತಾಡಬಹುದು ಅಂತ ಮಾತಾಡ್ತಾರೆ ಅಂತ ಶೋಭಾ ಕರಂದ್ಲಾಜೆ ತಿರುಗೇಟು ನೀಡಿದ್ದಾರೆ. ನಾಲಾಯಕ್ ಗೃಹ ಸಚಿವ ರಾಜ್ಯದ ಜನರನ್ನ ರಕ್ಷಣೆ ಮಾಡಲು ಪರಮೇಶ್ವರ್ ಇರಲಿ, ಇಲ್ಲದಿದ್ರೆ ಗೃಹ ಇಲಾಖೆಗೆ ರಾಜೀನಾಮೆ ಕೊಟ್ಟು ಪರಮೇಶ್ವರ್ ಬೇರೆ ಇಲಾಖೆ ತಗೊಳ್ಳಲಿ. ಗೃಹ ಇಲಾಖೆ ನಿಭಾಯಿಸಲು ಪರಮೇಶ್ವರ್ ಗೆ ಶಕ್ತಿ ಇಲ್ಲ. ಪರಮೇಶ್ವರ್ ಒಬ್ಬ ನಾಲಾಯಕ್ ಗೃಹ ಸಚಿವ ಎಂದು ವಾಗ್ದಾಳಿ ನಡೆಸಿದ…