Author: Author AIN

ಕನ್ನಡ ಚಿತ್ರರಂಗದಿಂದ ಗಾಯಕ ಸೋನು ನಿಗಮ್‌ ಬ್ಯಾನ್‌ ಮಾಡೋದಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಸ್ಯಾಂಡಲ್‌ವುಡ್‌ ನಿರ್ಮಾಪಕರು ಒಮ್ಮತದಿಂದ ತೀರ್ಮಾನಕ್ಕೆ ಬಂದಿದ್ದಾರೆ. ಕನ್ನಡ ಸಿನಿಮಾಗಳಿಗೆ ಹಾಡು ಹಾಡುವ ಆಗಿಲ್ಲ. ಮ್ಯೂಸಿಕಲ್‌ ನೈಟ್‌ ಮಾಡಂಗಿಲ್ಲ ಎಂದು ಚೇಂಬರ್‌ ಹೇಳಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಈ ನಿರ್ಧಾರಕ್ಕೆ ನಿರ್ಮಾಪಕರು, ಸಂಗೀತ ನಿರ್ದೇಶಕರು ಕೂಡ ಬೆಂಬಲ ಸೂಚಿಸುತ್ತಿದ್ದಾರೆ. ಕನ್ನಡದಿಂದ ಬ್ಯಾನ್‌ ಆಗುತ್ತಿದ್ದಂತೆ ಸೋನು ನಿಗಮ್‌ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದು, ನಿಮ್ಮ ತೀರ್ಪನ್ನು ಸ್ವಾಗತಿಸುತ್ತೇನೆ ಎಂದು ಹೇಳಿದ್ದಾರೆ. ಸೋನುಗೆ ತಪ್ಪಿನ ಅರಿವಾಯ್ತಾ? ನಮಸ್ಕಾರ… “ನಾನು ಭಾಷೆ, ಸಂಸ್ಕೃತಿ, ಸಂಗೀತ, ಸಂಗೀತಗಾರರು, ಈ ರಾಜ್ಯ ಮತ್ತು ಜನರ ಮೇಲೆ ಅಪರೂಪದ ಪ್ರೀತಿ ಹರಿಸಿರುವೆ — ಅದು ನಾನು ಕರ್ನಾಟಕದಲ್ಲಿದ್ದಾಗ ಮಾತ್ರವಲ್ಲ, ನಾನು ಜಗತ್ತಿನ ಎಲ್ಲಿ ಇದ್ದರೂ ಸಹ. ನಿಜ ಹೇಳಬೇಕೆಂದರೆ, ನಾನು ನನ್ನ ಕನ್ನಡ ಹಾಡುಗಳನ್ನು ಹಿಂದಿ ಸೇರಿ ಇತರ ಭಾಷೆಗಳ ಹಾಡೆಗಳಿಗಿಂತಲೂ ಹೆಚ್ಚು ಗೌರವದಿಂದ ನೋಡಿದ್ದೇನೆ. ಈ ಮಾತಿಗೆ ಸಾಕ್ಷಿಯಾಗಿ ನೂರಾರು ವಿಡಿಯೋಗಳು ಸಾಮಾಜಿಕ…

Read More

ಉಡುಪಿ: ಸುಹಾಸ್ ಮೇಲೆ ಗೂಬೆಕೂರಿಸುವ ಕೆಲಸವನ್ನು ಬಿಟ್ಟು, ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಬಿಜೆಪಿ ನಾಯಕ ನಳಿನ್ ಕುಮಾರ್ ಕಟೀಲ್ ಆಗ್ರಹಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಯಾವುದೇ ಘಟನೆಗಳಲ್ಲಿ ಸುಹಾಸ್ ಭಾಗಿಯಾಗಿಲ್ಲ. ರೌಡಿಶೀಟರ್ ಎಂದು ತೀರ್ಮಾನ ಮಾಡಬೇಕಾಗಿರೋದು ನ್ಯಾಯಾಲಯ, ಗೃಹ ಸಚಿವರಲ್ಲ. ಹಿಂದೂ ಸಂಘಟನೆಯಲ್ಲಿ ಕೆಲಸ ಮಾಡುತ್ತಾನೆ ಎಂಬ ಕಾರಣಕ್ಕೆ ಕೊಲೆಯಾಗಿದೆ. ಹಿಂದೂಗಳ ರಕ್ಷಣೆ ಮಾಡಲು ಹೊರಟವರನ್ನು ಹತ್ಯೆ ಮಾಡುತ್ತಿದ್ದಾರೆ. ಈಗಾಗಲೇ ಟಾರ್ಗೆಟ್ ಗ್ರೂಪ್ ರಚನೆಯಾಗಿದೆ. ಟಾರ್ಗೆಟ್ ಗ್ರೂಪಿನ ಒಂದು ಅಂಶದ ಕೆಲಸ ಆರಂಭವಾಗಿದೆ. ಸುಹಾಸ್ ಮೇಲೆ ಗೂಬೆಕೂರಿಸುವ ಕೆಲಸವನ್ನು ಬಿಟ್ಟು, ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. https://ainkannada.com/eat-these-foods-to-increase-the-number-of-red-blood-cells-in-the-body/ ಕರಾವಳಿಯಲ್ಲಿ ಕೋಮು ನಿಗ್ರಹದಳ ರಚನೆ ವಿಚಾರವಾಗಿ ಪ್ರತಿಕ್ರಿಯಿಸಿ, ಈ ಸರ್ಕಾರದ ಯೋಚನೆಯೇ ತಪ್ಪಾಗಿದೆ. ಇದು ಹಿಂದೂಗಳ ವಿರೋಧ ನೀತಿಗೆ ರಚನೆಯಾಗುತ್ತಿರುವ ಫೋರ್ಸ್. ಹಿಂದೂಗಳನ್ನು ಬಂಧಿಸಲು ಈ ದಳ ರಚಿಸುತ್ತಾರೆ. ಎಲ್ಲಾ ಸಮುದಾಯಗಳಿಗೆ ಸರಿಯಾದ ನ್ಯಾಯ ಕೊಡುವ ದಳವನ್ನು ಜಾರಿಗೆ ತರಲಿ. ಕಾಂಗ್ರೆಸ್ ಸರ್ಕಾರದ ಈ ದಳ ಒಂದೇ ಸಮುದಾಯಕ್ಕೆ ಸೀಮಿತವಾಗಿದೆ ಎಂದು ಆರೋಪಿಸಿದರು.

Read More

ಬೆಂಗಳೂರು: ಸಿಇಟಿ ಹಾಗೂ ನೀಟ್‌ ಪರೀಕ್ಷೆ ವೇಳೆ ನಡೆದ ಜನಿವಾರ ತೆಗೆಸಿದ ವಿವಾದ ಇದೀಗ ಹೈಕೋರ್ಟ್‌ ಮೆಟ್ಟಿಲೇರಿದೆ. ಬೀದರ್‌ ನಲ್ಲಿ ಸಿಇಟಿ ಪರೀಕ್ಷೆ ಬಳಿಕ ನಿನ್ನೆ ಕಲಬುರಗಿಯಲ್ಲಿ ನಡೆದ ನೀಟ್‌ ಪರೀಕ್ಷೆ ವೇಳೆ ಜನಿವಾರ ತೆಗೆಸಿದ ಪ್ರಕರಣ ಬ್ರಾಹ್ಮಣ ಸಮಾಜದ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ರಾಜ್ಯ ಸರ್ಕಾರ ಕೂಡ ಜನಿವಾರ ತೆಗೆಸಿದ ಘಟನೆಯನ್ನು ಖಂಡಿಸಿದ್ದು, ಜನಿವಾರ ತೆಗೆಸಿದ ಪರೀಕ್ಷಾ ಕೇಂದ್ರದ ಸಿಬ್ಬಂದಿಯನ್ನು ಬಂಧಿಸಲಾಗಿದೆ. https://ainkannada.com/case-filed-on-january-1-two-arrested-this-is-what-police-commissioner-s-d-sharanappa-said/ ಈ ನಡುವೆ, ನೀಟ್‌ ಹಾಗೂ ಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗೆಸಿದ್ದನ್ನು ಪ್ರಶ್ನಿಸಿ ಬ್ರಾಹ್ಮಣ ಸಂಘಟನೆ ಹೈಕೋರ್ಟ್‌ ಗೆ ಅರ್ಜಿ ಸಲ್ಲಿಸಿದೆ. ಇನ್ಮುಂದೆ ನಡೆಯುವ ಯಾವುದೇ ಪ್ರಕರಣಗಳಲ್ಲಿ ಪರೀಕ್ಷೆಗಳಲ್ಲಿ ಜನಿವಾರ ತೆಗೆಸುವುದಂತೆ ಕಟ್ಟುನಿಟ್ಟಿನ ಸೂಚನೆ ನೀಡುವಂತೆ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

Read More

ಗ್ಲೋಬಲ್‌ ಸ್ಟಾರ್‌ ರಾಮ್‌ ಚರಣ್‌ ಐಪಿಎಲ್ ಫ್ರಾಂಚೈಸಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ಧನ್ಯವಾದ ಅರ್ಪಿಸಿದ್ದಾರೆ. ಅರೇ ತಮ್ಮದೇ ತವರುತಂಡ ಸನ್‌ ರೈಸರ್ಸ್‌ ಹೈದ್ರಾಬಾದ್‌ ಬಿಟ್ಟು ಡೆಲ್ಲಿ ತಂಡಕ್ಕೆ ಚೆರ್ರಿ ಧನ್ಯವಾದ ತಿಳಿಸಿದಕ್ಕೆ ಕಾರಣವೂ ಇದೆ. ಇಂದು ಸನ್‌ ರೈಸರ್ಸ್‌ ಹೈದ್ರಾಬಾದ್‌ ಹಾಗೂ ಡಿಲ್ಲಿ ಕ್ಯಾಪಿಟಲ್ಸ್‌ ನಡುವೆ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕಾಗಿ ಡೆಲ್ಲಿ ತಂಡ ರಾಮ್‌ ಚರಣ್‌ ನಟಿಸುತ್ತಿರುವ ಪೆದ್ದಿ ಸಿನಿಮಾ ಫಸ್ಟ್‌ ಶಾರ್ಟ್‌ ವಿಡಿಯೋವನ್ನು ಮರುಸೃಷ್ಟಿ ಮಾಡಿದ್ದಾರೆ. ಇಂದು ಸನ್‌ ರೈಸರ್ಸ್‌ ಹೈದ್ರಾಬಾದ್‌ ಹಾಗೂ ಡಿಲ್ಲಿ ಕ್ಯಾಪಿಟಲ್ಸ್‌ ಪಂದ್ಯಾವಳಿ ನಡೆಯಲಿದೆ. ಹೈದ್ರಾಬಾದ್‌ ನಲ್ಲಿರುವ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಸಂಜೆ 7 ಗಂಟೆ ಪಂದ್ಯ ಆರಂಭವಾಗಲಿದೆ. ಈ ಪಂದ್ಯಕ್ಕಾಗಿ ಡೆಲ್ಲಿ ಟೀಮ್ ರಾಮ್‌ ಚರಣ್‌ ನಟನೆಯ ಪೆದ್ದಿ ಚಿತ್ರದ‌ ರೀ ಕ್ರಿಯೇಟ್‌ ಮಾಡಿ ಪ್ರೋಮೋ ಶೂಟ್‌ ಮಾಡಿದೆ. ಈ ಕಾರಣಕ್ಕೆ ರಾಮ್‌ ಚರಣ್‌ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ. ಅಲ್ಲದೇ ಸನ್‌ ರೈಸರ್ಸ್‌ ಹೈದ್ರಾಬಾದ್‌ ಇನ್ನಷ್ಟು ಬಲವಾಗಿ ಮರಳಬಹುದು…

Read More

ಕಲಬುರಗಿ: ಬೀದರ್​, ಶಿವಮೊಗ್ಗದಲ್ಲಿ ಸಿಇಟಿ ಬರೆಯಲು ಜನಿವಾರ ತೆಗೆಸಿದ ಪ್ರಕರಣ ಮಾಸುವ ಮುನ್ನವೇ ಕಲಬುರಗಿಯಲ್ಲಿ ಮತ್ತೆ ಜನಿವಾರ ವಿವಾದ ಭುಗಿಲೆದ್ದಿದೆ. ನೀಟ್ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿಗೆ ಜನಿವಾರ ತೆಗೆದು ಬಾ ಅಂತ ಹೇಳಿದ್ದು ಮತ್ತೇ ಬ್ರಾಹ್ಮಣ ಸಮಾಜ ಕೆರಳಿಸುವಂತೆ ಮಾಡಿದೆ. ಸಮುದಾಯದ ಪ್ರತಿಭಟನೆ ಬಳಿಕ ಪೊಲೀಸರು ಇಬ್ಬರು ನೀಟ್ ಸಿಬ್ಬಂದಿ ವಿರುದ್ಧ ಎಫ್​ಐಆರ್ ದಾಖಲಿಸಿದ್ದಾರೆ. ಇನ್ನೂ ಈ ಘಟನೆಗೆ ಸಂಬಂಧಿಸಿದಂತೆ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕಲಬುರಗಿ ನಗರ ಪೊಲೀಸ್ ಕಮಿಷನರ್​ ಎಸ್.ಡಿ.ಶರಣಪ್ಪ, ಪರೀಕ್ಷಾ ಕೇಂದ್ರದ ಸಿಬ್ಬಂದಿಯಾದ ಶರಣಗೌಡ, ಗಣೇಶ ಬಂಧಿತರು. ಕಲಬುರಗಿಯ ಸ್ಟೇಷನ್ ಬಜಾರ್ ಪೊಲೀಸ್​ ಠಾಣೆಯಲ್ಲಿ ಬಿಎನ್​ಎಸ್ ಕಾಯ್ದೆ 298 ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ ಎಂದಿದ್ದಾರೆ. https://ainkannada.com/eat-these-foods-to-increase-the-number-of-red-blood-cells-in-the-body/ ಶರಣಗೌಡ, ಗಣೇಶ ಇಬ್ಬರು ಖಾಸಗಿ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದರು. ಸದ್ಯ ಇಬ್ಬರನ್ನು ಸಿಬ್ಬಂದಿ ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದೇವೆ. ಪ್ರಕರಣದ ತನಿಖೆ ಮುಂದುವರಿಸಿದ್ದೇವೆ ಎಂದು ಮಾಹಿತಿ ಅವರು ನೀಡಿದ್ದಾರೆ. ಕಲಬುರಗಿಯ ಸೇಂಟ್ ಮೇರಿ ಕಾಲೇಜಿನಲ್ಲಿ ನಿನ್ನೆ ಜನಿವಾರ ತೆಗೆಸಿ ಪರೀಕ್ಷೆ…

Read More

ಬೆಂಗಳೂರು: ನಟ ರಿಯಲ್‌ ಸ್ಟಾರ್‌ ಉಪೇಂದ್ರ ದಿಢೀರ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಓವರ್ ಅಸಿಡಿಟಿಯಿಂದ ಬಳಲುತ್ತಿದ್ದ ಅವರನ್ನು ಸ್ಪರ್ಶ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಹಿಂದೆ ಅವರು ನಟಿಸಿದ್ದ ಯುಐ ಸಿನಿಮಾದ ಶೂಟಿಂಗ್ ಸಮಯದಲ್ಲೂ ಇದೇ ರೀತಿ ಆಗಿತ್ತು. ಸದ್ಯಕ್ಕೆ ಉಪೇಂದ್ರ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಗಾಬರಿ ಪಡುವ ಅವಶ್ಯಕತೆ ಇಲ್ಲ ಅಂತಾ ಆಪ್ತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

Read More

ಚೆನ್ನೈ:ತಮಿಳುನಾಡಿನ ಮೈಲಾಡುತುರೈನಲ್ಲಿ ಭಾನುವಾರ ನಡೆದ ಸಾರ್ವಜನಿಕ ಸಭೆಯಲ್ಲಿ, ಬಿರುಗಾಳಿಯಿಂದಾಗಿ ವೇದಿಕೆಯ ಬಳಿಯಿದ್ದ ಓವರ್‌ಹೆಡ್ ಸ್ಪಾಟ್‌ಲೈಟ್‌ಗಳು ಕುಸಿದು ಬಿದ್ದಿದ್ದು, ಡಿಎಂಕೆ ಸಂಸದ ಎ ರಾಜಾ ಅವರು ಪ್ರಾಣಪಾಯದಿಂದ ಪಾರಾಗಿದ್ದಾರೆ. https://ainkannada.com/eat-these-foods-to-increase-the-number-of-red-blood-cells-in-the-body/ ಪಕ್ಷದ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ನಿಂತು ಅವರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಗಾಳಿ ಬೀಸುತ್ತಿತ್ತು. ಈ ವೇಳೆ ಬಲವಾದ ಗಾಳಿಯಿಂದಾಗಿ ವೇದಿಕೆಯ ಬಳಿ ಓವರ್‌ಹೆಡ್ ಫೋಕಸ್ ದೀಪಗಳು ಕುಸಿದು ಬಿದ್ದು ಡಯಾಜ್ ಮೇಲೆ ಬಿದ್ದಿದೆ. https://x.com/PTI_News/status/1919246782082769209?ref_src=twsrc%5Etfw%7Ctwcamp%5Etweetembed%7Ctwterm%5E1919246782082769209%7Ctwgr%5E629885663d84c5b6d0b8069d1154227cbcf91297%7Ctwcon%5Es1_&ref_url=https%3A%2F%2Fpublictv.in%2Fdmk-mp-a-raja-narrowly-escapes-injury-as-stage-lights-collapse-during-public-meeting-in-mayiladuthurai-tamil-nadu%2F ಫೋಕಸ್‌ ದೀಪಗಳು ಬೀಳುವುದನ್ನು ನೋಡಿದ್ದ ರಾಜಾ ಅವರು ತಮ್ಮ ಎಡಗಡೆ ಸರಿದ ಪರಿಣಾಮ ಅಪಾಯದಿಂದ ಪಾರಾಗಿದ್ದಾರೆ. ಒಂದು ವೇಳೆ ಅವರು ಭಾಷಣ ಮಾಡುತ್ತಲೇ ಇರುತ್ತಿದ್ದರೆ ಗಾಯಗೊಳ್ಳುವ ಸಾಧ್ಯತೆ ಇತ್ತು. ಓವರ್‌ಹೆಡ್ ಫೋಕಸ್ ದೀಪಗಳು ಕುಸಿದು ಡಯಾಜ್ ಮೇಲೆ ಬೀಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Read More

ವಿಶ್ವದ ಅತ್ಯಂತ ದುಬಾರಿ ಮಸಾಲೆ ಕೇಸರಿಗೆ ಈಗ ಬಂಗಾರದಂತಹ ಬೆಲೆ ಬಂದಿದೆ. ಅದಕ್ಕೆ ಕಾರಣ ಜಮ್ಮುಕಾಶ್ಮೀರದಲ್ಲಿ ಇತ್ತೀಚೆಗೆ ನಡೆದ ಪಹಲ್ಗಾಮ್‌ ದಾಳಿ. ಕಾಶ್ಮೀರದಲ್ಲಿ ಬೆಳೆಯುವ ಕೇಸರಿ ಉನ್ನತ ದರ್ಜೆಯದ್ದು ಎಂಬ ಖ್ಯಾತಿ ಪಡೆದಿದೆ. ಅಲ್ಲದೇ ಇರಾನ್ ಮತ್ತು ಅಫ್ಘಾನಿಸ್ತಾನದಿಂದ ಭಾರತಕ್ಕೆ ಕೇಸರಿ ರಫ್ತಾಗುತ್ತಿತ್ತು. ಆದರೀಗ ಅಟ್ಟಾರಿ ವಾಘಾ ಗಡಿ ಬಂದ್‌ ಆಗಿರುವುದರಿಂದ ಕೇಸರಿ ದುಬಾರಿಯಾಗಿದೆಯಂತೆ. ಭಾರತವು ಪ್ರತಿ ವರ್ಷ ಅಂದಾಜು 55 ಟನ್ ಕೇಸರಿಯನ್ನು ಬಳಸಲಾಗುತ್ತದೆ. ಸದ್ಯ ಬೇಡಿಕೆ ಹೆಚ್ಚಿರುವುದರಿಂದ ಕೇಸರಿ ದುಬಾರಿಯಾಗಿದೆ. ಕೇಸರಿ  ಪ್ರತಿ ಕಿಲೋಗ್ರಾಂಗೆ ₹4.5 ಲಕ್ಷದಿಂದ ₹5 ಲಕ್ಷಕ್ಕೆ ಏರಿದೆ. ಇದು 50 ಗ್ರಾಂ ಚಿನ್ನದ ಬೆಲೆಗೆ ಬಹುತೇಕ ಸಮಾನವಾಗಿದೆ. ಪಹಲ್ಗಾಮ್‌ ದಾಳಿಗೂ ಮೊದಲು 1.2 ಲಕ್ಷದಿಂದ 2.38 ಲಕ್ಷವಿದ್ದ ಕೇಸರಿ ಬೆಲೆ ಈಗ 5 ಲಕ್ಷಕ್ಕೆ ಏರಿಯಾಗಿದೆ. ಕೇಸರಿ ಎಂದರೇನು? ಕೇಸರಿ ಅಥವಾ ಕೇಸರ್‌, ಕ್ರೋಕಸ್‌ ಸಟೈವಸ್‌ ಎಂಬ ಹೂವಿನಿಂದ ಬರುತ್ತದೆ. ಈ ಹೂವಿನ ಮೂರು ಕೆಂಪು ಎಳೆಗಳನ್ನು ಕೈಯಿಂದ ತೆಗೆಯಲಾಗುತ್ತದೆ. ಒಂದು ಕೆಜಿ ಕೇಸರಿಗೆ…

Read More

ಹುಬ್ಬಳ್ಳಿ: ಕೇಂದ್ರ ಸರ್ಕಾರ ಪರೀಕ್ಷೆ ನಡೆಸಿದ್ರು ಅದನ್ನು ನಡೆಸೋದು ರಾಜ್ಯ ಸರ್ಕಾರ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಕೆಪಿಎಸ್ಸಿ ಪರೀಕ್ಷೆ ಕುರಿತು ಮಾತನಾಡಿ, ಕೆಪಿಎಸ್ಸಿ ಪರೀಕ್ಷೆಯಲ್ಲಿ ಎಂಬತ್ತು ಪ್ರಶ್ನೆಗಳೇ ತಪ್ಪು ಇದ್ದವು. ನಾವು ಪ್ರಶ್ನೆ ಮಾಡಿದ್ರೆ ಅವರಿಗೆ ಮೆಣಸಿನಕಾಯಿ ಹೊಡೆದಂಗೆ ಆಗುತ್ತದೆ. ಅವರು ಬಂಡತನದ ಪರಮಾವಧಿ ತೋರಿಸುತ್ತಿದ್ದಾರೆ. ಸಿದ್ದರಾಮಯ್ಯ 5 ವರ್ಷ ಜಾತ್ರೆ ಮಾಡುತ್ತಿದ್ದಾರೆ. ಡಿ.ಕೆ.ಶಿವಕುಮಾರ್‌ರನ್ನ ದೂರವಿಡಲು ಏನೇನೋ ಮಾತನಾಡುತ್ತಿದ್ದಾರೆ. https://ainkannada.com/eat-these-foods-to-increase-the-number-of-red-blood-cells-in-the-body/ ಕೇಂದ್ರ ಸರ್ಕಾರ ಯಾವುದೇ ಮಾರ್ಗದರ್ಶನ ನೀಡಿಲ್ಲ. ಕೇಂದ್ರ ಸರ್ಕಾರ ಪರೀಕ್ಷೆ ನಡೆಸಿದ್ರು ಅದನ್ನು ನಡೆಸೋದು ರಾಜ್ಯ ಸರ್ಕಾರ. ಈ ಬಗ್ಗೆ ದೂರು ಕೂಡಾ ದಾಖಲು ಮಾಡಲಾಗಿದೆ ಅಂತ ಹೇಳಿದ್ದಾರೆ ಎಂದರು. ಮಹದಾಯಿಗೆ ಸಮಗ್ರ ಯೋಜನಾ ವರದಿ(ಡಿಪಿಆರ್) ಕೊಡಿಸಿದ್ದೇವೆ. ಪರಿಸರ ಅನುಮತಿ ಕೂಡಾ ಕೊಡಿಸಿದ್ದೇವೆ. ಆದರೆ ಸಮಸ್ಯೆ ಬಂದಿರೋದು ವನ್ಯಜೀವಿ ಮಂಡಳಿಯದ್ದು. ಈ ವಿಷಯ ಸುಪ್ರೀಂ ಕೋರ್ಟ್ನಲ್ಲಿದೆ. ಗೋವಾ ಸರ್ಕಾರ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಹಾಕಿದೆ. ಇಲ್ಲಿಯವರೆಗೆ ಮಹದಾಯಿ ಬಗ್ಗೆ ನೀವು ಏನು ಮಾಡಿದ್ದೀರಿ…

Read More

ಬೆಂಗಳೂರು: ಕನ್ನಡದ ಮಹತ್ವದ ಕೃತಿಗಳು ಇಂಗ್ಲಿಷ್ ಸೇರಿ ವಿಶ್ವದ ಭಾಷೆಗಳಿಗೆ ಭಾಷಾಂತರಗೊಳ್ಳಲು ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಸಿಎಂ  ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಕಮಲಾ ಹಂಪನಾ ಸಾಹಿತ್ಯ ವೇದಿಕೆ ಮತ್ತು ಕರ್ನಾಟಕ ಚಿತ್ರಕಲಾ ಪರಿಷತ್ ಸಹಯೋಗದಲ್ಲಿ ನಡೆದ ಹಂಪನಾ ಅವರ ” ಚಾರು ವಸಂತ” ದೇಸೀಕಾವ್ಯದ ಪರ್ಷಿಯನ್ ಭಾಷಾ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದರು. ಹಂಪನಾ ಕನ್ನಡ ನೆಲದ ಶ್ರೇಷ್ಠ ಸಾಂಸ್ಕೃತಿಕ ವ್ಯಕ್ತಿತ್ವ. ಇವರು ರಚಿಸಿರುವ “ಚಾರು ವಸಂತ” ವಿಶೇಷ ಕೃತಿಯಾಗಿದೆ. ಇಲ್ಲಿಯವರೆಗೆ 16 ಭಾಷೆಗಳಿಗೆ ತರ್ಜುಮೆ ಆಗಿ, ಈಗ 17ನೇ ಭಾಷೆಯಾಗಿ ಪರ್ಷಿಯನ್ ಗೆ ಅನುವಾದಗೊಂಡಿರುವುದು ಕನ್ನಡದ ಹೆಮ್ಮೆ ಎಂದರು. ಕನ್ನಡ ವಿಶ್ವದ ಎಲ್ಲಾ ಭಾಷೆಗಳಿಗೆ ಅನುವಾದಗೊಂಡರೆ ಕನ್ನಡದ ಬೆಳವಣಿಗೆಗೆ ಕಾರಣವಾಗುತ್ತದೆ ಎಂದರು. ಹಂಪನಾ ಅವರ ಚಾರು ವಸಂತ ಕಾವ್ಯ , ನಾಟಕವಾಗಿ ಕೂಡ ಜನಮನ್ನಣೆ ಗಳಿಸಿದೆ. ಹಂಪನಾ ದಂಪತಿ ನನಗೆ ಬಹಳ ವರ್ಷಗಳಿಂದ ಆತ್ಮೀಯರಾಗಿದ್ದರು. ನಾನು ಸಾಹಿತಿ ಅಲ್ಲ. ಆದರೆ, ಸಾಹಿತ್ಯ ಮತ್ತು ಸಾಹಿತಿಗಳ ಒಡನಾಟ ಇದೆ. ಕನ್ನಡ…

Read More