ಬೆಂಗಳೂರು: ಪೊಲೀಸರ ಸಮಕ್ಷಮದಲ್ಲಿ ಮುಸ್ಲಿಂ ಮುಖಂಡರ ಜೊತೆ ಯಾವುದೇ ಸಭೆ ನಡೆಸಿಲ್ಲ ಎಂದು ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಸಚಿವರು ಸರ್ಕಿಟ್ ಹೌಸ್ನಲ್ಲಿ ಇದ್ದ ವೇಳೆ ಮುಸ್ಲಿಂ ಸೇರಿದಂತೆ ಇತರ ಸಮುದಾಯದ ಹಾಗೂ ಸಂಘ ಸಂಸ್ಥೆಗಳ ಮುಖಂಡರ ನಿಯೋಗ ಭೇಟಿ ನೀಡಿತ್ತು. ನಿಯೋಗದ ಅಹವಾಲುಗಳನ್ನು ಆಲಿಸಿದ್ದೇವೆಯೇ ಹೊರತು ಪೊಲೀಸರ ಸಮಕ್ಷಮದಲ್ಲಿ ಮುಸ್ಲಿಂ ಮುಖಂಡರ ಜೊತೆ ಯಾವುದೇ ಸಭೆ ನಡೆಸಿಲ್ಲ. ಬೆಳಗ್ಗೆ 7 ಗಂಟೆಯಿಂದ 11 ಗಂಟೆವರೆಗೆ ಇಬ್ಬರೂ ಸರ್ಕಿಟ್ ಹೌಸ್ನಲ್ಲಿ ತಂಗಿದ್ದೆವು. https://ainkannada.com/eat-these-foods-to-increase-the-number-of-red-blood-cells-in-the-body/ ಈ ವೇಳೆ ದಕ್ಷಿಣ ಕನ್ನಡ ಜಿಲ್ಲೆಯ ಮುಖಂಡರುಗಳಿಗೆ ಭೇಟಿ ನೀಡಲು ಅವಕಾಶವಿತ್ತು. ಮೇಲೆ ತಿಳಿಸಲಾದ ನಿಯೋಗದ ಹೊರತಾಗಿ, ಬೇರೆ ಇತರ ಮುಖಂಡರು ಹಾಗೂ ನಿಯೋಗಗಳಿಗೆ ಸಚಿವರನ್ನು ಭೇಟಿ ಮಾಡಲು ಸಮಯವಕಾಶವಿತ್ತು ಎಂದು ಹೇಳಿದ್ದಾರೆ.
Author: Author AIN
#ಜಾತಕ… ನಾಟಕ.. ಸೂತಕ ಇಷ್ಟೇ ಜೀವನ
ಬೆಂಗಳೂರು: ಆಹಾರ ಇಲಾಖೆಯಿಂದ ಕಳಪೆ ಗುಣಮಟ್ಟದ ಆಹಾರದ ವಿರುದ್ಧ ಸಮರ ಸಾರಿದೆ. ಇಡ್ಲಿ, ಗೋಬಿ, ಕಲ್ಲಂಗಡಿ ಸೇರಿದಂತೆ ಅನೇಕ ಆಹಾರಗಳ ಗುಣಮಟ್ಟದ ಬಗ್ಗೆ ಪರಿಶೀಲನೆ ನಡೆಸಿದ್ದಾಯ್ತು. ಇದೀಗ ಜಿಲೇಬಿ ಮತ್ತು ಶರಬತ್ ನಲ್ಲಿ ಕೃತಕ ಬಣ್ಣ ಬಳಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಕಾರ್ಯಚರಣೆಗೆ ಸಿದ್ದವಾಗಿದೆ. ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಸ್ವಚ್ಚತೆ ಕಾಪಾಡದೇ ತಯಾರಿಸಲಾಗುತ್ತಿರುವ ಜಿಲೇಬಿ ಮತ್ತು ಶರಬತ್ ಮಾದರಿ ಸಂಗ್ರಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದೆ. ಪ್ರತಿ ಜಿಲ್ಲೆಯ ಅಂಕಿತಾಧಿಕಾರಿಗಳ ವ್ಯಾಪ್ತಿಯಲ್ಲಿ ಜಿಲೇಬಿ ಮತ್ತು ಶರಬತ್‌ನ ತಲಾ 5 ಮಾದರಿಗಳನ್ನು ಸಂಗ್ರಹಿಸುವಂತೆ ಆದೇಶಿಸಲಾಗಿದೆ. https://ainkannada.com/eat-these-foods-to-increase-the-number-of-red-blood-cells-in-the-body/ ಒಟ್ಟಾರೆ, ರಾಜ್ಯಾದ್ಯಂತ 10 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲು ಯೋಜನೆ ರೂಪಿಸಲಾಗಿದೆ.ಪ್ರತಿ ಜಿಲ್ಲೆಯ ಅಂಕಿತಾಧಿಕಾರಿ ವ್ಯಾಪ್ತಿಯಲ್ಲಿ ತಲಾ ಐದು ಮಾದರಿ ಸಂಗ್ರಹಿಸಿ, ಮೂರು ದಿನಗಳ ಒಳಗೆ ಪ್ರಯೋಗಾಲಯಕ್ಕೆ ಕಳುಹಿಸುವಂತೆ ಆಹಾರ ಗುಣಮಟ್ಟ ಮತ್ತು ಸುರಕ್ಷತಾ ಇಲಾಖೆ ಸೂಚಿಸಿದೆ.
ಚಾಮರಾಜನಗರ: ರಾಜ್ಯದ ಹುಲಿ ಸಂರಕ್ಚಿತ ಅರಣ್ಯ ಪ್ರದೇಶಗಳಲ್ಲಿ ಒಂದಾಗಿರುವ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ಪ್ರವಾಸಿಗರ ಮುಂದೆಯೇ ಹುಲಿಯೊಂದು ಜಿಂಕೆಯನ್ನು ಅಟ್ಟಾಡಿಕೊಂಡು ಬೇಟೆಯಾಡಿದೆ. ಬಂಡೀಪುರ ಸಫಾರಿ ವಲಯದ ತಾವರೆಕಟ್ಟೆ ಕೆರೆ ಬಳಿ ಪ್ರವಾಸಿಗರ ಮುಂದೆಯೇ ಆಹಾರ ಅರಸುತ್ತಿದ್ದ ಜಿಂಕೆ ಮೇಲೆ ಹುಲಿ ದಾಳಿ ನಡೆಸಿ ತನ್ನ ಭೇಟೆಯನ್ನು ಹೊತ್ತೊಯ್ದಿದೆ. ಜಿಂಕೆಯನ್ನು ಭೇಟೆಯಾಡಿ ಜೀವ ಹೋಗುವವರೆಗೂ ಕಾದು, ನಂತರ ಸತ್ತ ಜಿಂಕೆಯನ್ನು ಪ್ರವಾಸಿಗರ ಮುಂದೇನೇ ಎಳೆದುಕೊಂಡು ಹೋದ ದೃಶ್ಯ ಪ್ರವಾಸಿಗರಿಗೆ ಥ್ರಿಲ್ ಎನಿಸಿದೆ. ಅತಿ ಹುಲಿ ವಾಸಸ್ಥಾನವಾದ ಬಂಡೀಪುರದಲ್ಲಿ ರಜಾ ದಿನಗಳಾದ ಕಾರಣ ಭಾರಿ ಸಂಖ್ಯೆಯಲ್ಲಿ ಹುಲಿ ನೋಡಲೇಂದೆ ಪ್ರವಾಸಿಗರು ಹೆಚ್ಚಾಗಿ ದೇಶ ವಿದೇಶಗಳಿಂದ ಆಗಮಿಸುತ್ತಾರೆ. ಹಲವಾರು ಬಾರಿ ಹುಲಿ ಕಾಣಸಿಗದೆ ಬೇಸರಿಸಿಕೊಂಡು ಪ್ರವಾಸಿಗರು ವಾಪಸ್ಸು ತೆರಳೋದು ಹೆಚ್ಚು. ಅಂತಹದರಲ್ಲಿ ಜಿಂಕೆಯನ್ನು ಹುಲಿ ಭೇಟಿಯಾಡುವ ಅಪರೂಪದ ದೃಶ್ಯ ಕಂಡು ಹುಲಿ ಪ್ರಿಯರು ಫುಲ್ ದಿಲ್ ಖುಷ್ ಆಗಿದ್ದಾರೆ.ಇದೀಗ ಈ ಹುಲಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ಲಾಗಿದೆ.
ಸ್ಯಾಂಡಲ್‌ವುಡ್ ಕಿಂಗ್ ಶಿವಣ್ಣನಿಗೆ ವಯಸ್ಸೇ ಆಗೋಲ್ವಾ? ಇದು ಅಖಂಡ ಸಿನಿಮಾಪೇಮಿಗಳ ಪ್ರಶ್ನೆ. 60 ವಯಸ್ಸು ಕಳೆದರೂ ಶಿವಣ್ಣ ಅವರದ್ದು 20ರ ಹರೆಯದ ಲುಕ್, ಚಾರ್ಮ್. ಕ್ಯಾನ್ಸರ್ ಗೆದ್ದು ಸದ್ಯ ಸಿನಿಮಾ, ಶೂಟಿಂಗ್ ಅಂತಾ ಬ್ಯುಸಿಯಾಗಿರುವ ದೊಡ್ಮನೆ ದೊರೆ ಚೆನ್ನೈನಲ್ಲಿ ಪ್ರತ್ಯಕ್ಷರಾಗಿದ್ದಾರೆ. ಶಿವಣ್ಣ ಸದ್ಯ 131 ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರೀಕರಣಕ್ಕೆ ಕೊಂಚ ವಿರಾಮ ಕೊಟ್ಟು ಪತ್ನಿ ಗೀತಾ ಶಿವರಾಜ್ ಕುಮಾರ್ ಚೆನ್ನೈಗೆ ಹಾರಿದ್ದಾರೆ. ಚೆನ್ನೈನಲ್ಲಿ ಶಿವ ಗೀತಾ ದಂಪತಿ ಒಟ್ಟಿಗೆ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಶಿವಣ್ಣ ಹಳದಿ ಬಣ್ಣದ ಟೀ ಶರ್ಟ್ ತೊಟ್ಟು ಹದಿಹರೆಯದ ಹುಡುಗನಂತೆ ಕಾಣಿಸಿಕೊಂಡಿದ್ದಾರೆ. ಕಿಂಗ್ ಹೊಸ ಲುಕ್ ನೋಡಿ ಶಿವಪಡೆ ನಮ್ ಬಾಸ್ ಯಾವಾಗಲೂ ಸೂಪರ್ ಅಂತಿದ್ದಾರೆ. ಸದ್ಯ ಶಿವಣ್ಣ ಜೈಲರ್ 2, ರಾಮ್ ಚರಣ್ ನಟಿಸುತ್ತಿರುವ ಪೆದ್ದಿ, 131 ಚಿತ್ರದ ಶೂಟಿಂಗ್ ಜೊತೆಗೆ 45 ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ
ಬೆಂಗಳೂರು: ಗಣತಿ ಕಾರ್ಯಕ್ಕೆ ಅಂದಾಜು 100 ಕೋಟಿ ರೂ ಹಣ ಖರ್ಚು ಆಗಲಿದೆ ಎಂದು ಸಮಾಜಕಲ್ಯಾಣ ಸಚಿವ ಹೆಚ್ ಸಿ ಮಹದೇವಪ್ಪ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿ ಅನ್ನೋದು ಜಾತಿ ಅಲ್ಲ, ಅದೊಂದು ಗುಂಪು. ಎಸ್ಸಿ ಒಳ ಮೀಸಲಾತಿ ಸಮೀಕ್ಷೆ ಇದೊಂದು ಚಾರಿತ್ರಿಕವಾದದ್ದು. ಪರಿಶಿಷ್ಟ ಜಾತಿ ಸಮುದಾಯದ ದತ್ತಾಂಶಗಳ ಸಂಗ್ರಹಕ್ಕಾಗಿ ಸುಪ್ರೀಂಕೋರ್ಟ್ ನಿರ್ದೇಶನದಂತೆ ಸಮೀಕ್ಷೆ ಮಾಡಲಾಗುತ್ತಿದೆ. ಪರಿಶಿಷ್ಟ ಜಾತಿಗಳಲ್ಲಿನ 101 ಜಾತಿಗಳ ಜನಸಂಖ್ಯೆ ತಿಳಿಯಲು ಒಳಮೀಸಲಾತಿ ಜಾರಿಗೆ ಗಣತಿ ಮಾಡುತ್ತಿದ್ದೇವೆ. ಗಣತಿ ಕಾರ್ಯಕ್ಕೆ ಅಂದಾಜು 100 ಕೋಟಿ ರೂ ಹಣ ಖರ್ಚು ಆಗಲಿದೆ ಎಂದು ಹೇಳಿದ್ದಾರೆ. https://ainkannada.com/eat-these-foods-to-increase-the-number-of-red-blood-cells-in-the-body/ ಇದು ಎಸ್ಸಿ ಅವರಿಗೆ ಮಾತ್ರ ಈ ಸಮೀಕ್ಷೆ. ಇದು ಎಂಪರಿಕಲ್ ಡಾಟಾ ಕಲೆಕ್ಟ್ ಮಾಡುವುದು ಅಷ್ಟೇ. ಈ ಸಮೀಕ್ಷೆಗೆ ಎಡಗೈ ಮತ್ತು ಬಲಗೈನವರ ಒಮ್ಮತ ಇದೆ. ಯಾರು ಕೂಡ ಸುಳ್ಳು ಹೇಳೋಕೆ ಆಗಲ್ಲ ಎಂದಿದ್ದಾರೆ. ಕಾಂತರಾಜು ವರದಿಯಲ್ಲಿ, ನ್ಯಾಷನಲ್ ಸಮೀಕ್ಷೆಯಲ್ಲಿ ಅಂಕಿ-ಅಂಶ ಇಲ್ಲ. ಹೀಗಾಗಿ ಯಾರು ಕೂಡ ಅನುಮಾನ ಪಡುವ ಹಾಗಿಲ್ಲ.…
ಪವರ್ ಸ್ಟಾರ್ ಪವನ್ ಕಲ್ಯಾಣ್ ಆಂಧ್ರ ಉಪಮುಖ್ಯಮಂತ್ರಿ ಗದ್ದುಗೇರಿದ ಮೇಲೆ ಅವರು ನಟಿಸುತ್ತಿದ್ದ ಸಿನಿಮಾಗಳ ಚಿತ್ರೀಕರಣ ಬಾಕಿ ಉಳಿದಿತ್ತು. ಪವರ್ ಸ್ಟಾರ್ ಮತ್ತೆ ಬಣ್ಣ ಹಚ್ಚೋದು ಯಾವಾಗ? ಅವರನ್ನು ತೆರೆಮೇಲೆ ನೋಡುವುದು ಯಾವಾಗ? ಎಂದು ಕಾಯುತ್ತಿದ್ದ ಅಭಿಮಾನಿಗಳೀಗ ಗುಡ್ ನ್ಯೂಸ್ ಸಿಕ್ಕಿದೆ. ರಾಜಕೀಯಕ್ಕೆ ಸಣ್ಣದೊಂದು ವಿರಾಮ ಕೊಟ್ಟು ನಿನ್ನೆಯಿಂದ ಶೂಟಿಂಗ್ ಅಖಾಡಕ್ಕೆ ಪವನ್ ಕಲ್ಯಾಣ್ ಎಂಟ್ರಿ ಕೊಟ್ಟಿದ್ದಾರೆ. ಕ್ರಿಶ್ ಜಗರ್ಲಮುಡಿ ಬರೆದು ಆ್ಯಕ್ಷನ್ ಕಟ್ ಹೇಳುತ್ತಿರುವ ಹರಿ ಹರ ವೀರ ಮಲ್ಲು ಚಿತ್ರದ ಚಿತ್ರೀಕರಣಕ್ಕೆ ಪವನ್ ಕಲ್ಯಾಣ್ ಹಾಜರಾಗಿದ್ದಾರೆ. ನಾಲ್ಕು ದಿನ ಮಾತ್ರ ಅವರು ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಈ ಚಿತ್ರದ ಒಂದು ಹಾಡು ಹಾಗೂ ಕೆಲ ದೃಶ್ಯಗಳ ಶೂಟಿಂಗ್ ಮಾತ್ರ ಬಾಕಿ ಉಳಿದಿದ್ದು, ಆ ಚಿತ್ರೀಕರಣವನ್ನು ಈಗ ನಡೆಸಲಾಗುತ್ತಿದೆ. ಹರಿ ಹರವೀರ ಮಲ್ಲು ಮಾತ್ರವಲ್ಲದೇ ಪವನ್ ಕಲ್ಯಾಣ್ ನಟಿಸಲಿರುವ ಒಜಿ ಚಿತ್ರದ ಶೂಟಿಂಗ್ ಕೂಡ ಶೀಘ್ರದಲ್ಲೇ ನಡೆಯಲಿದೆಯಂತೆ. ಪವನ್ ಒಪ್ಪಿಕೊಂಡಿದ್ದ ಉಸ್ತಾದ್ ಭಗಂತ್ ಸಿಂಗ್ ಚಿತ್ರವನ್ನು ಕೈಬಿಟ್ಟಿದ್ದಾರೆ ಎನ್ನಲಾಗುತ್ತಿದೆ. ಹರಿ ಹರ…
ನವದೆಹಲಿ: 2016ರ ಢಾಕಾ ದಾಳಿಯಲ್ಲಿ ಕಲ್ಮಾವನ್ನು ಪಠಿಸದ್ದಕ್ಕೆ ಜನರನ್ನು ಹತ್ಯೆ ಮಾಡಲಾಯಿತು ಎಂದು ಬಾಂಗ್ಲಾದೇಶದ ಲೇಖಕಿ ತಸ್ಲಿಮಾ ನಸ್ರೀನ್ ಹೇಳಿದ್ದಾರೆ. ದೆಹಲಿ ಸಾಹಿತ್ಯ ಉತ್ಸವದಲ್ಲಿ ಮಾತನಾಡಿದ ಅವರು, ಕಳೆದ 1,400 ವರ್ಷಗಳಲ್ಲಿ ಇಸ್ಲಾಂ ವಿಕಸನಗೊಂಡಿಲ್ಲ. ಅದು ವಿಕಸನಗೊಳ್ಳುವವರೆಗೆ ಭಯೋತ್ಪಾದಕರನ್ನು ಬೆಳೆಸುತ್ತಲೇ ಇರುತ್ತದೆ. 2016ರ ಢಾಕಾ ದಾಳಿಯಲ್ಲಿ ಕಲ್ಮಾವನ್ನು ಪಠಿಸದ್ದಕ್ಕೆ ಜನರನ್ನು ಹತ್ಯೆ ಮಾಡಲಾಯಿತು. ನಮ್ಮ ನಂಬಿಕೆ ವಿವೇಚನೆ ಮತ್ತು ಮಾನವೀಯತೆಯನ್ನು ಮೀರಿದಾಗ ಹೀಗೆ ಆಗುತ್ತದೆ ಎಂದು ತಿಳಿಸಿದರು. https://ainkannada.com/eat-these-foods-to-increase-the-number-of-red-blood-cells-in-the-body/ ಯುರೋಪ್‌ನಲ್ಲಿ ಚರ್ಚುಗಳು ವಸ್ತುಸಂಗ್ರಹಾಲಯಗಳಾಗಿ ಬದಲಾಗುತ್ತಿದ್ದರೆ ಮುಸ್ಲಿಮರು ಎಲ್ಲೆಡೆ ಮಸೀದಿಗಳನ್ನು ನಿರ್ಮಿಸುವಲ್ಲಿ ನಿರತರಾಗಿದ್ದಾರೆ. ಈಗಾಗಲೇ ಸಾವಿರಾರು ಮಸೀದಿಗಳು ನಿರ್ಮಾಣವಾಗಿದ್ದರೂ ಮತ್ತಷ್ಟು ನಿರ್ಮಾಣ ಮಾಡಲಾಗುತ್ತಿದೆ. ಈ ಮೂಲಕ ಮತ್ತಷ್ಟು ಜಿಹಾದಿಗಳು ತಯಾರಾಗುತ್ತಾರೆ. ಯಾವುದೇ ಮದರಸಾಗಳು ಇರಬಾರದು. ಮಕ್ಕಳು ಒಂದು ಪುಸ್ತಕವನ್ನು ಮಾತ್ರ ಓದಬಾರದು, ಎಲ್ಲಾ ಪುಸ್ತಕಗಳನ್ನು ಓದಬೇಕು ಎಂದು ಅಭಿಪ್ರಾಯಪಟ್ಟರು. ಪ್ರತಿಯೊಂದು ನಾಗರಿಕ ದೇಶವೂ ಏಕರೂಪ ನಾಗರೀಕ ಸಂಹಿತೆಯನ್ನು (UCC) ಹೊಂದಿರಬೇಕು ಮತ್ತು ನಾನು ಇದನ್ನು ಬೆಂಬಲಿಸುತ್ತೇನೆ. ಸಂಸ್ಕೃತಿ, ಧರ್ಮ ಅಥವಾ ಸಂಪ್ರದಾಯದ ಹೆಸರಿನಲ್ಲಿ…
ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ಗೋಕುಲ್ ರಸ್ತೆಯ ಲೋಹಿಯಾ ನಗರದಲ್ಲಿರುವ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಗೆ ಜಾರ್ಖಂಡ್ ನಲ್ಲಿ ಸಿಎಸ್ ಆರ್ ಅನುದಾನದಲ್ಲಿ ನಿರ್ಮಾಣಕ್ಕೆ ಕಾರಣ ಎಂದು ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ ಹೇಳಿದರು. ಹುಬ್ಬಳ್ಳಿಯ ಲೋಹಿಯಾ ನಗರದಲ್ಲಿನ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಕಾಮಗಾರಿ ಪ್ರಗತಿ ಪರಿಶೀಲನೆ ನಂತರ ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು,ಧಾರವಾಡ ಜಿಲ್ಲೆಯಲ್ಲಿ 2019 ರಲ್ಲಿ ಬಹಳ ವಿರೋಧದ ನಡುವೆ ಈ ಭಾಗದಲ್ಲಿ ಜಾಗೆ ಗುರುತಿಸಿ ಕ್ರೀಡಾ ಸಂಕೀರ್ಣ ನಿರ್ಮಾಣ ಮಾಡಲಾಗಿದ್ದು, https://ainkannada.com/eat-these-foods-to-increase-the-number-of-red-blood-cells-in-the-body/ ಇನ್ನು ಆರು ತಿಂಗಳಲ್ಲಿ ಇದನ್ನು ಲೋಕಾರ್ಪಣೆ ಮಾಡಲಾಗುವುದು ಎಂದ ಅವರು ಇದರಲ್ಲಿ ಈಜುಕೊಳ, ಪುಟ್ ಬಾಲ್, ವಾಲಿಬಾಲ್ ಸೇರಿದಂತೆ ಇಂಡೋರ್ ಹಾಗೂ ಔಟ್ ಡೋರ್ ಗೇಮ್ ಗಳ ಸಂಕೀರ್ಣ ಆಗಿದೆ. ರಾಜ್ಯ ವಿಧಾನ ಸಭೆ ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ ವೇಳೆ ಅಧಿಕಾರಿಗಳ ಜೊತೆಗೆ ಸಮಾಲೋಚನೆ ನಡೆಸಿದ ಸಚಿವರು ಹಾಗೂ ಶಾಸಕರು ಮಾಹಿತಿ ಪಡೆದುಕೊಂಡರು. ಇನ್ನೂ ಸ್ಮಾರ್ಟ್ ಸಿಟಿಯ…
ಬೆಂಗಳೂರು: ಆಲಮಟ್ಟಿ ಅಣೆಕಟ್ಟು ಎತ್ತರವನ್ನು 524 ಮೀಟರ್ ಗಳಿಗೆ ಹೆಚ್ಚಿಸಿ, ನಮ್ಮ ಪಾಲಿನ ನೀರು ಬಳಸಿಕೊಳ್ಳಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. “2010ರಲ್ಲಿ ಕೃಷ್ಣಾ ಜಲ ನ್ಯಾಯಾಧಿಕರಣ ತೀರ್ಪಿನ ಅನ್ವಯ ಕೇಂದ್ರ ಸರ್ಕಾರ ಗೆಜೆಟ್ ಅಧಿಸೂಚನೆ ಹೊರಡಿಸಬೇಕಾಗಿದೆ. ಈ ಸಂಬಂಧ ಮೇ 7ರಂದು ಕೇಂದ್ರ ಜಲಶಕ್ತಿ ಸಚಿವಾಲಯವು ನಾಲ್ಕು ರಾಜ್ಯ ಸರಕಾರದ ಪ್ರತಿನಿಧಿಗಳ ಸಭೆ ಕರೆದಿದೆ. ಈ ವಿಚಾರವಾಗಿ ಸಂಬಂಧಪಟ್ಟ ಸಚಿವರನ್ನು ಕರೆಸಿ ಸಭೆ ಮಾಡಿ ಅಭಿಪ್ರಾಯ ಸಂಗ್ರಹಿಸಲಾಗಿದೆ. ಈ ವಿಚಾರವಾಗಿ ಕಾನೂನು ತಜ್ಞರ ಜತೆ ಚರ್ಚೆ ಮಾಡಿದ್ದು, 2 ದಿನಗಳಲ್ಲಿ ಅವರು ತಮ್ಮ ಅಭಿಪ್ರಾಯ ನೀಡಲಿದ್ದಾರೆ. ಇವುಗಳ ಆಧಾರದ ಮೇಲೆ ಕೇಂದ್ರ ಸಚಿವಾಲಯದ ಸಭೆಯಲ್ಲಿ ನಾವು ನಮ್ಮ ಬೇಡಿಕೆ ಪ್ರಸ್ತಾಪಿಸುತ್ತೇವೆ” ಎಂದು ತಿಳಿಸಿದರು. “ಈ ಯೋಜನೆ ಜಾರಿಗೆ ಸರ್ಕಾರ ಈಗಾಗಲೇ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಿದ್ದು, ಇದಕ್ಕೆ ಅಗತ್ಯ ಹಣ ಮೀಸಲಿಡಲಾಗುವುದು” ಎಂದರು. https://ainkannada.com/union-minister-pralhad-joshi-visits-sports-complex-bellada-saath/ ಆಂಧ್ರ ಹಾಗೂ ತೆಲಂಗಾಣಕ್ಕೆ 13 ಟಿಎಂಸಿ ನೀರು ಲಾಭವಾಗಲಿದೆ ಎಂದು…